ಎವ್ವಾ ಎವ್ವಾ ಅಂತಾರೆ
ಕಣ್ಣು ತೆರೆದೇನೆ ನೋಡ್ತಾಳ
ಆಗ ಮಾತಡಕಿಲ್ಲರಾ ಸಯ್
ಎದೆ ಹೊಡೆದೆ ಬಿಟ್ಟಳಾ ಸಯ್
ಮುದ್ಯಾಕಿ ರೊಕ್ಕ ಹೊಯ್ಯತಂತೆ
ರೊಕ್ಕ ಹೊಯಿತಂತೆ
ರಾಗಿ ಹಂಚಿಗೆ ಹಾಕ್ಯರೆ ಸಯ್
ಸಕ್ಕರೆ ಹಾಕಿ ಕಾಸಿ ಬಿಟ್ಟಾರ ಸಯ್
ಜಾಮೂನಾಗ ಹಾಕಿಬಿಟ್ಟಾರ ಸಯ್

ಮುದುಕಿ ಬಾಯಾಗ ಹಾಕ್ತಾರ ರಾಗಿ ಹಾಕಿ ಕಾಯಿಸ್ಯಾರ ಎಡಕಲ್ಲಿದ್ದ ಬಲಕ ಒಳ್ಯಾಳ ಮೆಲ್ಲಕೆ ಎದ್ದೆ ಕುಂತಾಳ, ತಾವೆ ಮುಂದೆ ನೋಡಾರ ಎಡಕಲಿದ್ದ ಬಲಕ ಮೆಲ್ಲಕ್ ಎದ್ದು ಕುಂತ್ಕಂಡಳು, ಎಪ್ಪಾ ಶರಣು ಯಾಕ ಅಳತೀರೊಮೊಮ್ಮಕ್ಕಳೆ ಯಾಕ ಅಳತೀರಿ ಮಕ್ಕಳಾರೆ ಏನಮ್ಮೊ ಸೊಸಿನೋರೆ ನಾನು ಸತ್ತಿಲ್ಲ ಈಗಲೆ ಸಾಯದಿಲ್ಲ, ಆಹಾ ಏ ಎಮ್ಮಾ ಮಾತಾಡುವಲ್ಲಿ ಮಾಡುವಲ್ಲ ನಾವು ಸತ್ತೋಗ್ಯಾಳಂತ ನಾವು ದುಃಖ ಮಾಡ್ತಿದ್ದೀವಮ್ಮಾ ಅಯ್ಯೊ ಕೇಳಮ್ಮ ಮನಿಮುಂದೆ ಬಾಕ್ಲಿ ಹೊಚ್ಚಲಿ ತಟಾದ್ದು ಬರ್ಬೇಕಂತ ಮಾಡಿದ್ದೆ ಹೊಚ್ಚಲಿ ಕಾಲಿಗೆ ತಟದ್ದು ಬಕ್ಕಬಾರ್ಲು ಬಿದ್ದೆ ಆಗಲಿದ್ದ ನಾನು ಕೆಳಗ ಬಿದ್ದಾಕಿ ನಾನು ಮ್ಯಾಕ ಎದ್ದಿಲ್ಲ,

ನೀರು ಹಾಕಿದರೆ ನೋಡಮ್ಮ
ಆಗಲೇ ಎದ್ದೇಳು ತಿದ್ನೆಮ್ಮ
ಗಂಟ್ಲು ಹಾರ್ಕೆಂಡು ಹೋಗಿತ್ತು
ನನಗೆ ನಾನು ಹಿದ್ದಿಲ್ಲ

ಮುದುಕಿ ಗಡ ಗಡ ನಡುಗುತಾಳಪಾ ಈ ಮಕ್ಕಳಿಗೆ ಹೇಳಿದರೆ ಇದ್ದಕ ಹೋತಾರ ಅವರು ಮೂವರು ಮೈ ತುಂಬ ಆಯ್ದಗಳು ಐದಾವ ಅವರು ನನ್ನ ಮಕ್ಕಳನ್ನೆಲ್ಲಾ ನಾಶನ ಮಾಡಿಬಿಡ್ತಾರ, ಆಗ ಹಾಳಾಗಿ ಹೋತಾರಲ್ಲ ನನ್ನ ಮಕ್ಕಳು ಆಹಾ ಹೇಳಬಾರ್ದು ಏನಮ್ಮ ಏನಿಲ್ಲಪಾ ಆಗ ಬಾಕಲಿ ಮುಂದೆ ಬಕ್ಕ ಬಾರಲು ಬಿದ್ದು ಬಿಟ್ಟೆ ಅದಕ್ಕೆಪಾ ನನಗೆ ರಾತ್ರಿ ಹೊಯಿತೊ ಏನೊ ಹೋಯಿತೊ ಅದಕ್ಕೆ ನನಗೆ ಬಂದೈತೊ ಚಳಿಜರ ನನಗೆ ಚಳಿ ಜರ ಬಂದೈತೊ ನೋಡಾರೆ,

