ಇದು ಇವ್ನ ಲೋಕಕೆ ನೋಡಮ್ಮ
ಅಣ್ಣನಾಸ್ತಿ ತಮ್ಮಗೈತಮ್ಮ
ಅಣ್ಣ ಮಕ್ಕಳಿಗೆ ಇಲ್ಲರ ಸೈ
ಆಗ ತಮ್ಮಗೆ ವೈತಿರ
ತಮ್ಮ ಆಸ್ತಿ ತಿನ್ನತಾನ
ತಮ್ಮ ಹೆಸ್ರು ವೈತಿ

ಅಂತ ಇನಾಸು ಬೋರ್ಡು ಹಾಕ್ತಿದ ಹಾಕಿ ಏನ್ಮಾಡ ಹುಡುಗುರು ಯಾಪ್ಪಾ

ನಾವು ಬರುತ್ತೀವಿ ನಮ್ಮಪ್ಪ
ನಡೆಯೋ ಕಕ್ಕ ಹೋಗಾನ

ಅಂಬೊತ್ತಿಗೆಲ್ಲಾ ಆಗನವಗೆ ಕುದ್ರುಗಳು ಆಕಳುಗಳು ದನಗಳೆಲ್ಲ ಬಿಟ್ಟು ಮನಿಗೆ ಬೀಗ ಹಾಕಿ ಹುಡುಗುರು ಸೇದಗ್ಗ ತಗಂಡು,

ಕೈಕಾಲೆ ತಿರುಗ್ಯಾಕಿ
ಎಂಥ ಕಕ್ಕ ವೈದಾರ
ಕೈಕಾಲೇ ಎಲ್ಲಾ ತಿರುಗ್ಯಾನ
ಎಂಥ ಕಕ್ಕ ವೈದಾರ

ಕಂಬಕ ಹಾಕಿ ಕಟ್ಟ್ಯಾನ
ಯಾಮ್ಮಾ ಮಕ್ಕಳಾಗಿ ಅವನು ಕಟ್ಟಿನ
ಐದು ವರುಷದ ಹಸುಮಕ್ಕಳಾ
ದೇವುರಾ ದೇವುರಾ
ಕಂಬಕಿ ಹಾಕಿ ಕಟ್ಟಿನ
ಯಾರು ಹೇಳಕಾ ಇಲ್ಲರೆ
ಬಾಕಿ ಬಿಡಾಕ ಹುಡುಗರಿಲ್ಲರ
ಯಪ್ಪಾ ನಮ್ಮನು ಹೊಡೆಬೇಡೆ
ಕಕ್ಕ ನಾವು ಬರೋದಿಲ್ಲ ಸಿದ್ದೊಯ
ಸಿದ್ದೊಯಿ ನಾವು ಬರೋದಿಲ್ಲ
ಅಡಡ ಬರ್ಹಾಕ್ಯಾರ ಇಲ್ಲರ
ಸತ್ತರೆ ನನಗೆ ಐತಿರೊ
ಅಣ್ಣ ಮಕ್ಕಳಾ….
ಆದ್ರೆ ಎನೈತಿರ
ಸತ್ತರೆ ಮ್ಯಾಲೆ ಐತಿರ
ಹಾಳಾದರೆ ಏನ ಅಣ್ಣ ಮಕ್ಕಳು
ಅಂಥ ಪಾಪಿಷ್ಟ ಅವನ ಕೈಕಾಲು ಮುರಿದು
ಹಿಂದೆಕಟ್ಟಿ ಆಗ ಸೇದಗ್ಗ ಹಾಕಿ ಆಹಾ
ಕುದುರೆ ಮ್ಯಾಲೆ ಕುಂತಾನ ಸೈ
ಕಣ ಕಣ ಕಂಪನಿ ಹೋಡೆದನಾ ಸೈ
ನಾಯಿಗಳ ಕರ್ಕಂಡು ಬಂದರ ಸೈ
ನಾಯಕ್ರ ಕರರ್ಕಂಡು ಬಿಟ್ಟಾನ ಸೈ
ಸಿದ್ದೋಯ ಪಾಪ ಡೌಡರ ಸೈ
ಕೇಳಿದವನು ಹೊಡೆದು ಕೊಂತಾನ
ಅವನೇ ಕರ್ಕಂಡು ಕುದುರೆ ಮ್ಯಾಲ
ಕವಲೇಶ ಕೋಟ ಬಿಟ್ಟಾನ
ದರೆಗಾವುಗೆ ಬಂದಾನ
ಕುದುರೆ ಮ್ಯಾಲಿಂದ್ದ ಕೆಳಗಿಳಿದ
ಲೆ ಕುದುರೆ ಸಲುಹೊನೆ
ಕುದುರೆ ಸಲುಹೊ ಬ್ಯಾಗನೆ
ಬ್ಯಾಗರ ಸುತ್ತಾ ಬಾಗಿಲು
ನಿನ್ನ ಕುದರೆ ಕಟ್ಟಾಕಾಗಲಿ
ಕುದುರೆ ಕಟ್ಟಾ ಮನ್ಯಾಗ
ಕುದುರೆಗೆ ವೋಮ ಹಾಕಲಿ

ಹತ್ತಿಕಾಳು ಹುಳ್ಳಿಕಾಳು ಇತಪ್ಪ ಅಂತ ಹೇಳ್ದ ರಾಗಿ ಕತ್ತಿ ರಾಗ ಬಂದು ಕುರ್ಚಿ ಮ್ಯಾಲೆ ಕುಂತ ತಮ್ಮ ಖಂಡೋರಾವ ಬಂದ ನಾಯ್ಕರಿಗೆ ಆರು ನೂರು ನಾವ್ರು ರೂಪಾಯಿ ಕೊಟ್ಟ ಅವ್ರು ತಗಂಡು ಹೋದ್ರು ಕಳ್ರು ಧತ್ಯೆ ಮಕ್ಕಳು ದಡೇಗಾವಿನಿಂದ ಬಡೇಗಾವಿಗೆ ಹೋದ್ರು ಹೋದ ಮ್ಯಾಲೆ ಆಗ ಏನಂದ ಚಿಕ್ಕ ತಮ್ಮ ಬಂಡೇರಾಯ ಅಣ್ಣಾ,

