ಹಿಂದೇಲೆ ನಾವು ಕೊಡತೀವಿ
ಹಿಂದೇಲೆ ಕೊಟ್ಟಿದ್ದು ನೋಡಪಾ ಮುಂಚ್ಯಾಗ ನಾವು ಕೊಡತೀವಿ
ಉಳ್ಳಾಗಡ್ಡೆ ನಿಂದು ಆಯಿತಾರ
ಎಷ್ಟು ಕೆಡುಗು ನಿಮ್ಮಗೆ ಐತಾಲೆ
ಮಾರ್ವಾಡಿ ಶೇಠಿದೋರು

ಸರೆ ಬಿಡಂಪಾ ಅವರು ಆಯುಧಗಳು ಕೊಟ್ಟಮ್ಯಾಲೆ ಅವರು ಆಯುಧಗಳು ಇವರು ಕೊಟ್ಟರು, ಆಹಾ ಲೇ ನಾವೇನು ಅನಕೊಂಡೀವಿ ಅವ್ರು ಕೊಡ್ತಾರ ಸುಮ್ಮನೆ ಇರ‍್ತಾರ ಈಗ ಅವ್ರು ಆಯುಧಗಳು ತಗಂಡು ಅವ್ರನೆ ಕಡಿಬೇಕ ಅನಕಂತೀವಿ, ಆಹಾ ಎಷ್ಟು ಉಪಾಯ ನೋಡು,

ಸಿಗದಿಲ್ಲ ಹುಡುಗರು
ಇನ್ನೊಂದು ಉಪಾಯ ಮಾಡ್ಯಾನ

ಏನು ಉಪಾಯ ಮಾಡಾನತಿ ಏನಿಲ್ಲಾ ಒಂದು ಯಾವುದೊ ಒಂದು ಕೆಸ್ರು ತಂದು ದೇವ್ರು ಮಾಡಾನ, ಆಹಾ ಊರಿಗೆ ಆಗ ಹೆಣ್ಣು ದೇವತೆ ಯಾವೊ ಒಂದು ದೇವ್ರು ಗಾಳಿಗೆ ಇನ್ನತರ ಕೋಮ ಮಾರೆವ್ವಾ ಕೆಳಗಡೆಲಿದ್ದಲಿ ಮ್ಯಾಗಡೆಲಿದ್ದ ಕೆಳಗಡೆಗೆ ಹೋತಾಳ ದೇವ್ರಿಗೆ ಬಂದಾಳಂತ ಶೆಟ್ಟಿ ಬಂದಾಳಂತಾ,

ಶೆಟ್ಟಿ ಬಂದಾಳಂತಾ ನಾವೂರಾ
ನಾವೆ ಪೂಜೆ ಮಾಡಾನ

ಪೂಜೆ ಮಾಡಾನಂತಾ, ಆಹಾ ಆಗ ಇಬ್ಬರು ಕೈಮುಗಿವಾಗ ಆಗ ಇಬ್ಬರು ಆಯಮ್ಮನ ಮುಂದೆ ಕಡಿಯಾನ, ಆಹಾ ಕುದ್ರಿ ಬರ್ತಾವ ನಾಯಿಗಳು ಬರ್ತಾವ ಅಂತಾ ಒಂದು ಬಂಡಿ ಕೆಸ್ರು ತಂದ್ರಪಾ ಲಿಂಗಾಯತರು, ಆಹಾ ತಂದು ಬೇಸು ನೆನೆಯಿಟ್ಟು ಹೆಣ್ಣುದು ಗೊಂಬೆ ಮಾಡಿದರು ಆಹಾ ರಾತ್ರಿ ಗೊಂಬೆ ಮಾಡಿ ರಾತ್ರಿ ಬಣ್ಣ ತುಂಬಿಸಿ ಬಿಟ್ಟರು, ಆಹಾ ದೇವತೆಗೆ ಬಣ್ಣ ತುಂಬಿಸಿ ಆಗ ಕಾಳಿ ತಪ್ಪಲ ಹಂದ್ರಿತಪ್ಪಲಾ ತಂದು ಹಾಕಿದರಪಾ ಊರು ಮುಂದೆ ದಾರ್ಯಾಗೆ, ಆಹಾ ದಾರ್ಯಾಗ ಹಾಕಿ ಆಯಮ್ಮನ ರಥ ಮಾಡಿ ರಥಮ್ಯಾಲೆ ಕುಂದರಿಸಿ ಸೀರೆ ಉಡಿಸಿ ಕುಬಸ ತೊಡಿಸಿ ಹೂವಾಕಿ ಇಟ್ಟರು ಊರಾಗ ಏನಂತಾ ಹೇಳಿದರು ತಪ್ಪಡಿ ತಗಂಡು ತಳವಾರ ಕರೆ ಕಳಿಸಿ ಊರೆಲ್ಲ ಡಂಗರ‍್ಸು ಮಾಡಿದರು ಯಾರು ಮರಕಲ್ಲೂರು ಆಹಾ ಯಾರೊ ದೇವತೇನ ಕರಕಂಡು ಬಂದು ಮ್ಯಾಲಗಡೆಲಿದ್ದ, ಆಹಾ ನಮ್ಮ ಊರು ಮುಂದೆ ಬಿಟ್ಟು ಹೋಗ್ಯಾರ ಆಹಾಯಾ ದೇವತೆ ಯಾ ದೇವ್ರೋ, ಆಹಾ ನೋಡಪಾ ಕಾಯಿ ಹೂವ ಕಾಯಿ ಹೂವ ತರಬೇಕು, ಆಹಾ ನಾವು ಅಡಿಗೆ ಮಾಡತೀವಿ ಊರಾಗ ಒಬ್ಬರು ಬೆಂಕಿ ಹಾಕಬಾರ್ದು, ಆಹಾ ಈಗ ದೇವಿಗೆ ಕಾಯಿಹಣ್ಣು ಕೊಡಬೇಕು ನಮ್ಮ ದೇವತೆ ಮುಂದೆ ಊಟ ಮಾಡಿ ಬರಬೇಕು, ಆಹಾ ಊಟ ಮಾಡಿದ ಮ್ಯಾಲೆ ಎಲ್ಲರೂ ಊರೆಲ್ಲ ಬಂದು ಪೂಜೆ ಮಾಡಿರ ಮ್ಯಾಲೆ ಆ ತಾಯಿನ ಕರಕಂಡು ಹೋಗಿ ಇನ್ನೊಂದು ಊರಿಗೆ ಬಿಟ್ಟು ಬರ್ತೀನಿ, ಆಹಾ ಅಂಗೆ ಕೆಳಗಡೆಗೆ ಹೋತಿದ್ರಾಳ ಆಯಮ್ಮದೇವಿ, ಆಹಾ ಯಾವ್ದೊ ದೇವಿ ಶಕ್ತಿ ಅಂತಾ ಆಗ ಬೇಕಾದ ಎಲ್ಡು ಪಲ್ಲಾ ಅನ್ನ ಮಾಡಿದ್ರು ಎಲ್ಡು ಪಲ್ಲಾ ಗೋದಿ ಉಗ್ಗಿ ಮಾಡಿದ್ರು, ಆಹಾ ಅವ್ರುಗೆ ಬಂದೈತೆ ಕಳಕಂಬಾಕ ಆಹಾ ಒಂದು ಪಲ್ಲಾಬ್ಯಾಳೆ ಮಾಡದಿರು ಏನಪಾ ಮಾರವಾಡಿ ಶೇಠಿದೋರೆ ಇವತ್ತು ನೀವು ಮನ್ಯಾಗ ಅಡಿಗೆ ಮಾಡಂಗಿಲ್ಲ ಯಾವ್ದೊ ದೇವಿ ಬಂದು ಬಿಟ್ಟು ಹೋಗ್ಯಾರ, ಆಹಾ ದೇವಿ ಮುಂದೆ ಅಡುಗೆ ಮಾಡ್ತೀವಿ ನೋಡು ಕಾಯಿ ಹೂವೊಂದೆ ತರಬೇಕು ಈಗ ಪೂಜೆ ಮಾಡ್ಬೇಕು ಅಲ್ಲಿ ಊಟ ಮಾಡ್ಬೇಕು ಅಂದರು, ಆಹಾ ಸರೆ ಬಿಡಪಾ,

