ಸೇರು ಕಾಳಿಗೆ ನೋಡಮ್ಮ
ಪಾವು ಗುಗ್ರಿ ನೋಡಮ್ಮ
ಇಲ್ದಿರೆ ರೂಪಾಯಿ ಕೊಟ್ರೆ ನೋಡಮ್ಮ
ಪಾವು ಗುಗ್ರಿ ಹಾಕೇನ
ಈಗ ಆರು ಪಾವು ನಾನು ಹಾಕೇನ
ಚಟಾಕು ನಾನೇ ಹಾಕೀನ

ಎಂಟಾಣೆಗೆ ….. ಏನಪ್ಪ ಹೆಂಗದವೆ ಒಸುಕೊಡು ನೋಡನ

ಉದ್ರಿ ಗುಗ್ರಿ ಅಲ್ಲಮ್ಮಾ
ನಗದಿ ಗುಗ್ರಿ ಐದಾವೆ

ಉದ್ರಿ ಕೊಡೋನಲ್ಲ ಏನಾರೆ ಆಗಲಿ ಎಂಟಾಣೆ ಕೊಡ್ತೀನಿ ಅರ್ಪಾವು ಹಾಕು ನೋಡಾನ ಅಂಥ ಎಂಟಾಣೆ ಕೊಟ್ಟು ಬಾಣ್ತಿ ಅರ್ಪಾವು ಗುಗ್ರಿ ತಗಂಡ್ಳು ಬಾಯಿಗಿಟ್ಟು ಬೇಸ ಐದವ,


ಉಪ್ಪುಕಾರ ಮತ್ತು ಬೇಸ ಐದವೆ
ಅತ್ತ ಇತ್ತ ನೋಡ್ತಾಳ ಸೈ
ಗೆರಿಸಿನಾಗೆ ಸೇರು ನಲ್ಲುರ
ಸೇರು ಜ್ವಾಳ ತುಂಬ್ಕಂಡಳ ಸೈ
ಹಂಗೆ ಹಾಕೆ ಬಿಡಾದು ಸೈ
ಪಾವು ಗುಗ್ರಿ ತಗಂಡಳಾ ಸೈ
ನಾಕ ರೊಟ್ಟ ಸುಟಕೊಂಡಳ ಸೈ
ಏನ ಹಾಕಿ ತಿಂದಳ

ಹತ್ತ ದಿನ ಬರಿ ಗುಡ್ಡಸೆರೆ ಬಾಯಿ ಸೊಪ್ರುಗಾಗಿದೆ ನಾಕ ರೊಟ್ಟಿ ಪಾವರೆ ಗುಗ್ರಿ ಜಡ್ತಾ

ಜಡ್ದುಬಿಟ್ಳು,
ಇವತ್ತು ನೋಡು ಎನ್ನಪ್ಪ
ಹಡ್ಡ ಜನ್ಮ ಗಂಟಾರ
ಯಪ್ಪಾ ಕುತ್ಗಿತನಕ ಬಂದೈತೆ
ಹೆಂಗ ಅರಗೋದು
ಗುಗ್ರಿ ಅರಗಂಗಿಲ್ಲಂತ
ಎಲ್ಡಾ ಕೊಡ ತಗಂಡಾಳ
ಸೊದೊ ಬಾಯಿಗೆ ಬಂದಾಳ
ಎಲ್ಡ ಕೊಡ ಸೇದಿ ಕೊಂಡಾಳ ಸೈ
ತಲಿ ಮ್ಯಾಲ ಬಂದ ಇಟ್ಟಳ ಸೈ
ಬಗಲಾಗೆ ಬಂದೆ ಇಟ್ಟಳ ಸೈ
ಕುದುರೆ ಬಂದ್ಹಾಂಗ ಬರ್ತಾಳ
ಬಗಲಾಗಿದ್ದರು
ಯಮ್ಮಾ
ಆಗಲೆ ಹೊರಗೆ ಹೊಂಟೀಯ
ಆಗಲೆ ತಣ್ಣೀರು ಕುಡ್ದೀಯ

ಬಾಣ್ತಿ ರೋಗ ಬಡತೈತ

ಸೀತಳ ತುಂಬ್ಯಾ ಬರತೈತೆ
ಬಾಣ್ತಿ ರೋಗ ಬಂದ ಮ್ಯಾಲರ ಸೈ
ಯಾರ ಕೈಲಿ ಆಗದಿಲ್ಲರ ಸೈ
ಜನ್ಮ ಅದರಲೆ ಹೋಗ್ತಾದ
ಜೀವ ಅದರಾಗೆ ಹೋಗ್ತಾತೈತೊ

