[ಅರಮನೆಯಲ್ಲಿ ಒಂದು ಕೋಣೆ. ಸಿದ್ಧಾರ್ಥನು ಹಾಸಗೆಯ ಮೇಲೆ ಕುಳಿತಿದ್ದಾನೆ. ದೀಪವೊಂದುರಿಯುತ್ತಿದೆ.]

ಸಿದ್ಧಾರ್ಥ — ಹಿಂಜರಿಯದಿರು, ಮನವೆ. ಕಲ್ಲಾಗು, ಎದೆಯೆ.
ಬೆಣ್ಣೆಯಾಗುವೆ ಮುಂದೆ! ವ್ಯಾಮೋಹವೇ, ಸಾಯಿ!
ವಯರಾಗ್ಯವೇ, ಕಾಯಿ! ಮುಕ್ತಿದೇವತೆ, ತಾಯಿ,
ಬಂದೆನ್ನ ಹೃದಯಕಮಲದಿ ನೃತ್ಯವಾಡು.
ಮಾಯೆಯನು ದೂಡು. ಶಕ್ತಿಯನು ನೀಡು!
(ಎದ್ದು ಕಿಟಕಿಯ ಬಳಿಗೆ ಹೋಗಿ ಹೊರಗೆ ನೋಡಿ)
ಮಲಗಿ, ಕೈವಾರಿಗಳೆ, ಮಲಗಿ. ಏಳದಿರಿ,
ವಾದ್ಯಗಾರರೆ; ನಿದ್ದೆ ದೇವತೆಯೆ, ನಿನ್ನ
ಮಧುರ ಚುಂಬನವಿಂದು ಮಧುರತರವಾಗಲಿ!
ನಿನ್ನ ಮುತ್ತಿನೊಳಿಂದು ಎಲ್ಲ ಕಣ್ಣೆವೆಗಳನು
ಒತ್ತಿಹಿಡಿ. ಮೌನದೇವತೆಯೆ ಬಾ, ನಿನ್ನ
ಸಮ್ರಾಜ್ಯವಾಳು. (ಹಿಂತಿರುಗಿ ಬಂದು ಕುಳಿತು)
ಎಲೆ ಸಜ್ಜೆ, ಇದೆ ನಿನ್ನ
ಕಡೆಯ ಸಂದರ್ಶನ! ಇದೆ ಅಂತ್ಯ ಸ್ಪರ್ಶ!
ಇಂದಿಗೇ ಸಾಕು ನೀನೆನಗಿತ್ತ ಹರ್ಷ! (ಹೆಜ್ಜೆಗಳ ಸದ್ದು)
ಪಾದ ರವ! ಪಹರಿ ಇರಬಹುದು. ಇರಲಿ.
ನೋಡುವೆನು. (ಬಾಗಿಲ ತೆರದು) ಕೈಲಾಸ!

ಕೈಲಾಸ (ಹೊರಗಿನಿಂದ) ನನ್ನೊಡೆಯ!

ಸಿದ್ಧಾರ್ಥ — ಏನಿನ್ನೂ
ಮಲಗಿಲ್ಲ? (ಕೈಲಾಸನ ಪ್ರವೇಶ)

ಕೈಲಾಸ — ಇಲ್ಲ, ನನ್ನೊಡೆಯ.

ಸಿದ್ಧಾರ್ಥ — ಹೋಗು
ಮಲಗಿಕೊ. ಭಯವೇನೂ ಇಲ್ಲ.

ಕೈಲಾಸ — ಕರ್ತವ್ಯ?

ಸಿದ್ಧಾರ್ಥ — ಬಹಳ ಬಳಲಿಹೆ ನೀನು. ನನ್ನಾಜ್ಞೆ!
ಹೋಗು ಮಲಗಿಕೊ. (ಹೋಗುವವನನ್ನು ಕುರಿತು)
ಇರು ಸ್ವಲ್ಪ, ಕೈಲಾಸ.

ಕೈಲಾಸ (ಹಿಂತಿರುಗಿ) ಅಪ್ಪಣೆ.

ಸಿದ್ಧಾರ್ಥ — ನಿನಗೆಷ್ಟು ವಯಸೀಗ?

ಕೈಲಾಸ — ತಮ್ಮ
ತಂದೆ ಪಟ್ಟಕ್ಕೆ ಬಂದಾಗ ನನಗೆಂಟು
ತುಂಬಿತ್ತು.

