[ಅರಮನೆಯ ಪಕ್ಕದ ಉದ್ಯಾನವನದಲ್ಲಿ ಸಿದ್ಧಾರ್ಥನು ತಿರುಗಾಡುತ್ತಿದ್ದಾನೆ.]

ಸಿದ್ಧಾರ್ಥ — ಇಲ್ಲ; ಇನ್ನಿಲ್ಲಿ ಇರಲಾರೆ. ಇರಲಾರೆ!
ಎಳೆಯ ಕರೆಯನು ಕೇಳಿಯೂ ನುಮ್ಮನಿರಲಾರೆ.
ಆತ್ಮದಾಮಂತ್ರಣವನೋದಿಯೂ ಭೋಗಾಭಿ-
ಲಾಷೆಯಿಂದಿನ್ನು ನಾನಿರಲಾರೆ. ವರಧರ್ಮ
ದೇವತೆಯು ಗುಡಿಗಳಿಂ, ಹೊಲಗಳಿಂ, ವನಗಳಿಂ,
ಸೌಧಸೌಧಂಗಳಿಂ ಕೈಬೀಸಿ ಗೋಳಾಡಿ
ಕರೆವುದನು ಕಂಡೂ ಮೊದ್ದನಾಗಿರಲಾರೆ. (ವಾದ್ಯ.)
ನಾದವೇನಿದು? ವಾದ್ಯಗಳು ನಿನದ! ನನಗರೆಯ
ದಂಥಾವ ಶುಭವಿಂದು ಬಂದಿಹುದು? — ನನಗೇನು?
ದನಿಯ ಬೀರಿರಿ ವಾದ್ಯಗಳಿರ! ನಿಮ್ಮಗಳ
ಭಾಗಕ್ಕೆ ಕಿವುಡನಾಗಿಹೆನಿಂದು. ಇಲ್ಲ; ನಾನ್
ಇರಲಾರೆನಿನ್ನು! ಇಂದಿನಿರುಳನು ಬಿಟ್ಟರೆ
ಎನಗಿನ್ನು ಗತಿಯಿಲ್ಲ. ನಾಳೆ ನಾಳೇ ಎಂದು
ವರ್ಷಗಳ ಕಳೆದಾಯ್ತು! ನಾಳೆ ಎಂದಿಗು ನಾಳೆ!
ಇಂದಿಂದೆ! (ಚನ್ನನು ಓಡುತ್ತಾ ಬರುತ್ತಾನೆ.)

ಚನ್ನ — ಶುಭ ಸುದ್ದಿ! ಶುಭ ಸುದ್ದಿ! ನನ್ನೊಡೆಯ!
(ಸಿದ್ಧಾರ್ಥನು ಗಂಭೀರವಾಗುತ್ತಾನೆ.)
ಏನುದಾಸೀನನಾಗಿಹೆಯಲ್ಲ, ಸಿದ್ಧಾರ್ಥ?

ಸಿದ್ಧಾರ್ಥ — ಏನು ಶುಭ ಸುದ್ಧಿ, ಚನ್ನಜ್ಜ? ಮಂಗಳ
ನಿನಾದಗಳು ನಭಕೇರುತಿಹವಲ್ಲ ಏಕೆ?

ಚನ್ನ — ಅದೆ ಶುಭದ ವಾರ್ತೆ,
ಸಿದ್ಧಾರ್ಥ. ನಿನಗೊಂದು ಗಂಡುಶಿಶು ಹುಟ್ಟಿಹುದು!
ಪುಣ್ಯಕುದಿಸುವ ತೆರದಿ ಬಣ್ಣ!

ಸಿದ್ಧಾರ್ಥ (ಅಂತರ್ಮುಖಿಯಾಗಿ) ಮತ್ತೊಂದು
ಪಾಶ. ಕಬ್ಬಿಣದ ಸರಪಣಿಯ ಬಂಧನ!
ದಿನ ಕಳೆದ ಹಾಗೆಲ್ಲ ಬುವಿಯ ಜಾಲವು ನಮ್ಮ
ಸುತ್ತುವುದೆ ಹೊರತು, ಬಿಗಿಬಿಗಿಯುವುದೆ ಹೊರತು
ಬಿಚ್ಚಿ ಬಿಡುವುದು ಎಂಬ ನೆಚ್ಚ ನಾ ಕಾಣೆ.

ಚನ್ನ — ಏಕಿಂತು ಮೌನವಾಗಿಹೆ, ಒಡೆಯ?

