ಮನದೊಂದೞ್ಕಳೆನ್ನನೊಲ್ದಡರೆ ನೋಡುತ್ತಿರ್ಪುದುಂ ಕಣ್ಣ ಬೆ
ಳ್ಪಿನಗುರ್ವಾಸ್ಥಳಮಂ ಸಿತಾಬ್ಜಮಯಮೆಂಬಂತಾಗೆಯುಂ ಮಾಡಿ ಭೋಂ
ಕೆನಲಚ್ಛೋದಸರೋಂಬುವಂ ಕುಮುದಷಂಡಂ ಬಿಟ್ಟು ತಳ್ತತ್ತು ಮೇ
ಲೆ ನಭೋಭಾಗಮನೆಂಬಿನಂ ಪಸರಿಸಿತ್ತಾಗಳ್ ದಿಶಾಚಕ್ರಮಂ               ೪೪

ವ|| ಅಂತೆಯ್ದೆ ಮತ್ತಮೆನ್ನೊಳ್ ಸಂಭೋಗಲೀಲಾನರ್ತನಕ್ಕೋಜನಪ್ಪ ಮನೋಜಂ ವಿಲಾಸೋಪದೇಶಕ್ಕೋಜ ನಾಗವೇೞ್ಕುಮಲ್ಲದಂದು ರತಿರಸಾಸ್ವಾದನಂಗಳನಱಯದನ ದಿಟ್ಟಿಗಮರ್ದನುಗುೞ್ವಂತೆ ಗೆಯ್ವಂದಮುಂ ಒಸರ್ದು ಪರಿದಪ್ಪುದೆನಿಪ ರತಿರಸಮುಮಾನಂದ ಬಾಷ್ಪಪ್ರಸರಮುಂ ರಸಭಾರದಿಂ ನಡುಗುವಂತೆ ಸಂಚಳಿಸುವಂದಮುಂ ಇನಿಸಪ್ಪೊಡಂ ಪೊಡರ್ಪನಪ್ಪುಕೆಯ್ಯದಿೞಯೆ ಪೂದಳೆದುದೆನಿಪ ಪುರ್ಬಿನ ಕುಡಿವೆರಸು ತೂಕಡನೊಳಕೊಂಡ ಜಾಡ್ಯಮುಂ ಸೊಕ್ಕು ಮುಕ್ಕುಳಿಸಿದಂತಿರ್ದಿರವುಂ ಬೞಲ್ದಂತೆ ಜೋಲ್ದಂದಮುಂ ಮುನ್ನಮಭ್ಯಾಸಮಿಲ್ಲದು ದರ್ಕ್ಕೆಂತು ದೊರೆಕೊಳ್ಗುಮೆಂದು ಭಾವಿಸಿ ನೋಡುತ್ತಾತನೊಳವಸರಂಬಡೆದು ಮೆಲ್ಲನೆಯ್ದೆವಂದು

ಪೆಸರೇನಾರ್ಗೀತನೀ ಜವ್ವನಿಗ ತವಸಿ ತೊಟ್ಟಿರ್ಪ ಕರ್ಣಾವತಂಸಂ
ಪೊಸತೀ ಲೋಕಕ್ಕಿದಾವಂಘ್ರಿಪದ ಪೊಳೆವ ಪೂಗೊಂಚಲಿಂದಾದುದೋ ನೀಂ
ಬೆಸಸಲ್ವೇೞಂತಿದಂ ಕೌತುಕಮನೆನಗೆನುತ್ತಂ ನಮಸ್ಕಾರಪೂರ್ವಂ
ಬೆಸಗೊಂಡೆಂ ತನ್ಮುನೀಂದ್ರಾನುಚರಮುನಿಯನಾನಂದತಿಪ್ರೀತಿಯಿಂದಂ            ೪೫

ವ|| ಅಂತು ಬೆಸಗೊಳೆ

ಬೆಸಗೊಳ್ವುದಱಂದಿದನು
ದ್ದೆಸಮಾವುದು ತರುಣಿ ನಿನಗೆ ಕೌತುಕಮೆನೆ ಕೇ
ಳುಸಿರ್ದಪೆನೆಂದಾ ಮುನಿಪಂ
ನಸುನಗುತಂ ಪೇೞಲುದ್ಯತನಾದಂ             ೪೬

ವ|| ಅದೆಂತೆನೆ ಸಕಲಮುನಿವೃಂದವಂದಿತಚರಣನುಮಖಿಲಮುನಿಜನಾನಂದನನುಂ ವಿದಿತ ನಿರವದ್ಯವಿದ್ಯಾ ಕಲಾಪನುಮಪ್ರತಿಮ ರೂಪನುಮಪ್ಪೊರ್ಬ ಶ್ವೇತಕೇತುವೆಂಬ ಮಹಾಮುನಿಯಮರಲೋಕದೊಳಿರ್ಪ ನಾತನೊಂದುದಿವಸಂ ಪುಂಡರೀಕಮೆಂಬ ಸರೋವರಮಂ ಮೀಯಲೆಂದು ಬಂದಿರೆ