ಅಣ್ಣಾ ಮಕ್ಕಳ ಯಾಕ ಕರ್ಕಂಡು ಬಂದಿನ
ಅಣ್ಣಾ ಮಕ್ಕಳ ಎಲೈದರಾ
ಅಣ್ಣಯ್ಯ ಕರಕಂಡು ಬಂದಿಲ್ಲ ಸೈ
ಅಣ್ಣಯ್ಯ ಕರಕಂಡ ಬಂದಿಲ್ಲ ಸೈ
ಹಿಂಗೆ ಕರೆತರ ಅಣ್ಣಯ್ಯ ಸೈ
ನೀನೇ ಸಿದ್ದೋಯಿ ಅಣ್ಣಯ್ಯ ಸೈ
ಅಣ್ಣ ಮಕ್ಕಳೇ ಬಂದಿಲ್ಲ
ಕೇಳೋ ಅಣ್ಣಯ್ಯ ಸಿದ್ದೋಯಿ

ಅಂದ್ರೆ ಒಬ್ಬನಾದ್ರು ಅಣ್ಣ ತಮ್ಮಾಂದಿರು ಬಂದ ತಾಯಿಗೊ ತಂದೆಗೂ ಹುಟ್ಟಿದಮ್ಯಾಲೆ ಒಬ್ರಿಗನ್ನ ಕನಿಕರ ಇರತೈತೆ ಮಕ್ಕಳಿರ್ಲಿ ಇರಲಿಕ್ಕೆ ಒಬ್ಬಬನಿಗೆ ಇರದಿಲ್ಲ ಒಬ್ಬನಿಗೆ ಇರತೈತೆ ಅಂದ್ರೆ ನವೇನು ಏನಂತದೆ ಲೇ – – – ಅಣ್ಣ ಮಕ್ಕಳು ನನ್ನ ಹಿಂದೆ ಬರಾಕ ನಿಂತಬಿಟ್ಟರು ಅದಕ್ಕೆ ಕೈಕಾಲು ಹಿಂತಿರುವಿ ಸೇದಗ್ಗ ಹಾಕಿ ಬಿಗಿದಾಕಿ,

ಕಂಬಕ ಬಿಗಿಸಿ ಬಂದಿನಿ
ಕಂಬಕೆ ಕಟ್ಟಿ ಬಂದಿನಿ
ಅಣ್ಣ ಮಕ್ಕಳು ಕಡುಕು ಜಾಗಲಿ ಸೈ
ಸತ್ತಿದು ಒಳ್ಳು ನೋಡ್ಯಾರ ಸೈ
ಅಣ್ಣ ಮಕ್ಕಳು ಭೂಮಿಯಲ್ಲಿ ಉಳಿಸ್ಯಾರ
ಅಣ್ಣಾ ಮಕ್ಕಳು ಅಣ್ಣಯ್ಯ
ಭೂಮಿಮ್ಯಾಲೆ ಉಳಿಸ್ಯಾರ ಸೈ
ಅನ್ಣ ಮಕ್ಕಳು ಬೆಳೆದನಂತರ
ನಮ್ಮ ಜೀವ ಕಳೆದು ಬಿಡ್ತಾರ
ಅಣ್ಣ ಮಕ್ಕಳ ದೊಡ್ಡಾದಾದರ
ನಮ್ಮ ಜೀವ ಕೊಲ್ತಾರ

ಎಲಿ ಮನಿನಾಳಾ ಹೋಗ ಅಣ್ಣ ಮಕ್ಕಳು ಕಡಿತಾರಂತ ಅಣ್ಣ ಮಕ್ಕಳು ಬಿಟ್ಟು ಬಂದಿಯಾ ಕೈಕಾಲು ಮುರಿದು ಕಂಬಕ್ಕೆ ಬಿಗಿಸಿ ಬಂದಿಯಾ ಬರಿ ಕರ್ಮಿಷ್ಠವನೆ ನಿನ್ನ ಕಡೆದು ಒಡೆದು ಸಲುವುದೊ ನಿನಗೆ ಗೊತ್ತಾ ಮುಂದಿನ ದಾರಿ ಇಲ್ಲಪ್ಪ, ನನಗೆ ಆರು ಗಾವುದಿರುವುದಕ್ಕೆ ನನಗೆ ಅರ್ಥ ಮಾಡ್ಕಿಂತಿನಿ ಬರಿ ನಿನ್ನ ಅರ್ಥಕ್ಕೆ ಬೆಂಕಿ ಹಚ್ಚು ಏನ ತಿಳುವಳಿಕೆ ಮಾಡಿಂಡಿಯಲ್ಲೋ ನೀನು ಈಗ ನಿನ್ನ ಆಸ್ತಿ ಬ್ಯಾಡ ಅಣ್ಣ ಆಸ್ತಿ ನೀನು ತಿಂದ್ರೆನಾ ನನ್ನ ಆಸ್ತಿ ತಂದಿಟ್ಟು ನಮ್ಮ ಅಣ್ಣಮಕ್ಕಳು ಜೋಪಾನ ಮಾಡ್ತಿದ್ದೆ,

