ನಾವು ಮಾರ್ವಾಡಿ ಕುಲದಾಗಂದರೆ
ಒಬ್ಬನ ಕೈಯಾಗ ಇರಬಾರದು
ಒಬ್ಬರ ಕೈಯಾಗ ತೀನಬಾರದು
ಏ ಸ್ವತಂತ್ರ ಆಳ ಬೇಕಲೊ
ಇತತ್ತಾಗಿ ನೋಡರಾ ಸಯ್
ಆತಕೋಪ ಮಾಡ್ತಾನ ಸಯ್
ಎಂಗನ ಮದುವೆ ಮಾಡ್ತಾನ ಸಯ್
ಮುಂದ ಕಾಲಕೆ ಹುಡುಗರಾ ಸಯ್
ಹೆಂಡರ ಮಕ್ಕಳ ನೋಡದಾ ಸಯ್
ನೆಳ್ಳಗ ಕುಂತಕಂಡು ಊಟ ಮಾಡಬೇಕು
ಇವತ್ತರಿಯಲಾಗದ ಸಯ್
ಮುದಿಯರಾಗುತೈದಿರಿ
ಇವತ್ತರಿಯಲಾಗದ
ಮುಂದಕ ಕಲಿಯುಗಬರ್ತೈತೆ

ಏನಪ್ಪಾ ಹೆಂಡರು ಮಕ್ಕಳು ಕುಂತು ಊಟ ಮಾಡಬೇಕು. ನಮ್ಮ ಮಾರ್ವಾಡಿ ಶೇಠಿ ಕುಲದಾಗ. ಆಹಾ ಒಬ್ಬರಿನ್ನ ಬದುಕು ಬೀಳಬಾರದು ನಾವು. ಆಹಾ ಅಡವಿ ಮೊಖ ನೋಡಬಾರದು ನಾವು. ಆಹಾ ಸರೆ ಎಂಟುಮಂದಿ ಹುಟ್ಟಿದರು ಹತ್ತು ಮಂದಿ ಹಡದರು ಎಂಗ ಜೋಪಾನ ಮಾಡೋದು ನೀವು. ಆಹಾ ಮತ್ತೆ ಏನು ಮಾಡಬೇಕಯ್ಯ ಅಂಗಲ್ಲ ಇಗೋ ನೀವು ಅಳಿಯ ನೋಡು ನಾನು ಮಾವಯ್ಯ ಇಸು ದಿನ ಕೊಂಟ್ರಾತ ಜೋಪಾನ ಮಾಡ್ಯಾನ ಇಪ್ಪತ್ತು ವರುಷ ನನ್ತಲ್ಲಿ ಇಪ್ಪತ್ತು ವರುಷ ಇರ್ರೀ

ಇಗೋ ನಿಮ್ಮಿಗೆ ಓದು ಕಲಿಸಿಬಿಡ್ತೀನಿ
ಓದುವುದನ್ನು ಕಲಿಸೇನು
ಅನ್ನ ನೀರು ಇಡ್ತೀನಿ
ನಾನೇ ಜೋಪಾನ ಮಾಡ್ತೀನಿ ಸಯ್
ಪಾಪನ್ನ ನನಗೆ ಬರಲಿರಾ ಸಯ್
ಧರ್ಮ ನನ್ನಲ್ಲಿಗೆ ಬರಲಿರಾ ಸಯ್
ನಿಮ್ಮನ್ನ ವಿದ್ಯೆಕಲಿಸಿ
ವಿದ್ಯೆ ನಾನಾ ಕಲಿಸೇನಾ

ಸರ್ರೀ ಓದಿಕೆಂದರೆ ಒಳ್ಳೇದು ಬಿಡು ಮುಂದಕ ಬೇನು ನೆಳ್ಳಗ ಕೂತ್ಕಂಡು ಊಟ ಮಾಡ್ತೀವಿ. ಬೆಳೆ ಪತ್ತ ಮೇಲೆ ಕರ್ರನ ಗೀಟು ಹಾಕಿದರೆ ಬೆಳ್ಳನ ಅನ್ನ ಊಟ ಮಾಡ್ತೀವಿ. ಆಹಾ ಈಗ ಹೊರಬದುಕಿಗೋದರೆ ಕರ್ರನ ಮುದ್ರೆ ಸಿಗಂಗಿಲ್ಲ ನೀವು ಹೇಳೋ ಮಾತೇನು ಕರೆರ್ರೀ. ಇವತ್ತು ನಾವು ಇದೈಕ ಆಸಿಬಿದ್ದು ನಿನ್ ಮನಿಗೆ ಬಂದರೆ ನಿನ ಕೂಟ ಆತ ಏನಂತಾನ. ಅಲಸಂದಿ ಗುಗ್ಗರಿ ಮಾರಿದಾರ ಏ ಪಾಪ ಕೈಕಾಲು ಕಟ್ಟಿದ್ದರೆ ನಾನು ಕರಕಂಡು ಬಂದು ಇಪ್ಪತ್ತು ವರುಷ ಜೋಪಾನ ಮಾಡದೀನಿ ಅಲ್ವಾ ಹೋಗೊ ಕಾಲಕ್ಕ ನಾವು ಓದಿಕೆಂತೀವಪ್ಪಾ ಅಂತನ್ನ ನಾವು ಹೇಳಿ ಹೋಗಲೇಕಾ ಇಲ್ಲ. ಆಹಾ ನೀವು ಹೇಳಿ ಹೋಗ ಬೇಡ ಇಲ್ಲ ನನಗೆ ಹೇಳಲಾರದಂಗ ಹೋಗಿರಿ ನನ್ನ ಹೊಟ್ಟಾಗ ಹುಟ್ಟಿದ ಮಕ್ಳಾದರೆ ನನ್ನ ಬಿಟ್ಟು ಹೋಗುತಿದ್ದರ್ಲಾ,

