ಮೂರಂಕಣ ಮನೆಲಿ
ಯಪ್ಪ ಖರೀದಿ ಕೊಡು ತಗತ್ತಿನಿ
ನಿನ್ನ ಕೇಳೊ ಮಾವಯ್ಯ
ಸಾಯೋ ತನಕ ಇರು ಮಾವಯ್ಯ
ಮನೆ ಬಾಡಿಗೆ ಕೇಳದಿಲ್ಲರ

ಹಂಗಪ್ಪ ಅಳಿಯ ನಿನ್ನ ಮನೆಗೆ ನಾನುಣ್ಣಬೊದು ನನ್ನ ಮನೆಗೆ ನೀನುಣ್ಣಬೊದು. ನೋಡಪ್ಪಾ ನಾನು ಹಂಗ ಬಾಡಿಗೆ ಬೇಕಿಲ್ಲಂದ್ರೆ ಬ್ಯಾಡ ಕೊಡ್ತೀಯ ಬಾಡಿಗೆ ಕೊಡು. ಇಲ್ದಿದ್ರೆ ಆಗ ಮಾನಿಮಾರು ಮಾವ ನೋಡಿ ನೋಡಿ ಮಾವ್ನತಲಿ ನಾನೆಂಗೆ ತಗಂಡ್ಲಿ ಮನೆ ಬಾಡಿಗೆನ. ಮತ್ತೆ ನೋಡಾಪ್ಪ ಮನಿ ಮಾರ್ಬಿಡು ಅಂದ್ರೆ ಸರಿ ಬಿಡು ಮಾವಯ್ಯ ಎಷ್ಟಕ್ಕೆ ಕೊಡ್ತಿಯಾಂದ ಸಾವ್ರು ರೂಪಾಯಿ ಮಾವ, ನಾನು ಅಳಿಯಲ್ಲ ಮಾವ ಮೂರಂಕಣಕ ಮನೆಲ್ಲಿ ಐದೆಂಕಣ ಮನೆಲ್ಲ ಮೂರಂಕಣದ ಮನೆ ಸರಿ ಮಾವ ಸಾವ್ರು ರೂಪಾಯಿ ಕೊಟ್ಟು ತಗ. ಹಂಗಲ್ಲ ಇಲಿತಗಂಡ್ರೆ ಹೆಂಗೆ ನಾನು ಕೊಟ್ಟೆ ನೀನ್ತುಗಂಡೆ ಹಿಂದೆ ಗಡೆ ಹಂಗಲ್ಲ.

ಅಲ್ಲಿ ಗೌರ್ರಮೆಂಟ್ ಗೆ ಹೋಗಾನ
ಅಲ್ಲಿ ನಾನೇ ಕೊಡ್ತೀನಿ

ಮೋಸ ಇನ್ನ ಬ್ಯಾಡರ
ಮೂರು ಬಜಾರ್ದ ಐತರ
ಒಳ್ಳೆ ಯಾಪಾರ ಆತದ
ನೀನು ಸಾವ್ರು ರೂಪಾಯ ಕೊಡಾಲೆ
ಸಾವ್ರು ಹೈನೂರು ಕೊಡ್ತೀನಿ

ಅಂಥ ಅಳಿಯನ ಕರಕ್ಕಂಡು ಬಂದ ನೋಡಪ್ಪಾ ನಿನ್ನ ಅತ್ತೆಗೆ ಆಗಲಿ ನಿಮ್ಮ ಮಾವಾಗ್ಲಿ ನಿನ್ನ ಹೆಂಡ್ತಾಗ್ಲಿ ಈಗ ಎದುರು ಬರ್ಯಾದ್ದೂ, ಈಗಲೇ ಹೇಳಿರ್ತಿನಿ ಅಂದರೆ ಯಾರ್ದೇನಲ್ಲ ನಂದ್ರೆ ಸಾವ್ರು ಐನೂರು ಕೊಟ್ಟ ಆಗ ಹೆಬ್ಬಟ್ಟು ದಸ್ಕತ್ತು ಹಾಕ್ದ. ಅಲ್ಲೇ ಕೊಟ್ಟ ಕೊಟ್ಟು ಇನ ಬಂದ. ಬಂದು,