ಆಗ ಬಂದೆ ನೋಡಣ್ಣಾ ಊರಿಗೆ ದೇವತೆ ಬಂದಾಳ
ಅವರೆ ಒಂದೆ ವಣ್ನಯ್ಯಾ ಲಿಂಗವಂತರೆ ಬಂದಾರ
ಆಗ ಕರಕಂಡು ಬರಬೇಕು

ಅಂಬೊತ್ತಿಗೆ ಬರಬೇಕಪ್ಪಾ ಮಾರವಾಡಿಶೇಠದವರೆ ಫಿರೋಜಿ ಸೋಮೋಜಿ ಓ ಅಂಬೊತ್ತಿಗೆ ಅವರು ಏನು ಮಾಡಿದರು ಈಗ ಎಲ್ಡು ನಾಯಿ ಕಟ್ಯಾಕಿದರು, ಆಹಾ ಮೂರು ಕುದ್ರಿ ಕಟ್ಯಾಕಿದರು,

ಚಿಕ್ಕ ನಾಯಿ ಕರಕಂಡಾರ ಅವರೆ ಬಂದೆ ಬರ್ತಾರ

ಮನಿ ತುಂಬಾ ಆಯ್ದುಗಳಮ್ಮ ದೇವಿತೆ ಗುಡಿಗೆ ಬಂದಾರ ದೇವತೆ ಗುಡಿಗೆ ಬಂದು ಏನು ಮಾಡಿದರು, ಆಹಾ ಕಾಯಿ ಹೂವ ರಾಯಿ ಕೊಟ್ಟಾರಪಾ ಮಣ್ಣು ದೇವತೆಗೆ, ಆಹಾ ಆಗ ಇವನು ಏನು ಮಾಡಿದರು ಕಾಯಿ ಹೂವಕೊಟ್ಟರು, ಆಹಾ ಇಲ್ಲಪಾ ಎಲ್ಲರೂ ಒಂದೆ ಸರ್ತಿ ಮುಗಿಬೇಕು ಅಂದರು, ಆಹಾ ಅಂಬೊತ್ತಿಗೆ ಇವರು ಏನಂದ್ರಮ್ಮಾ ಮರ‍್ವಾಡಿ ಶೇಠಿದೋರು ನೋಡಪಾ ಎಲ್ಲರೂ ಒಂದೆ ಸರ್ತಿ ಮುಗೀತೀವಿ ಯಾರಿಗಂತಾ ಕೊಡ್ತಾಳ ದೇವಿ ವರವಾ, ಆಹಾ ಇದರಾಗ ದುಷ್ಟರು ಎಷ್ಟು ಐದಾರೊ ಧರ್ಮರು ಎಷ್ಟು ಐದಾರೊ ಕರ್ಮರು ಎಷ್ಟು ಐದಾರೊ, ಆಹಾ ನಾವು ಒಂದೆ ಬಾರಿ ಹುಟ್ಟಿಲ್ಲಪಾ ತಾಯಿ ಹೊಟ್ಯಾಗ, ಆಹಾ ಒಬ್ಬರು ಹುಟ್ಟಿದ ಮ್ಯಾಲೆ ಒಬ್ಬರು ಹುಟ್ಟದೀವಿ ಆಹಾ ನಮ್ಮ ಮಾರವಾಡಿ ಕುಲದಾಗ,

ಅಣ್ಣಾ ಮುಗಿದರೆ ನೋಡಯ್ಯೊ ತಮ್ಮ ಸುಮ್ಮನೆ ಇರೋದು
ತಮ್ಮ ಮುಗಿಯುವಾಗಣ್ಣಾ ಅಣ್ಣಾ ಸುಮ್ಮನೆ ಇರೋರು
ಯಾರ ಭಕ್ತಿಯಾರಿಗೈತೇನು ಎಲ್ಲದೇವಿ ವರವಾ ಕೊಡ್ತಾಳ

ಅಣ್ಣಾ ನೀನು ಕೈಮುಗಿದ ಮ್ಯಾಲೆ ನಾನು ಮುಗಿತೀನಿ ನೀನು ಮುಗಿಯಣ್ಣಾ ಸತ್ತವನು ಹೇಳಿದ ಮಾತು ದೊಡ್ಡವನು ಹೇಳಿದ ಮಾತು ಮರಿಬಾರ್ದು ನಾವು, ಆಹಾ ಅಂಬೊತ್ತಿಗೆ ಆಯುಧಗಳು ಕೈಯಾಗ ಇಡಕಂಡು ಅತ್ತಾಗ ಇತ್ತಾಗ ನೋಡ್ತಾನೆ ತಾವು ಕೈಮುಗಿತಾರ,

