ಮೇಳದವರು

ಯಾರನ್ನು ಕಾಣಲಿ ಯಾರನ್ನು ಕೇಳಲಿ
ಯಾರ ಸಾಕ್ಷಿಯ ನಿನ್ನು ಪಡೆಯಲಿ ಎನ್ನುತ
ಸಾರಿದರವರು ಮುಂದಕ್ಕೆ

ಹುಲಿ : ಇದುವರೆಗೆ ನಾವು ಒಂದು ಪ್ರಾಣಿಯ ಸಾಕ್ಷಿ ಪಡೆದೆವು; ಒಂದು ಪಕ್ಷಿಯ ಸಾಕ್ಷಿ ಪಡೆದೆವು ಇನ್ನೊಂದು ಮರದ ಸಾಕ್ಷಿ ಪಡೆಯೋಣವೆ:

ಮಾದ : ಆಗಬಹುದು. ನನ್ನ ಒಪ್ಪಿಗೆ ಇದೆ.

ಹುಲಿ : ಮರವವಾದರೂ ನಿನ್ನ ಪರವಾಗಿ ಅಂದರೆ ಮನುಷ್ಯರ ಪರವಾಗಿ ಸಾಕ್ಷಿ ನುಡಿಯುವುದೋ ತಿಳಿಯೋಣ.

ಮಾದ : ನಮ್ಮ ಇದಿರೇ ನಿಂದಿದೆ ಮಾವಿನ ಮರ. ಇದನ್ನೇ ಕೇಳಿದರಾಯಿತು.

ಹುಲಿ : ಆಗಲಿ, ಈಗ ನನ್ನ ಸರದಿ, ನಾನೇ ಪ್ರಶ್ನೆ ಕೇಳುತ್ತೇನೆ.

ಮಾದ : ಸರಿ. ಕೇಳಿಬಿಡು.

ಹುಲಿ : ಮರವೇ, ಮರವೇ, ನಿನಗೆ ಮನುಷ್ಯರ ಪರಿಚಯವಿದೆಯೆ?

ಮಾದ : ಹಹಹ್ಹಹ್ಹ ಇದೇನು ಕೇಳುತ್ತಿ ಹುಲಿಯಣ್ಣಾ? ಮನುಷ್ಯರ ಪರಿಚಯ ಯಾರಿಗಿಲ್ಲ ಹೇಳು? ಅವರಂಥ ಬುದ್ಧಿವಂತರು ಜಗತ್ತಿನಲ್ಲೆ ಇಲ್ಲ.

ಹುಲಿ : ನಾನು ಅವರ ಬುದ್ಧಿವಂತಿಕೆಯ ಬಗ್ಗೆ ಕೇಳುತ್ತಿಲ್ಲ.

ಮಾದ : ಮತ್ತೆ?

ಹುಲಿ : ಅವರ ಉಪಕಾರ ಬುದ್ಧಿಯ ಬಗ್ಗೆ. ಪ್ರತ್ಯುಪಕಾರ ಬುದ್ಧಿಯ ಬಗ್ಗೆ ಕೇಳುತ್ತಿದ್ದೇನೆ.

ಮಾದ : ಪ್ರತ್ಯುಪಕಾರ ಬುದ್ದಿಯೆ? ಕೆಲವೇ ಮನುಷ್ಯರಲ್ಲಿ ಅದು ಇರಬಹುದೋ ಏನೋ. ಹೆಚ್ಚಿನವರಲ್ಲಿ ಅದು ಇಲ್ಲವೇ ಇಲ್ಲ.

ಮಾದ : ಅದೇಕೆ ಹಾಗೆ ಹೇಳುತ್ತಿಯಾ?

ಮಾದ : ನೀನು ಮನುಷ್ಯ. ನನ್ನ ಮಾತು ಕೇಳಿ ನನಗೆ ಬೇಸರವಾಗಿರಬೇಕು. ಅಲ್ಲವೆ?

