ಅಣ್ಣಾ ಮಾರ್ವಾಡಿ ಶೇಠಿದೊನುರಾ
ಎಡಕಲ್ಲಿದ್ದ ಬಲಕ ನೋಡ್ಯಾನೆ
ರಾಜ ಸೋಮೋಜಿ ನೋಡಾರ
ಇನ್ನ ಐದು ಮಂದಿ ಬಂದಿರಾ
ಲೇ ನನ ಜೀವ ಕೊಲ್ಲಲಿಕ್ಕೆರಾ

ನೀವೆ ಬಂದರಾ ಶರಣು ಏ… ಏ… ಏ… ಎಮ್ಮ ಎಡಕೊಂಡು ಬಲಕೊಂದು ಕೈದಿರಾ ಕಳ್ಳರು ಪಾದಕೆ ಇದ್ದ ಯಾರೋಲೆ ವೈದಿರಾ, ಆಹಾ ಬೇವುರೋರೆ ವೈದಿರಾ ಆ ರಾಜ ಮಾರವಾಡೋನು ಏನು ಮಾಡಿದಾ ಆ ಎಡಕ್ಕೆ ಇದ್ದವರಿಗೆ ಎಡಗೈ ಹಾಕಿದ ಬಲಕ್ಕೆ ಇದ್ದವರಿಗೆ ಬಲಗೈ ಹಾಕಿದ ಕಳ್ಳರು ಪಾದ ಮ್ಯಾಲೆ ಹಾಕಿ ಏನಂತಾ ಪಾದಮಾಡಿಕೆಂತಾನಪಾ ಯಾವೂರು ನಿಮ್ಮದು ವೈತೇರ‍್ರೀ ಎಪ್ಪಾ ನೀವು ಯಾರು ಕಳಿಸಿದ್ರೆ ಬಂದಿರ‍್ರೀ ಯಾರು ಕಳಿಸಿದ್ರೆ ಬಂದಿರೋ ಯಾರು ಹೇಳಿದ್ರೆ ಬಂದಿರೇ ನಿಮ್ಮ ಹೆಸ್ರುನಾರಾ ಹೇಳರಾ ಆ.. ಆ.. ಆ.. ಎಪ್ಪಾ ಹೆಸ್ರು ಹೇಳಿ ತಲೆ ಕಡಿಯಿರೊ ಆ ಆ ಆ ಅಂಬೊತ್ತಿಗೆ ನೋಡಪಾ ಯಾರಿಗೇನು ಕಾಲ ಬರ್ತೈತೊ, ಆಹಾ ನಾವಂದರೆ ಕಳ್ಳರು ದತೋಗಿ ಮಕ್ಕಳು ಶಂಬೆಗೆ ಮೆಂಬೆಗ ಮಂತ್ರಾಳ ಮಾದೇವ ಇಗೋ ನಿಮ್ಮ ಕಕ್ಕನ ಕೈಯಾಗ ಇರಾತ ಈತ ಗಿರಿಸಾಲ ಗಿರಿಮೊಲೆ ಆಹಾ ಏನಂದ್ರು ಈಗ ಸೇರು ಕಡಗ ಕೊಟ್ಟಾನ, ಆಹಾ ಸಾವಿರ ರೂಪಾಯಿ ಕೊಟ್ಟಾನ ಮೂವರು ಸಿಕ್ಕರೆ ಮೂವರ ತಲೆ ತಗಂಡು ಬರ‍್ರೀ ಕಡಿಕಂಡು ಅಂದನಾ, ಆಹಾ ಇಬ್ಬರು ಸಿಕ್ಕರೆ ಏಲ್ಡು  ತಲೆ ತಗಂಡು ಬಾರ‍್ರೀ ಅಂದನಾ, ಒಬ್ಬನು ಸಿಕ್ಕರೆ ಒಂದೆ ತಲೆ ತಗಂಡು ಬಾ ಅಂದನಾ, ಆಹಾ ನಾವು ಬಂದು ಐದುದಿಸಾ ಆಯಿತು, ಆಹಾ ಕುದ್ರಿ ತಿಪ್ಯಾಗ ಕುಂತಿದ್ದಿವಿ, ಆಹಾ ಎದೆಮುಟ್ಟಾ ಕುಣಿತೋಡಿಕೊಂಡು, ಆಹಾ ಇವತ್ತು ಆಯಿತಾರ ಅಮಾಸ ಈಗ ಚೆಂಬು ತಗಂಡು ಬಂದಿದ್ದಕ್ಕೆ ಈಗ ನೀನು ಕುತ್ತಿಗೆ ಕೊಯಿತಿವಾ ರಾಜ ಆ.. ಆ..

ನಿಮ್ಮ ಕಕ್ಕ ಕಳಿಸಿದ್ರೆ ನಾವು ಬಂದೀವಾ
ಇನ್ನ ಕಡಿಮಾಡ ಬಂದೀವಿ ಜಲ್ಮ
ಎಪ್ಪಾ ನಿಮ್ಮ ಕಕ್ಕ ಕಳಿಸಿದ್ದಕೆ ನಾವು ಬಂದೀವಿ
ನಿನ ಕುತ್ತಿಗೆ ಕೊಯಿಕೊಂಡು ಹೋತಿವಿ

ಅಂದರೆ ನೋಡಿದಾ ಹೊಟ್ಯಾಗ ಹುಟ್ಟಿದ ಮಕ್ಕಳಿಗೆ ಆಗ ತಂದೆ ಆಸ್ತಿ ಕೇಳಿಲ್ಲ ನಮ್ಮಪ್ಪ ಆಸ್ತಿ ಆತೆ ತಿಂತಾನ, ಆಹಾ ನಾವು ಎಲ್ಲೊ ಒಂತಲ್ಲಿ ಇದ್ದೀವಿ, ಆಹಾ ಇದ್ದತಲ್ಲಿ ಇರಗೊಡಸವಲ್ಲೆ, ಅಹಾ ಕುಂತತಲ್ಲಿ ಕುಂದರ ಗೊಡಸವಲ್ಲೆ, ಆಹಾ ತಂದೆಗಾಗಿ ಪಾಪ ಮಾಡೀನಿ ನಿಮಗೇನು ಪಾಪ ಮಾಡೀನೊ ಓ ಓ ಓ ಎಪ್ಪಾ ನಾನಂತ ಮೀರಿ ಮಗನೊ ನಿಮಗೇನು ಪಾಪ ಮಾಡಿಲ್ಲ ಅಪ್ಪಾ ಕಳ್ಳರು ಶಂಬೆಗೆ ನಮ್ಮ ಕಕ್ಕ ಸೇರು ಬೆಳ್ಳಿ ಸಾವ್ರು ರೂಪಾಯಿ ಕೊಟ್ಟರೆ ನಾನು ಎಲ್ಡು ಸಾವ್ರ ನಿನ್ನ ಕೊಡತೀನೊ ಓ.. ಓ.. ಕಳ್ಳರಾ ಎಪ್ಪಾ ಎಲ್ಡು ಸೇರು ಬೆಳ್ಳಿ ಕೊಡ್ತಿನೊ ಆ.. ಆ.. ಆ.. ನಿಮಗೆ ಶರಣೆ ಕಳ್ಳರಾ,