ಎಲ್ಡೆ ಸಾವ್ರು ನೋಡಣ್ಣ
ಯಾಪಾರ್ಕಾಗಿ ಇಟ್ಟಾನ

ಊರು ಬಿಟ್ಟು ಊರಿಗೆ ಬಂದಾನೆ
ಬರೆ ಕೈಲಿ ಬಂದಾನ
ಕ್ವಾಂಟ್ರಿ ಹೆಂಗೆ ಸಹುಕಾರಾದನ

ಬರ್ಯೆಪ ಬರ್ಯೆಪ್ಪ ಇನ್ನರ
ಹಳೇ ಅಂಗಡಿ ಹೋಗಬ್ಯಾಡಿರಿ
ರೂಪಾಯಿ ಗಿನ್ನ ನೋಡುರ
ಐದಡಕೆ ಕೊಡ್ತಿನಿ
ಆಗ ಹತ್ತೆಲೆ ಕೊಡ್ತಿನಿ
ಈಟು ಕಡ್ಡಿಪುಡಿ ಕೊಡ್ತಿನಿ
ಈಟು ನಸಿಪುಡಿ ಕೊಡ್ತಿನಿ
ಬೊಂಬಾಯಿ ನಸಿ ಪುಡಿ ನೋಡುರ
ಪಲಕೊಡಾ ಹೋಗದಿಲ್ಲರ

ಬಂದರಿಗೆಲ್ಲ ಈತಾನ
ಅವ್ರು ಕೊಡು ತಿಂದರೆ
ಹೊಡ ಅಂಗಡಿ ಒಳ್ಳೊ ಹೋದರೆ
ನಾ ಬೇಸ ಕೊಡ್ತಾರ
ಆರಡಿಡಗೆ ಕೊಡ್ತಾರ

ಯಮ್ಮಾ ಈಟು ಕಡಿಪುಡಿ ಪಟ್ನ ಬೊಂಬಾಯಿ ನಸಿಪುಡಿ ತಲೆ ಝಮ್ ಅಂತೈತೆ ಹೇ-

ಹಳೆ ಅಂಗಡಿ ನೋಡಾಲೆ
ಬತ್ಲು ಹೋಗೆ ಬಿಟ್ಟಾರ
ಮೂರು ಎಲೆ ಕೊಟ್ತಾರ
ಎಲ್ಡ ಅಡಕೆ ಕೊಡ್ತಾರ

ಹಳೆ ಅಂಗಡಿ ಬಿಟ್ಟಾರ
ಹೊಸ ಅಂಗಡಿಗೆ ಬತ್ತಾರ
ಮುಂಜಾಲೆ ಎದ್ದೆ ಬಿಟ್ಟಾನ
ಹೆಂಡ್ತಿನ ಅಡಿಗೆ ಮಾಡಂತನ
ಅಂಗಡಿ ಒಳಗೆ ಹೋದಾನ
ಯಾವಾರ ಮೂರ್ಗಂತಾತದೊ
ಹೆಂಡ್ತಿ ಅಡಿಗೆ ತಾಯರ್ಮಾಡ್ತಾಳ
ಮತ್ತೆ ಅಂಗಡಿ ಮ್ಯಾಲೆ ಕೂರ್ಸ್ಯಾನ
ಗುಗ್ರಿ ಪುಟ್ಟೀ ಎತ್ತನ

ಮಸಾಲೆ ಗುಗ್ರ ಬಾರಲೆ
ತಿಂದಂಗೆಲ್ಲಾ ಬರಿತೀರಿ

ಬ್ಯಾನೆಲ್ಲಾ ಇಳುದೊತೈತೊ
ಮಸಾಲೆ ದೊಳಗೆ ಹಾತೈತೊ
ರುಚಿ ಕಂಡಂಗೆಲ್ಲಾನೆ
ನೀವೆ ತಿರುಗೆ ಬರ್ತೀರಿ
ಇತ್ತ ಗುಗ್ರಿ ಯಾಪಾರ ಮಾಡಕ್ಯಾಂಡನ
ಮತ್ತೆ ಬಡುವ್ರಿಗೆ ಹೇಳ್ತಾನ
ಹೇ– – –
ಎಲ್ಡ ಪಲ್ಲ ಜೋಳ ಐದವ
ಕರಿದಿ ನನ್ಗೆ ಕೊಡ್ತೀರ
ಗಗ್ಗುರಿ ಗ್ಯಾಕ ಹೋಯ್ತಿರಿ
ಅಲ್ಲೆ ನನಗೊ ಹೆಚ್ಚಿದೆ
ಎಲ್ಡು ರೂಪಾಯಿ ಕಡಿಮೆ ಹಾಕ್ಯಾರೆ

