ಪಲ್ಲವಿ : ಮಾಧವಾ ! ಮತ್ಸ್ಯಾವತಾರಾ ! ಶ್ರೀನಿಧೇ | ಶ್ರೀವತ್ಸಲ !

ಚರಣ :  ಬಾಡಿದೆ ನನ್ನ ಮನವು ಬೇಡಿದೇ ನಿನ್ನನು
ಚುಮುಕಿಸೋ ನೀರನ್ನು ಚಿಗುರಿಸೋ ಮನವನ್ನು

ಆರುಕಳ್ಳರು ಬಿದ್ದರು ಶಂಖ ಊದಿ ಎಚ್ಚರಿಸು
ಮೋಹದ ಕಾಡಿನ ಕಿಚ್ಚು ಬೇಗನೇ ನೀನು ಆರಿಸು

ಬಾಲ್ಯದಿ ನಿನ್ನನು ಮರೆತೆ ಅರಿತಾಗ ನಿನ್ನನು ತೊರೆದೆ
ಜ್ಞಾನದ ದೀವಿಗೆ ತೋರಿ ಜಯವನ್ನು ಕೊಡಿಸೋ ನನಗೆ