[ಹೆರಿಗೆ ಮನೆ. ಯಶೋಧರೆ ಮಂಚದ ಮೇಲೆ ಮಲಗಿದ್ದಾಳೆ. ಶಿಶುವಾದ ರಾಹುಲ ತೊಟ್ಟಿಲಲ್ಲಿ ಇದ್ದಾನೆ. ದೂತಿಯರು ಅಲ್ಲಲ್ಲಿ ಮಲಗಿದ್ದಾರೆ. ಸಿದ್ಧಾರ್ಥನ ಪ್ರವೇಶ. ಕತ್ತಲು, ದೀಪ ಕೈಯ್ಯಲ್ಲಿ.]

ಸಿದ್ಧಾರ್ಥ — ಧೈರ್ಯವೆದೆಯೇ ಧೈರ್ಯ! ವೈರಾಗ್ಯ ದೇವತೆಯೆ,
ಸಲಹೆನ್ನನಿಂದು. ಮೃದುವಾಗು, ಎಲೆ ನೆಲವೆ;
ಜನಿಸಿರುವ ರಾಹುಲನ ಕೆನ್ನೆಯಂದದೊಳೀಗ
ಮಿದುವಾಗು, ಎಲೆ ನೆಲವೆ! ವೈರಾಗ್ಯವಿಡುತಿರುವ
ಹೆಜ್ಜೆಗಳ ಸಪ್ಪುಳವ ವ್ಯಾಮೋಹವಾಲಿಸದ
ತೆರದಿ; ಭೈರವನ ತಂಬಟೆಯ ರತಿಯಾಲಿಸದ
ತೆರದಿ; ಮುಕ್ತಿದೇವಿಯ ಹೆಜ್ಜೆ ಸಪ್ಪಳವ
ಮಾಯೆಯಾಲಿಸದಂತೆ; ಶಿವನ ವಾಣಿಯ ಮದನ
ಆಲಿಸದ ತೆರದಿ; ಮಿದುವಾಗು, ಎಲೆ ನೆಲವೆ!
(ಹೆಜ್ಜೆಯಿಡುತ್ತಾ)
ಮಿದುವಾಗು! ಮಿದುವಾಗು! ಮಿದುವಾಗು! ಮಿದುವಾಗು!
ಸದ್ದೇನು?

ದೂತಿ (ಕನವರಿಸಿ) ಎನಿತು ಮುದ್ದಾಗಿರುವೆ, ರಾಹುಲ!

