ಈಗ ದೇವರನ ನೆನಿಸೆ ಮಾವಯ್ಯ
ನಿನ್ನ ಜಲ್ಮ ನಾನು ಕಡಿತಿನಿ
ಎಲ್ಲಿ ವೈದಿ ಖಂಡೇರಾಯಪ್ಪಾ
ಎಲ್ಲಿ ವೈದಿ ಮನಿದೇವ್ರಾ
.. ಇನ್ನಾ ಕುತ್ತಿಗೆ ಇಡದಾಳ ಸಯ್

ದಗ್ಗನಂಗೆ ಕುತ್ತಿಗೆ ಕೊಯಿದಾಳ ತಾವೆ ಅಂತಾ ಬಾವಿಯಾಗಿ,

ಮಾವನ ಇನ್ನ ಕೊಯಿದಾಳೆ
ಕೆವುನೆ ಕ್ಯಾಕೆ ಹೊಡದಾಳೆ
ಇಬ್ಬರು ಅತ್ತೇರು ಬರ್ರೆಮ್ಮ ಸಯ್
ಇನ್ನವಾದರೆ ಹೋಗಾನ ಸಯ್
ಇಬ್ಬರು ಅತ್ತೇರು ಕರಕಂಡು ಸಯ್
ತಾವೇ ಇನ್ನ ಬಂದರಾ ಸಯ್
ತಾವು ಹೆನ ತಗಂಡು ಸಯ್
ಕರುಣೆ ಕಲ್ಲಿಗೆ ಬಂದಾರ
ಮಾವನ ಯಾಳೆ ತಗಂಡು
ಕರುಣೆ ಕಲ್ಲಿಗೆ ಬಂದಾರ
ಮಾವನ ಯಾಳೆ ತಗಂಡು
ಕರುಣೆ ಕಲ್ಲಿಗೆ ಬಂದಾರ
ಬರ್ರೆಪ್ಪಾ ಮೈದನೋರೆ ಆಹಾ
ಈಗ ನಿಮಣ್ಣಾ ಸತ್ತಿಲ್ಲ
ನಿಮ್ಮ ಅತ್ತಿಗೆ ಸತ್ತಾಳ
ನಾನೇ ನಿಮ್ಮಣ್ಣಾ ಐದೀನಿ
ನೀವೇ ನನ ತಮ್ಮಣೊರು ಐದೀರಿ
ಜೀವಕ ಜೀವ ಕಳದೀನೊ
ಹೆಣಗ ಹೆಣಾತಿರುವೀನೊ
ಜೀವ ಒಂದು ಕಳದಿದ್ದರೆ ಸಯ್
ಜೀವದ ಮಾವನೋಡರೆ ಸಯ್
ತಾಳಿ ಅರದು ಆಗ ಕಟ್ಯಾನು ಸಯ್
ಇನ್ಯಾವಾದರೆ ಅಣ್ಣಯ್ಯಾ ಸಯ್
ಮಾವನ ಕೊಳ್ಳಾಗ ಕಟ್ಯಾನು ಸಯ್
ಆಗ ಕೇಳಾರಿ ಮೈದುನಾ ಸಯ್

ತಂದೆಗೆ ಮೈ ತೊಳಿಯಾರಿ, ಎಪ್ಪಾ ತಂದಿಗೆ ಮೈಯ ತೊಳಿಯಿರಿ ತಂದೆಗೆ ಒಂದೆ ಸಾಕಪ್ಪಾ ತಂದೆಗೆ ಮೈ ತೊಳೆದರು, ಆಹಾ ನಿವಾಳಿ ಕಟ್ಟಿದರು ಆಹಾ ಕುಣೀದೋಡಿ, ಅಹಾ ಆಗ ಇಟ್ಟಿದಾಗ ಆಹಾ ಐದು ಬೊಗಸ ಮಣ್ಣು ಹಾಕ್ಯಾರ ಆಗೊಂದೆ ನೋಡಮ್ಮ,

ಮಾವನ ಮುಂದೆ ಬಳೆ ತಗದಾಳ
ಮಾವನ ಮುಂದೆ ಮುತ್ತು ತಗದಾಳ
ವೇ ಜೀವ ಮಗನ ಕಳದವನಾಲೆ
ಜೀವಗಾಗಿ ನಿನಗೆ ಹಾಕೀನ
ನಿನಗೆ ರಂಡೇ ಆಗೀನಿ
ತಾಳಿ ಒಂದೆ ಹಾಕ್ಯಾಳ
ಮಣ್ಣು ಹಾಕಿ ಕೈ ಮುಗದಾಳ
ಇಬ್ಬರು ಅತ್ತೇರು ನೋಡರಾ ಸಯ್
ಸೊಸೆ ಬಂದೆ ನೋಡುರಾ ಸಯ್
ಒಬ್ಬನಿಗೆ ರಂಡೇರು ಆಗ್ಯಾರ
ಮೂವರು ಇನ್ನಾ ನೋಡರಾ
ಒಬ್ಬನಿಗೆ ರಂಡೇ ಆಗ್ಯಾರೆ

ಉರಿ ಹಚ್ಚಿದರು ಸುಟ್ಟು ಬುದಿ ಆದ ಮ್ಯಾಲೆ ಆಗಸ ಮಾರಿ ಕಟ್ಟಿದರು ಸಮಾದಿ ಕಟ್ಟಿದ ಮ್ಯಾಲೆ ಕೇಳಪಾ ಮೈದನೋರೆ, ಆಹಾ ನೀವು ಚಿಕ್ಕ ವಯಸು ಹುಡುಗರು ಈಗ ಒಂದು ಕೂಸಿನ ತಂದೆ ಇದ್ದಾಗ ನಿಮ್ಮ ಅಣ್ಣಾನ ಕಡಿದು ಬಿಟ್ಟಾ, ಆಹಾ ಈಗ ಇಬ್ಬರು ಅತ್ತೇರಿ, ರಂಡೇ ಆಗ್ಯಾರ ಅವರು ಇದ್ದರೆ ಇರಲಿ ಹೋದರೆ ಹೋಗಲಿ,