ಆಯಿದು ಮಂದಿಗೆ ಕೈಮುಗಿತಾನೆ .. .. ..
ಎಪ್ಪಾ ಇನ್ನ ಹೆಂಡ್ತಿ ಹರೇದೋಳುರಾ .. .. ..
ಹೆಂಡ್ತಿ ಮನಸ್ಸು ವೈತಿರಾ .. .. ..
ಎಪ್ಪಾ ಹೆಂಡ್ತಿ ಮ್ಯಾಲೆ ಜೀವವೈತಿರಾ .. .. ..
ಅವಳೇ ಹರೆದೋಳುರಾ
ಮದುವ್ಯಾದ ಮೂರು ವರುಷಾಕ .. .. ..
ನನಗೆ ಜೀವಕ ಮಗುವಾಗಿ ಚಿಕ್ಕ ವಯಸಾಕ
ನನಗೆ ಮಗ ಹುಟ್ಯಾನ .. .. ..
ಎಪ್ಪಾ ಕಳ್ಳರ ಮಗ ಮೂರು ತಿಂಗಳ ಮಗವೈದನಾ
ನನ ಜಲ್ಮ ಕಳಿಯಬೇಡಿರೆ .. .. ..
ಎಪ್ಪಾ ನನ್ನ ಜೀವ ತಗಿಯಬ್ಯಾಡರಾ
ನನ ಜನ್ಮತಗಿ ಬ್ಯಾಡರಾ .. .. ..
ನನ್ನ ಜೀವಿ ತಗಿಬ್ಯಾಡರಿ
ನನ್ನ ಕಡದರೆ ಏನು ಪುಣ್ಯವೊ .. .. ಕಳ್ಳರಾ
ಎಪ್ಪಾ ನಿಮ್ಮಗಾಗಿ ಮಗ ವೈದಿನಿ
ನನಮ್ಯಾಲೆ ತಲೆತಟ್ಟು ಬಿಡರಾ .. ..
ಎಮ್ಮಾ ಪಾದಮ್ಯಾಲೆ ಕೈಹಾಕ್ಯಾನ .. ..
ರಾಜ ಒಂದೆ ನೋಡರಾ

ಎಪ್ಪಾ ತಮ್ಮನೊರು ಹರೇದೋರು ಅಗ್ಯಾರ ಈಗ ತಾಯಿಲ್ಲ ತಂದೆಯಿಲ್ಲ, ಅಹಾ ತಮ್ಮನೋರಿಗೆ ಮದಿವಿ ಮಾಡಬೇಕು ಎಪ್ಪಾ ನನ ಕಡಿಬ್ಯಾಡರಿ ನನ್ನ ಕಡದರೆ ನಿಮಗೇನು ಪುಣ್ಯ ಈಗ ಮೊಗ ಚಿಕ್ಕ ವಯಸು ಈಗ ಹೆಂಡ್ತಿ ಹರೇದೋಳು ನನ ಜಲ್ಮ ತೆಗಿಬ್ಯಾಡರಿ ಅಂದಾ, ಆಹಾ ಅಂದರೆ ಕಲ್ಳರದಾಗ ಆಯಿದು ಮಂದಿ ಐದಾರ ಇವರು ನಾಲಾರು ಏನಂತಾರಾ ನೋಡಲೇ ಪಾಪ ಹೆಂಡ್ತಿ ಮ್ಯಾಲೆ ಜೀವ ಐದಾನಂತೆ ಚಿಕ್ಕ ವಯಸಿದಾಗ ಮಗ ಹುಟ್ಯಾನಂತೆ ಮೊಗ ಹುಟ್ಟಿ ಮೂರು ತಿಂಗಳು ಆಗೈತಂತೆ, ಆಹಾ ತಮ್ಮನೋರು ಕೈಗೆ ಬಂದಾರಂತೆ ಮದುವಿ ಮಾಡೋರು ಇಲ್ಲಂತೆ ಹೊಸಾದು ಊರು ಕಟ್ಯಾನಂತೆ, ಆಹಾ ಇನ್ನ ಸಾಲಕೂಡಾ ತೀರಿಸಿಲ್ಲಂತೆ, ಆಹಾ ಏ ನಾವು ಒಬ್ಬರ ಕೈಗೆ ಸಿಕ್ಕಿದರೆ ಏ ಬಡಿಬ್ಯಾಡಪ್ಪಾ ಮತ್ತೆ ಮಾಡ್ಯಾನ ಅವನು ಕಳ್ಳತನ ಏನಮಾಡ್ತಿ ಅವನು ಹುಟ್ಟಿದ್ದು ನಕ್ಷತ್ರ ಆಂಗೈತೆ ಯಾರು ಮಾಡದು ಬಿಟ್ಟು ಹೋದರೆ ನಾವು ಯಾರು ಕೈಯಾಗನ ಸಿಕ್ಕರೆ ಅಂದರೆ, ಆಹಾ ಈತನ ಬಿಟ್ಟು ಹೋದರೆ ನಾವು ಯಾರು ಕೈಯಾಗನ ಸಿಕ್ಕರೆ ನಮ್ಮಗ ಅಡ್ಡಾಗಿ ಬಿಡಸ್ತಾನ, ಆಹಾ ನೋಡಪಾ ಈತನ ಆಸ್ತಿ ಬ್ಯಾಡ ಆತನ ಆಸ್ತಿ ಬ್ಯಾಡ ತಂದಿ ಮಕ್ಕಳು ಬೇಸಿದ್ದರೆ ಸಾಕು, ಆಹಾ ಈಗ ಈತ ಕೊಡೋದು ಬ್ಯಾಡಾ ಆತ ಕೊಡೋದು ಬ್ಯಾಡ ನೋಡಪಾ ನಾವು ಜೀವ ತಗಸಬಾರ್ದು, ಆಹಾ ನಮ್ಮ ಪಾದಮ್ಯಾಲೆ ಕೈಯಾಕಿ ಬೇಡಿಕೊಂಡಾಗ ನಾವು ಬಿಡಬೇಕು, ಆಹಾ ಈತನ ಬಿಟ್ಟು ಹೋಗಾನ ಬಿಟ್ಟು ಹೋಗಿ ಏನ ಅಂಬಾನ ಸಿಗಲಿಲ್ಲಯ್ಯ ನಾವೇನು ಮಾಡಾನ ಆಯಿದು ದಿವ್ಸ್ ಇದ್ದೀವಿ ನಿಮ್ಮಣ್ಣನ ಮಕ್ಕಳು ಸಿಗಲಿಲ್ಲಂದರೆ,