೪೪. ಅವನು ಮನಸ್ಸಿನ ಒಂದು ಅಕ್ಕರೆಯಿಂದ ನನ್ನನ್ನೇ ಕಣ್ಣೆತ್ತಿ ನೋಡುತ್ತಿದ್ದನು. ಅವನ ಕಣ್ಣಿನ ಅತ್ಯಕವಾದ ಬಿಳುಪು ಆ ಸ್ಥಳವನ್ನೆಲ್ಲಾ ಬಿಳಿಯ ಕಮಲಗಳಿಂದ ತುಂಬಿಕೊಂಡಿರುವಂತೆ ಮಾಡಿದ್ದಿತು. ಇದರಿಂದ ಬಿಳಿಯ ತಾವರೆಗಳ ಗುಂಪು ಅಚ್ಛೋದಸರೋವರವನ್ನು ಬಿಟ್ಟು ಮೇಲಕ್ಕೆ ಬಂದು ಆಕಾಶದಲ್ಲಿ ಸೇರಿಕೊಂಡಿದೆಯೋ ಎಂಬಂತೆ ನಾಲ್ಕು ದಿಕ್ಕುಗಳಲ್ಲೂ ಹರಡಿಕೊಂಡಿದ್ದಿತು. ವ|| ಆಗ ನಾನು ನನ್ನಲ್ಲೇ ಹೀಗೆ ಬಹಳವಾಗಿ ಆಲೋಚಿಸಿದೆನು. “ಸುರತವಿನೋದದ ನಾಟ್ಯಕ್ಕೆ ಗುರುವಾದ ಮನ್ಮಥನೇ ಈ ಬಗೆಯ ಚೇಷ್ಟೆಗಳನ್ನೆಲ್ಲಾ ಕಲಿಸಿಕೊಡುವ ಉಪಾಧ್ಯಾಯನಾಗಿರಬೇಕು. ಹಾಗಿಲ್ಲದಿದ್ದರೆ ಸಂಭೋಗಸುಖವೆಂದರೇನು? ಎಂಬುದನ್ನೇ ಅರಿಯದಿರುವ ಈ ಋಷಿಪುತ್ರನ ದೃಷ್ಟಿಗೆ ಅಮೃತವನ್ನು ಸುರಿಸುವಂತಿರುವ ರೀತಿಯೂ, ಉಕ್ಕಿ ಹರಿಯುತ್ತಿರುವ ಶೃಂಗಾರರಸವೂ, ಆನಂದಬಾಷ್ಪವನ್ನು ಸುರಿಸುವಿಕೆಯೂ, ಸಂತೋಷದ ಹೊರೆಯಿಂದ ನಡುಗುವಂತೆ ಚಲಿಸುವ ಒಂದು ಬಗೆಯೂ, ಸ್ವಲ್ಪವೂ ಅತ್ತಿತ್ತ ಮಿಸುಕಾಡದೆ ನನ್ನ ಮೇಲೆ ಬೀಳಲಾಗಿ ಹೂ ಬಿಟ್ಟಿದೆಯೋ ಎಂಬಂತಿರುವ ಬಳ್ಳಿಹುಬ್ಬಿನ ತುದಿಯಿಂದ ಕೂಡಿ ನಿದ್ರೆಯನ್ನು ಒಳಗೊಡಂತಿರುವ ಜಡತನವು ತುಂಬಿಕೊಂಡಿರುವ ಮದವನ್ನು ಹೊರಪಡಿಸುವಿಕೆಯೂ, ಬಳಲಿದಂತೆ ಜೋಲು ಬೀಳುವಿಕೆಯೂ ಮೊದಲು ಅಭ್ಯಾಸವಿಲ್ಲದ ಇದಕ್ಕೆ ಹೇಗೆ ಬಂತು? ಎಂದು ಆಲೋಚಿಸಿ ನೋಡುತ್ತಾ, ಅವನಲ್ಲಿ ಇಷ್ಟುಮಟ್ಟಿಗೆ ಅವಕಾಶ ದೊರಕಿದ್ದರಿಂದ ಮೆಲ್ಲನೆ ಹತ್ತಿರಕ್ಕೆ ಹೋದೆನು. ೪೫. ಅವನ ಜೊತೆಯಲ್ಲಿದ್ದ ಋಷಿಕುಮಾರನಿಗೆ ನಮಸ್ಕಾರವನ್ನು ಮಾಡಿ “ಈ ತರುಣಮುನಿಯ ಹೆಸರೇನು? ಈತನು ಯಾರ ಮಗ? ಇವನು ಕಿವಿಯಲ್ಲಿ ಮುಡಿದಿರುವ ಹೂವು ಈ ಭೂಲೋಕದಲ್ಲಿ ಬಹಳ ಅಪೂರ್ವವಾದುದು. ಇದು ಯಾವ ಶ್ರೇಷ್ಠವಾದ ಮರದ ಹೂಗೊಂಚಲಿನಿಂದ ಕೊಯ್ದು ಬಂದಿದ್ದು? ಇದನ್ನೆಲ್ಲಾ ತಿಳಿಸಬೇಕು. ನನಗೆ ಬಹಳ ಆಶ್ಚರ್ಯವಾಗಿದೆ ಎಂದು ಬಹಳ ಸಲಿಗೆಯಿಂದ ಕೇಳಿದೆನು. ವ|| ಹಾಗೆ ಕೇಳಲಾಗಿ, ೪೬. ಆಗ ಆ ಮುನಿಯು ನಸುನಗುತ್ತ ‘ಎಲೈ ಹುಡುಗಿಯೆ, ಇದನ್ನು ನೀನು” ಯಾವ ಉದ್ದೇಶದಿಂದ ಕೇಳುತ್ತೀಯೋ? ಆಗಲಿ ನಿನಗೆ ಇಷ್ಟು ಕುತೂಹಲವಿದ್ದರೆ ಹೇಳುತ್ತೇನೆ, ಕೇಳು” ಎಂದು ಹೇಳಲು ತೊಡಗಿದನು. ವ|| ಅದು ಹೇಗೆಂದರೆ, ಸ್ವರ್ಗಲೋಕದಲ್ಲಿ ಋಷಿಗಳೆಲ್ಲರಿಂದಲೂ ನಮಸ್ಕರಿಸಲ್ಪಡುವ ಪಾದವುಳ್ಳ ಮುನಿಗಳೆಲ್ಲರಿಗೂ ಸಂತೋಷವನ್ನುಂಟುಮಾಡುವ ಶ್ರೇಷ್ಠವಾದ ಸಮಸ್ತ ವಿದ್ಯೆಗಳಲ್ಲೂ ಪಾರಂಗತನಾದ ಹಾಗೂ ಬಹಳ ಸುಂದರನಾದ ಶ್ವೇತಕೇತುವೆಂಬ ಮಹರ್ಷಿಯಿದ್ದನು. ಅವನು

ಅರವಿಂದಾಕರಸಾಂದ್ರ ಪದ್ಮವನಮಧ್ಯೋದ್ದೇಶದೊಳ್ ಲಕ್ಷಿ  ಭಾ
ಸುರವಿಸ್ತೀರ್ಣಸಿತಾಬ್ಜದಲ್ಲಿ ಪದಪಿಂ ಪ್ರತ್ಯಕ್ಷಮಿರ್ಪಳ್ ನಿರಂ
ತರಮಾ ಕೋಮಳೆ ಪದ್ಮಸದ್ಮತಟದೊಳ್ ನಿಂದಿರ್ದ ಸರ್ವಾಂಗಸುಂ
ದರನಂ ದಿವ್ಯಮುನೀಂದ್ರನಂ ಪಿರಿದುಮೊಂದಾಸಕ್ತಿಯಿಂ ನೋಡಿದಳ್     ೪೭

ವ|| ಅಂತು ನೋಡೆ

ನೋಡಲೊಡಂ ರತಾಂತಸುಖಮಾಗೆ ನಿಜಾಸನ ಪುಂಡರೀಕದೊಳ್
ನೋಡೆ ಕೃತಾರ್ಥೆಯಾದಳದಱತ್ತಣಿನಾಗಳೆ ಗಾಡಿ ನಾಡೆ ಕ
ಣ್ಗೂಡಿರಲೊರ್ವನುದ್ಭವಿಸೆ ಕಂಡು ನಿಜಾತ್ಮಜನೀತನೆಂದವಳ್
ನೀಡಿದಳಾ ಕುಮಾರಕನನಾ ಮುನಿಪಂಗೆ ಮನೋನುರಾಗದಿಂ        ೪೮

ವ|| ಆಗಳಾತಂ ಯೋಗದೃಷ್ಟಿಯಿಂ ನೋಡಿ ತತ್ಕುಮಾರನಂ ಕೈಕೊಂಡು ಬಾಲಜನ್ಮೋಚಿತಕ್ರಿಯೆಗಳಂ ಮಾಡಿ ಜನ್ಮಾನುರೂಪಮಾಗೆ ಪುಂಡರೀಕನೆಂದು ಪೆಸರನಿಟ್ಟು ಶೈಶವಮಂ ಪತ್ತುವಿಡಲೊಡಮಖಿಳವಿದ್ಯಾಕಲಾಪದೊಳ್ ಪರಿಣತನಂ ಮಾಡಿ ಯತಿತ್ವಮಂ ಕೈಕೊಳಿಸೆ ತದುನುಷ್ಠಾನಪರಾಯಣನಾದ ಮಹಾನುಭಾವನೀತಂಗೀ ವ್ರತವಿರುದ್ಧಮಪ್ಪ ಕುಸುಮಮಂಜರಿಯೆಂತು ಬಂದುದೆಂಬೆಯಪ್ಪೊಡೆ

ಇಂದು ಚತುರ್ದಶಿಯಪ್ಪುದ
ಱಂದಂ ಕೈಲಾಸವಾಸಿಯಂ ಕಾಣಲ್ಕಾ
ನಂದದೆ ದಿವದಿಂದಿರ್ಬರು
ಮೊಂದಾಗಿ ಬರುತ್ತಮಿರ್ಪುದಂ ತತ್‌ಕ್ಷಣದೊಳ್         ೪೯

ಕುಸುಮವಿಭೂಷಣಾನ್ವಿತೆ ನವಪ್ರಸವಾಸವಪಾನಮತ್ತೆ ರಂ
ಜಿಸುವ ವಸಂತಲಕ್ಷಿ ಯ ಕರಾಗ್ರದೊಳಿಕ್ಕಿ ನಖಾಂಶುಜಾಲಮಂ
ಪಸರಿಸುತಿರ್ಪ ತನ್ನ ಕರಮಂ ವನದೇವತೆ ಪಾರಿಜಾತದೊಂ
ದೆಸೆವಲರ್ಗೊಂಚಲಂ ಪಿಡಿದು ನಂದನದೊಳ್ ಬರುತೊರ್ವಳೊಪ್ಪಿದಳ್         ೫೦