ಅಯ್ಯೊ ಯಮ್ಮಾ …. ಈಗ ಪರಮಾತ್ಮ ಬರದಂಗೆ ಆಗ್ಲಮ್ಮ ನಮ್ಮತ್ತಿ ಮುದುಕಿ ಹೊಲ್ಕೋಗಿ ಹೊತ್ತು ಮುಳುಗಿ ಬರ್ತಾಳ ಏ ಯಮ್ಮಾ ನನ್ನ ಹೆಣಗೆ ಬಿದ್ದಾರ ಎಲ್ಲಿಗನ ಕಸಬಳಿಲಿ, ಎಲ್ಲಿತನ ಅಡಿಗೆ ಮಾಡ್ಲಿ, ಹೊಲದಾಗೆ ಮಾಡ್ಳಾ ಮನೆಗೆ ಮಾಡ್ಳಾ,

ನನ್ನ ಕೊಟ್ಟಿದ ದೇವು ನೋಡಪ್ಪ
ಕಣ್ಣೆ ಮಚ್ಚವಲ್ಲಪ್ಪ
ಯಪ್ಪ
ಹಡದ ಐದೇ ದಿನ್ಯಾಗ
ತಣ್ಣೀರ ಬದುಕು ಮಾಡಿನಿ
ಯಮ್ಮಾ
ಈಗ ಹೆಂಗ ಬಂದೈತಿ ಕೊಳಕಂಡ ಹೋಗಕಾಲನಮ್ಮ
ಯಮ್ಮಾ ಹದ್ನೆದು ದಿನ ಅಲ್ಲಮ್ಮೊ
ಇನ್ನ ಇಪ್ಪತ್ತು ದಿನಾಗ
ಅರಸು ಗೊಳಸು ಇಳಿಬಾದ್ದುಂತೆ
ಹೊರಗ ಬರಬಾರದಂತೆ
ಎಂಥ ಕಾಲ ಬಂದೈತೆ
ಬಾಳ ಸಿಚಿಗಾ ಎಣಿಸೋರು

ಅಂಥ … ನಮ್ಮತ್ತಿ ವಟ ವಟ ಅಂಥಾಳೆ ನೀರನು ತಂದ್ಹಾಕಿರಿ ಅಡುಗೆನ ಮಾಡ್ಕೊಳ್ತೀನಿ

ಅದಕ್ಕೆ ನಾನು ಹೊಟಟೀನಿ
ನೀರೆ ನಾನೇ ತಂದೀನಿ

ಆಗ ಪಡಗ ತುಂಬಾ ತಂದ್ಹಾಕಿದ್ರು ಆಗ ತಂದ್ಹಾಕಿ ಬೇಸ ಅಡುಗೆ ಮಾಡ್ಕಂಡ್ಳು ಆಗ ಮತ್ತಿನ್ನವರ ವರ್ಸ ಮ್ಯಾಗೆ ಕೌದಿ ಹೊದ್ಕೊಂಡು ಕುಂತ್ಕುಡ್ಳು, ಅತ್ತೆ ಬಂದ್ಲು ಮನೆ ಮುಂದೆ ಕುಂತ್ಳು, ಮಕ್ಕಳ ನೋಡದ್ಲು ಯಮ್ಮಾ,

ಏಡೆ ಸಾಲಾಗತೈ ತಮ್ಮಾ
ಅಡಿಗೆ ಮಾಡಾದಾಗಿದೆ
ಯಾಕ ಹುಟ್ಟಿರಿ ನನತಲಿ ಸೈ
ನನ್ನ ಹೆಣ ಯಾಕ ಬಿತ್ತಿರಿ ಸೈ
ನನಗೆ ಎಸುದಿನ ಹುಟ್ಟರಿ ಸೈ
ಎಲ್ಲ ನನ್ನ ನಾನು ಮಾಡಲಿ ಸೈ
ನಿಮ್ಮಂಗೆ ನಾನೇ ದುಡಿದಿಲ್ಲ ಸೈ
ಹೊಲ್ದಾಗೆ ಮಾಡೇ ಬಂದಿನಿ
ಮತ್ತೆ ಇಲ್ಲಿ ನಾನು ಮಾಡ್ಬೇಕ
ಹಂಗರೆ ಬ್ಯಾಡ ಉಪಾಸಿರನ ಸೈ
ಯಾಕ ಹೊಡ್ತಿಸ್ತಿರಿ ನಮ್ಮನ ಸೈ
ಹೆಂಗ ಮಾಡನ ನಾವು ನೋಡನ ಸೈ
ಹೆಂಗ ತಡಿತೈತಿ ಜಲ್ಮ ನಮ್ಮೀಗೆ

