[ಮೇಘಮಂಡಲದಲ್ಲಿ ಯಕ್ಷ ಕಿನ್ನರ ಗಂಧರ್ವರು ಬರುತ್ತಾರೆ.]

ಯಕ್ಷ — ಚೆಲ್ಲು! ಹೂಗಳ ಚೆಲ್ಲು! ಕಿನ್ನರಾ, ನೋಡಲ್ಲಿ
ಅಲ್ಲಿ! ಅನಿಲವೇಗವ ಮೀರಿ ಓಡುತಿವೆ
ಕುದುರೆಗಳು. ಚೆಲ್ಲು, ಹೂಗಳ ಚೆಲ್ಲು; ಪಥವೆಲ್ಲ
ಮೃದುವಾಗಿ ಖುರಪುಟದ ದನಿಯಾಗದಂತೆ.

ಗಂಧರ್ವ — ಚಿಂತೆಯೋಟವ ಮುಂಚೆ ಸಾಗುತಿವೆ ವಾಜಿಗಳು.

ಕಿನ್ನರ — ಮಿಂಚಿನೋಟವ ನಗುತ ನುಗ್ಗುತಿವೆ, ನೋಡು.
ಓಡಿ, ಹಯಗಳೆ, ಓಡಿ. ದೇವದೂತರು ಇಂದು
ನಾವಲ್ಲ, ನೀವು!

ಗಂಧರ್ವ — ಕೆಲಸ ಕೆಟ್ಟಿತು ಈಗ!

ಯಕ್ಷ — ಏನು, ಗಂಧರ್ವ?

ಗಂಧರ್ವ — ನೋಡಲ್ಲಿ, ಗಿರಿಯಂತೆ
ನಿಂತಿಹುದು ಕೋಟೆಗಳ ಹೆಬ್ಬಾಗಿಲು!

ಕಿನ್ನರ — ಇನ್ನಾವ ಹಾದಿಯಿಲ್ಲವೆ, ಯಕ್ಷ?

ಯಕ್ಷ — ನಾನರಿಯೆ!

ಕಿನ್ನರ — ಬನ್ನಿ, ನಾವೆ ತೆರೆಯುವ, ಬನ್ನಿ!

(ತೆರಳುತ್ತಾರೆ.)

ಪರದೆ rif”‘>�<sп�y lang=KN style=’font-size:12.0pt;font-family:Tunga’>ಬೇಡವೆಂದೆ, ನೀನೆ.

 

ಸಿದ್ಧಾರ್ಥ — ಹೌದೌದು!
ಮರೆತಿದ್ದೆ. ಹತ್ತು ರಾಹುತನ, ಚನ್ನಜ್ಜ.
ಹತ್ತಿದೆಯ?

ಚನ್ನ — ಹತ್ತಿದೆನು? ನೀನು?