ಎಪ್ಪಾ ಎಪ್ಪಾ ಅಂತಾಳ ಸಯ್
ಹೋಯಿತು ಹೋಯಿತು ಅಂತಾಳ ಸಯ್

ಮುದುಕಿ ಹೇಳು ವಲ್ಡು ಬ್ಯಾಗ ಮುದುಕಿ ಹೇಳುವಲ್ಲರೆ ತಾವೇ ಮಕ್ಕಳಿಗೆ ನೋಡರಾ ಆ ಮುದುಕಿ ಕೂಟ ಒದ್ದಾಡಿಕೆಂತ ಅವರು ಐದಾರ ಇವರು ಮೂವರು ಅಣ್ಣಾತಮ್ಮರು ನೋಡಿದರು ಅಣ್ಣಾ ಮುದ್ಯಾಕಿನ ಹೆದರಸಿ ಬೆದರಸಿ ಎಲ್ಡು ಏಟು ಬಡಿದು ಪಾಪ ಎಂಗ ಸಂಪಾದಿಸಿದಳೊ ಆಗ ರೊಕ್ಕೇನು ತಂದೀವಿ ಏಳು ಕೊಪ್ಪದ ಆಸ್ತಿ ತಂದೀವಿ ಅಂದಮ್ಯಾಲೆ ನಾವು ಸುಮ್ಮನೆ ಇಟ್ಟಕಬಾರದು, ಸಾವಿರ ಲಕ್ಷ ಮನಿಗೋಳು ಕಟ್ಟಸಾನಣ್ಣಾ, ಆಹಾ ಏ ತಮ್ಮ ಒಬ್ಬರು ಇಬ್ರದು ಬಂದು ಕಟ್ರಪ್ಪಾ ಅಂದರೆ ಒಡ್ಡರು ಕಟ್ತರಾ, ಆಹಾ ಸಾವಿರ ಲಕ್ಷ ಮನಿ ಮುಗಿಬೇಕಂದರೆ ಎಂಗ ಮುಗಿತೈತೆಲೋ, ಆಹಾ ಏಳು ಸುತ್ತ ಆಕಿ ಮುಗಿಸಬೇಕಂದರೆ ಏಂಗ ಮುಗಿಸಬೇಕಲೊ ಹೋಗಣ್ಣಾ ಎಲ್ಡು ರೂಪಾಯಿ ಕೊಡೋರಿಗೆ ಹತ್ತು ರೂಪಾಯಿ ಕೊಡು ಬರ್ತಾರ, ಆಹಾ ನೋಡಪಾ ವಯಸ್ಸನಲ್ಲಿ ಚಿಕ್ಕೋನು ಬುದ್ದಿಯಲ್ಲಿ ದೊಡ್ಡೋನು ದೊಡ್ಡೋರು ದಡ್ಡರು,

ಕರೆಕಳಿಸಲೊ ತಮ್ಮಯ್ಯಾ
ಇಪ್ಪತ್ತು ಕುಲ ನೋಡರಾ ಸಯ್
ಅರವತ್ತು ಹಳ್ಳಿ ನೋಡರಾ ಸಯ್
ಹಳ್ಳಿ ಊರಿಗೆ ಪತ್ರ ಹಾಕ್ಯಾರಾ ಸಯ್
ಬುಗುಡಿ ಮ್ಯಾಲೆ ನೋಡರಾ ಸಯ್
ಮಾರವಾಡಿ ಶೇಠಿದವರು ಸಯ್

ಏಳು ಸುತ್ತ ಅಗಸ ಕಟ್ಟಿಸ್ತಾರ ಎಲ್ಡು ಬಾವಿನ ತೋಡಿಸ್ತೀವಿ,

ಸಾವಿರ ಲಕ್ಷಮನಿ ಕಟ್ಟಿಸ್ತೀನಿ ಸಯ್
ಬರೋದು ಇದ್ದರೆ ಬರೋರುರಾ ಸಯ್
ಹೆಂಡರು ಮಕ್ಕಳು ಬರುಬೋದುರಾ ಸಯ್
ಇನ್ನ ಅನ್ನ ನಮ್ಮದು ಸಯ್
ಊಟವೆಲ್ಲ ನಮ್ಮದೆ ಸಯ್
ಇನ್ನ ಹಗಲು ರಾತ್ರಿ ಮಾಡದು ಸಯ್
ಹೋಗೊ ಕಾಲಕ ನೋಡರಾ ಸಯ್
ಗಣ ಮಕಳಿಗೆ ಬೊಗಸ ರೊಕ್ಕರಾ ಸಯ್
ಹೆಣ ಮಕ್ಕಳಿಗೆ ಸ್ಯಾರೆ ರೊಕ್ಕರಾ ಸಯ್

ಮುದುಕರಿಗೆ ಹಿಡಿಕಿ ರೊಕ್ಕರಾ ಗಣ ಮಕ್ಕಳಿಗೆ ಇನ್ನ ನೋಡರಾ ಬೊಗಸೆ ರೊಕ್ಕ ಕೊಡತೀನಿ ನೋಡಪಾ ಬಡವರು ಭಕ್ತರು ಹೆಂಡರು ಮಕ್ಕಳು ಬರಬೋದು ಬುಗುಡಿ ಮ್ಯಾಲೆ ನಾವು ಮಾರ್ವಾಡಿ ಶೇಠದವರು, ಆಹಾ ಸಾವಿರ ಲಕ್ಷ ಮನಿಗೊಳು ಕಟ್ಟಿಸ್ತೀವಿ ಏಳು ಸುತ್ತ ಅಗಸ ತಟ್ಟಿಸ್ತೀವಿ ಎಲ್ಡು ಬಾವಿ ತೋಡಸ್ತೀವಿ ಬರೋರು ಆದರೆ ಬರ್ರೀ ಊಟ ಎಲ್ಲ ನಮ್ಮದೆ ಅನ್ನ ಬಟ್ಟೆ ನಮ್ಮದೆ ಈಗ ಊರು ಮುಗಿಯೊ ತನಕ ನೋಡಪಾ ಗಣ ಮಕ್ಕಳಿಗೆ ಬೊಗಸೆ ಹೆಣ ಮಕ್ಕಳಿಗೆ ಬ್ಯಾರೆ ಹುಡುಗರಿಗೆ ಹಿಡಿಕೆ ರೊಕ್ಕ ಕಟ್ಟುಕಳಸ್ತೀವಿ ನೀವು ಹೋಗೊ ಕಾಲಕ್ಕೆ, ಆಹಾ ಅಂದರೆ ಬಡವರೆಲ್ಲ ಪತ್ರ ಬಂದರೆ ಓದಿಕಂಡರು ಲೇ ಬ್ಯಾಸಗೆ ಕಾಲ ಏನು ಬದುಕಿಲ್ಲ ಸುಮ್ಮನೆ ಕಟ್ಟಿಗೆ ಕಡಿಕ್ಕೆಂಡು ಹೋಗಬೇಕು ಎಂಟಾಣಿ ರೂಪಾಯಿ ಬರ್ತಾತೆ ಏನಾನ ಬದುಕೈತ ಹೊಲ್ದಾಗ ನೀರು ವೈದಾವ ಈ ಗುಡ್ಡದಾಗ, ಈಗ ಬೆಟ್ಟದ ಗುಡ್ಡದಾಗ

