ಈಗ ಹೊಸೂರು ಊರೇ ಕಟ್ಯಾರ
ಸಾವ್ರ ಲಕ್ಷ ಮನಿಗಳ ಕಟ್ಯಾರ
ಸಾಲ ತಂದು ಅಣ್ಣಾ ಮಕ್ಕಳು
ಅಣ್ಣಾ ಮಕ್ಕಳನೆ ನೀವು ಕಡಿಬೇಕು
ಊರಿಗೆ ಹೋಗಿ ಎಂಗನ ಕಡಿಯಿರಿ

ತಿತ್ವೆ ಕುಣ್ಯಾನೋ ಕಳ್ಳಿ ಕುಣ್ಯಾನೋ, ಆಹಾ ಎಲ್ಲೇನಾ ಗುಡಿಗಳಾಗೊ ಬಚ್ಚಿಟ್ಕಂಡು ಆವಾಗ ಅವರು ಊರು ಬಿಟ್ಟು ಒರಗ ಬಂದಾಗ ಒಬ್ಬರು ಬಂದಾಗ ಇಬ್ಬರು ಬಂದಾಗ ನೀವು ಕಡಕಂಡು ಬರಬೇಕಪಾ, ಆಹಾ ನಿಮ್ಮಿಗೆ ಸೇರು ಕಡಗ ಕೊಡ್ತೀನಿ ಸಾವ್ರ ರೂಪಾಯಿ ಸಂಸ್ಕಾರ ಕೊಡ್ತೀನಿ, ಆಹಾ ಅವ್ರ ಕಡದು ಬಂದ ಮ್ಯಾಲೆ ಎಕರೆ ಭೂಮಿ ಇನಾಮು ಕೊಡ್ತೀನಿ ನಿಮಗೆ, ಆಹಾ ಅಂದರೆ ಎಷ್ಟು ಪರಾಕ್ರಮ ನಾಯ್ಕರು ಏನಂತಾರ

ಎತ್ದೋಕರಣೆ ಕಲ್ಲು ಅಲ್ಲಪ್ಪೊ
ಮಠಣೆ ಕಲ್ಲು ವೈತಪ್ಪಾ
ಎಪ್ಪಾ ಕರಕಾಕಿ ಬರೋಗಿಲ್ಲಪ್ಪೊ
ಊರಿಗೋಗಿದು ಹಿಂದಕೆ
ಎಪ್ಪೆ ಸತ್ರೆ ಹೋಗೋದಿಲ್ಲನಾ
ಅಣ್ಣಾ ಮಕ್ಕಳು ಸಿಗೋದಿಲ್ಲರಾ ಸಯ್
ಸ್ವಾಮಿ ಶಕ್ತಿದವರುರಾ ಸಯ್
ಇದ್ಯೆ ಬುದ್ದಿ ಓದಿಕೆಂಡವರು ಸಯ್
ಹನ್ನೆರಡು ವಯಸ್ಸು ಹುಡುಗರು ಸಯ್
ನಮ್ಮಿಗೆ ಸಿಗಂಗಿಲ್ಲರಾ
ನಾವು ಕಡಿಯಲಿಕ್ಕೆ ಹೋದರೆ ಸಯ್
ನಮ್ಮ ಹೆಂಡ್ರರಂಡೇರು ಮಾಡ್ತಾರ ಸಯ್
ಹರೇದೋರು ರಂಡೇರು ಹಾಗ್ತಾರ ಸಯ್
ಒಲ್ಲಿ ಏಪ್ಪಾ ನಾವು ಬಲ್ಲಿವಿ ಸಯ್
ಲಕ್ಷ ಕೊಟ್ಟರೆ ಹೋಗೊದಿಲ್ಲರಾ ಸಯ್

ಸೇರು ಬೆಳ್ಳಿ ಕೊಟ್ಟರು ಹೋಗದಿಲ್ಲ ಲಕ್ಷ ಕೊಟ್ಟರೆ ಹೋಗೋದಿಲ್ಲ ಕರಣೆ ಕಲ್ಲು ಒಂದು ಬಿಟ್ಟು ಯಾವ ಪಟ್ಣನ್ನ ಹೇಳು ನಾವು ಕಳ್ಳತಾನ ಮಾಡಿಕೆಂಬರ್ತೀವಿ, ಆಹಾ ಯಾರನನ್ನ ಹೇಳು ನಾವು ಕಡಿಕಂಬರ್ತೀವಿ ಕರಣೆ ಕಲ್ಲು ಅಲ್ಲ ಕಲ್ಲಕಾಕಿ ಇದ್ದಂಗ ಅದು, ಆಹಾ ಕರಣೆ ಕಲ್ಲು ಅಲ್ಲ ಮರಣಿಕಲ್ಲು ಅದು ಮರಣಾಗಿ ಹೋಕಿವಿ ಅಲ್ಲೆ ನಾನು ಹೋಗೋದಿಲ್ಲ ಲೇ ನಿನಮದ್ವಿಗೆ ನಾವು ಸಾಲ ಕೊಟ್ಟೀವಿ ಈಗ ಎಲ್ಡು ಸಾವ್ರಕ ನಾಕು ಸಾವ್ರ ಆಗೈತೆ, ಆಹಾ ಪಾಪ ಬಡ್ಡಿ ಬಿಟ್ಟು ಗಂಟು ಕೊಡರ ಅಂದಿವಿ ಇಲ್ಲರಿ ನಿಮ್ಮ ರೊಕ್ಕ ಕೊಡ್ತೀವಿ ತಗೊರ್ರೀ ರೊಕ್ಕ ತಗೋ ಅಂತಿರಾ ನಾವೇನು ಇಲ್ಲ ನಿಮ್ಮನಾ ಏನಂತಾ ಬಡ್ದು ಹಾಕತೀನಿ ನನ ಮನೆ ಹಿಂದಕಾ ಹೋಗಿ ಎಲ್ಡು ಕೊಲ್ಲುಕಿತ್ತಿ ಇವರು ಕಳ್ಳತನ ಮಾಡ್ಯಾರ ಅಂತಾ ಹನ್ನೆರಡು ವರುಷ ಇವರ ಜೈಲ್ದಾಗ ಹಾಕಬೇಕು ಬರೆ ಇನ್ನ ಅನ್ನ ಇಲ್ಲ ನೀರು ಇಲ್ಲ ಬರೆ ಒಣಗಿದ ರೊಟ್ಟಿ ಮ್ಯಾಲೆ ಇನ್ನ ಒಣಿಗಿಕೆಂಡು ಬರ್ಬೇಕು, ಆಹಾ ಅಂತಾ ಅಂತೀನಿ ಹೋದರೆ ಕರುಣೆ ಕಲ್ಲಿಗೆ ಹೋಗಿ ಅಣ್ಣಾನ ಮಕ್ಕಳ್ನ ಕಡಿದು ಬರಬೇಕು ಇಲ್ಲದಿದ್ದರೆ ಗೌರ್ನಮೆಂಟ್ ಇಡಿದು ಹಾಕತಾನಂತೆ ನಾನು ಒಣಗಿಕೆಂಡು ಬರಬೇಕಂತೆ,

