ಒಬ್ಬನು ಮೈ ತೊಳ್ಸಾನ
ಹೊಸ ಬಟ್ಟೆಗಳೆ ಉಡ್ಸಾರ

ಹೊಸ ಬಟ್ಟೆಗಳೆ ಉಡ್ಸಾರ
ದಡಿಯ ಮಲ್ಲಿ ಹೂ ಹಾಕ್ಯಾನ
ಕಿರೀಟವನ್ನ ಇಟ್ಟಾರೆ
ಆಗ ಮಾರ್ವಡಿ ಶೇಠ ಅವರ
ಕಿರೀಟ ಒಂದೆ ಇಟ್ಟಾರ
ಮಾರ್ವಾಡಿ ಶೇಠಿ ಅಂದಾನ

ಟೋಪಿ ಇಟ್ರಾಪ್ಪ ಬಂಗಾರದ ಟೋಪಿ ಕಿರೀಟ ಇಟ್ಟು ಆಗ ಮೂರು ಕೇಜಿ ಅಂಥದು ಆಗ ಗಂಡ್ರಗೊಡ್ಲಿಕೈಗೆ ಹಿಡಿಕೊಟ್ರು ಚಂದ್ರಾಯದ, ಚಂದ್ರಾಯದ ಕೊಟ್ಟು ತಾಯಿಗೆ ಮಲ್ಲಿ ಹೂ ಹಾಕಿ ಮೈತೊಳ್ದು ಆಗ ಮ್ಯಾಳ ತರ್ಸಿದ್ರು,

ಹೆಣಗಳ ಎತ್ತೆ ಬಿಟ್ಟರ
ಹೆಣಗಳು ಒಂದೇ ಎತ್ಯಾರ
ರುದ್ರ ಭೂಮಿ ಕಡೆಗೆ ಬಂದಾರ
ಅವ್ರು ಹೆಣ ಹೊತ್ಕಂಡು
ಹೆಣಹೊತ್ಕಂಡು ಬಂದಾರೆ
ಆಗ ಗುಳಿ ತೋಡಿ ಬಿಟ್ಟಾರ
ಗಂಧದ ಚಕ್ಕೆ ಹಾಕ್ಯಾರ
ತಾಯಿ ತಂದೆ ಕುಂದ್ರಿಸಿ ಬಿಟ್ಟಾರ
ಸೀಮ ಸಿದ್ದಿ ಉಗಿಬಿಟ್ಟಾರ
ಸಕಾರ ಕಟ್ಟಿಗೆ ಇಟ್ಟಾರ
ಕುತ್ಗೆ ಮ್ಯಾಲೆ ಇಟ್ಟಾರ
ನಡುವುಮ್ಯಾಲೆ ಇಟ್ಟಾರ
ಇನ್ನ ಬೆಂಕಿ ಇಟ್ಟಾರ
ಅವ್ರು ಬೆಂಕಿ ಹಚ್ಯಾರ
ಅವು ಒಂದೆ ಅಣ್ಣಯ್ಯಾ

ಇಟ್ಟಿದ ಮ್ಯಾಲೆ ದಗದಗ ಉರಿತಿದ್ರೆ ಈ ಹುಡುಗುರನಡಾ ಬೆಂಕ್ಯಾಗೆ ಬೀಳಾಕೆ ಹೋಗ್ತಾರೆ ಎಪ್ಪಾ,

ಐದು ವರ್ಷದ ಹುಡುಗುರ ಐದರ
ಎಪ್ಪಾ ಬಿಟ್ಟು ಹೋದೆಪ್ಪಾ
ಎಪ್ಪಾ ನಮ್ಮನ್ಯಾರ ಸಲುತ್ತಾರಮ್ಮ
ನಮ್ಮ ನ್ಯಾರೆ ಹಿಡಿಯುವರೆ
ಯಾರೆ ಜ್ವಾಪಾನ ಮಾಡ್ತಾರ

ಅಂಥಾ ಬೆಂಕ್ಯಾಗೆ ಬೀಳಾಕ ಹೋಗ್ತಾರ ಹುಡುಗುರು ಎಲ್ಲಾರು ಮಂದಿ ಹಿಡಕ್ಕಂತಾರೆ. ಅಯ್ಯೋ ಬೀಳಬ್ಯಾಡ್ರಪ್ಪಾ ನಾವು ಜ್ವಾಪಾನ ಮಾಡ್ತೀವಪ್ಪಾ ಅಂಥಾ ಸುಟ್ಟು ಬೂದಿಯಾಗಿ ಬಿದ್ದ ಮ್ಯಾಲೆ ಬೂದಿಯಲ್ಲಾ ಗೂಡು ಮಾಡಿ ಆಗ ನಿವಾಳಿ ಕಟ್ಟಿಲಿ ಮಠ ಕಟ್ಟಿದ್ರು. ಅವ್ರಗೆ ಆಗ ಸಮಾದಿ ಕಟ್ಟಿ ಆಗ ದಡಿಯ ಮಲ್ಲಿ ಹೂ ಹಾಕಿ ಮನಿಗೆ ಬಂದ್ರು. ರಾವು ರಾವು ರಾವು ಉರಿತೈತೆ ಅವ್ರು ಮಂದಾಳ ತಂದು ಕೊಡೋರು ಕಡ್ಲೆ ತಂದಕೊಡಾರು ಆಕಾಲ್ನೆ ಆ ಈಗ ಊಟ ಮಾಡ್ರಾಪ್ಪಾ ನೀರ ಕುಡಿರಿ ಅನ್ನ ಉಣ್ರೀ,

