ಉತ್ತರ ಕಡಿಗೆ ವಣ್ಣಯ್ಯಾ
ನಿನ್ನ ಪಟ್ನಯಾವಾನ
ಉತ್ತರ ದೇಶನಲ್ಲಿನ
ಯಾವ ಪಟ್ನಾನ ಇರಕೊಲ
ನಿನ್ನ ಪಟ್ನ ಯಾವನ
ಕರುಣೆ ಕಲ್ಲೇವೈ ತಣ್ಣಾ
ಆಗ ಬಂದೇ ನೋಡಣ್ಣಾ
ಕೌಲೇಸು ಮೌಲೇಸು ಕೋಟಾನೆ

ಆಗ ಉತ್ತರ ಕಡಿಗೆ ಕವಲೇಶ ಕೋಟ ಮವಲೇಶ ಕೋಟ ಎಲ್ಡು ಆಗ ಬಜೇರಾಮ

ಬೆಳ್ಳಿ ಯಾಪಾರ ಮಾಡೋನು
ಬೆಣ್ಣೆಯಾಪಾರ ಮಾಡೋನು
ಮುತ್ತುಯಾಪಾರ ಮಾಡೋನು
ರತ್ನಯಾಪಾರ ಮಾಡೋನು
ರತ್ನಯಾಪಾರ ಮಾಡೋನು

ಆಗ ಲಚ್ಚದುಡ್ಡು ದುಡದಾನ ದುಡುದು ಏನಾ ಮಾಡಾನ

ಇಪ್ಪತ್ತುಗಾವುದಾ ಉದ್ದಾನ
ಭೂಮಿ ಬಾಗಿ ಕೊಂಡಾನ
ಇದಿಷ್ಟು ಭೂಮಿಕೊಂಡಾನ
ಸರ್ಕಾರದವರೆ ಹೊಂಟಾನ
ಮಾರವಾಡಿ ಶೇಠಿ ತಗೂಣದಾ
ತಾವು ಕೊಂಡೆ ಬಿಟ್ಟಾರ

ಆಗ ಏನ್ಮಾಡ್ದಾ ಮುತ್ತುಯಾಪಾರ ಬೆಳ್ಳಿಯಾಪಾರ ಬಂಗಾರ ಯಾಪಾರ ಮಾಡಿ ಲಕಶಾ ದುಡಿದು ಇಪ್ಪತ್ತಾರು ಗಾವುದಾ ಅಗಳಸುತ್ತು ಇದಿಷ್ಟು ಭೂಮಿ ಕೊಂಡ್ಕಂಡು ಬಿಟ್ಟಾನೆ. ರೊಕ್ಕೆಷ್ಟು ಕೊಡ್ತಾನೆ ಕೊಂಡು ಕೊಂಡು ಗವರನಮೆಂಟ್ ತೆಗೆ ಬಂದು, ನೋಡಪ್ಪಾ ಮೂರು ತಲೆ ತನಕ ಮನೆ ಬಾಡಿಗೆ ಹೊಲಗುತ್ತಾ ಕೇಳಬಾರ್ದು ನಾನು ಭೂಮಿ ಮನಿಗಳು ಕಟ್ಕಂಬತೀನಿ ನೀವು ಕೇಳಬಾರ್ದು ಈಗಲೇ ಕೇಳ್ತೀರಾ ಎಷ್ಟು ಕೇಳ್ತೀರಾ ಕೇಳ್ರಿ, ಸರಕಾರದ ಗವುರನಮೆಂಟಿನದು ನನ್ನ ಹೆಸರೇ ಮಾಡುವಾಗಲೇ ಕೇಳ್ಬೇಕು ಅಂದರೆ ನೋಡ್ರಿ, ಈಗ ಹತ್ತು ಸಾವ್ರ ಕಟ್ಬೇಕು ಇನ್ನು ಮೂರು ತಲೆಮಾರು ತನಕ ಮನೆಬಾಡಿಗೆ ಹೊಲಗುತ್ತಾ ಕೇಳಾದಿಲ್ಲ ಅಂತ ಕಟ್ಟದಪ್ಪಾ ಆಗ ಆತನ ಎಲ್ಲಾ ಸೀಲ್ ಹೊಡಸ್ಕಂಡ ಬೇಷ್ ರಾಗಿ ಕುಂಚನ ತಕಂಡು ಪತ್ರ ಬರಿಸಿಕಂಡ ಮೂರು ತಲಿತನಕ ಇರಬೇಕು ಅಂತಾ ಆಗ ಬರಿಸಿಕೆಂಡು

