ತೊಡಸಿದನಾವನೀ ಕುಸುಮಮಂಜರಿಯಂ ನಿನಗಾತನಕ್ಕ ತ
ನ್ನೊಡವರುತಿರ್ದ ತಾಪಸಕುಮಾರನನಾಗಳೆ ವಂಚಿಸಲ್ಕೆ ತ
ಳ್ತಿಡಿದ ಲತಾಪ್ರಸೂನದೊಳಪೊಕ್ಕುೞದೊಯ್ಯನೆ ಸಾರ್ದು ಮೆಲ್ಪೊಡಂ
ಬಡೆ ಬೆಸಗೊಂಡನೆನ್ನನನುರಾಗದಿನೆಯ್ದೆ ಭವತ್ಪ್ರಪಂಚಮಂ        ೭೦
ವ|| ಅದೆಂತೆನೆ
ಆ ಕನ್ನೆಯಾರ್ಗೆ ಪೆಸರೇ
ನೇಕಿಲ್ಲಿಗೆ ಬಂದಳಾರ ಮಗಳೆಸೆವಲರ್ದ
ಬ್ಜಾಕರದಿನೆತ್ತ ಪೋದಪ
ಳೀಕೆಯೆನೆಲ್ ಮುನಿಕುಮಾರಕಂಗಿಂತೆಂದೆಂ            ೭೧
ವ|| ಅದೆಂತೆಂದೊಡೆ ದಿನ ಅಮೃತ್ವ ಕರಮರೀಚಿಯಿಂದಾದಪ್ಸರಸಿಯೊಳುದಿಸಿದ ಗೌರಿಗಂ ಗಂಧರ್ವಲೋಕಾಪತಿಯಪ್ಪ ಹಂಸಂಗಂ ಮಗಳಾಗಿ ಮಹಾಶ್ವೇತೆಯೆಂಬ ಪೆಸರಿಂ ನೆಗೞೆವೆತ್ತಳದಲ್ಲದೆಯುಂ ಇಂದು ಜನನಿಯೊಡನೀ ಸರೋವರಮಂ ಮೀಯಲೆಂದು ಬಂದಾತ್ಮನಿವಾಸಮಪ್ಪ ಹೇಮಕೂಟಾಚಾಲಕ್ಕೆ ಪೋಗುತ್ತಿರ್ದಳೆಂಬುದುಂ ಕಿಱದುಬೇಗಮೇನಾನುಮಂ ತನ್ನೊಳೆ ಬಗೆಯುತ್ತಮಿರ್ದ ನಂತರಮೆನ್ನನಿಂತೆಂದಂ
ಸುಂದರವಾಯಿತೆಂದೂ, ಅವನು ಕಿವಿಯಲ್ಲಿ ಮುಡಿದುಕೊಂಡಿರುವುದರಿಂದ ಪಾರಿಜಾತದ ಹೂಗೊಂಚಲು ಮನೋಹರ ವಾಗಿರುವುದೆಂದೂ, ಆತನು ಇರುವುದರಿಂದಲೇ ಸ್ವರ್ಗಲೋಕವು ರಮಣೀಯವಾಗಿರುವುದೆಂದೂ, ಅವನಷ್ಟು ರೂಪಸಂಪತ್ತು ಇರುವುದರಿಂದಲೇ ಮನ್ಮಥನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲವೆಂದೂ ಆಲೋಚಿಸುತ್ತಾ ಆ ಪುಣ್ಯಾತ್ಮನ ವಿರಹದಿಂದ ಪ್ರಾಣವು ಹೋಗದಿರಲೆಂದು ಕಟ್ಟಿಕೊಂಡಿರುವ ರಕ್ಷೆಯ ಸರದಂತೆ ಕೊರಳಲ್ಲಿ ಹಾಕಿಕೊಂಡಿರುವ ಜಪಸರವನ್ನೂ, ಅವನು ಹೇಳುವ ಏಕಾಂತದ ಪಿಸುಮಾತಿನಂತೆ ಕಿವಿಯನ್ನು ಸೇರಿ ಶೋಭಿಸುತ್ತಿರುವ ಪಾರಿಜಾತ ಕುಸುಮಮಂಜರಿಯನ್ನೂ, ಹಾಗೆಯೆ ಅವನು ಕೈಯಿಂದ ಮುಟ್ಟಿದ್ದರಿಂದ ಉಂಟಾದ ಸುಖದಿಂದ ಕೆನ್ನೆಯಲ್ಲಿ ಮೂಡಿರುವ ಹಾಗೂ ಕಿವಿಯಲ್ಲಿ ಮುಡಿದುಕೊಂಡಿರುವ ಕಡಹದ ಹೂವಿನ ಮೊಗ್ಗುಗಳಂತೆ ಶೋಭಿಸುವ ರೋಮಾಂಚನದಿಂದಲೂ ಕೂಡಿಕೊಂಡವಳಾಗಿ, ಬೇಸರದಿಂದ ಕೂಡಿದ ಮನಸ್ಸುಳ್ಳವಳಾಗಿ ಒಬ್ಬಂಟಿಗಳಾಗಿಯೇ ಕುಳಿತುಕೊಂಡಿದ್ದೆನು. ಅಷ್ಟರಲ್ಲಿ ನನ್ನ ತಾಂಬೂಲಕರಂಕಧಾರಿಣಿಯಾದ ಮಕರಿಕೆ ತರಳಿಕ್ವೆ ಯೆಂಬುವಳು ಸ್ನಾನಕ್ಕಾಗಿ ನಮ್ಮ ಹಿಂದೆ ಸ್ವಲ್ಪ ಹೊತ್ತು ಕೊಳದ ಬಳಿ ಉಳಿದುಕೊಂಡಿದ್ದು ಬಳಿಕ ನನ್ನ ಹತ್ತಿರಕ್ಕೆ ಬಂದು ಮೆಲ್ಲನೆ ಹೀಗೆ ಹೇಳಿದಳು. ೭೦. “ಅಮ್ಮ! ನಿನಗೆ ಈ ಹೂಗೊಂಚಲನ್ನು ತೊಡಗಿಸಿದನಲ್ಲ, ಅವನು ತನ್ನ ಸಂಗಾತಿಯಾದ ಋಷಿಕುಮಾರನ ಕಣ್ಣಿಗೆ ಬೀಳದಂತೆ ದಟ್ಟವಾಗಿ ಬೆಳೆದುಕೊಂಡಿರುವ ಬಳ್ಳಿಗಳ ಗುಂಪಿನಲ್ಲಿ ಒಳಹೊಕ್ಕು ನುಸುಳಿಕೊಂಡು ಮೆಲ್ಲನೆ ಬಂದು ನನ್ನನ್ನು ಕುರಿತು ನಯವಾದ ಮಾತುಗಳಿಂದ ನಿನ್ನ ವಿಷಯವನ್ನೆಲ್ಲ ಬಹಳ ಅಕ್ಕರೆಯಿಂದ ಕೇಳಿದನು. ವ|| ಅದು ಹೇಗೆಂದರೆ ೭೧. “ಈ ಹುಡುಗಿಯು ಯಾರ ಕಡೆಯವಳು? ಇವಳ ಹೆಸರೇನು? ಇಲ್ಲಿಗೆ ಏಕೆ ಬಂದಳು? ಯಾರ ಮಗಳು? ಈ ಅರಳಿರುವ ಹೂವುಗಳಿಂದ ಶೋಭಿಸುವ ತಾವರೆಗೊಳದಿಂದ ಯಾವ ಕಡೆ ಹೋದಳು?” ಎಂದು ಕೇಳಿದನು. ಆಗ ನಾನು ಆ ಮುನಿಕುಮಾರನನ್ನು ಕುರಿತು ಹೀಗೆ ಹೇಳಿದೆನು. ವ|| ಅದೇನೆಂದರೆ, “ಇವಳು ಸೂರ್ಯಕಿರಣ ಚಂದ್ರಕಿರಣ್ವ ಗಳಿಂದ ಉತ್ಪನ್ನವಾದ ಅಪ್ಸರಸ್ತ್ರೀಯರ ವಂಶದಲ್ಲಿ ಹುಟ್ಟಿದ ಗೌರಿ ಮತ್ತು ಗಂಧರ್ವಲೋಕಾಪತಿಯಾದ ಹಂಸ ಎಂಬುವರ ಮಗಳು. ಇವಳ ಹೆಸರು “ಮಹಾಶ್ವೇತೆ” ಎಂದು. ಈ ದಿನ ತಾಯಿಯೊಡನೆ ಈ ಸರೋವರಕ್ಕೆ ಸ್ನಾನಕ್ಕೆ ಬಂದಿದ್ದಳು. ಈಗ ತನ್ನ ಮನೆಯಾದ ಹೇಮಕೂಟಕ್ಕೆ ಹೋಗುತ್ತಿದ್ದಾಳೆ ಎಂದು ಹೇಳಲಾಗಿ ಸ್ವಲ್ಪಹೊತು
ಎಳವಿಯೊಳಂ ಗಾಂಭೀರ್ಯಮ
ನೊಳಕೊಂಡ ಭವತ್ಸ ರೂಪಮಂ ಕಂಡೀ ಕೋ
ಮಳೆಯಂ ಪ್ರಾರ್ಥಿಸಿದೊಡೆ ನಿ
ಷಲಮಾಗದೆನುತ್ತೆ ಬಂದೆನಾನಿಂದುಮುಖೀ                   ೭೨
ವ|| ಎಂದು ನುಡಿಯಲಾನಾಗಳಾದರಂಬೆರಸು ಕೈಗಳಂ ಮುಗಿದು
ಬೆಸಸುವುದಂತದಿರ್ಕೆಮ ಭವದ್ವಿಧರಪ್ರತಿಮಪ್ರಭಾವರೀ
ಕ್ಷಿಸುವರೆ ಮುನ್ನ ಮದ್ವಿಧರನೆನ್ನವೊಲಾದಮೆ ನೋಂತಳಾವಳಿ
ನ್ನುಸಿರ್ವುದು ನನ್ನಿಯಂ ನುಡಿಯೆ ಕಾರ್ಯವನೆನ್ನವಳೀಕೆಯೆಂದು ಭಾ
ವಿಸಿ ಕೃತಕೃ – ತ್ಯೆಯಪ್ಪೆನೆನಲಾಗಳೆ ಸಂತಸವಂ ನೆಗೞದಂ             ೭೩
ವ|| ಅಂತುಮಲ್ಲದೆಯುಂ
ಕೆಲದೊಳಳುರ್ತು ಕಾರ್ಮುಗಿಲೆ ಪರ್ವಿದುದೆಂಬಿನೆಗಂ ಕಱಂಗಿ ಕ
ತ್ತಲಿಪ ತಮಾಲಪಾದಪದ ಪಲ್ಲವಮಂ ಹಿಳಿದೊಂದು ನಿರ್ಮಲೋ
ಪಲತಳದಲ್ಲಿ ತದ್ರಸದಿನಾಗಳೆ ನೋಡಿ ನಿಜೋತ್ತರೀಯ ವ
ಲ್ಕಲವಸನೈಕದೇಶಮನೆ ಸೀಳ್ದದ ಳ್ ಬರೆದಂ ತಳೋದರೀ            ೭೪
ವ|| ಅನಂತರಂ
ಏಕಾಂತದೊಳೀ ಲೇಖಮ
ನಾ ಕನ್ನೆಗೆ ಪೋಗಿ ಕುಡುವುದೆಂದಟ್ಟಿದನೆಂ