ಗೌರ್ನಮೆಂಟಿಗೇಳದಿದ್ದರೆ ಸಯ್
ನಿಮ್ಮಪ್ಪಗೆ ಹೇಳು ಬರೋಗಾ
ಅಂತಾ ಏರೆ ನೋಡರಾ ಸಯ್
ನಮ್ಮಿಗೇನು ಮಾಡದಿಲ್ಲರಾ ಸಯ್
ಅಂತ ಇನ್ನ ಅವರು ರಾ
ನಮ್ಮಿಗೇನು ಮಾಡದಿಲ್ಲರಾ
ಅವರು ಜಾಲಿ ಸಕ್ಕರೆ ಸರಾಯಿ ಹಾಕಿದ್ರೆ
ಒಂದು ಸರಾಯಿ ಕುಡಿದು ಬಿಡ್ತಾರ
ಟೋಪಿ ಕಡಗ ಇಡ್ತಾರ ಸಯ್
ನಮ್ಮಿಗೆ ಕೈ ಮುಗಿತಾರ
ಅವರು ಒಂದೆ ನೋಡಾರ

ಏ ಅವ್ರಿಗೆ ಸಂಬಳ ಕೊಟ್ಟು ನಿಮ್ಮನ ಬಡಿಸ್ತೀನಿ, ಏನ್ ಬಡಿತಾರ ಏಲ್ಡು ಏಟು ಬಡಿತಾರ ಅಷ್ಟೆ ಅಲ್ಲ ಆರು ತಿಂಗಳು ದುಡಿ ಅಂತಾರ ಹೇಳಿದ ಕೆಲ್ಸ ಮಾಡತೀವಿ ಅಷ್ಟೆ ಕಟ್ಟಿಗೆ ಬಡಿ ಬಡಿ ಅಂತಾರ ಕೊಲ್ಲು ಬಡಿ ಬಡಿ ಅಂತಾರ ಅಲ್ಲೆ ಹೋಗಿತೀವಿ ಮದ್ಯಾನಗ ಒಂದು ರೊಟ್ಟಿ ಒಂದು ಮುದ್ದೆ ಕೊಡ್ತಾರ ಆಹಾ,

ಆರು ತಿಂಗಳ ದುಡಿದು ಬರ್ತೀನಿ ಸಯ್
ಜೀವೇನು ಕಳಿಯಂಗಿಲ್ಲರಾ ಸಯ್
ಜಲ್ಮೇನು ತಗಿಯಂಗಿಲ್ಲರಾ ಸಯ್
ಜೀವ ತಗದರಾ ಅದರಿಕೆ ಆತಿತ್ತು ಸಯ್
ಸುಮ್ಮನೆ ಬದುಕು ಮಾಡ ಅಂತಾರ ಸಯ್
ಇಲ್ಲಿ ಮಾಡದು ಅಲ್ಲಿ ಮಾಡತೀವಿ ಸಯ್
ಆರು ತಿಂಗಳು ಬಂದು ಬಿಡ್ತೀವಿ ಸಯ್
ಬಂದಮ್ಯಾಲೆ ನೀನು ಎಲ್ಲಿರಾ ಸಯ್
ನಿನ ಬಜಾರಾಗ ಕುತ್ತಿಗೆ ಕೊಯಿತೀವಿ ಸಯ್

ನಿನ ಜಲ್ಮ ಕಳಿತೀವಿರಾ ಬಜಾರಾಗ ಕುತಿಗೆ ಕೊಯಿತೀವಿ ನಿನ ಜಲ್ಮನಾ ನಾವು ಉಳಸ್ತೀವಾ,

ಬಿದ್ದೋಗು ನಿನ್ನ ಮಗನೆ ಸಯ್
ಲೋಕನೆ ಕೊಯ್ಯೋದುಕ ನಮ್ಮದು ಸಯ್
ಸಟ್ ಸರವೊತ್ತಿನಾಗರಾ ಸಯ್
ಅಮಾಸಕತ್ತಲ ನೋಡರಾ ಸಯ್

ನಿನ ಹೊಲಕಾಗಿ ಕಡದು ಬಿಡತೀವಿ ಅವರೆ ಹದರಿಸಿಬಿಟ್ಟರಪಾ, ಆಹಾ ಖರೇವ್ರೆ ಇವರು ಆರು ತಿಂಗಳು ದುಡೀತಾರ ಬರ್ತಾರ ಜೀವ ತಗಂಗಿದ್ದರೆ ಅಲ್ಲ ಗೌರ್ಮೆಂಟು ಹಾಳಾಗಿ ಹೋಗೋದು, ಆಹಾ ಹದರಿಕ್ಯೆಂಗಿಲ್ಲ ನಾಕೇಟು ಬಡಿತಾರ ಇಲ್ಲಿ ಆಕೊ ಕೂಳು ಅಲ್ಲಿ ಆಕ್ತಾರ ಉಮ್ಮತಾರ ಬದುಕು ಮಾಡ್ತಾರ ಆರು ತಿಂಗಳು ಇರ್ತಾರ ಬರ್ತಾರ ಬಂದ ಮೇಲೆ ಸುಮ್ಮನೆ ಬಿಡ್ತಾರ ಇವರು ನನ್ನಲ್ಯೊ ಕುತ್ತಿಗೆ ಕೊಯಿತಾರ ಇವರು, ಆಹಾ ಸುಮ್ಮನೆ ಹೊಲ್ದಾಗ ತೆನೆ ಇರಾದಿಲ್ಲ ಒಂದು ಏನು ಇರಾದಿಲ್ಲ ಇವರನ ತಡೀಬಾರದಪಾ, ಆಹಾ ಎಪಾ ನೀವು ಹೋಗಲಿದ್ದರೆ ಆಯಿತಪಾ ನಾನು ರೊಕ್ಕ ಇಟಕಂಡು ಬಂದೀನಿ ಈಗ ಸೇರು ಸೇರು ಕಡಗ ಆಕ್ಯಂಡು ಬಂದೀನಿ, ಆಹಾ ಅಲ್ಲಿ ಹಳ್ಳದಾಗ ಈಸಲು ಹಳ್ಳಿ ಐತೆ ನನಗೆ ಹದರಿಕೆ ಆತೈತೆ ಲೇ ಅಲ್ಲಿಗೆನ ಒಬ್ಬನು ಬಿಟ್ಟು ಬರುವಂತಿರಿ ಬರ್ರೀ ಬೇಗೆ ಆಗ್ಯೆತೆಪ್ಪಾ ಹೊತ್ತು ಮುಣಿಗೈತೆ ಇಲ್ಲಿ ದೀಪ ಬಿದೈತೆ ಅಂದು ಇಲ್ಲಿ ಬರುವಾಗ ಒಬ್ಬನು ಬಂದಿ ಈಗ ಸಾಯವಾಗ ಒಬ್ಬನು ಸಾಯಿಲಾರ, ಆಹಾ ಅಂದ್ರೆ ಈಗ ನೀವು ನಾಲಾರು ಐದೀರಿ ಅಣ್ಣ ತಮ್ಮರು ಒಬ್ಬನು ಬಂದು ಅಲ್ಲಿ ಹಳ್ಳ ತಟಾಯಿಸಿ ಬರ್ರೆಪಾ ಈಸಲುವರೆಗೆ ಲೇ ದೊಡ್ಡೋನೆ,