ಯಾವ ಕಾಲಕ್ಕ ಆಗಲೀ
ಬೇರ್ಯಾ ಹುಡುಗರ್ನ ಜೋಪಾನ ಮಾಡಬಾರದು
ಮಂದಿ ಮಕ್ಕಳ ಜೋಪಾನಮ್ಮ
ಮಂದಿ ಮಕ್ಕಳ ಸಲುವುಬಾರದು
ಕುರ್ಡು ಕುಂಟವಾದರೆ ಸಯ್
ನನಗೆ ಹುಟ್ಟಬೇಕುರಾ ಸಯ್
ನನ್ನತಲ್ಲಿ ಇರಬೇಕುರಾ ಸಯ್
ಕುರ್ಡಿ ಕುಂಟವಾದರೆ
ನನಗೆ ಹುಟ್ಟಬೇಕುರಾ
ಮಂದಿ ಮಕ್ಕಳು ಜೋಪಾನ ಮಾಡಿದರೆ
ತಿನ್ದು ತಿನ್ದು ದೊಡ್ಡೋರು ಆಗ್ತಾರ
ತಿಂದೆ ಬಿಟ್ಟು ಹೋಗ್ತಾರ
ತಿಂದೆ ಬಿಟ್ಟೆ ಹೋಗ್ತಾರ

ಅಂತಾ ಆತನ ಜೀವ ಎಷ್ಟು ಸಣ್ಣಗಾಗ್ತದೆ ಏನ್ರಿ ಆತನ ಜೀವ ಏನನಿಸಿದರೆ ನಾವು ಒಳ್ಳೇದು. ಅಂಗಲ್ಲಾ ನೀನಲ್ಲಾ ಮಾವ ನೀನಲ್ಲಾ ತಂದೆ ಆತ ತಂದೆ ನಮಗೆ. ಆಹಾ ದುಡ್ಡಿಗೆ ಮಾಡಿದಾತ ತಂದೆ ನಮ್ಮ ಕಕ್ಕ ಇಡಿಲಿಲ್ಲ ಆಸ್ತಿ ಹೊಯ್ದು ತಿಂತಾನ ಇವಾಗ ಇದ್ದಂಗ ಆವಾಗ ಇದ್ದಿದ್ದರೆ ಆವನ ಕುತ್ತಿಗೆ ಮ್ಯಾಲೆ ಚೂರಿ ಇಡ್ತೀವಿ ಎದೆಮ್ಯಾಲೆ ಎಡಗಾಲಿಟ್ಟು,

ಎಯ್ ಗಗ್ಗನೆ ಕುತ್ತಿಗೆ ಕೊಯ್ಯಿತೀವೊ
ಅವರ ರಕ್ತ ನಾವು ಕುಡಿತಿದ್ದಿವೊ
ಇಷ್ಟೊಂದು ತಿಳವರಿಕೆ ಇದ್ದಿಲ್ಲಾ
ಇಷ್ಟು ಬುದ್ದಿ ನಮ್ಮಗೆ ಬಂದಿದ್ದಿಲ್ಲಾ
ಎಲ್ಲಾ ಹೋಗೋದು ಹೋಗಲಿ
ತಿಂಬೋರು ತಿಂಬಲಿ
ಎಲ್ಲಾ ನನ್ನಿಂದೆ ಬರ್ರೇಪ್ಪಾ

ನಾನು ಕಲಿಸ್ತೀನಿ ಇಲ್ಲರ್ರೀ ನಿನಗಾಗಿ ಬೇಕಿದ್ದರೆ ನಮ್ಮ ಮ್ಯಾಲೆ ಜೀವಿದ್ದರೆ ನಮ್ಮಿಂದೆ ಬಾ ಆಹಾ ಮನೆಗೆ ಹೋಗೋನು ಆತನ್ನ ಕೇಳಿಕೋ ಏನಪಾ ಹೋಗಲಿ ಪರವಿಲ್ಲ ಅತ್ತಗಿದ್ದರೆ ಮಕ್ಕಳೆ ಇತ್ತಗಿದ್ದರೆ ಮಕ್ಕಳೆ ಓದಿಕೆರ್ರಪ್ಪಾ ಹೋಗರಿ ಅಂತಾ ಕಳಿಸಿದರೆ,

ನಿನ್ನಿಂದೆ ನಾವು ಬರ್ತೀವಿ
ಆತನ ಮಾತ ಇಲ್ದಂಗ
ನಾವು ಒಂದೆಜ್ಜೆ ಬರಂಗಿಲ್ಲಯ್ಯೊ
ನಿನ್ನ ಹಿಂದೆ ಬರಂಗಿಲ್ಲಯ್ಯೊ
ನಡಿರಲೇ ಹೋಗನ ಅಂದ

ನೋಡಿದ ಈತ ಅಲಲಲೆ ಈ ಹುಡುಗರು ಸಲಿವಿದ್ದು ಮೊದಲು ಹೆಚ್ಚಾಗಿ ಬಿಟೈತೆ ಹಡದವರು ಮರ್ತೋಗಿ ಬಿಟ್ಟಾರ ಬೀಗರು ಬಜ್ಯರು ಮರ್ತೊಗಿ ಬಿಟ್ಟಾರ ಕುಲ ಜಾತಿ ಬೇಕಿಲ್ಲ ಅಂತಾರ ಆಹಾ,

ಇವರು ಕುಲ ಇಲ್ಲದ್ದೆ ಬೇಕ ಅಂತಾರ
ನಾನೇ ಹೋಗಿ ಬರ್ತೀನಿ
ಕುಲದಾಗ ಕರಕಬೇಕಪ್ಪ
ಮಕ್ಕಳ ಕೊಟ್ಟೆ ಮಾಡ್ಯಾನ
ಹುಡುಗರ ಬಾಳ ಚಲೋರು
ಹುಡುಗರು ಬಾಳ ಉಶಾರು ಐದಾರ
ಬಾಳ ಉಶಾರು ಐದಾರ
ಈ ಹುಡುಗರ ಕೈಬಿಡಬಾರ್ದು
ನನಗೆ ಗಣ್ಮಕ್ಳು ಇಲ್ಲರಾ ಸಯ್
ನನಗೆ ಹೆಣ್ಮಕ್ಳು ಐದಾರ ಸಯ್
ಇಬ್ಬರು ಹೆಣ್ಮಕ್ಳು ಐದಾರ ಸಯ್
ಇವರಿಕೊಟ್ಟು ಲಗ್ನ ಮಾಡೇರಾ ಸಯ್