ದಾಕೆ ನುಡಿಯುತ್ತಮಂದ
ಪ್ರಾಕಟವದನಡಪದೊಳಗಣಿಂ ತೆಗೆದಾಗಳ್          ೭೫
ಅದು ಶಬ್ದಾತ್ಮಕಮಾಗಿಯುಂ ಪಿರಿದುಮಂದಂತರ್ಗತಸ್ಪರ್ಶಸೌ
ಖ್ಯದವೊಲ್ಮಾಡುತಮಾಗಳಂತೆ ಕಿವಿವೊಕ್ಕುಂ ಮೆಯ್ಯಳಂತೆಯ್ದೆ ಪೊ
ಕ್ಕುದನುದ್ಯತ್ಪುಳಕಂಗಳಿಂದಱಯಿಸುತ್ತಂ ಮನ್ಮಥಾವೇಶಮಂ
ತ್ರದವೋಲಾತನ ವಾರ್ತೆ ಮೆಯ್ಯಱಯದಿರ್ಪಂತೆನ್ನನೇಂ ಮಾಡಿತೋ          ೭೬
ತನ್ನಲೇ ಏನನ್ನೋ ಆಲೋಚಿಸುತ್ತಿದ್ದು ಬಳಿಕ ನನ್ನನ್ನು ಕುರಿತು ಹೀಗೆ ಹೇಳಿದನು. ೭೨. “ಎಲೈ ಚಂದ್ರನಂತೆ ಮುಖವುಳ್ಳವಳೆ, ಈ ಸಣ್ಣವಯಸ್ಸಿನಲ್ಲೇ ಇಷ್ಟು ಗಂಭೀರವಾಗಿರುವ ನಿನ್ನ ಆಕಾರವನ್ನು ಕಂಡು ಈ ಮೃದುಸ್ವಭಾವದವಳನ್ನು ಕೇಳಿಕೊಂಡರೆ ನನ್ನ ಕೋರಿಕೆಯು ವಿಫಲವಾಗದೆಂದು ಭರವಸೆಯಿಂದ ನಿನ್ನಲ್ಲಿಗೆ ಬಂದಿದ್ದೇನೆ.” ವ|| ಹೀಗೆ ಹೇಳಲಾಗಿ ಆಗ ನಾನು ಆದರದಿಂದ ಕೈಜೋಡಿಸಿ, ೭೩. “ಪೂಜ್ಯರೆ, ಅಪ್ಪಣೆಮಾಡುವುದಿರಲಿ, ತಮ್ಮಂತಹ ಅಸಾಧಾರಣ ಮಹಿಮೆಯುಳ್ಳ ಮಹನೀಯರು ನನ್ನಂತಹವಳನ್ನು ಕಣ್ಣೆತ್ತಿ ಕೂಡ ನೋಡುವುದೆಂದರೇನು ಸಾಮಾನ್ಯವೇ? ನನ್ನಂತೆ ಅತಿಶಯವಾದ ಪುಣ್ಯ ಮಾಡಿದವರು ಯಾರಿದ್ದಾರೆ? ನಿಜವನ್ನು ಹೇಳುವುದಾದರೆ ಇವಳು ಆತ್ಮೀಯಳೆಂದು ಭಾವಿಸಿ ನನ್ನಿಂದ ಏನಾಗಬೇಕೆಂಬುದನ್ನು ಅಪ್ಪಣೆಕೊಡಿಸಬೇಕು. ಆಗ ನಾನು ಕೃತಾರ್ಥಳಾಗುತ್ತೇನೆ.” ಎಂದು ನಾನು ಹೇಳಿದೆನು. ಆಗ ಅವನು ಬಹಳ ಸಂತೋಷಪಟ್ಟುಕೊಂಡನು. ವ|| ಅದೂ ಅಲ್ಲದೆ ೭೪. “ಎಲೈ ತೆಳುವಾದ ಹೊಟ್ಟೆಯುಳ್ಳವಳೆ, ಕಪ್ಪುವೋಡವು ಕವಿದಿರುವಂತೆ ಪಕ್ಕದಲ್ಲೇ ಹರಡಿಕೊಂಡು ಬೆಳೆದಿರುವ ಕಪ್ಪಾಗಿ ಕತ್ತಲೆಯನ್ನುಂಟುಮಾಡುವಂತಿರುವ ಹೊಂಗೆಮರದ ಚಿಗುರುಗಳನ್ನು ಆ ಮುನಿಕುಮಾರನು ತೆಗೆದುಕೊಂಡು ನಿರ್ಮಲವಾದ ಕಲ್ಲಿನ ಮೇಲೆ ಹಿಂಡಿದನು. ಅತ್ತಿತ್ತು ನೋಡಿ ತಾನು ಹೊದೆದಿದ್ದ ನಾರುಪಂಚೆಯ ಒಂದು ಕಡೆಯನ್ನು ಹರಿದು ಅದರ ಮೇಲೆ ಹೊಂಗೆಯ ರಸದಿಂದ (ತನ್ನ ಬಲಗೈ ಕಿರುಬೆರಳಿನ ಉಗುರಿಂದ) ಬರೆದನು. ವ|| ಆಮೇಲೆ ೭೫. ಯಾರಿಗೂ ಕಾಣಿಸದಂತೆ ಈ ಪತ್ರವನ್ನು ತೆಗೆದುಕೊಂಡುಹೋಗಿ ಆ ಹುಡುಗಿಗೆ ಕೊಟ್ಟುಬಿಡು ಎಂದು ಹೇಳಿಕಳುಹಿಸಿದ್ದಾನೆ. ಎಂದು ಅವಳು ಆ ರಹಸ್ಯಪತ್ರವನ್ನು ತನ್ನ ಸಂಚಿಯಿಂದ ತೆಗೆದುಕೊಟ್ಟಳು. ೭೬. ಅವಳು ಹೇಳಿದ ಪುಂಡರೀಕನ ವೃತ್ತಾಂತವು ಕೇವಲ ಶಬ್ದಮಯವಾಗಿದ್ದರೂ ಆಲಿಂಗನದಿಂದ ಉಂಟಾಗುವ ಸ್ಪರ್ಶಸುಖವನ್ನು ಕೊಡುವಂತೆ ಇತ್ತು. ಕಿವಿಯನ್ನು ಮಾತ್ರ ಪ್ರವೇಶ ಮಾಡಿದ್ದರೂ ಶರೀರದಲ್ಲೆಲ್ಲಾ ಒಳಹೊಕ್ಕು ವ್ಯಾಪಿಸಿಕೊಂಡಿರುವುದನ್ನು ಹೊರಹೊಮ್ಮುತ್ತಿರುವ ರೋಮಾಂಚನಗಳಿಂದ ತಿಳಿಯಪಡಿಸುವಂತಿತ್ತು. ಮನ್ಮಥನನ್ನು ಮೈಮೇಲೆ ಬರಿಸುವಂತೆ ಮಾಡುವ (ಕಾಮಾವೇಶ) ಮಂತ್ರದಂತೆ
ವ|| ಅನಂತರಮಾ ಲೇಖನಮಂ ಕಳೆದುಕೊಂಡು ನಿಮಿರ್ಚಿ ನೋೞ್ಪನ್ನೆಗಮಲ್ಲಿ
ದೂರಂ ಮುಕ್ತಾಲತಯಾ| ಬಿಸಸಿತಯಾ ವಿಪ್ರಲಭ್ಯಮಾನೋ ಮೇ
ಹಂಸ ಇವ ದರ್ಶಿತಾಶೋ| ಮಾನಸಜನ್ಮಾತ್ವಯಾನೀತ ೭೭
ಎನಗಾಸೆದೋಱ ಬಿಸಸಿತ
ಮನಿಸುವ ನಿಜಹಾರಲತೆಯಿಂದಂ ಹಂ
ಸನವೊಲ್ಮಾನಸಸಂಭವ
ಮೆನಿಪ ಮದೀಯಾಭಿಮಾನಮಂ ಕಟ್ಟೊಯ್ದೌ               ೭೮
ವ|| ಎಂಬೀ ಆರ್ಯೆಯಂ ಭಾವಿಸಿ ನೋಡೆ
ಮೊದಲೊಳ್ ಸೊಕ್ಕಿದವಂಗೆ ಕಳ್ ವಿಷದಿನಳ್ಕಿರ್ದಂಗೆ ದುರ್ನಿದ್ರೆ ಕಾ
ಣದವಂಗುರ್ವಿದ ಮರ್ವು ದಿಗ್ಭ ಮೆ ಪದಂಗೆಟ್ಟಂಗೆ ಪೈಶಾಚಕಂ
ಗೆ ದುರಾವೇಶಮಧಾರ್ಮಿಕಂಗೆ ಕುಮತಂ ತತ್ವಪ್ರಮೂಢಂಗೆ ಬೀ
ಸಿದ ಕಣ್ಮಾಯದ ಕುಂಚದಂತಿರೆನಗಾದತ್ತಾಗಳೇನೆಂಬುದೋ                   ೭೯
ವ|| ತದನಂತರಂ
ಅಮರ್ದಂ ಪೀರ್ದಳೊ ಮೇಣ್ವರೆಂಬಡೆದಳೋ ಪುಣ್ಯೋದಯಂ ತನ್ನೊಳೇಂ
ಸಮಸಂದಿರ್ದುದೊ ನಾಕಲೋಕಸುಖಮಂ ಕೈಕೊಂಡಳೋ ದೈವವೀ
ರಮಣೀರತ್ನದ ಮೇಲೆ ಮೇಣ್ ನೆಲಸಿತೋ ತ್ರೈಲೋಕ್ಯರಾಜ್ಯಾಭಿಷೇ
ಕಮೆ ಕೈಸಾರ್ದುದಿವಳ್ಗೆನುತ್ತೆ ಪದಪಿಂದಾನಾಕೆಯಂ ನೋಡಿದೆಂ               ೮೦
ವ|| ಅಂತು ನೋಡಿ ಪಿರಿದುಮೞ್ಕಱಂ ಕೆಲಕ್ಕೆ ಕರೆದು ಕುಳ್ಳಿರಿಸಿ
ಪರೆದಿರ್ದ ಕುರುಳ್ಗಳನೋ
ಸರಿಸಿ ಕದಂಪುಗಳನೊಯ್ಯನೆಳೆವುತ್ತಂದಾ
ಳರಸೆಂಬ ಭೇದಮೆಮ್ಮಿ
ರ್ಬರೊಳಂ ಪಲ್ಲಟಿಸಿತೆಂಬಿನಂ ಮನ್ನಿಸಿದೆಂ               ೮೧
ಶರೀರದ ಮೇಲೆ ಪ್ರeಯೇ ಇಲ್ಲದಂತೆ ನನ್ನನ್ನು ಮಾಡಿಬಿಟ್ಟಿತು. ವ|| ಬಳಿಕ ಆ ಪತ್ರವನ್ನು ತೆಗೆದುಕೊಂಡು ಬಿಚ್ಚಿ ನೋಡಲಾಗಿ
