[ರಾಜಬೀದಿ, ರಾಲನ ಪ್ರವೇಶ.]

ರಾಲ (ಆಕಳಿಸಿ ಮೈಮುಇದು)
ಕಾದು ಕಾದೆನಗೆ ಸಾಕಾಯ್ತು. ಏನು ಚಳಿ!
(ಬಲವಾಗಿ ಕಂಬಳೆ ಹೊದೆಯುತ್ತಾ)
ಆ ಇಲಿ! ಹಾಳಿಲಿಗೆ!…. ಇಲಿಗಳಿವು ಬಡಜನರ
ಪೀಡಿಸುವುದೇ ಹೊರತು ದೊಡ್ಡವರ ತಂಟೆಗೇ
ಕಾಲಿಡವು. ಏನು ತೂತುಗಳಪ್ಪಾ! ಏ ಚಳಿ,
ಹಾಳು ಚಳಿ ತೂತಿದ್ದ ಕಡೆಯೇ ನುಗ್ಗುತಿದೆ! (ಪುನಃ ಆಕಳಿಸಿ)
ಅವನ ಮಾತೇಕೆ ಕೇಳಿದೆನಪ್ಪಾ; ಈ ಬಂಡಿ
ಹೊಡೆಯುವವರಿಂದ ನಮಗಂತು ಸುಖವಿಲ್ಲ!
ಆ ಚನ್ನಗೇಂ ಮರುಳು! ಅವನ ಕುದುರೆಯ ತಲೆ
ಅವನಿಗಿಲ್ಲ. ಮೇಣವನ ಬುದ್ಧಿಯೋ ಕಂಥಕನ
ಲದ್ಧಿ. ಅರಮನೆಯ ಬಿಟ್ಟಾರು ಹೋಗುವರು?
ದೊರೆತನವ ಬಿಟ್ಟಾರು ಹೋಗುವರು? ಕೈಹಿಡಿದ
ಹೆಂಡತಿಯ ಬಿಟ್ಟಾರು ಹೋಗುವರು? ಹೆತ್ತ
ಮಗನ ಬಿಟ್ಟಾರು ಹೋಗುವರು? ಏ ಚೆನ್ನ,
ಬೆಂದ ಹುರಳಿಯ ಬುದ್ಧಿ ನಿನಗಿಲ್ಲ. ಅರವತ್ತ-
ಕರೆಮರಳು! ನಿನಗೀಗ ಎಪ್ಪತ್ತು! ಅಯ್ಯಯ್ಯೊ
ನಿನ್ನ ಮಾತನು ನಂಬಿ ಬಂದ ನಾನೇ ದೊಡ್ಡ
ಮರುಳು! (ಕುಣಿಕುಣಿದು)
ಹಾಳಿರುವೆ, ಕಟ್ಟಿರುವೆ, ಕಾಸ್ತಾರ
ನೆಂದು ಕಡಿಯುವೆಯಾ? (ಕೊಂದು)
ಹೋಗು ಯಮಪುರಿಗೆ!
ಕುಕ್ಕರಿಸಿ ಕುಗುರುವೆನು
(ಕುಳಿತು ತೂಕಡಿಸುತ್ತಾನೆ. ಸಿದ್ಧಾರ್ಥನು ಬರುತ್ತಾನೆ.)
ಪಾಪ, ಚನ್ನನು ಕಾಯ್ದ ಬಳಲಿದನು. ಹೊತ್ತಾಯ್ತು!
(ಮೇಲೆ ನೋಡಿ)
ಚಂದಿರಗೆ ಮಬ್ಬು ಮುಸುಕಿಹುದಿಂದು. ಕತ್ತಲೆಯ,
ಯಾರು ಕಾಣದ ತೆರದಿ ನಿನ್ನಾ ಕರಾಳವಹ
ಸೆರಗಿನಿಂದೆನ್ನಂ ಬಿಗಿಬಿಗಿದು ಸುತ್ತು.
(ಮುಂದೆ ಹೋಗಿ ರಾಲನನ್ನು ಎಡುವುತ್ತಾನೆ.)

ರಾಲ (ಬೆಚ್ಚಿಬಿದ್ದೆದ್ದು) ನನ್ನೊಡೆಯ, ನಾನಲ್ಲ; ಚನ್ನನಾಣತಿಯಂತೆ
ಮಾಡಿದೆನು. ತಪ್ಪಾಯ್ತು! ತಪ್ಪಾಯ್ತು! ತಪ್ಪಾಯ್ತು!

ಸಿದ್ಧಾರ್ಥ — ಯಾರಿವನು? ಪಾಪ! ತಪ್ಪಾಯ್ತು! ಅನಾಥನಿರಬೇಕು.
ಕೂಗದಿರು, ಭಿಕ್ಷುಕ. (ಸ್ವಗತ) ಮೋಕ್ಷವಾಗಲಿ ಮಾಯೆ
ಯಾರಮನೆಯ ಮೆಟ್ಟಿಲೊಳೆ. (ಗಟ್ಟಿಯಾಗಿ)
ಮನೆಯಿಲ್ಲವೇ ನಿನಗೆ?

ರಾಲ — ಲಾಯದಿಂದೋಡಿಸಿದ, ನನ್ನೊಡೆಯ. ಮಲಗಿದ್ದೆ.
ತಪ್ಪಾಯ್ತು! ದಮ್ಮಯ್ಯ!