ಲೇಯ್ ಅಲ್ಲಿ ಹತ್ತು ರೂಪಾಯಿ ಹೆಚ್ಚಿದ್ರೆ ಇಲ್ಲಿ ಹತ್ತು ರೂಪಾಯಿ ಕಮ್ಡಿ ಹಾಕ್ಕೋಡ್ತಿನಿ ನಾನು ಬಾಡಿಗೆ ಒಯ್ಯೋಕಲ್ಲ ಬಡುವ್ರು ಯಾಕ ಹೊತ್ಕೊಂಡು ಹೊಯ್ತಿರಿ ಅಂಬೊತ್ತಿಗೆ ಹೌದು ಬಿಡಲೇ

ಅಲ್ಲಿಗೊದ್ರೆ ಬಾಳ ಖರ್ಚಾದ
ಅಲ್ಲೊ ಮಾತು ಬರುತಾವ
ಅಲ್ಗೆ ಇವ ಹೋದನ
ಇಲ್ಲಿ ಗುಂಟಾ ಬರ್ತಾವ
ನನತೆಲಿ ನಾಲ್ಕು ಚೀಲವ
ನನತೆಲಿ ಐದು ಚೀಲವ
ಗುಗ್ರಿ ಯಾಪಾರ ಮಾಡಿಕಂಡರ
ಕಾಳು ಯಾಪಾರ ಮಾಡ್ತಾನ ಇವನ

ತಂದು ತಂದು ಹಾಕೆಮ್ಮುತಾನ
ಒಂದು ಲಾರಿ ಲೋಡು ಮಾಡ್ಯಾನ
ಲಾರಿಗೆಲ್ಲ ನೋಡುರ
ಎಲ್ಡ ಸಾವ್ರು ಲಾಭ ಬಂದೈತೆ
ಇನ್ನ ಇದ್ದ ಕಾಳಿಗೆ
ಇದ್ದ ಗುಗ್ರಿ ನೋಡ್ಯಾರ
ಇತ್ತ ಅಂಗಡಿ ನೋಡುರ
ಮೂರೇ ತಿಂಗಳ ನೋಡುರ
ಐಸಾವ್ರು ಕಲಿ ಇಟ್ಟಾರ

ಎಷ್ಟು ತಿಳುವಳಿಕೈತೆ ಕ್ವಾಂಟ್ರಿಗಿದ್ದ ಯುಕ್ತಿ ಅವ್ನಿಗಿಲ್ಲ, ಆಗ ಉಚ್ಚೆ ಹೊಯಾಕೆ ಪುರುಸೋತ್ತಿಲ್ಲಪ್ಪ ಅವನಿಗೆ ಆಗ ಏನ್ಮಾಡ್ದ ಹುಡುಗುರು ಬೇಸ ಇನ್ನ ಜೋಪಾನ ದಿನ ಹೋಗೋದು ಅವ್ರ ಮೈ ತೊಳಕಂಬೊದು ಬರಾದು ಆಗ ಹುಡುಗುರು ಇದ್ದಿಲ್ಲ ಬುದ್ದಿಲ್ಲ ಊಟ ಮಾಡಾದು ಕುಂದ್ರಾದು ಇಲ್ದಿರೆ ಹಂಗೆ ಮಕ್ಕೆಂಬುದು ಹಂಗಾಗಿ,