ವ|| ಅಂತು ಬಂದು ಪೊಡಮಟ್ಟು ಭುವನತ್ರಯಾಭಿರಾಮಮಪ್ಪ ನಿನ್ನ ಸೌಕುಮಾರ್ಯಕ್ಕೆ ತಕ್ಕಲಂಕಾರಮೀ ದಿವ್ಯಕುಸುಮಮಂಜರಿ ಯನವತಂಸಂ ಮಾಡಿ ಪಾರಿಜಾತಜನ್ಮಮಂ ಸಫಲಂ ಮಾೞ್ಪುದೆಂದು ಬಿನ್ನವಿಸೆ ನಿರೂಪಸುತ್ತಿಗೆ ಲಜ್ಜಿಸಿ ಕೇಳದಂತೆ ಪೋಗೆ ಮತ್ತಂ ಬೆನ್ನನೆಪತ್ತಿ ಬರುತಿರ್ಪುದುಮಾಂ ಕಂಡು ಕಾರುಣ್ಯದಿಂದೀ ಕಾಂತೆಗೆ ಸಂತೋಷಮಂ ಮಾಡಿಮೆನಲಿದೇಕೆ

ಒಂದು ದಿವಸ ಸ್ನಾನಮಾಡವುದಕ್ಕಾಗಿ ಪುಂಡರೀಕವೆಂಬ ಸರೋವರಕ್ಕೆ ಬಂದಿರಲಾಗಿ, ೪೭. ಆ ತಾವರೆಗೊಳದ ದಟ್ಟವಾದ ಕಮಲಗಳ ಗುಂಪಿನ ನಡುವೆ ಪ್ರಕಾಶಮಾನವಾಗಿಯೂ ಅಗಲವಾಗಿಯೂ ಇರುವ ಒಂದು ಬಿಳಿಯ ಕಮಲದಲ್ಲಿ ಲಕ್ಷೀದೇವಿಯು ಸಂತೋಷದಿಂದ ಸ್ಥಿರವಾಗಿ ನೆಲೆಸಿದ್ದಳು. ಅವಳು ತಾವರೆಗೊಳದ ದಡದಲ್ಲಿ ನಿಂತುಕೊಂಡಿದ್ದ ಸರ್ವಾಂಗಸುಂದರನಾದ ಆ ದೇವರ್ಷಿಯನ್ನು ಬಹಳ ಆಸಕ್ತಿಯಿಂದ ನೋಡಿದಳು. ವ|| ಹಾಗೆ ನೋಡಲಾಗಿ, ೪೮. ನೋಡಿದ ಕೂಡಲೇ ತಾನು ಕುಳಿತುಕೊಂಡಿದ್ದ ಬಿಳಿದಾವರೆಯಲ್ಲೇ ಮಾನಸಿಕವಾಗಿ ಸಂಭೋಗಸುಖವನ್ನು ಅನುಭವಿಸಿದಳು. ಆ ಮಾನಸಿಕಸುಖವೇ ಸಾರ್ಥಕವಾಯಿತು, ಗರ್ಭವುಂಟಾಯಿತು. ಕೂಡಲೆ ಕಣ್ಣಿಗೆ ಆನಂದವನ್ನುಂಟುಮಾಡುವ ಪರಮಸುಂದರವಾದ ಮಗುವೊಂದು ಹುಟ್ಟಿತು. ಅದನ್ನು ನೋಡಿ ಎತ್ತಿಕೊಂಡು “ಮಹರ್ಷಿಗಳೆ ಇದು ನಿಮ್ಮ ಮಗು” ಎಂದು ಪ್ರೀತಿಯಿಂದ ಅವನಿಗೆ ಆ ಮಗುವನ್ನು ಒಪ್ಪಿಸಿದಳು. ವ|| ಆಗ ಅವನು ಯೋಗದೃಷ್ಟಿಯಿಂದ ನೋಡಿ ತನ್ನ ಆ ಮಗುವನ್ನು ಪರಿಗ್ರಹಿಸಿ ಹುಟ್ಟಿದಾಗ ಮಾಡಬೇಕಾದ ಜಾತಕರ್ಮವೇ ಮೊದಲಾದ ಸಂಸ್ಕಾರಗಳನ್ನು ನೆರವೇರಿಸಿ, ಪುಂಡರೀಕ (ಬಿಳಿಯ ಕಮಲ)ದಲ್ಲಿ ಹುಟ್ಟಿದ್ದರಿಂದ ಅದಕ್ಕೆ ಅನುಸಾರವಾಗಿ ಪುಂಡರೀಕನೆಂಬ ಹೆಸರನ್ನಿಟ್ಟನು. ಬಳಿಕ ಎಳೆತನವು ಕಳೆಯಲು ಸಮಸ್ತ ವಿದ್ಯೆಗಳಲ್ಲೂ ಪಾರಂಗತನನ್ನಾಗಿ ಮಾಡಿ ಬ್ರಹ್ಮಚರ್ಯವ್ರತಧಾರಿಯನ್ನಾಗಿ ಮಾಡಿದನು. ಬಳಿಕ ಈ ಮಹಾನುಭಾವನು ಆ ವ್ರತಾನುಷ್ಠಾನದಲ್ಲೇ ನಿರತನಾಗಿದ್ದಾನೆ. ಈಗ ಇವನಿಗೆ ವ್ರತವಿರುದ್ಧವಾದ ಹೂಗೊಂಚಲು ಹೇಗೆ ಬಂತು ಎಂದರೆ, ೪೯. ಈ ದಿವಸ ಚತುರ್ದಶಿಯಾದುದರಿಂದ ಕೈಲಾಸಪತಿಯಾದ ಪರಮೇಶ್ವರನನ್ನು ದರ್ಶನಮಾಡಬೇಕೆಂದು ಸಂತೋಷದಿಂದ ನಾವಿಬ್ಬರೂ ಒಟ್ಟಿಗೆ ಸ್ವರ್ಗಲೋಕದಿಂದ ಬರುತ್ತಿರಲಾಗಿ, ಕೂಡಲೆ ೫೦. ವನದೇವತೆಯೊಬ್ಬಳು ಹೂವಿನ ಒಡವೆಗಳಿಂದಲೇ ಸಿಂಗರಿಸಿಕೊಂಡು, ಹೊಸ ಹೂವಿನ ಬಂಡನ್ನು ಕುಡಿದು ಮದವೇರಿಸಿದವಳಾಗಿ, ಉಗುರಿನ ಕಾಂತಿಗಳನ್ನು ಬೀರುತ್ತಿರುವ ತನ್ನ ಕೈಯನ್ನು ವಸಂತದೇವತೆಯ ಕೈಯಲ್ಲಿಟ್ಟು, ಪಾರಿಜಾತದ ಒಂದು ಸೊಗಸಾದ ಹೂಗೊಂಚಲನ್ನು ಹಿಡಿದುಕೊಂಡು ನಂದನವನದಲ್ಲಿ ಬರುತ್ತಿದ್ದಳು. ವ|| ಹಾಗೆ ಬಂದು ನಮಸ್ಕರಿಸಿ, “ಪೂಜ್ಯರೆ, ಮೂರು ಲೋಕಗಳಲ್ಲೂ ಪರಮರಮಣೀಯವಾದ ನಿಮ್ಮ ಸೌಂದರ್ಯಕ್ಕೆ ಈ ದಿವ್ಯವಾದ

ಬೇಡವೇಡೆನೆಯುಂ ಕಿವಿಯೊಳ್ ತೊಡರ್ಚಿ ಪೋದಳೀ ಕುಸುಮಮಂಜರಿಯನೆಂದು ಸಹಚರಮುನಿ ಪೇೞೆ ಪುಂಡರೀಕಂ ದರಹಸಿತಾಧರಕ ಪೋಲತಲನಾಗಿ