ಸಿದ್ಧಾರ್ಥ — ಕನವರಿಸು, ಕನವರಿಸು, ಎಲೆ ದೂತಿ! ಕನಸಿನೊಳು
ರಾಹುಲನ ಮುದ್ದುಮೋಹವ ಕಂಡು. (ಹುಡುಕುತ್ತಾ)
ಕತ್ತಲೆಯೆ,
ಎಲ್ಲಿ ಬಚ್ಚಿಟ್ಟಿರುವೆ ರಾಹುಲ ಯಶೋಧರೆಯರ?
ಇಲ್ಲಿಲ್ಲ! ರಾಮಿಯಿದು! ಕೃಷ್ಣೆಯಿದು! ಗಂಗೆಯಿದು!
(ಕಂಡು) ಅಲ್ಲಿಹುದು! ಅಲ್ಲಿಹುದು ಎನ್ನ ಮುದ್ದಿನ ಕೆಂಡ!
ಮುಟ್ಟಲಾರೆನು; ಮುಟ್ಟಿದರೆ ಸುಟ್ಟುಬಿಡುವೆ;
ಮುಟ್ಟದಿರಲಾರೆ; ತನುಮನಗಳೆಲ್ಲವನು
ಮೋಹಿಸುವ ಶಾಂತಯಿಂದೆಸೆಯುತಿಹೆ, ಎಲೆ ಕೆಂಡ!
ಇಲ್ಲಿಗೇತಕೆ ಬಂದೆ, ಎಲೆ ಹೃದಯ? ಮತ್ತೇಕೆ
ಬೆದರಿ ಹಿಂಜರಿಯುತಿಹೆ. ತೃಪ್ತಿಯಾಯಿತೆ ನಿನಗೆ?
ಇಲ್ಲ, ಇನ್ನೂ ಇಲ್ಲ. ತೃಪ್ತಿಯಾಗುವುದೆಂತು?
(ದೂತಿಯೊಬ್ಬಳು ಮೈಮುರಿಯುವಳು)
ಒತ್ತಿ ಹಿಡಿ, ಎಲೆ ನಿದ್ದೆ, ಒತ್ತಿ ಹಿಡಿ ದೂತಿಯನು.
ಹೊತ್ತಾಯ್ತು, ಹೃದಯವೆ, ಹೊತ್ತಾಯ್ತು; ಬೇಗ!
(ಯಶೋಧರೆಯ ಮಂಚದ ಬಳಿಗೆ ಓಡಿಹೋಗಿ ನಿಂತು)
ಶಾಂತವಾಗಲೆ ಎದೆಯೆ! ತಳಮಳಿಸದಿರು ಮನವೆ!
(ತೊಟ್ಟಿಲನು ನೋಡಿ)
ರಾಹುಲಾ! ಎನ್ನ ಬೆಳಕಿನ ಕಿರಣ! ಹೃದಯವೇ
ಮರುಗದಿರು! (ಹಿಂಜರಿದು ಮತ್ತೆ ಮುಂದಕ್ಕೆ ಬಂದು)
ಒಂದು ಮುತ್ತನು ಸೆಳೆದು ತೆರಳುವೆನು,
ತಂದೆಯೊಲಿದೀಯುವಾ ಮುತ್ತಲ್ಲವಿದು, ಕಂದ;
ಸಂನ್ಯಾಸಿಯೀಯುತಿಹೆ ನಿಷ್ಕಾಮ ಚುಂಬನ,
ಪರಮಾತ್ಮನೀಯುತಿಹ ಮಂಗಳದ ಮುತ್ತು!
ಹೊತ್ತಾಯ್ತು. (ಮುದ್ದಿಸಲು ಬಗ್ಗಿ ಮತ್ತೆ ಬೆದರಿ ಏಳುವನು)
ಸದ್ದೇನು? (ಸುತ್ತ ನೋಡಿ) ಕಲ್ಪನೆಯ ಸದ್ದು!
ಏಳದಿರು, ಕೂಗದಿರು, ಅಳಬೇಡ, ರಾಹುಲಾ.
ನಿನ್ನಳುವಿನೊಳು ಮಹಾಶಕ್ತಿಯಿಹುದಿಂದು,
ಲೊಕಕದು ಬುದ್ಧನಂ ಮನಬಂದರೀಯುವುದು,
ಮನಬಾರದಿರಲವನನಿರಗೊಡದೆ ಸೀಯುವುದು!
(ಮುತ್ತಿಟ್ಟು)
ಕಡೆಯ ಮುತ್ತಿದು, ಕಂದ, ಮೊದಲ ಮುತ್ತಾದರೂ!
(ಯಶೋಧರೆಯ ಕಡೆಗೆ ತಿರುಗುವನು.)
ನಿದ್ರಿಸು, ಯಶೋಧರಾ, ನಿದ್ರಿಸಲೆ ತಾಯಿ;
ಇಂದು ನಾ ನಿನ್ನ ಸುತ, ಪತಿಯಲ್ಲ, ಪತಿಯಲ್ಲ!
ನಿನೆನಗೆ ದೇವತೆ, ಬಳಿ ನಾ ಸಾರೆ;
ನಿನ್ನ ನಾನಿನ್ನೊಲಿಯೆ; ಭಕ್ತಿಯಿಂ ಪೂಜಿಸುವೆ.
(ಆಲಿಸುತ್ತಾನೆ.)
ಹಾ! ಖುರಪುಟಧ್ವನಿ! ಹೊತ್ತಾಯ್ತು ಹೊತ್ತಾಯ್ತು!
ಬಂದೆ, ಚನ್ನಾ, ಬಂದೆ! ನಿಮಗೆಲ್ಲ ಮಂಗಳಂ!
(ಬಾಗಿಲ ಬಳಿ ಹೋಗಿ)
ಎಲೆ ನಿದ್ದೆ, ನಿನ್ನುದರವತಿ ಕಪ್ಪು.
ನಿನ್ನ ಬಲೆಗೊಳಗಾದವರೆ ಬೆಪ್ಪು.
ನಿನ್ನ ನಿಂದಿಸುವುದೂ ತಪ್ಪು.
ನೀನೀಗ ಸೂತಿಕಾ ಮಂದಿರವನಗಲಿದರೆ,
ಸಗ್ಗ ಸಿಡಿದೊಡೆಯುವುದು!
ಧರೆಯ ಎದೆ ಬಿರಿಯುವುದು!
ಕಂಬನಿಯ ಪೆರ್ದೊರೆಯೆ ಹರಿಯುವುದು!
ಕತ್ತಲೆಯೆ, ಜಗದ ದುಃಖವನೆಲ್ಲ ನುಂಗು!
ಹೊತ್ತಾಯ್ತು! (ಹೋಗುತ್ತಾ)
ನಿಮಗೆಲ್ಲ ಮಂಗಳಂ!

(ಹೋಗುತ್ತಾನೆ.)

ಪರದೆ le=’foY�!ieп�yont-family:Tunga’>ರಾಲರು ಹೊರಗೆ ಬರುತ್ತಾರೆ.)

 

ರಾಲ — ದೊರೆಯ ಮಕ್ಕಳೆ ಇವರು?

ಚನ್ನ — ಹೌದೊ, ಎಲೆ ಮೂಢ.

ರಾಲ — ಇದೇತಕಿಂತಿಹರು?

ಚನ್ನ — ಬಹುದೂರ ಹೋಗುವರು.

ರಾಲ — ಲಾಯದಾಣೆಗೂ, ಚನ್ನ, ಹಣವಂತರಿಗೆ ಹುಚ್ಚು.

ಚನ್ನ — ಇರಲಿ, ನೀ ಓಡು: ನಾ ಹೇಳಿದುದ ಮಾತ್ರ
ಬಿಡದೆ ಮಾಡು.

ರಾಲ — ಹೋಗುವೆನು. ದೇವರೇ! (ತೆರಳುತ್ತಾನೆ.)

ಚನ್ನ — ಉನ್ಮತ್ತನಂತಿಹನು. “ಒಂದೆ ಸಲ!” “ಒಂದೆ ಸಲ!”
ಅದರರ್ಥವೇನೋ ನಾನರಿಯೆ; ನಾನರಿಯೆ.
ನನ್ನ ಕೆಲಸವ ನಾನು ಮಾಡುವೆನು. ಪರಮೇಶ,
ನನ್ನೊಡೆಯನಿಂದು ಹೋಗದ ತೆರದಿ ಮಾಡು.
ಪುಣ್ಯಾತ್ಮನಾತನನು ಕೃಪೆಯಿಂದ ಕಾಪಾಡು!

(ಹೊರಡುತ್ತಾನೆ.)

ಪರದೆ