ಈಗ ನಮ್ಮ ತಂಗಿನೋರ ತಗಿದೀನಾ
ನಿಮ್ಮಿಗೆ ಲಗ್ಗನ ಮಾಡೀನಾ
ಯಾರು ಕೊಟ್ಟರೆ ಕೊಡದಿಲ್ಲಮ್ಮಾ
ಇಡಿಯ ಲಗ್ಗನು ಮಾಡವಳೆ
ಯಾರು ವೈದರಾ ನಿಮ್ಮಗೆ
ಇದ್ದ ಅಣ್ಣಾ ಹೋದಪ್ಪಾ
ತಾಯಿ ತಂದೆ ಹೋದವರು
ಮೈದನ ಮಕ್ಕಳನ ಕರಕಂಡೆ ಸಯ್
ತಾನಂದವಾಗಿ ನೋಡರಾ ಸಯ್
ಕರುಣೆಕಲ್ಲನೆ ಬಿಟ್ಟಾಳ ಸಯ್

ಡಾವುಡಿಂಗಲ ಪಟ್ಣಕ ಬಂದಾಳಾ ಮೈದನೋರನ ಕರಕಂಡು ಶರಣಪ್ಪಾ ತಂದಿ ಶರಣಾಮ್ಮಾ ಮಗಳಾ, ಆಹಾ ಆಗ ಇನ್ನ ತಾವಾಗಿ ಯಾಕ ಬಂದೆಮ್ಮಾ ಆಹಾ,

ನಿಮ್ಮನ ನೋಡಾಕ ಬಂದೀವೆ
ಎಪ್ಪಾ ಕೆಟ್ಟೆರ ಬಂಗಾರ ನೋಡಪಾ ತಿರಗಾವಾಪಸ್ಸು ಬಂದೈತೊ
ನಿನ್ನ ತಲ್ಲಿಗೆ ಬರಬೇಕು ಯಾರ ತಲ್ಲೀಗೆ ಹೋಗಬೇಕಪಾ
ಬೆನ್ನಿಂದೆ ಹುಟ್ಟಿದೋರಪ್ಪಾ
ಇಬ್ಬರು ತಂಗೇರು ಐದರಾ ಆಹಾ
ನನ್ನ ಮೈದನೋರಿಗೆ ಕೊಡಬೇಕು ನೀನೆ ಲಗ್ಗನ ಮಾಡಬೇಕು

ಅಂದರೆ ಡಾವುಡಿಂಗ ಲದೋರ ಏನಂತಾನ ನೋಡಮ್ಮಾ ನನಮನ್ಯಾಗ ಇರ್ತಾರಂತಾ ಓದು ಕಲಿಸಿದೆ ಇದ್ಯೆ ಕಲಿಸಿದೆ ಈಗ ಅರ್ಧ ಆಸ್ತಿ ಕೊಡ್ತೀನಿ ಎಂದೆ, ಆಹಾ ಆಗ ಲಗ್ಗನ ಮಾಡತೀನಿ ಅಂದೆ ಒಲ್ಲೆವು ಅಂತಾ ಬಿಟ್ಟು ಹೋದೋರಿಗೆ

ನಿಮ್ಮಗೆ ನಾನು ಕೊಡಾದಿಲ್ಲ
ಕಡೇಲಿ ನಾನು ಕೊಟ್ಟೆನೆ
ಎಮ್ಮೊ ನಿಮ್ಮ ಕುಲ ಒಳ್ಳೇದಲ್ಲಮ್ಮಾ
ಎಪ್ಪಾ ನಮ್ಮ ಕುಲ ಏನು ಮಾಡೈತೆ
ನನ್ನ ಬಿಟ್ಟು ಯಾರಿಗೆ ಕೊಡತೀಯೊ
ನಮ್ಮಿಗೇನು ಕುಲ ಕಮ್ಮಿ ಇಲ್ಲ
ಕೊಟ್ಟರೆ ಕೊಡಲಿಲ್ಲ ನೀನಪ್ಪಾ
ಕೊಡಲಿದ್ದರೆ ಕೊಡಲಿಲ್ಲ ನೀನಪ್ಪಾ
ನಮ್ಮ ಕುಲಾನೆ ಇಲ್ಲವಾ ಸಯ್
ದೇಶದ ಮ್ಯಾಲೆ ನೋಡುರಾ ಸಯ್

ಬ್ಯಾರೆ ಕಡೇಲಿ ಕೊಡತೀನಿ ನಾನೇ ಲಗ್ಗನ ಮಾಡೇನೆ ಕಡೇಲಿ ನಾನೇ ಮಾಡತೀನಿ ನಾನೇ ಲಗ್ಗನ ಮಾಡತೀನಿ,

ನಾನೇ ಮಗಳು ವಲ್ಲರಾ ಸಯ್
ನೀನೆ ತಂದೆ ವಲ್ಲರಾ ಸಯ್
ನಿನ್ನ ಮನಿಗೆ ಬರಾದಿಲ್ಲರಾ
ನೀನೆ ತಂದಿವಲ್ಲರಾ
ನಾನೇ ಮಗಳೆ ವಲ್ಲರಾ