ಹೋಗಿ ಬಾರಾ ಹಸ್ರಪಾ ಕಳ್ಳ ಏನೆ
ಅಂಗಾರೆ ಹೋತಿನಿ ಹೋತಮ್ಮರಾ
ಕಳ್ಳನೂ ಕುದ್ರಿ ಹಾಕ್ಯಮಡ ಸಯ್
ಇನ್ನ ಸಿದ್ದೋಗಿ ಸಿದ್ದೋಗಿ ಕುದ್ರಿರಾ ಸಯ್
ಎಲ್ಡು ಕುದ್ರಿ ಜತಿಗೆ ಬರ್ತಾವ ಸಯ್
ಅವರು ಇನ್ನ ಬರ್ತಾರ
ಅವರೆ ಇಬ್ಬರು ಬರ್ತಾರ
ತಾವೆ ಸಿದ್ದೋಗಿ ಕಳ್ಳರಾ

ಬರ್ತಾ ಬರ್ತಾ ಏನಂದ ನಾ ಕಳ್ಳ ತಲ್ಲಿ ಬಂದರು ಆಗ ಕಳ್ಳದೋನು ಕೈ ಇಡಕಂಡು ಏನಂತ ಬೇಡಿಕೊಂತಾನ ಸಿದ್ದೋಗಿ ಎಪ್ಪಾ,

ನಿಮ್ಮಪ್ಪಾ ನಮ್ಮಪ್ಪಾ ನೋಡಾರೆ ಒಂದೆ ತಲ್ಲಿ ಇದ್ದವರು
ಒಂದೆ ಗಂಗಳಗ ಉಂಬೋರು ಒಂದೆ ಸೆರಿಗಾಗೆ ನೀರಾಲೆ
ಒಂದೆ ಇಸ್ಕೋಲಾಗ ಓದ್ಯಾರ ಒಂದೆ ಬಾರಿ ಮದ್ವೆ ಆಗೈತೊ
ಎಪ್ಪಾ ಎಷ್ಟೊ ಜತಿಗಾರ ಕೇಳಲಾ ನನ್ನ ಮಾತನ ಕಳ್ಳಲೆ

ನೋಡಪಾ ಎಷ್ಟೊ ಜತಿಗಾರರು ಸೋಯಿತಾ ಜತಿಗೆ ಇದ್ದವರು, ಆಹಾ ನನ ಮಾತು ಕೇಳಪಾ ಈಗ ನನ ಮಾತು ಕೇಳು ಈಗ ನೀನು ನನ ಮಾತು ತಪ್ಪಿಸಬ್ಯಾಡ ಇಲ್ರೀ ನಿನ ಮಾತೇನ ನಾನು ಕೇಳ್ತೀನಿ ಈಗ ನಮ್ಮ ತಮ್ಮನೋರು ಕೇಳಬೇಕಲ್ಲಪಾ, ಆಹಾ ಎಂಗನ್ನಪಾ ದೇವ್ರ ದಾರಿ ಕೊಟ್ಟರೆ ಹೋಗ್ರೀ ಇಲ್ಲದಿದ್ದರೆ ಈಸಲು ಗಿಡದಾಗ ಇದ್ದುಹೆಂಡಕುಡ್ದು ಐದು ದಿವಸ ಸುಮ್ಮನೆ ಹಳ್ದಾಗ ನಿರ್ಕೆ ಮಾಡಿ ಸಿಗಲಿಲ್ಲ ಅಂತ ಹೇಳರಪಾ ಇನ್ನೇನು ಮಾಡ್ತಿಯಪಾ ಅಂತಾ ಬ್ಯಾಡ ಬ್ಯಾಡ ಅಂದರೆ ಸೇರ ಕಡಗ ಕೊಟ್ಟಾ ಸಾವ್ರು ರೂಪಾಯಿ ಬೊಕ್ಕಣಾದಾಗ ಇಟ್ಟು, ಆಹಾ ಸಿದ್ದೋಗಿ ಮಾತನಾಡೋನು ಈ ಕಳ್ಳದೋನಿಗಿಟ್ಟು ಇನ್ನ ಹೋಗಪಾ ನಿನ್ನ ಊರಿಗೆ ನೀನು ಹೋಗು ನನ್ನ ಊರಿಗೆ ನಾನು ಹೋಗತೀನಿ ಅಂತಾ,

ಕುದ್ರಿ ಮ್ಯಾಲೆ ಬರ್ತಾನ ಸಯ್
ಚಳ್ಳ ಚಳ್ಳನೆ ಹೊಡಿತಾನ ಸಯ್
ಬಡೆಗಾವನೆ ಬಿಟ್ಟಾನ
ದಡೆಗಾವಿಗೆ ಬಂದಾನ
ಬಂದು ಇಳಿದಾನ

ಲೇ ಬ್ಯಾಗಾರ ಸುಂಕ ಕುದ್ರಿ ಇಡಕಂಡೋಗಿ ಕಟ್ಯಾಕಪಾ ಅಂದ ಕುದ್ರಿ ಇಡಕಂಡು ಕಟ್ಯಾಕಿದ ಮೇವಾಕಿದ, ಆಹಾ ರಾಜ ಕಛೇರಿಗೆ ಬಂದು ಕುಂತ್ಕಂಡ, ಆಹಾ ಇವ್ರು ಬಂದರು ಆಗ ಕುದ್ರಿ ಮ್ಯಾಲೆ ಬಂದ ಇಳಿದಾ, ಆಹಾ ಆಗ ಇವ್ರ ತಮ್ಮ ನೋರು ಬಂದಾರಾ ನಮ್ಮಣ್ಣಾ ಕಡಗ ಆಕ್ಯಂಡು ಬಂದಾನ,

