ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಪದ ಮಹಾಕಾವ್ಯಗಳ ಸಂಗ್ರಹಕಾರ್ಯಕ್ಕೆ ಪ್ರೋತ್ಸಾಹ ನೀಡಿ, ಆ ಮೂಲಕ ಪ್ರಕಟಣೆಗೆ ಭದ್ರ ಬುನಾದಿ ಹಾಕಿಕೊಟ್ಟವರು ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರರು. ಅವರ ಜಾನಪದ ಪ್ರೇಮ ನನ್ನಲ್ಲಿ ಮಹಾಕಾವ್ಯಗಳ ಬಗೆಗೆ ಕೆಲಸ ಮಾಡುವಂತೆ ಪ್ರೇರೇಪಿಸಿತು. ಅದರ ಫಲವೇ ಈ ಮಹಾಕಾವ್ಯ ಮಾರ್ವಾಡಿ ಶೇಠ್.

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನದ ವಿಭಾಗದ ೧೯೯೮-೯೯ನೇ ಸಾಲಿನ ವೈಯಕ್ತಿಕ ಯೋಜನೆ ಮಾರ್ವಾಡಿ ಶೇಠ್ ಜನಪದ ಮಹಾಕಾವ್ಯದ ಸಂಗ್ರಹಣೆ, ಸಂಪಾದನೆ ಹಾಗೂ ಪ್ರಕಟಣೆಯಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಅನೇಕರು ಸಹಕರಿಸಿದ್ದಾರೆ. ಕಾವ್ಯ ಸಂಗ್ರಹಕ್ಕೆ ಪ್ರೋತ್ಸಾಹ ನೀಡಿ ಸಹಕರಿಸಿದ ಅಂದಿನ ಕುಲಪತಿಗಳಾದ ಡಾ.ಎಂ.ಎಂ.ಕಲಬುರ್ಗಿ ಅವರಿಗೆ, ಮುನ್ನುಡಿ ಬರೆದು, ಪ್ರೋತ್ಸಾಹ ನೀಡಿ, ಪ್ರಕಟಿಸಲು ಸಹಕರಿಸಿದ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರಿಗೆ, ಕಾವ್ಯವನ್ನು ಹಾಡಿದ ಖ್ಯಾತ ಕಲಾವಿದೆ ಶ್ರೀಮತಿ ದರೋಜಿ ಈರಮ್ಮ, ಸಹಕಲಾವಿದರಾದ ಶ್ರೀ ಅಶ್ವಿಪಾರ್ವತಮ್ಮ ಹಾಗೂ ಶ್ರೀಮತಿ ಅಶ್ವಿ ಶಿವಮ್ಮ ಅವರುಗಳಿಗೆ, ಕಾವ್ಯ ಸಂಪಾದಿಸುವಲ್ಲಿ ಸಹಕರಿಸಿದ ಹಳೆ ದರೋಜಿಯ ಬುಡುಗ ಜಂಗಮ ಸಮುದಾಯದ ಶ್ರೀ ಮಲ್ಲಿಕಾರ್ಜುನ ಎಡವಲಿ ಹಾಗೂ ಶ್ರೀ ರಾಮಣ್ಣ ಅಶ್ವಿ, ಅವರುಗಳಿಗೆ,

ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿ, ಪ್ರಸಾರಾಂಗದ ನಿರ್ದೇಶಕರಾದ ಡಾ.ಎ.ಮೋಹನ್ ಕುಂಟಾರ್ ಹಾಗೂ ಅವರ ಸಹೋದ್ಯೋಗಿಗಳು, ಮಿತ್ರರಾದ ಡಾ.ಕೆ.ಎಂ.ಮೇತ್ರಿ, ಡಾ.ಎಸ್‌.ಮೋಹನ್, ಡಾ.ಗೋವಿಂದ, ಸಂಶೋಧನಾ ಸಹಾಯಕ ಡಾ.ಚಂದ್ರಪ್ಪ ಎಸ್‌.ಸೊಬಟಿ ಹಾಗೂ ನನ್ನ ಎಲ್ಲ ಸಹೋದ್ಯೋಗಿ ಸ್ನೇಹಿತರಿಗೆ,

ಅಂದವಾದ ರೇಖಾಚಿತ್ರ ಮತ್ತು ಮುಖಪುಟ ವಿನ್ಯಾಸ ಮಾಡಿದ ಕಲಾವಿದ ಕೆ.ಕೆ.ಮಕಾಳಿ ಹಾಗೂ ಛಾಯಾಚಿತ್ರ ಒದಗಿಸಿದ ಶ್ರೀ ಗಣೇಶ್ ಯಾಜಿ ಅವರುಗಳಿಗೆ, ಅಚ್ಚುಕಟ್ಟಾಗಿ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ, ಪುಟವಿನ್ಯಾಸ ಮಾಡಿದ ಜೆ.ಬಸವರಾಜ ಅವರಿಗೆ, ಯೋಜನೆಯ ಸಂಗ್ರಹ ಕಾರ್ಯದಲ್ಲಿ ಸಹಕರಿಸಿದ ನನ್ನ ಪತ್ನಿ ಚೈತ್ರಾ ಹಾಗೂ ನನ್ನ ಚೈತನ್ಯದ ಚಿಲುಮೆಗಳಾದ ಅಂಶು, ಅಭಿರಾಮರಿಗೆ ಕೃತಜ್ಞತೆಗಳು ಸಲ್ಲುತ್ತವೆ.

ಡಾ. .ಚಿ. ರಮೇಶ್