ನಡಿಲಾರೆ ನಾವು ಹೋಗಾನ
ಎಲ್ಲ ಊರು ಕಟ್ಟಿಸ್ತಾರಂತ
ಊರು ಕಟ್ಟೀರು ತಲ್ಲಿಗೆ ಹೋಗಾನ ಸಯ್
ಇನ್ನ ಎಲ್ಡು ತಿಂಗಳು ಇರಾನ ಸಯ್
ಮಳೆ ಬರೊ ತನಕ ಮಾಡಾನ ಸಯ್
ಮಳೆ ಬಂದ ಮ್ಯಾಲೆ ನೋಡರಾ ಸಯ್
ನಮ್ಮ ಊರಿಗೆ ನಾವೇ ಬರೋಣ ಸಯ್

ಹೊಲಗಳು ಬಿತ್ತಿಕೆಂಬಾನ ನಮ್ಮ ಊರಿಗೆ ನಾವು ಬರಾನಾ ಹೊಲಗಳು ಬಿತ್ತಿಕೊಳ್ಳೋಣಾ ಅಂತ ಮನೆಗಳು ಇದ್ದೋರು ಇಲ್ದೋರು ಬೀಗ ಹಾಕಿ ಹೆಂಡ್ರು ಮಕ್ಳು ಬರ್ತಾರ. ಹಳ್ಳಿ ಊರೋರು ಬರ್ತಾರ ಅವರೆ ಮಕ್ಕಳು ಮೊದಲಾಗಿ,

ಎಮ್ಮ ವಡ್ಡರು ಉಪ್ಪಾರರು ಬರ್ತಾರ
ಬಡವರು ಬಗ್ಗರು ಬರ್ತಾರ
ಮುನ್ನೂರು ಮಂದಿ ಬಾರ್ತಾರ ಸಯ್

ಮೂರೆ ಎಕರೆ ಅಗಲ ನಿಂತಾರ ಜನತೆ ಎಲ್ಲ ನಿಂತಾರ ಮೂನ್ನೂರು ಮಂದಿಬಂದು ಮೂರೆ ಎಕರೆ ಅಗಲಾಗ ನಿಂತಿ ಬಿಟ್ಟರು ಮಂದಿ, ಆಹಾ ಏನ್ರಪಾ ಮಾರ್ವಾಡಿ ಶೇಠದವರೆ ನಮ್ಮನ ಕರೆಕಳಿಸಿರಿ ಎಲ್ಡು ಬಾಯಿ ತೋಡಿಸ್ತೀನಂದಿರಂತೆ ಏಳು ಸುತ್ತ ಅಗಸಿ ಕಸ್ತೀನಂದಿರಂತೆ ಸಾವಿರ ಲಕ್ಷ ಮನಿಗಳ್ ಕಟ್ಟತೀನ ಅದಿರಂತೆ ಅದಕೆ ಎಲ್ಡು ತಿಂಗಳು ಇದ್ದು ಹೋಗಾನಂತ ಬಂದ್ವೆಪಾ ಮಳೆ ಬಂದು ಮ್ಯಾಲೆ ನಮ್ಮ ಊರಿಗೆ ನಾವು ಹೋತಿವಿ. ನಮ್ಮ ಹೊಲಗಳು ನಾವು ಬಿತ್ತಿಕೆಂತೀವಿ, ಆಹಾ ಅಷ್ಟೊತ್ತನಕ ಸುಮ್ಮನೆ ಇರಬೇಕಂತ ನಾವು ಬಂದಿವೆಪಾ ಸರೆಪಾ ಮುಂಚೆಕ ಏನು ಬದುಕು ಮಾಡ್ಯನ,

ಬಾಯಿಗಳು ತೋಡಿಸಿ ಬಿಡಾನ
ಆಗ ಬಾಯಿಗಳು ನೋಡರಾ ಸಯ್
ಐದು ಗಜ ಅಗಲ ಹಾಕ್ಯಾರ ಸಯ್
ಇನ್ನವಾದರೆ ಅಣ್ಣಾಯ್ಯ ಸಯ್
ಆಗ ಗಜ ಉದ್ದಹಾಕ್ಯಾರ ಸಯ್

ಬುನಾದಿ ಮನೆ ಮುಂದೆ ಹಾಕ್ಯಾರ ಬಾಯಿ ಒಂದೆ ಕಡಿಸೋರೆ,

ಗಡಾರಿಲಿದ್ದ ಅಣ್ಣಾಯ್ಯ ಸಯ್
ಗಡ್ಡೆ ಎಬ್ಬಿಸೆ ಬಿಟ್ಟಾರ ಸಯ್
ಚೆಲಿಕಿಲಿದ್ದ ಹೊಡಿಬಡ್ತೀರಾ ಸಯ್
ಅಂಗಳಾರ ಸಿಚ್ಚೆ ಮಾಡ್ಯಾರಾ ಸಯ್

ಇನ್ನೊಬ್ಬರಾಗಿ ತೋಡ್ತಾರ ಒಂದೆ ತಿಂಗಳ ಮುಗಿದೈತೆ ಹಗಲು ರಾತ್ರಿ ಮಾಡ್ಯಾರೆ ಏ ಇಳೆ ಬಾಯಿ ಪಾನಿಬಾಯಿಮಣ್ಣಾ,