ನೀನೆ ಶಕ್ತಿ ಬಂದೀಯಾ
ಗಿರಮ್ಯಾಗಡೆಲಿದ್ದಮ್ಮಾ
ಕೆಳಗಡೆಗೋತಿಯ ನಂತಾಯಿ
ನಮ್ಮಿಗೆ ವರವೆ ಕೊಡಮ್ಮ
ಕೈ ಮುಗಿದೆ ಬಿಟ್ಟಾರ ಸಯ್
ತಾವೆ ಎದ್ದೆ ಬಿಟ್ಟಾರ ಸಯ್
ಆಗ ಬಂದೆ ನೋಡರಾ ಸಯ್
ಅಣ್ಣಾ ಮುಗಿದ ಮ್ಯಾಲೆ ನೋಡರಾ
ತಮ್ಮ ಬಂದೆ ಮುಗಿದಾನ
ಅಣ್ಣಾಯ್ಯಾ ಮುಗಿದು ಮ್ಯಾಲರಾ
ತಮ್ಮಯ್ಯಾ ಇನ್ನ ಮುಗಿದಾನ

ಲಿಂಗವಂತರು ನೋಡಿಬಿಟ್ಟರು ಅಲೆ ನಾವು ಎಲ್ಡು ಪಲ್ಲಾ ಅಕ್ಕಿ ಹಾಳು ಮಾಡಿಕೆಂಡೀವಿ, ಆಹಾ ಒಂದು ಪಲ್ಲಾ ಬ್ಯಾಳೆ ಆಳಾಗಿ ಹೋತು ಎಲ್ಡು ಪಲ್ಲಾ ಗೋದಿ ಹೋದವು, ಆಹಾ ಎಲ್ಡು ಚೀಲ ಬೆಲ್ಲ ಹೋದವು, ಆಹಾ ನಮ್ಮಿಗೆ ಹತ್ತು ಸಾವ್ರ ಖರ್ಚು ಆಯಿತು ಇವರು ಮಾರವಾಡೇರು ಒಂದೆ ಸರ್ತಿ ಅಣ್ಣಾ ತಮ್ಮರು ಕೈ ಮುಗಿದಾಗ ದೇವಿ ಮುಂದೆ ಕಡಿಬೇಕಂತಾ ಮಾಡಿದ್ವಿ ಅಂಗಲ್ಲಲೆ ಒಬ್ಬನು ಕೈ ಮುಗೀತಾನ ಒಬ್ಬನು ಅತ್ತಾಗ ಇತ್ತಾಗ ನೋಡ್ತಾನ, ಆಹಾ ಮತ್ತೆ ಒಬ್ಬನು ಮುಗಿದು ಮ್ಯಾಲೆ ಒಬ್ಬನು ಮುಗಿದಾನ, ಆಹಾ ಏ ಸಿಗಾದಿಲ್ಲ ಇವ್ರು ನೋಡಾಲೆ ಎಂಗ ಮಾಡಾನ ನಾವಾದ್ರ ಇದ್ರಾಗ ಸಿಗಲಿದ್ರೆ ಆಗೈತೊ ಉಂಬಾದಾಗನ ಇಸಾಕಲಿಸಿ ಕೊಲ್ಲಬೇಕು, ಆಹಾ ಏನಪಾ ಎಲ್ಲರೂ ಉಂಬಾಕ ಕುಂದ್ರಬೇಕು ಅಂದರು, ಆಹಾ ಅಂಗಲ್ಲಪಾ ಶೇಠಿ ಕುಲದೋರು ಅಣ್ಣಾ ಉಂಡಮ್ಯಾಲೆ ತಮ್ಮ ಉಂಬೋದು ತಮ್ಮ ಉಂಡರೆ ಅಣ್ಣಾ ಸುಮ್ಮನರ ಇರಬೇಕು, ಆಹಾ ಅಂಗ ನಮ್ಮ ಕುಲದಾಗ ಆಹಾ ಲೇ ಇಬ್ಬರು ಮಾತಾರೇನು ಇಸಾ ಕಲಿಸಿ ಇಡಾನ ಆತ ನಾವು ಮಾಡಿದ್ವಿ, ಆಹಾ ಎಂಗ ಮಾಡಬೇಕು ಎಂಗನ್ನ ಆಗಲಿ ಅವನು ಒಬ್ಬನಿಗನ್ನ ಇಡಬೇಕು ಒಬ್ಬೊಬ್ಬರಿಗೆ ಇಡೋದು ಅಂದಾ ಏನ ಮಾಡಿದರು ಎಲ್ಲ ಅರಿಶಿಣ ಹಾಕಿದೈಪಾ ಅಚ್ಚಗಾ ವಗ್ರಾಣಿ ಅನ್ನ ಎಲ್ಲರಿಗೆ ಇಟ್ಟಕಂತಾ ಬಂದ್ರು ಆಹಾ,

ಇವರು ಇಸಾ ಕಲಿಸೀನೆ ಇಟ್ಟಾರ
ಎಲ್ಲರಂಗೆ ಕುಂತಾರ

ಎಲ್ಲರೂ ಕುಂತ್ಯಾಗ ಕುಂತಾರ, ಆಹಾ ಆಗ ಇಸಾ ಕಲಿಸಿ ಮಾರವಾಡೇರು ಇಟ್ಟಾರ, ಆಹಾ ಈ ಮಾರವಾಡ್ಯಾತ ಏನಂದಾ,

ಚಿಕ್ಕ ನಾಯೀನೆ ಕರದಾನೆ
ಇಡಿಕೆ ಅನ್ನ ಇಟ್ಟಾನೆ
ಚಿಕ್ಕನಾಯಿ ಅದು ನೋಡುರಾ ಸಯ್
ಅನ್ನ ಮೂಸಿ ನೋಡೈತೊ ಸಯ್
ಎಡಗಾಲು ಮಣ್ಣು ನೋಡುರಾ ಸಯ್
ಬರಬರ ಕುಣಿತೋಡೈತೊ ಸಯ್
ಆಗ ಪತ್ರಾಳಿ ಅನ್ನರಾ ಸಯ್
ಕಾಲಿಗೆ ಕೂಟ ಇನ್ನ ಅನ್ನಯ್ಯಾ ಸಯ್
ಕುಣ್ಯಾಗ ಅನ್ನ ಹಾಕ್ಯಾರ ಸಯ್
ಮ್ಯಾಲೆ ಮಣ್ಣೆ ಮುಚ್ಚತೈತೊ
ಕುಣ್ಯಾಗ ಅನ್ನ ಒಂದೆ ಇಡತೈತೆ
ಮಣಲೆ ಮಣ್ಣು ಮುಚ್ಚತೈತೆ