ಎಪ್ಪಾ ಇನ್ನಲ್ಲಿ ಅನ್ನ ಉಣ್ಣಾಲಿ
ಎಪ್ಪಾ ಇನ್ನಲ್ಲಿ ನೀರ ಕುಡಿಯಾನ
ಎಲ್ಲೇ ನೀರೆ ಕುಡಿಯಾನ
ಎಲ್ಲೇ ಅನ್ನ ಉಣ್ಣಾನ

ಅಂಥಾ ಹುಡುಗರು ತಲೆಗೆ ಕುಂತ್ಕಂಡು ದೊಡ್ಡ ದೊಡ್ಡ ಯಜಮಾನರೆಲ್ಲಾ ಗುತ್ತಿಗೆ ಗ್ಯಾನ ಹೇಳಕ್ಕಂತಿದ್ದಾರೆ ಹೇಳಕಂತಿದ್ರೆ ಸತ್ತು ಮೂರು ದಿನಾಗೆ ಆಗ ದಡೇಗಾವು ಬಡೇಗಾವು ಚಿಕ್ಕ ಬಳಗ ಆಚೆಕಡೆಗೆ ಆಗ ಚಿಗಪ್ಪ ಖಂಡೇರಾಯ ಕೇಳಬೇಕೆ ಅಣ್ಣ ಸತ್ತಿದ್ದು ಅಣನೆಡ್ತಿ ಸತ್ತಿದ್ದು ಅಣ್ಣ ಸತ್ತನೆಂದ್ರೆ ಅಣ್ಣನೆಡ್ತಿ ಸತ್ತನಂದ್ರೆ ದುಃಖ ಮಾಡಬೇಕಾ ನಗಬೇಕಾ ದುಃಖ ಮಾಡಬೇಕಲ್ಲ ಐದು ವರ್ಷ ಹುಡುಗರು ಎಂಗಾ ಮಾಡಬೇಕಪ್ಪಾ ಆಗ ನಮ್ಗೇನು ಹೇಳ್ಕಳ್ಸಿಲ್ಲ ಅಂಥಾ ದುಃಖ ಮಾಡಬೇಕ ಅಣ್ಣ ಸತ್ತಾನೆಂದರೆ ತಮ್ಮ ಕಿಲಕಿಲ ನಕ್ಕಾನ ಏ,

ಅಣ್ಣ ಸತ್ತರೆ ಅಷ್ಟು ಸಾಕಲ್ಲೊ
ಅಣ್ಣನಾಸ್ತಿ ನಿನಗೆ ಬರ್ತಾತೈವೆ
ಅತ್ಗೆ ಸತ್ತರೆ ಸಾಕಲ್ಲೊ
ಬೆಳ್ಳಿ ಬಂಗಾರ ಬರದಿಲ್ಲ

ಭೂಮಿ ಭೂಮಿ ಕರಿತದ
ಮನಿಗೆ ಮನಿಗೆ ಕರಿತದ
ಬೆಳ್ಳಗೆ ಬೆಳ್ಳಗೆ ಕರಿತದ
ರೊಕ್ಕರೆ ರೊಕ್ಕ ಕರೆತದ
ದೊಡ್ಡ ಸವುಕಾರ ನಾತೀನಿ
ದೊಡ್ಡ ಸವುಕಾರ ನಾತೀನಿ
ನಮ್ಮಗೆ ಆಸ್ತಿ ಬರ್ತಾದೆ
ಅದಿಷ್ಟು ಇದಿಷ್ಟು ಕಲ್ತಾರೆ
ಇನ್ನು ಲೋಕಡಿ ನೋಡ್ಯಾರ
ಲೋಕಕೆ ದೊಡ್ಡೋನು ನಾತೀನಿ

ತಾವೆ ದೊರೆ ವೈದಿವಿ ಅಂತ ನಡುವೇನು ಕಿಲಕಿಲ ಅಂಥಾ ಚಿಕ್ಕವನು ಬಂದ ಯಾರು ಖಂಡೇರಾಯ ಬಂದು ಏನಣ್ಣಾ ಸಿದ್ದೋಯಿ ಏನಣ್ಣಾ ನಗುತ್ತಿದ್ದೆ ಏಯ್ ಇನ್ಮೇಲೆ ತಮ್ಮ ನೀನಿಷ್ಟು ನಾನೀಟು ತಿಂಬಾನಲೆ ಏನು ತಿಂಬಾನಣ್ಣಾ ಬೆಳ್ಳಿ ಬರ್ತಾತೈತೆ ಬಂಗಾರ ಬರ್ತಾತೈತೆ ರೊಕ್ಕಾ ಬರ್ತಾತೈತೆ ಅಣ್ಣಾಸ್ತಿ ಎಲ್ಲಾದು ಬರತೈತಣ್ಣಾ ಎಲ್ಲಿಂದ ಬರ್ತಾ ಅಣ್ಣಾ ಅಣ್ಣ ನೆಂಡ್ತಿ ಮೂರು ದಿನ ಆಗೀತೆ ಸತ್ತೋಗಿ ಬಿಟ್ಟಾರೆ ಅಣ್ಣನ ಮಕ್ಕಳು ಇದಾರೆ ಐದು ವರ್ಷದಾವ್ರು

