ಮನೆಗೆ ಬರ್ರಿ ಅಣ್ಣಾಯ್ಯ
ಗುಡಿಸಿಲಿಗೆ
ಬರ್ರಿ ಅಣ್ಣಾವರೆ

ಅಂತ ಗುಡಿಸಲಿಗೆ ಬಂದರು ಗುಡಿಸಲಿಗೆ ಬಂದು, ಆಹಾ ಆಗ ಹೊರಗ ನಿಂತ ಕಂಡರು ಆ ಮುದಕಿನ ಏನಂತಾನ,

ಎವ್ವಾ ಗೊಲ್ಲರ ಶರಣವ್ವ
ಗೊಲ್ಲರು ನಾರಾಣ ಶರಣವ್ವ
ಹಡದ ತಾಯಿ ಗೊಲ್ಲರವ್ವ
ನಾವು ಅಡವ್ಯಾಗ ಗುಡಿಸಲು ಹಾಕಿವಿ
ನೀನು ನಿಂತಲ್ಲಿಗೆ ಬಂದೀವಿ
ನಾವೆ ಬಂದೀವಿ ನೋಡವ್ವಾ ಸಯ್
ಅಡವಿ ಕಾಯೋರು ನಾವಲ್ಲವ್ವಾ ಸಯ್
ಗುಡ್ಡ ಕಾಯೋರು ನಾವಲ್ಲವ್ವಾ ಸಯ್
ಮಾರವಾಡಿ ಶೇಠಿದವರವ್ವಾ
ಶರಣೆ ಬಾರೆ ಹೊರಗೊಂಡು
ಹೊರಗ ನೀನೆ ಬಾರವ್ವ ಸಯ್
ನಮ್ಮಿಗೆ ನೀನೆ ಮಾತಾಡು ಸಯ್
ನಿನ್ನ ಕೂಡ ನಮ್ಮಿಕೆ ಮಾತಾಯ್ಯೊ ಸಯ್
ಅವರು ಕೂಗಿ ಕರಿತಾರ ಸಯ್
ಇವರ ಕೂಡ ಮಾತಡಿದರೆ ಸಯ್
ನಿನ್ನ ಕುರಿ ಕಾಯಿತೀವಿ ಅಂತಾರ ಸಯ್
ಅಡವಿ ಕಾಯೋರೆ ಬಂದಾರ ಸಯ್
ನನ್ನ ತಲ್ಲಿ ಉಸುಲು ಮಾಡ್ತಾರ
ಅವರೆ ಮುಂದೆ ಬಂದವರೆ
ಎಷ್ಟು ಬಲೇವು ಇಡಕಂಡರಾ
ಆಗ ಇವರು ಚಂದ್ರಾಯುಧ ಇಡಕಂಡಾರಾ
ಕೋಲು ಕತ್ತಿ ಸೂರುಗಳು ಐದಾವ

ಇಂಗ ತಿವಿದು ಬಿಟ್ಟರೆ ಆಗೇತು. ಆಗಲೆ ಬಿದ್ದು ಸತ್ತೋತಿವಿ, ಆಹಾ ಮಾತಾಡಬಾರ್ದು ಮೊದಲು ಹೊರಗ ಹೊಂಟು ಬರಬಾರದು, ಆಹಾ ಅರಸಿ ಅರಸಿ ಅವರೆ ಹೊಂಟೋಗಿ  ಬಿಡ್ತಾರ ಎಮ್ಮ ಇದ್ದರೆ ಬರ್ತಿದ್ದೆ ಅರೆ ಮಾತಾಡಿದ್ಮೇಲೆ ಬರ್ತಿದ್ದಿಲ್ಲವ್ರ ಏಯ್ ಎಲ್ಲ ಬಿಡು ಅಂದ ಅಂಗಾರೆ ಇಲ್ಲೇನಣ್ಣಾ ಅಂದ ಎಲ್ಲಿ ಐದಾಳ ಪಾಪ ಅಂದ ನೋಡು ಇಲ್ಲ ಅಂತ ನೀನು ಅಂತೀರಿ ಇಲ್ಲದ್ದು ಮನ್ಯಾಕ ಹೋದರೆ ನಂದು ಪಾಪ ಇದ್ದು ಮಾತಾಡಲಿದ್ದರೆ ಆ ಮುದ್ಯಾಕಿದು ಪಾಪ ಆಹಾ,

ಈಗ ಹೋರಿ ಎಳ ಕಂಡು ಬರ್ತೀನೊ
ಗುಡಿಸಾಲಾಕ ನಾನು ಹೋತೀನೊ

ಅರೆರೆರೆ ಯಾರಿಲ್ಲದ ಗುಡಿಸಾಲಾಕ ಹೋದರೆ ಬಡಗ್ಗನೆ ಮುದುಕಿ ಆಗಲಿ ಹರೆಯದಾಕಿ ಆಗಲಿ ಕೈಲಿ ಇಡಕಂಡರೆ,

ಎಪ್ಪಾ ಹಿಡಕಂಬಾರ ಬಂದಾರಾಂತ
ಸುಮ್ಮನೆ ಕೇಸು ಬರ್ತಾತ
ನಮ್ಮ ಜಲ್ಮ ಕಳೀತಾರ
ನಮ್ಮ ಮರಿಯಾದೆ ಕಳೀತಾರ
ಯಾರುವಿಲ್ಲದ ಮನಿಯಾಗ ಸಯ್
ಹೆಮಡದ ಭೂತ ನೋಡರಾ ಸಯ್
ನಾವೇ ಮಾತಾಡಬಾರದು ಸಯ್
ಆಗ ಬಂದೆ ನೋಡಣ್ಣಾ
ಆಗ ಮುದುಕಿ ನೋಡಣ್ಣಾ