ನಿನ್ನ ಮಗಳ ನಾನ ವಲ್ಲಪ್ಪಾ ಅಂತಾ ಅಂತಾ ಬಾಯಿ ಬರ‍್ರೆಪ್ಪಾ ಮೈದನೋರೆ ಹೋಗಾನ ಅಂಬೊತ್ತಿಗೆ ಬೇಸು ಅರ್ಥ ಮಾಡಿಕೆಂಡಾ,

ಯಾರು ಡಾವುಡಿಂಗಲ ದೋರಾ ಆಹಾ
ರಂಡೇರು ಸಾಪನ ಬೀಳಬಾರದು ಆಹಾ
ಮಗಳು ಬಂದು ದುಃಖ ಮಾಡಿಕೆಂತಾ ಹೋದರೆ ಬೇಸಲ್ಲ ಆಹಾ
ಬಾರಮ್ಮ ನನ್ನ ಮಗಳಾ ತಂಗ್ಯಾರಾ ನಾನು ಕೊಟ್ಟೆನಾ
ನಿನ್ನ ಕೈಯಾಗ ಇಟ್ಟೀನಾ ಯಾರಿಗೆ ನಾನು ಕೊಡಮ್ಮ
ಯಾರಿಗ್ಯಾಕ ಕೊಡಬೇಕಪ್ಪಾ ನನ್ನ ಮೈದುನರೈದರಾ

ಮಾರ‍್ವಾಡಿ ಶೇಠಿ ಕುಲದಾಗ ಸರ‍್ರೆಮ್ಮಾ ಇಲ್ಲೆ ಮಾಡಿ ಕೊಟ್ಟು ಕಳಸ್ತೀನಿ ಛಿ ಛಿ ಛಿ ನಾನೇನು ಇಲ್ಲದೋಳು ಬಡವ ಅಂತಾ ತಿಳಿಕಂಡೀಯಾ

ನಿನ್ನ ಮನೆ ಮುಂದೆ ಬ್ಯಾಡಪ್ಪಾ ನನ್ನ ಮಾಡಿಕೊಟ್ಟೀಯಾ
ನನ್ನ ಊರಾಗ ನೊಡಪ್ಪಾ ಮದ್ವಿಮಜ್ಜನ ಮಾಡ್ಯಾನು
ಸತ್ತವನಲ್ಲ ಅಣ್ಣಪ್ಪಾ ನಾನೆ
ನಿಂತಕಂಡು ಲಗ್ಗನ ಮಾಡೇನಿ
ನೀವೆ ಊರಿಗೆ ಬರಬೇಕು
ಕರುಣೆಕಲ್ಲಗೆ ಬರಬೇಕು

ಅಂಬೊತ್ತಿಗೆ ಆಗ ಯವಾರ ಬರಬೇಕಮ್ಮಾ, ಆಹಾ ಈಗ ಎಂಟು ದಿನಾ ಐತೆ ಸ್ವಾಮಾರ ಬರ್ತೀ ಆಹಾ,

ಅಂತಾ ಆಗ ಎಲೆಹಂಚಿ ಬಿಟ್ಟಾಳ 
ಎಲೆ ಶಾಸ್ತ್ರ ಮಾಡ್ಯಾಳೆ ಸಯ್
ಆಗ ಮೈದನೋರನ ಕರಕಂಡು ಸಯ್
ಮಗನ ಕರಕೊಂಡು ನೋಡರಾ ಸಯ್
ಡಾವುಡಿಂಗಲ ಪಟ್ಟಣ ಬಿಟ್ಟಾಳ ಸಯ್

ಕರುಣೆ ಕಲ್ಲಿಗೆ ಬಂದಾಳ ಕರುಣೆ ಕಲ್ಲಗೆ ಬಂದಮ್ಯಾಲೆ ಕರುಣೆ ಕಲ್ಲಿಗೆ ಬಂದಮ್ಯಾಲೆ ಇಬ್ಬರು ಮೈದನರ ಕರಕಂಡು, ಆಹಾ ದೊಡ್ಡ ಪ್ಯಾಟೆಪ್ಪನಕ ಬಂದ್ಲು, ಆಹಾ ನೋಡ್ರಪಾ ನಾವು ಮಾರವಾಡಿ ಶೇಠಿದೋರು ಬೆಳ್ಳಿ ಭಂಗಾರ ಯಾಪಾರ ಮಾಡೋರು, ಆಹಾ ಬಿಟ್ಟು ಈಗ ಭೂಮಿಗಳು ಮನಿಗಳು ಹಳ್ಳಿ ಊರಾಗ ಸೇರಿಕೊಂಡು ನಾವು ರಾಜತನ ಗುದ್ದಾಡಿದೋರು ಬಡವರಿಗೆ ನಾವು ನ್ಯಾಯ ಪಂಚಾತಿ ಧರ್ಮ ಕರ್ಮನ ಹೇಳಿಕಂತಿದ್ದೀವಿ ಕೇಳಮೊ ಮೈದನೋರೆ ಈಗ ಜೀವಕ ನನ ಮಾತು ಕೇಳರಿ ಏನಮ್ಮಾ ಅಂದರು ಈಗ ಕುಲಕ್ಕಾಗಿ ಅವರು ಕುಲದೋರು ತಲ್ಲಿಗೆ ಬಂದು ಬೆಳ್ಳಿ ಭಂಗಾರ ಮಾರೋರು ತಲ್ಲಿಗೆ,

ಮೂನ್ನೂರ ಮಾಡತಾಳೆಪ್ಪಾ
ಕನ್ನಡಿ ಕೂಸಾ ನೋಡಾರ
ಬಣ್ಣದ ಗೆಜ್ಜೆ ಕೊಂಡಾಳ
ಭಂಗಾರ ಬಳೆ ನೋಡ್ತಾಳ ಸಯ್
ಆಗ ಕಾಲಿಗೆ ನೋಡಾರ ಸಯ್
ಇಪ್ಪತ್ತಡೇವು ಹೂ ಕೊಂಡಾರ ಸಯ್
ಅವರೆ ಬಂದೆ ನೋಡಾರ ಸಯ್
ಇಪ್ಪತ್ತು ಮಂದಿ ನೋಡರಾ ಸಯ್
ಒಳಗ ಹೊರಗ ನೋಡರಾ ಸಯ್