ಸಿದ್ಧಾರ್ಥ (ಮುಗುಳುನಗೆಯಿಂದ) ನೀನು ಬಹು ಬಡವನಲ್ಲವೆ ಪಹರಿ?

ಕೈಲಾಸ — ತಮ್ಮ….. ಕೃಪೆಯಿಂದ….

ಸಿದ್ಧಾರ್ಥ — ಇರಲಿ ಬಿಡು. ಬಾ ಇಲ್ಲಿ.
ತೊಡವುಗಳು ಬೇಕೇನು ನಿನಗೆ? ದುರುದುರುನೆ
ನೋಡುತಿಹೆ ಏಕೆ? ಬೇಕೇನು? ಹೇಳು!

ಕೈಲಾಸ — ಇಂದು ಒಡೆಯರ ರೀತಿ ಬೇರೆಯಾಗಿಹುದೆಂದು
ಸೋಜಿಗವು ಎನಗೆ.

ಸಿದ್ಧಾರ್ಥ — ಸೋಜಿಗವ ಪಡಬೇಡ,
ಪಹರಿ! ತೆಗೆದುಕೋ. (ತನ್ನ ಆಭರಣಗಳನ್ನು ಕೊಡುತ್ತಾನೆ.)

ಕೈಲಾಸ (ಹಿಂಜರಿದು) ನನಗೇಕೆ, ನನ್ನೊಡೆಯ,
ಆ ರನ್ನದೊಡವೆಗಳು; ರಾಜರೇನೆಂದಾರು?

ಸಿದ್ಧಾರ್ಥ — ನಾನಿತ್ತೆನೆನು, ಪಹರಿ. ನಾನಿತ್ತೆನೆಂದರಹು!
ಭಯವೇಕೆ ತೆಗೆದುಕೊ. ಈ ರಾತ್ರಿ ನಿನ್ನ ಮನ
ದೊಳು ಚಿರಸ್ಮರಣೀಯವಾಗಿರಲಿ! (ಕೊಡುತ್ತಾನೆ.)

ಕೈಲಾಸ (ತೆಗೆದುಕೊಂಡು) ನನ್ನೊಡೆಯ!

ಸಿದ್ಧಾರ್ಥ — ನಿನ್ನೊಡವೆ! (ಮರಳಿ ಮತ್ತೊಂದು ಕೊಡುತ್ತಾನೆ.)

ಕೈಲಾಸ (ತೆಗೆದುಕೊಂಡು) ನನ್ನೊಡೆಯ!

ಸಿದ್ಧಾರ್ಥ — ನಿನ್ನೊಡವೆ! ತೆಗೆದುಕೊ;
ಮಲಗಿಕೊ, ಹೋಗು, ನಿನ್ನಿಷ್ಟ.

ಕೈಲಾಸ — ನನ್ನೊಡೆಯ!
(ಅಡ್ಡ ಬಿದ್ದು ಹೋಗುತ್ತಾ ಆತ್ಮಗತ)
ಮುಂದೆ ಏನಾಗುವುದೊ ದೇವರೇ ಬಲ್ಲ.

ಸಿದ್ಧಾರ್ಥ (ಬಾಗಿಲ ಹಾಕಿ)
ಹೊತ್ತಾಯ್ತು, ಕಾಲಚಕ್ರವೆ, ತಿರುಗು ಮೆಲ್ಲನೆಯೆ
ಇದೊಂದು ದಿನ. ಚನ್ನನೆಚ್ಚತ್ತಿಹನೊ? ಇಲ್ಲವೊ?
(ಮತ್ತೊಂದು ಬಾಗಿಲು ತೆರದು)
ಎಂತು ಮಲಗಿಹನು! ನಿದ್ದೆಯವನನು ಶಾಂತಿ
ಸಾಗರದೊಳದ್ದಿಹಳು. ಎಲೆ ನಿದ್ದೆ, ಎನಿತು ಮೃದು
ಮಧುರಳೌ ನೀನು. ಸಮತೆಯೀಯುವೆ ಜಗದ
ಜೀವಿಗಳೆಗೆಲ್ಲ. ನಿನ್ನ ಗಾಢಾಲಿಂಗ-
ನದೊಳೆಲ್ಲರೂ ಒಂದೆ. ನಿಷ್ಪಕ್ಷಪತಳೌ
ನೀನು. ಬಡಕೂಲಿಯಾದೊಡೆಯು, ಮೇಣರಸ-
ನಾದೊಡೆಯು ಭೇದ ತೋರದೆ ನೀನು ಮುತ್ತಿಡುವೆ.
ಯೋಗಿಯಾದರು ಅಥವ ತಲೆಬಡಿಗನಾದರೂ
ನಿನ್ನ ದಿಟ್ಟಿಯೊಳೆಲ್ಲರೊಂದೆ. ಜಗದೆನಿತು
ಬಳಲಿಕೆಯ, ಕೋಟಲೆಯ ನುಂಗುತಿಹೆ ನೀನು!