ಈಗ ಆತ ರಾಜ್ಯದಾಳುವನಾ
ವಡ್ಡರು ಕರಕಳಿಸ್ಯಾನಾ
ಲೈನು ಲೈನು ನೋಡ್ಯಾರಾ
ಎಂಟನೂರು ಮನೆಗಳಕ ಕಟ್ಟಿಸ್ಯಾರಾ
ಸಿಮೆಂಟ ಮನಿಗಳ ಕಟ್ಟಿಸ್ಯಾರಾ
ಮಣ್ಣು ಗೋಡೇನೆ ಕಟ್ಟಿಸ್ಯಾರಾ
ಕಲ್ಲು ಮನಿಗಳೇ ಕಟ್ಟಿಸ್ಯಾರಾ
ಲೈನ್ ನಲ್ಲಿ ನೋಡ್ಯಾರಾ
ಮನಿಗಳ ಒಂದೆ ಕಟ್ಟಿಸ್ಯಾನಾ
ಇಪ್ಪತ್ತ ಹಳ್ಳಿ ಊರಿಗೆ
ಪತ್ರ ಬರೆದು ಹಾಕಸ್ಯಾನಾ
ಬಡವರು ಯಾರು ಇದ್ದಾರಾ
ಮನೆಗಳ ಇಲ್ಲಾರ ನೋಡ್ಯಾರಾ
ತಿಂಬಾಕ ಕೂಳಿಲ್ಲದೋರ ಊರೋರ
ಬುಗುಡಿ ಮ್ಯಾಕೇಸೆ ಬರ್ಯಾರಾ
ಮಾರವಾಡಿ ಶೇಠಿ ದುನ್ನಾರಾ
ರೊಕ್ಕಾ ಖರ್ಚು ಮಾಡ್ಯಾರಾ
ಸ್ವತಂತ್ರ ಮನಿಗಳ ಕಟ್ಟಿಸ್ಯಾನಾ
ಸಾಯೊತನಕ ನಿಮ್ಮ ಜೀವವೆ
ಮನಿ ಬಾಡಿಗೆ ಕೇಳದಿಲ್ಲ ನಾ
ಹೊಗುತ್ತಾ ಕೇಳದಿಲ್ಲರಾ

ಏನಪ್ಪಾ ನೀವು ಬಡವರು ಇಪ್ಪತ್ತಳ್ಳಿ ಹುಡುಹುಡುಗರು ಈಗ ಊರೆಲ್ಲಾ ಕರ್ಕೊಂಡ ಬಂದು ನೀವು ಬೆಳೆಸ್ಕೊಂಡು ಊಟ ಮಾಡ್ರಿ ಎತ್ತಗಳಿಲ್ಲ ಅಂದ್ರೆ ಎತ್ತುಗಳನ್ನು ಇಳಿಸಿಕೊಡ್ತೀನಿ ಈಗ ನಂದೇ ಅಂಗಡಿ ಕಾಳಿಲ್ಲ ಅಂದ್ರೆ ಕಾಳಾಕ್ತೀನಿ ಉದ್ರಿ ಬೇಸಿನ್ ಮೇಲೆ ಸಾಲ ತೀರ್ಸಾನ ಏನಪ್ಪಾ ಮನಿಬಾಡಿಗೆ ಕೇಳಲ್ಲಾ ಹೊಲಗುತ್ತಾ ಕೇಳಲ್ಲಾ ನನ್ನ ಹೆಸರನ್ನ ನೀಡು ನಾ ಮಾಡಿದ ಪುಣ್ಯ ನನ್ನ ಮಕ್ಕಳಿಗೇನಾ ಬಲ್ರಿ, ಆಹಾ… ಅಂತ ಬಜೆರಾವ್ ಅಂದಾ ಇಪ್ಪತ್ತಳ್ಳಿ ಮಂದಿ ನೋಡ್ರು ಏಯ್ ನಮಗೆ ಹೇಳಿಲ್ಲ ಏನಿಲ್ಲಾ ಸೇರು ಕಾಳಂದ್ರೆ ಅವ್ರು ಹೊಲಕ್ಕೆ ಹೊರಟರು ಹೊತ್ತ ಮುಣುಗೊತನಕ ದುಡಿಬೇಕು ಅವನು ಗ್ವಾದಲ್ಲಿ ಮಾರುವಾಡಿ ಶೇಠಿ ಏನಂತೆ ಸಾಯತನಕ ಮನಿಬಾಡಿಗೆ ಕೇಳಲಂತೆ ಸುಮ್ನೆ ಬೆಚ್ಚಗೆ ಮನೆಲಿರಕೆ ಆಹಾ ಬೀಳು ತೋರ್ಸಾನಂತೆ ಆತನ ಭೂಮಿಯಂತೆ ಸುಮ್ಮನೆ ಬೆಳಸಕೊಂಡು ತಿಂಬೋದು ಆಗ ಬೆಳೆಸಿದಾಗ ಕೊಟ್ರೆ ಇಸ್ಕೊಡದು ಆತಗೆ ಆತ ಕಾಳತಂದ್ಕೊಂಡು ತಿಂದಿರ್ತಿಯಾ ಅವ್ನ ತೀರ್ಸೋದು ಬಡ್ಡಿ ಕೇಳೋದಿಲ್ಲಂತೆ ಗುತ್ತೆ ಕೇಳದಿಲ್ಲಂತೆ

