ಎಂಥಾ ದುರ್ಮಾರ್ಗರೈದಿರೆ
ತಮ್ಮೋರು
ಎಂಥಾ ತಾವದವರರೈರೆ
ಎಂಥಾ ದುಷ್ಟದವರೈದಿರಲಾ
ಎಂಥಾ ಕರ್ಮದವರೈದಿರಲಾ
ಎಂಥಾ ಕಲ್ಲಿರುವವರು

ತಾಯಿ ತಂದೆ ಮಣ್ಣು ಮಾಡ್ಯಾರ
ತಾಯಿ ತಂದೆ ಮಣ್ಣು ಮಾಡಾಕೆ ಬರಗಿಲ್ಲ
ಎಂಥಾ ದುಷ್ಟು ಇವರಿಬ್ರು
ಏಳು ಕರ್ಮ ಮಾಡಿರುವವರೇ

ಏ ಎಂಥಾ ಪಾಪಕರ್ಮರೈದಿರೇ ಏ ತಾಯಿ ತಂದೆ ಸತ್ತಾರಂತೀರಿ ಎಷ್ಟೊ ಬಡಕಂತ ಬರ್ತಾರೆ ಆಗ ಮಣ್ಣಿಗೆ ಬಂದಿಲ್ಲಪ್ಪಾ ಈಗಿನ್ನವರ ಕಾಲ ತಂದೆ ಆಸ್ತಿ ನಾನೊಬ್ಬನೆ ತಿಂತೀನಿ ಈಸ್ ದಿನ ಬೆಳ್ಕಂಡ ತಿಂದಿನಲ್ಲ ಮಣ್ಣು ಮಾಡಿದ ಮ್ಯಾಲೆ ಒಂದು ಎಕ್ರೆ ಬರ್ಲಿ ಅರ್ಧ ಎಕ್ರೆ ಬರ್ಲಿ ಮೂರು ಹಂಚಿಕೆಂಬುತ್ತಿದ್ದಿಲ್ಲ ತಂದಿನ ಆಸ್ತಿರ್ರೀ… ಎಂತಾದುಷ್ಟು ಈಗ ಬರ್ಲಿಲ್ಲ ನೀವು ಹುಟ್ಟಿಲ್ಲ,

ನಾನೇ ಒಬ್ಬನೇ ಹುಟ್ಟೀನಿ
ನಾನೇ ಮಗ ವೈದೀನಿ

ನೀವು ಮಕ್ಕಳಾಗಲಿಲ್ಲಾನ

ಒಬ್ಬನೇ ಮಣ್ಣೇ ಮಾಡೇನು
ಎರ್ಡ ದಡೇ ಹೂವ ತಂದಾನ
ಮ್ಯಾಳ ತಾಳ ತರ್ಯಾನ
ತಂದೆಗೆ ಕೈ ತೊಳ್ಸಾನೆ

ತಾಯಿಗೆ ಕೈ ತೊಳ್ಸಾನೆ
ಹೊಸ ಬಟ್ಟೆಗಳೇ ಹಾಕ್ಸಾನ
ಮ್ಯಾಗ ಹೂನೆ ಹಾಕ್ಸಾನ
ತಾಯಿ ಇಷ್ಟು ಬಗಿನ
ಇವಳಿ ಬಂದೆ ಕಟ್ಟಿನ
ಇನ್ನಾವಾದ್ರೆ ಮುಖ ಕಟ್ಟೆನ
ತಾಯಿ ತಂದೆ ಕುಂದ್ರಿಸಿ ಬಿಟ್ಟಾನ
ಮ್ಯಾಳ ತಾಳ ತರ್ಸಾನ
ತಾಯಿ ತಂದೆಮ್ಯಾಗ ಎತ್ತಾರ
ಅವ್ರೆ ಬಂದೇವು ಅಣ್ಣಾಯ್ಯೊ
ಗಂಡ ಹೆಂಡ್ತಿ ನೋಡ್ಯಾರಾ
ದುಃಖ ಅಳ್ಕಂತಾ ಬರ್ತಾಳ
ಗರ್ಭ ತಾಯಿ ಬರುಬ್ಯಾಡರೆ
ಎಪ್ಪಾ ಅತ್ತೆಮಾವ ನೋಡರ
ಮಣ್ಣ ಹಾಕಿ ನಾ ಬರುತೀನಿ
ನನ್ನ ಜೀವ ಹೋಗ್ಲಿ ಇರದಿಲ್ಲ
ನನ್ನ ಜಲ್ಮ ಇರಾದಿಲ್ಲ
ಆಗೆ ಬಂದೇವು ಅಣ್ಣಾಯ್ಯಾ
ಆಗ ಇನ್ನಾ ಅವ್ರು ಬಂದಾರ
ಅವ್ರೆ ಬಂದೇವು ಅಂತಾರೆ
ಕುಣಿ ಒಂದೇ ಮಾಡ್ಯಾರ
ಗಂಧದ ಚಕ್ಕೆ ಹಾಕ್ಯಾರ

