ಕಲ್ಲೂರು ಮಾರುಟೇಶ್ವರ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೨೫ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ಈ ಗ್ರಾಮದ ಸುತ್ತಲೂ ಕಗ್ಗಲ್ಲಿನ ಬೆಟ್ಟಗಳಿವೆ. ಇಲ್ಲಿ ೧೩-೧೪ನೇಯ ಶತಮಾನಕ್ಕೆ ಸೇರಿರಬಹುದಾಗ ಬಹಳಷ್ಟು ಅವಶೇಷಗಳಿವೆ. ಇಲ್ಲಿ ಐದು ದ್ವಾರಗಳಿದ್ದು ಇವು ಮಹಮ್ಮದೀಯರಿಂದ ನಿರ್ಮಿಸಲ್ಪಟ್ಟಿವೆ ಎಂದು ತಿಳಿದು ಬಂದಿದೆ. ಈ ಊರಿನ ಚಾವಡಿಯ ಚಾವಣಿಯಲ್ಲಿ ಮರದಲ್ಲಿ ಕೆತ್ತಲ್ಪಟ್ಟ ಶಾಸನವೊಂದು ಸಿಕ್ಕಿದೆ. ಇದರ ಪ್ರಕಾರ ಇಲ್ಲಿ ಐದು ದ್ವಾರಗಳು (ಹೆಬ್ಬಾಗಿಲುಗಳು) ಆದಿಲ್ ಷಾಹಿ ಅಗಾಖುಸ್ರುವಿನಿಂದ ನಿರ್ಮಿತವಾಗಿವೆ. ಕಲ್ಲೂರಿನ ಸುತ್ತ ಮುತ್ತ ಸುಮಾರು ೬ ದೇವಾಲಯಗಳಿವೆ ಇವುಗಳಲ್ಲಿ ಮಾರ್ಕೆಂಡೇಶ್ವರನ ದೇವಾಲಯವು ಅತ್ಯಂತ ಮುಖ್ಯವಾದದ್ದು ಇಲ್ಲಿ ಕಲ್ಯಾಣಚಾಲುಕ್ಯರಿಗೆ ಸೇರಿದ ಅನೇಕ ಶಾಸನಗಳೂ ದೊರಕಿವೆ. ಈ ಊರಿನಲ್ಲಿ ಪ್ರಸಿದ್ಧವಾದ ಲಕ್ಷ್ಮೀ ದೇವಸ್ಥಾನವಿದೆ. ಇಲ್ಲಿಗೆ ಮಹಾರಾಷ್ಟ್ರ ಆಂಧ್ರಪ್ರದೇಶದಿಂದ ಭಕ್ತಾದಿಗಳು ಆಗಮಿಸುತ್ತಾರೆ. ೧೮ನೇ ಶತಮಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಸಂಚಾರ ಮಾಡುತ್ತಾ ಇಲ್ಲಿ ಕೆಲ ಸಮಯ ತಂಗಿದ್ದರು ಸ್ಥಳೀಯ ಲಿಂಗಣ್ಣ ಕವಿಯ ಕಾವ್ಯವನ್ನು ಮೆಚ್ಚಿ ಅವರನ್ನು ಲಿಂಗಣ್ಣಾಚಾರ್ಯರೆಂದು ಕರೆದಿರುವುದಾಗಿ ಇತಿಹಾಸದಲ್ಲಿ ತಿಳಿಯುತ್ತದೆ.

ಇಲ್ಲಿ ಆದಿಲ್ ಶಾಹಿ ಕಾಲದಿಂದ ಪ್ರಸಿದ್ಧವಾದ ಶ್ರೀ ಮಹಾಲಕ್ಷ್ಮೀ ದೇವಸ್ಥಾನವಿದೆ. ಅನೇಕ ಭಕ್ತರು ಇಲ್ಲಿ ಸೇವೆ ಮಾಡುತ್ತಾರೆ.

 

ನೀರಮಾನ್ವಿ ಯಲ್ಲಮ್ಮ ಗುಡಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೪೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೦ ಕಿ.ಮೀ

ನೀರಮಾನ್ವಿಯ ರೇಣುಕಾ ಯಲ್ಲಮ್ಮ ದೇವಸ್ಥಾನವಿದೆ. ಇಲ್ಲಿ ವರ್ಷಕ್ಕೊಮ್ಮೆ ದೊಡ್ಡದಾದ ಜಾತ್ರೆ ನಡೆಯುತ್ತದೆ. ದೇಶದ ನಾನಾ ಭಾಗಗಳಿಂದ ಭಕ್ತರು ಸೇರುತ್ತಾರೆ ಇದು ರಾಯಚೂರು ಮಾನ್ವಿ ಹೆದ್ದಾರಿಯಲ್ಲಿದೆ.

 

ತ್ರೈಯಾಂಬಕೇಶ್ವರ ದೇವಾಲಯ ಕವಿತಾಳ : ಪ್ರಾಚೀನ ಕಾಲದ ಪ್ರಾಕೃತಿಕ ಗುಹೆಗಳ ತಾಣ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ
ತಾಲೂಕ ಕೇಂದ್ರದಿಂದ: ೪೦ ಕಿ.ಮೀ