ಎಳಸುತ್ತಿರ್ದಪೆ ಪುಷ್ಪಮಂಜರಿಗೆ ಕೊಳ್ಳೀ ಸುತ್ತಿದೇಕೆಂದು ಸಂ
ಚಳಿಸುತ್ತಂ ನಿಜಕರ್ಣದಿಂ ತೆಗೆದು ಸೋಲ್ತೆಂ ಕೂಡು ನೀನೆನ್ನೊಳೆಂ
ದಳಿಮಾಲಾರವದಿಂದೆ ಪೇೞ್ವ ತೆಱದಿಂ ಮತ್ಕರ್ಣದೊಳ್ ತಾರಕೋ
ಜ್ವಳಮಂ ರಂಜಿಪ ಪುಷ್ಪಮಂಜರಿಯನತ್ಯೌತ್ಸುಕ್ಯದಿಂದಿಕ್ಕಿದಂ    ೫೧

ಇಂ ಪೇೞ್ವುದೇನನೆನ್ನ ಕ
ದಂಪಿನ ನಸುಸೋಂಕಿನೊಂದು ಸುಖದಿಂದಾದಂ
ಕಂಪಿಸುತಿರೆ ಕರತಳದಿಂ
ದಂ ಪೋದತ್ತಕ್ಷಮಾಲೆ ನಾಣ್ಬೆರಸಾಗಳ್       ೫೨

ವ|| ಅಂತು ಪೋದೊಡಮಱಯದಿರೆ

ತೊಳಗುವ ಹಾರಮನಾಗಳ್
ತಳೆವಂತಿರೆ ನೆಲಕೆ ಬೀೞನಂ ಪಿಡಿದಕ್ಷಾ
ವಳಿಯಂ ಕೊರಲೊಳ್ ತಳೆದಾಂ
ತಳೆದೆಂ ಮುನಿಪತಿಯ ತೋಳ ತೞನ ಸುಖಮಂ       ೫೩

ವ|| ಅಂತಾ ವ್ಯತಿರೇಕದೊಳೆನ್ನ ಛತ್ರಧಾರಿಣಿ ನೋಡಿ

ತಡೆದಿರಲಾಗದಿನ್ನು ಮೊಗಮಜ್ಜನಮಂ ನೆಮಾಡಿ ದೇವಿಯರ್
ನಡೆಗೊಳಲಿರ್ದಪರ್ ಮನೆಗೆ ಮಜ್ಜನಕೀಗಳೆ ರಾಜಪುತ್ರಿ ನೀಂ
ನಡೆವುದೆನುತ್ತಮಿಚ್ಚೆಯಣಮಿಲ್ಲದೊಡಂ ತೆಗೆದಳ್ ಕರಂ ಮನಂ
ಕಿಡೆ ಪೊಸತಪ್ಪುದೊಂದು ಪಿಡಿಗಂಕುಶಮಿಟ್ಟು ಮರಳ್ಚುವಂದದಿಂ            ೫೪

ಹೂಗೊಂಚಲು ಚೆನ್ನಾಗಿ ಒಪ್ಪುವ ಒಡವೆಯಾಗಿದೆ. ಇದನ್ನು ಕಿವಿಯಲ್ಲಿ ಮುಡಿದುಕೊಳ್ಳಿ. ಪಾರಿಜಾತದ ಜನ್ಮವು ಸಾರ್ಥಕವಾಗಲಿ ಎಂದು ಅರಿಕೆ ಮಾಡಿದಳು. ಆಗ ಈ ಕುಮಾರನು ತನ್ನ ಸೌಂದರ್ಯದ ಹೊಗಳಿಕೆಗೆ ನಾಚಿಕೆಪಟ್ಟು ಕೇಳಿಸಿಕೊಳ್ಳದವನಂತೆ ಹೆಜ್ಜೆ ಹಾಕುತ್ತಿದ್ದನು. ಅವಳು ಬಿಡದೆ ಬೆನ್ನ ಹಿಂದೆಯೇ ಬರುತ್ತಿರುವುದನ್ನು ನಾನು ನೋಡಿ, “ಗೆಳೆಯ! ಸ್ವಲ್ಪ ದಯೆಯಿಂದ ಈ ಹೆಂಗಸಿಗೆ ಸಂತೋಷವಾಗುವಂತೆ ಮಾಡಬಾರದೆ?” ಎಂದೆನು. ಅವನು, “ಇದೇಕೆ ನನಗೆ? ಬೇಡ ಬೇಡ!” ಎಂದು ಅವನು ಹೇಳುತ್ತಿದ್ದರೂ ಬಿಡದೆ ಅವಳು ಅದನ್ನು ಇವನ ಕಿವಿಗೆ ಮುಡಿಸಿ, ಹೊರಟುಹೋದಳು” ಎಂದು ಒಡನಾಡಿಯಾದ ಮುನಿಯು ಹೇಳುತ್ತಿರಲಾಗಿ ಪುಂಡರೀಕನು ತುಟಿ ಮತ್ತು ಕೆನ್ನೆಗಳಿಂದ ನಸುನಗೆಯನ್ನು ತೋರ್ಪಡಿಸುತ್ತ ೫೧. “ಈ ಹೂಗೊಂಚಲಿಗೆ ಆಸೆಪಟ್ಟಿದ್ದೀಯೆ. ಹಾಗಾದರೆ ತೆಗೆದುಕೊ, ಪ್ರಕಾರಾಂತರದಿಂದ ತಿಳಿಸುವುದೇತಕ್ಕೆ?” ಎಂದು ಹೇಳಿ ತನ್ನ ಕಿವಿಯಿಂದ ಬೇರ್ಪಡಿಸಿ ತೆಗೆದು, “ನಾನು ನಿನ್ನಲ್ಲಿ ಅನುರಕ್ತನಾಗಿದ್ದೇನೆ. ನನಗೆ ರತಿಸುಖವನ್ನು ನೀಡು” ಎಂದು ದುಂಬಿಗಳ ಧ್ವನಿಯ ಮೂಲಕ ಹೇಳುವ ರೀತಿಯಲ್ಲಿ ನಕ್ಷತ್ರಪುಂಜದಂತೆ ಪ್ರಕಾಶಮಾನವಾದ ಹೂವಿನ ಗೊಂಚಲನ್ನು ಬಹಳ ಉತ್ಸಾಹದಿಂದ ನನ್ನ ಕಿವಿಗೆ ಮುಡಿಸಿದನು. ೫೨. ಇನ್ನು ಹೇಳುವುದೇನು? ನನ್ನ ಕೆನ್ನೆಯ ಅಲ್ಪಸ್ಪರ್ಶದಿಂದಲೇ ಉಂಟಾದ ಸುಖದಿಂದ ಅವನ ಕೈ ಬಹಳವಾಗಿ ನಡುಗುತ್ತಿತ್ತು. ಅವನ ನಾಚಿಕೆಯ ಜೊತೆಯಲ್ಲೇ ಸಟಿಕದ ಜಪಸರವೂ ಜಾರಿ ಕೆಳಕ್ಕೆ ಬಿತ್ತು. (ಟಿ. ನಾಚಿಕೆಯೂ ಇಲ್ಲದಂತಾಯಿತು. ಜಪಸರವೂ ಕೆಳಕ್ಕೆ ಬಿತ್ತು). ವ|| ಹಾಗೆ ಕೆಳಕ್ಕೆ ಬಿದ್ದುದನ್ನೂ ಅವನು ತಿಳಿದುಕೊಳ್ಳದಿರಲಾಗಿ ೫೩. ಅದು ನೆಲಕ್ಕೆ ಬೀಳುವಷ್ಟರಲ್ಲಿ ನಾನು ಆ ಜಪಸರವನ್ನು ಹಿಡಿದುಕೊಂಡು ಪ್ರಕಾಶಮಾನವಾದ ಹಾರವನ್ನು ಹಾಕಿಕೊಳ್ಳುವಂತೆ ಕೊರಳಿಗೆ ಹಾಕಿಕೊಂಡನು. ಆಗ ನಾನು ಆ ಮುನೀಶ್ವರನು ತೋಳುಗಳಿಂದ ನನ್ನನ್ನು ತಬ್ಬಿಕೊಂಡಷ್ಟು ಆನಂದವನ್ನು ಅನುಭವಿಸಿದೆನು. ವ|| ಆ ಸಂದರ್ಭದಲ್ಲಿ ನನ್ನ ಛತ್ರಿ ಹಿಡಿಯುವ ಊಳಿಗದವಳು ಬಂದು ನೋಡಿ, ೫೪. “ಅಮ್ಮ! ಇನ್ನು ಹೊತ್ತು ಮಾಡಬೇಡ. ಮಹಾರಾಣಿಯವರು ಸ್ನಾನವನ್ನು ಮುಗಿಸಿಕೊಂಡು ಮನೆಗೆ ಹೊರಡಲು ಸಿದ್ಧವಾಗಿದ್ದಾರೆ. ‘ನೀನೂ ಈಗಲೇ ಸ್ನಾನಕ್ಕೆ ಬಾ’ ಎಂದು ಹೇಳಿ ನನಗೆ ಸ್ಪಲ್ಪವೂ ಇಷ್ಟವಿಲ್ಲದಿದ್ದರೂ ಹೊಸದಾಗಿ ಹಿಡಿದುಕೊಂಡು