ಯಾರನೊ ಹೆಣಸರನ ಬಡದಾನ
ಕೈಯಾಗ ಕಡಗಕಸಿ ಕಂಡು
ನಮ್ಮಣ್ಣಾ ಬರ್ತಾನ

ಅಣ್ಣಾ ಏನಣ್ಣಾ ಅಂದ ತಮ್ಮ ನೀವು ಮೂರು ನೋಡಪಾ ಏನನ ಬೈರಿ ದೊಡ್ಡೋನು ಬ್ಯಾಡೋ ಅಂದ್ರೆ ಸಿದ್ದೋಗಿ ಮಾರವಾಡೇನೊ ನನಗೆ ಕಡಗ ಹಾಕಿದ ಈಗ ಸಾವ್ರ ರೂಪಾಯಿ ಬೊಕ್ಕಣಾದಾಗ ಇಟ್ಟು ಕಳಿಸ್ಯಾನಪಾ, ಆಹಾ ಈಗ ಹೋಗ್ರಪಾ ಎಂಗನ ಕೈಮುಗಿತೀನಂತಾ ಕೈ ಇಡಕಂಡು ಮುಗಿತಾಗ ದೊಡ್ಡೋನು ಮಾತು ತೆಗೆದಾರಕ ಬರ್ತೈತೆ ಏನಪ ನೀವಾಗಿ ದೇವ್ರು ದಾರಿ ಕೊಟ್ಟರೆ ಹೋಗ್ರಿ ಇಲ್ಲದಿದ್ದರೆ ಈಸಲು ಗಿಡತಾಗೆ ಹೆಂಡ ಕುಡಿಕಂತ ಆ ಹಳ್ಳದಾಗ ನಿದ್ದೆ ಮಾಡಿ ಬರ್ರಿ ಅಂದ ಈಗ ಹೋದರೆ ಹೋಗಾನ ಇಲ್ಲದಿದ್ದರೆ ಅಲ್ಲೆ ನಿದ್ದೆ ಮಾಡಿ ಬರಾನ ಸಿಗಲಿಲ್ಲ ಅಂತಾ ಅವನೇನು ಮಾಡ್ತಾನ, ಆಹಾ ನಮಗೆ ಸೇರು ಕಡಗ ಸಾವ್ರ ರೂಪಾಯಿ ಉಳಿಕಂಡುತಲ್ಲ ಆಹಾ,

ಅಣ್ಣಾ ಹೆಣಸರು ಲಂಚ ತಂಗದೀಯಾ
ಎಂತಾ ಗಂಡಸು ವೇದಿಯೋ
ಹೆಂಗಾಸರು ಸಂಗ ಮಾಡತೀಯಾ
ಬುದ್ದಿವೈತೊ ಬುದ್ದಿ ಇಲ್ಲಣ್ಣಾ
ಹೆಣಸರು ಲಮಚ ಇಡಿದೀಯಾ
ಬುದ್ದಿವೈತೆ ಬುದ್ದಿ ಇಲ್ಲಣ್ಣಾ
ದೊಡ್ಡೋನು ತಲ್ಲಿವೈದಿಯೋ

ಎಷ್ಟು ಬಾದರ ಹೇಳಲೊ ನೀನು ಸಂಸ್ಕಾರ ತಗಂಡು ಬಂದೀಯ ಈಗ ಏನು ಮಾಡ್ತೀರಪಾ ಬಡೆನ್ನ ಬಡ್ರಿ ಕೊಲ್ಲನಾ ಕೊಲ್ಲರಿ ಈಗ ಸಂಸ್ಕಾರ ತಗಂಬಾರು ಬಂದೆ ಜೀವ ಕಳೆಯೋದು ಒಂದೆ ಆತ ಕೊಡೋದು ಒಂದೆ ಸಾಲ ತಗಂಬಾದು ಒಂದೆ, ಆಹಾ ಅಣ್ಣಾ ಈಗ ತಗಂಡು ಏನು ಮಾಡಾನ ಅಂದರೆ ಸರ್ರೇಪಾ ಅವ್ರನಾ ನೋಡಿಲ್ಲ ಅಲ್ಲ ನಾವು ಎಂಗ ಮಾಡೋದು ಅವ್ರು ಊರಿಗೆ ಹೋಗಿ ಎಲ್ಲ ಬಿಚ್ಚಿಕೊಳ್ಳೇದು ನಾವು, ಆಹಾ ಎಲ್ಲಿ ಕಾಯಿಬೇಕು ಅತ್ತನಾ ಆಹಾ ಎಲ್ಲಿ ಬರ್ತಾರಂತ ನಮಗೆ ಗೊತ್ತಾ, ಆಹಾ ಏನಿಲ್ಲಾ ಅವರು ಕೈಯಾಗ ಐದಾನ ಆಗ ಗಿರಿಸಲಾಗಿರಿ ಮೇಲೆ ಮಂತ್ರಿ, ಆಹಾ ಅವರು ಹೇಳದ ಬದುಕು ಮಾಡೋನು ಅವನ ಕರಕಂಡು ಹೋದರೆ ನಮಗೆ ತೊರಸ್ತಾನ ನಾವು ಮಂತ್ರ ತಂತ್ರ ಕಟ್ಟೋರು ಕುತ್ತಿಗೆ ಕೊಯ್ಯೋರು, ಆಹಾ ಸರೆ ಬಿಡು ಅಂತಾ ಪತ್ರ ಬರೆದು ಹಾಕಿದ ಹಾಳೆ ಇಟ್ಟು ಕಳಿಸಿದ್ರು ನೋಡಪಾ ಸಿದ್ದೋಗಿ ನಿನ ಕೈಯಾಗ ಇರೋನು ಕಳಿಸಿದ್ರೆ ಅವ್ರು ಹೆಸ್ರು ನಮಗೆ ಗೊತ್ತಿಲ್ಲ ಅವ್ರು ಮೊಖ ನೋಡಿಲ್ಲ ಆಗ ಆತ ತೋರಿಸದ್ರೆ ನಾವುನ ಪೋಟು ಕಟ್ಟಿ ಮಂತ್ರ ಬರೆದು ನಾವು ಜೀವಕ ಹೋತಿವಿ, ಆಹಾ ತೆಗೆಯಿರಿ ಇಲ್ಲದಿದ್ದರೆ ಇಲ್ಲ ಅಂದರೆ ಲೇ…. ನನ ಕೈಯಾಗ ಇದ್ದವನೆ ಈಗ ತಿಂಗಳಿಗೆ ನೂರ ಐವತ್ತು ತಿಂಬೊನೆ ಹೋಗು ಬಾಪ್ಪಾ ಅಂದಾ ಎಲ್ಲಿಗೆ ಅಂದಾ ನಮ್ಮಣ್ಣಾನ ಮಕ್ಕಳು ತೋರಿಸು ಅವ್ರು ಕಳ್ಳರು ಮಂತ್ರ ಬರೆದು ಆಗ ಚೌಕಟ್ಟು ಕಟ್ಟಿ ಜೀವ ಕಳೀತಾರ,

…. ನೀನು ಸಾವ್ರ ರೂಪಾಯಿ ಕೊಟ್ಟರೆ ಸಯ್
ನಾನು ಹೋಗೋದಿಲ್ಲ ನೋಡಪಾ ಸಯ್
ಅವರು ಕೊಲ್ಲಾಕೆ ಹೋದರೆ ಸಯ್
ಅವರು ಕೈಯಾಗೆ ಸಾಯತೀನಿ
ನೀನು ಹೋಗು ನೋಡಯ್ಯ ಅಣ್ಣಾಮಕ್ಕಳ ತಲ್ಲಿಗೆ

