ಮಾತು ಮಾತಿಗೆ ಶಂಕರ ಶ್ರೀಗುರುವೆ
ಸರೋತ್ತ ಸಬಾರದೇ | ಜ್ಯೋತಿ ಸಂಘದಿ
ಉರಿದು ಹೋಗುವ ಕರ್ಪೂರದಂತೆ
ಪಾತಕರಾಶಿ ನಿಂತುರಿದು ಹೋಗುವುದು ||

ಸ್ನಾನ ಮಾಡುವಾಗ ನೇಮದಿ ಆತ್ಮಜ್ಞಾನವ
ಮಾಡುವಾಗ ಜಾಣತನದಿ ಅನ್ನ ಉಂಡು
ಗಂಗಾಮೃತ ಪಾನ ಮಾಡುವ ಕಾಲ ಮನವೇ || ಮಾತು ||

ಬಿಸುಜಾಕ್ಷಿ ನೋಡುವಾಗ ಬಸಗೋಳು
ಬರುವ ಹಸುಮಗು ಸುಮುದ್ಧಿಸುವಾಗ
ಹಸನಾದ ವಸ್ತ್ರಂಗಳ ಉಡುವಾಗಲು ಮನವೇ || ಮಾತು ||

ಬೆಟ್ಟವ ನೇರುವಾಗ | ಕಾಲು ಮುರಿದು | ತಟ್ಟನೆ
ಬೀಳುವಾಗ | ಅಷ್ಟಬೋಗದಿರೊ ಪ್ರಾಪ್ತಿ
ಪಡೆವಾಗ | ದಟ್ಟ ದರಿದ್ರವು ಬಂದಾಗಲೇ
ಮನವೇ || ಮಾತು ||

ಸುರಿವ ಕಳ್ಳನು ಬಂದಾಗ ಘೋರಾರಣ್ಯ
ವ್ಯಾಸನು ಮರೆಯುವಾಗ ಚಳಿಜ್ವರ ಕೆಮ್ಮು
ಉಬ್ಬುಸ ರೋಗ ಬಂದಾಗ | ಮಳೆಗಾಳಿ |
ಪಿಡರಿರ್ನಾ ಭಟದಲ್ಲಿಯ ಮನವೇ || ಮಾತು ||

ಗುರುಸೇವೆ ಮಾಡುವಾಗ ಶ್ರೀಗುರು ಕೊಟ್ಟ ಮಂತ್ರ
ಜಪಿಸುವಾಗ | ಗುರುವೇ ಗುರುವೇ
ದೇವರ ಕಟ್ಟಿರುವೆ ಪಾಲಿಸು ಎಂದು
ಶ್ರೀಗುಹ ಮಹಲಿಂಗನ ನಂಬಿ ಮಾನವೇ || ಮಾತು ||