ಮಾತಾಡು ಮಾತಾಡು ಲಿಂಗವೇ | ಮಾತಾಡು ಕಾಶಿಯ ಲಿಂಗವೇ
ಮಾತಾಡದಿದ್ದರೆ ನಾ ತಾಳಲಾರೆನು ಲಿಂಗವೆ
ಗೋಕರ್ಣದಿಂದ ಯಾತ್ರೆಗೆ ನಾ ಬಂದೆ
ಮಾತಾಡು ಕಾಶಿಲಿಂಗವೇ || ಪ ||

ಮನವು ಮಜ್ಜನವೆಂಬೊ ಬಾವಿಗೆ ಮತ್ತೆ
ತನುವೆಂಬೊ ಕೈಲಾಸ ಲಿಂಗವೇ | ವನದೊಳಗಿರುವೊ
ಗೊನೆ ಹೊಂಬಾಳೆಯು ನಿನಗೆ ತಂದರ್ಪಿಸುವೆ ಲಿಂಗವೇ || ೧ ||

ಅಂಗೈಯೊಳಾರತಿ ಲಿಂಗವೆ | ಮತ್ತೆ ಮುಂಗೈಯೊಳ್
ಶಿವಗಂಟೆ ಲಿಂಗವೆ | ಕಣ್ಣುಗಳೆರಡು ಕಂಭೂಂ ಪುಷ್ಪವು
ನಿನಗೆ ತಂದರ್ಪಿಸುವೆ ಲಿಂಗವೇ || ೨ ||

ಯಾರಿಗೆ ಯಾರಿಲ್ಲ ಲಿಂಗವೆ | ಮತ್ತೆ ಹಿಡಿಯಾಕೆ
ಕೊಂಬಲ್ಲ ಲಿಂಗವೆ ನಡು ಸಮುದ್ರದೊಳ್
ಮುಳುಗಿ ತೇಲಿಸಿದಂತೆ ಸೇರಿದನಯ್ಯ ಲಿಂಗವೇ || ೩ ||

ಅಣ್ಣಯ್ಯಗಾರಿಲ್ಲ ಲಿಂಗವೇ | ಮತ್ತೆ ತಮ್ಮಯ್ಯಗಾರಿಲ್ಲ ಲಿಂಗವೇ
ಹೊಟ್ಟೆಲಿ ಹುಟ್ಟಿದ ಮಕ್ಕಳಿಲ್ಲದ ಮೇಲೆ ಮೊಮ್ಮಕ್ಕಳಾರಯ್ಯ ಲಿಂಗವೇ || ೪ ||

ಹೊತ್ತು ಮುಳಗೀತಯ್ಯ ಲಿಂಗವೇ | ಮತ್ತೆವ್ಯಾಳ್ಳೆ
ವಾಯಿತಯ್ಯ ಲಿಂಗವೇ | ಹತ್ತೆಂಟು ಶರಣರು
ಶಿವಪೂಜೆ ಮಾಡುವರು ತೊತ್ತಾನಿರಸಯ್ಯ ಲಿಂಗವೇ || ೫ ||

ಹಾಸಿಗೆ ಹಾಸಿದ್ದೆ ಲಿಂಗವೇ | ಪರಂಜ್ಯೋತಿಯನಚ್ಚಿದ್ದೆ
ಲಿಂಗವೇ ಹಾಸಿಗ್ಗೆ ತಕ್ಕ ಪುರುಷನಿಲ್ಲದ ಮೇಲೆ
ಪರದೇಶಿನಾನಾದೆ ಲಿಂಗವೇ || ಪ ||