ಚನ್ನ (ಕನವರಿಸಿ) ಬಂದೆ, ನನ್ನೊಡೆಯ. ಬೇಡ, ಬೇಡಾ! ಬೇಡ!

ಸಿದ್ಧಾರ್ಥ — ಕನವರಿಸುತಿಹನು. (ಮೆಲ್ಲಗೆ) ಜನ್ನಜ್ಜ ಜನ್ನಜ್ಜ!!
ಎಲೆ ನಿದ್ದೆ, ನಿನ್ನ ಕಡಲೆನಿತಾಳವಿಹುದು?
(ಮೈಮುಟ್ಟಿ) ಜನ್ನಜ್ಜ! ಜನ್ನಜ್ಜಾ!

ಚನ್ನ (ಗಾಬರಿಯಿಂದ) ಅಯ್ಯಯ್ಯೊ! ಅಯ್ಯಯ್ಯೊ!
ಏನು ನನ್ನೊಡೆಯ! (ಎದ್ದು ಕಣ್ಣುಜ್ಜಿಕೊಮಡು ಸುತ್ತಲೂ ನೋಡಿ
ಸಿದ್ಧಾರ್ಥನನ್ನು ನೋಡುವನು.)

ಸಿದ್ಧಾರ್ಥ — ಬೆದರದಿರು; ನಾನು,
ಸಿದ್ಧಾರ್ಥ.

ಚನ್ನ — ಏನು ನನ್ನೊಡೆಯ?

ಸಿದ್ಧಾರ್ಥ — ಒಳಗೆ ಬಾ.
ಕನಸು ಕಂಡೆಯ ಏನು?

ಚನ್ನ (ಒಳಗೆ ಬಂದು) ಏನು ಕನಸಪ್ಪಾ!
ದುಃಸ್ವಪ್ನ, ನನ್ನೊಡೆಯ!

ಸಿದ್ಧಾರ್ಥ — ಏನು ಕನಸದು, ಚನ್ನ?

ಚನ್ನ — ನಾಲಗೆಯೆ ಬಾರದೆನಗಷ್ಟು ದುಃಸ್ವಪ್ನ!

ಸಿದ್ಧಾರ್ಥ — ಹೇಳಬಾರದೆ ಎನಗೆ?

ಚನ್ನ — ಹೇಳಬಾರದ ಸ್ವಪ್ನ!
ಕೇಳಬಾರದ ಸ್ವಪ್ನ!

ಸಿದ್ಧಾರ್ಥ — ಇರಲಿ ಬಿಡು. ಹೋಗಿ
ಕಡಿವಾಣ ಹಾಕದೇ ಕಂಥಕನ ಕರೆದು ತಾ.
ಜತೆಗೆ ಇನ್ನೊಂದು ಹಯವನ್ನು ತಾ.

ಚನ್ನ — ಏತಕ್ಕೆ?

ಸಿದ್ಧಾರ್ಥ — ಆಗಲೇ ಮರೆತೆಯಾ, ಬೈಗಿನಲ್ಲಂದದ್ದು?

ಚನ್ನ — ಏನದು?

ಸಿದ್ಧಾರ್ಥ (ಸ್ವಗತ) ಸ್ಮೃತಿ ಕೂಡ ನೆರನವಿರ ಕಂಡೊಡನೆ
ದೂರಾಗುವುದು ಹೇಸಿ. (ಅವನ ತಲೆ ಹಿಡಿದು ಮೆಲ್ಲನೆ ಅಲುಗಿಸಿ)
ಉದುರುದುರು ನೆನಪೆ!
ಈಗ ನೆನಪಾಯ್ತೆ? (ಮುಗಳ್ನಗೆ)

ಚನ್ನ — ಆಯ್ತಾಯ್ತು.