ಗಂಧದ ಚಕ್ಕೆ ಹಾಕಿ ಆಗ ಹೆಣಗಳನ್ನು ಇಳ್ಸಿದ್ರು ಆಗ ಗಂಧದ ಚಕ್ಕೆ ಮ್ಯಾಲೆ ಮಲಗಿಸಿದ್ರು ಮಲಸಿ ಆಗ ಈಗ ಬ್ಯಾಕಲ ಕಟ್ಟಗಿ ಕುತ್ತಿಗೆ ಮ್ಯಾಲೆ ಎದೆಮ್ಯಾಲೆ ಇಟ್ರು,

ಚಿಮುಣಿಣ್ಣೆ ಉಗಿಬಿಟ್ಟಾರೆ
ಆಗ ಉರಿ ಹಚ್ಯಾರೆ
ಬೆಂಕಿ ಹಾಕಿ ಸುಟ್ಟಾರ

ದಗ ದಗ ಉರಿತೈರೊ
ಕಾಲೇ ಬಂದೆ ಉರಿತೈತೊ
ಅವ್ರು ಬಾಗಿ ನೋಡಮ್ಮ
ಅವ್ರೆ ಒಮದೇ ಉರದಾರೊ
ಗಂಡ ಹೆಂಡ್ತಿ ನೋಡಾರ
ತಲೆ ತಲೆ ಹಿಡಕ್ಕಂಡಾರ
ಅವ್ರು ದುಃಖಾನೆ ಮಾಡ್ತಾರೆ
ಎಮ್ಮಾ
ಅತ್ತೆ ಮಾವನನಿಗೆ ಇಲ್ಲಾನ
ಅತ್ತೆದ್ದು ಈಡು ಬಿದ್ದುರೋ
ಎಮ್ಮಾ
ದೇವ್ರು ಇದ್ದಾಂಗ ಇದ್ದರೊ
ಮನಿಗೆ ದೇವ್ರು ಇದ್ದಾರೊ
ಇದ್ದರಣ್ಣಾ ಇದ್ದೂರೆ

ಅಂಥಾ ಆಗ ಸೊಸೆ ನೋಡಿ ಈಗ ಮಗ ದುಃಖ ಮಾಡ್ತಾರೆ ದಗ ದಗ ಉರ್ದು ಬೂದ್ಯಾಗಿ ಕಂಟಿ ಬಿದ್ದಿರ್ತಾದೆ

ಬೂದೆಲ್ಲ ಕೂಡು ಮಾಡ್ಯಾನೆ
ಆಗ ನಿವ್ವಾಳೆ ಕಟ್ಯಾನ
ಸಮಾದಿಯವನೆ ಕಟ್ಯಾನ

ಸಿಮೆಂಟು ತಂದು ಕಲ್ಲು ತಂದು ಸಮಾದಿ ಕಟ್ಟಿಸಿಬಿಟ್ರು ಸಮಾದಿ ಕಟ್ಟಿ ದಡಿಯಮಲ್ಲೂಟ ಆ ಸಮಾದಿ ಮ್ಯಾಲೆ ಹಾಕಿ ಕಾಯಿ ಒಡೆದು ಪ್ರದಕ್ಷಿಣೆ ಮಾಡಿಕೊಂಡು ಮನಿಗೆ ಬಂದ್ರೆ ರಾವುರಾವುರಾವು ಅಂತೈತಪ್ಪಾ ಒಂದು ಎಕ್ರೆ ಅಗಲಾಗೈತಪ್ಪಾಮನಿ ಐದು ಬಾಗಿಲ ಮನಿ ಮಾರ್ವಾಡಿ ಶೇಠಿಮನಿ ಆಗ ಮನ್ಯಾಗ ಕುಂತ್ಕಂಡು

ಕಂಬ ಹಿಡ್ಕಂಡು ಅತ್ತಾರೆ
ತಿರುಗೊಂದು ಹಿಡ್ಕಂಡು ದುಃಖ ಮಾಡ್ಯಾರ
ಅತ್ತೆ ಮಾವ ನಮ್ಗೆ ಇಲ್ಲರೊ
ತಾಯಿ ತಂದೆ ನನ್ಗೆ ಓದೂರೆ
ಯಾರು ನಂದಿಗೆ ಹೇಳದ್ರೆ
ಎನ್ನಗ್ಯಾನ ಹೇಳವರೆ ಎಲ್ಲರೆ

ಗ್ಯಾನ ಹೇಳುವರಿಲ್ಲ ಬುದ್ದಿ ಹೇಳುವುದಿಲ್ಲ ಅಂಥಾ ಗಂಡ ಹೆಂಡ್ತಿ ದುಃಖ ಮಾಡ್ತಾ ಇರ್ರೆ, ಊರಾಗೆ ದೊಡ್ಡೋರೆಲ್ಲಾ ಆಗ ಏನಂತಾರೆ, ಏನ್ರೀ ಯಾಕ ದುಃಖ ಮಾಡ್ತೀರಿ ಮುದೇರು ಸತ್ತೋದ್ರು ಯಾಕ ಅಳ್ತೀರಿ ಎಪ್ಪಾ ಅಂಥಾ ತಾಯಿ ತಂದೆ ಸಿಗಾಕಿಲ್ಲ ಆದ್ರೆ ಸಿಗಾದಿಲ್ಲ ಮತ್ತೆ ಏನ್ ಮಾಡಾದೇವಿತಪ್ಪಾ ನಾವು ನಾಳೆ ಹೋಗೇರೆ ಅವ್ರು ಮುಂದೆ ಹೋದರೆ ನಾವು ಹಿಂದೆ ಹೋಗೋದು ಅಳಬ್ಯಾಡಪ್ಪಾ ಈಗ ಊಟಮಾಡ್ರಿ ಅಂಥಾ ಅವ್ರು, ಇವ್ರು ಗ್ಯಾನ ಹೇಳ್ತಾರ

ಒಂಬತ್ತು ದಿಸಾಗಾದಣ್ಣ
ದಿಸಾ ಮಾಡಿ ಬಿಟ್ಟಾರ
ದಿಸಾ ಮಾಡಿದ ಮ್ಯಾಲೆ ಅಣ್ಣಯ್ಯಾ
ಆರು ತಿಂಗಳು ಹೋಯಿತು
ಯನ್ನಾರು ಹಾಗೆಲ ಬಿಟ್ಟಾರ
ಎರ್ಡ ತಿಂಗಳಾಗ ನೋಡೆರ
ಸೋಮಾರ ಹನ್ನೆರ್ಡು ಗಂಟೆಗೆ
ತಾಯಿ ಬ್ಯಾನೆ ಎಟ್ಸಾರ
ಸೋಮರ ಹನ್ನೆರ್ಡು ಗಂಟೆಗೆ
ತಾಯಿ ಬ್ಯಾನೆ ಎಟ್ಸಾರ
ಕಂಬ ಹಿಡಿಕ್ಕಂಡು ತಿಮ್ತಾಳ
ಬ್ಯಾನೆ ಬಂದೆ ನೋಡ್ಯಾರ
ಎಲ್ಲವರೆಗೆ ಮನಿದೇವಾರ
ಗುಡ್ಡದ ಮ್ಯಾಲೆ ಸ್ವಾಮೇರ
ಖಂಡೇರಾಯ ಮನೆದೇವ್ರು
ಖಂಡೇರಾಯ ನೆನೆಸಿ ಕೊಂಡಾಳ
ಆತ ಏನಾ ನೋಡ್ಯಾನ
ಆಗ ಬಂದೆ ಅಣ್ಣಾಯ್ಯಾ
ಏಳು ವರ್ಸ ತಾನು ಮಾಡ್ಯಾವನೆ
ಮೂವರ ಮಕ್ಕಲು ಹುಟ್ಯಾರ

03__MS_346-KUH

ಮೂವರು ಒಂದೆ ಬಾರಿ ಹುಟ್ಟಿಬಿಟ್ರು ಒಲೆ ಗುಂಡು ಹುಟ್ಟಿದ್ದಂಗೆ ಮೂವರು ಒಂದೇ ಬಾರಿ ಹುಟ್ಬಾರ್ದು. ಆಗ ಹುಟ್ಟಿದರೆ ಇಬ್ರು ಹುಟ್ಟಬೇಕು ಹುಟ್ಟಿದರೆ ನಾಲ್ವರು ಹುಟ್ಟಬೇಕು. ಈಗ ಐದು ಮಂದಿ ಮೂವರು ಏಳು ಮಂದಿ ಹುಟ್ಟಬಾರ್ದು. ಆಗ ಜೀವಕ್ಕೆ ಏನ್ ಮಾಡ್ರು ಆ ಎಮ್ಮನಿಗೆ ನೀರು ಹಾಕಿದ್ರು ಆಗ ವರ್ಷ ಮ್ಯಾಲೆ ಕುಂದ್ರಿಸಿದ್ರು ಆಗ ನಾನಂದರಾವ್ ಶಾಸ್ತ್ರ ಹೇಳವರು ಕರಕ್ಕಂಡು ಬಂದು ಓಂ ಪರಮಾತ್ಮನೆ ಆಗ ಖಂಡೇರಾಯ ಅಂಥಾನೋಡಿದ್ರು ನೋಡದ್ರೆ ಏನೈತೆ ಅಂದ್ರೆ ತಾಳಂಗ ಒತ್ತಿಗೆ ಏನಪ್ಪಾ ಮಕ್ಕಳು ಹುಟ್ಟಿದ ವ್ಯಾಳೆ ಒಳ್ಳೆದೈತೆ ಮಕ್ಕಳು ಹುಟ್ಟಿದ ಐದು ವರ್ಸಕ್ಕೆ ತಾಯಿ ತಂದೆ ತೀರಿ ಹೋದಾರ ತಾಯಿ ತಂದೆ ಉಳಿಯಾದಿಲ್ಲಪ್ಪಾ ಭೂಮ್ಯಾ ಸುತ್ತು ಮ್ಯಾಲರ ಸೈ ಮಕ್ಕಳಿಗಾಗಿ ನೋಡ್ಸಾರ ಬಾಳಕಷ್ಟು ಬರ್ತಾದೆ ಐದು ವರ್ಸಕೆ ಎಳರ ದುಃಖ ಉಳದರೆ ಎಮ್ಮಾ ಪಳ ಪಳ ಕಣ್ಣೇರು ಉದ್ರುವೆ ಏನ ಮಾಡಬೇಕಪ್ಪಾ ಕುರುಡಾಗಿಲ್ಲ ಕುಂಟಾಗಿಲ್ಲ ಕೆಟ್ಟವ್ನಾಗ್ಲಿ ಒಳ್ಳೇವ್ನಾಗ್ಲಿ ಹುಟ್ಟಿದವನ್ನ ಬೀಸಾಕ್ತೀಯಾ ಆಗದಿಲ್ಲ ಮತ್ತೆ ಮಕ್ಕಳು ಹುಟ್ಟಿದ ಐದು ವರ್ಸಕ್ಕೆ ತಾಯಿ ತಂದೆ ಸಾಯ್ತೀವಂತ ಅವ್ರನಾ ಬೀಸಾಕಿ ಬರಾನ ಅಪ್ಪಾ ಏನ್ಮಾಡ್ಬೇಕು ಈಗ ನಾವು ಸತ್ತರೆ ಅವರನ್ನ ಇರ್ತಾರೆ ಎಂಗಾನ ಕಷ್ಟಪ್ತಾರ ಅಂತಂದು ಮೂವರಿಗೆ ಒಂದೇ ತೊಟ್ಲು ಆಗ ಮೂವರಿಗೆ ಬೆಳ್ಳಿ ಉಡದಾರ ಮೂವರಿಗೆ ಬಂಗಾರದ ಉಂಗುರುಗಳು ಮಾರ್ವಾಡಿ ಶೇಠವನಿಟ್ಟು ಏನಂತಾನೆ,