ಮುದಿಯಾಕೆ ಅಳ್ತಾಳಂತ ಬಂದ್ಲು ಬಂದು ನೋಡಿದ್ರೆ ಏ ಯಮ್ಮಾ

ನನ್ನ ಸೊಸೆ ಒಳ್ಯಾಕೆ
ಯಮ್ಮೊ – – –
ನೀರು ತಂದು ಏಡೂ ತುಂಬ್ಯಾಳ
ಯಮ್ಮೊ – – –
ಅಡಿಗೆ ಮಾಡೇ ಬಿಟ್ಟಾಳ
ಬ್ಯಾಳೆ ಅನ್ನ ಮಾಡ್ಯಾಳೆ
ಯಮ್ಮಾ
ಯಾಕ ತಣ್ಣೀರು ಮುಟ್ಟಿದೆ ಸೈ
ಯಾಕ ಏರುಸ ಇಳಿದಿದೆ ಸೈ
ಊರೆಲ್ಲ ನಮ್ಮ ಬೈತಾರ
ಯಮ್ಮಾ
ಎಂಥ ಒಳ್ಳೆಗೈದಳ ಸೈ
ಹಿಂಗ್ಮಾಡಿದ್ರೆ ನಮಗೆ ಸಾಕಮ್ಮ ಸೈ
ಹೊಲದಾಗೆ ಮಾಡಿ ಬರುತಿವಿ ಸೈ
ಉಂಡು ಹಂಗೆ ಅರ್ದ ಬಿಡ್ತೀವಿ

ಅಂಥ ಬಾಣ್ತಿ ಒಬ್ಬಬ ಯಮ್ಮ ಅಚೇರು ಪಾವು ತಕಂಡ್ದು ಬಕ್ಕಬಾಯಿ ಹಲ್ಲಿಲ್ಲದರು ಬರಿ ಹುಣಸೆ ಚಟ್ನಿ ತಿಂದು ತಿಂದು ಬಾಯಿ ಹುಳ್ಳುಗೆ ಏನಪ್ಪೋ – – – –

ಪಾವು ಗುಗ್ರಿ ಹೆಂಗೆ ಕೊಡ್ತಿ
ಬಾಯಗ
ಹಲ್ಲಿಲ್ಲಾದ ಹಾಕ್ಯಾನ

ಯವ್ವಾ – – –  ಏನ್ಮಡ್ತಿಯವ್ವ ಯಪ್ಪಾ ತಿಂಗಳಾಯ್ತಲ್ಲೊ ಕೌದಿ ಹೊದ್ಕಿಂಡಿನಿ ಮ್ಯಾಗೆ ಎದ್ದೇಳ್ವದು ಬರೀ ಹುಣಸೆ ಚಟ್ನಿ ಅನ್ನ ನೀಡ್ತಾರೆ ಏನ ರೊಟ್ಟಿ ಕೊಡ್ತಾರ ಹುಳ್ಳಗೆ ಹೋಗೊವದ್ಲು, ಅದು ಯಪ್ಪಾ ಶೆಟ್ಟಿ ಹೆಂಗೆ ಕೊಡ್ತಿ ನನಗೆ ನನ್ನ ಮಗ ರೂಪಾಯಿ ಕೊಟ್ಹೋಗ್ಯಾನೆ ಎಲೆಡಿಕೆಗೆ ಯಪ್ಪಾ ಎಲೆಡಿಕೆ ಇಲ್ದದ್ರೆ ಅಗೆತಲ್ಲೊ ಗುಗ್ರಿ ಹೆಂಗೆ ಕೊಡ್ತೀಯಪ್ಪ ನಾನಾಗ ಮಾಡ್ಕಂತಿನಿ ಯವ್ವ ರೂಪಾಯಿಗೆ ಪಾವು ಎಲೋ – – – ಎಲೆಡಿಕೆಗಿಲ್ಲ ಆಗ ಪಾವು ಹಾಕಲೋ ಎಂಟಾಣೆ ಕೊಡ್ತೀನಿ ಏ ಇಲ್ಲಿಲ್ಲ – – – ನಾನು ರೂಪಾಯಿ ಕೊಟ್ರೆ ಹಾಕದು ಈಗೋ ಎಂಟಾಣೆ ಎಲ್ಲ ಪಾವು ಹಾಕ್ತಿನಿ, ಅಯ್ಯಯಪ – – – ಪಾವು ಹಾಕಲೋ ಎಂಟಾಣೆಗೆ ಎಂತದು ಬರ್ತಾದೆ ಅಂಥ ರೂಪಾಯಿ ಕೊಟ್ಟು ಪಾವು ತಕಂಡ್ಳು ಹಲ್ಲಿಲ್ಲ ಏನಿಲ್ಲ ಹೆಂಗ ತಿನ್ಬೇಕು ನಾಕ ರೊಟ್ಟಿ ಸುಟ್ಕುಂಡ್ಳು ಆಗ – – – ಗುಗ್ರಿ ಆಗ ರೊಟ್ಟಿಗಳು ಒಳ್ನಾಗಿ,