ಅವ್ರು ಎಲ್ಲಾನು ಹಾಳಾಗಿ ಹೋಗಲಿ
ಎಲ್ಲಾನು ಅವ್ರೆ ಸಾಯಲಿ
ಆಗ ಹೊತ್ತಿಗೆ ನೋಡ್ಯಾನ
ಚಿಕ್ಕ ತಮ್ಮ ಖಂಡೇರಾಯರ
ಅಣ್ಣ ಎಷ್ಟು ದಿನ್ನಲೇ
ಅಣ್ಣಾ ಏನು ಬ್ಯಾನೆ ನಿನ್ಗೆ ಬಂದಿತೊ
ಏಳು ಚಕ್ಕೇಳ ಬಲ್ಲಿರ
ಏಳಾನು ಕಳಿಸಿಲ್ಲ ನನ್ಗೆ ನಾವು ಎಷ್ಟು ಪಾಪ ಮಾಡಿವೇ ಎಮ್ಮಾ
ಅಣ್ಣನ ಮುಖ ನೋಡಾಗಿಲ್ಲನ
ಅಣ್ಣನ ಮುಖ ನೊಡಲಿಕೆರ
ಅಣ್ಣನೆ ಮಣ್ಣು ಹಾಕರೆ

ನಮ್ಗೆ ಋಣ ಇಲ್ಲದಾಗ ಹೋಯಿತಾ ಚಿಕ್ಕ ತಮ್ಮ ಖಂಡೇರಾಯನ ಚಿಕ್ಕ ತಮ್ಮ ದುಃಖ ಮಾಡ್ತಾನೆ ಎಂಗೆ ದುಃಖ ಮಾಡ್ತಾನೆ ಅಂದ್ರೆ ಅಣ್ಣಾ ಏನ್ ಬ್ಯಾನಿ ಬಂದಿತ್ತು ನಾವು ಮುಖ ನೋಡಾಕೆ ಋಣ ಇಲ್ದಂಗಾಯಿತು. ನಾವು ಎಷ್ಟು ಪಾಪ ಮಾಡಿರಬೋದು ನಿನ್ಗೆ ಮಣ್ಣಾಕಿಲ್ಲ ತಾಯಿ ತಂದೆಗೆ ಮಣ್ಣಾಕ್ಕಿಲ್ಲ ಅಣ್ಣಾ ನಮ್ಗೆ ಏನಾನು ಹೇಳು ಹೋಗಿದನೇನು ಅಣ್ಣಾ ಅಣ್ಣನ ಮಕ್ಕಳು ಸಣ್ಣರು ಈಗ ಐದು ವರ್ಷ ಹುಡುಗುರು ಏನು ತಿಳಿಲಾರದವರು ಅಣ್ಣಾ ಊರಿಗೆ ಬಿಟ್ಟು ಹೋದೆಲ್ಲ ಅಂಥಾ ಚಿಕ್ಕೋನು ಖಂಡೇರಾಯನು ದುಃಖ ಮಾಡುತ್ತಿದ್ದರೆ ಸಿದ್ದೋಯಿ ಏನ ಅಂತಾನೆ ಲೇ ತಮ್ಮ ಖಂಡೇರಾಯ ಯಾಕ ಅಳ್ತಿಯಲ್ಲೇ ತಮ್ಮಯ್ಯ,

ಸತ್ತವನಿಗಿಷ್ಟು ಮಳ್ಳಾಲಿ
ನಿನ್ನ ಪಾಡು ನೋಡ್ಯಾರ
ಇದ್ದೋರಿ ಇಷ್ಟು ಅನ್ನಾರೆ
ಇದ್ದೋರು ನಾವೇ ತಿಂಬಾನ

ಸತ್ತವನು ಮಳ್ಳಾಕ್ಕಿಂಡು ಹೋಗ್ಯಾನ ಇದ್ದೋರು ನಾವೇ ತೀಬೋರು ಅಂಬೊತ್ತಿಗೆ, ಅಣ್ಣಾ ಈಗ ಬೆಕ್ಕಿಗೆ ಕುಹತಾಗ್ಯಾವೆ ಇಲಿಗೆ ಒದ್ಯಾಡತೈತೆ ಅವ್ರು ಇಲ್ರಿ ನಾನು ಸಾಯ್ತನಂತ ಅದು ಒದ್ದಾಟ್‌ತೈತೆ ಇದು ತಿಂಬೊತಿನಂತ ಇದು ವಗರಾಡುತೈತೆ ಎಂಥವಣ್ಣಾ ನೀನಣ್ಣಾ ಅಣ್ಣ ಮಕ್ಕಳು ಐದಿನೋ,

ನಿನ್ಗೆ ಮಕ್ಕಳ ಹಾಗಿಲ್ಲ
ಐದು ವರ್ಷ ಹುಡುಗರ ಐದರ
ನಾವೇ ಕರಕ್ಕಂಡು ಬರಾನ
ಅಣ್ಣಾ ಮಕ್ಕಳು ಜ್ವಾಪಾನ ಮಾಡಾನ
ನಾವೇ ಕರಕ್ಕಂಡು ಬರಾನ
ಅಣ್ಣಾಸ್ತಿತಿನಬಾರ್ದು
ಅಣ್ಣಾ ತಮ್ಮನಾಸ್ತಿ ತಿಂದಾಕಿ
ಪಾಪರದ ತಿನ್ನಂಗರ