ಆಗ ಒಂದುರಸಲ್ಲನ
ಐದು ವರ್ಸ ಸಲ್ಲನ
ಐದು ವರ್ಸ ಜೋಪಾನ
ಮಕ್ಕಳ ಏಟ್ಟೇ ಮಾಡ್ಯಾನ
ಹಂಗಿಂಗೆ ಮಾಡಿ ಅಣ್ಣಯ
ಹತ್ತು ವರ್ಸ ಸಲುವ್ಯಾನ
ಹತ್ತು ವರ್ಸ ಒಳಗೆ ನೋಡ್ಯಾರ
ಎಲ್ಡ ಎಕರೆ ಭೂಮಿಕೊಂಡನ
ಒಬ್ಬ ಸಂಬಳದಾರಿ ನೋಡುರ
ವರ್ಸ ಸಾವಿರ ರೂಪಾಯಿ
ಬಂಡಿ ಎತ್ಗುಳ ಕೊಂಡ್ಕೊಂಡರ
ಸಂಬಳ ಇಟ್ಟು ನೋಡ್ಯಾನ
ಸಾವುಕಾರ ಎಲ್ಲಪ್ಪನ
ಊರಾಗೆಲ್ಲ ನೋಡ್ಬಿಟ್ರು
ಲೇ
ಊರು ಬಿಟ್ಟು ಊರ್ಗೆ ಬಂದೊನು
ಎಷ್ಟು ಸಾವುಕಾರ ಆದಾರೆ
ಭೂಮಿ ಕೊಂಡೇ ಬಿಟ್ಟಾರ
ಎಷ್ಟು ಸಾವುಕಾರ ಆದಲೇ
ಎಂಥ ಮನಿ ನೀನು ಮಾರಿಯೊ
ಎಂಥ ದಡ್ಡನೈದಿಯೋ
ಮೂರು ಬಜಾರದೊಳಗಿರುವುದ
ಎಲ್ಲ ಬಜಾರದ ಕಲಿತಾರ
ಜೋರು ಯಾಪಾರ ಆತೈತೊ
ಏಯ್ – – –
ಯಾಕ ಕೊಟ್ಟಲೆ
ಏಯ್ ಇರಿಶೆಟ್ಟಿ
ನಾನೇನು ಮಡ್ಲಾಪ್ಪ
ನಮ್ಮಾವ ಕೊಡು ಕೊಡಾಂದ ಕೊಟ್ಟಿ
ಆತ ಇನ್ನ ಐನೂರು ಹೆಚ್ಚು ಕೊಟ್ಟ
ಇನ್ನ ಇನ್ನ ಐನೂರ ಬೇಕಂತ
ಈಗೇನಿಲ್ಲ ಹೋಗಿ
ಎದಿರಿಟ್ಕಂಡು ಬಿಡು

ನನ್ನ ಹೆಂಡ್ತಿ ಹೆಸ್ರಾ ಐತಪ್ಪಾ ಹೆಂಡ್ರು ಹೋಗಿ ಕೊಡಾನನ ಮನಿ ಹಿಂದಕಾ ಬಂದನ ಒಳ್ಳೆ ಲಕ್ಷಣ ಮನೆ ಹೊಯ್ತದೆ,

ಮನೆಗೆಲ್ಲ ನೋಡುರ
ಲಚ್ಮಿ ಬಿಟ್ಟು ಇಳಿತಾರ
ಅಂಬೊತ್ತಿಗೆ
ಸರಿಬಿಡಾಂದ
ಮಾವ ಮಾವ ಕೇಳಾನ
ನಮ್ಮತ್ತೆ ಮಾವ ಬೈದರ
ನನ್ನ ಹೆಂಡ್ತಿಗೆ ಕೊಟ್ಟಿದ್ರು
ಇನ್ನ ನಾನು ಕೇಳಲ
ನಿನ್ಗೆ ನಾನೇ ಕೊಟ್ಟೀನಿ

ಏಯ್ – – – ಅವತ್ತು ಕೇಳಿಲ್ಲ ನಿನ್ಗೆ ಹೆಂಡ್ತಾಗ್ಲೆ ಅತ್ತೆ ಮಾವನಾಗ್ಲಿ ಹೆಸ್ರಿದ್ರೆ ಈಗಲೇ ಕೇಳ್ಯಾ ಅಂತ ನಾನಂದಿಲ್ಲ ಯಾರದಿಲ್ಲ ನಂದೇ ಇರಾದಂದೆ,

ನನ್ಗೆ ನೀನು ಕೊಟ್ಟರ
ಗೌರ್ರಮೆಂಟಿಗೆ ಹೋಗ್ಯಾರ
ಅಲ್ಲಿ ಕೊಟ್ರಿ ತಗೊರರ
ಅವ್ರು ಹೇಳಿದ್ರೆ ನನಗಿನ್ನರ
ಮನಿ ಬಿಡಾಂದ್ರೆ ಬಿಡ್ತಿನಿ
ಹತ್ತು ಸಾವ್ರು ಕೊಟ್ರು ಏನುರ
ನಾನು ಮನಿ ಬಿಡನಲ್ಲುರ
ನೋಡು
ಲೇ
ಗೌರ್ರಮೆಂಟಿಗೆ ಹೋದ್ರೆ
ಆವಾಗ ಏನ್ತಿಂತಿದಿಲೇ ಅಂತಾನ
ನಮ್ಮನೆ ಬಡಿತರೆ ನೋಡಾಲೆ