ಎಂಥ ಕರ್ಮಿಷ್ಟ ಐದಿಯೋ
ಎಂಥ ಚಂಡಾಲ ಐದಿಯೊ
ಎಂಥ ಪಾಪ ಕರ್ಮ ಐದಿಯೋ

ಅಣ್ಣ ಮಕ್ಕಳು ಯಾಕ ಕರತಂದಿಲ್ಲ ಎಂಥ ದುಷ್ಟನ್‌ಐದಿಯೊ ಎಂಥ ಚಂಡಾಲ ಐದಿಯೊ ಅಂಥ ಆಗ ಈಗ ಚಿಕ್ಕವನು ದುಃಖ ಮಾಡ್ತಾನ ಏ ತಮ್ಮಾ ಅಳಬ್ಯಾಡಪ್ಪಾ, ಏನ್ ಪರ್ವಾಲ್ಲ ಅಣ್ಣ ಮಕ್ಕಳು ಎತ್ತಾಗಾನ ಹೋಗಲಿ, ನಾನು ನೀನು ತಣ್ಣಗಿರನ ಅಷ್ಟೆ ಅಣ್ಣ ಆಸ್ತಿ ತಂದಿನಿ ಇಬ್ಬರು ಊಟ ಮಾಡುವ ಯಾಪ್ಪಾ ನೀನೇ ಊಟ ಮಾಡಪ್ಪ ನನಗೆ ಬ್ಯಾಡ ಅಂದ್ರೆ ಆ ಜೀವದಲ್ಲಿ ಏನ್ ಮಾಡ್ರಿಬಿಡ್ರು ಈ ಹುಡುಗುರು,

ತಂದೆಯಿಲ್ಲ ತಾಯಿ ಇಲ್ಲದ
ನಮ್ಮ ಹಿಡಿಯೋರು ಯಾರ
ಅವರ ದುಃಖ ಮಾಡ್ತಾರೆ
ಕೈ ಕಾಲು ಕಟ್ಟಿ ಹೋದರ
ಯಾಪ್ಪಾ ನೀನೆ ಬಾರಿರ
ದೊಡ್ಡರೊ ಚಿಕ್ಕವರು ನ್ಮ ಕಷ್ಟ ನೋಡ್ರಾಪ್ಪ
ನಮ್ಮ ಕಷ್ಟ ಯಾರ ವೈದರು
ದೇವರು ಖಂದೇರಾಯರು

ಮನೆ ದೇವರ ಯಪ್ಪ ಕಷ್ಟ ನಮಗೆ ಕೊಟ್ಟಿಯ ಮರ್ವಾಡಿ ಶೇಠಿಗೇ

ದೇವರು ಖಂಡೇರಾಯರು
ಎಷ್ಟು ಕಷ್ಟು ಕೊಟ್ಟಿದೆ
ಅಂಬೋತ್ತಿಗೆ
ಆಗ ಅಡವಿಗೆ ಒಡ್ಡಾರೆಲ್ಲ ನೋಡ್ಕೊಂಟ್ರು
ಆಗ ಇವರು ಕುದ್ರೆ ಹಾಕ್ಕಂಡು ಹೋದಮ್ಯಾಲೆ
ಹೋದ್ರು ಹೋದ್ರು ನೋಡಾನ
ಲೋಟಿ ಮಾಡಾರೆಲ್ಲ ಹೋದಾರೆ
ಯುದ್ಧಕ್ಕೆ ಬಂದರು ಹೋದಾರೆ
ಊರುಬಿಟ್ಟು ಅವರು ಹೋದರು
ನಡ್ರು ನಮ್ಮನಿಗೆ ಹೋಗಾನ ನಡ್ರು ಊರಾಗ ಹೋಗಾನ

ಪಂಪನ ಜಾತಿ ಊರಾಗ ಬಂದ್ರು ತಂದೆ ಇರುವಾಗ ಮನಿಕಟ್ಟಿದರೆ ಮಕ್ಕಳು ಹುಟ್ಟಿ ಹಾಳಮಾಡಿಬಿಟ್ರು ಎಂತವರು ಪಾಪ, ಕುಡಿಯಾತನ ಬಜೆರಾವ್ ಎಲ್ಲಿದನೊ ಎಲ್ಲಿಲೊ ಭಾಮ್ಯಾಗ ಈಗ ಮನಿಗಳೊ ಕಟ್ಟಿಸಿದ ದುಡುದು ಮನಿಗಳೊ ಕಟ್ಟಿಸಿದ ಯಪ್ಪಾ ಬಡುವರು ಬೆಳೆಸಿಕ್ಕಂಡು ತಿನ್ರಿ ಯಪ್ಪಾ ಮನಿಗಳಾಗ ಮಾಡಿಕ್ಕಂಡು ತಿನ್ರಿ ಈಗ ಮನಿ ಬಾಡಿಗೆ ಬ್ಯಾಡ ಹೊಲ ಗುತ್ತಾ ಬ್ಯಾಡ ಅಂತ ಎಂಥಾ ಪುಣ್ಯಾತ್ಮನ ಹೊಟ್ಟೆಗಾ,

ಎಂಥ ಕೆಡಗು ಹುಟ್ಟಾವ
ಎಂಥ ಕರ್ಮದವನು ಹುಟ್ಟಾವ
ಎಂಥ ಚಂದಾಲ ಹುಟ್ಟಾವ
ಪೂರಾ ಹಾಳಾಗಿ ಹೋಗ್ಯಾರ
ಒಳ್ಳೆವರ ಹಾಳಾಗಿ ಹೋದಾರ

ಒಳ್ಳೆಯವನೆ ಸತ್ತು ಹೋದ್ರು ಇವರೆ ಇನ್ನ ಹಾಳಾಗಿ ನಾಶವಾಗಿ ಹೋಗಿಲ್ಲ ಅಂಥ ಆಗ ದುಃಖ ಮಾಡಿ ಈ ಹುಡುಗರಿಗೆ ಕೈಕಾಲು ಕಟ್ಟಿಬಿಟ್ಟಾರ ಕಂಬಕ್ಕೆ ಬಿಗಿಸಿಬಿಟ್ಟಾರ ಸೇದಗ್ಗ ತಗಂಡು ಆ ಹುಡುಗರನು ಬಿಚ್ಚಿಬಿಟ್ರು, ಬಿಚ್ಚ ಹೊತ್ತಿಗೆ,