ಒಣಿಕೆ ತಕಂಡೆ ಕುಟ್ಯಾಳು
ಪುಡಿ ಪುಡಿನೆ ಮಾಡ್ಯಾಳು
ಯಮ್ಮಾ – – –
ಬಕ್ಕ ಬಾಯಿಗೆ ಹುಗ್ಯಾಳು
ಅಮ್ ಅಮ್ ಅಂಥಾಳ
ಯಪ್ರೊ ಬೇಸ ಐದಾವ
ಈಗ ಮೂರು ರೊಟ್ಟಿ ತಿಂದಳ ಸೈ
ಬೇಸ ಒಳ್ಳಿಗೆ ಕುಟ್ಟಿಕೊಂಡ ಸೈ
ಹಾ…. ಕನ್ಹ ತಿಂದಾಳ
ಬಿದಿರು ಗುಚ್ಚ ಎಲ್ಲ ಏದ್ದಳ ಸೈ
ಲೇ – – –
ಎದ್ದು ಇನ್ನೂ ನೋಡುರ ಸೈ
ಕೊಡ ರಾಗಿ ಕೊಡತಕಂಡು ಸೈ
ಪಡಪಡ ಪಡ ಬಂದಾಳ ಸೈ
ಬಾವ್ಯಾಗೆ ಇಳ್ದೀ ಬಿಟ್ಟಳ ಸೈ
ಇಳೇ ಬಾಯಗೆ ತುಂಬ್ಯಾಳ ಸೈ
ಪಾಂಟಿಗೆ ಎರೆ ಬಿಟ್ಟಾಳ ಸೈ
ಬಗಲಾಗೆ ಇಟ್ಕಂಡು ಬರ್ತಾಳ
– – – –
ತಿಂಗಳ ಮಕ್ಕಳ ಮುದುಕಿರ ಸೈ
ಅಡಿಗೆ ಮಾತೆ ಬಿಟ್ಟಳ ಸೈ
ಬೇಸ ನೀರು ತರಾಕಹತ್ಯಾಳ ಸೈ
ಕೌದಿ ಹೊದಿಕಂಡು ಕುಂತಾಳ

ಸೊಸೆ ಮಗ ಬಂದ್ರು ಒಳಗೆ ಹೋದ್ರು ಲೇ – – – ಕತ್ತಿ ರಂಡೆ ಹೊಟ್ಟೆಸಲಾಯ್ತು ಮತ್ತೆ ಬಂದು ಎಷ್ಟೊತಾಯ್ತು ತಲೆ ನೀನು ಕುಂತ್ಕಂಡು ಅಡಿಗೆ ಮಾಡಲು ಮವೇಲಿ ಅಯ್ಯೋ, – – –

ನೀನೆ ಬೇಸ ಬೆದ್ರಿಸ್ತಿಯೊ
ನಿನ್ನನೆ ನಾನೆ ಮಾಡಿನಿ
ನಿನ್ನನೆ ಬದುಕೆ ಮಾಡಿನಿ
ತಿರುಗೊಂದು ಬದುಕೆ ಮಾಡ್ಯಾನ
ನೀನು ಕಟ್ಟೆಕೆ ಒಡೆ ಒಡೆಯನು
ನಾನು ಅಡುಗೆ ಮಾಡುನೋಡಯ
ನೀನು ನೀರು ತಕಂಡು ಬಾರಯ್
ನಾನು ರೊಟ್ಟಿ ಸುಡುತೇನು ನೋಡರ
– – –
ಹೆಂಗಸ್ರು ಗಂಡಸ್ರು ಅಡುಗೆ ಮಾಡ್ದಂಗ
ಮಾಡದಿದ್ರೆ ಉಂಬದೆಂಗರ
ಇಬ್ರು ನಾವೇ ಉಂಬೋರ
ಇಬ್ರು ನಾವು ಮಾಡಬೇಕು
ತಾವೆ ಬಂದೆ ವಣ್ಣಯ್ಯ