ಏ…. ನೀನೆ ಹೋಗಿ ಕೊಲ್ಲಿ ಬಾ ಅಂತೀಯಾ, ಆಹಾ ನನ ಕೈಯಾಗ ಇದ್ದವನೆ ಈಗ ನನ ಮಾತು ಕೇಳಿ ಹೋದರೆ ಒಳ್ಳೇದು ಇಲ್ಲದಿದ್ದರೆ ಕೈಕಾಲು ಮೂಳೆ ತೆಗಿತೀನೊ,

ಕೈ ಕಾಲು ಮುರಿದು ಬಿಡತೀನಿ ಸಯ್
ಸಾಯೋತನಕ ಕೂಳು ಹಾಕ್ಯಾನೆ

ಹೋದರೆ ಅಣ್ಣಾನ ಮಕ್ಕಳನ ತೋರಿಸು ನೀನೇನು ಕಡಿಬ್ಯಾಡ ಸುಮ್ಮನೆ ತೋರಿಸು, ಆಹಾ ಇಲ್ಲದಿದ್ದರೆ ಕೈಕಾಲು ಮುರಿದು ಸಾಯೋ ತನಕ ಕೂಳು ಹಾಕತೀನಿ ಅಂದಾ ಇವ್ನ ಕೈಯಾಗ ಕೈಕಾಲು ಮುರ್ಕಂಡು ಇವ್ನ ಕೈಯಾಗ ಕೂಳು ತಿಂಬೊ ಬದಲು ಅಣ್ಣಾ ಮಕ್ಕಳ ಕೈಯಾಗೆ ಸತ್ತರೆ,

ನನಗೆ ಪುಣ್ಯ ನಡೀತೈತೊ
ಅವರನಮಣ್ಣಾ ಆಕವರೆ
ಎಷ್ಟು ಪುಣ್ಯ ಪಡದಂಗೆ
ಇವನು ಮಕ್ಕಳಿಲ್ಲದ ಪರದೇಶ ಏನು
ಇವನು ಕೈಯಾಗ ಯಾಕ ಸಾಯಿಬೇಕು
ಹೋತಿನಿ ಬಿಡ್ರ ಸಿದ್ದೋಗಿ

ಎಲ್ಲಿಗೆ ಹೋಗಬೇಕು ಅಂದ ಕಳ್ಳರು ತಲ್ಲಿಗೆ ಹೋಗು ಅವ್ರು ನೀವು ಕಲ್ತು ಆಗ ಕರಣಿ ಕಲ್ಲಿಗೆ ಹೋಗರಿ ಅಂದ ಸರೆ ಬಿಡಂತಾ ಆಗ ಸಿದ್ದೋಗಿ ತಲ್ಲಿಗೆ,

ಸಿದ್ದೋಗಿ ಬಿಟ್ಟಾ ನೋಡಣ್ಣಾ
ತಾನೆ ಬರ್ತಾರ ನೋಡಣ್ಣಾ
ಕಳ್ಳರು ತಲ್ಲಿಗೆ ಬರ್ತಾನ

ಗಿರಿಸಾಲಿ ಗಿರಿಮೇಲೆ ಬಂದಾ ಏನಪಾ ನಮ್ಮ ಸಿದ್ದೋಗಿ ಹೇಳಿ ಬಿಟ್ಟಾನ ಮತ್ತೆ ನಮ್ಮಣ್ಣನ ಮಕ್ಕಳ್ನ ತೋರಿಸಬೇಕಂತೆ ಆಗ ತೋರಿಸ್ತೀನಿ ಹೋಗಾನ ಬರ್ರೀ ಕರಣಿ ಕಲ್ಲಿಗೆ, ಆಹಾ ಅಂದ್ರೆ ಅವ್ರು ಏನ್ ಮಾಡಿದರು ಕರಣಿ ಕಲ್ಲಿಗೆ ಹೋದ ಮ್ಯಾಲೆ ಮರಣಾಗಿ ಹೋತಿವಿ, ಆಹಾ ಈಗ ಅತ್ತಾಗ ಸತ್ತರೆ ನಮ್ಮ ಹೆಂಡರನ ರಂಡೆ ಮಾಡೋರು ಯಾರು, ಆಹಾ ಸತ್ತಿದ್ದು ಎಂಗ ತಿಳಿಬೇಕು, ಆಹಾ ಅಂಗಲ್ಲ ಈಗಲೇ ರಂಡೆ ಮಾಡಿ ಮನ್ಯಾಗ ಕುಂದರಿಸಿ ಹೋಗಾನ ಜೀವದಲ್ಲಿ ಬಂದರೆ ಬಳಿಗಾರ ಮಸ್ತು ಬರ್ತಾರ, ಆಹಾ ಮೊಣ ಕೈ ತನಕ ಏರಿಸಾನ, ಆಹಾ,

ಬಂದ ಕಡಿಗೆ ಎಲ್ಡು ತಾಳಿ ಕಟ್ಟಿಕೆಂಬಾನ ಮತ್ತೆ ತಿರಗ ಅಂತಾ,
ಹೆಂಡ್ರು ತಲ್ಲಿಗೆ ಬರ್ತಾರ ಸಯ್
ಹೆಂಡ್ರು ರಂಡೆ ಮಾಡ್ಯಾರ ಸಯ್
ಕೈಯಾಗ ಬಳೆ ಹೊಡದಾರ ಸಯ್
ಮೂರುತೊಳ ತಾಳೀರಾ ಸಯ್
ಕೊಳ್ಳಾಗಳ ತಾಳಿ ಹರಿದಾರೆ
ಅವರೆ ಕುಂತು ನೋಡಾರ
ತಲೆಮ್ಯಾಲೆ ಕಣ್ಣೀರು ಸುರಿತಾವ ಸಯ್
ರಂಡೆ ಮಾಡಿ ಇನ್ನ ಕುತಾರ
ರಂಡೆ ಮಾಡಿ ನೋಡಾರ

ಅವರನಾಗಿ ಕುಂದರಸಿ ಏನ್ರಿ ನಮ್ಮನ ರಂಡೆ ಮಾಡಿದಿರಿ ಎದಕರಿ ಕೊಳವೆ ಕರಣಿ ಕಲ್ಲಿಗೆ ಹೋತಿವಿ, ಆಹಾ ನಾವು ಸಾಯಿತೀವೊ ಉಳಿತೀವೊ, ಆಹಾ ಜೀವದಲ್ಲಿ ಬಂದರೆ ನಾವು ಲೋಕದಾಗ ಜೀವದಲ್ಲಿ ಬಂದರೆ ನಾವು ಬಳೆ ಹಾಕಸ್ತೀವಿ ನಾವು ತಾಳಿ ಕಟ್ಟತೀವಿ, ಆಹಾ ಯಾ ಎಮ್ಮಾ ಮತ್ತೆ ಬಂದರೆ ತಾಳಿ ಕಟ್ಟಿ ಬಳೆ ಹಾಕ್ತಾರಂತೆ ಮತ್ತೆ ಮುತ್ತೈದೆತನ ಅಂತ ಈಗ ರಂಡೆ ಮಾಡಿ ಹೋತಾರಂತೆ ಎಪ್ಪಾ ಇದ್ದರೆ ಸತ್ತಂಗ ನೀವಪ್ಪಾ,