ಇನ್ನ ನಿನಗೆ ಶರಣವ್ವ ತಮ್ಮ ಬ್ಯಾಡಪ್ಪಾ ಎಳಕಂಡು ಬರೋದು ಬ್ಯಾಡ ಈಗ ಮಾತು ಬರ್ತೈತೆ ಅವರಾಗಿ ಬಂದರೆ ನಾವಾಗಿ ಕಾಲಿಗೆ ಬಿದ್ದು ಕೈಮುಗಿದು ಎಂಗನ ಕೇಳಬೋದು, ಅಣ್ಣಾ ಉಣಸೆ ಕೆಳಗ ಕುಂತಕಂಡು ಮೂರು ದಿವಸ ಉಪಾಸ ಕುಂತು ಆಗ ಸಂಗೀತ ಮಾಡಿದರೆ ಉಣಸೆಕಾಯಿ ಉದರೊದಿಲ್ಲ, ಆಹಾ ನಾಕೇಟು ಜಡಿದರೆ ಜರ ಜರ ಉದುರುತಾವ ನಾಕೇಟು ಜಡಿದರೆ,

ಉಣಸೆ ಕಾಯಿ ಉದುರುತಾವೆ
ಅಯ್ಯಾ ತಮ್ಮ ಬ್ಯಾಡಪ್ಪಾ ಆಹಾ
ಈಗ ಬಿಡಯೋದು ಬ್ಯಾಡ ಮುದ್ಯಾಕಿನ

ಏನು ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಇಲ್ಲ ಸರಿಬಿಡಣ್ಣಾ,

ಮನ್ಯಾಕ ಬಂದೆ ಬಿಟ್ಟಾರ ಸಯ್
ಎಡಕ್ಕೆ ನೋಡೆ ಬಿಟ್ಟಾರ ಸಯ್
ಬಲಕ್ಕೆ ನೋಡೆ ಬಿಟ್ಟಾರೆ ಸಯ್
ಮೂಲಿಗೆ ನೋಡಿದರೆ ಎಗ್ಗಯ್ಯಾ
ಗಡಿಗೆ ಬಗಲಗ ಕುಂತಕಂಡಾಳ
ಗಡಿಗೆ ಬಗಲಗ ನೋಡಣ್ಣಾ
ಮುದುಕಿ ಕುಂತಕಂಡಾಳ
ಮೂರು ಪಡಗರಂದೆ ಕುಂತಾಳ ಮುದುಕಿ ಆಹಾ
ಪಿಳಿ ಪಿಳಿ ಕಣ್ಣಾ ಬಿಡ್ತಾಳ
ಏನುದೆವ್ವ ಬಡಿದೈತೆ
ಕೇಳೆನನ್ನ ಎವ್ವಾ
ಆಗ ಬಂದು ಬಲಗೈಲಿ ಹಿಡಿದಾರೋ

ಲಬ ಲಬ ಲಬ ಕೈಹೋತು ಕೈಹೋತು ಕೈ ಹೋತು ಕೈಹೋತು, ಕೇಳೋನನ್ನಾವರೆ ಎವ್ವಾ ಕ್ಕೆ ಮುರಿದದು ನೋಡಪ್ಪಾ ನನಕ್ಕೆ ನಿನಗೆ ಕೊಡತೀನಿ ಏಕಷ್ಟು ಬಾಯಿ ಮಾಡ್ತಿ ಕೇಳೆನನ್ನ ಅವ್ವಾಮ್ಮ ಎಷ್ಟೊ ದೇವ್ರಾಣಿ ಕೈಬಿಡಪ್ಪಾ ಪಾದದಾಗ್ನಿ ಕೈಬಿಡಪ್ಪಾ,

ದೇತ್ರಾಣಿ ಕೈಬಿಡಪ್ಪಾ

ಆ ಮುದಾಕಿನ ಕೈ ಇಡಕಂಡು ಕರಕಂಬಂದರು ಕರಕಂಡ ಬಂದ ಮ್ಯಾಲೆ ಆಗ ಚಿಕ್ಕ ತಮ್ಮ ಮುದ್ಯಾಕಿನ ಇಡಕಂಡ ಇಬ್ಬರು ಏನು ಮಾಡಿಬಿಟ್ಟರು ಅಣ್ಣಾ ಆಗ ದೊಡ್ಡೋನು, ಆಹಾ ನಡುವೋನು ಇಬ್ಬರು ನನ್ಮಾಡಿ ಬಿಟ್ರು, ಆಹಾ ಅವ್ವಾನ ಪಾದ ಇಡಕಂಡ್ರು ಏನಂತಾ ಕೇಳ್ತಾರ,

ಎವ್ವಾ ನಿನಗೆ ಶರಣವ್ವಾ,
ತಾಯಿ ತಂದೆ ಇಲ್ಲದ ಮಕ್ಕಳು
ನಿನಗೊಂದು ಮೊಮ್ಮಕ್ಕಳು
ನಾವು ನಿನ್ನ ಮೋಸ ಮಾಡದಿಲ್ಲ
ಬಡ್ಡಿಗಂಟು ತೀರ್ಸಿಸೇವ
ಲೋಕಕ ಹೆಸರಾಗೀಯೆ
ಗೊಲ್ಲರ ಹುಣಗಳು ಕಾಯೋದು
ಗೊಲ್ಲರು ನಾರಾಣಮ್ಮ ಅಂತಾರೆ
ಏಳು ಕೊಡಪಾನಕ ಅಕೀರಾ ಸಯ್
ಭೂಮ್ಯಾಗ ಉಣಿಕ್ಕಿದೆ ಅಂತೆವ್ವಾ ಸಯ್
ಭೂಮ್ಯಾಗಿದ್ದರೆ ಯಾರು ನೋಡ್ತಾರ ಸಯ್
ನಮ್ಮಿಗೆನ್ನ ಸಾಲ ಕೊಡವ್ವಾ
ನಿನ್ನ ಹೆಸ್ರಮ್ಯಾಲೆ ನಾವುರಾ ಸಯ್
ಸಾವ್ರ ಲಕ್ಷ ಮನೆ ಕಟ್ತೀವಿ ಸಯ್