ಹನಕ ಅಂತ ಮನೆಗೆ ಬಂದ್ರ ಬಂದ್ರೆ – – –

ಆಗಲೇ ಅಡಿಗೆ ಅಗೈತೊ.
ಅಯ್ಯೋ
ಬಂಗಾರಂತ ಅತ್ತಿ ಆಕೆನ
ಸಾಯೋ ಮುದುಕಿ ನೋಡರ ಸೈ
ಸತ್ತೋದಳಂತ ತಿಳಿಕಂಡರ ಸೈ
ತಿಂಗಳ ಉದ್ಯ ನೋಡರ ಸೈ
ಎಂಟು ದಿಸ ಅನ್ನ ತಿಂದಿಲ್ಲ ಸೈ
ಎಂಟು ದಿಸ ನೀರು ಕುಡ್ದಿಲ್ಲ ಸೈ
ಅಂಥ ಮುದುಕಿ ನೋಡುರ ಸೈ
ಇವತ್ತು ಅಡುಗೆ ಮಾಡ್ಯಾಳ ಸೈ
ಹಿಂಗ ಮಾಡಿಬಿಟ್ಟರೆ ನೋಡರ ಸೈ
ನಮ್ಮತೆ ಪಾದ ತೊಳೆತೇನ
ಎಪ್ಪಾ – – –
ಹೊಲದಕೆ ಹೋಗಿ ಮಾಡಿಬರ್ತಿವಿ ಸೈ
ಹಂಗೆ ಉಂಬುದ ನೋಡುರ
ಹಂಗೆ ಅಡ್ಡ ಬಿಳ್ತೀನಿ
ಎಲ್ಡೆ ಕೋಣೆ ಒಳುಗುರ
ನಾಲ್ಕು ಸೇರು ಗುಗ್ರಿ ಅಗೆವ
ಹತ್ತು ಸೇರು ಕಾಳು ಬಂದವ
ಹತ್ತು ರೂಪಾಯಿ ರೊಕ್ಕ ಬಂದೈತೆ

ಹಾ – – – ದೇವರು ಇಷ್ಟು ಕೊಟ್ರೆ ಸಾಕು ಬಿಡಪ್ಪ ಅಂಥ ಸಾವುಕಾರ ಎಲ್ಲಪ್ಪ ಕ್ವಾಂಮುಟ್ರಾತ ಇರಿಶೆಟ್ಟಿ ಅಂಗಡಿಗೆ ಬಂದ ಏನೋ ಅಳಿಯ ಅಂದ, ಏನ ಮಾವ ಅಂದ ಏನಿಲ್ಲಪ್ಪ ಈಗ ಹತ್ತು ರೂಪಾಯಿ ತಗೊ ಈಗ ಹಿಂದಿನ ನಾಕು ರೂಪಾಯಿ ಮುರಿ ಹಾಕ್ನೊ ಈಗಿನ ಉಪ್ಪು ಮೆಣಸಿನ ಕಾಯಿಗೆ ಅವೊಂದು ಎರ್ಡ ರೂಪಾಯಿ ಮುರಿಹಾಕ್ಕೊ ಏನಪ್ಪ – – –  ಈಗ ನನಗೆ ಅಕ್ಕಿಬ್ಯಾಳೆ ಗೋದಿ ನುಚ್ಚು ಏಲ್ಲಾ ಏಣ್ಣೆ ಕೊಡಬೇಕು ಅಂದ ತಗೊ ಮಾವ ಅಂದ ಎಲ್ಲಾ ಕೊಟ್ಟ ಈ ಜ್ಯೋಳ ತಿನ್ನತಾರ (ತಿನ್ತಾರ) ತಿಂಬೊದಿಲ್ಲ ಈ ಸಜ್ಜೆ ತಿಂಮ್ತಾರ ತಿಂಬೊದಿಲ್ಲ ಮಾರ್ವಡಿ ಹುಡುಗುರು ಈ ನವಣೆನಾರ ಊಟ ಮಾಡ್ತಾರ ಊಟ ಮಾಡಿದಿಲ್ಲ ಗೋದಿ ರೊಟ್ಟಿ ಹಾಲು ಸಕ್ಕರೆ ಅನ್ನ ಊಟ ಮಾಡಾದು ಅಂಥ ಜ್ಯೋಳಾಲ್ಲ ಹಾಕಿದ,

ಅಕ್ಕಿ ಬ್ಯಾಳಿ ತಂದಾನ
ನೀರ ಬಾಗಿ ಎಲ್ಲಾನ
ಎಲ್ಲಾ ತಗಂಡು ಬಂದ

ಏ – – – ನೀನು ಅಡುಗೆ ಮಾಡು ಈ ಹುಡುಗುರನ ನಾನು ಮೈತೊಳಕಂಡ ಬರ್ತಿನಿ ಬಾಯಿಗೆ ನೀರು ಕಾಯ್ಸ ಹಾಕಬೇಕಂದ್ರೆ ಈ ಮೂವರು ಹುಡುಗುರಿಗೆ ನನಗೆ ಯಾವಾನ ಹಾಕ್ತಿಯ ನೀನು ಗ್ಯೋಡೆ ಹಿಡಕಂಡು ಮೇಲೆ ಎದ್ದೇಳ್ತಿಯ ನಾವು ಬರೊತ್ತಿಗೆ ಅನ್ನ ಬ್ಯಾಳೆ ಮಾಡು ಹುಡುಗುರು ಹೊಟ್ಯಾಸಕಂಡರೆ ಅಂಬೊತ್ತಿಗೆ ಅಷ್ಟಾರಾಗಲಿ,