ಎಲ್ಲೆನ್ನ ಹಾಳಾಗಿ ಹೋಗರಿ ಸಯ್
ಎಲ್ಲೆನ್ನಾದರೆ ಸಾಯಿರಿ ಸಯ್
ಎಷ್ಟು ಗಂಡರಿದ್ದರೆರಾ ಸಯ್
ಕೂಲಿ ಹೋಗೋದು ತಪ್ಪಲ್ಲ ರಾ ಸಯ್
ಮಾಡಾಕ ತಪ್ಪದಿಲ್ಲರಾ ಸಯ್
ನೀವೇನು ಕುಂದರಿಸಿ ನೋಡರಾ ಸಯ್
ನೆಳ್ಳಾಗ ಕುಂದರಿಸಿ ಇಲ್ಲರಾ ಸಯ್
ಆಗ ತಂದು ಇಡಂಗಿಲ್ಲರಾ ಸಯ್

ಗಂಡ ಸತ್ತಾನಂತ ಅಳಿಯಾಕ ಗಂಡ ಸತ್ತಾನಂತ ಅಳಿಯಾ ಕುಂದರಿಸಿ ಏನು ಆಕಂಗಿಲ್ಲ, ಗಂಡ ಸತ್ತಾನಂತ ಅಳಿಯಾಕ ಎಮಗರಾ ಕೂಲಿಗೆ ಹೋಗಬೇಕು ನಾವೇ ತಂದಾಕಬೇಕು, ಆಹಾ ನೀವು ಸಾಯನ್ನ ಸಾಯಿರಿ ಆಳಾಗಿ ಹೋಗಿರಿ, ಆಹಾ ಅಂಬೊತ್ತಿಗೆ ಆಗ ರಂಡೆ ಮಾಡನಿ ಈಗ ನಾವು ಏನಂತಾ ಬರ್ತಾರಪ್ಪಾ ಐದು ಮಂದಿ ಇವರು ನಾಲರು ಆಗ ಗಿರಿ ಸಾಲಿ ಗಿರಿಮೇಲೆ ಆಹಾ,

ಚೆಂಬಿಗೆ ಮೊಂಬೆಗೆ ನೋಡರಾ ಸಯ್
ಮಂತ್ರಾಳ ಮಾದೇವ ನೋಡರಾ ಸಯ್
ಹಸ್ರಾಕ ಕಳ್ಳರ ನೋಡರಾ ಸಯ್

ಗಿರಿ ಸಾಲಿ ಗಿರಿಮೇಲೆ ನೋಡರಾ ಐದೆ ಮಂದಿ ನೋಡಣ್ಣಾ ಒಡೆಗಾ ಏನೆ ಬಿಟ್ಟಾರೆ ಎಲ್ಡು ಹಳ್ಳಿಗೆ ದಾಟ್ಯಾರ,

ಅವರು ಹೊಳೆದಂಡೆ ದಾಟ್ಯಾರ
ಕರಕಣ್ಣಿ ಕಲ್ಲಿಗೆ ಬರುವೋನು
ಕರಣೆ ಕಲ್ಲುದಾಗ ಯಾರು ವೈದಾರಂದರೆ ಕುಲಕ್ಕಾಗಿ

ಯಾರು ವೈದಾರ ಅಂದರೆ ಕುಲಕ್ಕಾಗಿ ಈಗ ಅವರು ಮನಿದೇವ್ರು ಮಾರ್ವಾಡಿ ಶೇಠವರು,

ಖಂಡೇರಾಯನ ಗುಡ್ಡ ಮ್ಯಾಲಣ್ಣಾ
ಅವರು ಮಠವೈತಪ್ಪಾ
ಅವರು ದೇವರು ಐದಾನ ಸಯ್
ದೇವರು ಮಠಕಟ್ಟಿ ಕಂಡಾರ ಸಯ್