ನಾಯಿ ಇಡಿಕಿ ಅನ್ನ ಹಾಕಿದರೆ ಕುಣಿ ತೋಡಿ ಎಡಗಾಲಲಿ ಕುಣ್ಯಾಗಾಕಿ ಮಣ್ಣು ಮುಚ್ಚುತೈತೆ, ಆಹಾ ಛೆ ಅವರು ಎಲ್ಲಾರೂ ಕುಂತಾರ ಅವರುದು ಅಂಗೆ ಐತೆ ಅನ್ನಾ ಪಂತ್ಯಾಗ ಅರಪಂತಿ ಮಾಡ್ತಾರ ಅಂತಾ ದಿಗ್ಗನೆ ಎದ್ದು ಬಿಟ್ಟಾ ಈ ನಾಯಿ ಯಾವಾಗ ಊಟ ಮಾಡಿಲ್ಲ, ಆಹಾ ಆಗ ಏನು ಮಾಡದಾ ಎದ್ರಾಗ ಕುಂತೋನು ಪತ್ರಾಳದಾಗ ಇಡಿಕಿ ಅನ್ನ ತಂದು ಮುಂದಿಟ್ಟರಾ ನಾಯಿಗೆ,

ಮೂಸಿ ನೋಡಿ ಬಿಟೈತೊ ತಾನೇ ಊಟ ಮಾಡೈತೊ

ಲೇ ಲಿಂಗವಂತರ ಬರ‍್ರೆಲೇ ಅಂದಾ ಏನ್ರಿ ಅಂದಾ ಇಲ್ಲಾ ಅವ್ರುದು ಅಂಗೆ ಐತೆಬಣ್ಣಾ ನಮ್ಮದು ಅಂಗೆ ಐತೆ ಅನ್ನ, ಆಹಾ ಎಲ್ಲರೂ ಕಲಿಸಿ ಉಂಬಾಕ ಇಟ್ಟೀರಿ ಇಟ್ಟಿದರೆ ನನ್ನ ಅನ್ನವನು ಮಣ್ಣು ಹಾಕತೈತೆ ಕುಣ್ಯಾಗ ಇಡತೈತೆ, ಆಹಾ ಅವನು ಅನ್ನ ಇಟ್ಟರೆ ಊಟ ಮಾಡತೈತೆ ಅಯ್ಯೊ ನಾವು ಮರತು ಹೋಗಿಬಿಟ್ಟಿವಿ ನನ ಮಗನ ಸುಸ್ತಿ ಆಗಿದ್ದರೆ ಸಕ್ಕರೆ ಕೇಳಿದರೆ ಏನಂತಾ ಹೇಳಿದರೂ ಪಾಕರಸ ತಂದು ನಿನ ಮಗ ಬೇಸು ಓಡಾಡ್ತಾನ ಮನ್ಯಾಗ ಅಂತಾ ಹೇಳಿದರು, ಆಹಾ ಅದು ನಾನು ಕೊಣಕಂಡು ಬಂದು ಬೊಕ್ಕಣದಾಗ ಆಕ್ಯಂಡೆ ಬಗ್ಗಿ ಅನ್ನ ಇಡುವಾಗ,

ಬಕ್ಕಣಾಗಲಿದ್ದ ನೋಡಪ್ಪಾ ಪಾನಕ ಅನ್ನದಾಗ ಉದರೈತೊ
ಎಪ್ಪೊ ನನಮ್ಯಾಲೆ ಸಿಟ್ಟು ಮಾಡಬ್ಯಾಡ ಎಲ್ಲರಿಗೆ ಒಂದೇರಿತಪ್ಪಾ
ಮತ್ತೆ ಅವರಿಗಿಟ್ಟಿದ್ದನ್ನ ಅಲ್ಲಾ
ಅದೇ ಅನ್ನ ಬಣ್ಣಾ ರೀತಿ ಇಟ್ಟಾ ಆಹಾ
ಸುಮ್ಮನೆ ಅನ್ನಾ ಇಟ್ಟಾ
ಇಡಿಕಿ ಅನ್ನಾ ಇಟ್ಟರೆ ನಾಯಿ ಊಟ ಮಾಡೈತೆ
ಆಗ ಇತಾ ಉಂಡಾನೆ

ನೋಡಪಾ ಚಿಕ್ಕತಮ್ಮ ಅಣ್ಣಾ ಹೇಳಿದ ಮಾತಜೀವ ಇರಲಿಕ್ಕೆ ಜತೆಗಾರ ಜತೆಗಾರಂದರೆ ಮೋಸ ಮಡ್ತಾರ ಅಂದಾ ಎಷ್ಟು ಮೋಸ ಐತಲೇ, ಆಹಾ ನೋಡದಾ ನಾಯಿಗೆ ಉಂಬಲಿದ್ರೆ ನಾನು ಆಗ ಉಂಡಿದ್ರೆ ನಾನು ಸತ್ತೋತಿದೈನಲ್ಲಾ, ಆಹಾ ಅಂಬೊತ್ತಿಗೆ ಅಣ್ಣಾ ನೀನು ಎದ್ದು ಬಿಟ್ಟೆ,

ನಾನೇ ಕುಂದರತೀನಿ ಅಣ್ಣಾಯ್ಯಾ
ನೀನು ಅತ್ತಾಗ ಇತ್ತಾಗ ನೋಡಿಕೆಂತ ಇರಣ್ಣೊ

ಸರೆ ಬಿಡಂತಾ ಕುಂತಕಂಡೆ ಆಗ ಮುಂಚ್ಯಾಗೆ ಅವನಿಗೆ ಇಟ್ಟಿದಿ, ಆಹಾ ಇನ್ನ ನಮ್ಮನ ಮಾರ‍್ಯಾದೆ ಕಳದಾ ಈಗ ಇವನಿಗೆ ಇಟ್ಟರೆ ಎಂಗ, ಆಹಾ ಅಂತಾ ಚಲೊ ಅನ್ನಾ ಇಟ್ಟರು ನಾಯಿಗೆ ಇಡಿಕಿ ಹಾಕಿದ ಅದು ಊಟ ಮಾಡಿತು ಆಹಾ ಅವರು ಊಟ ಮಾಡಿದರು ಎದ್ದರು ಮನಿಗೆ ಬಂದರು, ಆಹಾ ಲೇ ಇಷ್ಟು ರೊಕ್ಕ ಖರ್ಚು ಮಾಡಿಕಂಡು ಹಾಳಾಗಿ ಹೋಗಿ ಬಿಟ್ಟಿವಿ ಇದರಾಗ ಸಿಗಲಿಲ್ಲ ಈ ಮಾರವಾಡೇರು ಅಂಗಲ್ಲ ನಮ್ಮ ಮನ್ಯಾಗಲಿದ್ದ ಎತ್ತುಗಳು ಮನ್ಯಾಗಲಿದ್ದ, ಆಹಾ ಗೋರಿಗಳು ಮಾಡಬೇಕಂತ ಭೂಮ್ಯಾಗಲಿದ್ದ ಗೋರಿ ಮಾಡಾನ, ಆಹಾ ಅವರು ಗುಡಿಸಲಿ ತಲ್ಲೀಗೆ ಮಾಡಾನ, ಆಹಾ ಅವರು ಹೊರಸಿ ಎಷ್ಟು ಆಗಲಾಗ ಐತೊ ಅಷ್ಟು ಅಗಲಾಗ ಈ ಭೂಮ್ಯಾಗಲಿದ್ದ ಮಾಡಿಕೆಂತೋಗಿ ಅವರು ಆಗಲಾಗ ಮಾಡ್ಯಾರ ಆಹಾ ಸಟ್ ಸರವೊತ್ತಿನಾಗ ಗಡಾರದಲ್ಲಿದ್ದ ಅಂಗಗಡ್ಡೆ ತಿವಿದು ಬಿಟ್ಟರಪಾ ಹೊರಾಸಿ ಹೊರಸಿ ಅಂಗೆ ಬೀಳಾಬೇಕಪಾ, ಆಹಾ ಬಿದ್ದಮ್ಯಾಲೆ,