ಸಿದ್ಧಾರ್ಥ (ಗಂಭೀರವಾಗಿ) ಸಾರಥಿ,
ಚನ್ನ, ಇತ್ತ ಬಾ, ನನಗಿಂದು ನಿನ್ನ ನೆರ
ವಾಗಲೇಬೇಕು. (ಸಂಗೀತ) ಏನು ಸಂಗೀತವಿದು?

ಚನ್ನ — ಪುತ್ರೋದಯದ ಹರುಷಕಾಗಿ ಅಂಗನೆಯರ್
ಉಲಿಯುವರು ಮಂಗಳದ ಹಾಡುಗಳ. ಕೇಳು,
ಎಷ್ಟು ಮೃದುಮಧುರವಾಗಿಹುದು!

ಸಿದ್ಧಾರ್ಥ (ಸ್ವಗತ) ಎಲೆ ಗಾನ-
ದೇವತೆಯೆ, ನಿನ್ನ ಮೋಹದ ಮುಡಿಯು ಸಿಡಿದೊಡೆವು
ದಿಂದು! ಆತ್ಮಗೀತವು ಕರ್ಣಗೀತವನು
ಏಳಿಸುತಲಿಹುದಿಂದು. ಅಮೃತ ಪಾನದ ಬಯಕೆ
ನಾಡಹಾಲಿನ ಬಯಕೆಯನ್ನಟ್ಟಿ ಬಟ್ಟಿಹುದು.
(ಗಟ್ಟಿಯಾಗಿ) ಚನ್ನ!

ಚನ್ನ (ಅನ್ಯಮನಸ್ಕ) ಎಷ್ಟು ಹೃದಯಂಗಮ, ಸಂಗೀತ!
ಏಕೆ, ಸಿದ್ಧಾರ್ಥ, ಗಾನವೆನೆ ತನುಮನಗಳ್‌
ಎಲ್ಲವನು ಮರೆತು ಕೇಳುತಲಿದ್ದ ನೀನಿಂದು
ಸರಗೈವ ರಮಣಿಯರನಾಲಿಸದೆ, ಚಿಂತಾತ್ಮನ್‌
ಆಗಿರುವೆಯಲ್ಲ?

ಸಿದ್ಧಾರ್ಥ (ನಟ್ಟನೋಟದಿಂದ) ಹೌದು, ಚನ್ನ, ಹೌದು!
ಇರಲಿಯದು. ಇತ್ತ ಬಾ. ನನಗಿಂದು ನಿನ್ನ ನೆರ
ವಾಗಲೇಬೇಕು.

ಚನ್ನ — ಸಾರಥಿಯನೀ ರೀತಿ
ಕೇಳುವರೆ? ಬೆಸಸು, ಕಿಂಕರ ನಾನು.

ಸಿದ್ಧಾರ್ಥ — ಇನ್ನು ನೀನ್‌
ಎನ್ನ ಸಾರಥಿಯಲ್ಲ.

ಚನ್ನ (ದೈನ್ಯದಿಂದ) ಕೆಲಸದಿಂ ಬಿಡಿಸುವೆಯ?
ಬೇಡ, ಗೌತಮ, ಬೇಡ. ನಾ ಮುದುಕ, ನಿರ್ಗತಿಕ!
ನಾನೆಸಗಿದಪರಾಧವಾದರೂ ಏನು?
ಮುನ್ನಿಸೆನ್ನೊಡೆಯ.

ಸಿದ್ಧಾರ್ಥ (ಕರುಣೆಯಿಂದ) ಹಾಗಲ್ಲ, ಕೇಳಿಲ್ಲಿ,

ಚನ್ನ — ಇಲ್ಲ, ಬೇಡ! ಬೇಡ! ನಿನ್ನ ಬಿಟ್ಟರೆ ನಾನು
ಸಾಯುವುದೆ ಸರಿ. ಚೆನ್ನನೆದೆಯಲ್ಲಿ ನೀನಲ್ಲ
ದಿನ್ನಾರು ನೆಲಸಿಲ್ಲ.

ಸಿದ್ಧಾರ್ಥ (ಸ್ವಗತ) ಪಾಪ, ಮುದುಕನಿವ!
(ಗಟ್ಟಿಯಾಗಿ) ಚನ್ನಜ್ಜ, ಕೇಳಿಲ್ಲಿ, ನಿನ್ನ ನಾ ಬಿಡಲಾರೆ,
ಹೆದರದಿರು.

ಚನ್ನ (ಸಂತಸದಿಂದ) ನೀನೀಗ ಸಿದ್ಧಾರ್ಥ! ಮತ್ತೇನು?