ಅವ್ರು ಪಾದಮ್ಯಾಲೆ ಬಿಳ್ತಾರೆ
ಇಬ್ರು ಪಾದಮ್ಯಾಲೆ ಬಿಳ್ತಾರೆ
ಯಾಪ್ಪಾ ಬಾಗಲಾಕೆ ಹೋಗಿಬಿಟ್ಟಾನ
ಮನ್ಯಾಕೆ ಹೋಗಕ್ಕಿಲ್ಲಪ್ಪ
ಇಸಿ ತುಂಬಾ ಕಾಳೆಲ್ಲ

ಎಲ್ಲಾ ಇಲ್ಲ ರೌಡಿಮಾಡಿ ನಾಯ್ಕರ ಕರಕಂಡ ಬಂದು ಲೋಟಿ ಮಾಡಿ ಹೋಗಿಬಿಟ್ಟ, ನಮ್ಮ ಕಕ್ಕ ಬಂದು ಯಪ್ಪಾ ನಮ್ಮನು ಹಿಡಿಯೋರು ಯಾರು ಅಂದ್ರೆ ಅವ್ರ ಊರಾಗ ಯಾರಿದರೆಂದ್ರೆ ಕ್ವಾಮುಟ್ರು ಇರಿಸೆಟ್ಟಿ, ಸಾವುಕಾರಿ ಎಲ್ಲಪ್ಪ, ಅಂದ್ರೆ ನಾಯಪೈಸೆ ಸಾಲಬಿಳೋನಲ್ಲ ಎರಡು ಸಾವ್ರ ಕಲಿಟ್ಟಿದ್ದ ಎಲೆಡಿಕೆ ಕಡ್ಡಿಪುಡಿ ಯಾಪಾರ ಮಾಡಿ ಇದೇ… ಆಗ ಕುಲಕ್ಕೆ ಹೆಂಡ್ತಿಗೆ ಅಚ್ಚೇರು ಬಂಗಾರ ಇತ್ತು,

ಹಂಗೆ ತಾಳಿ ಅರ್ಕಂಡು ಹೋಗ್ಯಾನ
ಹಂಗೆ ಮೂಗು ಕುಯ್ಕೊಂಡು ಹೋಗ್ಯಾನೆ
ಹಂಗೆ ಕವಿ ಕುಯ್ಕಂಡು ಹೋಗ್ಯಾನೆ

ನೋಡ್ದಾ ಮಕ್ಕಳದವನು ನಾನು ಇಷ್ಟು ಬಡವುರೆಲ್ಲ ಬಾಯ ಬಡದು ಹತ್ತ ಪೈಸೆ ಇಪ್ಪತ್ತು ಪೈಸ ಆಗ ನಾನು ಕಲಿ ಇಟ್ಟು ಅವರ ಬಾಯಾಗ ಇಟ್ಟಲೊ,

ಅಂಥರ ಬಾಯಾಗ ಇಡಬಲು
ತಾಯಿ ತಂದೆಯಿಲ್ಲದ ಮಕ್ಕಳು
ಇಂಥರ ನಾನ ಇಟ್ಟರೆ
ಇಂಥರ ಕೈ ಹಿಡಿದರೆ
ಇಂಥರ ಜೋಪಾನ ಮಾಡ್ರೆ
ಬೋ ಪುಣ್ಯ ನನಗೆ ಬರತೈತೆ
ಸತ್ತರ ಪುಣ್ಯ ಇರತೈತೊ
ಆಗ ಮಂದಿ ನೋಡಣ್ಣಾ

ಆಗ ಎನಮಾಡಿಬಿಟ್ಟು ಅಂದ್ರೆ ಈ ಹುಡುಗಾರನಾಡ ಯಪ್ಪಾ ಯಾರ ಜೋಪಾನ ಮಾಡ್ತಾರೊ, ಅವ್ರ ತಾಯಿ ತಂದೆ ನಮಗೆ ನಮ್ಮ ಕಕ್ಕ ಬಂದು ಕೈಕಾಲು ಕಟ್ಟಿ ಎಲ್ಲಾ ವೈದಾ ಅಂಬೊತ್ತಿಗೆ, ನಾಡಾಪ್ಪ ನಾವು ನೋಡ್ರೆ ಕ್ವಾಂಟ್ರು ನೀವು ನೋಡ್ರೆ ಮಾರ್ವಾಡೆರು ನೀವು ಗೋದಿ ರೊಟ್ಟಿ ಹಾಲು ಸಕ್ಕರೆ ಊಟ ಮಾಡೋರು ನಾವೇನಂದರೆ ಗುಗ್ರಿ ತಿಂದು ಜೋಪಾನ ಮಾಡ್ಕಂಬದು ಏನೆಂದರೆ ಎಲೆಡಿಕೆ ಕಡ್ಡಿ ಪುಡುಮಾರಿ ಬಡುರೆಲ್ಲ ಬಾಯ ಬಡ್ದು ಹತ್ತು ಪೈಸೆ ಇಪತ್ತು ಪೈಸ ಲಾಭ ಹೊಡೆಯವರು ನಾವು ಯಪ್ಪಾ ಮತ್ತೆ ನಮ್ಮ ಕುಲಕಮ್ಮಿ, ನಿಮ್ಮ ಕುಲ ಹೆಚ್ಚು ಮತ್ತೆ ನೋಡಪ್ಪ ನನಗೆ ಮಕ್ಕಳಿಲ್ಲ. ಇಷ್ಟು ದುಡಿದಿದ್ದ ಲೂಟಿ ಮಾಡಿಸಿಬಿಟ್ಟಾ ನಿಮ್ಮ ಕಕ್ಕ ಬಂದು ಎಲ್ಲಾ ಕಡೇರ ಕರ್ಕಂಡು ಬಂದ ಹಾಳ್ಮಾಡಿ ಬಿಟ್ಟ. ಊರು ಈಗೋ ನಿಮ್ಮನ ಜೋಪಾನ ಮಾಡ್ತೀನಿ ಕುಲ ಕಮ್ಮಿಯಾದರೆನು ಚಿಂತಿಲ್ಲ ನಿಮ್ಮನು ಹೊರಗೆ ಬಿಡಾಲಾರ್ದಂಗೆ ನೀವು ಬುದ್ದಿ ಗ್ಯಾನ ಬರೋತಂಕ ಇಪ್ಪತ್ತ ವರ್ಸಲ್ಲ ನಲವತ್ತು ವರ್ಸ ಜೋಪಾನ ಮಾಡ್ತೀನಿ. ನನ್ನ ತಲ್ಲಿ ಇರಬೇಕು ನೀವು ಇರ್ತೀರೇನಪ್ಪ ಅಂದ ಅಂಬೋತ್ತಿಗೆ ಯಪ್ಪಾ ಕುಲಜಾತಿ ಕುಲಬ್ಯಾಡ ಜಾತಿಬ್ಯಾಡ,