ನಿಂದು ನಾ ಹೆಸ್ರಾಗಿ ನಡಿತೈತೊ ಕೇಳಿ ನನ್ನ ಅವ್ವಮ್ಮ ಎವ್ವಾ ಏಳು ಕೊಡಪಾನ ಹಾಕಿ ಭೂಮ್ಯಾಗ ಉಣಿಕ್ಕಿ ಅಂತೆ ನಮ್ಮಿಗೆನ್ನ ಕೊಡವ್ವಾ ಸಾಲ ಬಡ್ಡಿ ಗಂಟು ತೀರಸ್ತಿವಿ ಅವ್ವಾ, ಆಹಾ ನಿನ್ನವತ್ತಲಿದ್ದ ಸಾವಿರ ಲಕ್ಷಮನಿ ಕಟ್ತೀವಿ ಈಗ ಹಿಂದೊಲೆ ಮನೆ ಬಾಡಿಗ್ಯಾ ಹೊಲಗುತ್ತಾ ಉಸುಲು ಮಾಡಿ ನಿನಗೆ ಕೊಡ್ತೀನಿ ಅವ್ವಾ ಆಹಾ,

ಎಪ್ಪಾ ದೇವ್ರು ಆಣಿ ಪೈಸಿಲ್ಲರೊ
ಎಪ್ಪಾ ಭೂಮಾಗ್ನಿ ಪೈಸಿಲ್ಲರಾ
ಎಪ್ಪಾ ಯಾವ್ನ ಹೇಳಿದಾ ಆಳಾಗ
ದೇವ್ರು ಆಣಿ ಪೈಸಿಲ್ಲಪ್ಪೊ
ಅತ್ತಗನೋಡ್ತಾ ಇದ್ದರೆ ಸಯ್
ತೂಮಲು ಗುಡಿಸಿಲಾಗರಾ ಸಯ್
ನಾನ್ಯಾಕ ಇರ್ತಿದ್ದಿನಿರಾ ಸಯ್
ಗಚ್ಚಿ ನಮಗೆ ಕಡಿಸ್ತಿದ್ದಿವಿ
ಅಷ್ಟೊಂದು ಧನವು ಇದ್ದರೆ
ಎಪ್ಪಾ ಅಡಿವ್ಯಾಗ ಭೂಮಿ ಐತೆರಾ ಸಯ್
ನಮ್ಮಿಗೇನು ಮನಿ ಐತೆರಾ ಸಯ್
ಕುರಿಗಳು ಒಂದೆ ವೈದವಾ ಸಯ್
ಅವು ಸತ್ತೆ ಹೋತಾವ ಸಯ್
ಕುಂಟು ಬಿದ್ದು ಆಳಾಗಿ ಹೋತಾವ ಸಯ್
ಬ್ಯಾನಿಬಿದ್ದು ಆಳಾಗಿ ಹೋತಾವ
ಕೇಳಿರಿ ನನ್ನ ಅವ್ವಮ್ಮ

ಆ ಮುದುಕಿ ಮಾತಾಡ್ತಿದ್ದರೆ ಬಾಯಲ್ಲನಾತ ಬರ್ತದೆ, ಆಹಾ ಬರೆ ಕಡ್ಡಿಪುಡಿ ಸುಣ್ಣ ಬಾಯಿಗೆ ನುಂಗತ್ತಾಳ ಕೇಳಪ್ಪಾ ತಮ್ಮ ಎಂನುನಪ್ಪಾ ನೀನು ಎಷ್ಟು ದೂರ ಕರ್ಕಂಡು ಬಂದೆ ದೇವ್ರಾಣಿ ಭೂಮ್ಯಾಗ್ನ ಇಲ್ಲಪ್ಪ ಅಂತಾಳ ಇಲ್ಲಂಬ ಮುದುಕಿನ ಏನ್ಮಾಡ್ಬೇಕು, ಆಹಾ ಆ ಬಡಿಯೋನ ಎಪ್ಪಾ ಇಲ್ಲ ಅಂತಾಳ ನಡೀತಮ್ಮ ಹೋಗೋನಾ ಇಲ್ಲದಿದ್ದರೆ ಆಗೈತು ಬಿಡವ್ವಾ ಅಂದ ಅಣ್ಣಾ ಈ ಮುದುಕಿತಲ್ಲಿ ಇಲ್ಲೇನಣ್ಣಾ ಇಲ್ಲಂತಾಳ ದೇವ್ರಾಣಿ ಭೂಮ್ಯಾಗ್ನ ಸತ್ತರೆ ಒಂದು ಪೈಸೆ ಇಲ್ಲಪಾ ಹತ್ತು ಪೈಸೆ ಇಲ್ಲಪಾ ಅಂತಾಳ, ಆಹಾ ನೋಡು ಈ ಮುದ್ಯಾಕಿ ಇಲ್ಲಂತಾಳ ಕರೆ ಬಟ್ಟೀರು ತಲ್ಲೆ ಇರೋದು ಬಿಳೆ ಬಟ್ಟೇರು ತಲ್ಲೆ ಬಿಳೆ ರೂಪಾಯಿ ಇರೋದಿಲ್ಲ ಆಹಾ ಇದೋ ಇದ್ದು ಮುದುಕಿವಿಲ್ಲಂದರೆ ಪಾಪ ಇಲ್ಲದ್ದು ನಾನು ಮುದ್ಯಾಕಿನ ಬಡಿದರೆ ನಂದು ಪಾಪ ಮುದ್ಯಾಕಿ ಪಾಪನನಿಗಿರಲಿ ನನ್ನ ಪಾಪ ಮುದ್ಯಾಕಿಗಿರಲಿ,