ಹುಡುಗುರು ಕರಕಂಡ ಬಂದಾನ
ಯಪ್ಪೊ – – –
ತಾಯಿ ತಂದೆ ಇಲ್ಲ ಹುಡುಗುರು
ಅವ್ರು ನೋಡದ್ರೆ ಕ್ವಾಂಮುಟ್ರು ಇದಾರ
ಇವ್ರು ನೋಡದ್ರೆ ಮಾರ್ವವಾಡಿ ಅದರ

ಹುಡುಗುರು ಕರಕಂಡು ಬಂದ, ಬಂದು ಆಗ ಏನ ಮಾಡ್ದ, ಏನಪ್ಪ ಹುಡುಗುರ ನೀವು ಬಡ್ಗಾನ ಯಾರನ ವಾರಿದ್ರು ಬಡ್ಗಾನ ಬಾವ್ಯಗೆ ದಬ್ಬಿದ್ರು ಮುಳುಗಿ ಹಂಗೆ ನೀರು ಕುಡ್ದು ಸತ್ತೋತಿರಿ,

ನಿಮಗೆ ಈಜಲು ಕಲಸಿ ನೋಡಾರೆ
ಬೇಸ ಬ್ಯಾಟೆ ಎರ್ಸಿನಿ
ಎಲ್ಡು ದಿನ ನಿನ್ನ ಕಲ್ಸಿನಿ
ಮೂರು ದಿನ ನೀ ಕಲಿತಿರಿ

ನಮ್ಮಗೇನು ಗೊತ್ತು ಶೆಟ್ಟಿ ಅಂಬೊತ್ತಿಗೆ, ಸರಿ ನಾನು ಕಲ್ಸಿತಿನಪ್ಪ ಅಂದ ನೀರು ಮ್ಯಾಲೆ ಮಲಗಿಸಿ ಬಿಟ್ಟ ಒಬ್ಬೊಬನ ನಡು ಹಿಡಿಕಂಡ,

ಇತ್ತ ಕಾಲೇ ಬಿಟ್ಟಾಬಿಟ್ಟಾರ
ಒಂದೆ ಕೈ ಬಿಟ್ಟಾನ
ನೀರ ಮ್ಯಾಲೆ – – –
ಯಮ್ಮ ಹಿಂದಿನ ಕಾಲೆ ಬಿಡತಾನ
ಮುಂದಿನ ಕೈಲೆ ಹೊಡಿತನ
ಈಚಲು ಕಲಿತರೆ ಹುಡುಗುರು
ನೀರ ಮ್ಯಾಲೆ
ಮೂವರ ಗಿನ್ನ ಕಲಿಸ್ಯಾನ
ತಾವು ಸ್ನಾನ ಮಾಡಿಕಂಡನ
ಮೂವರ ಕರಕ್ಕಂಡು ಬಂದನ
ಅಡುಗೆ ಮಾಡೆ ಬಿಟ್ಟಳ
ಬರ್ರೆಪ್ಪ ಊಟ ಮಾಡನ
ಆಗ ಅನ್ನ ಇಟ್ಟನ
ಜಯ್ಗಿ ವಂದೆ ವಾಕಿನ
ಮಸುರು ವಂದೆ ವಾಕಿನ

ಏನಪ್ಪ ಹುಡುಗರಾ ಊಟ ಮಾಡ್ರಿ, ತಾಯಿ ತಂದೆ ಇಲ್ಲದ ಮಕ್ಕಳು ಅಂದರೆ ಸಾವುಕಾರ ಎಲ್ಲಪ್ಪ ಕ್ವಾಂಮುಟ್ರಾತ ಆತಂದೊಂದು ಕುಲ ನಮ್ಮೊಂದೊಂದು ಕುಲ ಆಗ ಚಿಕ್ಕ ಜಾತಿ ಅದ್ರೆನಾ ನಮ್ಮನ ಹಿಡಿಕಂಡನಲ ನಮ್ಮ ಕಕ್ಕ ನಮ್ಮಪ್ಪ ಹಿಂದೆ ಹುಟ್ಟೋನು ಸಿದ್ದೋಯಿ ದೊಡ್ಡವನು ಮಕ್ಕಳಿದವನು ಐದುವರ್ಸದಾಗ ಬಂದು ಕೈಕಾಲು ಸೇದಗ್ಗ ಹಾಕಿ ಕಂಬಕೆ ಕಟ್ಟಿ ನಮ್ಮಾಸ್ತಿಯಲ್ಲ ಒಯ್ದು ಬಿಟ್ಟ ಬೆಳ್ಳಿ ಬಂಗಾರೆಲ್ಲ, ಈತ ಕುಲದವನಲ್ಲ ಸಲದವನಲ್ಲ,