ನಮ್ಮ ಜೀವ ಉಳಿಯಲು ಬೇಕಪ್ಪ
ಜೋಪಾನ ಮಾಡಾರು ಬೇಕಪ್ಪ
ಅನ್ನ ಇಡೊರೆ ಇಲ್ಲರ
ನೀರು ಹಾಕೋರೆ ಇಲ್ಲರ
ಯಾರು ತಲ್ಲಿ ನಾವು ಇರಾನ

ನಾವು ಇದ್ದಿದಿಗೆ ಮೈತ್ರ ತಟ ಬಂದು ಬಿದ್ದೀವಿ ಇಲ್ದಿದ್ರೆ ಯಾರ ತಲ್ಲಿ ಇರನ ಈ ಹೊಸ ಪ್ಯಾಟಾಗ ಹಂಗ ಯಾರ ತಲಿ ನಾವು ಬಿತಾನ ಅಂದ್ರೆ ಏನಪರ್ವಗಿಲ್ಲ ನಾವು ಕ್ವಾಮುಟುರು ಜೋಪಾನ ಮಾಡ್ತೀವಿ ಅಂತ ಇದೇ ಊರಾಗ ಹೆಂಗಾದರು ಎಲ್ಡ ಸಾವ್ರ ಉದ್ರಿ ತರ್ತಿನಿ, ಯಾಪಾರ ಎಲೆ ಅಡಿಗೆ ಕಡ್ಡಿಪುಡಿ ಎಲ್ಲ ತರ್ತಿನಿ ಊರಾಗ ಕಾಳಿದ್ರೆಲ ಅಂಗಡಿಗೆ ಬರೋದು ಕೈಯಲಿ ರೊಕ್ಕ ಇದ್ರಾಲ ಅಂಗಡಿಗೆ ಬರೋದು ಲಾಭ ಬಡಿಯಾಕಿ ಎಲ್ಲಾ ಲೂಟಿ ಮಾಡಿಕ್ಕಂಡು ಹೋಗ್ಯಾನ ಇವನ ಕಕ್ಕ ನೋಡಪ್ಪ ಈ ಊರು ಬಿಟ್ಟು ನನ್ನಿಂದೆ ಬರುಬೇಕು ನೀವು ನಾನು ಯಾವ ಊರಿಗೆ ಹೋಗ್ತಿನೊ ನನ್ನ ಹಿಂದೆ ಬರಬೇಕು ನಾನು ಜೋಪಾನ ಮಾಡ್ತಾನಿ ನಿಮ್ಮನ ಹೊರಗೆ ಬಿಡಾಲಾರದಂಗೆ ಜೋಪಾನ ಮಾಡ್ತೀನಿ. ಯಪ್ಪ ನಮ್ಮ ಕಕ್ಕ ಬೀಗ ಹಾಕ್ಕಿಂಡು ಹೋಗ್ಯಾನ ಈಗ ಆಸ್ತಿಯಲ್ಲಿ ತಗಂಡು ಹೋದ ಇನ್ನ ಯಾಕ ಇರಾನಪ್ಪ

ನಡೆಯಪ್ಪ ನಿನ್ನ ಹಿಂದೆ ಬರುತ್ತೀವಿ
ಎಲ್ಲಿ ಗೊದ್ರೆ ಅಲ್ಲಿಗೆ ಬರುತ್ತೀವಿ
ಹಂಗಾರೆ ಇನ್ನ ಕುಡಕೋಲ
ಬರೆಯಪ್ಪ ನನ್ನ ಕುರಿಯಲ

ಅಂಥ ಕ್ವಾಂಟ್ರಾತ ಏನ ಮಾಡಿದ ಮೂರು ಅಂಕಣದ ಮನಿಗೆ ಬೀಗ ಹಾಕ್ದ ಅಂಗಡಿ ಮನಿಗೆ ಬೀಗ ಹಾಕ್ದ ಪಾವು, ಸೇರು, ಚಟಾಕು ಆಗ ಅಳತಿಮೊಡಾದು ಕಾಳು ತಕ್ಕಡಿ ತೂಕ ಮಾಡಾದು ಪಾವು ಕೋಲು ಪಂಚೇರು ಕೋಲು ಕೇಜಿ, ಕಿಲೊ ತಕಂಡ ಗೋಣಿ ಚೀಲ್ದಾಗ ಹಾಕ್ಕಂಡ. ಒಂದು ಗುಂಡಾಲ ಒಂದು ಚೆರಿಗೆ ನೀರು ಕುಡಿಯಾಕೆ ಗೋಣಿ ಚೀಲದಲಿ ಹಾಕ್ಯಾಂಡ ಹೆಗಲ ಮ್ಯಾಲೆ ಹಾಕ್ಕಂಡ ಹೆಂಡ್ತಿನ ಹಡ ಹಂಡೆ ಏಟ ದಪ್ಪ ಇದಾಳಿ ನೆಲಮ್ಯಾಲ ನಡಿಯಾಕ್ ಬರಾದಿಲ್ಲ ತಿಂದು ತಿಂದು ತಿಂದು,