ವ|| ಅಂತವಳೆನ್ನನೆಂತಾನುಂ ತೆಗೆಯೆ

ಮದನಾಸ್ತ್ರಾವಳಿಯಿಂದೆ ಕೀಲಿಸಿದುದೋ ತದ್ವಕ್ತ್ರಲಾವಣ್ಯಪಂ
ಕದಿನಾೞ್ದತ್ತೋ ಕಪೋಲಕಂಟಕನಿಕಾಯಾಗ್ರಂಗಳಿಂ ಕೂಡೆ ನಾಂ
ಟದುದೋ ಮೇಣ್ ಸುಭಗತ್ವಮೆಂಬ ಗುಣದಿಂ ಪೊಲ್ದತ್ತೊ ಮೇಣೆಂಬಿನಂ
ಪದಪಿಂ ನಟ್ಟಿರೆ ದಿಟ್ಟಿಯಂ ತೆಗೆದೆನೆಂತಾನುಮುದ್ವೇಗದಿಂ        ೫೫

 

ವ|| ಅಲ್ಲಿಂ ತಳರ್ವುದುಮತ್ತಲೊಡನೆಯೆ ಕುಮಾರನಾತನ ಧೈರ್ಯಸ್ಖಲನೆಯಂ ನೋಡಿ

ಎನಗನುರೂಪಮಲ್ತಿದು ನಿಕೃಷ್ಟಜನೋಚಿತಮಾರ್ಗಮೆಂಬಿದಂ
ಮನದೊಳಣಂ ವಿಚಾರಿಸದೆ ಸೈರಣೆಗೆಟ್ಟಱವೆತ್ತವೋದುದೆಂ
ಬಿನಮೆರ್ದೆಗೆಟ್ಟು ಮೆಯ್ಯಱಯದಂತಿರಲಕ್ಕುಮೆ ಪುಂಡರೀಕ ಭೋಂ
ಕನೆ ನಿನಗೀಗಳಿಂದ್ರಿಯದ ಡಾವರವೆತ್ತಣಿನೆತ್ತ ಬಂದುದೋ       ೫೬

ಎಲ್ಲಿತ್ತೊ ಧೈರ್ಯಮುಪಶಮ
ಮೆಲ್ಲಿತ್ತೊ ಜಿತೇಂದ್ರಿಯತ್ವಗುಣಮೆಲ್ಲಿತ್ತೋ
ಎಲ್ಲಿತ್ತೊ ನಿನ್ನ ಶೌರ್ಯಮ
ದೆಲ್ಲಿತ್ತುಪಭೋಗರಾಗವಿಷಯದ್ವೇಷಂ           ೫೭

ಎಲ್ಲಿತ್ತೊ ವೇದಸಮುದಯ
ಮೆಲ್ಲಿತ್ತೊ ಬ್ರಹ್ಮಚರ್ಯವಱವೆಲ್ಲಿತ್ತೋ
ಎಲ್ಲಿತ್ತೊ ಯತಿವರತ್ವಮ
ದೆಲ್ಲಿತ್ತೋ ಯೌವನಾನುಶಾಸನಮೀಗಳ್      ೫೮

ವ|| ಎಂದು ಮಾಣದೆ

ಅತಿಶಯದಿಂ ವಿಷಯಸ
ಕ್ತತೆ ನಿನ್ನನ್ನರುಮನಿಂತು ಮಾಡಿತ್ತೆನಲಿಂ
ಮತಿ ನಿಷ್ಪಲಮಾಗಮಸಂ
ತತಿ ನಿರ್ಗುಣಮಱವು ನಿಷ್ಪ್ರಯೋಜನಮಲ್ತೇ             ೫೯

ಬಂದಿರುವ ಹೆಣ್ಣಾನೆಗೆ ಅಂಕುಶವಿಟ್ಟು ಒಲ್ಲದಿದ್ದರೂ ತಿರುಗಿಸುವಂತೆ ನನ್ನನ್ನು ಎಳೆದುಕೊಂಡು ಹೋದಳು. ವ|| ಹೀಗೆ ಅವಳು ನನ್ನನ್ನು ಬಲಾತ್ಕಾರದಿಂದ ಎಳೆದೊಯ್ಯಲಾಗಿ, ೫೫. ಮನ್ಮಥನ ಬಾಣಗಳ ಸಮೂಹದಿಂದ ಕೀಲಿಸಲ್ಪಟ್ಟಿರುವಂತೆಯೂ, ಅವನ ಮುಖದ ಸೌಂದರ್ಯವೆಂಬ ಕೆಸರಿನಲ್ಲಿ ಮುಳುಗಿರುವಂತೆಯೂ, ಕೆನ್ನೆಯ ಮೇಲೆ ಮೂಡಿರುವ ರೋಮಾಂಚವೆಂಬ ಮುಳ್ಳುಗಳ ತುದಿಗಳಲ್ಲಿ ಒಟ್ಟಿಗೆ ಚುಚ್ಚಿಕೊಂಡಿರುವಂತೆಯೂ, ಸೌಂದರ್ಯವೆಂಬ ತಂತುವಿನಿಂದ ಹೊಲಿಯಲ್ಪಟ್ಟಂತೆಯೂ ಅವನಲ್ಲಿ ನಾಟಿಕೊಂಡಿದ್ದ ನನ್ನ ದೃಷ್ಟಿಯನ್ನು ಬಹಳ ಪ್ರಯತ್ನದಿಂದ ಹಾಗೂ ತಳಮಳದಿಂದ ಎಳೆದುಕೊಂಡೆನು. ವ|| ನಾನು ಅಲ್ಲಿಂದ ಹೊರಡಲಾಗಿ ಕೂಡಲೆ ಗೆಳೆಯನು ಅವನ ಧೈರ್ಯಚ್ಯುತಿಯನ್ನು ನೋಡಿ, ೫೬, “ಮಿತ್ರ, ಪುಂಡರೀಕ! ಕೇವಲ ಪಾಮರರು ಹೋಗುವ ಈ ದಾರಿಯು ನನಗೆ ಯೋಗ್ಯವಲ್ಲ ಎಂಬುದನ್ನು ನೀನು ಮನಸ್ಸಿನಲ್ಲಿ ಸ್ವಲ್ಪವೂ ವಿಚಾರಮಾಡದೆ ಶಾಂತಿಯನ್ನು ಕಳೆದುಕೊಂಡುಬಿಟ್ಟೆ! ನಿನ್ನ ತಿಳಿವಳಿಕೆ ಎಲ್ಲಿ ಹೋಯಿತು? ಹೀಗೆ ಎದೆಗೆಟ್ಟು ಪರವಶನಾಗಬಹುದೆ? ಗೆಳೆಯ, ನಿನಗೆ ಈಗ ತಟ್ಟನೆ ಈ ಇಂದ್ರಿಯಗಳ ಕ್ಷೋಭೆಯು ಎಲ್ಲಿಂದ ಬಂತು? ೫೭. ನಿನ್ನ ಧೈರ್ಯವು ಎಲ್ಲಿ ಹೋಯಿತು? ನಿನ್ನ ಶಾಂತಿಯು ಎಲ್ಲಿ ಹೋಯಿತು? ನಿನ್ನ ಇಂದ್ರಿಯನಿಗ್ರಹವು ಎಲ್ಲಿ ಹೋಯಿತು? ನಿನ್ನ ಗಟ್ಟಿತನವು ಎಲ್ಲಿ ಹೋಯಿತು? ಸಾಂಸಾರಿಕ ಸುಖಗಳ ವಿಷಯದಲ್ಲಿದ್ದ ತಿರಸ್ಕಾರವು ಎಲ್ಲಿ ಹೋಯಿತು? ೫೮. ನಿನ್ನ ವೇದರಾಶಿ ಎಲ್ಲಿ? ನಿನ್ನ ಬ್ರಹ್ಮಚರ್ಯ ಎಲ್ಲಿ? ನಿನ್ನ ಶಾಸ್ತ್ರಜ್ಞಾನವು ಎಲ್ಲಿ? ನಿನ್ನ ಯತಿತ್ವವು ಎಲ್ಲಿ? ಹರಯದ ಮೇಲಿನ ಹತೋಟಿಯು ಈಗ ಎಲ್ಲಿ ಹೋಯಿತು?” ವ|| ಎಂದು ಬಿಡದೆ, ೫೯. ಭೋಗಲಾಲಸೆಯು ನಿನ್ನಂತಹವರನ್ನೂ ಬಹಳಮಟ್ಟಿಗೆ ಈ ರೀತಿ ಮಾಡಿಬಿಟ್ಟರೆ ಇನ್ನು ಶಾಸ್ತ್ರಗಳನ್ನು ಓದಿ ಪಡೆದ ವಿವೇಕವು ವ್ಯರ್ಥವಾಯಿತು. ವೇದಶಾಸ್ತ್ರಗಳಿಗೆ ಬೆಲೆಯೇನು ಬಂತು?