ಚಿಕ್ಕಮಗನಿಗೆ ನೋಡಮ್ಮಾ
ಸೋಮೋಜಿಂತಾ ಈರೋಜಿ
ನಡುಮಗನಿಗೆ ಪೀರೋಜಿ
ಇಬ್ಬರ ದೊಡಡರ ಐದಾರ
ರಾಜ ಸೋಮಯ್ಯ ಅಂತಾನ
ರಾಜ್ಯವಾಳುದಕ್ಕೆ
ನಿಮ್ಮದು ರಾಜ್ಯ ವೈತೆರಾ
ನಮ್ಮ ರಾಜ್ಯವೆ ವೈತೆರಾ
ನೀವು ಹುಟ್ಟಿದ ವ್ಯಾಳೆ ಏನರಾ
ಐದು ವರ್ಸಕ್ಕೆ ನಾವು ಹೋತರಾ
ಐದು ವರ್ಸ ನಾವು ಇರೋದು
ಅಂತಾ ಹೆಸ್ರು ಇಟ್ರು

ಹೆಸ್ರು ಇಟ್ಟು ಇನ್ನಾ ಅದ್ರಾ ಮಕ್ಕಳ ಜ್ವಾಪಾನ ಮಾಡ್ತಾನ ಈಗ ರಾಜ ಆ ಮಕ್ಕಳಿಗಾಗಿ ಹಾಲಾಕಿ ಈಗ ಹೊತ್ತು ಮುಳಗೊ ಹೊತ್ತಿಗೆ ಎಲ್ಡಸರ್ತಿ ಮೈತೊಳ್ದ, ಆಹಾ ಆ ಮಕ್ಕಳಿಗೆ ಗೋದಿ ರೊಟ್ಟಿ ಹಾಲು ಸಕ್ಕರೆ,

ಒಂದೇ ವರ್ಸ ಸಲುವ್ಯಾನ
ಎಲ್ಡೇ ವರ್ಸ ಸಲುವ್ಯಾನ
ಮೂರೇ ವರ್ಸ ಸಲುವ್ಯಾನ
ನಾಲ್ಕು ವರ್ಸ ಸಲುವಾಯಿತು
ಐದು ವರ್ಸದಲಿ ಬಿದೈತೊ

ಒಬ್ಬನಿಗೇನೂ ಬೇಷ್ ಬಾಯಿ ತಿರಗತೈತೆ ಮಾತಾಡಕೆ ಇನ್ನಾ ಇಬ್ರು ತಮ್ಮರಿಗೆ ಬಾಯಿ ತಿರಗಾದಿಲ್ಲ. ಐದು ವರ್ಸ ಹುಡುಗರು ಎಷ್ಟ ಇರ್ತಾರಪ್ಪ ಕೊಟ್ಟರ ದೇವ್ರು ಈ ಮಕ್ಕಳುಟ್ಟೀರು ತಾಯಿತಂದೆ ಸಾಯಿಬೇಕಂತ ಬರ್ದು ಇಟ್ಟಾನೆ ದೇವ್ರು. ಯಾರು ನಡಸ್ಯಾರೆ ಇನ್ನಾ ರಾತ್ರಿ ಸಾಯ್ತೀನಿನ್ನಾಗ ಮಕ್ಕಳ ಹಿಡಕಂಡು ಮೂವರ ಹಿಡಕಂಡು ಆಳ್ತಾನೆ ಮಕ್ಕಳು ಚಿಕ್ಕವ್ರ ಐದಾರ ತಬ್ಬಲಿ ಹುಡುಗುರಾದರು ಎಮ್ಮಾ,