ಏ ನ್ಯಾಯಾಪೈಸೆ ನಾವು ತಿಂದರೆ ಎಲ್ಲ ಪೈಸೆ ನಮ್ದು ಹೊಯ್ತಾದ. ಒಬ್ಬನ ಮೋಸ ಮಾಡ್ರೆ ನಾವು ನಾಷ್ಣಾಗಿ ನಾವು ಹೋಗ್ಲಿ ಅಣ್ಣಾ ಒಬ್ಬನಿಗೆ ಮೋಸ ಮಾಡ್ರೆ ನಾವು ನಾಷ್ಣಾಗಿ ಹೋಗ್ತೀವಿ. ಆ ನಮ್ಮಾಸ್ತಿ ಹೋಗ್ಲಿ ಅಣ್ಣಾ ತಮ್ಮಾಸ್ತಿನ್ಬಾರ್ದು ಪಾಪರದ ತಿನ್ನಂಗೆ ಇಗೋ ಅಣ್ಣಾ ಮಕ್ಕಳು ಇದಾರೆ ನಿನಗೆ ಮಕ್ಕಳಿಲ್ಲ ನನಗೆ ಮಕ್ಕಳಿಲ್ಲ ಕರಕ್ಕಂಡು ಬಂದು ನಾವು ಜ್ವಾಪಾನ ಮಾಡಾನ. ನಮ್ಮಾಸ್ತಿ ಇಟ್ಟು ಮೂರೊಪ್ತಾನ್ನ ಹಾಕಿ ಬೇಸ ಇನ್ನವರ ಮೂರ ಸತಿ ನೀರ್ಹಾಕಿ ಹುಡುಗುರ ದೊಡ್ಡೋರ ಮಾಡಾನ. ಓದುಕಲ್ಸಾನ ಈಗ ಅಣ್ಣನ ಮಕ್ಕಳಿಗೆ ಮದ್ವಿ ಮಾಡನ. ಮದ್ವೆ ಮಾಡಿದ ಮ್ಯಾಲೆ ಅವ್ರುಗೆ ಗ್ಯಾನ ತಿಳಿದ್ರೆ ನಮ್ಮ ಕಕ್ಕನ್ರ ಅಂಥ ನೋಡ್ಲಿ ಈಗಗ್ಯಾನ ತಿಳಿದಿದ್ರೆ

ಅವ್ರು ಊರಿಗೆ ಅವ್ರು ಹೋಗಲಿ
ತಂದೆನಾಸ್ತಿಗೆ ಅವ್ರು ಹೋಗಲಿ
ನಮ್ಮ ಆಸ್ತಿ ಏನ ಅಣ್ಣಯ್ಯಾ

ಅವ್ರು ಏನ ಮಾಡ್ಯಾನ ಅಣ್ಣನ ಮಕ್ಕಳ ಕರ್ಕಂಡು ಬಂದನ ಅಂದ್ರೆ ನಡುವೋನು ಏನಂತಾನೆ ಏಯ್

ಅಣ್ಣ ಮಕ್ಕಳ ನೋಡತಿ
ಜಲ್ಮ ಹೋದ್ರು ಸಲುವುದಿಲ್ಲಾರ
ಸಲುವಾಂಗಿಲ್ಲ ಅವ್ರು
ಜೀವ ಹೋದ್ರು ಸಲುವಾಂಗಿಲ್ಲರ
ಏಯ್ ..
ಅವ್ರುಗ್ಯಾಕ ಅನ್ನನೆ ನಾಯಿಗಾಕಿ ಬೆಳ್ಸತೀನಿ
ಏಯ್ ….
ಅಣ್ಣ ಮಕ್ಕಳ ಕೈಲಿಡದ್ರೆ
ತಾಯಿ ತಂದೆ ಇಲ್ಲದವರು
ನಾವೇ ಮೋಸ ಮಾಡ್ದ್ರೆ
ಹೆಂಡ್ರು ಬಂದು ಮ್ಯಾಲರಾ
ನಮ್ಮನ ಒದ್ದೇ ಹೋತರ

ಈಗ ಅಣ್ಣ ಮಕ್ಕಳು ಸಲುಹಬದಲು ನಾಯಿನ ಜ್ವಾಪಾನ ಮಾಡ್ಕಂಬೋದು ಎಲವೋ…. ಅಣ್ಣನ ಮಕ್ಕಳ ಸಲುತ್ರಿದೆ ಬೇಸ ಮದ್ವಿ, ಮಾಡ್ಕ ಮ್ಯಾಲೆ ನಮ್ಮನೆ ಒದ್ದು ಹೋತಾರೆ ಅಣ್ಣನ ಮಕ್ಕಳ ಸಲಹುಹದಿಲ್ಲಪ್ಪ ಎಲ್ಲೇನಾ ಹಾಳಾಗೋಗಲಿ,