ಸಿದ್ಧಾರ್ಥ — ಹತ್ತಿದೆ.
(ಕುದುರೆಯನ್ನು ಸಂಬೋಧಿಸಿ ನುಡಿಯುತ್ತದೆ ಆತನ ಅಂತರ್ವಾಣಿ.)
ಮುದ್ದು ಹಯವೇ, ಹೊರಡು; ನಡೆ ಮುಂದೆ, ಮುಂದೆ;
ಜಗದ ಬೆಳಕನು ಹೊತ್ತು ಜವದಿಂದ ನಡೆ ಮುಂದೆ.
ತಿರೆಯ ಕತ್ತಲು ತುಂಬಿ ಕಾಳವಾಗಿರಲು
ನಿಶೆಯ ಗರ್ಭವ ಹೊಕ್ಕು ಜಗಕೆ ಬೆಳಕನು ತಂದೆ
ಎಂಬ ಕೀರ್ತಿಯು ನಿನ್ನದಾಗುವುದು : ಎಲೆ ಹಯವೆ,
ನಡೆ ಮುಂದೆ, ಮುಂದೆ. ಬೇಡ ಭೀತಿಯು ನಿನಗೆ.
ಬೆನ್ನಿನೊಳು ಜಗದ ಜ್ಯೋತಿಯು ಕುಳಿತು ತಳಿಸುತಿದೆ.
ನಿಶೆಯ ಗರ್ಭಂಬೊಕ್ಕು ನಡೆ, ಹಯವೆ, ನಡೆ ಮುಂದೆ
ಮುಂದೆ. ಜೀವಜ್ಯೋತಿಯ ಹೊರುವ ಪುಣ್ಯವೊದ
ಗಿದೆ ಇಂದು. ನೀನೆ ಧನ್ಯನು, ಹಯವೆ : ನೀನಿಂದು
ಇಳೆಯ ತಿಮಿರವ ಹರಿವ ಪೊಂಜುಗಾರನು, ತೇಜಿ.
ಜಗದ ಪುಣ್ಯದ ಭಾರ ನಿನ್ನ ಬೆನ್ನಿನಮೇಲೆ.
ಕೋಟಿ ಜೀವರ ಬೀದಿಯು, ಕೊಟಿಯರಸರ ಬಿದಿಯು,
ನಿನ್ನ ಬೆನ್ನಿನೊಳಿಹುದು. ಓಡು, ನಡೆ; ಓಡು, ನಡೆ;
ನಡೆ ಮುಂದೆ, ಹರಿಯೆ! ನಿನ್ನ ನಡೆಯೊಂದರೊಳು,
ಕುಕ್ಕೋಟಿ ಒಂದೊಂದರೊಳಗಿಂದು ಲಕ್ಷಾಂತ
ರಾತ್ಮರಿಗೆ ಸೊದೆಯುಂಟು. ನಿನ್ನಡಿ ಅಂದೊಂದರೊಳು
ತಿರೆಯ ಚರಿತೆಯು ಬಿದ್ದು ಮುಳುಗೆದ್ದು ತೇಲುತಿದೆ.
ಅಮಿತ ಸಂಖ್ಯೆಯ ಜನರ ಪುಣ್ಯ ಭಾರವನಿಂದು
ಹೊತ್ತಿರುವೆ. ಜಗ್ಗದೆಯೆ, ಕುಗ್ಗದೆಯೆ, ನುಗ್ಗಿ ನಡೆ
ಮುಂದೆ. ವಾಜಿಯೇ, ನಡೆ ಮುಂದೆ, ಮುಂದೆ.
ಬಾಳ ಮೋಹವ ಕುಟ್ಟಿ, ದರ್ಪಸಂಪದವಟ್ಟಿ,
ವಿಷಯಸುಖಗಳ ಮೆಟ್ಟಿ, ಸಿರಿಯ ತರಿದಟ್ಟಿ,
ನಡೆ, ಹಯವೆ, ಕಂಥಕನೆ, ನಡೆ ಮುಂದಕೀಗ!
ಎದೆಯ ಕೀಳಾಸೆಗಳನೆಲ್ಲವನು ಸುಟ್ಟು,
ಮನದ ಸಂದೇಹಗಳನೆಲ್ಲವನು ಬಿಟ್ಟು,
ಪರಮಾತ್ಮನಲ್ಲಚಲ ಭಕ್ತಿಯನ್ನಿಟ್ಟು,
ವೈರಾಗ್ಯವನು ತೊಟ್ಟು, ಮುಕ್ತಿಯನ್ನುಟ್ಟು.
ನಡೆ, ಧೀರ ಕಂಥಕನೆ, ನಡೆ ಮುಂದೆ, ಮುಂದೆ;
ಓಡು, ನಡೆ; ಓಡು, ನಡೆ; ನಡೆ ಮುಂದೆ, ಮುಂದೆ!

(ತೆರಳುತ್ತಾನೆ.)

ಪರದೆ