ಏಳೇಳು ಹದಿನಾರು ಮನುಷ್ಯರು
ಒಳಕ್ಕವಾಗಿ ತೋಡ್ಯಾರ
ಭೂಮಿ ಒಡೆ ಒಡೆ ಕಂಡರಾ
ನೀರು ಮ್ಯಾಕ ಬಂದಾವ

ಆಗ ನೀರು ಉಕ್ಕೇರಿ ಬಿಟ್ಟವಪ್ಪಾ ಮ್ಯಾಕ ಉಕ್ಕೇರಿದ ಮ್ಯಾಲೆ,

ಏಳೆ ಪಾಂಟಿಗೆ ಇಟ್ಟಾರ
ಇಳಿಬಾಗಿನೆ ಮಾಡ್ಯಾರ
ಇನ್ನೊಂದು ಬಾಯಿ ತೋಡ್ಸ್ತಾರ

ಅದು ಒಂದು ತಿಂಗಳು ಮಾಡ್ಯಾರ ಎಲ್ಡು ಬಾಯಿ ತೋಡ್ಯಾರ,

ಎಲ್ಡು ಬಾಯಿ ತೋಡ್ಸಿ ಮ್ಯಾಲರಾ ಸಯ್
ಅವರು ತಾತನಂತ ನೋಡರಾ ಸಯ್
ಏಳು ಸುತ್ತ ಅಗಸೇರಾ ಸಯ್
ಏಳು ಸುತ್ತ ಅಗಸೇರಾ ಸಯ್
ಏಳು ಸುತ್ತ ಅಗಸಿ ಕಟ್ಟಸ್ತರಾ ಸಯ್
ಅವರೆ ಬಂದೆ ನೋಡರಾ ಸಯ್
ಕೋಲು ತಕ್ಕುಸಿ ಬಿಟ್ಟಾರಾ ಸಯ್
ಸಿಮೆಂಟು ಬಳಸಿ ಬಿಟ್ಟರಾ ಸಯ್
ಕಂಬಗೂಟ ನೋಡಯ್ಯ ಸಯ್
ಅವರು ಮಣ್ಣು ಉಣಿಯಾರ ಸಯ್

ಗೋಡೆ ಸುತ್ತ ಗೋಡ್ಯಾರೆ ಅವರು ನೊಂದೆ ಕಟ್ಯಾರೆ,

ರಾಜಪ್ಪನ ಗುಡ್ಡದಾಗರ ಸಯ್
ಅವರ ಗೋಡೆ ಕಟ್ಯಾರೆ ಸಯ್

ಬೆಲ್ಲವಾಕಿನೆ ಅಣ್ಣಾಯ್ಯಾ ಗೋಡೆ ಕಟ್ಟಿಸಿಬಿಡ್ತಾರ ಸುತ್ತಲ ಗೋಡೆ ಕಟ್ಟಿಸ್ಯಾರೆ,

ಆಗ ಏಳುಕ ಸುತ್ತ ಅಗಸೆಣ್ಣಾ
ಅವರು ಮೂರು ತಿಂಗಳು ಮುಗಿಸ್ಯಾರ
ಆಗ ಇನ್ನ ಕಟ್ಯಾರ ಸಯ್
ಕಟ್ಟಿದ ಮ್ಯಾಲೆ ನೋಡರಾ ಸಯ್

ಮನಿಗಳು ಕಟ್ಟಸಕ ನಿಂತಾರ ಗೋಡೆ ಕಟ್ಟಿದ ಮ್ಯಾಲೆ ಅಣ್ಣಾಯ್ಯಾ ಮನಿಗಳು ಕಟ್ಟಸಾಕ ನಿಂತಾರೆ,

ಅನ್ನ ಮಾಡೆ ಬಿಡ್ತಾರ ಸಯ್
ಆಗ ಒಂದೆ ಪಲ್ಲ ತೆಗೆಯಾದ
ಅವರಿಗಾಗಿ ಮಾಡ್ತಾರ ಸಯ್
ಇನ್ನ ಊಟ ಅವರಿಗೆ ಸಯ್
ಆಗ ಎಲೆ ಅಡಿಕೆ ಅವರಿಗೆ ಸಯ್

ಕಾಯಿ ಕರ್ಪೂರ ಅವರದು ಎಲೆ ಅಡಿಕೆ ಎಲ್ಲ ಅವರದಪಾ ಅವರದು ಆದಮ್ಯಾಲೆ ದಿನಾಲಿ ಎಲ್ಡು ಪಲ್ಲ ಅಕ್ಕಿ, ಆಹಾ ಆ ಜೀವಕ ಏನ್ ಬದುಕು ಮಾಡೋರು ಜೆಗ್ಗಿ ತಿಂದೆ ಬಿಡ್ತಾರಪಾ ಆಹಾ ಅಂಗ ರೀತಿದಲ್ಲಿ,

ಆಗ ಒಂದೆ ಅಣ್ಣಾಯ್ಯಾ
ಒಂಬತ್ತು ತಿಂಗಳಿಗೆ ಅಣ್ಣಾಯ್ಯ
ಹನ್ನೊಂದು ತಿಂಗಳಿಗೆ ಅಣ್ಣಾಯ್ಯ
.. ಆಗ ಸಾವಿರ ಲಕ್ಷ ಮನಿಗಳೊ
ಅವರೆ ಕಟ್ಟಿಸಿ ಬಿಟ್ಟಾರ
ಲೈನ್ ಲೈನ್ ಕಟ್ಟಿಸಿಬಿಟ್ಟಾರ

ಆಗ ಸಾವಿರ ಲಕ್ಷ ಮನಿಗೋಳು ಕಟ್ಟಿದರು ಏಳು ಸುತ್ತ ಅಗಸಿ ಎಲ್ಡು ಬಾವಿ ತೋಡಿಸಿದರಪಾ, ಆಹಾ ಆಗ ಇಗಲಿತ್ತ ಕಟ್ಟಿಸಿದ ಮ್ಯಾಲೆ ಇನ್ನು ಮುಗಿದೋತು ಏಳು ಕೊಪ್ಪರಿ ಆಸ್ತಿದಾಗ ಎಲ್ಡು ಕೊಪ್ಪರಿಕೆ ಉಳಿದೈತೊ ಎಲ್ಡೆ ಉಳಿದೈತೊ ಅಣ್ಣಾ ಈಗ ಅಗಸ್ಯಾಗ ಕುಪ್ಯಾಗೆ ಈಗ ಗಣಮಕ್ಕಳಿಗೆ ಬೊಗಸಿ ನೀಡು ಹೆಣಮಕ್ಕಳಿಗೆ ಸ್ಯಾರೆ ನೀಡು ಹುಡುಗರಿಗೆ ಹಿಡಿಕೆ ನೀಡು ತಮ್ಮ ಈಗ ಇರೋದು ಎಲ್ಡೆ ಕೊಡ ಐತೆ ನೋಡಪಾ ಆಗೈತು ಕಮ್ಮಿ ಆತು ಎಲ್ಲಿದ್ದ ತರಾನ ನಾವು, ಆಹಾ ಸಾಲ ಮತ್ತೆ ಯಾರ ಪಾದ ಇಡಕಂಬಾನ ಅಣ್ಣಾ ನೀನು ಒಂದು ಮಾಡು,