ಆಸ್ತಿ ತಗೊಂಡು ಬರ್ತೀನಿ
ಅಣ್ಣನೊಂದಿಗೆ ನಾನು ಹೋಗ್ತೀನಿ
ಅಣ್ಣ ಕೇಳು ನಿನ್ನ ಅಣ್ಣಯ್ಯಾ

ಸರಿಯಣ್ಣಾ ಅಣ್ಣನ ಆಸ್ತಿನರ ಬೇಕು ಅಣ್ಣನ ಮಕ್ಕಳು ಬೇಕಿಲ್ಲ ಇಲ್ಲಪ್ಪಾ ಅಣ್ಣನ ಮಕ್ಕಲು ಬೇಕಿಲ್ಲ ಅಣ್ಣ ನಾಸ್ತಿ ಬೇಕು ಸರಿಯಣ್ಣಾ ಈಗೇನು ಮಕ್ಕಳು ಏನು ಕೇಳಾದಿಲ್ಲ ಅವ್ರು ನೀನು ಈಗ ಆಸಂ ಬೇಸೆಂಬಡಿಲೆ ಮಕ್ಕಳ ಆಸ್ತಿ ತದಕ್ಕಂಡು ತಿನ್ತಿ ಏಸ ದಿನ ತಿನ್ತಿಯಣ್ಣಾ ಆಸ್ತಿ, ಆಹಾ ನಿನ್ನ ಜೀವವಿರೊ ತನಕ ಊಟ ಮಾಡ್ತಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಊರಾಗೆ ಸುಮ್ಮಿತರ ಅವ್ರೊ ಇವ್ರೊ ಜ್ವಾಪಾನ ಮಾಡ್ತಾರೆ ಆ ಹುಡುಗರನಾ ಅವ್ರು ಮನಿಗೆ ಇವ್ರು ಮನಿಗೆ ಕಸಬಳಿದೊ ಗಂಗಾಳ ತಿಕ್ಕೊ ಅಡಿಗೆ ಮಾಡೋ ಆಗ ಊಟ ಮಾಡ್ತಾ, ಆಹಾ ಅಲ್ಲಿ ಇಲ್ಲಿ ಬೆಳಕ್ಕಂಡು ಮಕ್ಕಳು ಆಗ,

ಹನ್ನೆರ್ಡು ಪೈಸೆ ವಾತದೋ
ಹರೆಯದವರು ಅವ್ರು ಹಾತರೊ
ಹರೆದ ಮ್ಯಾಲೆ ಅಣ್ಣಯ್ಯ
ವೈಸು ಬಂದು ಮ್ಯಾಲೆ ಹುಡುಗರ
ಹುಡುಗುರು ಬಂದೇ ಬಿಡ್ತಾರೆ
ತಂದೆ ಕೈಗೆ ಉಂಡ್ಯಾರೆ
ನಾಲ್ವರು ಕರಕಂಡು ಬರ್ತಾರೆ
ವೈಸು ಬಂದ ಮ್ಯಾಲೆ ಹುಡುಗುರು
ಗಡ್ಡ ಮೀಸೆ ಬಂದ ಮ್ಯಾಲೆ ಸುಮ್ನೀರ್ತಾರ
ಏನಪ್ಪ ಕಕ್ಕನವರೆ

ನಮ್ಮ ತಂದೆ ಹಿಂದೆ ಹುಟ್ದೋರು ನೀವು ಎಂಜಿಲಾದ್ರು ಕುಡ್ದೋರು ನಮ್ಮಪ್ಪ ನಮ್ಮಮ್ಮ ಸತ್ತಾಗ ನಾವು ಐದು ವರ್ಸ ಹುಡುಗುರು ಐದು ವರ್ಸ ಹುಡುಗುರಿದ್ದಾಗ ನಮ್ಮ ಕೈಕಾಲು ಮುರಿದು ಕಂಬಕ್ಕೆ ಕಟ್ಟಿ ಆಸ್ತಿ ತಂದಕಂಡ್ರಿ ಈಗ ನಾವು ಅವ್ರು ಕೈ ಇವ್ರು ಕೈಗೊ ಕಸ ಬಳಿದೊ, ಎಮ್ಮೆ ಕಾಯ್ದೊ ದನ ಕಾಯ್ದು ದೊಡ್ಡೋರಾಗಿವಿ, ಆಹಾ… ಈ ಮಟ್ಟಿಗೆ ಬಂದೀವಿ

ಈಗ ನಮ್ಮ ಮದ್ವೀ ಮಾಡೊ ನಾವೆಯ
ತಂದೆನಾಸ್ತಿ ಕೊಡೊನಂತಿಯ
ಕೊಟ್ರಿ ಒಳ್ಳೆದಾತೈತೆ
ಕೊಡದ್ದಿದ್ರೆ ಉಳಿಯೋದಿಲ್ಲನ
ಮೂವರು ನಾವು ವೈದಿವಿ
ಇಬ್ರು ನೀವೆ ವೈದಿರಿ
ಎದೆಮ್ಯಾಲೆ ಕಾಲಿಟ್ಟನ
ಕುತ್ಗೆಮ್ಯಾಲೆ ಕಾಲಿಟ್ಟನ
ಈಗ ಇದ್ಹಂಗ ಆಗ ಅದೆ ದೇವ್ರು ಇದ್ದೆಂದ್ರೆ
ನಮ್ಮಪ್ಪ ಆಸ್ತಿನ ಒಯ್ತಿದ್ರೆ
ನಿಮ್ಮ ರಕ್ತ ಕುಡಿತಿದ್ದಾರ
ಒಂದು ವರ್ಸನಿಂದ ಕುಡಿತಿದ್ದೊ
ಏನೋ ಆಗ ಏನೋ ತಿಳಿದ್ಯಾರ
ಸಣ್ಣ ಮಕ್ಕಳೆ ಇದ್ದಿವಿ
ಐದು ವರ್ಸ ಹುಡುಗುರಿದ್ದೀವಿ