ಮನಿಸಾರಸಕ ನಿಂತಾರ ಒಳಗ ಹೊರ ನೋಡರಾ ಮನಿ ಮಾಡಿಯಾರ ಇಟ್ಟಾರೆ ಮನಿಸಾರಿಸಿದರು ಒಳಗ ಹೊರಗಾ, ಆಹಾ ಆಗ ಗಂಡಂತಲ್ಲಿ ಈಗ ಒಂದ ಎಕರೆ ಭೂಮಿ ಅಗಲ ಹಂದರ ಹಾಕ್ಸಿ ಬಿಟ್ರು ಹಂದರಿ ತಪ್ಪ ಕಾಣಿಗೆ ತಪ್ಪಾ, ಆಹಾ ಟೆಂಗಿನ ಗಿಡಗಳು ಬಾಳೆ ಗಿಡಗಳು ನಾಡಿ ಹಾಕಿದರು, ಆಹಾ ನಾಟಿ ಹಾಕಿಸಿ, ಆಹಾ ಆಗ ಏನು ಮಾಡಿದರು ಹತ್ತಾಳು ಅಡಿಗೆ ಮಾಡವರು, ಆಹಾ ಇಪ್ಪತ್ತಾಳು ಎಂಬಾಕ ಇಡೋರು, ಆಹಾ ಇಪ್ಪತ್ತಳ್ಳಿ ಅರವತ್ತು ಊರಿಗೆ ಲಗ್ಗನ ಪತ್ರ ಬರೆದರು, ಆಹಾ ಬರೆದು ಆಗ ಗಂಡಗೆ ಈಗ ಮುಂದೆ

ಬೆಳ್ಳಿ ತಟ್ಯಾಗ ತಣ್ಣಾಯ್ಯಾ
ಆಗ ತಾಳಿ ಮುತ್ತಣ್ಣಾ
ಆಗ ಇನ್ನಶಾಸ್ತ್ರ ಹೇಳೋರು
ಅವರು ವಾಗಿ ಬಂದಾರೆ
ಬಣ್ಣಾದ ರಗ್ಗೆ ವಾಸ್ಯಾರೆ
ನ್ಯಾಸೆ ಹೊಯಿತಾರೆ ಅವರಾಗಿ
ಆಗ ಮೈದನೋರು ಕರಕಂಡು ಬಂದು ಕುಂದರಿಸಿದರು ಆಹಾ
ಗಂಡನ ಪಾ ಇಡದಾಳ
ಕಾಯಿ ಕರ್ಪೂರ ಹೊಡಸ್ಯಾರ
ಇನ್ನ ತಮ್ಮ ನೋರಿಗೆ ನಾನು ಮಾಡ್ಯಾನಿ
ಸತ್ತ ತಂದೆ ನಾನು ಮಾಡೀನಾ
ಸಮಾಧಿ ತಲ್ಲಿ ನೋಡುರಾ

ನೋಡಿರಿ ಜೀವ ಗಂಡನೋರೆ ಸತ್ತವನ ತಲ್ಲಿ ನಾನು ತಾಳಿ ಕಟ್ಟಸ್ತೀನಿ, ಆಹಾ ನಿನ ಜೀವ ತಮ್ಮನೋರ್ಗೆ ಜೀವಕ ತಾಳಿ ಕಟ್ಟಿಸ್ತೀನಿ ಅಂತಾ, ಆಹಾ ಆಗ ಶರಣು ಮಾಡಿಗಂಡನ ಪಾದಕೆ,

ಕಾಯಿ ಕರ್ಪೂರ
ಗಂಡಗವಾಗಿ ಮುಡಿಸುವಾಳ
ಮುತ್ತೈದತನ ನೋಡಣ್ಣಾ
ಆಕಿ ಬಂದಾರ ವಣ್ಣಯ್ಯಾ
ಆಗ ಜೀವ ಅಣ್ಣಾಯ್ಯಾ
ಜೀವ ಕಾಗಿನೆ ಅಣ್ಣಯ್ಯಾ
ಅವರೆ ಮನಿಗೆ ನೋಡಣ್ಣಾ
ಗಂಡನಾಗಿ ರಾಮದುವಿರೊ ಸಯ್
ಕಾಯಿ ಕರ್ಪೂರ ಮಣ್ಣಾಯ್ಯೊ ಸಯ್
ತಾವೇ ಬಂದೆ ಮಾಡಿಸವಾರ ಸಯ್
ಗಂಡನ ಜೀವಕ್ಕಾಗಿರಾ ಸಯ್
ತಾವು ಕಾಯಿ ಬಡದಾರ
ತಾವು ಕಾಯಿ ಕರ್ಪೂರ
ನಾವು ಇನ್ನ ಮುಂದೆ ನೋಡಾರ
ಮುತ್ತಿನ ಸೆರಗೆ ನೋಡರಾ ಸಯ್
ಗಂಡಗ ಶರಣೆ ಮಾಡ್ಯಾಳ ಸಯ್
ತಾವೇ ಮುಂದೆ ಅರ್ಲಾಯ್ಯಾ ಸಯ್
ಈಗ ಕರಕಂಡು ಬಂದರು ಸಯ್
ಅವರು ತಮ್ಮನೋರು ನೋಡರಾ ಸಯ್
ಅಣ್ಣಾನ ಸುತ್ತಾನೆ ತಿರುಗ್ಯಾರಿ ಸಯ್
ಜೀವಾಕ ನೀನೆ ಅಣ್ಣಯ್ಯಾ
ಜೀವಾಕ ಅತ್ತಿಗೆ ನೋಡರಾ ಸಯ್
ಚಿರಂಜೀವಿ ಅಂದು ಬಿಟ್ಟರಾ ಸಯ್
ಅಲ್ಲಿ ತಾಳೀ ಕಟ್ಯಾರ
ಅವರೆ ತಾಳಿ ಕಟ್ಯಾರ