ಆಗ ಅವರನ ಕಡಿಯಾರು ನಾತಾಲೆ

ಲೇ ಬಡವರಾ ಬರ‍್ರೆಪ್ಪಾ ಅಂದಾ ಒಡ್ಡರು ಉಪಾರರು ಕಬ್ಬೇಕರು ಬಾರಿಕರು ಬಂದರು, ಆಹಾ ಏನ್ರೀ ಮಾರವಾಡೇರು ಆಗ ಲಿಂಗವಂತರೆ ಏನಿಲ್ಲಾ ಹಳೇ ಬಾವಿ ಕುಣಿ ಐತೆ, ಆಹಾ ರಾತ್ರಿ ಎತ್ತುಗಳು ಮನ್ಯಾಗಲಿದ್ದ ಮಾರವಾಡಿ ಶೇಠಿದೋರು ಮನ್ಯಾಗ ಗುಡಿಸಲಿಕೆ ಒಳಾಗ ತೂರಿಕೆಂತಾ ಹೋಗಬೇಕು ರಾತ್ರೆಲ್ಲಾ ತೋಡಿ ಹಳೇಬಾವ್ಯಾಗ ಹಾಕರಿ, ಆಹಾ ಮುಂಜಾಲೆಲ್ಲಾ ಗಡ್ಡಿಗೆ ಹಾಕರಿ ನೋಡೋರಿಗೆ ಊರಾಗ ಏನು ಕಾಣಿಸ್ತದ ಅಂದರೆ ಎಲೆಲೆಲೆ ಹಳೇ ಬಾವಿ ಕುಣಿ ತೊಡಸ್ತಾರ,

ಕುಣಿ ತೋಡಸ್ತಾರ ಅಂತಾರ
ನೋಡೋರುಗೆಲ್ಲ ಇದ್ದಂಗೆ
ನೀರು ಕುಡೀತೀವಂತ ಸಂತೋಷ

ಯಾಕರಿ ಮಾರವಾಡೇರು ನೋಡರಿ ನಾವ ಅಂತಾ ಕೆಲಸ್ ಮಾಡಂಗಿಲ್ಲ, ಆಹಾ ನಾವು ಬಲ್ಲಿವಿರಿ ಅಂದಾ ಏ ಒಬ್ಬರು ಮುನ್ನೂರು ನಾನೂರು ತಿಂದರಿ,

ಈಗ ಮುನ್ನೂರು ನಾನ್ನೂರು ನಾನ್ನೂರು ಆಗೈತೊ ನೀವೆ ಸಾಲ ತೀರಿಸರಿ
ಊರಿಗೋಗಿ ತಂದು ಕೊಡತೀವಿ
ಯಾರನನ್ನ ಹೊತ್ತಿಕ್ಕಲೇ

ಅಂಬೊತ್ತಿಗೆ ನೋಡಿದರು ಊರಿಗೆ ಹೋದರನ ಎಲ್ಲಿ ಐತಪಾ ನಮ್ಮನ ಕೈಯಾಗ ರೊಕ್ಕ,

ಎಪ್ಪಾ ಮಾಡಾನ ಮಾಡಿತಿವಿ ಬಿಡಪ್ಪಾ
ಲಿಂಗವಂತರೆ ನೋಡಣ್ಣಾ ಎತ್ತುಗಳು ಮನ್ಯಾಗಲಿದ್ದರಾ ಸಯ್
ಮಾರ್ವಾಡಿ ಶೇಠಿದೋರಿಗೆ ಸಯ್
ಒಳಗೆ ಬೋರಂಗಿ ಮಾಡಿಸ್ತಾರ
ಇತ್ತಗಲಿದ್ದ ನೋಡರಾ
ಇನ್ನ ಗುಡಿಸಲಿದ್ದರಾ
ತೋಡಿಕೆಂತಾ ಬಂದರು

ಮೂರೆ ದಿನಕೆ ತೋಡಿಬಿಟ್ಟರು, ಆಹಾ ಆಗ ಗುಡಿಸಲಿ ತಲ್ಲಿಗೆ ಬಂದರು ಗುಡಿಸಲ್ಯಾಗ ಆಗೇವು ತೋಡಿದಂಗ ಗುಡಿಸಲು ಅಗಲಾಗ ತೋಡಿ ಬಿಟ್ಟರು, ಆಹಾ ದಿನಾಲು ಅಣ್ಣಾ ಮಕ್ಕಂಡರೆ ತಮ್ಮ ತಾಸೊತ್ತು ಎದ್ದು ಕೂತ ಕಂತಿದ್ದ ತಮ್ಮ ಮಕ್ಕಂತ ಮ್ಯಾಲೆ ಅಣ್ಣಾ ಎದ್ದು ಕುಂದರತಿದ್ದ, ಆಹಾ ಆಗ ಎಲ್ಡು ಮೂಲಿಗೆ ಎಲ್ಡು ನಾಯಿಗಳು ಕಟ್ಟಿಹಾಕ್ಯಾರ, ಆಹಾ ಕುದ್ರಿ ಮನಿಮುಂದೆ, ಆಹಾ ಆಗ ಇಬ್ಬರು ನಡಿವಿಲಿ ಚಿಕ್ಕನಾಯಿ ಮಲಿಸಿಕೆಂಡಿದ್ರು, ಆಹಾ ಆವೊತ್ತು ನಾಯೀನ ಮನಿಸಿಕೆಂಡು ಇಬ್ಬರುಕ ಅಣ್ಣಾ ತಮ್ಮರು ನಿದ್ದಿ ಮಾಡಿಬಿಟ್ಟರು ಆಹಾ ಇಬ್ಬರು ನಡಿವಿಲೆ ಆಗ ಕಿವಿ ಇಟ್ಟು ಹೊರಮ್ಯಾಲೆ ಮಕ್ಕಂಡೈತಪಾ, ಆಹಾ ಈ ಒಳಗ ಒಡ್ಡರು ಉಪ್ಪಾರರು ಕಬ್ಬೇರರು ಗಡಾರಿ ತಗಂಡು,