೭೭. ಮಾನಸಸರೋವರದಲ್ಲಿ ಹುಟ್ಟಿದ ಹಂಸಪಕ್ಷಿಯು ಮುತ್ತಿನಹಾರದಂತೆ ಶುಭ್ರವಾದ ತಾವರೆದಂಟಿನ ಮೂಲಕ ಅತ್ಯಾಶೆಗೊಳಿಸಲ್ಪಟ್ಟು ಯಾವುದೋ ದಿಕ್ಕನ್ನು ತೋರಿಸಿ ಬಹುದೂರ ಕರೆದೊಯ್ಯಲ್ಪಡುವಂತೆ, ನೀನು ತಾವರೆದಂಟಿನಂತೆ ಶುಭ್ರವಾದ ಮುತ್ತಿನ ಸರದ ಮೂಲಕ ನನಗೆ ಬಹಳ ಆಸೆಯನ್ನುಂಟುಮಾಡಿ ನಿನ್ನ ಮೇಲಿರುವ ಅಭಿಲಾಷೆಯನ್ನು ಬಹಳ ದೂರ ಎಳೆದೊಯ್ದುಬಿಟ್ಟಿದ್ದೀಯೆ
೭೮. ಮಾನಸಸರೋವರದಲ್ಲಿ ಹುಟ್ಟಿರುವ ಹಂಸಪಕ್ಷಿಗೆ ತಾವರೆದಂಟಿನ ಆಸೆಯನ್ನು ತೋರಿಸಿ ಅದನ್ನು ಬಹಳ ದೂರ ಒಯ್ಯುವಂತೆ, ನೀನು ತಾವರೆದಂಟಿನಂತೆ ಶುಭ್ರವಾದ ನಿನ್ನ ಮುತ್ತಿನ ಸರದಿಂದ ನನಗೆ ಆಸೆಯನ್ನು ಹುಟ್ಟಿಸಿ, ನನ್ನ ಮನಸ್ಸಿನಲ್ಲಿರುವ ನಿನ್ನ ಮೇಲಿನ ಪ್ರೀತಿಯನ್ನು ಬಹಳ ಮಟ್ಟಿಗೆ ಸೆಳೆದಿದ್ದೀಯೆ. ವ|| ಎಂಬ ಈ ಆರ್ಯಾವೃತ್ತದ ಪದ್ಯವನ್ನು ಪರಿಶೀಲಿಸಲಾಗಿ, ೭೯. ಆಗ ಮೊದಲೇ ಸೊಕ್ಕಿದವನಿಗೆ ಮದ್ಯಪಾನ ಮಾಡಿದಂತೆಯೂ, ವಿಷದಿಂದ ಶಕ್ತಿಗುಂದಿದವನಿಗೆ ಕೆಟ್ಟನಿದ್ರೆಯು ಉಂಟಾದಂತೆಯೂ, ಕಾಣದವನಿಗೆ ಕತ್ತಲು ವ್ಯಾಪಿಸಿದಂತೆಯೂ, ದಾರಿ ತಪ್ಪಿದವನಿಗೆ ದಿಗ್ಭ ಮೆಯುಂಟಾದಂತೆಯೂ, ದೆವ್ವ ಹಿಡಿದವನಿಗೆ ಮತ್ತೊಂದು ಕೆಟ್ಟತೂಳ ಬಂದಂತೆಯೂ, ಧಾರ್ಮಿಕನಲ್ಲದವನಿಗೆ ಚಾರ್ವಾಕಮತವನ್ನು ಉಪದೇಶಿಸಿದಂತೆಯೂ, ಸ್ವಭಾವದಿಂದಲೆ ಭ್ರಾಂತನಾದವನಿಗೆ ಮಾಯಗಾರನ ನವಿಲುಗರಿಯ ಕುಂಚವನ್ನು ಬೀಸಿದಂತೆಯೂ ಆಯಿತು. ಏನು ಹೇಳಲಿ! (ಟಿ. ಮೊದಲೇ ಇದ್ದ ವಿರಹವ್ಯಥೆಯು ಪತ್ರವಾಚನದಿಂದ ಮತ್ತೂ ಹೆಚ್ಚಾಯಿತು). ವ|| ಆಮೇಲೆ ೮೦. ಎರಡನೆಯ ಸಲ ಅವನನ್ನು ನೋಡಿ ಬಂದುದರಿಂದ ಆ ಗೆಳತಿಯು ಅಮೃತಪಾನ ಮಾಡಿದ್ದಾಳೋ, ಅಥವಾ ವರವನ್ನು ಪಡೆದುಕೊಂಡು ಬಂದಿದ್ದಾಳೊ, ಪೂರ್ವಜನ್ಮದಲ್ಲಿ ಮಾಡಿದ ಪುಣ್ಯವು ಈಗ ಫಲವನ್ನು ಕೊಡಲು ಪ್ರಾರಂಭಿಸಿದೆಯೊ, ಸ್ವರ್ಗಲೋಕಸುಖವನ್ನೇ ಅನುಭವಿಸುತ್ತಿರುವಳೋ, ಯಾವುದಾದರೂ ದೇವತೆಯು ಇವಳಲ್ಲಿ ನೆಲೆಸಿದೆಯೊ, ಮೂರು ಲೋಕದ ಮಹಾರಾಣಿಯೆಂದು ಇವಳಿಗೆ ಪಟ್ಟಾಭಿಷೇಕವೇ ಆಗಿಬಿಟ್ಟಿದೆಯೋ ಎಂದು ಯೋಚಿಸುತ್ತಾ ಅವಳನ್ನು ಬಹಳ ಕುತೂಹಲದಿಂದ ನೋಡಿದೆನು. ವ|| ಹಾಗೆ ನೋಡಿ ಬಹಳ ಅಕ್ಕರೆಯಿಂದ ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡು ೮೧. ಚೆದುರಿದ್ದ ಅವಳ ಕೂದಲುಗಳನ್ನು ಸರಿಪಡಿಸುತ್ತಾ, ಅವಳ ಕೆನ್ನೆಗಳನ್ನು ಮೆಲ್ಲನೆ ಸವರುತ್ತಾ ನಮ್ಮಿಬ್ಬರಲ್ಲಿ ನಾನು ಒಡತಿ