ಅವರು ಅಣ್ಣಾ ಅಣ್ಣಾ ತಮ್ಮನೋರೆ ನಿಂತಕಂಡು ಅತ್ತಿಗೆ ಅಂತಾ ಬಾಯಿ ಗಂಡನ ಸಮಾದಿತಲ್ಲಿ ಈಗ ಜೀವ ತಮ್ಮನೋರಿಗೆ, ಆಹಾ ಜೀವ ತಾಳಿ ಕಟ್ಟಿಸಡಬಿಟ್ಲು ಆಹಾ ತಂಗಿನೋರಿಗೆ ತಾಳಿ ಕಟ್ಟಿಸಿ,

ಮೆರಣಿಗೆ ಮಾಡಿಬಿಟ್ಯಾಳ
ಆಗ ಲಗ್ಗನ ಆಗೋತೊ
ಲಗ್ಗನ ಆಗೆ ಹೋತಾರ ಸಯ್
ಒಂದು ತಿಂಗಳ ವಾಗೈತೊ ಸಯ್
ಎಲ್ಡು ತಿಂಗಳ ವಾಗೈತೊ ಸಯ್
ಮೂರು ತಿಂಗಳ ವಾಗೈತೊ ಸಯ್
ಏನಂತಾ ಮೈದುನರ ಅಂತಾಳ
ಎನಂತಾ ಮೈದನ ರೋರುರಾ

ತಾವೇ ಆ ಮನುಡಿತಾಳ ಅಪ್ಪಾ ಮೈದುನೋರೆ, ಆಹಾ ಈಗ ನಿಮ್ಮ ಅಣ್ಣಾ ಸತ್ತು ಹೋದ ಆಹಾ ಆಗ ನಿಮ್ಮಪ್ಪಾ ಸತ್ತು ಹೋದರು, ಆಹಾ ನಿಮ್ಮ ತಾತನೋರು ಸತ್ತು ಹೋದರು ಆಹಾ ಈ ಹಳ್ಳಿ ಊರಾಗ ಯಾಕ ಇರಬೇಕು, ಆಹಾ ಈಗ ಹಳ್ಳಿ ಊರಾಗ ಇರೊ ಜಾತಿ ಅಲ್ಲ ನಮ್ಮದು, ಆಹಾ ಮಾರವಾಡಿ ಶೇಠಿದೋರು ದೊಡ್ಡ ಪ್ಯಾಟಿಸ್ತಿನ ಸೋರಾನ, ಆಹಾ ಇಗೋ ನಾನು ಹೇಳಿದ ಮಾತ ಕೇಳ್ತೀನಿ ಆಹಾ,

ಭಂಗಾರ ಯಾಪಾರ ಮಾಡಾನ ಬೆಳ್ಳಿ ಯಾಪಾರ ಮಾಡಾನ
ಮೈದುರ ಕೆಂಳಿರಿ ನೀವಾಗಿ
ಹಳ್ಳಿ ಊರು ನಾವು ಬಿಡಾನೆ
ಪ್ಯಾಟೆ ಸ್ತನ ನಾವು ಸೇರಾನೆ

ಹೊಲಮನಿ ಮಾರೆಕೆಂಬೋದು ಮೇಲೆ ಮಾಳ್ಗಿ ಕಟ್ಟಿಕೆಂಬೋದು ಆಗ ಬೆಳ್ಳಿ ಭಂಗಾರ ಯಾಪಾರ ಮಾಡೋದು ಮಾರ‍್ವಾಡಿ ಶೇಠಿದೋರು ಅಂತಾ, ಆಹಾ ಅಷ್ಟೆ ಆಗಲಪಾ ಅಂತಾ, ಆಗ ಇನ್ನತರ ಮೈದನೋರನ ಕರಕಂತು,

ದೊಡ್ಡ ಪ್ಯಾಟೆ ತಲ್ಲಿಗೆ ಬಂದಾಳ
ಗಂಗಾವತಿ ಅಂತಾ ಪಟ್ಣ ಐತೆ
ಹೊಸಪ್ಯಾಟೆ ಅಂತಾ ಪಟ್ಣ ಐತೆ
ಇಪ್ಪತ್ತು ಹಳ್ಳಿಗೊಂದು ಊರೂರಾ
ಅರವತ್ತು ಹಳ್ಳಿಗೊಂದು ಪಟ್ಣಾರಾ