ಲೇ ….
ಬಿಸಿಲಂಬುಲಾಗ ನಡೆಬೇಕು
ಅನ್ನ ನೀರು ಇಲ್ದಾಂಗ
ಯಪ್ಪೊ ನಿನಗನ ಎತ್ತೂ ಬಂದಿಲ್ಲ
ಹುಡುಗುರು ಕರಕಂಡು ಬಿಟ್ಟಾನ ಸೈ
ಹೆಂಡ್ತಿನ ಕರಕಂಡು ಬಿಟ್ಟಾನ ಸೈ
ಶೆಟ್ಟಿ ಬಂದೇ ಬಿಟ್ಟಾನ ಸೈ
ಮುತ್ತಿನ ಶೆಟ್ಟಿನ ಬರ್ತಾನೆ ಸೈ
ಸವುಕಾರ ಎಲ್ಲಪ್ಪನ ಸೈ
ಕೌಲೇಶಕೋಟಲಿದ್ದಾರ ಸೈ
ಆರು ಗಾವ್ಯುದ ನೋಡಾರ ಸೈ
ಡಾವುಡಿಂಗಲ ಪಟ್ನಕೆ ಬಂದಾನ ಸೈ

ಕೌಲೇಶ ಕೋಟದಿಂದ ಆರುಗಾವುದ ಡಾವುಡಿಂಗಲ ಪಟ್ನಕೆ ಬಂದ. ಅಗಸಿ ಮುಂದೆ ಊರು ಮುಂದೆ ಒಂದು ಬೇವಿನ ಗಿಡ ಐತಿ. ಬೇವಿನ ಗಿಡ ಆ ಬೇವಿನ ಗಿಡ ಕೆಳಗೆ ಕುಂದ್ರಿ ಸರ ಹೆಂಡ್ತಿನ ಹುಡುಗುರನ ನಾವು ಊರು ಬಿಟ್ಟು ಊರಿಗೆ ಬಂದೀವಿ ಯಾ ಮನೆಗೆ ಹೊಕ್ಕಮನ ಕುಂದ್ರಾಕ ಮನಿಲ್ಲ ಅಡಿಗೆ ಮಾಡಕೆಂಬಕ ಒಲೆ ಇಲ್ಲ ಅಕ್ಕಿ ಇಲ್ಲ ರೊಕ್ಕ ಇಲ್ಲ ಏ…. ಇಲ್ಲೇ ಕುಂತ್ಕಾಳಿ ನಾನು ಊರಾಗ ಹೋತೀನಿ ನಮ್ಮ ಕುಲದೇವನೇ ಇದ್ರು ಸ್ವಾಮಿ ಶೇಟಿ, ಇರಿಶೆಟ್ಟಿ ಐದಾನ ನಾನು ಸವುಕಾರ ಎಲ್ಲಪ್ಪ ಅವನು ಕ್ವಾವಾಗಡಿ ಶೆಟ್ಟಿ ನನ್ನ ಅಳಿಯದಾನೆ ಅಳಿನ ತವೆ ಹೋತಿನಿ ಯಾದನು ಮನಿ ತೋರ್ತಾನೆನು ಹಳೇ ಮನಿ ಆ ಮನೆಯಾಗೆ ಇರುವ ಅಂಥ ಬಂದ ಶರಣಪ್ಪ ಇರಶೆಟ್ಟಾಂದ ಅಯ್ಯಾ ಮಾವ ಯಾವಾಗ ಬಂದೆ. ಬಾ ಮಾವ ಕುಂದ್ರು ಯಾಕ ಬಂದಿ ಮಾವ ಬಹಳ ದಿಸಾಯ್ತು ಇಲ್ಲಪ್ಪಾ ಈಸಾ ದಿನ ಬೆಳತಿಂಗಳಿತ್ತು.

05__MS_346-KUH

ಇದಾಗ ಕತ್ಲಾಗಿ ನಾನು ಬಂದಿನಿ
ಬಡವನಾಗಿ ನಾನು ಬಂದಿನಿ

ಬಡವನಾಗಿ ಬಂದಿನಂದ್ರೆ ಅಳಿಯ ಏನಂಥ ನಗತಾನೆ ಏನ ಮಾವ ನಿನ್ನ ಹೆಸ್ರೆ ಸವುಕಾರ ಎಲ್ಲಪ್ಪ ಅಂದ್ರೆ ನಾಯ ಪೈಸ ಸಾಲ ಬೀಳುವುನಲ್ಲ

ಅಂತ ಮಾವ ನೋದೆಯೊ
ಬಡವನಾಗಿ ಯಾಕೆ ಬಂದಿಯೊ
ಬಡವನಾಗಿ ಯಾಕೆ ಬಂದಿಯೊ
ಹೇಳೋ ನಮ್ಮ ಮಾವ
ಯಪ್ಪ ಊರಾಗ ಚಾಡ್ರು ಇರ್ತಾರೆ
ನನ್ನ ಕಳ್ಸೇ ಬಿಟ್ಟರ