ಕರಣಿಕಲ್ಲಿಗೆ ನಾವು ಹೋಗಾನ ದೇವ್ರು ಖಂಡೇರಾಯಂಗೆ ಮುಗಿದೆ ನಾವೆ ಹೊಗಾನ, ಆಹಾ ಬಂದು ಅರದಾರಿ ಐತವ್ವಾ, ಆಹಾ ಯಾವುದು ಕರಣೆ ಕಲ್ಲುಗೆ ಖಂಡೇರಾಯ ಸ್ವಾಮಿಗೆ ಮಠಕ್ಕೆ ಈ ದೇವ್ರುವರ ಕೇಳಿಕಂಡು ಊರಾಕ ಹೋಗಾನ ವರಕೊಟ್ಟರೆ ಊರಾಕ ಹೋಗಾನ ಇಲ್ಲದಿದ್ದರೆ ಈಸಲ ಅಡಕ ಹೋಗಾನ, ಆಹಾ ಅಂತ ಈ ಕಳ್ಳರು ಏನು ಮಾಡಿದರು ಹಳ್ಳದಾಗ ಮೈತೊಳಕಂಡರು ತಣ್ಣೀರಾಗ, ಆಹಾ ಮೈತೊಳಕಂಡು ಖಂಡೇರಾಯನ ಸಾರಟೆಗೆ ಏರಿ ಬಂದರು, ಆಹಾ ತಾತನ ಮಠಸುತ್ತ ಮೂರು ಸುತ್ತ ತಿರುಗಿದರು, ಆಹಾ ತಿರುಗಿ ಆತಾತನ ಮಠ ಮುಂದೆ ಏನು ಐದಾವ ಅಂದರೆ ಬಿಳಿ ಕೆನ್ನರಿ ಕೆಂಪುಕೆನ್ನರಿ ನಾರಮಲ್ಲಿ ಹೂವು, ಆಹಾ ಆಗ ಮೂರು ಗಿಡ ಐದಾವ ಮೂರು ಗಿಡ ಹೂ ಅರಕಂಡರು ಆಹಾ ಗುಡ್ಯಾಗ ಆರಿ ಹೋಗಿದ್ದು ಉದಿನ ಕಡ್ಡಿ ಹಚ್ಚಿದರು, ಆಹಾ ನೋಡು ಪೂಜಿಲ್ಲ ಪುಣ್ಯ ಇಲ್ಲ ಅವನಿಗೆ, ಆಹಾ ಆಗ ಊದಿನ ಕಡ್ಡಿ ಹಚ್ಚಿದರು, ಆಹಾ ದೊಡ್ಡೋನು ಹೆಸ್ರಮ್ಯಾಲೆ ಕೆಂಪುಗೆನ್ನರಿ ಹೂ ಇಟ್ಟಾರು ದೇವರು ತಲೆಯ ಮ್ಯಾಲೆ, ಆಹಾ ನಡುವ್ಲೋನು ಹೆಸ್ರಮ್ಯಾಲೆ ಬಿಳಿಗೆನ್ನರಿ ಹೂವ ಎಡಗೈ ಕಡಿಗೆ ಇಟ್ಟಾರು ಬಲಗೈ ಕಡಿಗೆ ನಾಗಮಲ್ಲಿ ಹುವ ಚಿಕ್ಕೋನು ಕೈಯಿಂದ ಇಟ್ಟರು, ಆಹಾ ಮೂವರು ನೋಡಪಾ ಅವ್ರು ಮನಿಷಾರಿಗಂದ್ರೆ ಲೋಕ ಹುಟ್ಟಿದೋನು ಅವ್ರ್ನ ಕೊಲ್ಲಬೇಕು ಇವ್ರ್ನಕೊಲ್ಲಬೇಕು ಅಂತಾ ಇರ್ತೈತೆ ಆದರೆ ದೇವ್ರುಗೆ ಇರಾದಿಲ್ಲಪ್ಪ, ಆಹಾ ಆ ದೇವ್ರು ಪೂಜಿ ಮಾಡಿಲ್ಲ ಏನು ಮಾಡಿಲ್ಲ ಆಗ ಕೊಟ್ಟಿದ್ದ ದೇವ್ರೆ ಅರ್ಧ ಜೀವ ಬರ್ತಾನ ಒಬ್ಬ ಮಗ ಹುಟ್ಟಿದ ಮೂರು ತಿಂಗಳಿಗೆ ಸಾಯಬೇಕಂತ ಬರ್ದಾನ, ಆಹಾ ಆ ದೇವ್ರ ಕಳ್ಳರಿಗೆ ಮುಗಿದ ಹೊತ್ತಿಗೆ ಬೊಗಸೊಡ್ಡಿ ಎಷ್ಟು ತಲಿವಿ ವರವು ಕೊಡತಾನ ದೊಡ್ಡತಾನ ಖಂಡೇರಾಯ ಆಗ ಇನ್ನ ಐದು ಮಂದಿ ಒಂದು ಕಾಲಿನ ಮ್ಯಾಲೆ ನಿಂತು ಎಲ್ಡು ಬೊಗಸಿ ಒಡ್ಡಿಕಂಡರಪಾ ಎಲ್ಲರೂ, ಆಹಾ ಎಪ್ಪಾ ಪೂಜೆ ಇಲ್ಲ ಪುಣ್ಯವಿಲ್ಲರಾ ಆಆಆ ಮಾರವಾಡಿ ದೇವ್ರೆ ಶೇಠಿಕುಲ ದೇವ್ರೆ ಐದಾರ ಅವರಿಗಿರು ಪುಣ್ಯ ಇವರಿಗಿಲ್ಲರಾ ಕಳ್ಳರು ಅವರೆ ಇನ್ನ ಬೇಡ್ತಾರ ಮೂವರು ಸಿಕ್ಕರೆ ದೇವ್ರ ಆ ಆ ಆ ಆ ಏ ಮೂವರು ನಮ್ಮಗೆ ಹಾಕುರಾ ಬೊಗಸ್ಯಾಗ ಇನ್ನ ಮೂವರು ಸಿಕ್ಕರೆ ಏ ದೇವರು ಊರೆ ಹೂ ಬೆಳೆಯಲಿ ಇಬ್ಬರೆ ಸಿಕ್ಕರೆ ದೇವ್ರ ಖಂಡೇರಾಯ ಇಬ್ಬರೆ ಸಿಕ್ಕರೆ ದೇವ್ರಾ ಎಲ್ಡೇ ಹೂ ಬೆಳೆಯಲಿ ಒಬ್ಬರು ಸಿಕ್ಕರೆ ದೇವ್ರಾ ಖಂಡೇರಾಯ ಸ್ವಾಮಿ ಒಬ್ಬರನ ಕೈಯಾಗ ಕೊಡಪಾ ಒಬ್ಬರು ಸತ್ತರೆ ದೇವ್ರ ಒಂದೆ ಹೂ ಬೆಳೆಯಲಿ ಕರಣಿಕಲ್ಲಿಗೆ ಹೋಗಿ ಬಂದರೆ ಜೀವದಲ್ಲಿ ಬಂದರೆ ನಾವು ಆಆಆ ನಿನಗೆ ಲಕ್ಷ ತೇರು ನಾವು ಮಾಡ್ತೀವಿ ಲಕ್ಷ ತೇರು ನಾವು ಮಾಡಸ್ತೀವೆ, ಏ ದೇವುರಾ ದೇವುರಾ ಖಂಡೇರಾಯನ ನಿನಗೆ ಜಾತ್ರೆ ಮಾಡ್ತೀವಿ ಓ… ತಾತಾ ಬೇಡಿಕೆಂಡಿರೊ ವರವು ಕೊಡರಾ ಕೊಡು ತಾತಾ ಕಳ್ಳರು ದೇವ್ರಾನ ವರವು ಕೇಳ್ತಾರಪಾ, ಆಹ ಆಏನ ಪೂಜೆ ಇಲ್ಲ  ಪುಣ್ಯ ಇಲ್ಲ, ಆಹಾ ದೇವ್ರ ಖಂಡೇರಾಯ ನೋಡಿದಾ ಆಹಾ ಎಡಕೆ ಹೂ ಇಸಕಂಡು ಬಲಕ್ಕೆ ಹೂ ಇಸಕಂಡು ಇಬ್ಬರಿಗನ್ನ ದೊಡಡೇನನಣ್ಣಾ,

ತಲೆ ಮ್ಯಾಲೆ ಇದ್ದ ಹೂವನ್ನ ಸಯ್
ಗದ ಗದ ತರಿಗೆಂತಾ ಸಯ್
ಹಸ್ತಪ ಕಳ್ಳರ ನೋಡರಾ ಸಯ್
ಬೊಗಸ್ಯಾಗ ಬಂದೆ ಬಿದ್ದೈತೆ
ಕಳ್ಳನ ಬೊಗಸ್ಯಾಗ ಬಿದ್ದೈತೆ
ತಾವೇ ಹೂವೆ ಬಿದೈತೊ

ದೇವ್ರ ತಲೆಮ್ಯಾಲೆ ಹೂವ ಕಳ್ಳರ ಬೊಗಸ್ಯಾಗ ಬಿದೈತೆ, ಆಹಾ ಕಳ್ಳರ ನೋಡಿದರೆ,

ಇಬ್ಬರ ದೊಡ್ಡೋನು ಸಿಕ್ಕನಲ್ಲ
ಹುಲಿಯಂತವನೆ ಸಿಕ್ಯಾನ
ಕಂಡಿದೋನೆ ಸಿಗಲಿಲ್ಲ
ಇನ್ನ ಹುಲಿ ಪಟ್ಣಕ ಹೋಗಾನ ಸಯ್
ಕುರಿಕಡಿಕಂಡೆ ಬರಾನ ಸಯ್
ಹುಲಿಪಟ್ಣಕಾ ಹೋಗಾನ
ಕುರಿಕಡದಂಗೆ ಕಡಿಯಾನ

