ಪಲ್ಲವಿ : ಮಾಧವ ಮಧುಸೂದನ – ಶ್ರೀಹರೇ ಹರಿ ಮಾಧವ

ಚರಣ :  ಧರಣಿಯೊಳಗಡೆ ನೆಲೆಸಿ ನಿಂತಹ-ಹಸನು ಮಾಡಯ್ಯ ಜೀವನ
ವಾದ ಬಿಡಿಸಯ್ಯ ಬುದ್ಧಿಗೆ-ರೇಪಹಳ್ಳಿಯ ವಾಸನೇ

ಮನದಿ ಕನಸಲಿ ನಿನ್ನ ಸ್ಮರಣೆ-ಹಗಲು ಇರುಳು ನಾಮ ಹೇಳುವೆ
ಧುರಂಧರನೇ ಜಗವ ರಕ್ಷಿಪ-ರಿಪು ಸಂಹಾರಕ ಶ್ರೀಹರಿಯೇ

ಸೂರ‍್ಯಚಂದ್ರರ ಕಳೆಯ ರೂಪನೆ-ಮಾತಾಪಿತನೆ ನೀನೆ ಎಲ್ಲವು
ದಂಡೆ ದಾಸರನು ರಕ್ಷಿಪನೆ-ಧನ್ಯಮಾಡಯ್ಯ ನನ್ನ ಜೀವನ

ನಾರಸಿಂಹನೆ ಸಚಿದನಂದನೆ-ವಾದಮಾಡೆನು ಜಯವ ಕೊಡಿಸಯ್ಯ