ವ|| ಅಂತಾದರಿಸುತಮಿರ್ದು
ಎಂತೆಂತು ಕಂಡೆ ಕಣ್ಬರಿ
ವೆಂತೆಂತೇನೆಂದು ನುಡಿದನಾತನ ಕೆಲದೊಳ್
ನೀಂ ತಡೆದ ಬೇಗವೆನಿತೆನಿ
ತಂತರಮಂ ಬರುತಲಿರ್ದನೆಮ್ಮಯ ಬೞಯಂ           ೮೨
ವ|| ಎಂದು
ಒಡನೆಯವರೆಲ್ಲರುಮನುೞ
ದಡಪದವಳುಮಾನುಮೊಂದು ಮಾಡದ ಮೇಲಿ
ರ್ದಡಿಗಡಿಗೆ ಮಗುೞ್ದ್ದು ಮಗುೞi
ನುಡಿಯನೆ ಕೇಳುತ್ತೆ ಕಳೆದನಂತಾ ಪಗಲಂ          ೮೩
ವ|| ಅನ್ನೆಗಂ
ಮದನಾತುರೆಯಪ್ಪೆನ್ನೀ
ಹೃದಯದ ರಾಗವನೆ ಪರ್ಚುಗೊಂಡಂತಿರೆ ಕೆಂ
ಪೊದವಿದ ಪಡುವಣ ದೆಸೆಗೆ
ಯ್ದಿದನರುಣರುಚಿಪ್ರಕಾಶನಪ್ಪ ದಿನೇಶಂ          ೮೪
ಕೆಂದಾವರೆಗಳ್ ಮಧುಕರ
ವೃಂದಮನೊಳಕೊಂಡು ಮುಗಿಯೆ ರವಿವಿರಹದ ನೋ
ವಿಂದರವಿಂದಿನಿ ಮೂರ್ಛೆಗೆ
ಸಂದೆರ್ದೆ ಕತ್ತಲಿಸಿದಂದಮಂ ಪ್ರಕಟಿಸುಗುಂ            ೮೫
ಇಂದುಕಳಾಮರೀಚೆರುಚಿರೋಜ್ವಲಬಾಲಮೃಣಾಳಮಂ ಮರ
ಳ್ದೊಂದನೆ ಕರ್ಚಿ ತದ್ವಿವರದಿಂದೆರಡುಂ ಬರೆ ಪೀರ್ವವೊಲ್ ನೆಗ
ೞ್ದೊಂದಱ ಚಿತ್ತಮಂ ತೆಗೆದುಕೊಂಡು ವಿಯೋಗದಿನಾದದೊಂದು ಕಿ
ಚ್ಚಂದಳುರಲ್ಕಗಲ್ದುವು ರಥಾಂಗಯುಗಂಗಳನಂಗತಾಪದಿಂ        ೮೬
ವ|| ಆಗಳೆನ್ನ ಕೊಡೆವಿಡಿದವಳ್ ಬಾಗಿಲಿಂ ಪರಿತಂದು
ಅವಳ ಸೇವಕಿ ಎಂಬ ಭೇದವು ಈಗ ಬದಲಾವಣೆಯಾದಂತೆ ಬಹಳವಾಗಿ ಅವಳನ್ನು ಗೌರವಿಸಿದೆನು. ವ|| ಹೀಗೆ ಆದರಿಸುತ್ತಿದ್ದು
೮೨. “ತರಳಿಕೆ, ನೀನು ಅವನನ್ನು ಹೇಗೆ ಹೇಗೆ ನೋಡಿದೆ? ಅವನು ನಮ್ಮ ಕಡೆಗೆ ಎಷ್ಟರಮಟ್ಟಿಗೆ ದೃಷ್ಟಿಯನ್ನು ಬೀರುತ್ತಿದ್ದನು? ಅವನು ಏನೆಂದು ಹೇಳಿದನು? ನೀನು ಅವನ ಹತ್ತಿರ ಎಷ್ಟು ಹೊತ್ತು ಇದ್ದೆ? ಅವನು ನಮ್ಮನ್ನು ಎಷ್ಟು ದೂರ ಹಿಂಬಾಲಿಸಿ ಬರುತ್ತಿದ್ದನು?” ವ|| ಎಂದು ೮೩. ಹೀಗೆಪರಿವಾರದವರನ್ನೆಲ್ಲ ಬಿಟ್ಟು ಆ ಸಂಚಿನವಳೂ ನಾನೂ ಇಬ್ಬರೇ ಮಹಡಿಯ ಮೇಲೆ ಕುಳಿತಿದ್ದೆವು. ನಾನು ಮತ್ತೆ ಮತ್ತೆ ಬಾರಿಬಾರಿಗೂ ಆ ವಿಚಾರವನ್ನೇ ಕೇಳುತ್ತಿದ್ದೆನು. ಹೀಗೆ ಹಗಲು ಕಳೆಯಿತು. ವ|| ಅಷ್ಟರಲ್ಲಿ ೮೪. ಕಾಮಪೀಡಿತಳಾದ ನನ್ನ ಮನಸ್ಸಿನಲ್ಲಿದ್ದ ರಾಗವನ್ನೂ (ಪ್ರೀತಿ, ಕೆಂಪು) ತಾನೂ ಹಂಚಿಕೊಂಡಂತೆ ಕೆಂಬಣ್ಣವನ್ನು ಪಡೆದಿರುವ ಕೆಂಪನ್ನು ಕೆಂಪುಕಾಂತಿಯಿಂದ ಪ್ರಕಾಶಿಸುವ ಸೂರ್ಯನು ಸೇರಿದನು ೮೫. ಆಗ ಕೆಂದಾವರೆಗಳು