ವ|| ಅಂತುಮಲ್ಲದೆಯುಂ

ಎಂತು ಗಡ ನಿನ್ನ ಕೆಯ್ಯಿಂ
ದಂ ತೊಟ್ಟನೆ ಬಿೞ್ದ ಜಪದ ಮಣಿಯುಮನೆಲೆ ಮುಂ
ದಂತೊಯ್ಯಲಱಯೆನೆನಲಿ
ನ್ನಿಂತಿರೆ ನಿನ್ನಂತೆ ವಿಗತಚಿತ್ತರುಮೊಳರೇ     ೬೦

ವ|| ಅದಱನಿನ್ನಾದೊಡಂ ನಿನ್ನ ಮನಮಂ ನೀಂ ನಿಲಿಸಿಕೊಳ್ಳೆಂದು ನುಡಿಯೆ ಲಜ್ಜಿತನಾದಂತೆಗೆಯ್ದು

ಬೆಸೆದು ಕಪಿಂಜಲ ನೀಂ ಭಾ
ವಿಸದಿರ್ ಬೇಂದು ತೆಱನನವಳೆನ್ನಂ ವಂ
ಚಿಸಿದಪರಾಧಮನಾಂ ಸೈ
ರಿಸುವೆನೆ ನೋಡೆನುತಮೆೞ್ದ್ದು ಪುಸಿಮುಳಿಸಿಂದಂ       ೬೧

ಪಿರಿದುಂ ಪ್ರಯತ್ನದಿಂದಮೆ
ವಿರಚಿಸೆ ಕಣ್ಗೆಸೆವ ಭೀಷಣಭ್ರುಕುಟಿ ಪೊದ
ೞರೆ ಚುಂಬನಾಭಿಲಾಷ
ಸ್ಪೂರಿತಾಧರನಾ ಕುಮಾರತಾಪಸನೆನ್ನಂ     ೬೨

ಕುಡು ಚಪಳೆ ಜಪದ ಮಣಿಯಂ
ಕುಡದಿನ್ನೊಂದಡಿಯನಪ್ಪೊಡಂ ಪೋಗದಿರೆಂ
ದೊಡೆ ಕೇಳ್ದು ಜಪದ ಮಣಿಗೆ
ತ್ತೊಡನೆಯೆ ಹಾರಮನೆ ತೆಗೆದೆನೆನ್ನಯ ಕೊರಲಿಂ       ೬೩

ವ|| ಅಂತು ಮಕರಧ್ವಜಲಾಸ್ಯಾರಂಭಲೀಲಾಪುಷ್ಪಾಂಜಲಿಯೆನಿಸಿದೇಕಾವಳಿಯಂ ತೆಗೆದುಕುಡುವಿನಮಾತನುಂ ಮನ್ಮುಖಾಸಕ್ತದೃಷ್ಟಿಯಿಂ ಮೆಯ್ಯಱಯದಕ್ಷಾವಳಿಗೆತ್ತು ಕಳೆದು ಕೊಳ್ವುದುಮಾನಾಗಳಲ್ಲಿಂ ತಳರ್ದು

ಕಳವಳಿಸಿ ಬೆಮರ್ತಾಗಳ್
ಕೊಳದೊಳ್ ಮೀಯಲ್ಕತಿಪ್ರಯ್ನದಿನೊಯ್ದರ್
ಕೆಳದಿಯರೆಂತಾನುಂ ತೆಗೆ
ದಳವಿಲ್ಲದೆ ಬಂದ ನದಿಯನಿದಿರೇಱುವವೋಲ್           ೬೪

ವ|| ಅಂತೊಯ್ಯಲ್ ನಿಜಜನನಿಯೊಡನೆಂತಾನುಮರಮನೆಗೆ ಬಂದು ಮದೀಯ ಮಂದಿರಮಂ ಪೊಕ್ಕು ತದ್ವಿಯೋಗದೊಳ್ ಮೆಯ್ಯಱಯದೆ

ಪರಲೋಕಜ್ಞಾನವು ನಿರರ್ಥವಾಯಿತಲ್ಲ! ೬೦. ನಿನ್ನ ಕಯ್ಯಿಂದ ಜಪಸರವು ಹೇಗೋ ತಟ್ಟನೆ ಕೆಳಕ್ಕೆ ಬಿತ್ತು. ಅವಳು ಅದನ್ನು ಹಾಗೆ ಎದುರಿಗೆ ತೆಗೆದುಕೊಂಡು ಹೋದರೂ ನಿನಗೆ ಗೊತ್ತೇ ಆಗಲಿಲ್ಲವೆಂದ ಮೇಲೆ ನಿನ್ನಂತೆ ಪ್ರeಯೇ ಇಲ್ಲದವರುಯಾರಿದ್ದಾರೆ?