ನೋಡಪ್ಪ ತಂದೆ ಮನಿ ಕಟ್ಟಿಸಿದರೆ ಮಗ ಉಳಿಸ್ತಾನೆ ಆಗ ಬಂಡಿ ಚಕ್ರ ಬೇಸ ಐತೆಂದರೆ ಬಗರಿ ಮಾಡಿಕ್ಕೊಂಡು ಬಂದು ಬಿಟ್ಟರೆ ಬೇಸ ತಿರ್ಗಾತಾದಂತನೆ ಹಂಗ ಪುಗ್ರಾಮ್ಮ ಬಜೆರಾವ್ ಕಟ್ಟಿಸಿದ ನಾನಾಂದರಾವ್ ಇದ್ದ ಈಗ ನನಾಂದರಾವ್‌ನ ನಮ್ಮ ಸಿದೋಯಿ ಬಂದು ದಡೇಗಾವಿನಿಂದ ಹಾಳ್ಮಾಡಿ ಹೋಗಿಬಿಟ್ನಾಪ್ಪ, ಈಗ ಬರೇ ಮನಿಗೆ ಹೆಂಗೆ ಇರಬೇಕೆಲ್ಲ ತಮ್ಮ ಊರಾಗ ಕಾಳಿಲ್ಲ ರೊಕ್ಕ ಇಲ್ಲ ಎಲ್ಡ ಸಾವ್ರ ಉದ್ರಿ ತರ್ತಿನಿ ನಾನೇನು ಆಗ ಊರಾಗ ಬಡುವರು ಬರಬೇಕಲ್ಲ ಅಂಗಡಿಗೆ ಬಡುವರು ಬಂದ್ರೆ ನಮಗೆ ಲಾಭ ಅಂಬೊತ್ತಿಗೆ ಲೇ… ಮಾವ ನೀನು ಕೆಟ್ಟರೆ ನಾ ಕೆಟ್ಟಂಗೆ ಮೂರು ಅಂಕಣದ ಮನಿ ಐತೆ ಮೂರು ಬಜಾರ್ ಕಲಿತಲ್ಲಿ ಈಗ ಸಾಯತನ ನಾನು ಮನಿ ಬಾಡಿಗೆ ಕೇಳಾದಿಲ್ಲ ಮನ್ಯಾಗಿಟ್ಟಾಗ ಬೇಕಾ ನಿನಗೆ ಮೂನ್ನೂರು ಬೇಕಾ ನಾನೂರು ಬೇಕಾ ಯಾಪಾರ ಉದ್ರಿ ಹಾಕ್ತೀನಿ, ಮಾವ ಅಂದ ಏನ್ ಬ್ಯಾಡಪ್ಪ ಮನಿಯೊಂದು ತೋರ್ಸಾಂದ ಮನಿಬೀಗ ತೆರೆದ ತೋರ್ಯಾನ ಏನಪ್ಪ ಒಂದು ಕೊಡಪಾನ ಕೊಡಾಂದ ಕೊಡಪಾನ ಕೊಟಟ್ ನೀರು ಸೇದ್ಕಂಡು ಬಂದು ಮನೆಯಲ್ಲಾ ಉದ್ದಿಕ್ಕಂಡ ಕಸ ಬಳಕಂಡ ಹುಡುಗುರ್ನ ಹೆಂಡ್ತಿನ ಕರಕ್ಕಂಡು ಬಂದಾ ಮನ್ಯಾಗ ಕುಂದ್ರಿಸಿದ, ಹುಡುಗುರ್ನೇನೊ ತಾಯಿ ತಂದೆಯಿಲ್ಲ ಹುಡುಗುರು ಸಲುಹುತೇನಂತ ನಾನು ಕರಕಂಡು ಬಂದೆ ಈ ಹುಡುಗುರು ಹೊಟ್ಟೆಸ್ಕಂಡರೆ ಅನ್ನಿಲ್ಲ ಏನಿಲ್ಲ ಎನಿಲ್ಲ ನಾಕ ಸೇರು ಅಲಸಂದಿ ಹೆಂಗಾಕ್ತೀಯ ಯಾಕ ಮಾವ ಮುನ್ನೂರು ನಾನೂರು ಯಾಪಾರ ವೈಇ ನಾನು ಅಂಗಡಿ ಇಟ್ಟಿನಲ ವೈಯಿ ಹಂಗಲ್ಲ ಒಣಿ ಒಂದಂಗಡಿ ಇದಾವೆ ನಾನು ಹೊಸ ದಿಟ್ಟಿನಿ ಇಟ್ಟರೆ ಯಾಪಾರ ಆತದೇ ಇಲ್ಲೋ ಹಂಗಲ್ಲ ನಾಕ ಸೇರು ಅಲಸಂದಿ ಹೆಂಗಾಕ್ತೀಯ ಎಂಟಾಣೆ ಸೇರು ಮಾಡ ಅಂದ ಹಂಗಾರೆ ನಾಕ ಸೇರು ಹಾಕು ಅಂದ ಅಲಸಂದಿ ಹಾಕ್ಸಿಕಂಡ ಒಂದು ರೂಪಾಯಿ ಇನ್ನವರ ಮೆಣಸಿನಕಾಯಿಕೊಡು ಆಗ ಪಾವು ಇನ್ನಾವಾ ತಾವು ಉಪ್ಪಾಕು

ಆಗ ಬಂದೇ ಅಣ್ಣಯ್ಯ
ಮಾರವಾಡಿದರ
ಅಣ್ಣಯ್ಯ

ಏನಪ್ಪ ಶೆಟ್ಟಿ ಏನ್ರಿ ಸಾವುಕಾರ್ರೆ ಎಲ್ಲಪ್ಪ ಎಲ್ಲ ತಕಂಡು ಬಂದ ಒಂದು ಗುಂಡಾಲ ಇಸ್ಕಂಡು ಬಂದ ಬೇಸ ಗುಗ್ಗರಿ ಬೇಸ ಕುದಿಸಿದ ನೀರ ಬಗ್ಗಿಸಿದ,