ತಮ್ಮನ್ನು ಮುತ್ತಿಕೊಂಡಿದ್ದ ದುಂಬಿಗಳು ಒಳಗೆ ಸೇರಿಹೋಗುವಂತೆ ಮುಚ್ಚಿಕೊಂಡವು. ಇದು ತಾವರೆ ಬಳ್ಳಿಯೆಂಬ ಕಾಮಿನಿಯು ತನ್ನ ಪ್ರಿಯಕರನಾದ ಸೂರ್ಯನ ವಿರಹದಿಂದಾದ ನೋವಿನಿಂದ ಮೂರ್ಛೆಗೊಂಡಿರಲು ಅವಳ ಅಂತರಂಗವನ್ನು ಆವರಿಸಿರುವ ಅಂಧಕಾರದಂತೆ ಕಾಣುತ್ತಿತ್ತು. ೮೬. ಚಕ್ರವಾಕದಂಪತಿಗಳು ಚಂದ್ರಕಳೆಯ ಕಾಂತಿಯಂತೆ ಸುಂದರವಾಗಿಯೂ ಪ್ರಕಾಶಮಾನವಾಗಿಯೂ ಇರುವ ಎಳೆಯ ತಾವರೆಯ ದಂಟೊಂದನ್ನು ಒಂದು ತುದಿಯನ್ನು ಗಂಡು ಮತ್ತೊಂದು ತುದಿಯನ್ನು ಹೆಣ್ಣು ಹೀಗೆ ಕಚ್ಚಿಕೊಂಡು ಮತ್ತೆ ಮತ್ತೆ ಮೆಲ್ಲುತ್ತಿದ್ದುವು. ಆಗ ಅದರ ಒಳಗಿನ ಟೊಳ್ಳಿನಿಂದ ಗಂಡಿನ ಮನಸ್ಸನ್ನು ಹೆಣ್ಣೂ ಹೆಣ್ಣಿನ ಮನಸ್ಸನ್ನು ಗಂಡೂ ಹೀರಿಬಿಟ್ಟಿದೆಯೋ ಎಂಬಂತೆ ವಿರಹದಿಂದಾದ ಸಂತಾಪವು ಆವರಿಸುತ್ತಿರಲು, ಆ ರಾತ್ರಿಯ ಕಾಲದಲ್ಲಿ
ಅವು ಮನ್ಮಥತಾಪದಿಂದ ಕೂಡಿ ಪರಸ್ಪರ ಅಗಲಿದವು. ವ|| ಆಗ ಛತ್ರಿ ಹಿಡಿಯುವ ಊಳಿಗದವಳು ಬಾಗಿಲಿನಿಂದ ಒಳಕ್ಕೆ ಬಂದು
ಕೊಳನ ತಡಿಯಲಿ ಕಂಡಾ
ಗಳಿರ್ಬರೊಳೊರ್ಬ ಮುನಿಕುಮಾರಂ ಭೂಭೃ
ನ್ನಿಳಯದ ಬಾಗಿಲೊಳಕ್ಷಾ
ವಳಿಯಂ ಬೇಡಲ್ಕೆ ಬಂದು ನಿಂದಿರ್ದಪ್ಪಂ      ೮೭
ವ|| ಎಂದವಳ್ ಬಂದು ಪೇೞ್ವುದುಂ
ನಿನಗೇವೇೞ್ದಪೆನಾಂ ಭೋಂ
ಕೆನಲಾ ತಾಪಸಕುಮಾರವೆಸರ್ಗೊಳ್ವುದುಮಾ
ತನೆಗೆತ್ತು ಬಾಗಿಲೊಳ್ ತೊ
ಟ್ಟನೆ ಬಂದಿರ್ದಂತಿರಾದೆನಿರ್ದಂತಿರ್ದುಂ         ೮೮
ವ|| ಆಗಳೊರ್ವ ಕಂಚುಕಿಯಂ ಕರೆದು ಬೇಗಮೊಡಗೊಂಡು ಬಾಯೆಂದು ಪೇೞಲೊಡನೆ
ಎಳವಿಸಿಲೊಲವಿಂ ಬೆಳ್ದಿಂ
ಗಳ ಬೞಯಂ ಬರುತಮಿರ್ದುದೆಂಬಂತೆ ಕಪಿಂ
ಜಳನಾಗಳಾ ಜರಾನಿ
ರ್ಮಳನೆನಿಸಿದ ಸೌವಿದಲ್ಲನೊಡವರುತಿರ್ದಂ      ೮೯
ವ|| ಅಂತು ರೂಪಿಂಗೆ ಯವ್ವನಮುಂ ಯವ್ವನಕ್ಕೆ ಕಾಮನುಂ ಕಾಮಂಗೆ ವಸಂತ ಸಮಯಮುಂ ವಸಂತಸಮಯಕ್ಕೆ ತಂಬೆಲರುಮೆಂಬಂತೆ ಪುಂಡರೀಕಂಗೆ ಸಹಾಯನಪ್ಪ ಮುನಿಕುಮಾರನಂ ಕಂಡೆನನ್ನೆಗಂ ಮುನಿಪಂ ವ್ಯಾಕುಲನಂತೆ ಶೂನ್ಯದಂತೆ ದುಖಿತನಾಗಿರ್ದಂತೇನಾನುಂ ಪ್ರಾರ್ಥಿಪನಂತೆ ಬರುತಿರ್ದನಿರ್ಪುದುಂ ತಕ್ಷಣದೊಳ್
ಇದಿರೆೞ್ದು ಪೊಡವಡುತ್ತೇ
ಱದ ಕನಕಾಸನಮನಿತ್ತು ಬೇಡೆನೆಯೆನೆ ತ
ತ್ಪದಯುಗಮಂ ಕರ್ಚಿ ಪದಾ
ಬ್ಜದಿರ್ಪನಾಂ ತೊಡೆದೆನುತ್ತರೀಯಾಂಶುಕದಿಂ           ೯೦
ನುಡಿಯಲ್ ಮುನಿಪಂ ಬಗೆದೆ
ನ್ನಡಪದವಳ್ ಕೆಲದೊಳಿರ್ದೊಡಾಕೆಯ ದೆಸೆಯಂ
ಕಡೆಗಣ್ಣಿಂ ನೋೞ್ಪುದುಮಾ
ಗಡೆ ಲಜ್ಜಿಸಿದಪ್ಪನೆಂದು ನೋಟದಿನಱದೆಂ        ೯೧
೮೭. “ಅಮ್ಮ ಬೆಳಗ್ಗೆ ಸ್ನಾನಕ್ಕೆ ಹೋದಾಗ ಸರೋವರದ ದಡದಲ್ಲಿ ಇಬ್ಬರು ಋಷಿಕುಮಾರರನ್ನು ಕಂಡೆವಲ್ಲ. ಅವರಲ್ಲಿ ಒಬ್ಬನು ಜಪಸರವನ್ನು ಕೇಳಿ ತೆಗೆದುಕೊಂಡು ಹೋಗಲು ಬಂದು ಅರಮನೆಯ ಬಾಗಿಲಲ್ಲಿ ನಿಂತಿದ್ದಾನೆ.” ವ|| ಎಂದು ಅವಳು ಹೇಳಲಾಗಿ ೮೮. ರಾಜಕುಮಾರ, ಏನು ಹೇಳಲಿ! ತಟ್ಟನೆ ಋಷಿಕುಮಾರನೆಂಬ ಹೆಸರನ್ನು ಕೇಳಿದ ಕೂಡಲೆ ಆ ಪುಂಡರೀಕನೆ ಬಂದಿರಬಹುದೆಂದು ತಿಳಿದುಕೊಂಡು ಕೂಡಲೆ ಕುಳಿತಲ್ಲೆ ಕುಳಿತಿದ್ದರೂ ಬಾಗಿಲಿಗೆ ಓಡಿಹೋಗಿ ನಿಂತುಕೊಂಡವಳಂತೆ ಆಗಿಬಿಟ್ಟೆನು. ವ|| ಆಗ ಒಬ್ಬ ಕಂಚುಕಿಯನ್ನು ಕರೆದು ಬೇಗನೆ ಕರೆದುಕೊಂಡು ಬಾ ಎಂದು ಹೇಳಿದ ಕೂಡಲೆ, ೮೯. ಎಳಬಿಸಿಲು ಪ್ರೀತಿಯಿಂದ ಬೆಳದಿಂಗಳನ್ನು ಹಿಂಬಾಲಿಸಿ ಬರುತ್ತಿದೆಯೋ ಎಂಬಂತೆ ಕಪಿಂಜಲನು ಮುದಿತನದಿಂದ ಬೆಳ್ಳಗಾಗಿದ್ದ ಆ ಕಂಚುಕಿಯ ಜೊತೆಯಲ್ಲಿ ಬರುತ್ತಿದ್ದನು. ವ|| ಹಾಗೆ ಸೌಂದರ್ಯಕ್ಕೆ ಹರೆಯವೂ, ಹರೆಯಕ್ಕೆ ಮನ್ಮಥನೂ, ಮನ್ಮಥನಿಗೆ ವಸಂತ ಋತುವೂ, ವಸಂತಋತವಿಗೆ ಮಂದಮಾರುತನೂ ಜೊತೆಯಾಗಿರುವಂತೆ ಪುಂಡರೀಕನ ಸಹಾಯಕನಾದ ಆ ಮುನಿಕುಮಾರಕನನ್ನು ಕಂಡೆನು. ಆಗ ಅವನು ಕಳವಳಗೊಂಡವನಂತೆಯೂ ಏನೂ ತೋಚದವನಂತೆಯೂ ದುಖಗೊಂಡವನಂತೆಯೂ ಏನನ್ನೋ ಬೇಡುವವನಂತೆಯೂ ಬರುತ್ತಿದ್ದುದನ್ನು ಕಂಡೆನು. ಕೂಡಲೆ ೯೦. ಇದಿರೆದ್ದು ನಮಸ್ಕರಿಸಿ ನಾನು ಕುಳಿತಿದ್ದ ಚಿನ್ನದ ಪೀಠವನ್ನು ಕೊಟ್ಟು ಕುಳ್ಳಿರಿಸಿ, ಬೇಡ ಬೇಡವೆಂದು ಹೇಳುತ್ತಿದ್ದರೂ ಬಿಡದೆ ಅವನ ಕಾಲುಗಳನ್ನು ತೊಳೆದು ನನ್ನ ಹೊದೆಯುವ ವಸ್ತ್ರದಿಂದ ಒದ್ದೆಯಾದ ಅವನ ಕಾಲನ್ನು ಒರೆಸಿದನು ೯೧. ಬಳಿಕ ತಪಸ್ವಿಯು ನನ್ನೊಡನೆ ಮಾತನಾಡಲು ಇಚ್ಛಿಸಿ ಸಂಚಿಯವಳು ಪಕ್ಕದಲ್ಲಿರಲು ಆಕೆಯಿರುವ ಕಡೆಯನ್ನ ತನ್ನ ಕಡೆಗಣ್ಣಿನಿಂದ ನೋಡಿದನು. ಆಗ ನಾನು ಅವಳು ಇರುವುದರಿಂದ ಮಾತನಾಡಲು ಸಂಕೋಚಪಡುತ್ತಿರುವನೆಂದು ಅವನ ನೋಟದಿಂದಲೇ ಅರ್ಥಮಾಡಿಕೊಂಡೆನು.
ವ|| ಆಗಳಱದಿವಳೆನ್ನ ಶರೀರದಿಂ ಬೇಱಲ್ಲಳ್ ಮುನಿಶಂಕರಾ ನೀಂ ಬೆಸಸಿಮೆಂಬುದುಂ