ಈತ ನಮ್ಮನ ಹಿಡದಾನ
ಈತ ನಮ್ಮಗೆ ಐದನಾ
ಅಪ್ಪ ಅಮ್ಮ ಅಂತರ
ಹುಡುಗುರು ನಾಡ ಇಲ್ಲದ
ಸಾವುಕಾರ ಎಲ್ಲಪ್ಪ ಅಂಬೊದಿಲ್ಲ
ಕ್ವಾಂಟ್ರಾತ ಅಂಬೊದಿಲ್ಲ
ಯಪ್ಪ ಯಪ್ಪಾ ಅಂತಾರಾ
ಯಮ್ಮ ಯಮ್ಮ ಅಂತರ
ಅವ್ರು ಮಕ್ಕಳು ಮಕ್ಕಳು ಅಂತರ
ಯಾರನು ಕೆಳಿದ್ರೆ ನೋಡುರ
ಯಾರ ಮಕ್ಕಳು ಸವುಕಾರರ
ನನ ಮಕ್ಕಳು ಅಂದನೆ ಮೂವರ
ಮೂವಾರಾಗಿ ನೋಡುರ
ಮಜ್ಜಣಾಗದ ಜೋಪಾನ ಮಾಡ್ತಾನ
ಬೇಗಿ ನಾಗೆ ಜೋಪಾನ ಮಾಡ್ತಾನ
ರೀತಿಲಿ ಅಣ್ಣಯ್ಯ
ಮೂರೊಪ್ಪತ್ತಗೆ ಹಿಡುತನ
ಹುಡುಗುರು ಜೋಪಾನ ಮಾಡ್ತಾನ

ಗುಗ್ರಿ ಯಾಪಾರ ಮಾಡಿ ಮಜ್ಜಾಣಾದಾಗ ಊಟ ಇಡ್ತಾನೆ. ಮುಂಚಾಲಿ ಉಪ್ಪಿಟ್ಟು ಮಾಡ್ತಾನೆ. ಆಗ ಬೇಗಿನಾಗ ಮತ್ತೆ ಅಡಿಗೆ ಮಾಡ್ತಾನೆ. ದಿನಾನು ಹತ್ತು ಸೇರು ಅಲಸಂದೆ ಬರಿ ಅಲಸಂದೆ ಮಾರ್ತಾನೆ. ಮಾಸಾಲೆ ಕಲ್ಸಾದು ಉಪ್ಪುಕಾರ ಹಾಕೋದು ಮಾರಾದು ಏನ ಪಾವುಗೆ ರೂಪಾಯಿ ಎಂಟಾಣೆ ಬರ್ಲಿ ಬಿಡು ಲಾಭ. ಆ ಊರಾಗೆ ಮಾಡೊರಿಲ್ಲ ಬರಿ ಅಂಗಡಿಗಳೊ ಇಟಕಂಡರೆ ಈ ಗುಗ್ರಿ ಯಪಾರ ಮಾಡಾರಿಲ್ಲ ಅಂಥ ಆಗ ಗುಗ್ರಿ ತಗುಬಂದ ಹಂಗಾಗಿ,

ಒಂದೆ ತಿಂಗಳ ಮಾರ್ಯಾನ
ಎಲ್ಡ ತಿಂಗಳ ಮಾಡ್ಯಾನ
ಹುಡುಗುರ ಜೋಪಾನ ಮಾಡ್ಯಾನ
ಗುಗ್ರಿ ಯಾಪಾರ ಮಾಡ್ಯಾನ
ಮುನ್ನೂರು ಕಲಿಟ್ಟನ
ಮೂನ್ನೂರು ಕಲಿಟ್ಟಾರ

