ಜನನ : ೧೯೩೩ ರಲ್ಲಿ ಜನಿಸಿದರು

ಮನೆತನ : ವೇದೋಪನಿಷತ್ತುಗಳ ಹಿನ್ನೆಲೆಯಿರುವ ಕುಟುಂಬ. ತಂದೆ ನಾರಾಯಣ ಅವಧಾನಿ.

ಗುರುಪರಂಪರೆ : ಬಾಲ್ಯದಲ್ಲೇ ತಂದೆ ನಾರಾಯಣ ಅವಧಾನಿಗಳಿಂದ ವೇದ ಮತ್ತು ಸರ್ಪ ಯೋಗ ಧರ್ಮಶಾಸ್ತ್ರದಲ್ಲಿ ಪಾಠವಾಯಿತು. ಲಕ್ಷ್ಮೀಕೇಶವ ಶಾಸ್ತ್ರಿಗಳು, ಚಿದಂಬರ ಜೋಯಿಸರು, ಶ್ರೀನಿವಾಸ ಅವಧಾನಿಗಳು ಮತ್ತು ಕೇಶವಮೂರ್ತಿ ಅವಧಾನಿಗಳಿಂದ ಸಂಸ್ಕೃತ, ಸುಬ್ರಾಯ ಅವಧಾನಿಗಳು ಮತ್ತು ಶ್ರೀ ಕೃಷ್ಣ ಸೋಮಯಾಜಿಗಳ ಬಳಿ ಜ್ಯೋತಿಷ್ಯ ಮತ್ತು ವೇದಾಧ್ಯಯನ.

ಕ್ಷೇತ್ರ ಸಾಧನೆ : ದೆಹಲಿಯ ಕರ್ನಾಟಕ ಭವನ ಮತ್ತು ಕೃಷ್ಣ ದೇವಸ್ಥಾನ, ಕಾಶಿ, ಜಬ್ಬಲ್ಪುರಗಳ ಕರ್ನಾಟಕ ಸಂಘ, ಉಡುಪಿ ಪೇಆವರ ಮಠ, ಶಿವಮೊಗ್ಗದ ಶಂಕರಮಠ ಮುಂತಾದ ಪ್ರತಿಷ್ಠಿತ ಸಭಾಗಳಲ್ಲಿ ಹಲವು ಗಮಕ ವಿದ್ವಾಂಸರ ಜೊತೆಗಿನ ಶ್ರೀಯುತರ ಸಮರ್ಥ ವ್ಯಾಖ್ಯಾನ ಪಂಡಿತ ಪಾಮರರಿಬ್ಬರನ್ನೂ ಏಕಕಾಲದಲ್ಲಿ ರಂಜಿಸಿದೆ. ಶ್ರೀಯುತರ ಗಮಕ ವ್ಯಾಖ್ಯಾನವನ್ನು ಕೇಳಿ ಸಂತಸಪಟ್ಟಿದ್ದ ಬೆಂಗಳೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಪುರುಷೋತ್ತಮಾನಂದಜೀ ಅವರು. ಅವಧಾನಿಗ ಷಷ್ಟ್ಯಭ್ದಿಯ ಕಾರ್ಯಕ್ರಮಕ್ಕೆ ಆಗಮಿಸಿ ಹೂಹಣ್ಣುಗಳಿಂದ ಅಭಿಷೇಕ ಮಾಡಿದ್ದರು. ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಧನ್ವಂತರಿ ಲಕ್ಷ್ಮೀನಾರಾಯಣ ದೇವಾಲಯವನ್ನು ಡಾ. ವೆಂಕಟರಾವ್ ಅವರು ಮಾರ್ಕಂಡೇಯ ಅವಧಾನಿಗಳ ಷಷ್ಟ್ಯಬ್ದಿಯ ಸವಿನೆನಪಿಗಾಗಿಯೇ ಕಟ್ಟಿಸಿದರು ಎನ್ನುವುದು ವಿಶೇಷ.

ಪ್ರಶಸ್ತಿ – ಪುರಸ್ಕಾರ : ಅನೇಕ ಸಂಘ – ಸಂಸ್ಥೆಗಳು, ಮಠ-ಮಂದಿರಗಳು ಅವರನ್ನು ಗೌರವಿಸಿ ಪುರಸ್ಕರಿಸಿವೆ. ಅವುಗಳಲ್ಲಿ ಕಾಶೀ ಕರ್ನಾಟಕ ಸಂಘದ ’ವ್ಯಾಖ್ಯಾನ ಚತುರ’, ಶೃಂಗೇರಿಯಲ್ಲಿ ನಡೆದ ಸಪ್ತಷಿ ಸಪ್ತಹದಲ್ಲಿ ’ಧರ್ಮ ಪ್ರವರ್ತಕ’, ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ’ಪ್ರವಚನ ಚತುರ’ ಹೆಸರಿಸಬಹುದಾದ ಕೆಲವು ಪುರಸ್ಕಾರಗಳು, ಜೊತೆಗೆ ಶ್ರೀಯುತರ ಜೀವನಗಾಥೆಯ ’ತುಂಗೆಯ ಮಡಿಲಲ್ಲಿ’ ಶೀರ್ಷಿಕೆಯ ಕೃತಿಯೊಂದು ಹೊರಬಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.