ಸಿದ್ಧಾರ್ಥ — ಇಂದು ನಾ ಬಹು ದೂರ ಹೋಗಬೇಕೆಂದಿರುವೆ.

ಚನ್ನ (ಆಶ್ಚರ್ಯದಿಂದ)
ಯಾವೆಡೆಗೆ ಸಿದ್ಧಾರ್ಥ? ಇಂದೇಕೆ? ಮಾತೇನು?
ಮಗನು ಹುಟ್ಟಿದ ದಿನವೆ ತಂದೆ ಹೋದರೆ ದೂರ,
ಲೋಕವೇನೆನ್ನುವುದು?

ಸಿದ್ಧಾರ್ಥ — ಚನ್ನ, ನೀನೆನಗೆ
ಬೇಕಾದವನು, ಕೇಳು. ಇಂದಿನಿರುಳೇ ನಾನು
ತಿರೆಸಿರಿಗಳೆಲ್ಲವನು ಬಿಸುಟು ಮುಕ್ತಿಶ್ರೀ
ಯನ್ನರಸಿ ಹೊರಡುವೆನು.

ಚನ್ನ — ಏಕೆ, ನನ್ನೊಡೆಯ,
ಇಲ್ಲಿ ಸೊಗಮಿಲ್ಲವೇ ನಿನಗೆ?

ಸಿದ್ಧಾರ್ಥ (ವ್ಯಾಕುಲತೆಯಿಂದ) ಚನ್ನಜ್ಜ,
ನಾನೊಬ್ಬ ಸುಖಿಯಾದರೇನಾಯ್ತು? ಲೋಕವೇ
ಬೊಬ್ಬಿರಿಯುತಿಹುದಲ್ಲ ಬೆಂದು ಬಡತನದಲಿ,
ಮೌಢ್ಯಾಂಧಕಾರದೊಳು ಸಿಕ್ಕಿ, ದಾರಿಯ ತಪ್ಪಿ,
ಕಾಡುಪಾಲಾಗಿಹಳು ಭಾರತಾಂಬೆಯು, ಚನ್ನ,
ಕಾಡುಪಾಲಾತಿಹಳು! (ನಿಟ್ಟುಸಿರುಬಿಟ್ಟು)
ಜನ್ನಜ್ಜ, ನಿನಗೆಲ್ಲ
ಬಣ್ಣಿಸಲು ಸಮಯವಿಲ್ಲೀಗ. ನನಗಿಂದು
ನೆರವಾಗುವೆಯ ಹೇಳು.

ಚನ್ನ — ಎದೆಯೇಕೊ ನಡುಗುತಿದೆ,
ಒಡೆಯ. ನೀನೇನು ಮಾಡುವೆಯೊ ನಾನರಿಯೆ.
ನಿನ್ನ ಚಿತ್ತವನರಿಯೆ. ಆದೊಡೆಯು ನಿನ್ನಲ್ಲಿ
ನೆಚ್ಚುಂಟು ಎನಗೆ. ಇಂದು ಹೋದವನೆಂದು
ಹಿಂದಕೈತರುವೆ?

ಸಿದ್ಧಾರ್ಥ — ಎಂದಿಗೋ ನಾನರಿಯೆ.
ಸಾರಥಿ.

ಚನ್ನ — ಒಂದು ವಾರವೆ? ಎರಡೆ? ಮೇಣ್‌ ಮೂರೆ?

ಸಿದ್ಧಾರ್ಥ — ಅದಕಿಂತ ಹೆಚ್ಚು, ಚನ್ನಜ್ಜ, ಅದಕಿಂತ
ಹೆಚ್ಚು.

ಚನ್ನ — ಹಾಗಾದರೇನೊಂದು ತಿಂಗಳೆ?

ಸಿದ್ಧಾರ್ಥ (ಮುಗುಳುನಗೆಯಿಂದ) ಅಲ್ಲ, ಚನ್ನ, ಅಲ್ಲ.

ಚನ್ನ — ಒಂದು ಸಂವತ್ಸರವೆ?

ಸಿದ್ಧಾರ್ಥ — ಏನೊ, ನಾನರಿಯೆ.

ಚನ್ನ — ಸಿದ್ಧಾರ್ಥ,
ಏನು ನೀನನ್ನುವುದು! ನಿನ್ನ ಪಯಣದ ಸುದ್ದಿ
ರಾಜರಿಗೆ ಗೊತ್ತೆ?

ಸಿದ್ಧಾರ್ಥ — ಗೊತ್ತಿಲ್ಲ.