ನಡ್ರೆ ನಡ್ರೆ ನಾವ ಹೋಗಾನಾ
ನಡ್ರೆ ನಡ್ರೆ ನಾವ ಹೋಗಾನಾ
ಗುಡಿಸಿಲಲ್ಯಾಕ ಸಾಯಾನಾ
ಅಗಲ ಗುಡಿಸಿಲಾಗಾನಾ
ಮಣ್ಣು ಗ್ವಾಡೆ ಗ್ಯಾಕ್ಕೀರನಾ
ಎಂಚಿನ ಮನಿಗ್ಯಾಕ್ಕೀರನಾ
ಕನ್ನಡಿ ಮನಿಯಾಗಿರಾನಾ
ಮಣ್ಣೆಬೂತ ಬರ್ದಾನಾ
ಎಲ್ಲಾ ಕಲಿಸಿ ನೋಡ್ಯಾರಾ
ಬಡುಬಡು ಬಿತ್ತಿ ಬಿಟ್ಯಾರ
ಸಾವ್ರ ಲಕಶಾ ಮನಿ ತುಂಬ್ಯಾರಾ
ಸಾವ್ರ ಲಕ್ಷ ಮನಿಕಟ್ಟಸ್ಯಾನಪ್ಪಾ

ಸಾವ್ರ ಲಕ್ಷ ಮನಿ ತುಂಬ್ಕೊಂಡ ಬಿಟ್ಟಾವಪ್ಪಾ, ಆಹಾ ಬಡವರು ಪುಕ್ಕಸೆಟ್ಟಿ, ಮನೆಂದ್ರೆ ಯಾರಾದರೂ ಓಡಿಬರ್ತಾರೆ ಇಲ್ಲೆ ಭೂಮಿ ಯಾರಾದ್ರು ಕೊಡ್ತಾರಾ ಅನ್ಲಿ ಆ ಎಷ್ಟು ಒದ್ದಾಡ್ತಾರೆ ಅಂಗಾ ಎಲ್ಲಾರು ಬಂದು ಸಾವ್ರ ಲಕ್ಷ ಮನಿಗಳು ತುಂಬ್ಕೊಂಡು ನೋಡಪ್ಪಾ ಬಡವರು ಬೇಸಕಂಡ ತಿನ್ರಿ ನಾನೇನು ಕೇಳಲ್ಲಾಂದ ಅವಾಗರ್ರಿ ಎತ್ತುಗಳೆಲ್ಲಂದ್ರೆಗೆ ಎತ್ತುಗಳ ಇಳಿಸಿಕೊಟ್ಟಾ ಕಾಳಿಲ್ಲ ಅದೋರಿಗೆ ಒಂದೊಂದು ಪಲ್ಲಾ ಕೊಟ್ಟಾ ನೋಡಪ್ಪಾ ಬಳಸಿದ ಮೇಲೆ ನನಗೆ ಸಾಲ ತೀರ್ಸಬೇಕು ನೀವು. ಆಹಾ ನೀವು ತಿಂದಿದ್ದು ಅಷ್ಟೆ ನೀವೇನೇನಾದರೂ ಬೆಳೆಸ್ಕೊಳ್ಳಿ ಅಷ್ಟೆ ಅಲ್ಲ ಅಂತಾ,

ಹಂಗೆ ಬಡವ್ರಿಗೆ ಕೊಡ್ತಾನ
ಬಡವ್ರಿಗೆ ಸಾಯ ಮಾಡ್ಯಾನ
ಇನ್ನೂ ಊರ್ಗೆ ರಾಜಿಲ್ಲಮ್ಮ
ಬಡುವ್ರು ಗುದ್ದಾಡಿ ಬಂದಾವ್ರೆ

ಬುದ್ಧಿ ಹೇಳುವರ್ಯಾರು ಈ ಬಡವ್ರಿಗೆ ಗಂಡ ಹೆಂಡ್ತಿ ಗುದ್ದಾಡಿ ಬಂದ್ರು ಯಾರನನ್ನಾ ಇನ್ನಾ ಕಡೆಲೋರು ಗುದ್ದಾಡಿ ಬಂದ್ರು ಯಾರ ತಲ್ಲಿಗೆ ಬರ್ತಾರೆ ನನ್ನ ತಲ್ಲಿಗೆ ಬರ್ತಾರೆ ನಾನೇ ನ್ಯಾಯ ಹೇಳ್ಬೇಕು ನಾನೇ ಭೂಮಿ ಕೊಟ್ಟೋನು ನಾನೇ ಮನೆಗಳ ಕೊಟ್ಟೋನು ನಾನೇ ಬಡವರಿಗೆಲ್ಲಾ ಸಾಯ ಮಾಡ್ದೋನು, ಆಹಾ ನಾನೇ ರಾಜ ