ಮೊದಲು ಬುಡಸಹಿತ ಎಲ್ಲವನು ಕಿತ್ತೆಸೆದ,
ಬಿತ್ತು ಕಾಲಡಿಯಲ್ಲಿ ತರಗೆಲೆಯ ಮೊತ್ತ ;
ಸುತ್ತ ಬೆಳೆಯಿತು ಮೌನಗಳ ಹುತ್ತ.
ಕೊಂಬೆ ರೆಂಬೆಯ ರಸವ ಸೆಳೆದು ಬತ್ತಿಸಿದ
ತೊಟ್ಟು ಕಳಚಿತು ಎಲ್ಲ ಹಿಡಿತಗಳಿಗೆ ;
ಮೂಕವಾಯಿತು ಹೃದಯ ತುಡಿತಗಳಿಗೆ.
ತಲೆಯ ಮೇಲಿನ ಬಾನು ತಿಳಿಯಾಯ್ತ ;
ನಿರ್ಭಾವ ನಿಸ್ತರಂಗ ನೀಲಿಯ ಸಾಗರ.
ಇರುಳ ನಭ ರತ್ನಗಳ ಹೆಡೆತೆರೆದ ನಾಗರ !
ಸಂಜೆ ಮುಂಜಾನೆಯಲಿ ಮುತ್ತು ಚೆಲ್ಲುವ ಬೆಳಕು,
ಸುತ್ತಲೂ ರಜತಮಯ ಹೇಮಧೂಪ ;
ನಗ್ನ ನೀರವ ಶ್ರವಣ ಧ್ಯಾನರೂಪ !
Leave A Comment