ಅಂತ ಮಾವ ಅಸೆಬಿದ್ದು ಆಗ ಹುಡುಗರು ಮುಂದೆ ಆತ ಹಿಂದೆ. ಆಹಾ ಕೋಮಟ್ರಾತ ಮನೆಗೆ ಬರ್ತಾರ ಈಗ ಗುಗ್ಗರಿ ಮಾರಿಕೆಂಡು ಗುಗ್ಗರೆಲ್ಲ ಕಾಲಿ ಮಾಡಿ ಕೆಂಡು ಬರೆ ಪುಟ್ಟಿ ಬಚ್ಚಿಕೆಂಡು ಬರ್ತಾನ. ಲೇ ಎತ್ತಗ ಹೋದರು ಮಕ್ಕಳು ನಮ್ಮ ಮೂವರು ಮಕ್ಕಳು ಎಲ್ಲಗೋದರು ಅಯ್ಯೊ ಕುಂತು ಕುಂತು ಬೇಸರಿಕೆಂಡಾರಂತೆ ಅಂಗ ಹೋಗಿ ಅಡ್ಡಾಡಿಕೆಂಬಾರಕ ಹೋಗ್ಯಾರ. ಇಲ್ಲಿಗೆ ಇಪ್ಪತ್ತು ವರುಷ ಆಗಿತ್ತು ಮನೆ ಬಿಟ್ಟು ಹೊರಗ ಹೋಗಿಲ್ಲ ನೀನು ಅನ್ನ,

ಮಾಡಿಕ್ಳುಲಾರದ
ಗಂಗಳ ತೊಳಿದಿಕ್ಕುಲಾರದ
ನೀನು ಏನೋ ಬೈದಿಯೋ
ತಾಯಿ ತಂದೆ ಇಲ್ಲದ ಹುಡುಗರು
ಎಷ್ಟು ನಮ್ಮ ಜೀವಾರೆ
ಎಪ್ಪಾ ಎಪ್ಪಾ ಎಂತಾರ ಸಯ್
ಎಮ್ಮ ಎಮ್ಮ ಅಂತಾರ ಸಯ್
ಹುಡುಗರು ಕಳದೇ ಬಿಟ್ಟರಾ
ಹುಡುಗರು ಹೋಗೆ ಬಿಟ್ಟರಾ
ಹುಡುಗರು ಕಳದೆ ಬಿಟ್ಟರಾ ಸಯ್
ಹುಡುಗರು ಇನ್ನ ಹೋಗ್ಯಾರ
ನೀನು ಏನೊ ಬೈದಿ ಮಾಡಿಕ್ಕಲಾರದ
ಅನಿಸಿಕೆಂಬಾರ್ದು ಅಂತಾ ಹೋಗಿ ಬಿಟ್ಟರಾ ಅಂತಾ
ಎಡಗೈಲಿ ತಿವಿದು ಬಿಡ್ತಾನ
ಅಕಿನಾ ಬಗ್ಗಿಸೆ ಬಿಟ್ಟಾನ
ಬಲಗೈಲಿ ಗುದ್ದಿ ಬಿಡ್ತಾನ
ಡಿಮಿಡಿಮಿಕಿ ಬಡಿತಾನ
ಎಪ್ಪಾ ಎಪ್ಪಾ ಸಾಯ್ತಿನೊ
ಹೇಳಿಲ್ಲ ಹೇಳಿಲ್ಲ ನಾನರಾ
ಬೈದಿಲ್ಲ ಬೈದಿಲ್ಲ ನನರಾ
ಭೂಮಿವಾಗ್ನ ನೋಡರಾ
ದೇವುರಾಘ್ನ ನೋಡರಾ
ಬೈದಿ ಕಳಿಸಿ ಅಂತಾನ
ಡಿಮಿಡಿಮಿಕ ಅಂತಾ ಗುದ್ದುತಾನ
ಇವರು ಗಂಡ ಹೆಂಡ್ತಿ ಗುದ್ಯಾಡ್ತಾರ

ಏ ಕರಕಂಡು ಬಂದ್ರೆ ಬೇಸಾಯ್ತು ಇಲ್ಲದಿದ್ದರೆ ತುರುವು ಕತ್ತಿರಿಸಿ, ಕೇರ್ ನಾಮ ಇಟ್ಟು, ಊರೆಲ್ಲ ಮೆರವಣಿಗೆ ಮಾಡಿ ಊರಾಗ ಬಿಟ್ಟು ಬರ್ತೀನಿ. ಆಹಾ ನನ್ನ ಮಕ್ಕಳು ಎಪ್ಪ ಎಪ್ಪಾ ಅಂಬೋರು ನಾನು ಮಗ ಮಗ ಅಂಬೋನು ಅಂಬೊತ್ತಿಗೆ ಆಗ ಗಂಡ ಹೆಂಡತಿ ಗುದ್ದಾಡುವತ್ತಿಗೆ,

ಮೂವರು ಹುಡುಗರು ಬರ್ತಾರ
ಎಪ್ಪಾ ಬಂದರು ನೋಡು ಮಕ್ಕಳು
ನನ್ನ ಗುದ್ದಿಗುದ್ದಿ ನೀನು ಬಡೀ ತಿಯೋ
ಎಪ್ಪಾ ಮಕ್ಕಳನೇನು ಕೇಳಪ್ಪಾ
ಎತ್ತಗೋಗಿದ್ದಿರಿ ಹುಡುಗರಾ
ಎಪ್ಪಾ ನಿಮ್ಮ ಕಾಲಾಗ ಬಡಿಸಿಕೊಂಡಿನೊ