ಕವಿತಾಳ ಗ್ರಾಮದ ನೈರುತ್ಯದಲ್ಲಿ ಒಂದು ಬೆಟ್ಟವಿದೆ. ಇದರಲ್ಲಿ ಅನೇಕ ಪ್ರಾಕೃತಿಕ ಗುಹೆಗಳಿವೆ. ಇಲ್ಲಿ ಕಲ್ಲಿನ ಆಯುಧಗಳು ಕಬ್ಬಿಣದ ಅದಿರು, ಪ್ರಾಚೀನ ಮಡಿಕೆ ಕುಡಿಕೆಯ ಚೂರುಗಳು ದೊರಕಿವೆ. ಬೂದುಗುಡ್ಡೆಯ ದೇವಸ್ಥಾನದಲ್ಲಿ ಪ್ರಾಚೀನ ಕಾಲದ ಕುಲುಮೆ ಇರುವುದು ಪತ್ತೆಯಾಗಿದೆ. ತ್ರಯಂಬುಕೇಶ್ವರು ದೇವಾಲಯವೇ ಇಲ್ಲಿ ಪ್ರಸಿದ್ಧ ಸ್ಮಾರಕ. ಇದು ಮಧ್ಯಕಾಲೀನ ದೇವಾಲಯವಾಗಿದೆ. ಈ ದೇವಾಲಯದ ಪಶ್ಚಿಮದ ದೇವಕೋಷ್ಠದಲ್ಲಿ ಸುಂದರವಾದ ಮಹಿಷಾಸುರ ಮರ್ದಿನಿಯ ಶಿಲ್ಪಿವಿದೆ ಕವಿತಾಳಕ್ಕೆ ಉತ್ತರದಲ್ಲಿ ನಾಲ್ಕು ಮೈಲಿ ದೂರದಲ್ಲಿ “ತುಪ್ಪಲದೊಡ್ಡಿ” ಎಂಬ ಗ್ರಾಮವಿದೆ. ಇಲ್ಲಿ ಪ್ರಾಚೀನ ಕಾಲದಲ್ಲಿ ಚಿನ್ನ ತೆಗೆಯುವ ಉದ್ಯಮದ ಅವಶೇಷಗಳು ಕಂಡು ಬಂದಿವೆ. ಕವಿತಾಳ ಗ್ರಾಮವು ಸಾವಯವ ಕೃಷಿ ಪದ್ಧತಿಯ ಮೂಲಕ ಪ್ರಸಿದ್ಧಿಯನ್ನು ಹೊಂದಿರುತ್ತದೆ.

 

ರಾಜಲಬಂಡ ತಿರುವುನಾಲಾ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ
ತಾಲೂಕ ಕೇಂದ್ರದಿಂದ: ೩೦ ಕಿ.ಮೀ

ರಾಜಲಬಂಡ ತಿರುವು ನಾಲಾ ಯೋಜನೆ, ಇದು ರಾಯಚೂರು ಜಿಲ್ಲೆಯ ಏಕೈಕ ಅಣೆಕಟ್ಟು ‌ರಾಯಚೂರು ಮತ್ತು ಮಾನ್ವಿ ತಾಲೂಕಿನ ರೈತರಿಗೆ ಇದೊಂದು ವರವಾಗಿ ಪರಿಣಮಿಸಿದೆ. ಹಿಂದಿನ ಹೈದ್ರಾಬಾದ್ ನಿಜಾಂ ಸರಕಾರ ಮತ್ತು ಮದ್ರಾಸು ಸರಕಾರಗಳು ಈ ಆಣೆಕಟ್ಟು ನಿರ್ಮಿಸುವ ನೀಲ ನಕ್ಷೆ ತಯಾರಿಸಿದ್ದವು. ೧೯೫೦-೬೦ರ ದಶಕದಲ್ಲಿ ಕರ್ನಾಟಕ ಸರಕಾರವು ಈ ಯೋಜನೆಯನ್ನು ಪೂರ್ಣಗೊಳಿಸಿತು ಇಲ್ಲಿ ಸುಂದರ ಉದ್ಯಾನವನವಿದ್ದು ನೋಡಲು ಆಕರ್ಷಣೀಯವಾಗಿದೆ.

 

ವಟಗಲ್ : ಆದಿ ಮಾನವನ ನೆಲೆ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ
ತಾಲೂಕ ಕೇಂದ್ರದಿಂದ: ೫೦ ಕಿ.ಮೀ

ವಟುಗಲ್ಲಿನಲ್ಲಿ ಗುಂಡುಕಲ್ಲುಗಳ ಬೆಟ್ಟಗಳಿವೆ ಇದರಿಂದಲೇ ಈ ಊರಿಗೆ “ವಟುಗಲ್” ಎಂಬ ಹೆಸರು ಪ್ರಾಪ್ತಿಯಾಗಿದೆ. ಆದಿ ಮಾನವ ಶಾಸ್ತ್ರಜ್ಞರು ಇಲ್ಲಿನ ಬೆಟ್ಟಗಳಲ್ಲಿ ಆದಿ ಮಾನವನ ಕುರುಹುಗಳನ್ನು ಗುರುತಿಸಿದ್ದಾರೆ ಮತ್ತು ಬೆಟ್ಟದ ಹದಿನೆಂಟು ಅಡಿ ಆಳದಲ್ಲಿ ಆದಿ ಮಾನವನ ಗೋರಿಗಳನ್ನು ಪತ್ತೆ ಹಚ್ಚಿದ್ದಾರೆ. ಬಸವೇಶ್ವರ ದೇವಸ್ಥಾನ ಇಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳ ಇಲ್ಲಿ ದೊಡ್ಡ ಜಾತ್ರೆ ಜರುಗುತ್ತದೆ.

 

ಮಾನ್ವಿ ತಾಲೂಕಿನ ಇತರೆ ಪ್ರಮುಖ ಸ್ಥಳಗಳು

ಚೀಕಲಪರ್ವಿ : ವಿಜಯದಾಸರ ಕಟ್ಟೆ.

ಬ್ಯಾಗವಾಟ : ಜಗನ್ನಾಥ ದಾಸರ ಜನ್ಮ ಸ್ಥಳ

ಗೋರ್ಕಲ್ : ಶ್ರೀ ವೆಂಕಟೇಶ್ವರ ದೇವಸ್ಥಾನ