ಚನ್ನ — ಹೇಳದೇ
ಕೇಳದೇ ಓಡುವೆಯ? ಹೋಗಿ ತಿಳಿಸಲೆ ನಾನು?

ಸಿದ್ಧಾರ್ಥ (ಆಜ್ಞಾವಾಣಿಯಿಂದ)
ನಿಲ್ಲು, ಚನ್ನ, ನಿಲ್ಲು! ಗುಟ್ಟಾದ ಪಯಣವಿದು.
ಗುಟ್ಟಾದ ಪಯಣ! (ಸ್ವಗತ) ಬಡಪಾಯಿ ಚನ್ನಜ್ಜ,
ಮುಗ್ಧ ಚನ್ನಜ್ಜ, ನನ್ನ ಮನವನ್ನರಿಯ, (ಗಟ್ಟಿಯಾಗಿ)
ಕೇಳಿಲ್ಲಿ, ಚನ್ನಜ್ಜ, ಕೇಳಿಲ್ಲಿ : ನಿನಗೆಲ್ಲ
ವಿಶದವಾಗುಸುರವೆನು. ಆ ದಿನದ ನಿನಪಿದೆಯೆ?

ಚನ್ನ — ಯಾವ ದಿನ?

ಸಿದ್ಧಾರ್ಥ (ಭಾವದಿಂದ) ಮುದುಕನೊಬ್ಬನ ಕಂಡ ಪುಣ್ಯದಿನ!
ರೋಗಿಯನು ಕಂಡ ದಿನ! ಸತ್ತವನ ಕಂಡ ದಿನ!
ಯೋಗೀಶನೊಬ್ಬನನು ಕಂಡತುಳ ಪುಣ್ಯದಿನ!
ಆ ದಿನದ ನೆನಪಿದೆಯೆ ನಿನಗೆ?

ಚನ್ನ — ಹೌದೊಡೆಯ.

ಸಿದ್ಧಾರ್ಥ — ಅಂದಿನಿಂದಲೂ ತಾನು ಬುದ್ಧನೆಂದಾಗುವೆನೊ
ಜಗವನೆಂದುಳುಹುವೆನೊ ಎಂದು ಹಂಬಲಿಸು
ತಿರುವೆ.

ಚನ್ನ (ಸ್ವಗತ) ಜಾತಕದ ಜೋಯಿಸನು ಅಂತೆಯೇ
ನುಡಿದಿದ್ದ.

ಸಿದ್ಧಾರ್ಥ — ರಾಜ್ಯವನ್ನಗಲುವಾ ದಿನವೇ
ಮದುವೆ ಬಂದೆನ್ನ ನಿಲ್ಲಿಸಿತು.

ಚನ್ನ — ಇಂದು ಸುತನುದಯ
ನಿಲ್ಲಿಸದೆ?

ಸಿದ್ಧಾರ್ಥ — ಇಲ್ಲ, ಎಂದೂ ಇಲ್ಲ. ಚನ್ನ,
ಇಂದು ಜವ ಬಂದರೂ ತಡೆಯಲಾರನು ಎನ್ನ.
ಕೇಳದಿರು ಪ್ರಶ್ನೆಯನು. ಇಷ್ಟು ದಿನ ನಿನ್ನ ನಾ
ಸಲಹಿದೆನು. ನೀನು ಇಂದಿನೊಂದಿರುಳಲ್ಲಿ
ಸಲಹಲಾರೆಯ ಎನ್ನ?

ಚನ್ನ — ನಿನ್ನ ಪ್ರೇಮಕೆ ಸೋತೆ,
ಸಿದ್ಧಾರ್ಥ; ಹೇಳು. ಮಾರ್ನುಡಿಯ ನುಡಿಯದೆಯೆ
ಮಾಡುವೆನು.

ಸಿದ್ಧಾರ್ಥ — ಯಾರಿಗಿದನರುಹದಿರು.

ಚನ್ನ — ಇಲ್ಲ
ನನ್ನೆದೆಗು ನಾ ಹೇಳೆ.

ಸಿದ್ಧಾರ್ಥ — ಇಂದು ನೀನೆನ್ನ
ಕೋಣೆಯೆಡೆ ಮಲಗಿಕೊ. ರಾತ್ರಿ ನಿನ್ನನು ಕರೆವ
ಸಮಯ ಬರಬಹುದು.

ಚನ್ನ — ತಪ್ಪದೇ ಮಲಗುವೆನು.