ಅವನು ಎಷ್ಟುದ್ದಾರ ಮಾಡ್ತಾನೆ ಕ್ವಾಂಮುಟ್ರು ಅವುನೆ ಹಿಂದಾಕಿ ಎಷ್ಟು ಬುದ್ದಿವಂತ ನೋಡು ಇಲ್ಲೇ ಕೊಟ್ರಿದ್ರೆ ಹೆಂಗಾನ ಬರ್ಹಾಕಬೊದು ಗೌರ್ರಮೆಂಟಾಲಿ ಕೊಟ್ಟಮ್ಯಾಲೆ ಹೆಂಗೆ ಕೊಡಾಕೆ ಬತ್ತಾದೆ, ಆಗಲಿ-ಹೆಂಗ ಸರಿಬಿಡು ಏಲ್ರು ಅಂಗಂಡಿರೆಲ್ಲ ಕಲ್ತು ಅವನತವ ಹೋದ್ರು, ಎಲ್ರು ಕಲ್ತು ಬಂದ್ರು ಲೇ – – – ಇಲ್ಲಿ ರೂಪಾಯಿಗೆ ನಾಲ್ಕು ಅಡಿಗೆ ಕೊಡ್ತಿಯಾ ನೀನು ಆಗ ಏಳು ಎಂಟು ಎಲೆ ಕೊಡ್ತಿಯಂತೆ ಇಷ್ಟು ಕಡ್ಡಿಪುಡಿ ಇಷ್ಟು ನಸಿ ಪುಡಿ ಕೊಡ್ತಿಯಂತೆ ನಮ್ಮ ಅಂಗಂಡಿಗೆ ಬಂದೋರೆಲ್ಲ ನಿನ್ನ ಅಂಗಡಿಗೆ ಬರ್ತಾರೆ, ಏ ಏನ ಲಾಭ ನಿನಗೆ ಬರತೈತೊ ಅಂದ್ರೆ ಎಲ್ಲಪ್ಪ ಸಾವುಕಾರ ಎಲ್ಲಪ್ಪ ಏನಂತನೆ ನೋಡಪ್ಪ ನೀವು ಅಂಗಡೇರೆಲ್ಲ ಬಂದ್ರಿ ಈಗ ನಾನು ನಾಲ್ಕು ಕೊಟ್ರೆ,

ಎಂಟು ಎಲೆ ಕೊಡಾಲೆ
ನಿಮ್ಮ ತಲಿಗೆ ಬರ್ತಾರ
ಮಂದಿ ಬರಾದು ಬೇಕರೆ
ಬಡುವರು ಕಂತರ ಬೇಕರ
ಎಲ್ಲಾ ರೇಟ ಕಡಿಮೆದ
ಯದರಾಗ ಲಾಭ ಬರ್ತಾದ
ಇದರಾಗ ಲಾಭ ಬರ್ತಾದ
ಗುಗ್ರಿದಾಗ ಲಾಭಬರ್ತಾದ
ಗುಗ್ರಿದಾಗ ಲಾಭ ಇಲ್ಲರ
ಜ್ಯಾಳದಾಗ ಲಾಭ ಬರ್ತಾದ
ಜ್ಯೋಳದಾಗ ಲಾಭ ಇಲ್ಲರ
ಎಲೆಡಿಕೆದಾಗ ಲಾಭ ಬರ್ತಾದ
ಕೊಡೋದು ನಾನೇ ಹಿಂಗಾಲೆ
ನಾನೇ ಕೊಡೋದು ನೋಡಾಲೆ