ಮುದ್ಯಾಕಿನ ಬಡಿತೀನಿ ನೋಡಾರ
ಉಸುಲು ಮಾಡತೀನಿ ರೊಕ್ಕಾನ
ಸುಮ್ಮನೆ ಕೊಡಂದ್ರೆ ಕೊಡಾದಿಲ್ಲ

ಅಲೆಲೆಲೆಲೆಲೆ ಕೊಟ್ಟರೆ ತಗಂಡೋಗಬಹುದು ಕೊಡಲಿದ್ದರೆ ಸುಮ್ಮನೆ ಬಿಡಬೋದು, ಆಹಾ ಸುಮ್ಮನೆ ಬರ್ತೀನಿ ಅಂದರೆ ಒಳ್ಳೇದು ಏನಪಾ ಅಯ್ಯೋ ಎಲ್ಡೇ ಏಟಿಗೆ ಇನ್ನ ಕುದುರೆ ಹೊಡೆಯೋ ಬಾರ್ಕೋಲು ಎಗರಿ ಬಿದ್ದು ಸತ್ತೊತಾಳ ಆ ಮುದ್ಯಾಕಿ ಪಾಪ ನಿಮ್ಮಿಗಿಬರ್ತದೆ,

…. ಸಾಯಂಗೆ ಯಾವನು ಬಡ್ತಿತಾನ
ರೊಕ್ಕ ಬರೋತನ್ಕ ಬಡೀತಾರ
ಸುಮ್ಮನೆ ಬೆದರಿಸಿ ಬಿಡತೀಸಿ
ಎಡಗೈ ಹಿಡಿದೆ ಬಿಟ್ಟಾನ ಸಯ್
ಬಲಗೈಲಿ ಹಾಕಿ ನೋಡರಾ ಸಯ್
ತೊಗಲು ಬಾರ್ಕೋಲು ಹಿಡಿದಾನ ಸಯ್
ಕುದುರಿಗೆ ಬಡಿಯೋದು ನೋಡರಾ ಸಯ್
ಜಟ್ ಎನ್ನುವಂತೆ ಇನ್ನರಾ
ತೈತೈ ತೈತೈ ಕುಣಿತಾಳ
ಲಬ್ ಲಬ್ ಲಬ್ ಅಂತ ಒಯ್ಯಕೆಂತಾಳ
ತೈ ತೈ ಎನ್ನ ಕುಣಿತಾಳ
ಲಬ್ ಲಬ್ ಲಬ್ ಲಬ್ ಬಾಯಿ ಒಯ್ಯಿಕೆಂಬಾಳೆ
ಎಪ್ಪೊ ಬಡಿಬ್ಯಾಡ ಬಡಿಬ್ಯಾಡ ನೀವು ರಾ ಸಯ್
ಐತಿ ಐತಿ ನೋಡರಾ ಸಯ್
ದೇವ್ರು ಆಣಿ ಐತೆರಾ ಸಯ್
ಏಳು ಕೊಡಪಾನ ಕೊಡಸ್ತೀನಿ ಸಯ್
ನನ್ನ ನೀವು ಬಡಿಬ್ಯಾಡರಿ
ಐತೆ ಕೊಡ್ತೀನಿ ನೋಡ್ರಪ್ಪಾ ಹಿಮ್ಮೇಳ
ಎಪ್ಪೊ ಕೊಟ್ಟರೆ ಕೊಡಲಿ ನೀವುರಾ ಸಯ್
ತಿಂದರೆ ತಿಂದರೆ ನೀವುರಾ ಸಯ್
ಕೊಟ್ಟರೆ ಕೊಟ್ಟರೆ ಕೊಡಲಿ ನೀವುರಾ
ತಿಂದರೆ ತಿಂದರೆ ತಿನ್ನಿರಿ ನೀವುರಾ ಹಿಮ್ಮೇಳ

ನೋಡಣ್ಣಾ ಇಬ್ಬರು ಅಣ್ಣಾವರೆ ಆಞ ಇಪ್ಪತ್ತನಕಾಮುದ್ಯಾಕಿ ವಾದ ಇಡಕಂಡೀವಿ, ಆಹಾ ಮುದ್ಯಾಕಿ ಕೈ ಮುಗಿದಿರಿ ದೇವ್ರಾಣಿಪ್ಪಾ ಹತ್ತು ಪೈಸೆ ಇಲ್ಲಪಾ ಭೂಮ್ಯಾಗ್ನಪ್ಪ ದೇವಾಣಿ

ಅಂದ್ಲು,
ಈಗ ದೇವ್ರು ಇಲ್ಲವೈ ದನ ಅಣ್ಣಯ್ಯ
ದಿಂಡ್ರು ಎಲ್ಲಿವೈದನ ಅಣ್ಣಾಯ್ಯೊ
ಈಗ ಏಳು ಕೊಡಪಾನಪ್ಪಾ ಐತೆಪ್ಪಾ

ಭೂಮ್ಯಾಗ್ನ ಭೂಮ್ಯಾಗ ಇಟ್ಟೆನಪ್ಪಾ ನನ್ನ ಬಡಿಬ್ಯಾಡರಿ ಅಂಬಾಳ ಅರೆ ಕುದುರಿ ಹೊಡೆಯೊ ಬಾರ್ಕೋಲಿಂದ ಹೊಡೆದರೆ ದೆವ್ವ ಕೂಡ ಓಡಿ ಹೋತೀ ಅಂತರೆ, ಆಹಾ ದೇವ್ರ ಕೂಡ ಗುಡಿ ಬಿಟ್ಟು ಹೋತಿನಿ ಅಂತಾನ ಇನ್ನೇನು ಐತೆ ಅಂಬಲಾರದ ಇನ್ಯಾಕ ನನ್ನ ಬಡಿದು ಕೊಲ್ಲುತಾರ ಅಂತ ಐತಿ ಅಂದಾಳ, ಆಹಾ ಅಷ್ಟೇನಾ ಈ ಮುದುಕಿ ಹೇಳಿದ್ದು ಏ ಮುದುಕಿ ತೋರ್ಸಿ ನಿನ್ನ ಕೊಲ್ಲಲ್ಲ,

