ಶರಣು ಶರಣು ಅಮ್ಮಾ
ಶರಣು ಶರಣು ಬಹುರಾಂಬ ಜಿಯಾ ಜಿಯಾ
ಸರಸ್ವತಿ ಶಾರದಾಂಬ ಜಿಯಾ ಜಿಯಾ
ಅಮ್ಮ ಬಾರಮ್ಮ ಭೂದೇವಿ ದೊಡ್ಡಮ್ಮ
ನಮ್ಮನಾಗಿ ಕಾಪಾಡು ಜಿಯಾ ಜಿಯಾ
ನಿನ್ನ ಬೆನ್ನಿಗೆ ನಾವು ಕುಂತೇವಮ್ಮ
ಭೂದೇವತೆ
ಅಮ್ಮ ಬಾರಮ್ಮ ಹುಲಿಗಿ ಮಾರಮ್ಮ
ಅಪ್ಪ ಬಾರಪ್ಪ ಮೈಲಾರಲಿಂಗ
ನಿನ್ನ ನಾವು ನೆನಸೀವೆ ತಾತಾ
ಹಂಪಿ ಒಳಗಿರುವ ಪಂಪಾಪತಿ
ವೊಸಿಪ್ಯಾಟೆ ಗಾಳಿಮಾರೆಮ್ಮ
ನಿನ್ನ ನಾವು ನೆನಸೀವೆ ತಾಯಿ
ಅಯ್ಯಾ ನಿನ್ನಾಗಿ ಮರಿಲಿಲ್ಲ ಜಿಯಾ ಜಿಯಾ
ದೇವಲಾಪುರದ ಕೋಲುಮಾರಮ್ಮ
ದಾರಿ ಕಾಯೋ ಮಾರಮ್ಮ
ಅಯ್ಯಾ ಯಮನೂರ ಎರಿತಾತ ಬಾರಾ
ಬಳ್ಳಾರಿ ಬೆಣ್ಣೆ ದುರುಗಮ್ಮ
ಬಳ್ಳಾರಿ ಮಲ್ಲಿಕಾರ್ಜುನ
ಗಂಡಿ ಒಳಗಿರುವ ಗಂಡಿನರಸಿಂಹ
ಗುಡ್ಡದ ಮ್ಯಾಲೆ ಕುಮಾರಸ್ವಾಮಿ
ನಿನ್ನ ನಾವು ನೆನಸೀವಿ ಬಾರಪ್ಪಾ
ಆದಿಶಕ್ತಿ ಭೂದೇವಿರಮ್ಮ
ನಮ್ಮನಾಗಿ ಕಾಪಾಡಿ ತಾಯಿ ಜಿಯಾ ಜಿಯಾ