ಹಿಂದೆ ಸಣ್ಣವನಿದ್ದಾಗ ಬ್ರಾಹ್ಮಣನೂ ಹುಲಿಯೂ ಎಂಬ ಮಕ್ಕಳ ಕತೆ ಓದಿದ್ದೆ. ಇತ್ತೀಚೆಗೆ ಇಂಗ್ಲೀಷ್‌ ಭಾಷೆಯ ಮಕ್ಕಳ ಪುಸ್ತಕವೊಂದರಲ್ಲಿ ಎಂಬ ಕತೆಯನ್ನು ಓದಿದೆ, ಆ ಕತೆಗಳಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ಋಷಿ ಕೊಡಬಲ್ಲ ಆ ಕತೆಯನ್ನು ಪುಟ್ಟ ನಾಟಕ ರೂಪದಲ್ಲಿ ಬರೆದರೆ ಹೇಗೆ ಎಂಬ ಯೋಚನೆ ಮನದಲ್ಲಿ ಮೂಡಿತು. ಪರಿಣಾಮವಾಗಿ ಈ ಕಿರು ನಾಟಕ ರೂಪುಗೊಂಡಿತು.

ಈ ಕೃತಿಯ ಮರುಮುದ್ರಣ ಮತ್ತು ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತು ಪ್ರೋತ್ಸಾಹ ನೀಡಿರುವ ಆತ್ಮೀಯರಾದ ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತರಾದ ಮತ್ತು ಮಕ್ಕಳ ಸಾಹಿತಿ ಶ್ರೀ ಅಪ್ಪಾಸ್ವಾಮಿಯವರಿಗೆ ಧನ್ಯವಾದಗಳು.

ಈ ಗ್ರಂಥವನ್ನು ಅಂದವಾಗಿ ಅಕ್ಷರ ಜೋಡಣೆ ಹಾಗೂ ಮುದ್ರಣ ಮಾಡಿಕೊಟ್ಟ ಮಿತ್ರರಿಗೂ ವಂದನೆಗಳು

ಪಳಕಳ ಸೀತಾರಾಮಭಟ್ಟ
ಮಿತ್ತಬೈಲು, (ದ.ಕ)