ಎಪ್ಪಾ ಕೊಲ್ಲಬ್ಯಾಡರಿ ತೋರಿಸ್ತೀನಿ
ತೋರಿಸಿತಲ್ಲಿ ನೀವು ತೋಡಾರಿ
ಆಗ ಮುದುಕಿ ನೋಡಣ್ಣಾ

ಎಪ್ಪಾ ದೇವ್ರು ಗುಡಿತಲ್ಲಿ ಬಳಿಕ ಬಂದರಾ ರೂಮಿನ್ಯಾಕ ಬಂದು ಇಲ್ಲಿ ತೋಡ್ರಪ್ಪ ಅಂದರೆ ಆಗ ಗುದ್ದಲಿ ತಗಂದು ತೋಡಿದರು ಚಲಿಕಿ ತಗಂಡು ಮಣ್ಣಿ ಎಬ್ಬಿಸಿದ್ರು, ಆಹಾ ಮೂರು ಕೊಡ ಉಣಿಕ್ಯಾಳ,

ತಾವು ಮಲಗತ್ತಲ್ಲಿರಾ ಸಯ್
ಆಗ ಮುದುಕಿ ನೋಡರಾ ಸಯ್
ನಾಕು ಕೊಡ ಉಣಿಕ್ಯಾಳ ಸಯ್
ಮುದುಕಿ ಒಂದೆ ನೋಡರಾ ಸಯ್
ಏಳು ಕೊಡ ಅಣ್ಣಾಯ್ಯ
ಹೊರಗ ತೆಗೆದೆ ಬಿಟ್ಟಾರ
ಏಳು ಕೊಡ ಅಣ್ಣಾಯ್ಯಾ

ಬರೇ ಪಾವಲಿ ಎಂಟಾಣಿ ಪಾವಲಿ ರೂಪಾಯಿ, ಆಹಾ ಮುದುಕಿ ಮಾತಾಡಿದರೆ ಬಾಯಿ ತಿರಗಂಗಿಲ್ಲ ಎಂಗ ಲೆಕ್ಕ ಮಾಡಿದ್ದಳಾ ಮುದುಕಿ, ಆಹಾ ಒಂದೊಂದು ಕೊಡಕ್ಕೆ ಮಣ್ಣು ಕೊಡಕ್ಕೆ ಆಗ ಲೆಕ್ಕ ಮಾಡಿ ಒಂದೊಂದು ಲಕ್ಷ ಕರೆಟ್ಟು ಐತೆಪ್ಪಾ ಒಂದು ಎಂಟಾಣೆ ಹೆಚ್ಚಿಲ್ಲ ಪಾವಲಿ ಕಮ್ಮಿಲ್ಲಪ್ಪಾ, ಆಹಾ ಏಳು ಕೊಪ್ಪರಕಿ ಹೊರಗ ತಂದಳಪ್ಪಾ ತಂದೊತ್ತಿಗೆ ನೋಡಾನ ಈ ಮುದುಕಿ ತೊರಗ ಇದ್ದಂಗ ಐದಾಳ ಬೇಸು ಲೆಕ್ಕ ಮಾಡ್ಯಾಳೇನು ಅಂತಾ ಎಲ್ಡುಕೊಡ ಕೆಳಗ ಸುರುವಿ ಲೆಕ್ಕ ಮಾಡಿದರು ಕರೆಟ್ಟು ಐತೆಪ್ಪಾ ಆಹಾ,

ಅಬಬಾಬಾ ಓದು ಕಲ್ತರಿಗನ ನೋಡಪ್ಪಾ
ಬಾಳ ತಿಳಿವರಿಕೆ ಐತಪ್ಪಾ
ನಾವು ಹುಚ್ಚಳಂದು ಕೊಂಡಿದ್ದಿವಿ

ಎವ್ವಾ ಗಡ್ಡಿಕೊಂಡು ಬಾಯಿ ತೋಡಾರೆ ಇನ್ನ ಬಾಯಿ ತೋಡಾಕಿ ಎಂಗ ಸಂಪಾದಿಸದ್ದೆವ್ವಾ, ನೀನೆ ಲೋಕದಾಗವ್ವಾ ಎವ್ವಾ ಅಡವ್ಯಾಗ ನೀನು ನೋಡವ್ವಾ ಎಲ್ಲಿ ಬಚ್ಚಿಟ್ಟಿದ್ದೀಯವ್ವಾ ಭೂಮ್ಯಾಗ ನೋಡಪಾ ಬೆಂಕಿ ಇಟ್ಟರೆ ಗುಡಿಸಲೆಲ್ಲಾ ಸುಟ್ಟು ಹೋತಾವ, ಆಹಾ ನಾವು ಓಡೋತಿವಿ ಆಹಾ ಮಣ್ಣು ಗಡಿಗಿ ಸುಡಂಗಿಲ್ಲ ಆಗ ಭೂಮ್ಯಾಗ ರೊಕ್ಕ ಸುಡಂಗಿಲ್ಲಂತಾ

ಭೂಮ್ಯಾಗಿಟ್ಟೀನಿ ನಾನಪ್ಪ
ಟ್ರಂಕು ಪಂಕು ಇಲ್ಲಪ್ಪಾ
ಗಡಿಗ್ಯಾಗ ಪಡಗದಾಗಿಲ್ಲಪ್ಪಾ

ನನಗೆ ಏಳು ಮಂದಿ ಗಳ್ಮಾಕ್ಳು ಏಳು ಮಂದಿ ಸೊಸೆಯೋರು ಏಳು ಮಂದಿ ಹುಟ್ಟಿರೋರು ಎಲ್ಲರೂ ಒಳ್ಳೇರು ಇರ್ತಾರ, ಆಹಾ ಪಡಗನಾಗ ಹಾಕಿದ್ರೆ ತಗಂಡು ಹೋತಾರ ಆಹಾ ಗಡಿಗಿನ್ಯಾಗ ಅದಕ್ಕೆ ನಾನು ಭೂಮಿನ್ಯಾಗ ಇಟ್ಟಿನಪಾ ಸರಿಯವ್ವಾ ನಿನ್ನ ರೊಕ್ಕೇನು ಮುಣಸಾದಿಲ್ಲ ಬಡ್ಡಿಗಂಟು ತಂದು ಕಟ್ತೀವಿ, ಆಹಾ ವರುಷಲಿ ಇಷ್ಟು ಕೊಡ್ತೀವಿ ಸಾವಿರ ಲಕ್ಷ ಮನಿ ಕಟ್ತೀವಿ ಈಗ ಊರು ಕಟ್ತೀವಿ ತೋರುಸ್ತೀವಿ ಬಾರವ್ವಾ, ಆಹಾ ಇಲ್ಲಿಗೆ ಬಂದು ಅರದಾರಿ ಐತೆಪ್ಪಾ ಬುಗುಡಿ ಮ್ಯಾಲೆ ಮೊಲ ಹೋಗಿತಲ್ಲಿ ಒಳ್ಳೇದು ಅಂತಾ ಬಂದೀವವ್ವಾ ಆಹಾ,