ಬಳ್ಳಾರಿ ಅಂತಾ ಪಟ್ಣಾಕ್ಕೆ ಹೋಗಿ ಸೇರಾನಂತಾ ನೋಡಪಾ ಇಬ್ಬರು ಮೈದನೋರು ಒಬ್ಬ ಮೊಗ ನೋಡಮ್ಮ ಅತ್ತಿಗೆ ಅಂತಾ ಬಾಯಿ ಈಗ ಸತ್ತವನಲ್ಲ ನೀನೆ ನಮ್ಮಣ್ಣಾ, ಆಹಾ ನಮ್ಮನ ಇಡಕಂಡು ತಂದೀನ ಕೊಲ್ಲಿದೆ, ಆಹಾ ಆಗ ಇನ್ನ ನಮ್ಮ ದೊಡ್ಡನೋರನ ಚಿಗಮ್ಮ ನೋರನ ರಂಡೆ ಮಾಡಿದೆ ನಮ್ಮನ ಇಡಕಂಡು ಲಗ್ಗನ ಮಾಡಿದೆ, ಆಹಾ ಈಗ ನಿನಗೆ ಒಬ್ಬ ಹುಟ್ಯಾನ, ಅಹಾ ಈಗ ನಿನ್ನ ಮಗಾನೆ ಅಲ್ಲಯ್ಯಾ ನಮ್ಮ ಮಗವೈದಾನ ನಿನ್ನ ಮಗಾನೆ ಅಲ್ಲಮ್ಮೊ ನನ್ನ ಮಗಾನೆ ವೈದಾನೆ ಏ ಮಗನಿಗೆ ನಾವು ನಾವು ಮಾಡೇವೆ ಅಷ್ಟೇವಾಗಲೀ ಮೈದುನಾ,

ಅಣ್ಣಾ ನಮಗವಲ್ಲರಾ ಸಯ್
ನಮ್ಮ ಮಗವೈದಾನ
ಅಣ್ಣಾನ ಮಗನೆವಲ್ಲರಾ
ನಮ್ಮ ಮಗನೆ ವೈದಾನ

ಎಪ್ಪಾ ಮೈದನೋರೆ ನೀವಾಗಿ ಅಂತೀರಿ ನೋರಪಾ, ಆಹಾ ಅಣ್ಣಾನ ಮಗ ಅಲ್ಲನನ ಮಗ ಅಂತಾ, ಅಹಾ ನಿಮ್ಮ ಕಕ್ಕಾ ಇಂಗೆ ಅಂದಿಲ್ಲೆ, ಅಹಾ ಖಂಡೇರಾಯ ಸಿದ್ದೋಗಿ, ಆಹಾ ಮಕ್ಕಳಿಲ್ಲದೋರು ಎಷ್ಟು ಜೀವ ಇರಬೇಕು, ಆಹಾ ಅಣ್ಣಾನ ಮಕ್ಕಳಲ್ಲ ನನ ಮಕ್ಕಳಂತಾ ಆಹಾ ಆಗ ಆಸ್ತಿ ಎಲ್ಲಾ ತಗಂಡೋಗಿ ಮತ್ತೆ ಇನ್ನ ವರಕಳ್ಳರಿಗೆ ಲಂಚಕೊಟ್ಟು, ಆಹಾ ಈಗ ತಡಿಸಬಿಟ್ರಪಾ, ಆಹಾ ಕುಂತತಲ್ಲಿ ಇದ್ದು ಗೊಡಸಲಿಲ್ಲ ನಿಂತತಲ್ಲಿ ನಿಂದರು ಗೊಡಸಲಿಲ್ಲ, ಆಹಾ ಈವಾಗ ನೀವು ಮಾಡ್ತೇನೆ ಅಂದ್ರೆ ನಾನು ಒಪ್ಪೇನು ಏನಪ್ಪಾ, ಆಹಾ ಈಗ ಅಣ್ಣಾನ ಹಿಂದೆ ತಂದೀಗೆ ಹುಟ್ಟಿದೋನು, ಆಹಾ ನೀವು ತಂದಿನೋರು ಆಹಾ,

ತಂದಿನೋರಿಗೆ ಬುದ್ದಿ ಇರತೈತೊ
ತಂದಿಗ್ಯಾನ ನಿಮ್ಮಿಗೆ ಇರತೈತೊ
ಜಾತಿಗೆ ಹುಟ್ಟಿ ದನಕುರಾ ಸಯ್
ಬುದ್ದಿ ನಿಮ್ಮಗೆ ಇರಬೋದು ಸಯ್
ನನ್ನ ಮಗನಿಗೆ ಮದ್ವಿ ಮಾಡ್ರೀರಾ ಸಯ್

ಸುಳ್ಳು ನೋಡು ನೀವು ಮಾಡಾದಿಲ್ಲ ನನ್ನ ಮಗನಿಗೆ ಮದ್ವಿ ಮಾಡ್ತೀರಾ ಸುಳ್ಳಲ್ಲ ಮೈದುನೋರೆ,

ಸುಳ್ಳ ಮಾತನುಡಿಯದಲ್ಲಮ್ಮಾ ಸಯ್
ಪಾದಸ್ನೆ ನಿನಗೆ ಸಯ್
ನಾವೇ ಮಾಡ್ತೀವಿ ನಿನ್ನಮ್ಮ
ನಾವೇ ಮಾಡ್ತಿವಿ ನೋಡಮ್ಮಾ
ಮನಿಮುಂದೆ ಅಂದರ ಹಾಕ್ಯಾರ ಸಯ್
ಕುಲಹೆಣ್ಣು ತೆಗೆದು ಬಿಟ್ಟಾರ ಸಯ್
ಆಗ ಮದ್ವಿ ಮಾಡ್ಯಾರ ಸಯ್
ಮಾಡಿದ ಮ್ಯಾಲೆ ನೋಡುರಾ ಸಯ್
ಅತ್ತಿಗೆ ಕರಕಂಡಿ ಬಂದಾಳ ಸಯ್
ಮೂವರನ ಮೂರು ಊರಿಗೆ ಬಿಟ್ಟಾಳ ಸಯ್
ಗಂಗಾವತಿಗೆ ಒಬ್ಬರನು ಬಿಟ್ಟಾಳ ಸಯ್
ಹೊಸಪ್ಯಟಿಗೆ ಒಬ್ಬರನ ಬಿಟ್ಟಾಳ ಸಯ್
ಬಳ್ಳಾರಿಗೊಬ್ಬರ ಬಿಟ್ಟಾಳ
ಬಳ್ಳಾರಿಗೊಬ್ಬರು ಸೇರ್ಯಾರೆ
ಪ್ಯಾಟೆಸ್ತನ ಸೇರ್ಯಾರೆ
ಲೇ ಅಂಗಡಿಯಾಪಾರ ಮಾಡ್ಯಾರ ಸಯ್
ಬೆಳ್ಳಿಯಾಪಾರ ಮಾಡೋರು ಸಯ್
ಭಂಗಾರಯಾಪಾರ ಮಾಡೋರು ಸಯ್
ಕುಂತುಕೊಂಡು ನಾವು ನೋಡುರಾ ಸಯ್
ಬೆಳ್ಳನೆ ಅನ್ನ ಉಂಡರೆ ಸಯ್
ಬಿಳೆ ಪತ್ರಮ್ಯಾಗ ಬರದಾರೆ ಸಯ್
ಹೆಂಡರ ಮಕ್ಕಳು ನೆಳ್ಳಗ ಕುಮದರಾರಾ
ಬಿಳೆ ಪತ್ರಮ್ಯಾಗ ಬರೆದಾರ
ನಾವೇ ನೆಳ್ಳಗ ಊವಾರ
ಲೇ ಕೋಕದಾಗ ಹೆಸ್ರು ಆಗಬೇಕು ಸಯ್
ಮಾರ್ವಾಡಿಶೇಠಿದೋರುರಾ
ಲೋಕಕೆ ಹೆಸ್ರೆ ಪಡೀಬೇಕು
ಲೋಕಕೆ ಹೆಸ್ರೆ ಪಡೀಬೇಕು
ತಾವೇ ಲೋಕದಲ್ಲಾರೆ
ಅಂತಾ ಅತ್ತಿಗೆ ಏನು ಮಾಡಿಬಿಟ್ಟಳು

ಮೂವರನ ಮೂರು ಊರಾಗ ಸೇರಿಸಿಬಿಟ್ಲು ಆಹಾ,

ಹಳ್ಳಿ ಊರು ಅವರು ಬಿಟ್ಟಾರ
ಪ್ಯಾಟಿಸ್ತನ ಅವರು ಸೇರ್ಯಾರ
ಮೇಳೆ ಮಾಳಿಗೆ ಕಟ್ಯಾರ
ಭಂಗಾರ ಶೇಠಿದೋರು ಆಗ್ಯಾರ
ಬೆಳ್ಳಿ ಯಾಪಾರ ಭಂಗಾರ
ಭಂಗಾರ ಬೆಳ್ಳಿಯಾಪಾರ
ಇನ್ನ ಬಡವನೆ ಇದ್ದರೆ ಸಯ್
ಕಾಳ ಯಾಪಾರ ಮಾಡಾರಿ ಸಯ್
ದೊಡ್ಡಪ್ಯಾಟೆಸ್ನವಿದ್ದರೆ ಸಯ್
ಯಾವುದು ಕಣ್ಣಿಗೆ ಕಾಣಬರ್ತದೊ ಸಯ್
ಹಳ್ಳಿ ಊರು ಬಿಟ್ಟಾರ ಪ್ಯಾಟೆಸ್ತನ ಸೇರ್ಯಾರ
ಒಂದೆ ವರುಷಾಕೆ ನೋಡುರಾ ಸಯ್
ಅತ್ತಿಗೆ ಏನಂತಾ ಹೇಳ್ತಾಳ ಸಯ್
ಅಪ್ಪಾ ಮೈದನೋರಾರ ಸಯ್
ನಮ್ಮ ದೇವ್ರು ಇಲ್ಲದಂಗ ಆಗೈತೊ ಸಯ್
ಹಳ್ಳಿ ಊರಾಗ ದೇವ್ರು ಬಿಟ್ಟೀವಿ
ದೊಡ್ಡು ಊರಾ ದೇವ್ರು ಇಲ್ಲರಾ 
ಹಳ್ಳಿ ಊರಾಗ ದೇವ್ರು ಬಿಟ್ಟಪಾ
ಖಂಡೇರಾಯನ ಬಿಟ್ಟು ಬಂದೀವಿ
ಮೂವರು ಕಲ್ತು ನೋಡಪಾ
ಮೂರು ಬಜಾರಕಡೆ ತರ್ರೆಪಾ
ಇನ್ನಾ ಖಂಡೇರಾಯ ಅಂತಾನ
ನಾವೇ ಗುಡಿಕಟ್ಯಾನ
ನಾವೇ ಗುಡಿಯೆ ಕಟ್ಯಾನ
ತಾವೇ ಒಂದೆ ಕಟ್ಯಾರೆ
ಆಗ ಮೂವರೆ ಕಟ್ಯಾರ
ಮೂರು ಬಜಾರ ಕಡೆ ತಲ್ಯಣ್ಣಾ
ದೊಡ್ಡು ಜಾಗ ತಲ್ಯಣ್ಣಾ
ಮೂರೆ ಮಠ ಕಟ್ಯಾರ
ಊರು ಊರಾಗ
ಮೂರು ಮಠ ಕಟ್ಯಾರೆ ಅವರೆ ಇನ್ನ ಒಂದಾಗ
ಎಪ್ಪೊ ನಿನ ಮನ್ಯಾಗ ನಿನದೇವ್ರಾ ಸಯ್
ನಿನ್ನ ಊರಾಗ ನೀನಗೆ ದೇವ್ರುರೆ
ನನ್ನ ಊರಾಗ ನನ್ನದೇವುರೆ
ಇನ್ನೊಬ್ಬನೂರಾಗ ಇನ್ನೊಂದು ದೇವುರು
ನಮ್ಮಜಾತಿ ಎಲ್ಲಿ ಇರುವುದೋ ಸಯ್
ದೊಡ್ಡ ದೊಡ್ಡ ಪ್ಯಾಟಿಸ್ತನ ವೈತರಾ ಸಯ್
ಹಳ್ಳಿ ಊರಾಗೆ ಇಲ್ಲರಾ ಸಯ್
ಎಲ್ಲರೂ ದೇವ್ರು ಮಠಕ್ಕೆ ಸಯ್
ಮಾರವಾಡಿ ಶೇಠಿ ಮಾಡಬೇಕು ಈಗ
ಎಲ್ಲರೂ ಇನ್ನ ಮಾಡ್ಯಾರ
ಮಾರವಾಡಿ ಶೇಠಿದವರಾರೆ