ನಾನು ತರುವೋನು ತರುತೀನಿ ಅಣ್ಣಾಯ್ಯಾ
ಉಸುಲು ಮಾಡಿಕೊಂಡು ಬರತೀನಿ
ಅಣ್ಣಾ ರೊಕ್ಕಕ್ಕೇನು ಸಿಂತಿ ಮಾಡಬ್ಯಾಡ
ಬಾಳ ಬುದ್ದಿವಂತಪ್ಪೊ
ನಿನಗಂತ ಬೆನ್ನು ನೋಡರಾ ಸಯ್

ನನಗಿಲ್ಲ ಜಲ್ಮಕೆ ನನಗಿಲ್ಲ ನೋಡಪ್ಪಾ ಅಣ್ಣಾ ನೋಡ್ದೋರು ದಡ್ಡರಣ್ಣಾ ರೊಕ್ಕೇನನ ಸಾಯತನಕ ತೀರಿಸಬೋದು ಅದರಾಗೇನು ತಪ್ಪಿಲ್ಲ ಇವಾಗ ಉಸುಲು ಮಾಡಿಕೆಂಡು ಬರಾದು ಬೇಕಪ್ಪಾ ತಮ್ಮಾ ಅಯ್ಯೊ ಉಸುಲು ಮಾಡೋದು ಏನು ಗಂಟಿವೊತ್ತಿನಾಗ ಉಸುಲು ಮಾಡಬೊದು, ಆಹಾ ಏನು ಪರವಾಗಿಲ್ಲ ಅಂದರೆ ಕುಪ್ಪೆ ಹಾಕಿದ ಹೆಣ್ಮಕ್ಳೆಲ್ಲ ಒಂದು ಲೈನು, ಆಹಾ ಗಣ್ಮಕ್ಳೆಲ್ಲ ಒಂದು ಲೈನು ಆಹಾ ಹುಡುಗರೆಲ್ಲ ಒಂದು ಲೈನು, ಆಹಾ,

ಆತ ಒಂದೆ ನೋಡುರಾ ಸಯ್
ಗಣ್ಮಕ್ಳಗಿ ಬಗಿಸಿ ನೀಡ್ತಾರಾ ಸಯ್
ಹೆಣ್ಮಕ್ಳಗೆ ಸ್ಯಾರಿ ನೀಡ್ತಾರಾ ಸಯ್
ಹುಡುಗರಿಗೆ ಹಿಡಿಕೆ ಕೊಡ್ತಾನ
ಒಂದುವರೆ ಕೊಡ ಆಗೀತೊ
ಅರ್ಧ ಕೊಡ ಉಳಿದೈತೊ

ಎಪ್ಪಾ ಬಂದಾಗಿಲ್ಲಿಂದ ಊಟ ಹಾಕಿದಿರಿ, ಇಲ್ಲಿಗೆ ಒಂಬತ್ತು ತಿಂಗಳು ಆಯಿತು ನಾವು ಹೋತಿವಪ್ಪಾ ಈಗ ಮಾರವಾಡಿ ಶೇಠದವರೆ ಆಹಾ,

ಈಗ ನೀವು ಊರು ತಣ್ಣಗಿರಲಪ್ಪಾ
ನೀವೆ ಉದ್ದಾರಾಗರಿ
ಎಪ್ಪೊ ಮಳೆ ಬಂದು ನಮ್ಮೂರಿಗೆ ಹೋತಿವಿ
ಹೋತಿವ್ರಿ ಬಡವರು ಅಂದಾರ
ಹೋಗಿ ಬರ್ರೀ ಬಡವರು ಅಂದಾರ ಸಯ್
ಬಡವರು ಹೋಗಾಕ ನಿಂತಾರ ಸಯ್
ಹುಡುಗರು ಹೋಗಾಕ ನಿಂತಾರ ಸಯ್