ಎಪ್ಪಾ ನೀವು ಕಡದು ಹಾಕ್ತೀರಿ ನೀವಪ್ಪಾ
ಬಡಿದಾಗ್ತೀರಿ ನೀ ಏಪ್ಪಾ
ಕೊಡಲಿದ್ದರೆ ಆಗೈತು ಹೋಗ್ರಪ್ಪಾ
ಕೊಟ್ಟರೆ ಕೊಡಲಿ ನೋಡರಾ ಸಯ್
ಇಲ್ಲದಿದ್ದರೆ ನೀನೆ ತಿನ್ನಿರಿರಾ ಸಯ್
ಎಲ್ಲೇನಾ ಮನಿ ಕಟ್ಟಿಕೊಳ್ಳರಿರಾ ಸಯ್

ಸತ್ತರೆ ನಾನು ಬರದಿಲ್ಲಪ್ಪಾ ಎಪ್ಪ ಹತ್ತು ಗುಡಿಸಲು ವೈದಾವ ನಾನು ಬಿಟ್ಟು ಬರದಿಲ್ಲಪ್ಪಾ ಗುಡಿಸಲು ಬಿಟ್ಟು ಬರದಿಲ್ಲಪ್ಪಾ ನಾನು ಬರದಿಲ್ಲಪ್ಪಾ ಕೇಳವ್ವಾ ಗುಡಿಸಲು ಬಿಟ್ಟು ಬರದಿಲ್ಲಂತೀಯಾ, ಇನ್ನೇನಾ ಐತೊನೊ ಎಪ್ಪಾ ದೇವ್ರಾಣಿ ಇಷ್ಟೆ ಇರೋದು ಎಪ್ಪಾ ಪಾದಾಗಿ ಇಷ್ಟೆ ಇರೋದು ಮತ್ತೆ ಅಂತೀಯೆ ಗುಡಿಸಲು ಬಿಟ್ಟು ಬರಲಾರೆ ಅಂತಿಯೆ ಬರೆ ಗಡಿಗೆ ಐದಾವ ಬರೆ ಕೊಡ ಐದಾವ ಯಾಕ ಬರಲಾರೆ ಏ ಎಪ್ಪಾ ನಾನು ಬರದಿಲ್ಲಪಾ ಗುಡಿಸಲು ಬಿಟ್ಟು ಅಂಗಾರೆ ಏನನ ಐತೇನು ಇನ್ನ ಗುಡಿಸಾಲ್ಲಾಗ ಇಲ್ಲಪ್ಪೊ ದೇವ್ರಾಣಿ ಇಷ್ಟೇ ಅಪ್ಪಾ ಇರೋದು ಅಂಬೊತ್ತಿಗೆ ಎಪ್ಪಾ ನೀನು ಬರಬೇಕಂತಾ ಈಗ ಎಡಕ್ಕೆ ಒಬ್ಬನು ಬಲಕ್ಕೆ ಒಬ್ಬನು ಇಡಕಂಡರು ಆಗ ಹಿಂದೆ ಒಬ್ಬನು,

ಮುಂದೆ ಒಬ್ಬನು ಮುದ್ಯಾಕಿನಿ ದಬ್ಬಿಕೆಂತ ಬರ್ತಾರ
ಎಪ್ಪಾ ಗಡಗಡ ನಡಗ್ತಾಳ ಮುದ್ಯಾಕೆ
ನನ್ನ ಎಲ್ಲಿ ಕೊಲ್ಲಿ ಬಿಡ್ತಾರ
ನನ್ನ ಎಲ್ಲಿ ಜಲ್ಮ ತೆಗೆದು ಬಿಡ್ತಾರೊ
ಏಯ್ ಮುದುಕಿ ಗಡಗಡನಡಗತಾಳೆ
ಎವ್ವಾ ನಿನ್ನ ನಾವು ಬಡಿಯೋದಿಲ್ಲವ್ವಾ ಸಯ್
ನೀನೆ ನಮ್ಮವ್ವ ಐದಿಯಾ ಸಯ್
ನಾವೇ ಮೊಮ್ಮಕ್ಕಳು ಐದಿವೆ ಸಯ್
ರೊಕ್ಕ ಇಲ್ಲಂದಿದ್ದಿಗೆ ಸಯ್
ಸುಮ್ಮನೆ ಇಂಗ ಬಡದರೆ ಸಯ್
ಒಂದೇಟಿಗೆ ಅದಿರಿಕೆಂತಾಳ ಸಯ್

ರೊಕ್ಕ ಕೊಡ್ತಾಳಂತವ್ವಾ ಅಂತ ನಿನ್ನ ನಾವು ಮಾಡೀವಿ ನಿನ್ನ ನಾವು ನೋಡವ್ವಾ ನಾವೇ ಒಯ್ಯಲಿಟ್ಟ,

ಎವ್ವಾ ಪಾದಾಗ್ನಿ ನಾವು ತನತೈ
ಆಗ
ಕರಕಂಡು ಬಂದಾರೆ

ಬಂದು ಬಣ್ಣದ ರಗ್ಗು ಹಾಸಬಿಟ್ರು ಕಂದರವ್ವಾ ಬಣ್ಣದರಗ್ಗಿನಾಗ ಎಪ್ಪಾ ಹುಟ್ಟಿದಾಗಲಿದ್ದ ನೋಡಾರೆ ಬಣ್ಣದರಗ್ಗನೆ ನೋಡಿಲ್ಲಾ ಹುಟ್ಟಿದವಾಗಲಿದ್ಯಪ್ಪಾ,