ಹಿಂಗಾದ್ರೆ ಅಂಗಡಿ ಬಿಡಬೇಕೊ
ಹಂಗೆ ನೀನೆ ಇಡಬಾರ್ದು
ನಿಮ್ಮಪ್ಪಾಗಿ ಬರಬೇಕು
ಮನಿ ದೇವರೆ ಬರಬೇಕು
ಹತ್ತು ಎಲೆ ನಾನು ಕೊಡ್ತಿನಿ
ಕೇಳವಂತ್ರಿ ನೀವು ಇಲ್ಲರೆ
ನಿಮ್ಮ ಅಂಗಡಿ ಬಬ್ರು ಬರ್ಬಾರ್ದು
ಅಂಗಡೆಲ್ಲ ನೀವು ಬಿಡ್ಬೇಕು
ಹೆಂಡ್ರು ಮಕ್ಕಳ ಕೂಲಿ ಹೋಗ್ಬೇಕು
ಎಲ್ಲಾ ನನ್ನ ತಲಿ ಬರಬೇಕು
ಹಂಗಾವಾಗಿನ ಇರಿಸೆಟ್ಟಿನ
ಬಡುವರು ಓಡಿ ಬರ್ತಾರ
ಒಬ್ಬಾಕಿನ್ನನ ಹುಡುಗುನ
ಎಣಾಕ್ಸಿಕಂಡು ಬರಾದು
ಐದು ರೂಪಾಯಿ ಕೊಟ್ಟಳ
ಆಗ ಇರಿಸೆಟ್ಟಿ ತಲ್ಲಿನ
ಆಗ ಎಲ್ಡ ರೂಪಾಯಿ ನೆರೆನರ
ಹಾಕ್ಸಿಕಂಡೇ ಬಂದಳ
ಯಾರ ಅಂಗಡಿನತೆ ಹೋಗರ
ಯಮ್ಮಾ ಇರಿಶೆಟ್ಟಿ ಅಂಗಡಿಗೆ ಹೋಗಿದ್ದೆ
ಲೇಯ್
ಹೊಸ ಅಂಗಡಿಗೆ ಹೋಗಾಲೆ
ಹಳೆ ಅಂಗಡಿಗೆ ಹೋಗಿಯಾ
ಯಪ್ಪಾ
ಅವ್ರು ಕ್ವಾಟ್ರಿಗೆ ನೋಡಪ್ಪ
ಇಟೀ ಎಣ್ಣೆ ಹಾಕ್ಯಾರ
ಹುಡುಗುರು ಕೊಡಕಂತ ನೋಡ್ಯನ
ಎಣ್ಣೆ ತಗಂಡು ಬಾರಾನು

ಅನ್ಯಾಯ ಯಪಾರ ಮಾಡ್ತಿರೊ
ಅನ್ಯಾಯಾಗಿ ಹೋಗೊರೊ
ಅಂಗಡಿಲಿ ಮೋಸ ಮಾಡ್ತಿರಿ
ನಷ್ಟ ಆಗಿ ಹೋಗ್ಯಾರ

ಬಗಲಾಗಿಟ್ಟ ಅಂಗಡಿ
ಹೊಸ ಅಂಗಡಿ ನೋಡಲು
ಯಾರು ನೀನ ನೋಡಲಿ
ಒಳ್ಳೆಣಂಡ್ಗಿ ಇಟ್ಟಾನೆ
ಇನ್ನ ಉಣದಿನ ಹಾಕ್ಕೆಂಡು
ಒಳ್ಳಿಗೆ ಹಾಕಿ ನೋಡಾರೆ
ಹುಡುಗುರಿಗೆ ದಪ್ಪ ದಪ್ಪ ಬಡಿದಾರೆ
ಅಯ್ಯಾಯಮ್ಮ ಯಾಕ ಬಡಿತಿರಿ
ಎಣ್ಣೇ ಹಿಂದುಕಾಕ್ಯಾರೆ
ನಿಮ್ಮ ಅಂಗಡಿಗೊಗ್ಯಾರ
ಹಂಗಾಗಿ ಇರಿಶೆಟ್ಟಿರ
ತಾವು ಕುಲದಲ್ಲಿ ನೋಡುರ
ಇಪ್ಪತೊರ್ಸ ತಡೆದನ
ಹುಡುಗುರು ದೊಡ್ಡೋರಾದರ
ಹುಡುಗುರು ಬೇಸಾಗಾರ

ಕ್ವಾಂಟ್ರಾತ ಬೇಸ ಇಪ್ಪತೊರ್ಸ ಜೋಪಾನ ಮಾಡ್ದ ಆವೊತ್ತಿನ ದಿನದಲ್ಲಿ ಏನಪ್ಪ ಹುಡುಗುರ ನಾನು ಗುಗ್ರಿ ಮಾರಾಕಿ ಹೋಗ್ತಿನಿ ನಾನು ಸಾನ ಮಾಡ್ಕಂಡು ಬಂದು ಆಗ ಊಟ ಮಾಡ್ಕಂಡ ಗಿಡನೆಳ್ಳಗೆ ನಿದ್ರೆ ಮಾಡಿ ಮನೆ ಮುಂದೈತೆ ಸರಿ ಬಿಡಾಂತ ಈ ಹುಡುಗುರೇನ್ಮಾಡದ್ರು ಬೇಸ ಇನ್ನ ಸಾನ ಮಾಡ್ಕಂಡ್ರು ಅಗಸೆ ಮುಂದೆ ಬೇವಿನ ಗಿಡಕೆ ಕುಂತ್ಕಂಡ್ರು. ಆ ಊರಾಗೆ ಯಾರಿದಾರಂದ್ರೆ ಡಾವುಡಿಂಗಲ ಪಟ್ನಾದಾಗ ಅವ್ರ ತಾತ ತಂಗಿನ ಇಟನಿಗೆ ಕೊಟ್ಟರೆ ಇವ್ರ ತಾತಗೆ ಹಿಂದಲು ಕಾಲ