ತಾಯಿ ತಂದೆ ಸತ್ರೆ ಬಂದಿಲ್ಲ
ಮಣ್ಮಾಡಾಕೆ ಅವ್ರು ಬಂದಿಲ್ಲ
ತಮ್ಮೋರು ದೂರ ಐದಾರ
ಎಮ್ಮಾ ಪರದೇಶಿ ಮಕ್ಕಳವರಾ
ನಾವು ಸತ್ತು ಹೋದ್ರೆ
ಯಾರೇ ಜ್ವಾಪನ ಮಾಡ್ತಾರೆ
ಯಾರೇ ಕೈಗೆ ಇರಿಸ್ಯಾರ
ಅಣ್ಣಾ ಇಡದಿಲ್ಲ ಹೋದಾರ
ಎಪ್ಪಾ
ಇನ್ನಾ ಹಿಡಿಯೊದಿಲ್ಲ ನೋಡರಾ
ತಂದೆ ಸತ್ತ ತಮ್ಮೋರು ಹಿಡಿತಾರ

ಹಿಡಿಯೋದಿಲ್ಲ ಅಣ್ಣನ ಮಕ್ಕಳು ಅಂತಾ ಅಂತಾ ದುಃಖ ಮಾಡ್ದಾ, ಈ ಮಕ್ಕಳ್ನ ತೋರ್ಸಬೇಕಲ್ಲ ಒಂದೊಂದು ನೆಪೈತೆ ಒಂದೊಂದು ನೆಪ್ಪಿಲ್ಲ ಹುಡುಗರಿಗೆ ಐದು ವರ್ಸ ಹುಡುಗರಿಗೆ,

ಒಳಗಡೆ ಬೀಗ ತೊರ್ಸಾನ
ಬ್ಯಾಂಕೆ ಬೀಗ ತೋರ್ಸಾನ
ಬೆಳ್ಳಿ ಬಂಗಾರ ಬೀಗ ತೋರ್ಸಾನ
ಆಗ ರೊಕ್ಕಾ ತೋರ್ಸಾನ
ರೊಕ್ಕಾ ಒಂದೆ ತೋರ್ಸಾನ
ಭೂಮಿ ಪತ್ರಗಳು ತೋರ್ಸಾನೆ

ಇಪ್ಪತ್ತಾರು ಗಾವುದಾ ಅಗಲ ನಲವತ್ತಾರು ಗಾವುದಾ ಸುತ್ತ ಅಂತಾ ಆಗ ಆದ್ಯಾಗ ಬರ್ದು ಬಿಟ್ಟಾನ ಬೇಶ್ ಸೀಲ್ ಹೊಡ್ದು ಮೂರು ತಲೆತನಕ ಕೇಳ್ ಬಾರ್ದು ಅಂತಾ ಗೌವರ್ನಮೆಂಟ್ ಆತನ ಅವೆಲ್ಲ ತೋರಿಸಿದ ಬ್ಯಾಂಕಿಲಿಟ್ಟು ಊಟ ಮಾಡ್ರಪ್ಪಾ ಊಟ ಮಾಡ್ಸಿದಾ ತಾವು ಊಟ ಮಾಡಿಕ್ಕಂಡ್ರು ಆಗ ಇಬ್ಬರು ನಡುವಿನ ಮೂವರು ಮಕ್ಕಳ ಮಲಗಿಸಿಕೊಂಡ್ರು ಸಟ್ ಸರಹೊತ್ತಿನ ಮ್ಯಾಲೆ,