ಬಣ್ಣದರಗ್ಗನೆ ನೋಡಿಲ್ಲೆ (ಹಿಮ್ಮೇಳ)
ಕರೆ ಕಂಬಳಿ ನಮಗಿ ನೋಡಾಪ್ಪಾ
ಭೂದೇವಿತೆ ಆಸಿಗೆ ನಮಗಪ್ಪ

ನೆಲಕ್ಕೆ ನಾವು ಮಕ್ಕಂಬಾದು ಭೂದೇವಿತೆ ಆಸಿಗೆ ನಮಗಪ್ಪಾ ಆಗ ಬಣ್ಣದ ರಗ್ಗು ಮ್ಯಾಲೆ ಕೂಡಲಿಲ್ಲಪ್ಪಾ, ಆಹಾ ಆಗ ಭೂಮಿ ಮ್ಯಾಲೆ ಕೂಡು ಬಿಟ್ಲು ಸರಿಬಿಡವ್ವಾ ಇಲ್ಲೇ ನೋಡವ್ವಾ ಮನೆಗಳು ಕಟ್ಟದ್ದು ಸಾವಿರ ಲಕ್ಷ ಮನಿಗಳು ಕಟ್ಟತೀವಿ ಏಳು ಸುತ್ತ ಅಗಸಿಕಟ್ಟತೀವಿ ಈಗ ನಿನ್ನ ಹೆಸರು ಮುಂಚ್ಯಾನ ಹಾಕ್ತೀವಿ ಗೊಲ್ಲರು ಈಗ ಅಡವಿ ಕಾಯೊ ಗೊಲ್ಲರು ನಾರಾಣಮ್ಮಂದು ಈಗ ಏಳು ಕೊಡಲಿದ್ದ ಏಳು ಕೊಪ್ಪರಕಿ ಆಸ್ತಿಲಿದ್ದ ಸಾವಿರ ಲಕ್ಷ ಮನಿಗಳು ಇವು ಆಗ್ಯಾವಂತ ನಾವು ಇಳಾಸ ಬೋರ್ಡ್‌ಹಾಕ್ತೀವಿ, ಆಹಾ ಸಾಲ ತೀರಿದ ಮ್ಯಾಲೆ ನಿನ್ನ ಬಗಲಾಗ ನೋಡವ್ವಾ ನಮ್ಮ ಹೆಸರೆ ಹಾಕತೀವಿ ಮಾರವಾಡಿ ಶೇಠವರು ಅಂತಾ ನಿನ್ನ ಬಗಲಾಗ ನೋಡವ್ವಾ,

ನಮ್ಮ ಹೆಸರೆ ಹಾಕತೀನಿ
ಅಷ್ಟೊತ್ತನಕ ಎವ್ವಾ
ನಮ್ಮ ಹೆಸರೆ ಇಲ್ಲವ್ವಾ

ಎಪ್ಪೊ ಎಂಗನ ಕಟ್ಟಿಕರ್ರೆಪ್ಪೊ ನನ್ನ ಬಿಡ್ರಪ್ಪಾ ನಾನು ಹೋತಿನಿ, ಆಹಾ ಅರೆರೆ ಊಟ ಮಾಡಿ ಹೋಗವಂತಿ ಅಂತಾ,

ಗೋದಿ ರೊಟ್ಟಿ ಹಾಲು ಸಕ್ಕರೆ
ಬಿಳಿ ಅನ್ನ ತೊಗೆ ಅಪ್ಪಾ

ಇಟ್ಟು ಮುದ್ಯಾಕಿ ಮುಂದೆ ಇಟ್ಟರು ಆಹಾ ಎವ್ವಾ ಊಟ ಮಾಡು ಇದು ಗೋದಿ ರೊಟ್ಟಿ ಹಾಲು ಸಕ್ಕರೆ ಈಗ ಇದು ಇದ್ದರೆ ತೊಗೆ ಅನ್ನ,

ಎವ್ವಾ ಬಿಳೆ ಅನ್ನ ನಾನು ನೋಡಿಲ್ಲ
ಎವ್ವಾ, ಇಸ ಹಾಕಿ ನನ್ನ ಕೊಲ್ಲುತೀರಾ
ಎಪ್ಪಾ ಹಚ್ಚಗಾಕೆ ಇಸ ಹಾಕಿರಿ
ಮುದ್ಯಾಕಿ ಸಾಯಿಲಂತಪ್ಪಾ

ಈ ಮುದುಕಿ ನಾಡ ತೊಗೆ ಹಾಕಿದರೆ ಹಚ್ಚಗ ಐತಂತೆ ಆಗ ಇನ್ನ ಇಸ ಆಕೀವಂತೆ ಇಲ್ಲವ್ವಾ ತೊಗೆ ಹಾಕಿವಿ ಇಲ್ಲಪ್ಪೊ ನಾನು ಒಲ್ಲೆ ಬಿಳಿ ಅನ್ನ ಉಂಡೆಲ್ಲ ಹಚ್ಯನೆ ತೊಗೆ ನೋಡಿಲ್ಲ ನಾನು ಹಾಲು ಸಕ್ಕರೆ ತಿಂದಿಲ್ಲ, ಆಹಾ ಸರಿ ಎವ್ವಾ ನೀನು ಏನು ಊಟ ಮಾಡೋದು ಮಜ್ಜಿಗೆ ನೀರು ನೋಡಪ್ಪಾ ರಾಗಿ ಮುದ್ದೆ ನೋಡಪ್ಪಾ ಮಜ್ಜಿಗೆ ನೀರೆ ನೋಡಪ್ಪಾ ರಾಗಿ ಮುದ್ದೆ ಮಾಡಪ್ಪಾ ಗೊಜ್ಜು ಮಾಡಿಕೆಂಬೋಗಪ್ಪಾ ನಿನ ಕೈಗ ಕೊಡು ಅದು ಮೆಣಸಿನಕಾಯಿ ಸುಡು, ಅದಕಾಗಿ ಮುದುಕಿ ಇಷ್ಟು ಸಂಪಾದಿಸ್ಯಾಳ ಬಿಡಪ್ಪಾ ಅಡವಿ ಕಾಯೊ ಅಡವಿಗೊಲ್ಲರು, ಆಹಾ ಇಲ್ಲದಿದ್ದರೆ ಅಡವ್ಯಾಗ ಎಂಗ ಕಾಲ ಕಲಿತಿದ್ದರು, ಆಹಾ ಗೊಲ್ಲರು ನಾರಾಣತಮ್ಮಂತಾರು ಎವ್ವಾ ಈಗ ಊರು ಕಟ್ಟಿತೀವಿ ಎಲೆ ಅಡಿಕೆನ್ನ ಹಾಕ್ಯೊ,