ಸಿದ್ಧಾರ್ಥ — ಮಲಗು ನಡೆ, ಹೋಗು. — ಇಗೋ!
(ವಸ್ತ್ರಗಳನ್ನು ಕೊಟ್ಟು ತೆರಳುತ್ತಾನೆ)

ರಾಲ (ನಿಟ್ಟಿಸಿರು ಬಿಟ್ಟು)
ನಿನ್ನ ಮನೆ ಹಾಳಾಗ! ನೀ ಸತ್ತುಹೋಗ!
ಚನ್ನ, ನನ್ನ ಕೆಲಸದ ಬಾಯ್ಗೆ ಮಣ್ಣಾಗು
ತಿತ್ತಲ್ಲ! ಬದುಕಿದೆಯ ಬಡಜೀವ! ಏ ಚನ್ನ,
ನಿನ್ನ ಮನೆ ಹಾಳಾಗ! ನೀ ಸತ್ತೇ ಹೋಗ!

(ಓಡುತ್ತಾನೆ.)

ಪರದೆ i�VNwп�yserif”‘>. ನಿನ್ನ ಹಿತಚಿಂತಕನು
ನಾನು.

 

ಸಿದ್ಧಾರ್ಥ — ಸ್ವಪ್ನನಿಧಿ ದೊರಕದಿರೆ, ಎಲೆ ಮಾರ,
ಸ್ವಪ್ನನಿಧಿಯನ್ವೇಷಣೆಯೆ ಇಂಪು, ಸುಖಕರ,
ಶಾಂತಿಕರ!

ಮಾರ — ಹೆತ್ತ ತಾಯ್ತಂದೆಗಳಿಗೆಲ್ಲ
ಮೋಸಮಾಡುವೆಯೇನು, ಸಿದ್ಧಾರ್ಥ? ಸೋಮಾರಿ
ನೀನು. ಕರ್ಮಕ್ಕೆ ಭಯಪಟ್ಟು, ಕರ್ತವ್ಯ
ವೆಸಗದಲೆ ಸ್ವಾನಂದಕೆಳಸುತಿಹ ನೀನೆ
ಹೇಡಿ!

ಸಿದ್ಧಾರ್ಥ — ಬೈಯದಿರು, ಮಾರು, ಬೈಯದಿರು.
ಕಡಲಾಗಿ ಹಿಂತಿರುಗಲೆಂದೇ ಹನಿಯಾಗಿ
ಹೊರಟಿಹೆನು. ಹನಿಯೊಂದು ಎನಿತು ಕೊಳಕೊಡ್ಡಂ
ತೊಳೆಯಬಲ್ಲುದು ಮಾರ?

ಮಾರ — ಕಲ್ಲಿನೆದೆ ನಿನ್ನದೈ.
ಸಿದ್ದಾರ್ಥ! ಸತಿಯ ಗೋಳಿಗೆ ನೂಂಕಿ, ಕಂಬನಿಯ
ಕರೆಯದೆಯೆ ಓಡುತಿಹೆ, ತಸ್ಕರನ ತೆರದಿ!

ಸಿದ್ಧಾರ್ಥ — ಜಗಕ್ಕಾಗಿ ಕಣ್ಣೀರ ಸುರಿಸುವೆನು, ಮಾರ,
ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ.
ಮುಂದೆದೆಯ ಬೆಣ್ಣೆಯನು ಮಾಡೆ, ಇಂದದನು
ಕಲ್ಲಾಗಿ ಮಾಡಿರುವೆ, ಓ ಮೋಹಿನಿಯ ಮಗನೆ,
ತೊಲಗತ್ತ! ತೊಲಗತ್ತ! (ತೆರಳುತ್ತಾಳೆ)

ಮಾರ — ಬಿಡುವೆನೆಂದರಿತಿಹೆಯಾ?
ಎಲೆ ರಾಜಪುತ್ರ, ತುದಿಯವರೆಗೂ ನಿನ್ನನ್‌
ಅಟ್ಟುವೆನು. ನಿನ್ನಿರವು ಕೆಡುಕೆಮ್ಮ ವಂಶಕ್ಕೆ.
ಕಾಯುವೆನು, ಕಾಯುವೆನು ಎಂದಾದರೊಂದು ದಿನ
ನೀನೆನ್ನ ಬಲೆಗೆ ಬೀಳುವವರೆಗೆ, ಸಿದ್ಧಾರ್ಥ.
ಮಾರನೊಡ್ಡುವ ಬಲೆಗೆ ಬೀಳದವರಪರೂಪ.
ಒಮ್ಮೆ ತಪ್ಪಿದರೂ ಮಹಾತ್ಮರೇ ಹೌದು.
ಅದರಿಂದ ನೀನೂ ಮಹಾತ್ಮನೇ, ಗೌತಮಾ!
ಧರ್ಮಮೋಕ್ಷವೆ ನೀನು; ನಾನು ಕಾಮಾರ್ಥ!

(ಹೊರಡುತ್ತಾನೆ.)

ಪರದೆ ನ| �&��uX%� ಕೆಲಸವ ನಾನು ಮಾಡುವೆನು. ಪರಮೇಶ,
ನನ್ನೊಡೆಯನಿಂದು ಹೋಗದ ತೆರದಿ ಮಾಡು.
ಪುಣ್ಯಾತ್ಮನಾತನನು ಕೃಪೆಯಿಂದ ಕಾಪಾಡು!

 

(ಹೊರಡುತ್ತಾನೆ.)

ಪರದೆ