ಅವನೇನು ನಮ್ಮನ ಮಾಡ್ತಾನ .. .. ..
ಅವನೇನು ನಮ್ಮನ ಕಡೀತಾನ
ಅವನೇನ ನಮ್ಮನ ಮಾಡ್ತಾನೆ
ಅವನೇನ ನಮ್ಮನ ಕಡೀತಾನ
ಲೇ ಗಿರಿಸಾಲಿಗೆ ಗಿರಿಮೋಲೆ ಕಾಲು ಮುರಿದೋನೆ
ಎದೆಮ್ಯಾಲೆ ಕುಂತಿಯಿ ಕುಂಟುಗಾಲು ಎದೆಮ್ಯಾಲೆ ಇಟ್ಟಿಯಾ
ಎಡಗೈ ಕುದಲು ಇಡಿದೀಯಾ
ಬಲಗೈಲಿ ಸೂರು ಇಟ್ಟೀಯಾ
ಹೆಗಲ ಮ್ಯಾಲೆ ಕುಂತೀಯಾ ಇಳಿಯಲೆ
ಕುಂಡಿದಾಗ ತಗಿ ಆತನ ಬಿಡಾನ ಅಂದ
ಅಂದರೆ ಇತನು ಏನಂತಾನ
ಕುಂಟಿ ಕಾಲು ಉರಿತಿದ್ದರೆ
ನನ್ನ ಬೆಂಕ್ಯಾಗ ನಿನ್ನ ಬಿದ್ದಾಗ ಹೊಟ್ಟಾಗ
ಹೊಟ್ಟೆಗೆ ಬೆಂಕಿ ಬಿದೈತೆ .. ..
.. ನಾಲೋರು ನೀವು ಹೇಳ್ತೀರಾ .. .. ..
ಇತನು ನಾನು ಜೀವ ಕಳದುಬಿಡ್ತೇನಾ ಬಿಡದಿಲ್ಲ
ಇವನ ಜಲ್ಮ ಬಿಡದಿಲ್ಲರೆ
ಇತನ ಜೀವ ಕೊಲ್ಲುವೆ

ನನ ಕಾಲು ಮುರಿದೋನು ಹೊಟ್ಯಾಗ ಉರಿತೈತ ನಾನು ಬಿಡದಿಲ್ಲ, ಆಹಾ ಏನ ಬರ್ತಾ ಬರ್ತಾ ಇವನು ಬಗ್ಲಾಗ ಇಟಕಂಡು ಬಂದೀವಿ ಆಹಾ,