ಅವರೆ ಒಂದೆ ನೋಡಾರೆ ಬಡವರು ಹೋಗುವಾಗ ಏನಂದ ಅಣ್ಣಾ ಇವರೇನು ಹೋಗಿಬಿಟ್ಟರು ತಾ ಜೀವಕ ಹೋದ ಮ್ಯಾಲೆ ಊರು ಸಪ್ಪಗ ಆಗಿಬಿಡ್ತು, ಆಹಾ ಸಾವಿರ ಲಕ್ಷ ಮನಿಗಳಾಗ ಯಾರು ಇರ್ತಾರ, ಆಹಾ ರಾವು ರಾವು ಅಂತಾತಪ್ಪ ಏಳು ಸುತ್ತ ಅಗಸಿ ಏನಪಾ ತಮ್ಮ ಗೊಲ್ಲರ ಅಡವಿ ನಾರಾಣಮ್ಮತಲ್ಲಿ ಅಡವಿ ಮಾರ್ತಾರ ಗೊಲ್ಲರು ರೊಕ್ಕ ಉಸುಲು ಮಾಡಿಕೆಂಬಂದಿವಿ ಊರ ಕಟ್ಟಿದಿವಿ ಜನಸಂಖ್ಯೆ ಇದ್ದರೆ ಊರು ಚೆಂದ ಮನಸರಿಲ್ಲದ ಚೆಂದ ಏನು, ಆಹಾ ಆಗ ಊರಿಲ್ಲದಲೆ ಚೆಂದಲ್ಲಾಲ್ಲ ಅಂಬೊತ್ತಿಗೆ ನೋಡಪಾ ಬಾ ಅಂದರೆ ಬರ್ತಾರ ಹತ್ತು ಲಕ್ಷ ಹೋಗಂದರೆ ಹೋತಾರ ಇಪ್ಪತ್ತು ಲಕ್ಷ, ಆಹಾ ಈ ಊರು ತುಂಬಿಕೊಂಡು ಮುನ್ನೂರು ಮಂದಿ ಉಳಿಯಂಗ ನಾನು ಕರೆಕಳಸ್ತೀನಿ ಅಣ್ಣಾ, ಆಹಾ ಯಾರ ಬರ್ತಾರಪ್ಪಾ ಮನಿ ಇಲ್ದೋರಷ್ಟೆ ಬರ್ತಾರ, ಆಹಾ ಮನಿ ಇದ್ದೋರು ಬರ್ತಾರ ಏನಪಾ ಸಾವಿರ ಲಕ್ಷ ಮನಿ ತುಂಬಿಸೋದು ಸಾಮನ್ಯವಾ, ಆಹಾ ಅಂದ ಏ ಹುಚ್ಚಣ್ಣಾ ಹೊಸ ಮನಿಕಟ್ಟೀವಿ ಅಂದರೆ ಇದ್ದೋರು ಬರ್ತಾರ ಇಲ್ದೋರು ಬರ್ತಾರ ಆಸೆಗ, ಆಹಾ ಹಳೆ ಗೋಡೆ ಬಿದ್ದೋದರೆ ಏತುಕಂಡು ಸಾಯಿತೀವಿ ಹೊಸ ಮನಿ ಎಷ್ಟನ್ನ ಮಳೆ ಬರಲಿ ಸೋರಂಗಿಲ್ಲ ಕೆಳಗ ಬಿದ್ದರೇನು ಸಾಯಂಗಿಲ್ಲ ಅಂದು ಓಡೋಡಿ ಬರ್ತಾರ, ಆಹಾ ತಮ್ಮಾ ವಯಸ್ಸಿನಲ್ಲಿ ಚಿಕ್ಕೋನು ಆದ್ರೆ ಬುದ್ದಿದಲ್ಲಿ ದೊಡ್ಡೋನಪಾ ಕರೆಕಳಿಸು ನೋದಾನ ಅಂದ ಆಹಾ ಇಪ್ಪತ್ತಳ್ಳಿಗೆ ಅರವತ್ತೂರಿಗೆ ಪತ್ರ ಬರೆದಾಕಿದ ಇದ್ದವರಾಗಿ ಇಲ್ದವರಾಗಿ ಬುಗುಡಿ ಮ್ಯಾಲೆ ಸಾವಿರ ಲಕ್ಷ ಮನಿಗಳು ಕಟ್ಸಿವಿ ಏಳು ಸುತ್ತ ಅಗಸ ಕಟ್ಟಿವಿ ಎಲ್ಡು ಬಾವಿ ಕಟ್ಟೀವಿ.

ಬರೋರು ಇದ್ದರೆ ಬರ್ರೆಣ್ಣಾ
ನಾವು ಐದು ವರುಷದ ತನಕಪ್ಪಾ
ಹೊಲಗುತ್ತ ಕೋಳೋದಿಲ್ಲಪ್ಪಾ
ಮನಿ ಬಾಡಿಗೆ ಕೇಳೋದಿಲ್ಲಪ್ಪಾ
ಸುಮ್ಮನೆ ಮನ್ಯಾಗ ಇರೋದು

ನಾವೇ ಕಟ್ಟಿವಿ ಲೋಕಕೆ ನಾವೇ ಮನಿಗಳು ಕಟ್ಟೀವಿ ಅಂತ ಅಂದು ಬಿಟ್ಟರು ಅಂಬೊತ್ತಿಗೆ ಈ ಜನ ಲೋಕ ನೋಡಿಬಿಡ್ತು ಆಗ ಇದ್ದವರು ಇಲ್ಲದೋರಗೆನ ಈಗ ಇದ್ದರು ಬಾಳ ಆಸೆಪಾ ಇಲ್ದೋರಗಾನ ಇದ್ದೋರು ಬಾಳ ಆಸೆ ಪಾ ಯಾರಿಗೆ ಹೆಚ್ಚು ಆಸೆ ಅಂದರೆ ಕೋಮಟರಿಗೆ ಶ್ಯಾನಬೋಗರಿಗೆ ಗೌಡರಿಗೆ ರೆಡ್ಡೇರಿಗೆ ಆಸೆ ಜಾಸ್ತಿ, ಆಹಾ ಇನ್ನ ಇಟು ಇರಬೇಕು ಇನ್ನಾ ಇಟು ಇರಬೇಕು ಊರ ಸುತ್ತ ನಂದೆ ಊರೆಲ್ಲ ನಂದೆ ಅಂತಾರ ಬಡವೇನು ಇಲ್ಲದ್ದರೆ ಇಷ್ಟೆ ಸಾಕಬಿಡಪಾ ದೇವರು ಕೊಟ್ಟೋದ ಅಂತಾನ ಆಗ ಏನು ಮಾಡಿದರು ಎಲೆ ಇದು ಹಳೆ ಮನೆ ಗಡಗಡ ಅಂದರೆ ಅಂಗೆ ಕುಸೇವು ಬೀಳತೈತೆ ಸತ್ತೊತಿ ಹಳೆ ಮನಿ ಹೊಸ ಮನಿ ಎಷ್ಟು ಮಳೆಬರಲಿ ಗುಡ ಗುಡ ಅಂಬಲಿ ಗಡಗಡ ಅಂಬಲಿ ಆಗ ಮಳೆ ಬೀಳಂಗಿಲ್ಲ ಮಳೆ ನಾವು ಬೀಳಂಗಿಲ್ಲ ನಾವು ಸಾಯಂಗಿಲ್ಲ,

ಆಗ ಬಂದೆ ಅಣ್ಣಾಯ್ಯೆ
ಅವರೆ ಹುಡುಗರು ಬಂದಾರೆ
ಹೋತಿನಂಬೊರಿಗೆ ಅಂತಾರ
ನಾವೆ ಹೋತಿವಿ ಅಂತಾ
ಹೋಗಿ ಬರ್ರಿ ನಿಮಗೆ ಶರಣಪ್ಪಾ
ಎಷ್ಟೆ ನಿಮ್ಮಲಿದ್ದ ಜಗದಲ್ಲಿ
ಊರೆ ಉದ್ದಾರ ಆಗಲಿ