ಆಗ ಬಂದೇವು ಅಣ್ಣಯ್ಯ
ಏನಂತಾಗಿ ನುಡಿತಾನ
ಏನಂತಾಗಿ ನೋಡಮ್ಮ
ಡಾವು ಡಿಂಗಲದಾರಲ್ಲ
ಏಳನನ್ನಾ ಗುರುದ್ರ
ನೀರು ಕೇಳ್ಯಾರ ಹುಡುಗರ
ಯಾವ ದೇಶ ನಿಮ್ಮದೈತಪ್ಪ
ಯಾವ ದೇಸ ನಿಮ್ಮದೈತೆ
ಕುಲಜಾತಿ ಏನಪ್ಪಾ
ಕುಲಜಾತಿ ಏನಮ್ಮ
ತಾಯಿ ತಂದೆ ಹೆಸರೇಳಾರಿ
ಆಗ ಇನ್ನ ಕೇಳ್ಯಾರ
ಏಮತ ಅಂತ ಕೇಳ್ಯಾರ
ಆತನ ಹೆಸರು ಡಾವುಡಿಂಗಲ ಪಟ್ಣದವರು
ಕೇಳೊ ಹೊತ್ತಿಗೆ
ಏನಂತರಾ
ಎಪ್ಪಾ ನಮ್ಮ ಊರು ಯಾಕ ಕೇಳ್ತಿಯಿ
ನಮ್ಮ ಜಾತಿಯಾಕ ಕೇಳ್ತಿಯ
ತಾಯಿ ತಂದೆ ಹೆಸರು ಕೇಳಬ್ಯಾಡ
ತಾತನ ಹೆಸರು ಕೇಳಬ್ಯಾಡವ್ವ
ಎದಕರ ಹುಡುಗರ ಕೇಳಾಲಿ
ಯಾರ ಮಕ್ಕಳಾದರ ಲೋಕಕ್ಕೆ
ಏಯ್ ಏನಂತ ಹೇಳ್ತೀರಿ ಲೋಕಕ್ಕೆ
ಜಾತಿ ಜಲ್ಮ ಹೇಳ್ಬೇಕು
ಕುಲಜಾತಿ ಹೇಳ್ಬೇಕು
ತಾವೇ ಜಾತಿ ಹೇಳ್ಬೇಕು

ಅಂಬೊತ್ತಿಗೆ, ಆಮಾತಿಗೇನಂತಾನ ನೋಡ್ರಿ ಡಾವಡಿಂಗಲದಾರೇ ನಮ್ಮದು ಅಂದರೆ ಈಗ ನಮ್ಮ ಕುಲ ಜಾತಿ ಹೇಳಬೇಕಂದರೆ ನಮ್ಮದು ಇನ್ನ ಲೋಕ ದೊಡ್ಡಯ್ಯ ಕವಲೇಶ ಕೋಟ ನಮ್ಮದು ಕವಲೇಶ ಕವಲೇಶಕೋಟನು,

ತಾಯಿ ತಂದೆ ನಮ್ಮದೈತರ
ಏ ತಾತ ಅಗರ ವೈತಲೈ
ನಮ್ಮವ್ವ ನೀಲಮ್ಮ ಆಹಾ
ನಮ್ಮವ್ವ ಅಜ್ಜಿ
ನಮ್ಮವ್ವ ನೀಲವ್ವರ
ನಮ್ಮ ತಂದೆ ನಾನಂದರಾವ
ನಮ್ಮ ತಾಯಿ ದೋರಕಾಯಿರಾ
ನಾವೇ ಬಂದೀವಿ ನೋಡರ
ನೋಡವ್ವ
ನಮ್ಮ ಕಕ್ಕ ಸಿದ್ದೋಯ
ಇನ್ನ ಚಿಕ್ಕವನು ಕಂಡೇರಾಯ
ನಮ್ಮಪ್ಪ ನಾನಂದರಾವ
ಈಗ ನಮ್ಮ ತಾಯಿ ದೋರತಾಯಿ
ಈಗ ನಮ್ಮ ಹೆಸರು
ಪೀರಯ್ಯ ಸೋಮಯ್ಯ ವೈದಿವಿ
ರಾಜ ಸೋಮಯ್ಯ ಅಂತಾರ
ನಾವು ಹುಟ್ಟಿದ ಮ್ಯಾಲಪ್ಪ
ಐದೇ ವರುಷದಾಗಪ್ಪ
ನಮ್ಮಮ್ಮ ನಮ್ಮಪ್ಪ

