ಮೇಳದವರು

ಅಕ್ಕ ಪಕ್ಕ ನೋಡಿಕೊಂಡು
ಫಕ್ಕ ಫಕ್ಕ ನಡೆಯುವಂದು
ಹಕ್ಕಿಯೊಂದು ಹಾದಿ ಬದಿಯೆ ಕಾಣಸಿಕ್ಕಿತು
ಸಿಕ್ಕಿದಲ್ಲಿ ನೆಲವನಡುವೆ ಕೆದುಕು ತಿದ್ದಿತು.

ಹುಲಿ : ನೋಡು ಮಾದಾ ಅಲ್ಲೊಂದು ಹಕ್ಕಿ ಕಾಣಿಸುತ್ತಿದೆಯಲ್ಲ?

ಮಾದ : ಹೌದು ಹುಲಿಯಣ್ಣಾ, ಹಕ್ಕಿಯೊಂದು ನೆಲ ಕೆದಕುತ್ತಾ ಇದೆ.

ಹುಲಿ : ಅದು ನೆಲಕೆದಕುವ ರೀತಿ ನೋಡಿದರೆ ಕೋಳಿಯೇ ಇರಬಹುದು ಅನ್ನಿಸುತ್ತದೆ.

ಮಾದ : ಸರಿಯಾಗಿ ಹೇಳಿದೆ ಅದೊಂದು ಹೇಟೆ.

ಹುಲಿ : ಈ ಬಾರಿ ನಿನ್ನ ಸರದಿ ನೀನೇ ವಿಷಯ ತಿಳಿಸು.

ಮಾದ :  ಹೇಟೇ ಹೇಟೇ, ಕ್ಷಣಕಾಲ ನಿಲ್ಲು. ನಾನೊಂದು ಪ್ರಶ್ನೆ ಕೇಳುವೆ. ದಯವಿಟ್ಟು ಉತ್ತರ ಹೇಳುವೆಯಾ?

ಹುಲಿ : ವಿಷಯ ಗೊತ್ತಿರುವುದಾದರೆ ಖಂಡತಿ ಉತ್ತರ ಹೇಳುವೆ.

ಮಾದ : ಈ ಹುಲಿಯಣ್ಣ ಬೋನಿನಲ್ಲಿ ಬಿದ್ದಿದ್ದ, ಅವನನ್ನು ನಾನು ಸೆರೆಯಿಂದ ಬಿಡಿಸಿದೆ. ಅವನೀಗ ನನ್ನನ್ನೆ ತಿನ್ನುತ್ತೇನೆ ಎನ್ನುತ್ತಿದ್ದಾನೆ. ಉಪಕಾರಕ್ಕೆ ಅಪಕಾರ ಬಗೆಯುತ್ತಿದ್ದಾನೆ. ಇದು ಸರಿಯೇ? ಅವನು ಹಾಗೆ ಮಾಡಬಹುದೆ? ನೀನು ಹೇಳು.

ಹುಲಿ : ಹೇಟೇ ಮನುಷ್ಯರು ಉಪಕಾರ ಸ್ಮರಣೆ ಉಳ್ಳವರಂತೆ. ಮಾದ ಹಾಗೆ ಹೇಳುತ್ತಾನೆ. ಈ ಬಗ್ಗೆ ನಿನ್ನ ಅನುಭವವೇನು? ಅದನ್ನು ಮಾತ್ರ ಹೇಳಿಬಿಡು ಅಷ್ಟೇ ಸಾಕು ನಮಗೆ.

ಹುಲಿ : ಏನು, ಮನುಷ್ಯರಲ್ಲಿ ಉಪಕಾರ ಸ್ಮರಣೆಯೆ? ಅವರು ಅಂಥವರೆಂದು ನನಗಂತೂ ಅನಿಸುವುದಿಲ್ಲ.

ಮಾದ : ಅದೇಕೆ ಆಗೆ ಹೇಳುತ್ತಿಯಾ? ನಿನಗೆ ಅವರೇನು ಮಾಡಿದ್ದಾರೆ?

ಹುಲಿ : ಅದನ್ನೇ ಹೇಳುತ್ತೇನೆ ಕೇಳಿ. ಕೆಲವು ಕಾಲದಿಂದ ನಾನು ರೈತನೊಬ್ಬನ ಆಶ್ರಮದಲ್ಲಿದ್ದೇನ. ಕಳೆದ ಐದಾರು ವರ್ಷಗಳಲ್ಲಿ ನೂರಾರು ಮೊಟ್ಟೆಗಳನ್ನು ನಾನವನಿಗೆ ಕೊಟ್ಟಿದ್ದೇನೆ. ಹಲವಾರು ಮರಿಗಳು ನನ್ನಿಂದ ಅವನಿಗೆ ದೊರೆತಿವೆ. ಹೆಣ್ಣುಗಳು ದೊಡ್ಡವಾಗಿ ಮೊಟ್ಟೆ ಇಡತೊಡಗಿವೆ. ಗಂಡುಗಳು ಕಾದಾಟದ ಹುಂಜಗಳಾಗಿ ಬೆಳೆದಿವೆ. ಕೆಲವನ್ನು ಆತ ಮಾರಾಟಮಾಡಿ ಹಣ ಸಂಪಾದನೆ ಮಾಡಿದ್ದಾನೆ. ಇನ್ನು ಕೆಲವನ್ನು ಕೊಂದು ಮಾಂಸ ತಿಂದಿದ್ದಾನೆ. ನನಗೀಗ ಪ್ರಾಯವಾಯಿತು. ಮೊಟ್ಟೆಯಿಡುವ ಶಕ್ತಿ ಕುಂದಿತು ಇಷ್ಟರಲ್ಲೆ ರೈತ ನಾನು ಮಾಡಿದ ಉಪಕಾರ ಮರೆತಿದ್ದಾನೆ. ನಾಳೆ ತನ್ನ ಮಗಳು ಅಳಿಯ ಮನೆಗೆ ಬಂದಾಗ ನನ್ನನ್ನೂ ಕೊಂದು ರೊಟ್ಟಿ ಮಾಡಿ ಬಡಿಸಲಿದ್ದಾನೆ. ಈ ವಿಚಾರ ಮುಂದಾಗಿ ನನಗೆ ತಿಳಿಯಿತು. ಜೀವ ಉಳಿಸಲಿಕ್ಕಾಗಿ ಕಾಡಿಗೆ ಓಡಿ ಬಂದೆ ಇದು ನೋಡಿ ಮನುಷ್ಯರ ಪ್ರತ್ಯುಪಕಾರ ಬುದ್ಧಿ!

ಹುಲಿ : ಸರಿಯಾಗಿ ಹೇಳಿದೆ. ನಿನ್ನ ಮಾತುಕೇಳಿ ಬಹಳ ಸಂತೋಷವಾಯಿತು. ನಾವಿನ್ನು ಬರುತ್ತೇವೆ.

ಹೇ : ಆಗಲಿ ನಾನು ನನ್ನ ದಾರಿ ಹಿಡಿಯುತ್ತೇನೆ.

ಮಾದ : ಹೌದು ಹುಲಿಯಣ್ಣಾ ಇಬ್ಬರ ಸಾಕ್ಷಿಯೂ ನಿನ್ನ ಪರವಾಯಿತು. ಆಗಲಿ ಇನ್ನೂ ಮೂವರು ಇದ್ದಾರಲ್ಲ? ಅವರೇನು ಹೇಳುತ್ತಾರೋ ಕೇಳೋಣ.