ವ|| ಅದರಿಂದ ಈಗಲಾದರೂ ನಿನ್ನ ಮನಸ್ಸನ್ನು ನೀನು ಹತೋಟಿಯಲ್ಲಿಟ್ಟುಕೊ” ಎಂದು ಹೇಳಲಾಗಿ ನಾಚಿಕೆಗೊಂಡವನಂತೆ ನಟಿಸಿ

೬೧. “ಕಪಿಂಜಲ”! ಹೀಗೆ ನೀನು ಒಂದೊಂದಕ್ಕೆ ಗಂಟುಹಾಕಿ ಬೇರೆ ಏನನ್ನೊ ತಿಳಿದುಕೊಳ್ಳಬೇಡ. ಅವಳು ನನಗೆ ಮೋಸಮಾಡಿದ ತಪ್ಪನ್ನು ನಾನು ಖಂಡಿತ ಸಹಿಸುವುದಿಲ್ಲ. ನೋಡು” ಎಂದು ಹೇಳುತ್ತ ಕೃತಕಕೋಪದಿಂದ ಎದ್ದು, ೬೨. ಬಹಳ ಪ್ರಯಾಸದಿಂದ ಅವನು ಹುಬ್ಬು ಗಂಟುಹಾಕಿಕೊಂಡನು. ಅವನ ಭಯಂಕರವಾದ ಹುಬ್ಬುಗಂಟೂ ಬಹಳ ರಮ್ಯವಾಗಿ ಕಾಣುತ್ತಿತ್ತು. ನನಗೆ ಮುತ್ತಿಕ್ಕುವ ಆಸೆಯಿಂದಲೋ ಏನೋ ಅವನ ತುಟಿ ಅದುರುತ್ತಿತ್ತು. ಆಗ ಆ ತರುಣಮುನಿಯು ನನ್ನನ್ನು ಕುರಿತು. ೬೩. “ಎಲೈ ಚಂಚಲಬುದ್ಧಿಯುಳ್ಳವಳೆ, ನನ್ನ ಜಪಸರವನ್ನು ಕೊಡದೆ ಮುಂದಕ್ಕೆ ಒಂದು ಹೆಜ್ಜೆಯನ್ನೂ ಇಡಬೇಡ!” ಎಂದು ಹೇಳಲಾಗಿ ನಾನು ಕೊರಳಿನಲ್ಲಿದ್ದ ಹಾರವನ್ನು ಜಪಸರವೆಂದು ತಿಳಿದು ಕೈಗೆ ತೆಗೆದುಕೊಂಡೆನು. ವ|| ಹೀಗೆ ಮನ್ಮಥನ ನೃತ್ಯಾರಂಭ ವಿನೋದಕ್ಕೆ ನಾಂದಿಯ ಪುಷ್ಪಾಂಜಲಿಯೆನಿಸಿದ ಮುತ್ತಿನ ಸರವನ್ನು ತೆಗೆದುಕೊಟ್ಟೆನು. ಅವನೂ ನನ್ನ ಮುಖದಲ್ಲೇ ನೆಟ್ಟ ದೃಷ್ಟಿಯಿಂದ ಶೂನ್ಯಹೃದಯನಾಗಿ ಅದನ್ನೇ ಜಪಸರವೆಂದು ತಿಳಿದುಕೊಂಡು ತೆಗೆದುಕೊಂಡನು. ನಾನು ಅಲ್ಲಿಂದ ಹೊರಟು ೬೪. ಕಳವಳಗೊಂಡು ಬೆವರಿನಿಂದಲೇ ಸ್ನಾನಮಾಡಿದಂತೆ ಆಗಿದ್ದರೂ ಕೊಳದಲ್ಲಿ ಸ್ನಾನಮಾಡಿದೆನು. ಬಳಿಕ ಸಖಿಯರು ಹರಿಯುವ ನದಿಯನ್ನು ಅಡ್ಡಲಾಗಿ ತಿರುಗಿಸುವಂತೆ ಕೈಲಾಗದಿದ್ದರೂ ಬಹಳ ಕಷ್ಟದಿಂದ ಹೇಗೋ ಬಲಾತ್ಕಾರದಿಂದ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ವ|| ಹಾಗೆ ಕರೆದುಕೊಂಡು ಹೋಗಲಾಗಿ ನನ್ನ

ಮನೆಗೇಂ ಬಂದೆನೊ ಬಾರೆನೋ ಸಖಿಯರೊಳ್ ಕೂಡಿರ್ದೆನೋ ಕೂಡದಿ
ರ್ದೆನೊ ಮೇಣ್ ನಿದ್ರೆಯೊಳಿರ್ದೆನೋ ಪಿರಿದುಮೆಚ್ಚತ್ತಿರ್ದೆನೋ ಮೌನಮಿ
ರ್ದೆನೊ ಮಾತಾಡುತ್ತಿರ್ದೆನೋ ವ್ಯಸನದೊಳ್ ಸಂದಿರ್ದೆನೋ ರಾಗಮಿ
ರ್ದೆನೊ ಪೇೞiಂ ನಗುತಿರ್ದೆನೋ ಮನದೊಳಂದಾಸತ್ತಮಿತ್ತಿರ್ದೆನೋ             ೬೫

ಇದು ದಿವಮೋ ರಾತ್ರಿಯೊ ಮೇ
ಣಿದು ದುಖಮೊ ರುಜೆಯೋ ಕಳವಳಮೊ ಪೇೞದು ಪೊ
ಲ್ಲದೊ ತಾನಿದೊಳ್ಳಿತೋ ಮೇ
ಣಿದೆಂಬುದುಂ ಬಗೆಯಲಾರ್ತನಿಲ್ಲಾಕ್ಷಣದೊಳ್           ೬೬

ಅದಾವೆಡೆಗೆ ಪೋಪುದಿನ್ನುಡಿವುದಾರೊಳಿನ್ನೞ್ಕಱಂ
ದದಾವುದನೆ ಕೇಳ್ವೆನಿಂ ಪಡೆದು ನೋೞ್ಪದಿನ್ನೇನನಿ
ನ್ನದಾರ್ಗಿದನೆ ಪೇೞ್ವೆನಿನ್ನೆನಗೆ ಬಾೞ್ಕೆ ಪೇೞiವುದೆಂ
ದದೇನುಮಱಯಲ್ಕೆ ಬಾರದೆ ಮನೋಭವೋದ್ರೇಕದಿಂ            ೬೭

ವ|| ಅನಂತರಂ ಸಖೀಜನಮುಮನಶೇಷ ಪರಿಜನಮುಮಂ ಬಾಗಿಲೊಳ್ ನಿಲಿಸಿ ಕನ್ಯಾಂತಪುರಪ್ರಾಸಾದಮನೇಱ ತದೀಯಮಣಿಗವಾಕ್ಷನಿಕ್ಷಿಪ್ತಮುಖಿಯೆನಾಗಿ

ಅದು ಪೀಯೂಷಪಯೋಪೂರಲಹರೀಸಂತಾನದಿಂ ಚೆಲ್ವುವೆ
ತ್ತುದೊ ಮಾಣಿಕ್ಯನಿಧಾನದಿಂ ಸಮೆದು ತೋಱುತ್ತಿರ್ದುದೋ ಚಂದ್ರಬಿಂ
ಬದಿನೊಪ್ಪಂಬಡೆದತ್ತೊ ಮೇಣ್ ಪಸದನಂಗೊಂಡಿರ್ದುದೋ ಪೇೞೆನಲ್
ಪದೆದಾಂ ನೋಡಿದೆನಾತನಿರ್ದ ದೆಸೆಯಂ ನಟ್ಟಾಲಿ ಬೀೞ್ಪನ್ನೆಗಂ           ೬೮

ವ|| ಅದಲ್ಲದೆಯುಂ

ಆ ದೆಸೆಯಿಂ ಬರ್ಪೆಲರುಮ
ನಾ ದೆಸೆಯಿಂದೆಸೆವ ಕುಸುಮಪರಿಮಳಮುಮನಂ
ತಾ ದೆಸೆಯಿನೆಸೆವ ವಿಹಗನಿ
ನಾದಮುಮಂ ವಾರ್ತೆಗೇೞಲಾನೊಡರಿಸಿದೆಂ            ೬೯