ರಾತ್ರಿ ಸತ್ತೋಗ್ಯಾರ, ಆಹಾ ನಾವು ದುಃಖ ಮಾಡಿದರೆ ಊರಾಗಳ ದೊಡ್ಡೋರು ಚಿಕ್ಕೋರು ನೋಡಿ ಮಣ್ಣು ಮಾಡಿಸಿಬಿಟ್ರು. ಆಹಾ ನಮ್ಮಪ್ಪ ನಮ್ಮಮ್ಮ ಸತ್ತೋದ ಮೂರು ದಿವಸಕ ನಮ್ಮ ಕಕ್ಕ ಬಂದು ನಮ್ಮ ಆಸ್ತಿ ಬೆಳ್ಳಿ ಬಂಗಾರ ಎಲ್ಲ ತಗಂಡು ತಗಂಡು ಊರೆಲ್ಲ ರವುಡಿ ಮಾಡ್ಸಿ ಬಿಟ್ಟ. ಆಹಾ ನಾಯಕರ ಕರಕಂಬಂದು ಈಗ ಮಾಡಿಸಿ ತಾವು ಏನ ಮಾಡಿದ ಲೂಟಿ ಮಾಡಿಸಿ ಈಗ ನಮ್ಮನ್ನ ಕೈಕಾಲು ಕಟ್ಟಿ ಕಂಬಕ್ಕೆ ಸೇದ ಅಗ್ಗ ಹಾಕಿದ ಆಸ್ತಿ ಎಲ್ಲ ಹೋದರೆ ಈಗ ದುಃಖ ಮಾಡ್ತಿದ್ದರೆ ಕೋಮಟ್ರಾತ ಸಾವುಕಾರ ಎಲ್ಲಪ್ಪ. ಆಹಾ ಆಲಸಂದಿ ಗುಗ್ಗರಿ ಮಾರ್ತಾನ. ಆಹಾ ಆತ ನಮ್ಮನ್ನ ಕೈಹಿಡತಂದು ಬಂದು ಇಲ್ಲಿಗೆ ಇಪ್ಪತ್ತು ವರುಷ ಆಗೈತೆ ನಮ್ಮನ್ನ ಜೋಪಾನ ಮಾಡ್ತಾನವ್ವ. ಆಹಾ ಭಲೇ ನೀವು ಊರಿಗೆ ಬಂದು ಇಪ್ಪತ್ತು ವರುಷ ಹೌದು ಮತ್ತೆ ಇಪ್ಪತ್ತು ವರಷಲಿಂದ ಎಲ್ಲಿ ಓಡಾಡ್ತಿರಿ. ಆಹಾ. ಎಲ್ಲಿಲ್ಲರಿ ಸಾನ ಮಾಡಿಕೆಂಬಾದು ಮನೆಗೋಗದು ಊಟ ಮಾಡದು. ನಿದ್ರೆ ಮಾಡದು ಆಹಾ ಇಲ್ಲದಿದ್ದರೆ ಕುಂತಕಂಬಾದು ಓಹೋ ಇಷ್ಟೇನ ಇಷ್ಟೇರ್ರೀ ಮತ್ತೆ ಏನನ್ನ ಇದ್ಯೆ ಬುದ್ದಿಯಾ ಇದ್ಯೆಯಿಲ್ಲ ಬುದ್ದಿಯಿಲ್ಲ ಓದಿಲ್ಲ ಶಾಸ್ತ್ರ ಇಲ್ಲ ತಿಂಬೋದು ಕುಂದರೋದು ತಿಂಬೋದು ಕುಂದರೋದು ಆಹಾ ಏ ಕೇಳಪ್ಪಾ ಹಿಂದಲ ಕಾಲದ ಬೀಗಸ್ತಾನ. ಆಹಾ ಈಗ ನೀವು ಅಳಿಯ ನೋಡು,