ಮಾದ : ನೋಡು, ನಾನೊಂದು ಮರ. ಮಣ್ಣಿನಲ್ಲಿ ಹುಟ್ಟಿ ಬೆಳೆವವನು. ಇಲ್ಲಿನ ಗಾಳಿ ನೀರು ಸೇವಿಸಿ ಬದುಕುವವನು. ಜೀವಿಸಿರುವಷ್ಟು ಕಾಲ ನಾನು ಈ ಭೂಮಿಗೆ ಹಸಿರು ಹೊದೆಸುತ್ತೇನೆ; ತಂಪು ನೀಡುತ್ತೇನೆ. ಹಕ್ಕಿ ಪಕ್ಕಿಗಳಿಗೆ, ಕ್ರಿಮಿ ಕೀಟಗಳಿಗೆ ಆಸರೆ ಕೊಡುತ್ತೇನೆ. ಮನುಷ್ಯರಿಗೆ ತಿನ್ನಲು ಹಣ್ಣು. ಉರಿಸಲು ಕಟ್ಟಿಗೆ, ಮನೆಗಳಿಗೆ ಮೋಪುರೀಪುಗಳು ಎಲ್ಲ ಸಿಕ್ಕುವುದು ನನ್ನಿಂದ ಜನಕ್ಕೆ ಜಗಕ್ಕೆ ಉಪಕರಿ ನಾನು. ಅದರೇನು? ಅವರು ನನ್ನ ಉಪಕಾರವನ್ನು ಗಣಿಸುವುದಿಲ್ಲ.

ಹುಲಿ : ಹಾಗೇಕೆ ಹೇಳುತ್ತಿ? ನಿನಗೆ ಅವರನೇನು ಮಾಡುತ್ತಾರೆ?

ಮಾದ : ನನ್ನ ಕೈಕಾಲುಗಳಂತಿರುವ ಕೊಂಬೆರೆಂಬೆಗಳನ್ನೆಲ್ಲ ಕತ್ತರಿಸುತ್ತಾರೆ. ಹಣದಾಸೆಗಾಗಿ ನನ್ನನ್ನೆ ಕಡಿ ಕಡಿದು ಮಾರುತ್ತಾರೆ. ನನ್ನ ಸಂತಾನವನ್ನೆ ನಿರ್ಮೂಲ ಮಾಡುತ್ತಾರೆ. ಕಾಡಿನ ಹಸಿರು ಹೊದೆದ ಗುಡ್ಡ ಬೆಟ್ಟಗಳೆಲ್ಲ ಅಜ್ಜಯ್ಯನ ಬೋಳು ಮಂಡೆಯಂತೆ ಕಾಣಲು ಕಾರಣ ಯಾರು? ಮನುಷ್ಯರೇ ಅಲ್ಲವೆ? ಉಪಕಾರ ಬುದ್ಧಿ ಬಿಡಿ. ಒಂದಿಷ್ಟು ವಿವೇಕ ಅವರಿಗಿದ್ದರೆ ಅವರು ಹೀಗೆ ಮಾಡುತ್ತಿದ್ದರೆ?

ಹುಲಿ : ನಿನ್ನ ಮಾತು ಸಂಪೂರ್ಣ ಸತ್ಯ. ನಾನದನ್ನು ಒಪ್ಪಿಕೊಳ್ಳುತ್ತೇನೆ. ನಿನ್ನ ಅಭಿಪ್ರಾಯ ತಿಳಿಸಿ ಉಪಕಾರ ಮಾಡಿದೆ. ವಂದನೆಗಳು. ಮಾದಾ, ಮೂರು ಸಾಕ್ಷಿಗಳ ವಿಚಾರಣೆ ಮುಗಿದು ಹೋಯಿತು ನೋಡು.

ಮಾದ : ಹೌದು ಹುಲಿಯಣ್ಣಾ ಇನ್ನು ಎರಡು ಮಾತ್ರ ಉಳಿದಿದೆ. ಮುಂದೆ ಹೋಗೋಣ. ಸಿಕ್ಕಿದವರನ್ನು ವಿಚಾರಿಸೋಣ.