ಎಮ್ಮಾ ನಿನ್ಯಾಕ ಬಡಿದ ನಮ್ಮ ನಮ್ಮ ಕಾಲಾಗ ಏನಪ್ಪಾ ನೀನ್ಯಾಕ ಬಡಿದಿ ಅಮ್ಮಾಗ. ನೋಡಪ್ಪಾ ಹುಡುಗರು ಹೋಗ್ಯಾರ ಒಂದು ಘಂಟೆ ಆತು ಬಂದಿಲ್ಲ ಅಂದಿದ್ದಕೆ ನೀನು ಏನೋ ಬೈದಿಯಿ ಮಾಡಿಕ್ಕಲಾರದೆ ಅದಕ್ಕೆ ಹೋಗಿಬಿಟ್ಟಾರ. ಒಬ್ಬರು ಕೈಯಾಕ ಇರಲಾರದು ಅಂತಾ ಬಾಳ ಊಶಾರು ಹುಡುಗರು ಅಂತಾ ಆದರೆ ನಾನು ಗುಗ್ಗರಿ ಪುಟ್ಟಿ ತಗಂಡು ತುರುಬು ಇಡಕಂಡು ಎಡಗೈಲಿ ಬಗ್ಗಿಸಿ ಬಲಗೈಲಿ ಬಡಿದು ಬಿಟ್ಟೆನಪ್ಪಾ. ಇನ್ನು ಸ್ವಲ್ಪ ಇದ್ದರೆ ನಿಮ್ಮಮ್ಮನ ಕೊಲ್ಲೆಬಿಡುತಿದ್ದಿನಿ ನಿಮ್ಮ ತಾಯಿನ ಉಳಿಸುತ್ತಿದ್ದಿಲ್ಲ. ಅಯ್ಯೊ ಎಪ್ಪಾ ನಮ್ಮ ಕಾಲಾಗ ನೀನ್ಯಾಕ ಒದ್ಯಾಡುತ್ತಿದ್ದಿರಪ್ಪಾ ಸಾಯಿ ಬ್ಯಾಡಪ್ಪಾ ನಿನಪಾದಕ ಶರಣು ನನ ತಾಯಿ ಏನಂದಿಲ್ಲ ನಮಗೆ ತಿಂದು ತಿಂದು ಬ್ಯಾನರಿಕೆಂಡು ಕೈಕಾಲು ಇಡಕಂತಾವ ಅಂತ ಅಂಗ ಅಡ್ಡಾಡಿ ಬರೋಣ ಅಂತ ಬೇವ್ಯಿನ ಗಿಡಿದ ಕೆಳಗೆ ಊರು ಕೆಳಗೆ ಕುಂತಿದ್ದಿವಿ ನಾವು. ಆಹಾ ಅಂಬೊತ್ತಿಗೆ ಆತ ಬಂದ ಹಿಂದಿಂದೆ ಎಪ್ಪಾ ಶರಣು ಸಾವುಕಾರ ಎಲ್ಲಪ್ಪ ಅಯ್ಯೋ ಶರಣರ್ರೀ ಡಾವಡಿಂಗಲ ಮಾರ್ವಾಡಿ ಶೇಠ್ ದವನೆ ಬರ್ರೀ ಕೂಡರಿ ಅಂದ ಆಗ ಕುಂತಕಂಡ ಬಂದು ಅಯ್ಯೊ ಏನ್ರಿ ಇವು ನಿನ ಮಕ್ಕಳು ಏನ್ರೀ ಛಿ ಛಿ ಛಿ ನನ್ನ ಮಕ್ಕಳು ಅಲ್ಲಪ್ಪ ಮತ್ತೆ ಎಂಗ ಈ ಮಕ್ಕಳು ಬಂದರು ಅಂತ ಕೇಳಿದ. ನೋಡಲಿ ಕೌಲೇಶು ಕೋಟುದಾಗ ನಾನು ಅಂಗಡಿ ಮನೆ ಮೂರಂಕಣ ಮನೆ ನಂದು ಅಂಗಡಿ ಯಾಪಾರ ಮಾಡೋನ ಈಗ ತಂದೆ ಸತ್ತೋದ ತಾತ ಸತ್ತೋದ ಅವ್ವ ಸತೋದಳು ತಾಯಿ ತೀರೋದಳು ಈಗ ಐದು ವರುಷ ಹುಡುಗರು ಇದ್ದಾಗ ಅವರ ಕಕ್ಕ ಬಂದು ತಂದಿಗೆ ತಮ್ಮನವರು ಇಬ್ಬರು ಐದಾರ ಬಂದು ಮಕ್ಕಳಾಗಿಲ್ಲ ಅವರಿಗೆ ಬಂಜವರು ಬಂದರು ನಾಯ್ಕರನ ಕರಕಂಡು ಬಂದು ಆಗ ನಮ್ಮ ಊರೆಲ್ಲ ಹಾಳು ಮಾಡಿಬಿಟ್ಟರು. ಅಯ್ಯೊ ಏನಪ್ಪಾ ಇವರು ಕೈಕಾಲು ಕಟ್ಟೆ ಆಸ್ತಿ ಎಲ್ಲಾ ಹೊಯ್ದರು ಅಯ್ಯಾ ನಾವೆ ಕೈಕಾಲು ಬಿಚ್ಚಿ ಅಳಬ್ಯಾಡ್ರಪ್ಪಾ ನಾನು ಜೋಪಾನ ಮಾಡ್ತೀನಿ ಅಂತಾ ಕರಕಂಡು ಬಂದೆ ಈಗ ಅಂಗಡಿ ಗುಗ್ಗರಿ ಯಾಪಾರ ಮಾಡಿ ಅಂಗಡಿ ಇಟ್ಟುಕೊಂಡು ಅಂಗಡಿಯಾಪಾರ ಮಾಡಿ ಈ ಹುಡುಗರ್ನ ಜೋಪಾನ ಮಾಡ್ತೀನಿ ನಾನು. ಆಹಾ ಇವರು ತಾಯಿ ತಾಯಿ ಅಂತಾ ಇವರು ಅಂತಾರ ಮಗ ಮಗ ಅಂತಾ ನಾವು ಅಂತೀವಿ ಏಸು ವರುಷ ಆತು ಇಲ್ಲಿಗೆ ಇಪ್ಪತ್ತು ವರುಷ ಆತು. ಆಹಾ ಮತ್ತೆ ಬಂದೀ ನನ್ನ ಹೊರಗ ಕಂಡಿಲ್ಲೆ ನನಗೆ ಒಂದಿಸನ್ನ ಹೇಳಿಲ್ಲೆ ನಾನು ಮಾರ್ವಾಡಿಯವನಲ್ಲ ನಿಮ್ಮ ಹುಡುಗರು ಬಂದಾವ ನಿಮ್ಮ ಜಾತಿಯವರು ಅಂತ ಹೇಳಿಲ್ಲವ ಅಯ್ಯಾ ಯಾಕೆ ಹೇಳನಪ್ಪಾ ಗುಗ್ಗರಿ ಅಂತೀನಿ ಬರ್ತೀನಿ ನೀನಾಗಿ ಕೇಳಿದರೆ ಅಲ್ಲಾ ನಾನಾಗಿ ನಾನು ನೋಡಿಲ್ಲಪ್ಪ ಅವತ್ತು ನೋಡೀನಿ ನಡ್ರೆಪ್ಪಾ

ಇಪ್ಪತ್ತು ವರುಷ ಜೋಪಾನ ಮಾಡಿಯಿ ಅನ್ನ ಇಟ್ಟಿ ಜೋಪಾನ ಮಾಡಿಯಿ ಸರಿ ಓದು ಕಲಿಸಿಯಾ ಯಾ ಓದು ಕಲಿಸಲಪ್ಪಾ ನಾಕೊಪ್ಪತ್ತು ಊಟ ಮಾಡಸು ಅಂದರೆ ಮಾಡಸ್ತೀನಿ ಈ ಹುಡುಗರು ಓದು ಕಲಿಸಾಕ ನನಕೈಲಿ ಆಗಾಕಿಲ್ಲ ಇತ್ತಾಗ ಗುಗ್ಗರಿಯಾಪಾರ ಮಾಡ್ಲಾ ಇತ್ತಾಗ ಹೆಡ್ತೀಗಿ ನೀರು ತಂದಾಕ್ಲಾ ಇತ್ತಾಗ ಕಟ್ಟಿಗೆ ತಂದಾಕ್ಲಾ ಇತ್ತಾಗ ಅಂಗಡಿ ಯಾಪಾರ ಮಾಡ್ಲಾ ನನಗ ಸಾಧ್ಯ ಆಗೋದಿಲ್ಲ. ಅಂಗಲ್ಲರ್ರೀ ಈ ಕಾಲಕ್ಕೇನು ಜೋಪಾನ ಮಾಡ್ತಿ ಮದುವೆ ಮಾಡ್ತಿ ಅವರು ಹೆಂಡರು ಮಕ್ಕಳು ನೆಳ್ಳಗ ಕುಂತಕಂಡು ಊಟ ಮಾಡಾದಾಂಗ. ಆಹಾ ಮಾರ್ವಾಡಿ ಶೇಠ್ ಅಂದರೆ ಬಿಸಿಲಿಗೆ ಹೋಗಬಾರದು ಮುಖ ಬಿಸಿಲು ಬಡಿಬಾರದು ಅಂಗ ಇನ್ನ ಊಟ ತೋರಸಬೇಕ್ರಿ ನನ್ನ ಕೈಲಿ ಆಗೋದಿಲ್ಲವಾ ನೋಡರಿ ಹಿಂದಲ ಕಾಲ ಇವರು ತಾತಗೆ ನಮ್ಮ ತಾತನ ತಂಗಿನ ಮಾಡಿಕೆಂಡಾರ. ಆಹಾ ಆಗಲಿದ್ದ ನಾವು ಮಾಡಿಕೆಂಡಿಲ್ಲ ಇವರು ಮಾಡಿಕೆಂಡಿಲ್ಲ ಏನ್ರಿ ನೋಡರಿ ಇವರು ಅಳಿಯನೋರು ನಾನು ಓದುಕಲಿಸ್ತೀನಿ ನನಗೆ ಇಪ್ಪತ್ತು ವರುಷ ಬಿಟ್ಟುಬಿಡಲಿ. ಆಹಾ ನಿಂದೆ ಹೆಸ್ರು ನಂದೇನು ಹೆಸ್ರು ಇಲ್ಲಪ್ಪಾ ಮುಂಚ್ಯಾಗ ಕೈಲಿ ಇಡದವನದೆ ಹೆಸ್ರು ಏನಪ್ಪಾ ನಿನ ಧರ್ಮಲಿಂದ ನನಧರ್ಮದಿಂದ ತಾಯಿ ತಂದೆ ಇಲ್ಲದ ಮಕ್ಕಳು ಅವರ ಇವರ ಕೈಯಾಗ ದೊಡ್ಡೋರು ಆಗಲಿ,

ಅವರೆ ದೊಡ್ಡೋರು ಬೆಳಿತಾರ
ಕಾಲಕ್ಕೆ ಅಲ್ಲಪ್ಪಾ
ಮುಂದಲ ದಾರಿ ನೋಡಪ್ಪಾ
ಮುಂದಲ ದಾರಿ ನೋಡು

ಬೇಸು ಅರ್ಥ ಮಾಡಿಕಂಡ ಈತ ಕರೇಲೆ ಈಗೇನು ದೊಡ್ಡವು ಮಾಡ್ತೀನಿ ಊಟ ಮಾಡಿ ಊಟ ಮಾಡಿ ಬೇಸು ಬೆಳಕಂತಾರ. ಮದುವೆ ಮಾಡ್ತೀನಿ ಎಂಗನ ಒದ್ದಾಡಿ ಅಂಗಡಿ ಯಾಪಾರ ಮಾಡಿ ಹೆಂಡರು ಬಂದ ಮೇಲೆ ಮಕ್ಕಳು ಹುಟ್ಟೆರೆ. ಮಕ್ಕಳಿಗೇನು ಆಕ್ತಾರ ಆಗ ಅವರೇನು ಉದ್ದಾರ ಆಗ್ತಾರ ಬೇಸಲ್ಲ ಕರೇಲೆ ಇವರು ನಾಕು ಅಕ್ಷರ ಓದಿಕಂಡರೆ ಬೇಸಲ್ಲ ಆಹಾ ಏನಪ್ಪಾ ಅತ್ತಗಿದ್ದರೆ ಮಕ್ಕಳೆ, ಇತ್ತಗಿದ್ದರೆ ಮಕ್ಕಳೆ ಹೊತ್ತಿಗೆ ಮೂರು ಸರ್ತಿ ಬಂದು ಮಾತಾಡ್ತೀನಿ ನೋಡಲಿ ಮಾರ್ವಾಡಿ ಡಾವುಡಿಂಗಲದೋರ ನೀನು ಅಳಿಯನೋರು ಅಂತಿಯ ನನಗೆ ಮಕ್ಕಳು ಇದ್ದಂಗ ಈ ಹುಡುಗರ್ನ ಜೋಪಾ ಮಾಡೀನಿ. ಈಗ ನೀನು ಯಾರ್ನ ಬಡಿಬಾರ್ದು ತಾಯಿ ತಂದೆ ಇಲ್ಲದ ಮಕ್ಕಳು ಅಲ್ಲಿದ್ದರೆ ಒಂದೆ ಇಲ್ಲಿದ್ದರೆ ಒಂದೆ ಇಲ್ಲಿ ಬಂದು ಊಟ ಮಾಡಿದಾಗ ಏ ಅವರು ಕುಲದಾಗ ಹೋಗಿ ಊಟ ಮಾಡಿಬರ್ತೀಯಾ ಅನ್ನಬಾರ್ದು ಆಹಾ,

ಅಲ್ಲಿದ್ದರೇನು ಮಕ್ಕಳೆ
ಇಲ್ಲಿದ್ದರೇನು ಮಕ್ಕಳೆ
ಊಟ ಮಾಡಲಿಕ್ಕೆ ಬಂದಾಗ
ಸುಮ್ಮನೆ ನೀನು ಇರಬೇಕು
ಎಪ್ಪಾ ದೇವ್ರು ಆಣೆ ಏನಂಬಂಗಿಲ್ಲ
ಪಾದಾಗ್ನಿ ನೀನಾಗಿ
ಏನಾಗಿ ನಾನು ಅಂಬೋದಿಲ್ಲ
ಹುಡುಗರು ಇಡಕಂಡು ಬಂದಿದ್ದೆ
ನನಗೆ ಸಂತೋಷ ಆಗೈತೆ ಆಹಾ
ಎಪ್ಪಾ ಆಗ ನಾನು ಜೋಪಾನ ಮಾಡ್ತಿನಪ್ಪಾ
ಎಪ್ಪಾ ಹುಡುಗರಾ
ಹೋಗ್ರಿ ನೀವು ಕಲಿಯಾಕ
ಸೋದರ ಮಾವನ ಮನೆಗೆ
ಎಪ್ಪಾ ಓದು ಕಲ್ತಿಕಂಡರೆ ಮುಂದಕ
ಬೇಸು ಉದ್ದಾರ ಆಗ್ತೀರಪ್ಪಾ
ಇಲ್ಲಪ್ಪಾ ನಿನ್ನ ಬಿಟ್ಟು ಹೋಗದಿಲ್ಲಪ್ಪೊ
ಎಂಗ ನಾವು ಇನ್ನ ಹೋಗನಾ
ನಿನ್ನ ನೋಡವದು ಯಾರುರಾ
ಮಕ್ಕಳು ಇಡದವರು ನೀವುರಾ
ನಮ್ಮನ್ನು ಕೈ ಇಡದೀಯ
ಕೈಯ ನಮ್ಮನು ಇಡಿದಿಯೊ
ನಮ್ಮನ್ನು ಜೋಪಾನ ಮಾಡಿಯೊ
ಪಾದ ಇಡಕಂಡು ಅಳತಾರೆ
ಸಾವುಕಾರ ಎಲ್ಲಪ್ಪನ ಪಾದ ಇಡಿದು
ಈಗ ದುಃಖ ಮಾಡ್ತಾನ
ಮತ್ತೆ ಬಂದೆ ಕುಲಾಗೆ
ಅಳಬ್ಯಾಡರೆ ಹುಡುಗರೆ
ಕೇಳರಿ ನನ್ನ ಮಕ್ಕಳಾ
ಅಂತಾ ಹೇಳೊ ಹೊತ್ತಿಗೆ
ಹೋತಿ ವಯ್ಯಾ ಸಾವುಕಾರ ಎಲ್ಲಪ್ಪಾ
ಹೋಗಿ ಬರ್ತೀನಮ್ಮಾ ತಾಯಿ
ಹೋಗಿ ಬರ್ರೇಪ್ಪಾ
ಅಂಬೊತ್ತಿಗೆ
ಹುಡುಗರು ಕರಕಂಡು ಬಿಟ್ಟಾನ ಸಯ್
ಸ್ವಾದರ ಮಾವ ನೋಡರಾ ಸಯ್
ಮನೆಗೆ ಕರಕಂಡು ಬಂದಾರ ಸಯ್
ಮಾವನ ಮನೆಗೆ ತಾನೆ ಕರಕಂಡು ಬಂದಾರ

ಕರಕಂಡು ಬಂದ ಮ್ಯಾಲೆ ನೀರು ಕಾಸಿ ಮಕ್ಕಳಿಗೆ ಹಾಕಿದ ಆಗಿನ್ನವರ ಬಟ್ಟೆಗಳು ತಂದಾ ಹುಡುಗರು ಕಾಸಿ ಬಂದೆ ಹಾಕ್ಯಾನ,

ಕಾಸಿ ಬಂದೆ ಹಾಕ್ಯಾನ
ಟೋಪಿ ತಲೆಗೆ ಇಟ್ಯಾನ
ಬಂಗಾರ ಟೋಪಿ ಇಟ್ಟಾರ
ಹುಡುಗರಿಗೆ ಹಾಕಿನೋಡ್ಯಾನ
ಹುಡುಗರಿಗೆ ಊಟ ಮಾಡಿಸ್ತಾನ
ಇಪ್ಪತ್ತು ಮಂದಿ ಒಡ್ಡರು
ನಲ್ವತ್ತು ಮಂದಿ ಉಪ್ಪಾರರು
ಊರ ಹೊರಗ ಕರಕಂಡು ಬಂದಾನ
ಇಸ್ಕೂಲನ್ನು ಕಟ್ಟಿಸ್ಯಾನ

ಸ್ವಸಂತ್ರ ಇಸ್ಕಾಲ್ ಕಟ್ಟಿಸಿಬಿಟ್ಟ, ನಮ್ಮ ಮಕ್ಕಳಿಗೆ ನನಗೆ ನನ್ನ ಅಳಿಯನೋರಿಗೆ ನನಗೆ ಇನ್ನ ಬ್ಯಾರೊರು ಯಾರಿಗಿಲ್ಲಪ್ಪಾ, ಕಟ್ಟಿಸಿ ಆಗ ಒಂದು ಯಾನ ನಾಕು ಪುಟ್ಟ ಮಣ್ಣು ತಂದಾಕಿಕಂಡ ತಂದಾಕಿ ಜಾಂಡ ಏರಿಸಿದ ಚೀಲಮೊಂಡಾಳು ತಂದ ಊರಿಗೆಲ್ಲವು ಅಂಚ್ಯಾನ ಊರಿಗೆಲ್ಲ ದಾನ ಮಾಡ್ಯಾನ ದಾನ ಮಾಡಿಸಿ ಹುಡುಗರಿಗೆ

ನಮ್ಮ ದೇವ್ರುಗೆ ಶರಣಪ್ಪ
ನಮ್ಮ ದೇವ್ರಗೆ ಶರಣಾದೆ
ಖಂಡೇರಾಮನಿನಗೆ ಶರಣಯ್ಯೊ
ತುಳಸಿ ದುಕ್ಕ ಶರಣಮ್ಮೊ
ಮನೆ ದೇವ್ರುನ ನೆನಿಸ್ಯಾರ
ಅವ್ರ ಇತ್ತಾಗ ಬಂದಾರ ಸಯ್
ಭೂಮಿ ತಾಯಿಗೆ ಕೈ ಏನಾಗಿದಾರ ಸಯ್
ಭೂಮಿ ತಾಯಿಗೆ ಕಾಯಿ ಒಡದಾರ ಸಯ್
ಅವರು ಕುಂತೆ ಬಿಟ್ಟಾರ
ಭೂಮಿ ತಾಯಿ ಮ್ಯಾಲಮ್ಮ
ಬಲಗೈಲಿ ಕೈ ಮುಗಿದಾರ ಸಯ್
ಬಲಗೈಲಿ ಕೈ ಹಿಡ್ದಾರ ಸಯ್
ಸರಸ್ರತೋನಾಮ ಬರದಾರ ಸಯ್
ಕಾಗುಣಿತಾಗಿ ಬರದಾರ ಸಯ್
ಹುಡುಗರು ಕಣ್ಣೀಲಿ ನೋಡ್ಯಾರ ಸಯ್
ಒಂದೆ ಕೊಲ್ಲಿಗೆ ನೋಡ್ಯಾರ ಸಯ್
ಎಲ್ಡೇ ಮುಂದೆ ಬರೀತಾರ
ಒಂದೆ ವರುಷ ಕೊಟ್ಟಾರೆ
ಎಲ್ಡೇ ಇನ್ನ ಬರೀತಾರೆ
ಏಯ್ ಬರದು ಬಿಟ್ಟಾರು ಅವರು ನೋಡರಾ ಸಯ್
ಪಟ ಪಟ ಅಂತಾ ಓದ್ತಾರ ಸಯ್
ಬಳ್ಳು ತೋರಿಸಿ ಹೇಳ್ತಾರ ಸಯ್
ಹುಡುಗರು ಒಳ್ಳೇರು ಐದಾರ ಸಯ್
ಒಳ್ಳೆಯವರು ಇನ್ನವರು
ಹಗಲು ರಾತ್ರಿ ಅಣ್ಣಾಯ್ಯೋ
ಅಣ್ಣ ನಿದ್ದೆ ಇಲ್ಲ ಕಣ್ಣಿಗೆ
ಕಣ್ಗೆ ನಿದ್ದೆ ಇಲ್ಲಣ್ಣ
ನಿದ್ದೆ ಬಂದು ತೂಗುತಾದಣ್ಣ
ಏಬಿಸಿ ನೀರು ಮೊಖ ತೊಳಿತಾರೆ
ನಿದ್ದೆ ಹೋಗಿ ಬಿಡುತೈತೊ
ಎಮ್ಮ ಹುಡುಗರು ಬಿಸಿನೀರು ತೊಳಸ್ತಾನ
ಊಟ ಮಾಡಿ ಕುಂತುವಾಗರಾ ಸಯ್
ಇನ್ನ ಸರವೊತ್ತು ತನಕರಾ ಸಯ್
ಹುಡುಗರ ಓದಿ ಕುಳಿತಾರ ಸಯ್
ತಾಸು ಹೊತ್ತು ನಿದ್ದೆ ಮಾಡಸ್ತಾನ ಸಯ್
ಕೋಳಿ ಕೂಗುವಾಗರ ಸಯ್
ಮತ್ತೆ ಹುಡುಗರ ಎಬ್ಸಿಸ್ತಾನ ಸಯ್
ಆಗ ಐದು ಗಂಟೆ ತನಕರಾ ಸಯ್
ಹುಡುಗರು ಓದಿ ಕಳಿಸ್ತಾನ ಸಯ್
ಮತ್ತೆ ಹುಡುಗರ ಎಬ್ಬಿಸ್ತಾನ ಸಯ್
ಸಾನ ಮಾಡರಿ ಅಂತಾನ ಸಯ್
ಊಟ ಮಾಡರಿ ಅಂತಾನ ಸಯ್
ಮತ್ತೆ ಹುಡುಗರ ಕುಂದರಸ್ಯಾನ
ಹಗಲು ರಾತ್ರಿ ಓದಿಸ್ತಾನ

ಎಮ್ಮೊ ಎಲ್ಲಿಗೋತಿವಂದರೆ ಹುಡುಗರು ಎಲ್ಲೆಲ್ಲಿಗೆ ಬಿಡದಿಲ್ಲ ಆತಮ್ಮ ಬಿಡದಿಲ್ಲ ಎಲ್ಲೆಲ್ಲಿ ಬಿಡುವಲ್ಲಮ್ಮೊ ವಯಸ್ಸು ಬಂದ ಮೇಲೆ ನೋಡರಿ ನೀವು ಓದಂಗಿಲ್ಲಪ್ಪ ಈಗ ನೀವು ಓದಬೇಕು ವಯಸ್ಸು ಬಂದ ಮ್ಯಾಲಪ್ಪ ಇದ್ಯೆ ಕಲಿಯಂಗಿಲ್ಲಪ್ಪಾ. ಈಗ ಇಪ್ಪತ್ತು ವರುಷ ಆಗೈತಾಲಿ,

ಇದ್ಯೆ ಬುದ್ದಿ ಬಂದೈತೋ
ಇನ್ನ ಇಪ್ಪತ್ತು ವರುಷಾದರೆ
ನಮ್ಮಿಗೆ ನೀವು ಎದುರಾಡತಿರಿ
ಹಗಲು ರಾತ್ರಿ ಓದ್ಯಾರ ಸಯ್
ಒಂದೆ ವರುಷ ಓದ್ಯಾರೆ ಸಯ್
ಎಲ್ಡೆ ವರುಷ ಓದ್ಯಾರ ಸಯ್
ಮೂರೆ ವರುಷ ಆಗೈತೆ ಸಯ್
ಐದು ವರುಷಕೆಲ್ಲ ನೋಡರಾ ಸಯ್
ಹುಡುಗರ ವಯಾಸೆ ಬಂದೈತೊ
ಐದು ವರುಷ ನೋಡರಾ
ಹುಡುಗರ ವಯಸೆ ಬಂದೈತೊ
ಆತ್ತೆ ಬಂದು ನೋಡರಾ ಸಯ್
ಯಾಕಪ್ಪಾ ಮಕ್ಕಳಾ ಬರದಿಲ್ಲ ಸಯ್
ಮನೆಗೆ ನೀವು ನೋಡರಾ ಸಯ್
ಈತನ ಏನನ್ನು ನುಡಿತಾನೇನರಾ ಸಯ್
ಎಪ್ಪಾ ಏನು ಅಂಬೊದಿಲ್ಲ ರಾ ಸಯ್

06__MS_346-KUH

ಓದಿಕಳ್ರ ಜರಾ ಅಂತಾ ಹೇಳ್ತಾನ ಏನು ಅಂಬೊಗಿಲ್ಲಪ್ಪಾ ಹಗಲು ರಾತ್ರಿ ಓದಿಸ್ತಾನೆ ಕೇಳಲೋಹುಡುಗರಾ ನಿಮ್ಮಗೇನನ ಊಟ ಕಮ್ಮಿ ಆಗೈತಾ ಹೇಳರಿ ಅಂಬೊತ್ತಿಗೆ ಇಲ್ಲಪ್ಪಾ ಬೇಸು ಹಾಲುಸಕ್ಕರೆ ಗೋದಿ ರೊಟ್ಟಿ ಬೇಕಾದಂಗ ಊಟ ಮಾಡಸ್ತಾನ. ಆಹಾ ಇದಂತು ನಿದ್ದೆ ಮಾಡಿ ಗೊಡ್ಸಂಗಿಲ್ಲ. ಆಹಾ ಓದಿರಿ ಎದ್ದೇಳರಿ ಅಂತಾನ ನಿದ್ದೆ ಬಂದರೆ ಏ ಮುಖ ತೊಳಕರಿ ಅಂತಾನ ಇನ್ನೆನು ಮಾಡಕಬೇಕು ಅಯ್ಯೋ ಕಲೀಬೇಕಪ್ಪಾ ಬಡಿದು ಬಡಿದು ಏಳುತಿದ್ದಾಗ ಸುಮ್ಮನೆ ಬಾಗಿ ಹೇಳುವನು ಒಳ್ಳೇದಪ್ಪಾ ನಂಮ್ಮಿಗೆ ನೀವು ಹೇಳತೀರಾ ನಿಮ್ಮ ತಲ್ಲಿಗ ನಾವು ಬರತೀವಿ ಮುತ್ತು ಕೋಟಕ ಬರತೀವಿ ತಾಳಿ ಕೋಟಕ ಬರತೀವಿ ನೀನಿಲ್ಲದರೆ ನಮ್ಮಿಗೆ ಆಗಕಿಲ್ಲ ನಮ್ಮಿಗೆ ಬುದ್ದಿ ಹೇಳತೀರಿ ನೀವು ದೇಶ ಜೋಡು ಮಾಡವರು ಗಂಡ ಹೆಂಡ್ತಿ ಕಲಸವರು ನೀವೆ ನಿಮ್ಮ ತಾಳಲಿಲ್ಲ ನಮ್ಮಗೆ ಲೋಕಕೆಲ್ಲಾ ನೀವು ಕಲಿಸವರು ಲೋಕಕೆಲ್ಲಾ ನೀವು ರಾಜ್ಯವು ರಾಜ್ಯನೆ ನಿಮ್ಮದು ಅಷ್ಟೆ ಅಗಲ್ಲಪ್ಪಾ ಅಂತ ಹೇಳಿದಾ ಬಂದಾ ಆಹಾ,