ಆಗ ಕರೆ ಅಡಿಕೆ ನಾನು ನೋಡಿಲ್ಲ
ಹಚ್ಯನೆ ಎಲೆ ನೋಡಿಲ್ಲ

ನನಗೆ ತಂದು ಕೊಂಡಿನಪ್ಪಾ ಕಲ್ಡಿ ಬೋಟಿನ ಅಡಿಕೆ ಕಲ್ಡಿ ಬೋಟಿನ ಅಡಿಕೆ ಬಾಯಾಗ ಉಗ್ಯಾಳೊ ಸುಣ್ಣ ಬಾಯಾಗ ಹಾಕ್ಯಾಳೋ ಅದಕೆ ಪಾಪ ಮುದುಕಿ ಇಷ್ಟು ಸಂಪಾದಿಸ್ಯಾಳಪ್ಪಾ ಇಲ್ಲದಿದ್ರ ಸಾಂಪಾರಸಾಕ ಆಗಲ್ಲ, ಎವ್ವಾ ಇಲ್ಲೆ ನೋಡು ನಾವು ಬರಲಿದ್ದರೆ ನೀನು ಬಾತಿ ಬಡ್ಡಿಗಂಟು ತೀರಸ್ತಿವಿ ವರ್ಷಲಿ ಆ ಈಗ ನೀನು ಹೋಗವ್ವಾ ನಿನಗೆ ಏಳು ಕೊಡಪಾನ ರೊಕ್ಕ ಏಳು ಕೊಪ್ಪರ ಆಸ್ತಿನ ಏನು ಮೋಸ ಮಾಡಿದಿಲ್ಲ ಹೋಗು ಎಪ್ಪಾ ಕೊಡಲಿದ್ದರೆ ಆಗೈತು ಅಂತಾ,

ಬಿಡೊ ಹೊತ್ತಿಗೆ ನೋಡರಾ ಸಯ್
ಓಡಿ ಓಡಿ ಬಂದಳಾ ಸಯ್
ಒಂದು ಬಾರೆ ಮುದುಕಿರಾ ಸಯ್
ಕೊಡಗಳ ಮ್ಯಾಲೆ ಬಿದ್ದಳಾ ಸಯ್

ಒಳ್ಳಾಡಿ ಒಳ್ಳಾಡಿ ಅಳ್ತಾಳೆ ಎಮ್ಮಾ ಹುಡುಗರ ಕೈಯಾಗೆ ಕೊಟ್ಟಿಲ್ಲ ಹತ್ತು ಪೈಸೆ ನಾನು ಕೊಟ್ಟಿಲ್ಲೆ ಎಮ್ಮಾ ಏಳು ಕೊಡ ರೊಕ್ಕ ಹೋಯಿತು, ಏಳು ಕೊಪ್ಪರ ಆಸ್ತಿ ಹೋಯಿತೆತಿ ಏಳನೆ ಕೊಪ್ಪರ ಕಾಣವ್ವಾ ಅಂತಾ ಮುದುಕಿ ಕಂಬಳಿ ಮ್ಯಾಲೆ ಕಂಬಳಿ ಹೊದಿಕೆಂಡು,

ಜೀವ ಇಲ್ದಂಗ ಐದಾಳ ಸಯ್
ಮಾತಾಡಲಿಕೆ ಬರತಿಲ್ಲ ಸಯ್
ಮುದುಕಿಗಾಗಿ ನೋಡರಾ ಸಯ್
ಮುದ್ಯಾತನಾಗಿ ಬಂದಾನ ಸಯ್

ಆಗ ಕೋಳಿ ಮೇಸಕೆಂತ ಕದ ಹಾಕಿ ತಾನು ಬಂದಾನ,

ಎದ್ದೇಳು ಎದ್ದೇಳು ಮುದ್ಯಾಕಿ
ನನಗೆ ಉಂಬಾಕಿಡುವಂತಿ
ಮಾತನಾಡುವಲ್ಲು ನೋಡಮ್ಮಾ
ಅಲೆಲೆಲೆ ಮುದುಕ ನೋಡದಾ
ಹೋದಳು ಹೋದಳು ಇಲಳಮ್ಮಾ
ಇನ್ನ ಆಯಿತಮ್ಮ ಬಾಳಿವೆ ಹಾಳಾಯಿತು
ಏಳು ಮಂದಿ ಸೊಸಿನೋರುರಾ ಸಯ್
ಏಳು ಮಂದಿ ಸೊಸಿನೋರುರಾ ಸಯ್
ಏಳು ಮಂದಿ ಮಕ್ಕಳು ನೋಡುರಾ ಸಯ್
ಒಂದು ತಾಗ ಇರದಿಲ್ಲರಾ ಸಯ್

ಇನ್ನ ಗಡಿಗೆ ಬ್ಯಾರೆ ಹಾಕ್ಯಾತೊ ಅಂಬೊತ್ತಿಗೆಲ್ಲ ಸೊಸಿನೊರು ಬಂದರು ಏಳು ಮಂದಿ ಮಕ್ಕಳು ಏಳು ಮಂದಿಗೆ ಹುಟ್ಟದೋರು ಎಲ್ಲರೂ ಮುದುಕಿ ಸುತ್ತು ಕುಂತ್ಕಂಡರು,