ಅಂತರ ಮುಂದಾಗ ಆಗ ತಂದಕಂಡೋನು ಈಗ ತಂದಕಂಡನು ಆಗ ಕೊಡಾಂದ್ರೆ ಕೊಡ್ತೀಯ ಕೊಡಾದಿಲ್ಲ ಅಂತಿಯ ಕೊಡಾದಿಲ್ಲ ಅನವಾಗ ಕುತ್ಗೆ ಕೊಯ್ತಾರೆ ಇಷ್ಟು ದಿನ ತಿಂದಿದ್ದೆಲ್ಲ ಒಂದೇ ದಿಸ ಹೊಂಟೋತೈತೆ ಏನಂತರ ಎಲ್ಲರ ಮಂದಿ ಐಯ್ – ಅಣ್ಣನಾಸ್ತಿ ತಂದಕಂಡ ತಿಂದ ಮಕ್ಕಳ ಕೈಯಾಗೆ ಸತ್ತ ಮಕ್ಕಳಿಗೆ ಮದ್ವೀ ಮಾಡಿಲ್ಲ ಆಸ್ತಿ ಕೊಡ್ಲಿಲ್ಲ

ಹಾಳಾಗೋದು ಅಂಥರ
ಮಂದಿ ಬಾಯಾಗಣ್ಣಯ್ಯ
ಕಂಡರ ಬಾಯಾಗಣ್ಣಯ್ಯ
ಯಾಕ ನಡಿಬೇಕಾ ಅಣ್ಣಯ್ಯ
ಬೇಡ ಬೇಡರ ಅಣ್ಣಯ್ಯ
ತಮ್ಮೊ ಎಲ್ಲರ ಅಣ್ಣಯ್ಯ
ಮುಂದಕೆ ಜಲ್ಮ ಹೋದೈತೆ
ಈಗ ನೋಡಿ ಉರಿಬ್ಯಾಡಣ್ಣ
ನೀನೆ ಉರಿಬ್ಯಾಡ ಅಣ್ಣಯ್ಯ

ಅಣ್ಣಾ … ಈಗ ನೋಡಿಕೊಂಡು ಉಕ್ಕಂಡ್ರಲ ಮುಂದಕ್ಕೆ ಮುದೇ ಕಾಲಕ್ಕೆ ನೋಡಬೇಕು ನಾವು ಮುದೇರಾಗ್ತಿವಿ ಅವ್ರು ಹಾರೆದವರಾಗ್ತಾರೆ ಅಂಬತ್ತಿಗೆ ಅಂಗಲೇ ತಮ್ಮ ಲೋಕದಲ್ಲಿ ಏನಂತ ಬರ್ದಾರ ಸಾವ್ರ ವರ್ಸ ಇದ್ರೂ ಸಾವು ತಪ್ಪದಿಲ್ಲ ಜೀವಕ್ಕೆ ಅಂತ ಬರ್ದತೆ. ಆಹಾ ನೂರು ವರ್ಸ ಬಾಳಿದ್ರೆ ಮಗನಿಗೆ ಒಂದೇ ಇನ್ನ ಬಡಿಸಿಕ್ಕಂಡು ಸಾಯಬೇಕು ಅಂತ ಬರದೈತೆ

ಬಡವ್ರು ಚಿಂತಿ ಇಲ್ಲಾರೆ
ಸತ್ರೆ ಚಿಂತೆ ಇಲ್ಲಾರೆ
ಸತ್ರೆ ಚಿಂತೆ ಇಲ್ಲಾರೆ
ಅಣ್ಣಾನಾಸ್ತಿ ಬಿಡಿದಿಲ್ಲರ
ಎಂಜಲಾಗಲಿ ನೋಡರಿ
ಒಂದು ತಾಯಿ ಹೊಟ್ಟಿಗೆ ಹುಟ್ಟಿವಿ
ಅಣ್ಣ ಸತ್ರೆ ನಾನು ತಿನ್ತೀನಿ
ನಾನು ಸತ್ರ ಅಣ್ಣ ತಿನ್ತಾನ

ಏನಣ್ಣಾ ಆ… ನೀನೊಬ್ಬನೇ ತಿನ್ನಪ್ಪ ಅಣ್ಣನಾಸ್ತಿ ನನ್ಗೆಬೇಕಿಲ್ಲ ಹಂಗರೆ ನಿನ್ಗೆ ಬೇಕಿಲ್ಲೇನ ತಮ್ಮ ಬಂಡೇರಾವ ಬೇಕಿಲ್ಲಪ್ಪ ಸಿದ್ದೋಯಿ ನೀನೆ ಮಾಡು ಈ ಅಣ್ಣಾನ ಮಕ್ಕಳು ಬೇಕು ನಾನು ಕರ್ಕಂಡು ಬಂದು ನನ್ನ ಆಸ್ತಿ ಹೋಗ್ಲಿ ನನ್ನ ಮಕ್ಕಳನ ನಾನು ಜೋಪಾನ ಮಾಡ್ಕೊಂಬುತ್ತೀನಿ ಏಯ್ ….