ಸಿದ್ಧಾರ್ಥ — ನಡೆ ಬೇಗ.
ಅರಮನೆಯ ಪಶ್ಚಿಮದ್ವಾರದೊಳು ಕಾಯುತಿರು,
ಬರುವೆನಲ್ಲಿಗೆ ಬೇಗ.

ಚನ್ನ (ಕೈಮುಗಿದು) ಅಪ್ಪಣೆ, ನನ್ನೊಡೆಯ.
(ಹೋಗುತ್ತಾನೆ.)

ಸಿದ್ಧಾರ್ಥ (ದೀಪದ ಬಳಿಸಂದು)
ಬಾ, ಬೆಳಕೆ, ಬಾ ಬೇಗ. ನೀನು ಹೊರಗಿನ ಬೆಳಕು;
ಜ್ಞಾನ ಒಳಗಿನ ಬೆಳಕು. ನೀನಡಿಗಳಿಗೆ ದಾರಿ
ತೋರಿಸುವೆ. ಅರಿವಾದರಾತ್ಮನನು ಕೈಹಿಡಿದು
ನಡೆಸುವುದು. ಎಲೆಲೆ ಹೊರಗಿನ ಬೆಳಕೆ, ಒಳಗಿನಾ
ಬೆಳಕ ಪಡೆಯಲು ಹೋಗುತಿಹೆನು. ನೆರವಾಗು.
ಬಾ ಬೆಳಕೆ, ಬಾ ಬೇಗ. (ದೀಪವಿಡಿದು ಬಾಗಿಲಬಳಿಸಂದು)
ಕಡೆಯ ವಂದನೆ ನಿನಗೆ,
ಕೋಣೆಯೆ, ಕಡೆಯ ವಂದನೆ ನಿನಗೆ. ಸವಿಯಾದ
ನೆನಪುಗಳಿಗಾವಾಸವಾಗಿರುವೆ. ಕಡೆಯ ವಂದನೆ
ನಿನಗೆ, ಕೋಣೆಯೆ, ಕಡೆಯ ವಂದನೆ ನಿನಗೆ.
(ಹೋಗಿ ಮತ್ತೆ ಬಂದು)
ಪತ್ರವನು ಬರೆದಿಟ್ಟು ಹೋಗುವೆನು. ನನ್ನಿಂದ
ಅವರಿಗೇಕುಬ್ಬೇಗ? (ಪತ್ರ ಬರೆದಿಟ್ಟು ದೀಪ ತೆಗೆದುಕೊಂಡು)
ನಡೆಸೆನ್ನ ಬೆಳಕೇ, ನಡೆಸು. ಬೆಳಬೆಳಗಿ ಮುಂದೆ
ಅಡಿಯಿಡಿಸು. ನಂಬಿಹೆನು; ಋಜುಮಾರ್ಗವನೆ ಹಿಡಿಸು!

(ತೆರಳುತ್ತಾನೆ.)

ಪರದೆ. ನಿನ್ನ ನಾ
ಸಲಹಿದೆನು. ನೀನು ಇಂದಿನೊಂದಿರುಳಲ್ಲಿ
ಸಲಹಲಾರೆಯ ಎನ್ನ?

 

ಚನ್ನ — ನಿನ್ನ ಪ್ರೇಮಕೆ ಸೋತೆ,
ಸಿದ್ಧಾರ್ಥ; ಹೇಳು. ಮಾರ್ನುಡಿಯ ನುಡಿಯದೆಯೆ
ಮಾಡುವೆನು.

ಸಿದ್ಧಾರ್ಥ — ಯಾರಿಗಿದನರುಹದಿರು.

ಚನ್ನ — ಇಲ್ಲ
ನನ್ನೆದೆಗು ನಾ ಹೇಳೆ.

ಸಿದ್ಧಾರ್ಥ — ಇಂದು ನೀನೆನ್ನ
ಕೋಣೆಯೆಡೆ ಮಲಗಿಕೊ. ರಾತ್ರಿ ನಿನ್ನನು ಕರೆವ
ಸಮಯ ಬರಬಹುದು.

ಚನ್ನ — ತಪ್ಪದೇ ಮಲಗುವೆನು.

ಸಿದ್ಧಾರ್ಥ — ವಾದ್ಯಗಳು ನಿಂತಿಹವು. ನನಗಾಗಿ ಕಾಯುವರೊ
ಏನೊ; ಹೋಗುವೆನು. ಮರೆಯದಿರು, ತೊರೆಯದಿರು!
(ತೆರಳುತ್ತಾನೆ.)