ಪಾದ ಹಿಡಿದು ಜನ್ಮ ಬಿಡ್ತಾರೆ
ಎಮ್ಮಾ ಮಕ್ಕಳ ಹಿಡಕ್ಕಂಡು ಜೀವ ಬಿಡ್ತಾರ
ಪಾದದ ಮ್ಯಾಲೆ
ಮಕ್ಕಳ ಪಾದದ ಮ್ಯಾಲರಾ
ಕೈ ಬಾಗಿ ಅವ್ರು ಸತ್ತರೆ
ಕೊಟ್ಟಾ ದೇವ್ರು ಖಂಡೇರಾಯಪ್ಪೊ
ಅರ್ಧ ಜೀವ ನಮ್ಗ ಬರ್ದಿಯಾ
ಸಿದ್ದ ಜೀವ ಜನ್ಮ ಎಳೆದಿಯಾ
ಮಕ್ಕಳ ಹುಟ್ಟಿ ತಾಯಿ ತಂದೆ ನೋಡ್ಯಾರ
ಸಾಯಿಬೇಕಂತಾ ಬರ್ದಿಯಾ ನಮ್ಗೆ
ಸಾಯಿಬೇಕು ಅಂತಾರ
ಮಕ್ಕಳು ಬೇಕೆ ನೋಡುರಾ
ಮಕ್ಕಳು ನನ್ನ ಕೈಲಿ ಕೊಂದಿರೊ
ಮಕ್ಕಳ ಮುಖ ನಾವು ನೋಡಾದಿಲ್ಲ
ನೋಡಾದಿಲ್ಲ
ಮಕ್ಕಳ ಮುಖ ನೋಡದಿಲ್ಲಲೋ
ಜ್ವಾಪಾನ ಮಾಡಲಿಕೈನಾ
ಜೀವ ಕೊಟ್ಟು ದೂರ ಎಳೆಲ್ತಿಯಲ್ಲೊ
ಎಪ್ಪಾ
ಮಕ್ಕಳ ಕೊಟ್ಟು ನಮ್ಮನ ಎಳಿತ್ತೀಯಾ
ಜೀವ ಕೊಟ್ಟು ಎಳಿತಿ
ಅರೆ ಜನ್ಮ ಬಿಟ್ಟಾರೆ
ತಾಯಿ ತಂದೆ ಸತ್ತು ಬಿಟ್ಟಾರ
ಇಬ್ರು ಜನ್ಮ ಬಿಟ್ಟಾರ
ಆಗಲೆ ಜನ್ಮ ಬಿಟ್ಟಾರೆ
ಇಬ್ರು ಜನ್ಮ ಬಿಟ್ಟಾರ
ಇಬ್ರು ಜೀವ ಬಿಟ್ಟಾರ

ಜೀವ ಬಿಟ್ಟಾದ ಮ್ಯಾಲೆ ಹೊತ್ತು ಹುಟ್ತು ಹುಟ್ಟಿದ ಮ್ಯಾಲೆ ಮನೇಲಿ ದೀಪ ಅಂಗೆ ಐತಿ ಈ ಹುಡುಗುರಿಗೇನು ಗೊತ್ತು ಐದು ವರ್ಸದ ಹುಡುಗರು ಅಂಗೆ ಮಕ್ಕಂಡ್ಬಿಟ್ಟಾರೆ ಬಜಾರದಾಗೆ ನೋಡಿದ್ರು ಅರೆ ಸಟ್ ಸರಿಹೊತ್ಯಾಗ ಕಸಬಳಿತಿದ್ದರು ಕೆಮ್ಮಣ್ಣು ಇಡ್ತಿದ್ರು ಆಗ ಹೆಂಡೆ ನೀರು ಹಾಕ್ತಿದ್ರು. ಇವತ್ತು ಒಬ್ರು ಎದ್ದಿಲ್ಲ ಅವ್ರು ಮಾರ್ವಾಡಿ ಶೇಠರು ಏನಮ್ಮಾ ಆಗ ಇದಿಯಾ ಐದಿಯೆಪ್ಪಾ ನೀನಾ ಐದಿಯೇನಪ್ಪಾ ನಾನಂದರಾವ್ ಅಂದ್ರೆ ಒಬ್ರು ಮಾತಾಡಿಲ್ಲ ಅವ್ರೆ ಮಾತಾಡಿಲ್ಲಾಂದ್ರೆ ಒಳಗ ಬೀಗ ಹಾಕ್ಕಂಡ ಆಗ.

ನಿಚ್ಚಣಿನಾಕಿ ಗೋಡೆ ಏರ್ಯಾರ
ಗವಾಕ್ಷಿ ಜಾಗ ಇಳಿದಾರ
ಇಳ್ದು ಕಂಡೀಲಿ ನೋಡ್ಯಾರ
ಹುಡುಗರು ಒಂದೇ ಪಾದದಲಿ
ಇಬ್ರು ಹೊನ್ನಾ ಬಿದ್ದಾರ
ಜಲ್ಮ ಹೋಗೆ ಬಿಟ್ಟಿತೋ
ಜಲ್ಮ ಒಂದೇ ಹೋಗೈತೊ
ಅವ್ರು ಜನ್ಮ ಜೀವಾಕ್ಕ

ನಾನಂದರಾವ್, ನಾನಂದರಾವ್, ನಾನಂದರಾವ್, ಎಲ್ಲದನೆ ಅಮ್ಮಾ ದ್ವಾರ ಕಾಯಿ, ದ್ವಾರ ಕಾಯಿ, ದ್ವಾರಕಾಯಿ. ದೀರ್ ಕಾಯಿ ಇಲ್ಲ ಏ ಹುಡುಗರಾ ಎದ್ದೇಳ್ರೀ ಎಬ್ಬಿಸಿದ್ರು

ನಿಮ್ಮಪ್ಪಾ ನಿಮ್ಮಮ್ಮ ಸತ್ತಾರ
ಹುಡುಗರು ಒಂದೆ ನಮ್ಮ ಐದಾರ
ಇನ್ನೆಲ್ಲಿ ನಿಮಮ ಅಪ್ಪ ನಿಮ್ಮಮ್ಮಾ
ಅಮ್ಮ ಅಪ್ಪಾ ಸತ್ತಾರೆ
ಕೇಳಾರೆ ಎಪ್ಪಾ ಹುಡುಗರಾ

