ಪಲ್ಲವಿ : ಮಾನವ ಜೀವವು ಗಾಳಿಲಿ ನಿಂತಿದೆ
ಏನದು ಚಿತ್ರವೊ ದತ್ತನ ಮಾಯೆಯು

ಚರಣ :  ಕನಸಿನ ಜೀವನ ಭ್ರಮೆಗಳ ಭವನವು
ಕುಸಿವುದು ಹೇಳ ಹೇಸರೇ ಇಲ್ಲದೆ  

ಬರಿಹುಸಿ ಬದುಕು ಬದುಕಲಸಾಧ್ಯ
ದಿನದಿನ ಕಳೆವುದು ಅಸದಳ ಜೀವಕೆ

ವಿಧವಿಧ ದೇಹದಿ ಜನ್ಮವ ಕಳೆದೆನು
ಮತ್ತೆ ಮತ್ತೆ ಜನ್ಮಧಾರಣೆ ಮಾಡೆನು

ಅರ್ಥವ ತಿಳಿಸಿ ಪಯಣವ ಬೆಳೆಸು
ಗಮ್ಯವ ಸೇರಿಸು ಬೇಡಿಕೊಂಬೆನು

ಅನುಕ್ಷಣ ನಿನ್ನದೆ ಸ್ಮರಣೆಯ ಕರುಣಿಸು
ನಿಜವನು ತೋರೋ ಸಚಿದಾನಂದಾ