ಅಂತ ಜನಲೋಕ ಹೋದಮ್ಯಾಲೆ, ಆಹಾ ಊರು ಸಪ್ಪಗ ಆಗಿಬಿಡ್ತು ಅಣ್ಣ ಸಾವಿರ ಲಕ್ಷ ಮನಿಗಳು, ಆಹಾ ಏನಪಾ ತಮ್ಮ ಜನಸಂಖ್ಯೆ ಇದ್ದರೆ ಊರು ಚೆಂದ ಜನಸಂಖ್ಯೆ ಇಲ್ಲದ್ದು ಊರು ಚೆಂದ ಇಲ್ಲ ಎಂಗ ಮಾಡನ ಹೊ…. ಬಾ ಅಂದರೆ ಬರ್ತಾರ ಹತ್ತು ಲಕ್ಷ ಹೋಗು ಅಂದರೆ ಹೋತಾರ ಇಪ್ಪತ್ತು ಲಕ್ಷ ಮಂದಿ ಆಹಾ ಸಾವಿರ ಲಕ್ಷ ಮನಿಗಳು ತುಂಬಿಕೊಂಡು ಇನ್ನ ಮುನ್ನೂರು ಮಂದಿ ಉಳಿತಾರಣ್ಣಾ, ಆಹಾ ಏ ಎಪ್ಪಾ ಒಬ್ಬರು ಇಬ್ಬರು ಬರ್ತಾರ ಎಲ್ಲರೂ ಬರ್ತಾರ ಮನಿಗಳು ಇದ್ದೋರೆಲ್ಲ ಬರ್ತಾರ ಮನಿ ಇದ್ದೋರೆಲ್ಲ ಬರ್ತಾರ ಅಯ್ಯೋ ಹೊಸ ಮನಿ ಅಂದರೆ ನಾನು ನೀನು ಅಂತಾರ, ಆಹಾ ಅಂತ ಜನ ಲೋಕಕ ಆಕಿದರೆ ಆಗ ಇನ್ನ ಮುನ್ನೂರು ಮಂದಿ ಬಂದರು ಮೂರು ಎಕರೆ ಭೂಮಿ ಇಡಿಲಾರದಂಗ ನಿಂತಾರ ಆಹಾ ನೋಡಣ್ಣಾ ಎಷ್ಟು ಮಂದಿ ಬಂದಾರ ಇವರು ಬೇಗನ್ಯಾಗ ಬಂದಾರ ನಿನಗೆ ಮನೆ ನಿನಗೆ ಈ ಮನೆ ಅಂತಾ ಯಾವುದು ತೋರಸಾನ ನಿನಗೆ ಈ ಮನೆ ನಿನಗೆ ಈ ಮನೆ ಅಂತ ತೋರಿಸಿದರೆ ಬೇಸತ್ತು ಅವರಿಗೆ, ಆಹಾ ಹೊಸ ಕಟ್ಟಿದ ಊರಿಗೆ ಆಹಾ ಇನ್ನ ಬೇಗ ಆಗಿದ್ದು ಎಲ್ಲಿ ತೋರಸಾನ ಎಲ್ಲ ಲೈನು ಲೈನು ಕಟ್ಟಿಸಿಬಿಟ್ಟೀವಿ ಅವರೆ ಹೋತಾರ ತಲಿಗೊಂದು ಮನ್ಯಾಗ ಕುಂತ್ಕಂತಿರ, ಆಹಾ ಅಂತಾ ರಸ್ತಾ ಚೋಡೊ ಅಂದಾರ

ಹೋಗಲಿ ಅಂಬೊತ್ತಿಗೆ ಸಯ್
ಮುಂಜಾನೆಗೆ ನೋಡಿರಾ ಸಯ್
ಕೋಮಟರಾಗಿ ನೋಡರಾ ಸಯ್
ಓಡಿ ಓಡಿ ಬಂದರಾ ಸಯ್
ಇನ್ನ ಶ್ಯಾನಬಾಗ ನೋಡರಾ ಸಯ್
ಒಳ್ಳೆ ಕನ್ನಡಿ ಮನೆ ನೋಡ್ತಾರ ಸಯ್
ಇದೆ ನನ ಮನಿ ಅಂತಾರ ಸಯ್
ಹಿಂದೇಲಿ ಒಬ್ಬನು ಬರ್ತಾನ ಸಯ್
ಇಲೇದಂದೆ ಮನಿ ಅಂತಾನ ಸಯ್
ಕೈ ಕೈ ಹಿಡಕಂತಾರ
ಕೈ ಕೈ ಹಿಡಕಂಡಾರ
ಅವರು ಕುಸ್ತಿ ಮಾಡವರೆ
ಅವರು ಜುಟ್ಲು ನೋಡಣ್ಣಾ
…. ಅವರ ಜುಟ್ಲು ಇವರು ಹಿಡದಾರ ಸಯ್
ಇವರ ಜುಟ್ಲು ಅವರು ಹಿಡದಾರ ಸಯ್
ಅವರು ಗುದ್ದಾಡಿ ಸಾಯತಾರ ಸಯ್
ಕೋಮಟರ ಗೇರ್ಯಾಗ ಎಂಗ ಐತೇರಾ ಸಯ್
ದಡೆ ಉಲ್ಲು ನಿಂದು ಗುದ್ತಾರ ಸಯ್
ಡಮಡಿ ಮಡಿ ಮಕ್ ಗುದ್ಯಾರ
ಕೋಮಟರಗ್ಯಾರ ನೋಡಾರ
ನಂದು ಮನೆ ಅಂತಾರೆ
ಅಲ್ಲಿಂದ ನೋಡಿಕೆಂತ ಬಂದೀನಿ
ನೀನು ಬಂದು ಹೊಕ್ಕಂತೀಯಾ
ಇನ್ನ ಇಳಿದು ಗೇರ್ಯಾಗ ಸಯ್
ನಾಯಕರ ಕೇರ್ಯಾಗ ನೋಡಾರ ಸಯ್
ಕೊಡಲಿ ತಗಂಡು ಕಡಿಕೆಂತರ ಸಯ್
ಉಪ್ಪಾರ ಕೇರ್ಯಾಗ ನೋಡಾರ ಸಯ್
ಕುಡುಗೋಲು ತಗಂಡು ಕಡಿಕೆಂತಾರ ಸಯ್
ಆಗ ವಡ್ಡರು ಕೇರ್ಯಾಗರಾ ಸಯ್
ಚೆಲಿಕೆ ತಗಂಡು ಕಡಿಕೆಂತಾರ ಸಯ್
ಎಲ್ಲರ ಗುದ್ದಾಟ ನೋಡರಾ ಸಯ್
ಯಾರಿಗೆ ಯಾರಿಗೆ ಬಿದೈತೊ
ಇನ್ನ ಅಡಿಕೆ ಕಡಿಯೋಟೇಮಿನಾಗ
ನೂರು ಮಂದಿ ಸತ್ತಾರ