ಅಣ್ಣನ ಮಕ್ಕಳ ಕರ್ಕಂಡು ಬರ್ತಿಯಾ ಆಹಾ
ಅಣ್ಣನ ಮಕ್ಕಳ ಕರ್ಕಂಡ ಬಂದಾರೆ ಕೈಕಾಲು
ಕೈಕಾಲು ನಾನು ಮುರಿತೀನಿ
ಸಾಯ ತನಕ ಕೂಳ್ಹಾಕ್ಯಾನ
ಬೆನ್ನಿಂದೆ ಹುಟ್ಟಿದವನು ಸೈ
ಎಂಥ ದಾಲು ದೌಲನು ಸೈ
ನನ್ಗೆಪ್ಪ ಮುಂದೆ ಹೂತಿಯ ಸೈ
ದೊಡ್ಡರ ಮಾತ ನೀನು ಮಾತಾಡ್ತೀಯ ಸೈ
ನನ ಹಿಂದೆ ಇರಬೇಕರೆ ಸೈ
ನನ ಮಾತ ಕೇಳೈಕಲೆ ಸೈ
ಹೇಳಿದ ಮಾತ ಇರಬೇಕಲೆ ಸೈ
ಹೇಳಿದ ಮಾತ ಕೇಳಬೇಕುರಾ
ಹೇಳಿದ ನೀನು ಕೇಳಬೇಕು

ಅಣ್ಣಾ … ಹೇಳಿದ ಮಾತು ಕೇಳಬೇಕು ಅಂತಿಯ ನನಗೆ ಅಣ್ಣಾ ಮಕ್ಕಳ ಬಿಟ್ಟು ನಾನಿರದಿಲಾಣ್ಣ, ಹ್ಯಾಂಗಾ ಆ ಹುಡುಗುರ ಲೋಕ ಕಾಲ ಕಳೆಯೋದು ಅಂಗಾರೆ … ಅಣ್ಣನ ಮಕ್ಕಳ ಮ್ಯಾಲೆ ಬಾಳ ಜೀವದಿ ನಾನು ಕರ್ಕಂಡು ಬರ್ತೀನಿ ಈಗ ಅಣ್ಣನ ಮಕ್ಕಳ ನಿನ್ನ ಒಂದ ಮನಿಲಿ ಬಿಡ್ತೀನಿ ನಾನೊಂದು ಮನೇಲಿರ್ತೀನಿ ನೀನು ಬರಬ್ಯಾಡ ಆ .. ಕೌಲೇಶ ಕೋಟಕ್ಕೆ ಸರಿ ಬಿಡಾಣ್ಣ, ನೀನೆ ಹೋಗಿ ಕರ್ಕಂಡು ಬರ್ತೀಯಾ… ಕರ್ಕಂಡು ಬರ್ತಿನಿ ನಾಯ್ಕ ಮಕ್ಳಿಂದ ಊರಿನ ಕೊಳ್ಳೆ ಹೊಡೆಯುವುದು ಅಂದರೆ ದಡೆಗಾವು ಬಡೆಗಾವಿನಿಂದ ಆಗ ನಾಯ್ಕ್ರಿ ಎಬ್ಬಿಸಿದ ಯಾರು

ಆಗ ಕಳ್ರುದತ್ತೈ ಮಕ್ಕಳು
ಸಂದಿಗೆ ಮಟಕೆ ಮಂತ್ರ ಮಾಡ್ಯಾನ
ಮಂತ್ರವ ಮಾಡಿ ವೈದಾನ
ಹಸ್ರಹಾವ ಕಳ್ಳರ ವೈದಾನ
ಹಸ್ರಬ ಕಳ್ಳರೊಯ್ದರೆ ಸೈ
ಅವ್ರು ಮನೆ ದೇವರ ನೋಡ್ಯಾರ ಸೈ
ಆಗ ಗಾಳಿ ದೇವಿಗೆ ಸೈ
ಆದಿ ಶಕ್ತಿ ಅವ್ರಿಗೆ ಸೈ
ಮಂತ್ರಗಳು ಓದಿಬರ್ತರ ಸೈ

04__MS_346-KUH

ನಿಂತರ ಮಾತಾಡ ಬಾರ್ದೂ ಸೈ
ಇನ್ನ ಕಣ್ಣು ತೆರೆದು ನೋಡಬಾರ್ದು ಸೈ
ಒಬ್ರು ಮಿಸ್ಕಾಡಬಾರ್ದು
ಬಾಳಮಂತ್ರ ವೈದಾತಿ
ಅವ್ರು ನಲ್ಲಿ ಅಣ್ಣಯ್ಯಾ
ಸೌ ಮಾತ್ರ ಬರ್ದು ಬರ್ತಾನ
ಆಗ ಹೌದು ನೋಡುರ
ಕುತ್ಗೆ ಕೊಯ್ದು ಅವ್ರು ಹೊತಾರ
ಕುತ್ಗೆ ಕೊಯ್ದೊ ಹೊತಾರ
ಅವ್ರೆ ಮಂತ್ರ ಓದ್ಯಾರ

ಆಸ್ತಿ ಕನ್ನ ಹೊಡ್ದು ಹೊತಾರ, ಸೆಂಚೆಗೆ ಮುಂಬೆಗ ಮಂತ್ರಾಳು ಮಾದೇವ ಅಸ್ತಪಕಳ್ಳ ಕಳ್ಳ ದತೈ ಮಕ್ಕಳು ನಾಯಕ್ರು ಒಬ್ಬರು ಗ್ಯಾಸ್ಸಿದಪ್ಪ ಇರೆ ಒಬ್ಬರು ಗ್ಯಾಲ ಕೊಡ ಇದ್ಹಂಗ ಅದಾಕಿ ಆಹಾ.. ಅಷ್ಟು ದಪ್ಪದರು ನೋಡಪ್ಪಾ ಅವ್ರು ಕರ್ಕಂಡು ಕುದ್ರಿ ಹಿನ್ನ ಎರಡ ಕುದ್ರೆ ತಗದ ಕುದ್ರಿ ಮ್ಯಾಲೆ ಕುಂತ್ಕಂಡ ಆಗ ಐದು ನಾಯಿಗಳ ತಗದ ಚಿಕ್ಕನಾಯಿ, ಸಾರನಾಯಿ, ಮದಿನಾಯಿ, ಕರಡಿನಾಯಿ ಅವು ಭೂಮಿಗಿದ್ದುವಲ್ಲ ಹುಡುಕ್ಯಾಡಿ ತೋರ್ಸವೆ ಮಾರ್ವಾಡಿ ಶೇಠಿ ನಾಯಿಗಳೆಂದರೆ ಆಹಾ