ಚನ್ನ — ಸಿದ್ಧಾರ್ಥ, ಗೌತಮಾ, ನಿನ್ನ ಮನವರಿಯೆ.
ಮಿಂಚುಹುಳು ಬಲ್ಲುದೇ ಚಂದ್ರತಾರೆಗಳೇಕೆ
ಬೆಳಗುತಿವೆ ಎಂದು. ಆದರು ಮಿಣುಕುವುದು
ಚುಕ್ಕಿಗಳನನುಕರಿಸಿ. ಅಂತೆಯೇ ನಾನೂ.
ಅವನು ತೋಳಗುವನೆಂಬುದನು ಬಲ್ಲೆ. ಏತಕೆಂ
ಬುದನರಿಯೆ. ಆದರಾತನು ಬರಿದೆ ತೊಳಗುವವನ್‌
ಅಲ್ಲ. ಏನನೋ ಬೆಳಗಲೆಂದೇ ಅವನು
ತೊಳಗುವನು. ಸಿದ್ಧಾರ್ಥ ತೊಳಗಿದರೆ ಬೆಳಗುವನು!

(ಹೋಗುತ್ತಾನೆ.)
ಪರದೆ n� hAei@��yan>ತಲ್ಲಣಿಸಲಿಲ್ಲ.
(ಬಹಿರಂಗ) ಗುರುದೇವ, ತಮ್ಮಾಜ್ಞೆಯಂತೆಯೇ ವರ್ತಿಸುವೆ.
ನನ್ನ ಮೊಮ್ಮಕ್ಕಳೊಡನೀತನೂ ಕೂಡಿರಲಿ.

 

ಪರಶುರಾಮ — ರಾಧೇಯ, ಭೀಷ್ಮನೊಂದಿಗೆ ಹೊರಡಲನುವಾಗು!
(ಕರ್ಣ ಮೊದಲಾದವರು ಹೋಗುವರು. ಪರಶುರಾಮ ಗಂಭೀರ ಧ್ವನಿಯಿಂದ)
ಗಾಂಗೇಯ, ಈ ವೀರ ಬಾಲಕನು ಸಾಮಾನ್ಯ-
ನೆಂದರಿಯಬೇಡ. ನೀನೊಂದು ವರ್ಷದಲಿ
ಕಲಿತುದನು ಇವನೊಂದು ತಿಂಗಳಲಿ ಅರಿತಿಹನು.

ಭೀಷ್ಮ — ಗುರುದೇವ, ಅವನ ಮುಖಕಾಂತಿಯೇ ಉಸುರವುದು
ಅವನಾತ್ಮವೆನಿತು ಮಹಿಮಾಸ್ಪದವು ಎಂಬುದನು.
ವೀರನರಿಯನೆ ವೀರನಾರೆಂಬುದನು?

ಪರಶುರಾಮ — ಹೌದು, ಗಾಂಗೇಯ, ಯಾವ ಚಿಪ್ಪಿನೊಳಾವ
ಮುತ್ತಿರುವುದೆಂಬುದನು ಬಲ್ಲವರೆ ಬಲ್ಲರು! o�fGes@��ymily: “Times New Roman”;mso-fareast-theme-font:minor-fareast;mso-ansi-language:EN-US; mso-fareast-language:EN-US;mso-bidi-language:KN’>ಪಂಚಪಾಂಡವರು.
ನಂದಗೋಕುಲದಲ್ಲಿ ದೂರ್ತ ಕಂಸನ ಕೈಗೆ
ಸಿಕ್ಕದಲೆ ವಸುದೇವ ದೇವಕಿಯ ಗರ್ಭದಲಿ
ಬಂದು, ಗೊಪರ ಕೂಡಿ ಬೆಳೆಯುತಿಹನಾಟದಲಿ
ಶ್ರೀ ಕೃಷ್ಣ ಪರಮಾತ್ಮ. ಮುನಿಶಾಪದಿಂದಳಿಯೆ
ಪಾಂಡುಭೂಪತಿಯು ಮುನಿಗಳವರೈವರನು,
ಕುಂತಿಯನು, ಭೀಷ್ಮರಲ್ಲಿಗೆ ಕಳುಹಿ ತೆರಳಿದರು.
ತರುವಾಯ ಪಾಂಡವರು ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)