ಲೇ ಬಿಡಲೇ ನನ ಮಾತು ಕೇಳು
ಪಾಪ ಇಷ್ಟು ಬೇಡಿಕೆಂಡಾನ ಜೀವ ತಗದರೇ
ನಮ್ಮ ಜೀವ ಹೋತೈತಲೆ ಉಳಿಯದಿಲ್ಲ ಆಹಾ
ಅಂಬೊತ್ತಿಗೆ
ಹೋಗಯ್ಯಾ ನಾ ಅಂಗಾದರೆ ನೀವು ಬಿಡಂತಿರಿ ಬಿಡತೀನಿ ಹೋತೀನಿ
ಏನಂತ ಹೇಳ್ತೀನಿ ಸಿದ್ದೋಗಿಗೆ
ನೋಡಪಾ ಅವರು ಇಬ್ಬರು ಸಿಕ್ಕಿದರೂ
ಅವರು ಲಂಚಕೊಟ್ಟದ್ದಕ್ಕೆ ಆಗ ಬಿಟ್ಟಬಂದರು ಅಂತಾ ಹೇಳ್ತೀನಿ ಆಹಾ
ನಿಮ್ಮನ ನಾಲೋರನ ಕಡಿಸಿ ಬಿಡ್ತೀನಿ ಆಹಾ
ಅರೆ ಇವನ ಹಾಳಾಗಿ ಹೋಗಾ
ನೋಡಪಾ ನಿನ್ನ ಕಾಲು ಕಾಲು ಮುರಿದು ಆತ ಕರ್ಮ ಕಟ್ಟಿಕೆಂಡಾನ
ಆತನ ಕುತ್ತಿಗೆ ಕೊಯ್ದು ನೀನು ಕರ್ಮಕಟ್ಟಿಕೋಂಡಿ ಆಹಾ
ನಿಮ್ಮಿಬ್ಬರು ಒಳಗೆ ನಮ್ಮಿಗೇನು ಪಾಪ ಎಲ್ಲರೋ ..
ಎಪ್ಪಾ ನಮ್ಮಿಗೇನು ಕರ್ಮ ಇಲ್ಲಪಾ
ನಮ್ಮಿಗೇನು ಕರ್ಮಬ್ಯಾಡಪಾ
ಅಂದರೆ ಗಿರಿಸಾಲೆ ಗಿರಿಮೋಲೆ ಏನಂತಾನ
ನನಕಾಲು ಮುರಿದಾ ಅವನು ಕರ್ಮಕಟ್ಟಿಕಂತಾನ
ಅವನು ಕುತ್ತಿಗೆ ಕೊಯಿದು ನಾನು ಕರ್ಮ ಕಟ್ಟಿಕೆಂತೀನಿ
ಇವನಿಗೆ ಬ್ಯಾಡ ನಾಲಾರಿಗೆ ನನಗೆ ಇರಲಿ ಆಹಾ
ಸರೆ ನಿನ್ನಿಷ್ಟ ಅಂದರು
ನೋಡಪಾ ರಾಜ ಸೋಮೋಜಿ ನೀನೆ ಬೇಡಿಕೊ ಬೇಕಪಾ
ಮಾರವಾಡಿಶೇಠ ಏನೆ ಅಂದರು
ಕುಂಟೋನು ಕಾಲು ಇಡಕಂಡು ಏನಂತಾನ
ಎಪ್ಪಾ ಕೋಳಿ ತತ್ತಿಕೂಟಮೇಸ್ತಿನೊ .. .. .. ನಿನಗೆ
ಎಪ್ಪ ಕುರಿಮಾಂಸಲಿದ್ದ ಸಲವುತೀನಾ
ಕಾಲು ನಿನಗೆ ಬೇಸು ಮಾಡತೀನಾ .. .. ..
ಎಪ್ಪಾ ತಂದಿ ಕೈಯಾಗ ಇರೋನಾ
ನೀನೆ ನನಗಿ ತಂದಿ ಐದಿಯೋ
ಎಪ್ಪಾ ಮಗನ ಕುತ್ತಿಗೆ ಕೊಯ್ಯಿಬ್ಯಾಡರಾ
ಬೇಡಿಕೆಂತಾನಪಾ
ನೀವೆ ತಂದಿ ವೈದಿರಾ ಮಗನ ಕುತ್ತಿಗೆ ಕೊಯ್ಯಿಬ್ಯಾಡರಿ
ಎಷ್ಟು ಬೇಡಿಕೊಂಡಿರೆ ಶೇಠಿದೋನೆನಿನ ಬಿಡದಿಲ್ಲ ಆಹಾ
ನಿನ ಕುತ್ತಿಗೆ ಕೋಯಿತೀನಿ ದೇವ್ರನ ನೆನಿಸಿಕೊ
ಅಂದರೆ ಇವಾಗ ಕೆತ್ತನ ಕ್ಯಾಕೆ ಹೊಡೀ
ನನ ತಮ್ಮನೋರು ಬರ್ತಾರ ಆಹಾ
ತಮ್ಮನೋರು ಬಂದು ಇವರು ಆಯಿದು ಮಂದಿನಾ ಕಡೀತಾರ
ನನ ಕರಕಂಡು ಹೋತಾರ ಆಹಾ
ಯಾವಾಗನ್ನ ತಮ್ಮನೋರು ಅಣ್ಣಾತಮ್ಮನೋರು ಭಾಗ ಹಂಚಿಕೋವಾಗ
ಮಾತು ಮಾತಿಗೆ ಬಂತು
ಲೇ ಹಿರಯಣ್ಣಾ ಚೆಂಬು ತಗಂಡು ಹೋದಾಗ
ಆಯಿದು ಮಂದಿ ಕೈಯಾಗ ಹೋತಿದ್ದಿ ಹಾಳಾಗಿ ಆಹಾ
ಪಾಪ ಅಂತಾ ಜೀವ ಉಳಿಸಿದಿವಿ ಆಹಾ
ಈಗ ನಮ್ಮಿಗೆ ಎನ್ನ ಎದುರಾದ್ಯಾ
ನಮ್ಮನ ಬಡಿಯಾಕ ಬರ್ತೀಯಾ
ಕಳ್ಳರು ಕೈಯಾಗ ಹೋಗುತ್ತಿದ್ದೆಲ್ಲೊ
ಪಾಪಂತ ಜಲ್ಮ ಉಳಿಸೀವಿ
ಅಂತಾ ಮಾತಬರ್ತೈತೆ
ಛಿ ತಮ್ಮನೋರು ಕೂಟಾ ಅನ್ನಿಸೆಕೋಬಾರ್ದು ಆಹಾ
ಆಗ ಏನಂತಾನ
ದೇವ್ರು ಖಂಡೇರಾಯಪಾ ದೇವ್ರು
ಎಲ್ಲಿ ವೈದಿಯಪ್ಪಾ ಸ್ವಾಮಿರಾ
ಬಂಗಾರ ನಿನಗೆ ಮಾಡಿಸ್ತೀನಿ
ಬಂಗಾರ ನಿನಗೆ ಮಾಡಿಸ್ತೀನಿ ನಿನಗೆ
ನನ್ನ ಜಲ್ಮ ನೀನು ಉಳಿಸರಾ ಮನಿದೇವ್ರೆ
ಎಮ್ಮಾ ತುಳಸಿದೇವಿ ನಿನಗೆ ಶರಣೆ..
ಎಮ್ಮ ತುಳಸಮ್ಮ ಉಳಿಸಲೇ ಮನಿದೇವ್ರನಾ
ಎಪ್ಪಾ ಯಾದೇವ್ರು ಅಡ್ಡ ಇಲ್ಲರಾ
ಎಮ್ಮಾ ಒಂದು ದೇವ್ರು ಬರೊವಲ್ಲರುರಾ ..
ಜೀವ ಹೋಗೋ ಕಾಲಕ್ಕೆ
ಎಮ್ಮ ಒಂದು ದೇವ್ರು ಬರೋವಲ್ಲರುರಾ .. ..

07__MS_346-KUH

ಸರೆಪಾ ಅಯಿದು ಮಂದಿ ಕಳ್ಳರೆ ನನ ಜೀವ ತಗಿತೀರಾ ನೋಡಪಾ ನಾವೇನು ನಾಲೋರು ಏನು ಅಂಬೋದಿಲ್ಲ, ಆಹಾ ಆಗ ಅವನಿಷ್ಟ, ನಿನ್ನಿಷ್ಟ, ಆಹಾ ಆಗ ಕಳ್ಳ ಶರಣು ದೇವ್ರೆಲ್ಲಾ ಬೇಡಿಕೆಂತಾನಾ,

ಕಿರಿಟದಾರಿ ರಾಜನನ್ನು ಇಬ್ಬರು ಕಳ್ಳರು ಹಿಡಿದಿಡುತ್ತಾರೆ. ಒಬ್ಬನು ಕತ್ತಿಯಿಂದ ರುಂಡ ತೆಗೆಯುತ್ತಾನೆ.