ಅಲಸಂದಿ ಮಾರಿ ದಿನಾ ಹತ್ತು ಸೇರು ಮಾರಿ, ಬೈಗ್ನಾಗೆ ಮುಂಜಾನೆ ಬೈಗ್ನಾಗೆ ಮುಂಜಾನೆ ಮಂದಿ ಬರ್ತಾರ ಗುಗ್ರಿ ಯಪಾರಾಗತೈತೆ, ಹಂಗ ಮಾರಿ ಎಲ್ಡೆ ತಿಂಗಳಿಗೆ ಹುಡುಗುರು ಮೂರೊಪ್ಪತ್ತು ಊಟ ಮಾಡ್ಸಿಕಂಡ ಮತ್ತೆ ಅತ್ತ ರೊಕ್ಕ ತೀರ್ಸಿಕಂತ ಮೂನ್ನೂರು ಕಲಿಟ್ಟಿದ ಎಲ್ಡೆ ತಿಂಗಳಿಗೆ ಗುಗ್ರಿ ಮ್ಯಾಲೆ ಮುನ್ನೂರು ತಕಂಡು ಅಳಿಯತಲಿ ಬಂದ ಏನಪ್ಪಾ,

ಮೂನ್ನೂರು ಯಪಾರ ಕೊಡಪ್ಪ
ನನಗೆ ಬ್ಯಾಡ ದುಡ್ಡು ಯಾಪಾರ
ಅಯ್ಯೋ ಸಹುಕಾರ ಎಲ್ಲಪ್ಪಾಂದ್ರೆ
ನ್ಯಾಯ ಪೈಸೆ ಸಾಲ ಬೀಳೋನಲ್ಲ

ಏನ್ರಿ ಆಗ ತೊಗೊರಿ ಈ ಕಾಲಕ್ಕೆ ಕೆಟ್ಟ ಬಂದೀಯ ಮಾವ ನಾ ಸುಮ್ನೆ ಕೊಡ್ತಿನ್ರಿ. ಏ ಸುಮ್ಮನೆ ಬ್ಯಾಡ ಮುನ್ನೂರು ತಕಂಡ ಮೂನ್ನೂರಕ್ಕೆ ಎಷ್ಟು ಬರ್ತಾದು ಅಷ್ಟು ಯಾಪಾರ ಕೊಡು, ನನಗೇನು ಬ್ಯಾಡ ಎಲೆ, ಅಡಿಕೆ, ಕಟ್ಟಿಪುಡಿ, ನಸ್ಯ ಪುಡಿ,

ಇಷ್ಟೆ ನನಗೆ ಕೊಡಪ್ಪ
ಇದೆ ಯಾಪಾರ ನೋಡಪ್ಪ

ಸರಿಬಿಡಾಂತ ಮೂನ್ನೂರು ಯಾಪಾರ ತಕಂಡಬಂದ ಅಂಗಡಿ ಇಟ್ಟಿದ ಲೇ- – –

ನೀನು ಅಂಗಡಿ ಯಾಪಾರ ಮಾಡಲಿ
ನಾನು ಗುಗ್ರಿ ಯಾಪಾರ ಮಾಡ್ತೀನಿ
ಇಬ್ರು ಯಾಪಾರ ಮಾಡಿದ್ರೆ
ತಿಂಗಳಗೆಲ್ಲ ನೋಡುರೆ
ಐನೂರು ಕಲ್ತಿಡುತಿನಿ ನೋಡವ
ಅಂಗಡಿ ಯಪಾರ ಮಾಡ್ತಾನ
ಗುಗ್ರಿ ಯಪಾರೆ ಮಾಡ್ತಾನ
ಹಂಗ ಹಿಂಗ ಮಾಡ್ಯಾರೆ
ಮೂರೇ ತಿಂಗಳ ಮಾಡ್ಯಾರೆ
ಮೂರೇ ತಿಂಗಳ ನೋಡುರ
ಸಾವ್ರ ರೂಪಾಯಿ ಕಲ್ತಿಟ್ಟರ
ಸಾವ್ರು ರೂಪಾಯಿ ಕಲಿಟ್ರು

ಏನ್ಮಾಡ್ಡ ಊರಾಗ, ಬೆಳ್ಳಗಾತದಂತ ಈಗಲೇ ದೊಡ್ಯಾಪಾರ ತರಬಾರ್ದು ಉದ್ರಿ ತರ್ತೀನಿ ಎಲ್ಲ ನನಂಗಡಿಗೆ ಬರಾಂಗೆ ಮಾಡ್ತೀನಿ. ಈಗ ಮನಿ ನನ್ನ ಕಡೆ ಮಾಡ್ಕಬೇಕು ಅಳಿಯಾಗಲಿ ಯಾರಾಗಲಿ ಆತನ ಮನೆಯಾಗ ನಾನು ಉಣ್ಣಬೊದು ನನ್ನ ಮನಿಯಾಗ ಆತ ಉಣ್ಣಬೊದು ಏನಪ್ಪಾ ಅಳಿಯ,