ಕುದ್ರಿ ಮ್ಯಾಲೆ ಕುಂತಾನ ಸೈ
ನಿನ್ನ ಚಂದರ ಹಿಡಿದಾನ
ಒಟ್ಟು ಬಾಗಿ ಹಿಡಿದಾನ
ತುಪಾಕು ಬಾಗಿ ಹಿಡಿದಾನ
ಆಗ ವಕ್ಕಿರ ಕರ್ಕಂಡು
ಮುನ್ನೂರು ಮಂದಿ ಕರ್ಕಂಡು
ಎಲ್ರು ಕಪ್ಪಿಡಿ ತಕ್ಕಂಡು
ಕಣ ಕಣ ಕಣ ಓಡ್ಯಾನ
ಕುದ್ರಿಯನ್ನ ಓಡ್ಸ್ಯಾನ
ಕುದ್ರೆ ಒಮದೇ ಓಡ್ಸ್ಯಾನ
ದಡೆಗಾವುಲಿಂದ ನೋಡ್ಯಾರ
ಹೊಳೆ ತಟಾದಿ ಬಂದ್ಯರ
ಆಗ ಮೌಲೇಸು ಕೋಟಕೆ
ಮೌಲೇಸು ಕೋಟಕೆ ಬಂದಾನ
ಸಿದ್ಯೆ ನಡಬಿ ದೊಡ್ಡರ
ಕೌಲೇಶ ಕೊಟಕೆ ಬಂದರೆ

ಸಿದ್ದೆ ಬಾಗಿ ದೊಡ್ಡಾರ ಏ ನಿನ್ನ ಕರುಣೆ ಕಲುವಾದರೆ ಯಮ್ಮ

ಅಗಸಿ ತಗದು ಒಳಗೆ ಬಂದನ
ಅಗಸಿ ತಗದು ಒಳಗೆ ಬಂದನ
ಸಿದ್ದೆ ಬಂದೇ ಬಿಟ್ಟಾರ

ಅಗಸಿ ತಗದು ಒಳಕೆ ಬಂದ, ಬಂದ ಮ್ಯಾಲೆ ಊರಾಗ ಮಂದ್ಯಾಲ್ಲ ನೋಡ್ರು ದೊಡ್ಡೊಡ್ಡ ಯಜಮಾನ್ರು ನಿಮ್ಮಂತರು ಆ… ಏ… ತಮ್ಮಾ ನೋಡಪ್ಪಾ ಮೂರು ದಿಸಾಯ್ತು. ಈಗ ಹೊಳೆಚೆ ಕಡೆಗೆ ದಡೆಗಾವು ಸಿದ್ದೋಯಿಗೆ, ನಿಮ್ಮ ಕ್ಕಕಗೆ ನಿಮ್ಮ ತೆನ್ದೆನಿಂದ ಹುಟ್ಟಿದ ತಮ್ಮಗೆ ತಿಳುವರಿ ಕಾಗೈತಿ ಪಾಪ ನೆಡೆದೊದ್ರೆ ಆಗ ತಡ ಆತದಂತ ಕುದ್ರಿ ಹಾಕ್ಕಂಡು ಬರ್ತಾನೆ ಪಾಪ. ಆಹಾ… ಅಣ್ಣನ ಮಕ್ಕಳ ಮ್ಯಾಲೆ ಎಷ್ಟು ಜೀವ ಇದಾನಪ್ಪ ಆ… ನಿಮ್ಮ ಕಕ್ಕ ನಿಮ್ಮನ ಕರ್ಕಂಡು ಹೋಗಾಕ ಬಂದಾನ ನೀವು ಏನಿಲ್ಲ ನಾವು ಹೇಳಕ್ಕಿಲ್ಲ ಇಗೋ ನಿಮ್ಮ ತಾತ ಭೂಮಿ ಕೊಟ್ಟಾನ, ನಿಮ ತಾತ ಮನಿಗಳನ್ನ ಕೊಟ್ಟಾನ ಆ…. ನಾವು ಮಾತಾಡಕ್ಕಿಲ್ಲ ಆ…. ನೀವು ನಿಮ್ಮ ತಂದೆ ಕುದ್ರಿ ಮ್ಯಾಲಿಂದ ಕೆಳಗಿಳದ ಹೊತ್ತಿಗೆ ಆ… ಆಗ ಎಲ್ಡಾ ಪಾದ, ಪಾದ ಹಿಡಕಳ್ಳಿ ಈ ಕೆರೆ ಎಂಬುದು ಒಟ್ಯಾಗಿಡಿ ದುಃಖ ಮಾಡಿ ಎಂಥಾ ಮಕ್ಕಳಿದವನು ಎಂಥಾ ಕರ್ಮಿಷು ಎಂಥಾ ಪಾಪಿನಷ್ಠನಾಗಲಿ ಹೊಟ್ಟೆ ಕಳುತಿಲ್ಲಾ ಹೊಳ್ಯಾಡ್ತಾವೆ ಆಹಾ… ಯಾಮ್ಮಾ ಎಂಥಾ ಹುಡುಗುರಂತ,