ದೇವ್ರೆಲ್ಲಾ ಬೇಡಿಕೆಂತನಾ .. ..
ರಾಜ ಸೋಮಯ್ಯ ನೋಡರಾ
ಯಾ ದೆವ್ರು ಬರೊಲ್ಲರಪಾ
ಇನ್ನ ಜೀವ ಹೋಗೊ ಕಾಲಕೆ

ಲೇ ಈಗ ಕಷ್ಟ ಕೊಟ್ಟು ನನ ಕುತ್ತಿಗೆ ಕೊಯಿತಿದ್ದಿ ಇಂದೇಲೆ ಪಾಪ ಸುತ್ತತೀನಿ, ಆಹಾ ಒಂದೇಟಿಗೆ ಗಕ್ಕನೆ ಕೊಯಿಬೇಕು ನನ ಜೀವ ಒದ್ಯಾಟ ಇಡಬ್ಯಾಡ ಅಂದ ಏ ಒಂದೇಟಿಗೆ ಗಕ್ಕೆನೆ ಕೊಯಿದು ಬಿಡ್ತೀನಿ ಇಲ್ಲದರೆ ಚಕ್ ನೆ ಕಡಿದು ಬಿಡ್ತೀನಿ, ಆಹಾ ಕಬ್ಬು ಕಡಿದಂಗ ಅಂದಾ, ಆಹಾ ಅಂಗಾರೆ ನನಗೆ ಕಡಿಯಾಲೆ

ಆಗ ಇನ್ನ ನೋಡರಾ ಸಯ್
ಗಿರಿಸಾಲಿ ಗಿರಿಮೋಲೆ ನೋಡರಾ ಸಯ್
ಇತನು ಹಾಳಾಗಿ ಹೋಗಾರ ಸಯ್
ತಂದೀನಾ ಕೈಯಾಗ ಇರೋನು ಸಯ್
ಅವನಿಗೆ ಇನ್ನ ಬೈದಾನ ಸಯ್
ರಾಜ ಸೂರಿಮ್ಯಾಲೆ ಇಟ್ಯಾನ ಸಯ್
ಆಗ ಕುತ್ತಿಗೆ ಕೊಯಿದಾನೆ
ರಾಜನ ಕುತ್ತಿಗೆ ಕೊಯಿದಾನೆ
ಗಿರಿಸಾಲೆ ಗಿರಿಮೋಲೆ ನೋಡಣ್ಣಾ
ಆಗ ಕುತ್ತಿಗೆ ಕೊಯಿದಾನ ಸಯ್
ತಾವು ಜಲ್ಮದಾಗ ನೋಡರಾ ಸಯ್
ಜೀದಾಗರಾ ವಣ್ಣಾಯ್ಯಾ
ರಾಜನ ಕುತ್ತಿಗೆ ಕೊಯ್ಯಿದಾರೆ
ಇನ್ನ ರಾಜನ ಜಲ್ಮಣ್ಣಾ
ಕುತ್ತಿಗೆ ಕೊಯ್ಯಿದೆ ಬಿಟ್ಟಾನೆ ಸಯ್
ಇನ್ನ ರಾಜ ಕೆವ್ವನೆ ಕೆವ್ ತಾನ ಸಯ್
ಕೆವ್ವನೆ ಕ್ಯಾಕೆ ಹೊಡದಾನ ಸಯ್
ಆಗ ಆಯಿದು ಮಂದಿರಾ ಸಯ್
ರಾಜನ ಮನಿಸಿ ಬಿಟ್ಟಾರ ಸಯ್
ಮಂಡಗೆ ಚೆರಿಗೆ ಇಟ್ಟಾರ ಸಯ್
ಚೆಲ್ಲಾ ಹೊದ್ದಿ ಬಿಟ್ಟಾರ ಸಯ್
ಬಂಗಾರದ ಕಿರೀಟ ಇಟ್ಟಾರ

ಆಗ ಒಂದೆ ತಲಿಯಲ್ಲಿ ಬಂಗಾರ ಕಿರೀಟ ಇಟ್ಟು ಆಗ ತಲೆಪಾದ ಇಟ್ಟು ಈಗ ಇನ್ನವರ ತಾವಾಗಿ ಶಲ್ಯ ಹೊದಿಸಿ, ಆಹಾ ಅವರು ಆಗ ತಲೆ ತಗಂಡು,

ಇದಾಗ ಇನ್ನ ತಗಂಡು ಬರ್ತಾರ
ತಗಂಡುವಾಗಿ ಲೋಕಕ್ಕೆ
ಅಲ್ಲಿಗಾಗಿ ಅವರು ಬಂದಾರ
ಇನ್ನ ದಿಡ್ಡಿ ತಟಾದರು ಸಯ್
ಅಲ್ಲಿ ಸೂರಿ ಹೊರಗರ ಸಯ್
ಮರಿ ಗಿಡಕ್ಕೆ ಬಂದರಾ ಸಯ್
ಆಗ ಗಾಂಜಿ ತಂಬಾಕು ಸಯ್
ಅವರು ಸೇದೆ ಬಿಟ್ಟಾರೆ ಸಯ್
ಊರು ಕಡಿಗೆ ಅವರು ಮೊಖಾಗಿ

ಏನಂತರ ಅವರು ಅಂತಾರ ಏನಂತ ಅವರು ಪವರುಶಾನ ಊರು ಕಡೆಗೆ ಮೊಖಾಗಿ ಮರಿಗಿಡ ಕೆಳಗ ನಿಂತಕಂಡು ಏನಂತ ಇನ್ನವರ ತಾವು ಅಂತಾರ ಕಲೇ ಈಗ ಕರುಣೆ ಕಲ್ಲು ಮರಣೆ ಕಲ್ಲು ಅಂತಿದ್ದರು,

ಮರುಳ ಮಾಡಿಕೊಂಡು ಹೋತೀವಿ ಸಯ್
ಹುಲಿ ಪಟ್ಟಣಕ್ಕೆ ಬಂದಿದ್ದಿವೆ ಸಯ್
ಹುಲಿ ಕಡಿಕಂಡೆ ಹೋತೀವಿ ಸಯ್
ನಾವು ದಡೇಗಾವು ನೋರುರಾ ಸಯ್
ಬಡೇಗಾವು ಕಳ್ಳರು ಬಂದೀವಿ ಸಯ್
ಕಳ್ಳರು ದತ್ತೋರಿ ಮಕ್ಕಳು ಸಯ್
ರಾಜನ ಕುತ್ತಿಗೆ ಕೊಯಿಕೊಂಡಿವಿ
ಕರುಣೆ ಕಲ್ಲಾ ಆಳಾತ ಆಹಾ
ಈಗ ಮಾರವಾಡಿ ಶೇಠದವನ ಆಹಾ
ಕುತ್ತಿಗೆ ಕೊಯಿಕೊಂಡು ಹೋತೀವ ಅಂತ
ಕೆವ್ಯನೆ ಕ್ಯಾಕಿ ಹೊಡದಾಕಿ ದಾರಿ ಹಿಡಿದೆ ಬಿಟ್ಟಾರ
ಒಂದು ಗಾವುದಾ ಬಂದಾರ
ಎಲ್ಡು ಗಾವುದಾ ಬಂದಾರ
ಆಗ ಹೊಳೆದಂಡಿಗೆ ಬಂದರು