ಅರ್ಧ ಘಂಟೆಯೊಳಗೆ ನೂರು ಮಂದಿ ಸತ್ತೊಗಿಬಿಟ್ಟರು. ಸುಮ್ಮನೆ ಅವರಿಗೇನು ಬ್ಯಾನಿಲ್ಲ ಜಡ್ಡಿಲ್ಲ, ಆಹಾ ನನ ಮನೆ ಉಂಬೋದು ಮುಂಚೇಲಿ ಬರೋದು ಇನೊಬ್ಬನು ಹಿಂದೇಲಿ ಬರೋದು ಏ ಅಲ್ಲಿಂದ ನೋಡಿಕ್ಯೆಂತ ಬಂದರೆ ನೀನು ಹೊಕ್ಕಂತಿಯಾ ಈ ಮನೆ ನಂದು ಏ ನಂದು ನಾನು ಹೊಕ್ಕಂಡೀನಿ ಏ ನಂದು ಅಲ್ಲಿಂದ ನೋಡಕ್ಯಂತ ಬಂದೀನಿ, ಆಹಾ ಅವರು ಅವರು ಗುದ್ದಾಡೋದು ಸಾಯೋದು, ಆಹಾ ಇಂಗ ಸಾಯತಿದ್ದರೆ ನೋಡಿದ ಯಾರು ದೊಡ್ಡೋನು ನಡವಲೋನು ಏನಪಾ ಚಿಕ್ಕ ತಮ್ಮ ಫಿರೋಜಿಣ್ಣಾ ಏನಪಾ ಸೋಮೋಜಿ ರಾಜ ನೋಡಪಾ ತಮ್ಮ ಏನೋ ಹಳೆ ಮನ್ಯಾಗೊ ಗುಡಿಸಿಲ್ಯಾಗೊ ಆಗ ಇದ್ದವರ್ನೆಲ್ಲಾ ಕರೆಕಳಿಸಿದೆ ನೋಡು ರಸ್ತಾ ಚೋಡು ಮಾರ್ಗ ತಗಂಡೊಗ್ರ ಅಂದೆ ಆ ಮಾರ್ಗ ಹಿಡಕಂಡು ಹೋದರು

ಹೋದರು ಮ್ಯಾಕ ಹೋದರು
ಹೋದರು ಅವರೆ ನೋಡರ
ಎಂಗನ ಕಳಿ ಸಾಕ ನೋಡರಾ
ನಾವೇ ಕರೆಕಳಿಸಿ ನೋಡರಾ
ನಾವೇ ಕೊಲ್ಲಿದಂಗಾತು
ನಾವೇ ಜಲ್ಮ ತಗದಂಗ

ಅಂಬೊತ್ತಿಗೆತಿ ಚಿಕ್ಕ ತಮ್ಮ ಏನಂತಾನ, ಅಣ್ಣಾ ಹೊಸದು ಆಗಸಿ ಕಟ್ಟೆವಿ ಹೊಸದು ಊರು ಕಟ್ಟೀವಿ ಊರಿಗೇನನ ಅನ್ನ ಮಾಡಿ ಊಟ ಮಾಡಿಸಿವಾ, ಆಹಾ ಊರಿಗೇನನ ಬ್ಯಾಟೆ ಕೋಣ ಕಡಿದೀವಾ, ಆಹಾ ಈಗ ನೂರು ಮಂದಿ ಸತ್ತರಲ್ಲ ನೂರು ಬ್ಯಾಟೆ ಕಡಿದಂಗಣ್ಣಾ,

ಊರು ಒಳ್ಳೇದು ಆಗುತದೆ
ಊರಿಗೆ ಬೇಸು ಅಣ್ಣಾಯ್ಯ
ಊರಿಗೆ ಶಾಂತಿಯಾಯಿತು

ತಮ್ಮ ಊರಾಗಲಿಂದ ಅಗಸಿಗೆ ಬಂದೈತಪ್ಪಾ ರಕ್ತ, ನೂರಾಳು ಸತ್ತೋಗಿದ್ರೆ ತಮ್ಮ ಇದು, ಒಳ್ಳೇದು ಏನಪಾ ಅಯ್ಯೊ ಅಣ್ಣಾ ಒಳ್ಳೇದಂತೆ ನಾವೇನನ ಬಡಿದು ಕೊಲ್ಲಿದ್ರೆ ನಮಗೆ ಪಾಪ, ಅರೆರೆ ಬೇಸ ಪಾಪ ಯಾರು ಸಂಪಾಸಿದರೊ ಯಾರು ಇಲ್ಲೆ ಕಡ್ಡಿಪುಡಿ ಮುದ್ಯಾಕಿ ಆಗ ಅಡವಿ ಕಾಯೋ ಗೊಲ್ಲರು ಆಗ ಏಳು ಕೊಡವಾನ ರೊಕ್ಕ ಭೂಮ್ಯಾಗ ಇಟ್ಟಿದ್ದು ತಂದು ಭೂಮ್ಯಿಮ್ಯಾಲೆ ಮನಿ ಕಟ್ಟಿಸಿ ಬೆಚ್ಚಗ ಮಕರ್ರೀ ಅಂದರೆ ಅವರೆ ಗುದ್ದಾಡಿ ಸಾಯುವಾಗ,