ಡಿಮಿಡಿಮಿ ಗುದ್ದು ವರೆ
ಸಟ್ ಸರವೊತ್ತಿನಾಗಣ್ಣಾ
ಅಣ್ಣಾ ಸಲಿಕಿಲಿದ್ದಾ ನೋಡರಾ ಸಯ್
ಬರಬರ ತೋಡರಾ
ಸಲಿಕಿಲಿದ್ದ ವಣ್ಣಾಯ್ಯ
ತೋಡೇರ ಅವರೆ ಅಣ್ಣಾಯ್ಯಾ

ಈ ನಾಯಿ ಬೇಸುಕ ಕೇಳಿಸು ಡಿಮಿಡಿಮಿ ಅನ್ನೋದು ಏನೊ ಭೂಮ್ಯಾಗ ಡಿಮಿಡಿಮಿ ಅಂತೈತಾ, ಆಗ ಹೊರಸು ಅಲ್ಲಾಡ ತೈತಂತಾ ಆಗ ಇಬ್ಬರು ನಡಿವಿಲೆ ಎದ್ದು ಭೂಮಿಗೆ ಮಕ್ಕಂಡರಪಾ ಆಹಾ ಭೂಮಿಗೆ ಕಿವಿ ಇಟ್ಟು ಕೇಳಿದರೆ ಗಡಾರಿತಗಂಟು ಗುಟ್ಟುತಾರ ಒಳಗಾ ಆಹಾ,

ದಿಗ್ಗನೆ ಎದ್ದೆ ಬಿಟೈತೊ ಸಯ್
ಬೊವ್ ಅಂತಾ ಅಂದೈತೊ ಸಯ್
ಇಬ್ಬರನ ಎಬ್ಬಿಸೆ ಬಿಟ್ಟೈತೊ
ಇಬ್ಬರ ಎಬ್ಬಿಸೆ ಬಿಟ್ಟೈತೊ
ಚಿಕ್ಕ ನಾಯಿ ನೋಡಣ್ಣಾ
ಎಮ್ಮಾ ದೋತ್ರ ಇಡದಾನ ಎಳಿತೈತೊ ಸಯ್
ಆಗ ಅಂಗಿ ಇಡದು ಉಳಿತೈತೊ ಸಯ್
ಆಗ ನಾಯಿ ಓಡಿಹೋತು ಸಯ್
ಎಕರಿ ಭೂಮಿ ಓಡಿದರು ಸಯ್
ಅಲ್ಲಿ ನಾಯಿ ನಿಂತಕಂತಾತ ಸಯ್
ಮತ್ತೆ ಓಡಿ ಬರತಾತ ಸಯ್
ಇಲ್ಲಿ ಬರ್ರೀ ಅಂತೈತಾ ಸಯ್
ನಾಯಿ ಹೇಳಿ ಬಿರತೈತಾ
ನಾಯಿ ಒಂದೆ ನೋಡರಾ
ನಾಯಿ ಒಂದೆ ಹೇಳತೈತೊ

ಚಿಕ್ಕ ತಮ್ಮ ನೋಡಿದಾ ಅಣ್ಣಾ ಈ ನಾಯಿ ಓಡಿ ಹೋತದ ಮತ್ತೆ ಬರ್ತಾತ ನಮ್ಮ ದೋತರ ಇಡಿದು ಎಳಿತೈತೆ ಏನು ಐತೊ ಅಣ್ಣಾ ಬಿಟ್ಟು ಹೋಗಾನ ಅಂತಾ ಎಲ್ಡು ನಾಯಿ ಬಿಚ್ಚಿಕಂಡರು, ಆಹಾ ಎಲ್ಡು ನಾಯಿ ಬಿಚ್ಚಕಂಡು ಆಗ ಕುದ್ರಿಗಳು ಬಿಚ್ಚಿ,

ಆಗ ನಾಯಿ ನಿಂತಾ ತಲ್ಲೆಣ್ಣಾ ಅವರೆ ಎಲ್ಲರೂ ನಿಂತಾರ

ಎಲ್ಲರೂ ಹೋಗಿನಿಂತ ಕಂಡರೆ ಇವರು ಏನು ಮಾಡಿಬಿಟ್ಟರು ಗಡಾರಿಗಳು ಆಗಚಲಿಗಳು ತಗಂಡು,

ಗಡ್ಡೆ ಇನ್ನಾ ತಿವಿದಾರ
ಗಡ್ಡೆ ತಿವಿದು ಹೊತ್ತಿಗೆ
ಹೊರಸು ಹೊರಸು ಅಡೇಗ ಬಿದೈತೆ ಸಯ್
ತೋಮನಂತಾ ಬಿದೈತೆ ಸಯ್
ಬಿದ್ದಾರೆ ಬಿದ್ದಾರೆ ನೋಡರಾ ಸಯ್
ಮಕ್ಕಂಡವರು ಆಗ ಅಂತಾರ ಸಯ್
ಅಲ್ಲೆ ತಲೆ ಮ್ಯಾಲರಾ ಸಯ್
ಡುಮಿಡುಮಿಕ ಅಂತಾ ಬಡಿತಾರ ಸಯ್
ಅವರೆ ಇನ್ನಾ ನೋಡರಾ ಸಯ್
ಗಡಾರಿ ತಗಂಡು ಬಡಿತಾರ ಸಯ್
ಹೊರಸು ಮೋಡು ಅಣ್ಣಾಯ್ಯ ಸಯ್
ತುಂಡು ತುಂಡು ಆಗಿಬಿಟ್ಟೈತೊ ಸಯ್
ಅಲ್ತೆ ನಾಡ ನೋಡರಾ ಸಯ್