ಸ್ವಾಮಿ ಖಂಡೆರಾಯ ನಾವು ಜೀವದಲ್ಲಿ ಬಂದರೆ, ಆಹಾ ಈಗ ಒಬ್ಬನು ಸಿಗಲಿ ಇಬ್ಬರು ಸಿಗಲಿ ಮೂವರು ಸಿಕ್ಕಲಿ ನಿನಗೆ ಲಕ್ಷತೇರು ಮಾಡಿಸಿ ನಾವು ಜಾತ್ರೆ ಸಾಗಿಸ್ತಿವಿ ಅಂತಾ ಒಪ್ಪಿಕೆಂಡಾ ದೇವ್ರು ಸುಮ್ಮನೆ ವರವು ಕೊಟ್ಟ, ಆಹಾ ಪೂಜೆ ಇಲ್ಲ ಪುಣ್ಯ ಇಲ್ಲ, ಆಹಾ ಹೂವೊಂದೆ ಇಟ್ಟಾರ ಅರಕಂಡು ಬಂದು ಅಲ್ಲೆ ಬಿದ್ದಿದ್ದು ಊದಿನ ಕಡ್ಡಿ ಆರಿದ್ದು ಹಚ್ಚಿದರು ಇಟ್ಟರು ಇಷ್ಟು ಪೂಜೆ ಮಾಡಿ ಬೇಡಿಕಂಡರು ವರಕೊಡುವಲ್ಲಿ ಸುಮ್ಮನೆ ವರಕೊಟ್ಟಾ, ಆಹಾ ಅರೆರೆರೆ ದೇವ್ರು ಆಗಲಿ ಯಾರಾಗಲೀ ಜೀವ ಹೋಗುವಾಗ ಎಷ್ಟು ದೇವ್ರು ಬೇಡಿಕೆಂಡರೇನು ಎಷ್ಟು ಕೊಡ್ತಾನಂದ್ರೇನಾ ಇಂಗಬರದೇನು ಅಂಗೆ ಬದ್ದೋತಾನ ನಮ್ಮ ಕೊಟ್ಟಿದ್ದೆ ದೇವ್ರ ಬೇಸು ಬರದರೆ ಆ ದೇವ್ರು ಬರ್ತಾನ ಈ ದೇವ್ರು ಬರ್ತಾನ ಏನಾನು ಐದೀನಿ ಏನು ಪರಾವಾಗಿಲ್ಲ ಅಂಗ ಕೊಟ್ಟಿದಾಗ ಜೀವ ಬರದಾಗೆ ಇನ್ನವರ ಅರ್ಧ ಅಂತಾ ಬರೆದು ಬಿಟ್ಟಾನ, ಆಹಾ ತುಮಬಾ ಅಂತಾ ಬರೆದಿಲ್ಲರೆ ಏ… ರಾಜ ಮಗ ಹುಟ್ಟಿ ಮೂರು ತಿಂಗಳ ಚಿಕ್ಕ ವಯಸಿನಾಗ ಐದಾನ ಎಪ್ಪಾ ಒಂದು ಕೂಸಿನ ತಂದಿ ವೈದಾನ ಒಂದು ಕೂಸಿನ ತಂದಿ ವೈದಾನ ಮದಿವಾಗಿ ಮೂರು ವರುಷಾಕಿ ದೇವ್ರು ಎಪ್ಪಾ ಎಂತಾ ಮಗನಿಗೆ ಎಂತಾ ಕಾಲಾರೆ ದೇವ್ರು ಕೊಟ್ಟೆ ಮಾಡ್ಯಾನ ಕೊಟ್ಟಿದ್ದ ದೇವರು ಕೊಟ್ಟಿ ಮಾಡದಾಗ ಯಾವುದು ನಿಲ್ಲಲ್ಲ ಒಳ್ಳೇದು ಬಾಳ ದಿವಸ ಬಾಳಸೋದಿಲ್ಲ ಆಹಾ ಆಗ ಕಳ್ಳರು ಏನು ಮಾಡಿದರು,

ಇನ್ನ ನಡಿಯಲೇ ಹೋಗಾನ
ಗುಡ್ಡ ಇಳಿದೆ ಬಿಟ್ಟಾರ
ಅವರೆ ಮುಟ್ಟಿ ಬರ್ತಾರ
ಊರು ಮುಂದಕ ಬಂದಾರ

ಕತ್ತಲಾಗಪ್ಪ ಅಮಾಸೆ ಕತ್ತಲಾಗ, ಆಹಾ ಹನಿ ಉದುರುತೈತೆ ತಣ್ಣಾಗ ಗಾಳಿ ಬೀಸತೈತೆ, ಆಹಾ ಮಾರವಾಡೇರು ಸಂಬಳದಾಗ ಐದು ಮಂದಿ ಕೆಬ್ಬುಣ ಮಡಿಕೆ ಹೊಡಿತಾರ, ಆಹಾ ಊರು ಮುಂದೆ ಹೊಡಿತಾರ ಆಹಾ ಹೊತ್ತು ಮುಣಿಗಿ ಮೂರು ಗಂಟೆ ಆಗೈತೆ ಇನ್ನಾ ಹೊಡೀತಾರ, ಆಹಾ ಎಲ್ಲಿ ಮುಗಿಸಿಕೆಂಡು ಹೋಗಾನ ಐದು ಎಕರೆ ಅಂತಾ, ಆಹಾ ನೋಡಿದರು ಕಳ್ಳರು ಏ ಅವರು ಮಾರವಾಡೇರು ಕೈಯಾಗ ಇರೋರು ಸಂಬಳದಾಳಗಳು ಮಡಕೆ ಒಡಿತಾರ, ಆಹಾ ಇವಾಗ ಅಗಸಿ ಮುಚ್ಚಿರತಾರ ಊರಾಕ ಹೋಗಾಕಿಲ್ಲ ಏಳು ಸುತ್ತ ಅಗಸಿ ಅಂತಾ, ಆಹಾ ಒಂದೆ ಸುತ್ತಾನಾಗ ಹೋಗಬೇಕು ಏನಪಾ ಊರಾಗ ಹೋಗಾಕ ಬರೋದಿಲ್ಲ, ಆಹಾ ಇವ್ರಗೆ ಸೌಮಂತ್ರ ಬರೆದರೆ ಎಲ್ಲೆಲ್ಲಿ ಎತ್ತುಗಳು ಆಗ ಅಡ್ಡ ಬೀಳಂಗ ಮಾಡಬೇಕು ನಮ್ಮನ್ನ ನೋಡಲಾರದಂಗ ಮಾಡಿದರೆ,