ಹೊಳದಂಡಿಗೆ ಬಂದರೆ ಆಕಡೆ ಈ ಕಡೆ ತುಂಬ ಹರಿತೈತೆ, ಆಹಾ ಹರಿತಿದ್ರೆ ಆಗ ಕುಲಕ್ಕ ನೋಡಿದು ಲೇ ನಾವೇನು ಎಲ್ಡು ಕಾಲು ಐದಾವ ಎಲ್ಡು ಕಾಲು ಐದಾವ ಎಲ್ಡು ಕೈ ಐದಾವ ಎಂಗನ ಈಸಲು ಹೊಡದು ಆ ಕಡಿಗೆ ಹೋತೀವಿ ನಾವು ದಡೇಗಾವ್ ಬಡಾಗಾವಗೆ ಹೋತೀವಿ, ಆಹಾ ನೀನು ಕುಂಟೋನು ಒಂದು ಕಾಲು ಹೋಗೇತಿ, ಆಹಾ ಒಂದು ಕಾಲು ಐತಿ ಬ್ಯಾಡೊ ಅಂತಾ ಪಾದಮ್ಯಾಲೆ ಕೈಹಾಕಿದರೆ ಬಿಡಲಿಲ್ಲ ಈಗ ಮಾರವಾಡಿ ಶೇಠದೋನ, ಆಹಾ ಈಗ ಸೋಮಯ್ಯನ ಕುತ್ತಿಗೆ ಕೊಯ್ಯಿದು ಬಿಟ್ಟೆ, ಆಹಾ ಈತ ಆತನ ಕರ್ಮ ಈಗ ನಿನಗೆ ತಪ್ಪಾದಿಲ್ಲ

ಹೋತಿಯಾ ನೀನು ಅಂತಾರೆ
ಹೊಡಕಂಡು ನೀರಾದಾಗರೆ
ಹೊಳೆಯಾಗ ನೀನು ಹೋತಿಯೊ
ಲೇ ಅಂಗಾರೆ ನನ್ನ ಬಿಟ್ಟೋತಿರಾ

ಬಿಟ್ಟೆ ಹೋತಿವಿ ಮತ್ತೆ ಏನು ಮಾಡಾನ, ಆಹಾ ನೀನು ಬಂದರೆ ತಾವಾದು ಬಾ ಲೇ ಎಂಗ ಬರಬೇಕಲೆ ಒಂದು ಕಾಲಲಿ ಈಸಲು ಒಡಿಯಾದು ಎಂಗ, ಆಹಾ ಮತ್ತೆ ನಾವೇನು ಮಾಡಾನ ಅಂಗಾರೆ ಬಿಟ್ಟೋದರೆ ಏನು ಪರವಾಗಿಲ್ಲ ಸಂತೋಷ ನಾನೇನು ಹದರಂಗಿಲ್ಲ ಏನು ಮಾಡತಿಯಲೇ ಏನಿಲ್ಲ ಈ ಕಡೆ ಕುಂದರತೀನಿ ಇನ್ನು ಒಂದು ಗಂಟಿಗೆ ಬರ್ತಾರ ಇಬ್ಬರು ತಮ್ಮನೋರು ಬರ್ತಾರ, ಆಹಾ ನಾಯಿಗಳ ಕರಕಂಡು ಕುದ್ರುಮ್ಯಾಲೆ ಕುತ್ಕಂಡು ಬರ್ತಾರ, ಆಹಾ ಏ ತಮ್ಮಾ ನಿಂದು ಯಾವೂರು ಅಂತಾರ ನಾನು ಈಸಲು ಗಿಡ ಕಾಯೋನು ಆಗ ಹೆಂಡ ಇಳಿಸೋನು ಈಡಿಗರೋನು ಅಂತೀನಿ, ಆಹಾ ಮತ್ತೆ ಈ ದಾರಿಗೆ ಯಾರನ ಹೋದರ ಅಂತಾರ ಅಯ್ಯೋ ಕಳ್ಳರ ದುತ್ತೋರಿ ಮಕ್ಕಳು ಶಂಬೆಗೆ ಮಂಬೆಗ ಮಂತ್ರಾಳ ಮಾದೇವ ಅಸ್ರಾಪಕಳ್ಳರೋನು ನಾಲೋರು ಬಂದು,

ನಿಮ್ಮಣ್ಣಾನ ಕಡಿಕಂಡು ಹೋಗ್ಯಾರ
ನಾನೇ ಹೇಳಿ ಬಿಡ್ತೀನಿ
ನಿಮ್ಮ ಊರಿಗೆ ಬರ್ತಾರ ಸಯ್
ನಾಯಿಗಳು ಕರಕಂಡು ಬರ್ತಾರ ಸಯ್
ಕುದ್ರಿಮ್ಯಾಲೆ ಕುಂತು ಬರ್ತಾರ ಸಯ್
ನಾಲೋರು ಕುತ್ತಿಗೆ ಕೊಯಿತಾರ ಸಯ್
ನಿಮ್ಮೂರು ಹಾಳೆ ಮಾಡ್ತಾರ ಸಯ್
ಮಾರವಾಡಿ ಶೇಠಿದೋರುರಾ
ನಿಮ್ಮೋರಿಗೆ ಬರ್ತಾರ
ನಿಮ್ಮನ ಜಲ್ಮ ತೆಗಿತಾರ
ಇವನ ಹಾಳಾಗಿ ಹೋಗ

ಮತ್ತೆ ಎಂಗ ಮಾಡಬೇಕಲೆ ಗಿರಿಸಾಲಿ ಗಿರಿಮೋಲೆ, ಆಹಾ ಏನಿಲ್ಲಪಾ ನಾನು ಹೇಳಿದಂಗೆ ಕೇಳಿದರೆ ಬೇಸಾಯಿತು ಇಲ್ಲದ್ದರೆ ಇಲ್ಲ, ಆಹಾ ಏನಿಲ್ಲ ಒಬ್ಬನು ತಲೆ ಗಂಟು ರಾಜಂದು ಬೆನ್ನಿಗೆ ಕಟ್ಟಿಕಂಡು ಈಸಲು ಹೊಡಿಕಂತ ಆ ಕಡೆಗೆ ಹೋಗಿ ಬಿಡಲಿ, ಆಹಾ ಇನ್ನ ಮೂವರು ಇರ್ತೀರಲಾ ಆಗ ಅತ್ತಾಗ ಒಬ್ಬೋನು ಇತ್ತಾಗ ಒಬ್ಬೋನು ಕೈ ಇಡಕರ‍್ರೀ ಇನ್ನೊಬ್ಬನು ಇರ್ತಾನಲಾ ಕುಂಟು ಕಾಲು ಮ್ಯಾಕ ಎತ್ತರ‍್ರೀ,