ಕರುಣೆಕಲ್ಲಾಗ, ಆಹಾ ಬಂಡೆರಾಯನ ಸ್ವಾಮಿನ ಬಿಟ್ಟು, ಆಹಾ ಆಗ ಈ ಗಂಗಾವತ್ಯಾಗ ಬಂದು ಮಠ, ಆಹಾ ಮಾರವಾಡಿ ಶೇಠಿದೋರು, ಆಹಾ ಆಗ ಈ ಹೊಸಪ್ಯಾಟ್ಯಾಗ ಒಂದು ಮಠ, ಆಹಾ ಬಳ್ಳಾರ್ಯಾಗ ಒಂದು ಮಠ, ಆಹಾ ಆಗ ಎಲ್ಲರೂ ಮಾರವಾಡಿ ಶೇಠಿದೋರು, ಆಹಾ ಈಗ ಕಲೀಬೇಕು ಹೆಣ್ಮಕ್ಕಳು ಗಣಮಕ್ಕಳು ಪೂಜೆ ಮಾಡ್ಬೇಕು ಆಹಾ,

ಬ್ಯಾರೆ ಕುಲದೋರು ನೋಡರಾ ಸಯ್
ಒಬ್ಬರು ಹೋಗಂಗಿಲ್ಲ ಅವರ ದೇವ್ರುಗೆ
ಬ್ಯಾರೆ ಕುಲದೋರು ರಾ ಒಬ್ಬರು ಹೋಗಂಗಿಲ್ಲರಾ
ಬ್ಯಾರೆ ಜಾತಿ ಹೋಗಂಗಿಲ್ಲರಾ ಸಯ್
ಅವರೆ ಜಾತಿ ಹೋಗೋರು ಸಯ್
ಕನ್ನಡಿ ಕೂಸಾನೋಡರಾ ಸಯ್
ಬಣ್ಣದ ಗೆಜ್ಜೆ ನೋಡುರಾ ಸಯ್
ಗೆಜ್ಜೆ ಸೈನಾ ಕಾಲಿಗೆ
ಡೊಳ್ಳನಾ ಕಡಗ ನೋಡುರಾ ಸಯ್
ಭಂಗಾರ ಬಳೆ ನೋಡುರಾ ಸಯ್
ಆಗ ಅವರು ಜಲ್ಮಕ್ಕೆ
ಅವರೆ ಜಲ್ಮಾಗೆ ನೋಡುರಾ
ಭಂಗಾರ ಬಳೆ ನೋಡಣ್ಣಾ
ಮ್ಯಾಲೆ ಮುಸುಕು ನೋಡುರಾ ಸಯ್
ಅವರ ಜಲ್ಮಗ ನೋಡುರಾ ಸಯ್
ಗಂಡಸರ ಮೊಖ ನೋಡಲಾರದ ಸಯ್
ಬಟ್ಟೆ ಹೊದಿಸಕೆಂತಾರ ಸಯ್
ತಲೆ ಬಗ್ಗಿಸಿ ದೇವ್ರುಗೆ ಕುಳಿತಾರ ಸಯ್
ಕಾಲು ಬಗ್ಗಿಸಿ ಇನ್ನ ತಲೇರಾ ಸಯ್
ಶರಣು ಮಾಡತಾರ ಸಯ್
ಅಲ್ಲದೇವು, ಮೊಖ ನೋಡುರಾ
ದೇವ್ರು ಅವರೆ ನೋಡುರಾ
ಜಲ್ಮ ಅಂತವರಾಗಿ
ಅಂಗ ಇನ್ನ ವರಮಾಡಬೇಕಂತಾ
ಆಗ ಅಂತಾ ಬಾಯಿ ದೇವಿ ಹೇಳಿ ಆಹಾ

ಕುಲಕ್ಕಾಗಿ ಈಗ, ಜೀವಕ್ಕ ಯಾರು ಊರಿಗೆ ಅವರನ ಸೇರಿಸಿ, ಯಾಪಾರ ಇಡಿಸಿ, ಆಗ ತಾಯಿ ನಿಂದೇನೆ ನಮ್ಮಿಗೆ ಭಕ್ತಿ ಅಂತಾ, ಈಗ ದೊಡ್ಡ ಊರಾಗ ಸೇರಿಸಿಬಿಟ್ಟೆ ಅಂತಾ,

ಇನ್ನ ಸಾಯಂಗಿಲ್ಲ ನೋಡಮ್ಮಾ ದೊಡ್ಡಗುಡ್ಡವಾಗೀವಿ

ಈಗ ಜೀವಕ್ಕಾಗಿ, ಇಗ ಜಲ್ಮಕ್ಕಾಗಿ, ಆಂತಾ ಮಾರ‍್ವಾಡಿ ಶೇಠಿದೋರು ಇಲ್ಲಿಗೆ ಮುಗಿಯಿತು.