ಅಂಬೊತ್ತಿಗೆ ನಮ್ಮಪ್ಪಾ ನಮ್ಮಮ್ಮಾ ಎಲ್ಲಿ ಸತ್ತಾರ ಇನ್ನಾ ಇದಾರ ಅಂದಾ ಇಲ್ಲಾ ನೋಡು ಸತ್ತೋಗ್ಯಾರೆ ಎಪ್ಪಾ ಎಪ್ಪಾ – – – – ಎಮ್ಮಾ ಎಮ್ಮಾ – – –

ಇನ್ನೆಲ್ಲಿ ನಮ್ಮ ತಾಯಿ ತಂದೆ ಐದಾರ
ತಾಯಿನಾರ ಕೈಬಿಟ್ಟಾರ
ಇನ್ನೆಲ್ಲಿ ನಮ್ಮ ತಾಯಿ ತಂದೇರ
ತಾಯಿ ತಂದೆ ಇನ್ನಾ ಸತ್ತಾರ

ಏ ಅವ್ರು ದುಃಖ ಮಾಡ್ಯಾರೊ ಎಮ್ಮಾ ನೋಡಕ ಬಂದರೆಲ್ಲಾ ಅಳತಾರ ಹೆಣನಮ್ಯಾಲೆ ಬಿದ್ದು ನೋಡಕ ಬಂದವ್ರೆಲ್ಲಾ ಅಳತಾರೆ,

ಜನಸಂಖ್ಯೆ ದುಃಖ ಮಾಡ್ತಾರ
ಎಪ್ಪಾ
ಎಂಥಾ ಯಾಳೆದಲ್ಲಿ ಸತ್ತೀರೋ
ಎಪ್ಪಾ
ಒಳ್ಯೋರ ಜಲ್ದಿ ಒಯ್ಯೋದು
ಕೆಟ್ಟೋರು ಸಾಯಬೇಕಲೆ
ಎಪ್ಪಾ
ಜೀವ ಕೊಟ್ಟಾ ದೇವ್ರು ನೋಡ್ಯಾರ
ಕೆಟ್ಟಾರು ಉಳಕಮ್ತಾರ
ಒಳ್ಳೆರ ನಿಮ್ನಾ ವೈದಾರ
ಕೆಟ್ಟದವರ ಸಾಯಂಗಿಲ್ಲರಾ
ಎಪ್ಪಾ ಎಪ್ಪಾ ಸಾವುಬಂದಿತೇ

ಎಪ್ಪಾ ಬಡುವ್ರಿಗೆಲ್ಲ ಸಾಯಮಾಡ್ಯಾನ ಬಡವ್ರಿಗೆಲ್ಲಾ ತಾನು ಮುಟ್ಟಿಸಿ ಅಂಥಾ ಆಗ ದುಃಖ ಮಾಡ್ಯಾನೆ ದೊಡ್ಡೋರು ಯಜಮಾನ್ರು ಕಲ್ತು ನೋಡಪ್ಪಾ ಏನ್ಮಾಡ್ತೀರಿ ಹೋಗಿತೆ ಅವ್ರ ಜೀವ ಹೋದ ಜೀವ ಇಷ್ಟು ಮಂದಿ ದುಃಖ ಮಾಡ್ತೀವಿ ಯಾರನ್ನಾರ ತರ್ತೀವಾ ಆ ತರಂಗಿಲ್ಲ ಆ ಹುಡುಗರು ಎದೆಬಿದ್ದು ಸಾಯ್ತಾರೆ ಮತ್ತೆ ಎಂಗ ಮಾಡಾನ ಈತನ ಹಿಂದೆ ಹುಟ್ಟಿದವರು ಇಬ್ರು ತಮ್ಮೋರು ಇದಾರೆ ಈಗ ಗಂಗಾವತಿ ಕಡೆಗೆ ದಡೇಗಾವು ಬಡೇಗಾವು ಐದಾರೆ ಏನಪ್ಪಾ ಅವ್ರುನ್ನ ಕರೆಕಳಿಸಿ ಕೌಲೇಶ ಕೋಟಕ್ಕೆ ಅವ್ರು ತಮ್ಮೋರು ಕೂಟ ಮಣ್ಣ ಮಾಡಾನ ಅಂದ್ರೆ ಇನ್ನ ಅರ್ಧ ಮಂದಿ ದೊಡಡೋರು ಏಯ್ ಎಪ್ಪಾ ತಂದೆ ತಾಯಿ ಸತ್ತಾಗೆ ಪತ್ರ ಬರ್ದು ಕಳ್ಸಿದ್ರೆ ನಾವು ಬರೋದಿಲ್ಲ ಮೂರು ಮೂರು ಸಾವ್ರ ತಲೆಮ್ಯಾಲೆ ಬೀಳತಾವೆ ಮುಖ ನೋಡೋದು ಬ್ಯಾಡ ಮೂರು ಸಾವ್ರ ಹಾಕಿ ಕೊಳ್ಳೋದು ಬ್ಯಾಡ ನೀನೆ ತಿಂದಿ ನೀನೇ ಮಣ್ಮಾಡು ನೀನೆ ಮಾಡ್ಕ್ಯಾ ಅಂತಾ ಅವ್ರು ಹಿಂದಕ್ಕೆ ಬಿದ್ದಹಾಕವರು, ಈ ಅಣ್ಣಾ ಸತ್ತನಂದ್ರೆ ಬತ್ತಾರೇನು ಅಣ್ಣನೆಣ್ತಿ ಅತ್ತಿಗೆ ಸತ್ತಾಳಂದ್ರೆ ಬತ್ತಾರೇನು ಬರಾದಿಲ್ಲ ಸುಮ್ನೆ ಯಾಕ ಅವ್ರನ ಕರೆಕಳ್ಸುಬೇಕು ಮತ್ತೆ ಕಿರಿಕಿರಿ ಇರ್ತಾಬೇಕು ನಾವೇನು ಊರಾಗೆಲ್ಲಾ ಸತ್ತೊ ಹೋದ್ವಾ, ಅವ್ರ ತಂದೆ ಅವ್ರ ತಾತ ಅವ್ರ ಅವ್ವ ಸತ್ತಾಗ ಅವ್ರ ಅಪ್ಪ ಮಾಡಿದನಲ ನಾವು ನೋಡಿಲ್ಲ ಅಂಗೇಳಿ ನಾವು ಆ ಹುಡುಗರಿಗೆ ಮಾಡಾನ ಏನಪ್ಪಾ ಹುಡುಗುರಾ,