ಈಗ ಒಳ್ಳೆ ಕಾಲಕ ಬಿಡಬೇಕು
ನಾವೇ ಹೊಳೆದಾಟಿ ಬಿಡಬೇಕು
ಬಳ್ಳೊ ಕಾಲ ನೀರಾಗ ಬಿಡಬ್ಯಾಡರಿ
ಕುಂಟು ಕಾಲು ಮ್ಯಾಕ ಎತ್ತಬೇಕು
ನೀರು ಮ್ಯಾಲೆ ಈಸಲು ಹೊಡಿಬೇಕು

ಆ ಕಡೆ ಎಳಕಂಡು ಹೋಗಾರೆ ಬರೆ ಇವನ ಆಳಾಗಿ ಹೋಗಾ ಆಗನ್ನ ಆಗಲಿ ಬಿಡರಿ ಅಂತಾ ಆಗ ಮಾರ‍್ವಾಡಿ ಶೇಠ ಏನ ಸೋಮಯನ ತಲೆ ಬೆನ್ನಗೆ ಕಟ್ಟಿಕೊಂಡು ಅಪ್ರಾಪ ಕಳ್ಳೋನು ಈಸಲು ಹೊಡಿಕಂತ ಆ ಕಡೆಗೆ ಹೋಯಿದಾ, ಆಹಾ ಹೊಯಿದು ಮಣ್ಣೆಲ್ಲಾ ಕೂಡು ಮಾಡಿ ಆಗ ಮಣ್ಣು ಮ್ಯಾಲೆ ತಲೆ ಇಟ್ಟರಾಜಂದು, ಆಹಾ ಈತನ್ನ ಏನು ಮಾಡಿದರು ಗಿರಿಸಾಲಿ ಗಿರಮೋಲೆ ಆಹಾ ಈಗ ಆಕಡೆ ಕೈ ಒಬ್ಬನು ಈ ಕಡೆ ಕೈ ಒಬ್ಬನು ಹಿಂದೆ ಒಬ್ಬನು ಲೇ ಕುಂಟ ಕಾಲು ಮ್ಯಾಕ ಎತ್ತುಬೇಕು ನೀರ್ದಾಗ ಬಿಡಬ್ಯಾಡ ಹೊಸನೀರು ಮಳೆಬಂದ ನೀರು ತಟ್ಟಿದರೆ ಬಾತು ಬಿಡತೈತೆ ಅಂದಾ ಈಗ ಕುಂಟ ಕಾಲು ಮ್ಯಾಗ ಎತ್ತಿರಾ ಒಳ್ಳೆ ಕಾಲು ಕೆಳಗ ಇಳಿಸದಾ, ಆಹಾ ಅಂಬೊತ್ತಿಗೆ ಸರೆ ಬಿಡಂತಾ ಆಗ ಕುಂಟ ಕಾಲು ಮ್ಯಾಗ ಎತ್ತೇನಾ ಒಳ್ಳೆಯ ಕಾಲು ಕೆಳಗ ಇಳಿಸ್ಯಾನ ಈಗ ಕೆಳಗ ಇಳಿಯೊ ಹೊತ್ತಿಗೆ, ಮ್ಯಾಗ ಎತ್ತೇನಾ ಒಳ್ಳೆಯ ಕಾಲು ಕೆಳಗ ಇಳಿಸ್ಯಾನಾ ಈಗ ಕೆಳಗ ಇಳಿಯೊ ಹೊತ್ತಿಗೆ,

ಕುಂಟು ಕಾಲು ಕೆಳಗ ಬಿಟ್ಟಾನ ಒಳ್ಳೆ ಕಾಲನೆ ಎತ್ಯಾರ
ನೀರದಾಗ ಅವನ ಎಳಿತಾರ
ಇನ್ನ ಸತ್ತೋ ಎಣ ಎಳದಂಗ
ಆಗ ನೀರದಾಗ ನಡೀತಾರ ಸಯ್
ಕುಂಟಕಾಲ ಎಂಗ ಅಲ್ಲರಾ ಸಯ್
ಕೊಟ್ಟಾ ತೂಗಿದಂಗ ತೂಗ್ತಾದ ಸಯ್
ಅದು ಇನ್ನ ನೋಡರಾ ಸಯ್
ನೀರು ಮ್ಯಾಲೆ ಎಳದು ಬಿಡ್ತಾರ ಸಯ್
ನೀರವನ್ನ ತಟ್ಟೊವೊತ್ತಿಗೆ ಸಯ್
ಕುಂಟಕಾಲು ಎಂಗವಾಗೈತೊ ಸಯ್
ಬೇರವರು ಕುರುಬರ ನೋಡರಾ ಸಯ್
ಕುಂಬದಪ್ಪ ಇನ್ನ ಬಾತೈತೆ
ಕುಂಟಕಾಲು ಇನ್ನ ನೋಡರಾ

ಕುಂಬದಪ್ಪ ಬಾತೆಕೆಂಡುಬಿಡ್ತು ಹೊಸ ನೀರು ತಟ್ಟಿ ವೊತ್ತಿಗೆ, ಆಹಾ ಈಗ ಕಾಲಾಗ ಇನ್ನ ಎಲುಬು ಮುರಿದಿತ್ತು ಈಗ ಎಂಗ ಆಯಿತೆಂದರೆ ಡಬ್ಬಣ ಸೂಜಿನ ತಗಂಡ ಇರಿದಂಗ ಆಯಿತಣ್ಣಾ ಬಗ ಬಗ ಊರಿತೈತೊ ಲಬಲಬಲಬ ಹೊಯಿಕೆಂಡಾ ಲಬಲಬಲಬವಾಗಿ ಹೊಯಿಕೆಂಡಾ ದಗ ದಗವಾಗೊಮ್ಮ ಉರಿತೈತೊ,