ಮ್ಯಾಕ ಎಗರಿ ಬಿಡತೈತೆ ಹತ್ತಿನ ದಿಂಡು ನೋಡರಾ ಮ್ಯಾಕೆ ಎಗರಿ ಬಿಟ್ಟೈತೊ ಮಾಕ ಎಗರಿಬಿಡತಪಾ, ಅಹಾ ಮಾರವಾಡಿ ಶೇಠಿ ಹುಡಗರು ನೋಡಿದರು, ಆಹಾ ಎಷ್ಟು ಮೋಸ ಮಾಡಬೇಕಂತ ಐದರಾ ಮರಕ್ಲಲು ಲಿಂಗವಂತರು, ಆಹಾ ನಾಲ್ಲೋರು ಅಣ್ಣ ತಮ್ಮರು ಅವರನೇನನ ನಾವು ಕೆಡಿಸಿದೆವಾ, ಆಹಾ ನೋಡಿದಾ ಒಳಗಲಿದ್ದ ತೋಡಿಕೆಂತಾ ಬಂದು ಆಹಾ ನಮ್ಮ ಮಕ್ಕಂಡೋರನ ಕೊಲ್ಲಬೇಕಂತ ಮಾಡ್ಯಾರ ಹೊರಸು ಬಿದ್ದತ್ತರೆ ಲೇ ಸತ್ತು ಹೋದರಲೆ ಬರೇ ಇನ್ನ ತಾವಾಗಿ ಖಂಡ ಖಂಡ ಮ್ಯಾಲೆ ಎದ್ಯತೆ ಬಡಿದಂಗೆಲ್ಲ ಹತ್ತಿನ ದಿಂಡು ಹತ್ತಿಮ್ಯಾಗ ಎಗರೈತೈತೆ, ಆಹಾ ಅವರೆಲ್ಲಾ ತುಂಡು ತುಂಡು ಅಗ್ಯಾರಂತಾ ತಿಳಕಂಡರು ಲಿಂಗವಂತರು, ಆಹಾ ಆಗ ಏನು ಮಾಡಿದರು ನೋಡಣ್ಣಾ ಎಷ್ಟು ಮೋಸ ಮಾಡಬೇಕಂತಾ ಐದಾರ ಇಗೋ ಎಲ್ಡು ನಾಯಿನ ಇಡಕಂಡು ಇವರು ಈಗ ಇಲ್ಲಿ ಕುಣ್ಯಾಗ ಇಳಿಸಿಬಿಡು ಅವರು ಎಲ್ಲಿದ್ದ ತೋಡಿಕೆಂತಾ ಬಂದಾರೊ ಅಲ್ಲಿ ಭೂಮ್ಯಾಗಲಿದ್ದ, ಆಹಾ ಮಾರವಾಡಿ ಶೇಠಿದೋರು ನಮ್ಮನ ಕೊಲ್ಲಾಕ ಲಿಂಗವಂತರು ಅಲ್ಲಿಗೆ ನಾನು ನಾಯಿ ಚಿಕ್ಕ ನಾಯಿನ ಕರಕೆಂಡು ಹೋತೀನಿ ಅಲ್ಲಿ ಬಿಟ್ಟು ಬಿಡ್ತೀನಿ ನಾಯೀನಾ,

ಒಳಗ ಇದ್ದವದನೆಲ್ಲಣ್ಣಾ ಒಳಗರಡಿದು ಬಿಡತೈತೆ
ಒಳಗಲಿದ್ದರೆ ಅಣ್ಣಾಯ್ಯ ಒಳಗೆ ಸತ್ಸೆ ಹೋತಾರ
ಒಳಗೆ ಸತ್ತೆ ಹೋತಾರ ಅವರೆ ಒಂದೆ ಅಣ್ಣಾಯ್ಯಾ

ಓ ಅಷ್ಟೆ ಆಗಲಿ ತಮ್ಮಾ ಎಲ್ಡು ನಾಯಿ ಇಡಕಂಡು ಈತನಿಂತಕಂತಾ ಒಂದು ನಾಯಿ ಇಡಕಂಡು ಏನಂದಾ ನಡೆಮ್ಮಾ,

ಎಲ್ಲಿದ್ದ ತೋಡಿಕೆಂತಾ ಬಂದಾರೆ ಅಲ್ಲಿಗೆ ನಾವು ಹೋಗಾನ
ಚಿಕ್ಕನಾಯೀನೆ ಬರ್ತೈತೆ
ಎತ್ತುಗಳು ಮನಿಗೆ ಬರ್ತೈತೊ
ಆಗ ಮನ್ಯಾಗ ತೂರೈತೊ

ಇನ್ನ ಮನಿಯಾಗ ಬರ‍್ರೆಣ್ಣಾ ತೂರಿದರೆ ಒಳಗ ಲೈಟು ಇಟ್ಟುಕೊಂಡು ಬೇಸುಬೆಳಕು ಇಟಕಂಡು ಓಡುತಾರಪಾ, ಆಹಾ ಉಸ್ಸೊ ಅಂತಾ ಬಿಟ್ಟಾನೆ

ಚಿಕ್ಕನಾಯಿ ಒಳಗ ತೂರೈತೆ
ಆಗ  ಒಡ್ಡರು ನೋಡರಾ
ತೋಡದು ಮರಕಲ್ಲುರೆಲ್ಲಕಾ ಸಯ್
ಎಗರಿ ಕುತ್ತಿಗೆ ಇಡದವಾ ಸಯ್
ಫಟ ಫಟ ಕಡಿತೈತೊ ಸಯ್
ಹೊಟ್ಟೆಗೆ ಕುದ್ರಿ ಎಳದು ಬಿಡಾರು ಸಯ್

ಹೊಟ್ಟೆ ಕಳ್ಳು ಹೊರಗ ಬೀಳತಾವ ಇನ್ನಾ ಫಟ ಫಟ ಕಡಿದೈತೊ ಹೊಟ್ಯಾಗಳ ಕಳ್ಳು ಬೀಳತಾತ,

ಅಯ್ಯೋ ಇತ್ತಾಗ ನಾಯಿ ಬಂತಮ್ಮಾ ಸಯ್
ಅತ್ತಾಗ ತಿರಿಗೆ ಬೀಳತಾರ ಸಯ್
ಅತ್ತಾಗ ನಾಯಿಗಳು ಎಲ್ಡು ಬಂದಾರ ಸಯ್
ಎಗರಿ ಕಡಿದೆ ಬಿಡ್ತಾವ ಸಯ್
ಕಡಿಕೆಂತಾ ಕಡಿಕೆಂತಾಮ್ಮ
ಅತ್ತಾಗ ನಾಯಿಗಳು ಬರ್ತಾವ
ಇತ್ತಾಗ ನಾಯಿ ಬರ್ತೈತೊ

ಎತ್ತಾಗ ಹೋಗಾಕಿಲ್ಲಪಾ ದಣಿವು ಇತ್ತಾಗ ಹೋದರೆ ಗ್ಯಾಡೆ ಹೋದರೆ ಗ್ಯಾಡೆ ಅವರು ಏನು ಮಾಡಿದರು ಇಗೋ ಕೆಬ್ಬಿಣು ಪುಟ್ಟಿಗಳು ಮೊಖ ಮುಚ್ಚಿಕೆಂಬೋರು ಕುಂದ್ರೋರು, ಆಹಾ ಕೆಬ್ಬಿಣ ಪುಟ್ಟಿಗೋ ಬೆಂಕಿತ್ತಿರೊ ಆಗ ಕುತ್ತಿಗೆ ಇಡದಾವೆ ನಾಯಿಗಳು,

ಆಗ ಬಂದೆವಣ್ಣಾಯ್ಯಾ ಸಯ್
ಮೂರು ಮೆಟ್ಟಿಲ್ಲ ಬಂದವಯ್ಯಾ ಸಯ್
ಕಳ್ಳರು ಕಡದು ಬಿಟ್ಟಾಲೆ ಸಯ್
ಎಷ್ಟು ಗಂಟು ನೋಡರಾ ಸಯ್
ಒಳಗಾ ಸತ್ತೆ ಹೋಗುತಾರ
ಹೆಣ್ಣು ಗಂಡು ವಣ್ಣಾಯ್ಯಾ
ಒಳಗೆ ಸತ್ತೆ ಹೋಗ್ಯಾರ

ನೂರು ಮಂದಿ ಸತ್ತು ಹೋಗ್ಯಾರಪಾ ಆಹಾ ಹೆಣ್ಣು ಗಂಡು, ಆಹಾ ಒಬ್ಬರು ಹೊರಗ ಬಂದಿಲ್ಲ, ಆಹಾ ಅತ್ತಾಗಲಿದ್ದ ನಾಯಿಗಳು ಕಡಕಂಡು ಬರ್ತಾವ ಇತ್ತಾಗಲಿದ್ದ ನಾಯಿಗಳು ಕಡಕಂಡು ಹೋತಾವ, ಆಹಾ ಇತ್ತಾಗ ನಾಯಿ ಅತ್ತಾಗ ನಾಯಿ ಇತ್ತಾಗ ಹೋತು, ಆಹಾ ಎಮ್ಮಾ ನಾಯಿಗಳಾದ, ಆಹಾ ನಮ್ಮ ಜಲ್ಮ ಉಳಿಸದ್ರೆ ಆಹಾ ಒಬ್ಬನ ಹೊರಗಳ ಬಿಡಲಾರದಾಗ ಕಡಿದು ಕಡಿದು ಬಂದಿರಿ, ಆಹಾ ಏಸು ಮಂದಿ ಐದಾರ ನೀವು ಎಳಕಂಡು ಬರಬೇಕು ನೀವು ಗಡ್ಡಿಗೆ ಹಾಕಬೇಕು ಒಬ್ಬರು ವಿನ್ನ ಅದ್ರಾಗ ಬಿಡಬ್ಯಾಡರಿ ಅಂದರು ಆಹಾ,

ಮೂರು ನಾಯಿಗಳ ನೋಡರಾ ಸಯ್
ಕೈ ಇಡಕಂಡು ಬಾರದೆ ಸಯ್
ಎಳಕಂಡು ಎಳಕಂಡು ಬರ್ತಾವ ಸಯ್
ಕುತ್ತಿಗೆ ಇಡಕಂತೆ ವಣ್ಣಾಯ್ಯ ಸಯ್
ಎಳಕಂಡು ಎಳಕಂಡು ಬರ್ತಾವ ಸಯ್
ಎಲ್ಲರೂ ಲೆಕ್ಕಾ ಮಾಡ್ತಾರ ಸಯ್
ಹೆಣ್ಣೊ ಗಂಡೆ ನೋಡರಾ ಸಯ್
ನೂರು ಮಂದಿ ಸತ್ತಾರ ಸಯ್
ಹೆಣ್ಣು ಗಂಡು ನೋಡರಾ
ನೂರು ಮಂದಿ ಸತ್ತಾರ ಸಯ್

ನಡುವಿಲಾತ ಏನಂದಾ ತಮ್ಮಾ ಲಿಂಗಾಯತರಿಗಂದೆ ಪಾಪ ಮಾಡಿದ್ವಿ ತಂಡಿಗಂದರೆ ಕರ್ಮ ಮಾಡಿದ್ದಿರ ಈ ಬಡವಿರಗೇನು ಪಾಪ ಮಾಡಿದ್ವಿ ಎಪ್ಪಾ ಇಂತಾ ಕೆಲಸ ಮಾಡಿರಿ ಅಂದುವಾಗ ಇಂತೋರನ ಕೊಲ್ಲಿರಿ ಅಂದುವಾಗ ಬ್ಯಾಡಪ್ಪಾ ಅಂತಾ ಇಂದುಕ ಹೋಗಬಾರ‍್ದು, ಆಹಾ ಇವರು ನಮ್ಮನ ಕೊಲ್ಲಾಕ ಬಂದಾರೆ ಎಪ್ಪಾ ಬಡವರು ನಮ್ಮ ಎಲ್ಡು ಜೀವಾಕೆ ಮೂರು ಜೀವಾ ಸತ್ತು ಹೋಯಿತಲ್ಲಾ, ಆಹಾ ಅಣ್ಣಾ ಸಾಯಲಿ ಸುಮ್ಮನಿರು, ಆಹಾ ನಿನಗೇನು ಗೊತ್ತಿಲ್ಲಾ ಇವರು ಲಿಂಗಾಯತರನ ಬಿಡಬಾರ‍್ದು, ಆಹಾ ಅವರು ಕಡಿಸಿರೆಲ್ಲಾ ಪಾಪ ಜೀವನ ಇವರನೆಲ್ಲ, ಆಹಾ ನಾವು ಸತ್ತು ಹೋಗಿದ್ದರೆ ಪಾಪ ಅಂದಿದ್ದರಾ, ಆಹಾ ಈಗ ಮೂರು ನಾಯಿ ಕರಕಂಡು,

ಲಿಂಗವಂತರ ತಲ್ಲಿಗೆ ಬಂದಾರ
ಕೇಳೊ ಲಿಂಗಾಯತರು ನೀವಾಲೆ

ಲೇ ಬರ‍್ರೆಲೆ ಅಂದಾ ಕೈ ಕಾಲು ತಣ್ಣಾಗ ಆಗಿಬಿಟ್ಟುವ ಅವರುವು, ಆಹಾ ಈಸು ಮಂದೀನ ಯಾರಲೆ ಕಡಿಸಿದ್ದು ಅಂದಾ, ಆಹಾ ಯಾರು ಕೊಲ್ಲಿದ್ದು ಅಂದಾ, ಆಹಾ ನಾವು ಕೊಲ್ಲಿಲ್ಲ ಅಯ್ಯಾ ಮತ್ತೆ ಇಲ್ಲಿದ್ದ ಅಲ್ಲಿಗೆ ನಮ್ಮ ಮನೆಗೆ ಯಾವನು ತೋಡಿಸದ್ದು ಅಂದರು, ಆಹಾ ಎಲ್ಲಿಗೆ ತೋಡಿಸಿಲ್ಲ ಅಂದಾ ಲೇ ನೀವು ತೋಡಿಸಿಲ್ಲ, ಆಹಾ ನೀವು ಬಡವರನ ಕಳಿಸದಿದ್ದರೆ ಅವರೆಂಗ ತೊಡಬಾಕ ಅಂತಾ,