ಸಿದ್ಧಾರ್ಥ — ವಾದ್ಯಗಳು ನಿಂತಿಹವು. ನನಗಾಗಿ ಕಾಯುವರೊ
ಏನೊ; ಹೋಗುವೆನು. ಮರೆಯದಿರು, ತೊರೆಯದಿರು!
(ತೆರಳುತ್ತಾನೆ.)

ಚನ್ನ — ಸಿದ್ಧಾರ್ಥ, ಗೌತಮಾ, ನಿನ್ನ ಮನವರಿಯೆ.
ಮಿಂಚುಹುಳು ಬಲ್ಲುದೇ ಚಂದ್ರತಾರೆಗಳೇಕೆ
ಬೆಳಗುತಿವೆ ಎಂದು. ಆದರು ಮಿಣುಕುವುದು
ಚುಕ್ಕಿಗಳನನುಕರಿಸಿ. ಅಂತೆಯೇ ನಾನೂ.
ಅವನು ತೋಳಗುವನೆಂಬುದನು ಬಲ್ಲೆ. ಏತಕೆಂ
ಬುದನರಿಯೆ. ಆದರಾತನು ಬರಿದೆ ತೊಳಗುವವನ್‌
ಅಲ್ಲ. ಏನನೋ ಬೆಳಗಲೆಂದೇ ಅವನು
ತೊಳಗುವನು. ಸಿದ್ಧಾರ್ಥ ತೊಳಗಿದರೆ ಬೆಳಗುವನು!

(ಹೋಗುತ್ತಾನೆ.)
ಪರದೆ n� hAei@��yan>ತಲ್ಲಣಿಸಲಿಲ್ಲ.
(ಬಹಿರಂಗ) ಗುರುದೇವ, ತಮ್ಮಾಜ್ಞೆಯಂತೆಯೇ ವರ್ತಿಸುವೆ.
ನನ್ನ ಮೊಮ್ಮಕ್ಕಳೊಡನೀತನೂ ಕೂಡಿರಲಿ.

 

ಪರಶುರಾಮ — ರಾಧೇಯ, ಭೀಷ್ಮನೊಂದಿಗೆ ಹೊರಡಲನುವಾಗು!
(ಕರ್ಣ ಮೊದಲಾದವರು ಹೋಗುವರು. ಪರಶುರಾಮ ಗಂಭೀರ ಧ್ವನಿಯಿಂದ)
ಗಾಂಗೇಯ, ಈ ವೀರ ಬಾಲಕನು ಸಾಮಾನ್ಯ-
ನೆಂದರಿಯಬೇಡ. ನೀನೊಂದು ವರ್ಷದಲಿ
ಕಲಿತುದನು ಇವನೊಂದು ತಿಂಗಳಲಿ ಅರಿತಿಹನು.

ಭೀಷ್ಮ — ಗುರುದೇವ, ಅವನ ಮುಖಕಾಂತಿಯೇ ಉಸುರವುದು
ಅವನಾತ್ಮವೆನಿತು ಮಹಿಮಾಸ್ಪದವು ಎಂಬುದನು.
ವೀರನರಿಯನೆ ವೀರನಾರೆಂಬುದನು?

ಪರಶುರಾಮ — ಹೌದು, ಗಾಂಗೇಯ, ಯಾವ ಚಿಪ್ಪಿನೊಳಾವ
ಮುತ್ತಿರುವುದೆಂಬುದನು ಬಲ್ಲವರೆ ಬಲ್ಲರು! o�fGes@��ymily: “Times New Roman”;mso-fareast-theme-font:minor-fareast;mso-ansi-language:EN-US; mso-fareast-language:EN-US;mso-bidi-language:KN’>ಪಂಚಪಾಂಡವರು.
ನಂದಗೋಕುಲದಲ್ಲಿ ದೂರ್ತ ಕಂಸನ ಕೈಗೆ
ಸಿಕ್ಕದಲೆ ವಸುದೇವ ದೇವಕಿಯ ಗರ್ಭದಲಿ
ಬಂದು, ಗೊಪರ ಕೂಡಿ ಬೆಳೆಯುತಿಹನಾಟದಲಿ
ಶ್ರೀ ಕೃಷ್ಣ ಪರಮಾತ್ಮ. ಮುನಿಶಾಪದಿಂದಳಿಯೆ
ಪಾಂಡುಭೂಪತಿಯು ಮುನಿಗಳವರೈವರನು,
ಕುಂತಿಯನು, ಭೀಷ್ಮರಲ್ಲಿಗೆ ಕಳುಹಿ ತೆರಳಿದರು.
ತರುವಾಯ ಪಾಂಡವರು ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)