ಎಪ್ಪೊ ಸಾಯತೀನಿ ಸಾಯತೀನಿ ನೋಡರಾ
ಸಾಯತೀನಿ ಸಾಯತೀನಿ ನಾನಾಲೆ
ಬಾಳ ಉರುಪಾಳ ಆಗೈತೊ

ಉರಿಗೈತೆ ಉರಿತೈತೆ ನೋಡಾರೊತಿ ಮಂತ್ರಿಸಲೇ ಮಂತ್ರಾಲೆ ನೋಡಪಾ ನನಗೆ ಮಂತ್ರ ಇಲ್ಲ ತಂತ್ರ ಇಲ್ಲ ಈಗ ಕುಂಟ ಕಾಲು ಪಾಪ ಮಾಡಿದ ಕಾಲಿಗೆ ಏನು ಮಂತ್ರಿಸಬೇಕಪಾ, ಆಹಾ ಬ್ಯಡೋ ಅಂದರೆ ಆತನ ಕುತ್ತಿಗೆ ಕೊಯಿದೆ ಪಾಪ, ಆಹಾ ಮಾರವಾಡಿ ಶೇಠದೋನು, ಆಹಾ ಕುತ್ತಿಗೆ ಕೊಯಿದೆ ಆಗ ಮೊಗ ಹುಟ್ಟಿ ಮೂರು ತಿಂಗಳ ಮೊಗ ಜೀವಕಾ ಆಗ ಪಾದಮ್ಯಾಲೆ ಕೈಹಾಕಿದರೇನಾ ಕನಿಕರ ಹುಟ್ಟಲಿಲ್ಲ ನಿನಗೆ ಆ ನಿನಗಾಗಿ ಎಂತಹ ಕಟಿಣ ಜಲ್ಮಲೋ ಮತ್ತೆ ಉರಿತೈತೆ ಉರಕಂಡು ಹೋತಿಯೋ ಯಾರಿಗೊತ್ತಪಾ ಅಯ್ಯೊ ಮಂತ್ರಿಸಲೆ ಮಂತ್ರದೋನೆ ಅಂದರೆ ಆಹಾ,

ಆಗ ಮಂತ್ರಿಸಿದರೆಮ್ಮ ಎದುರೆ ಆಗಿಬಿಡತೈತೊ
ಎಮಾ ಬಗ್ ಬಗ್ಗನೆ ಉರಿತೈತೊ ಎಪ್ಪೊ ಲಬಲಬನೆ ಹೊಯಿಕೆಂಡಾ
ಲೇ ಬೆಂಕಿ ಆಕರಲೇ ಬೆಂಕಿ ಕಾಸಾನ
ಈಗ ಬಾತ ಕಂಡಿದ್ದು ಬಾತು ಕಮ್ಮಿ ಆತೈತ ಅಂದಾ ಆಹಾ
ಆಗ ಈಸಲು ಗಿಡ ತಂದು ಆಹಾ
ಉರಿ ಅಚ್ಚಿ ಬಿಟ್ಟರಾ ಚಳಿಯ ಅವರೇ ಹಾಕ್ಯಾರಾ
ಚಳಿಯ ಹಾಕ್ಯಾರ ನೋಡಾರ ಸಯ್
ಮೊಣಕಾಲಿಟ್ಟು ನೋಡರಾ ಸಯ್
ಕುಂಟು ಕಾಲು ಕಾಸಿ ಬಿಡ್ತಾರ ಸಯ್
ಬೆಂಕಿಗೆ ಅಗಲಿಂದ ಕಾಸ್ತಾರ
ಬೆಂಕಿ ಕಾಲಿಗೆ ಕೊಡ್ತಾರ ಸಯ್
ಬೆಂಕಿಗೆ ಆಗಲಿಂದ ಸಯ್
ಕಾಲಿಗೆ ಬೆಂಕಿ ನೋಡರಾ
ಲೇ ಮಾರವಾಡೋರು ಬರ್ತಾರ
ನಮ್ಮ ಜೀವ ತಗೀತಾರ

ತಮ್ಮನೋರಿಗೆ ಆದರೆ ಕುದ್ರಿ ಹಾಕ್ಯೊಂಡು ಬರ್ತಾರ ಆಗ ಮಾರವಾಡಿ ನಾಯಿಗಳು ನಮ್ಮನ್ನ ಕಡಿದು ಕೊಂದಾಕಿ ಬಿಡ್ತಾವ, ಆಹಾ ನಡಿರಲೆ ಹೋಗಾನ ಅಂದ್ರೆ ಇವನು ಕುಂಟೋನು ನೋಡ್ತಾನ ನನ ಕಾಲು ಬಾತೈತೆ ಎಂಗ ಮಾಡಬೇಕು ಒಂದು ಕಾಲು ಮ್ಯಾಲೆ ಎಂಗ ನಡೀಬೇಕು ನನಕೂಟ ಇವರು ನಾಲೋರು ಸಾಯಿಬೇಕು ಏ ಮಾರವಾಡೋರು ಅವರು ಇತಾಗ ಬರ್ತಾರೇನು ಅವರು ಇವಾಗ ಎದ್ದೇಳ್ತರೇನು ಹೊತ್ತು ಹುಟ್ಟಿದ ಮೂರುಗಂಟೆಗೆ ಬರ್ತಾರ ಐದು ಗಂಟೆ ತನಕ ಯಾಕ ಇರ್ತೀವಲೆ, ಆಹಾ ಏ ಈಗ ಹೋಗಾನ ಆಗ ಇನ್ನವರ ನಾವು ಹೋಗಾನ ಬಿಡಯ್ಯಾ ಏ ಇಲ್ಲ ಇಲ್ಲೆ ಇರಾನ ಬೆಳಕರೇ ತನಕ ಆಹಾ ಹೊತ್ತು ಹುಟ್ಟಿದ ಮ್ಯಾಲೆ ಬೇಸು ಹೆಂಡಕುಡಿದು ಹೋಗಾನ, ಆಹಾ ಇರಿ ನಿನ್ನ ಹೆಂಡಕ ಬೆಂಕಿ ಹಚ್ಚ ಹೋಗಿ ಬಿಡನರಾ ಏ ಇಲ್ಲ ಅವರು ಈಡಿಗರು ಬರ್ತಾರ ಸುಮ್ಮನಿರು, ಆಹಾ ನನಗೆ ಬೆಂಕಿ ಕಾಸರಿ ಅಂದಾ ಎಲ್ಲ ಮಂತ್ರಿಸಿ ಕೆಂತಾ ಚಳಿ ಕಾಸಕೆಂತಾ ಐದರಪಾ ಆತನ ತಲೆ ಮಣ್ಣುಮ್ಯಾಲೆ ಇಟ್ಟಾರ ಈತ ಸತ್ತೋನು ಏನು ಮಾಡಿರಾ,