ನೀವೇನು ಅಳಬ್ರಾಡ್ರಪ್ಪಾ
ನಿಮ್ಮ ಆಸ್ತಿ ನಾವು ಕೇಳೆದಿಲ್ಲ

ಭೂಮಿ ಬೆಳೆಸಿಕೊಳ್ಳುತ್ತಿದ್ದೀವಿ
ನಿಮ್ಮ ಮನೆಗಳಾದ ಐದಿರಿ
ಎಪ್ಪಾ
ಸಾವ್ರ ಲಕ್ಷಮನಿ ನಿಮ್ಮೀದೆ
ಇಪ್ಪತ್ತಾರು ಗಾವುದಾ ಭೂಯ್ಯಾದೆ
ಯಾರ ನಿಮ್ಮ ತಾತನ ಸಂಪತ್ತೆ
ತಾತನಾಸ್ತಿ ನಿಮ್ಮದೈವರ
ಏಳು ಕಟ್ಟುಲ ನೋಡ್ಯಾರ
ನಾವೇ ನಿಮ್ಮಲಿ ಐದೀವಿ
ನಿಮ್ಮ ಮಾತಿನ ಮೀರಲ್ಲ
ದೊಡ್ಡೋರ ನಿಮ್ಮನ ಮಾಡ್ತೀವಿ
ಏನು ದುಃಖ ಪಡಿಬ್ಯಾಡ್ರಿ
ಎಪ್ಪಾ ದೊಡ್ಡ ಕುಲತಿರಗದು
ಸಣ್ಣ ಜಾತಿ ನಮ್ಮದಿರಬೋದು
ನಾಯ್ಕರ ವಂಶ ನಮ್ಮದು
ಉಪ್ಪಾರ ಕುಲಬಲ್ಲ್ಮರು
ಬಡವ್ರು ಇನ್ನಾ ಎಲ್ಲ ಏಳ್ತಾರ
ಹುಡುಗರಿಗೆ
ಬಡುವ್ರು ಬಾಗಿನ ಏಳವರ

ಊರಾಗ ಜನ ಏಳ್ತಾರ ಅಳಬ್ಯಾಡ್ರಪ್ಪ ಹುಡುಗುರ ಯಾಕ ದುಃಖ ಮಾಡ್ತೀರಿ ಮಾಡಬ್ಯಾಡ್ರಿ ನಾವೈದೀವಿ. ನಿಮ್ಮ ಜೀವಕ್ಕೆ ಅಂತ ಆಗ ಏನ್ ಮಾಡಬಿಟ್ರು, ಈಗ ತಾಯಿ ತಂದೆನ ಹಿಡಕ್ಕಂಡ್ರು ಒಬ್ಬನು ಮೈ ತೊಳದ್ರು ನಿಮ್ಮ ಕೂಟಕ್ಕೆ ತೊಳ್ಸಬೇಕು ಯಾರು ಮುಟ್ಟಾಗಿಲ್ಲಾಪ್ಪಾ ಸರಿಬಿಡಾಂತ ಅತ್ತಾಗೊಬ್ಬನು ಇತ್ತಾಗೊಬ್ಬನು ತಂದೆನ ಕುಂದ್ರಿಸಿದ್ರು ಹಿಡಕಂಡ್ರು,