ವ|| ಮತ್ತಮಾತಂ ಕೈಕೊಂಡುದಱಂ ಋಷಿವೇಷಕ್ಕಗ್ರಾಮ್ಯತೆಯುಂ ಆತನಂ ಪೊರ್ದಿದ ಜವ್ವನಕ್ಕೆಸೌಂದರ್ಯಮುಂ ಆತನ ಕಿವಿಗವತಂಸಮಾದ ಪಾರಿಜಾತಕುಸುಮಮಂಜರಿಗೆ ಮನೋಹರತೆಯುಮಾತನಿರವಿಂದಮೆ ಸುರಲೋಕಕ್ಕೆ ರಮಣೀಯತೆಯುಮಾತನ

ತಾಯಿಯೊಂದಿಗೆ ಬಹಳ ಕಷ್ಟದಿಂದ ಅರಮನೆಗೆ ಬಂದು ನನ್ನ ವಾಸದ ಮಹಲನ್ನು ಸೇರಿ ಅವನ ವಿರಹದಿಂದ ದೇಹದ ಮೇಲೆ ಪ್ರeಯಿಲ್ಲದೆ, ೬೫. ಮನೆಗೆ ಬಂದೆನೊ ಬರಲಿಲ್ಲವೋ, ಗೆಳತಿಯರ ಜೊತೆಯಲ್ಲಿ ಇದ್ದೇನೋ ಅಥವಾ ಇಲ್ಲವೋ, ನಿದ್ರೆ ಮಾಡುತ್ತಿರುವೆನೋ ಸರಿಯಾಗಿ ಎಚ್ಚರವಾಗಿದ್ದೇನೊ, ಮೌನವಾಗಿದ್ದೇನೊ ಮಾತಾಡುತ್ತಿದ್ದೇನೊ, ದುಖದಲ್ಲಿದ್ದೇನೊ ಸುಖವಾಗಿದ್ದೇನೊ, ನಗುತ್ತಿರುವೆನೊ ಅಥವಾ ದುಗುಡದಿಂದ ಅಳುತ್ತಿದ್ದೇನೊ ೬೬. ಇದು ಹಗಲೋ ರಾತ್ರಿಯೊ, ಇದು ದುಖವೊ ಅಥವಾ ಮನಸ್ಸಿನ ಕಳವಳವೊ, ಇದು ಕೆಟ್ಟದ್ದೊ ಅಥವಾ ಒಳ್ಳೆಯದೊ ಎಂಬುದರ ಅರಿವೇ ಆಗ ನನಗೆ ಇರಲಿಲ್ಲ. ೬೭. ಎಲ್ಲಿಗೆ ಹೋಗಲಿ? ಇದನ್ನು ಯಾರೊಡನೆ ಆತ್ಮೀಯತೆಯಿಂದ ಮಾತಾಡಲಿ? ಯಾವುದನ್ನು ಕೇಳಲಿ? ಯಾವುದನ್ನು ಆಸೆಯಿಂದ ನೋಡಲಿ? ಇನ್ನು ಯಾರಿಗೆ ಇದನ್ನು ಹೇಳಲಿ? ಇನ್ನು ನನ್ನ ಬದುಕು ಹೇಗೆ? ಎಂಬುದನ್ನು ಮಿಗಿಲಾದ ವಿರಹವೇದನೆಯಿಂದ ತಿಳಿಯಲಾರದೆ ಹೋದೆನು. ವ|| ಬಳಿಕ ಗೆಳತಿಯರನ್ನೂ ಎಲ್ಲಾ ಊಳಿಗದವರನ್ನೂ ಬಾಗಿಲಲ್ಲೇ ನಿಲ್ಲಿಸಿ, ಕನ್ನೆವಾಡದ ಮಹಡಿಯನ್ನು ಹತ್ತಿ ಅದರ ರತ್ನಮಯವಾದ ಕಿಟಕಿಯಲ್ಲಿ ಮುಖವನ್ನು ಇಟ್ಟುಕೊಂಡು, ೬೮, ಅಮೃತಸಾಗರದ ಪ್ರವಾಹದ ಪರಂಪರೆಗಳಿಂದ ಚಲುವನ್ನು ಪಡೆದಿದೆಯೂ ಎಂಬಂತೆಯೂ, ಮಾಣಿಕ್ಯದ ನಿಯಿಂದಲೇ ನಿರ್ಮಿಸಲ್ಪಟ್ಟಿದೆಯೊ ಎಂಬಂತೆಯೂ, ಚಂದ್ರಮಂಡಲದಿಂದ ಅಂದವಾಗಿದೆಯೋ ಎಂಬಂತೆಯೂ ಅಥವಾ ಚೆನ್ನಾಗಿ ಸಿಂಗರಿಸಲ್ಪಟ್ಟಿದೆಯೊ ಎಂಬಂತೆಯೂ ಆತನ ಇದ್ದ ದಿಕ್ಕನ್ನೇ ನಟ್ಟ ದೃಷ್ಟಿಗಳು ಸೋತುಹೋಗುವವರೆಗೂ ಬಹಳ ಆಸಕ್ತಿಯಿಂದ ನೋಡುತ್ತಿದ್ದೆನು. ವ|| ಅದಲ್ಲದೆ, ೬೯. ಆ ಕಡೆಯಿಂದ ಬರುತ್ತಿರುವ ಗಾಳಿಯನ್ನೂ, ಆ ಕಡೆಯಿಂದ ಬರುವ ಹೂವಿನ ವಾಸನೆಯನ್ನೂ, ಆ ಕಡೆಯಿಂದ ಕೇಳಿಬರುವ ಹಕ್ಕಿಗಳ ಧ್ವನಿಯನ್ನು ಅವನ ಸಮಾಚಾರವನ್ನು ಕೇಳಲು ಉದ್ಯುಕ್ತಳಾಗುತ್ತಿದ್ದೆನು. ವ|| ಅವನು ಕೈಗೊಂಡಿರುವುದರಿಂದ ಋಷಿವೇಷವು ಒರಟುವೇಷವಲ್ಲವೆಂದೂ, ಅವನಲ್ಲಿ ಕೂಡಿರುವುದರಿಂದ ಹರಯವು ಬಹಳ

ರೂಪಸಂಪತ್ತಿಯಿಂ ಕುಸುಮಾಯುಧಂಗೆ ದುರ್ಜಯತ್ವಮುಮಾದುದೆಂದು ಬಗೆಯುತ್ತಮಾ ಸೌಭಾಗ್ಯನಿಯ ವಿಯೋಗದಿಂ ಜೀವವಿಯೋಗಮಾಗದಿರ್ಕೆಂದು ತಗುಳ್ಚಿದ ರಕ್ಷಾವಳಿಯಂತೆ ಕೊರಲೊಳಿಕ್ಕಿರ್ದಕ್ಷಾವಳಿಯುಂ ಆತನ ರಹಸ್ಯಾಲಾಪದಂತೆ ಕಿವಿಗೆವಂದು ರಾಜಿಸುವ ಪಾರಿಜಾತಕುಸುಮಮಂಜರಿಯುಮಾತನ ಕರತಲಸ್ಪರ್ಶಸುಖದಿಂ ಕಪೋಲತಲ ಕದಂಬಮುಕುಳಕರ್ಣಪೂರದಂತುಣ್ಮಿದ ಪುಳಕಮುಂ ಬೆರಸು ಗದ್ಗದಚಿತ್ತೆಯೆನೇಕಾಕಿಯಾಗಿರ್ಪು ದುಮನ್ನೆಗಮೆನ್ನ ತಾಂಬೂಲಕರಂಕವಾಹಿನಿ ತರಳಿಕ್ವೆ ಮಕರಿಕೆಯೆಂಬಳ್ ಪೆಱಗೆ ಕಿಱದುಬೇಗಂ ಮೀಯಲೆಂದು ನಿಂದನಂತರಂ ಮತ್ಸಮೀಪಕ್ಕೆ ಬಂದು ಮೆಲ್ಲನಿಂತೆಂದಳ್