ಆಗ ಮಸಾಲೆ ಗುಗ್ರಿ ಮಾಡ್ಯಾನ
ಗುಗ್ರಿ
ಪುಟ್ಟಿ ಹಾಕ್ಯಾನ
ಮ್ಯಾಲೆ
ಪಟ್ಟೆ ಉಳಿಸ್ಯಾನೆ

ಆರ್ವಾವು ಆಗ ಪಾವು ಕೋಲು ಅರ್ವಾವ ಕೋಲು ಕೈಯಲ್ಲಿ ಹಿಡಕ್ಕಂಡ ಕೈ ಚೀಲದಲ್ಲಿ ಹಾಕೆಂಡ, ಲೇ ಹುಡುಗರ ಬರ್ರಿ ಮಾರ್ವಾಡಿ ಶೇಠ ಹುಡುಗುರ ಏನ್ರಿ ಕ್ವಾಂಟ್ರಸೆಟ್ಟಿ ಏನಿಲ್ಲ ಬಾರಿಬಾರಿ ಗುಗ್ರಿ ಕೊಡ್ತೀನಿ ಅಲಸಂಧಿ ಗುಗ್ರಿ ಮಸಾಲೆ ಗುಗ್ರಿ ಉಪ್ಪುಕಾರ ಹಾಕಿದ್ದು ಬೇಸ ಇರ್ತಾವ ಸ್ಯಾರ ಸ್ಯಾರ ಗುಗ್ರಿ ತಿಂದು ಚರಿಗೆ ಚರಿಗೆ ನೀರು ಕುಡ್ರಿ ಹುಟ್ಟೆ ಉದಿಕ್ಯಾಂಡತದೆ. ಈಗ ಗುಗ್ರಿ ಮಾಡ್ಕಂಡ ಬಂದ ಮ್ಯಾಲೆ ಬೇಕಾದ ಅಡುಗೆ ಮಾಡಿಸ್ತೀನಿ ಸರಿಬಿಡ್ರಿ ಅಂದ ಹುಡುಗುರಿಗೆ ಗುಗ್ರಿ ಕೊಟ್ಟಾ ಊಟ ಮಾಡ್ರು ಹೆಂಡ್ತಿಗೊಂದು ಸ್ಯಾರಿ ತಾವೊಂದು ಸ್ಯಾರಿ ತಿಂದ ಕಟ್ಟಿಸಿಕೊಂಡು ಹೋದ ಆಗ ನೀರು ಕುಡುದ್ರು ಈಗ ಗುಗ್ರಿ ಪುಟ್ಟಿ ಎತ್ತಿಕಂಡ ಬೆನ್ನಾಲಿ ಹೊತ್ತಕಂಡು ಒಣಿಯಾಗ ಬಂದ ಯಾರಪ್ಪ ಗುಗ್ರಿ ಹೆಚ್ಚು ತಿಂಬೋರು ಊರಾಗೆ ಬಡುವರೆ ಜಾಸ್ತಿ ತಿಂಬೋದು ಇದ್ದೋನು ತಿಂಬೋದಿಲ್ಲ ಆಗ ಏನ ಮಾಡ್ದ ಈಗ ಒಡ್ರು ಕೇರಿಗೆ ಬಂದಾನೆ,


ಬನ್ನಿ ಬರಿ ಒಡ್ರುರೆ

ಕಬ್ಬಿಣ ಕೋಲ್ಲು ನೋಡುರೆ ಸೈ
ಕಬ್ಬಿಣ ಸುತ್ತಿ ತಗಂಡ
ಕಲ್ಲು ಒಡೆ ಬಡೆದವರುರ
ಗುಗ್ರಿ ತಿಂದರೆ ನೋಡುರೆ
ಬಲಬಿಗಿ ನೀವು ಇರ್ತೀರಿ
ಮಸಾಲೆ ಗುಗ್ರಿ ನೋಡಾರೆ
ಒಂದು ರೊಟ್ಟಿ ಗುಗ್ರಿ ತಿಂದರೆ
ಆಗ ಇನ್ನ ಐದ ಕೇಳ್ತಿರ
ಐದು ಕೇಜಿ ಕಲ್ಲು ಎತ್ತಿರ
ಬಾಳ ಬಿಗಿ ಇರ್ತೀರಿ
ಅಲಸಂಧಿ ಗುಗ್ರಿ ತಿಂದರೆ

ನೂರುವರ್ಸ ಮೂರು ಜವುರರ ಸೈ
ಇನ್ನ ಗುಗ್ರಿ ತಿಂದ ಮ್ಯಾಲರ ಸೈ
ಕುದುರೆ ಎತ್ತುದಂಗ ಎತ್ತುಬೇಕುರ

ಆಗ ಹಡದ ಬಾಣ್ತೇರು ಮನೆಗೆ ಬರಿ ಗೋದಿ ಸರೆ ಕುಡ್ದು ಬಾಯ ಸಪ್ಪುಗೆ ಎಂಜಲಾದಂಗೆಂಗಿತ್ತು ಅತ್ತಿ ಮಾವ ಗಂಡ ಎಲ್ಲಾರು ಹೋಲಕ್ಕೆ ಹೋಗಿರ್ತಾರೆ ಬಾಣ್ತೀ ತಲಿ ಎಷ್ಟು ದಿನ ಇರ್ತಾರೆ ಒಂದು ಎಂಟು ದಿನ ಹತ್ತು ದಿಸ ಇರ್ತಾರೆ ಈಕೆ ಒಬ್ಬಾಕೆ ಇರ್ತಾಳೆ


ಗುಗ್ರಿ
ಶೆಟ್ಟಿ ಬಾರಯ್ಯಾ
ಬೇಸ ಐತಾವ ಗುಗ್ರಿ

ಆಯ್… ಹೋಗಮ್ಮೊ ಬಾಣ್ತಿ ನನ್ನ ಪಾವು ಗುಗ್ರಿ ಎಲ್ಡ ರೊಟ್ಟಿ ತಿಂದಿಯಂದ್ರೆ ಎಲ್ಲ ಕೊಡ ಹೊತ್ತಕಂಡ ಬರ್ತಿ ಕುದುರಿ ಬಂದ್ಹಾಂಗೆ ಬರಬೇಕು ಮತ್ತೆ ಬಗ್ಗಿ ಬರಬಾರದು, ಅಬಾಬಾ …. ಅಯ್ಯಾ ಎಂಟಾಣೆ ಕೊಡ್ತೀನಿ ಒಂದು ಪಾವ್ಹಾಕು ಏ… ಹೋಗಮ್ಮಾ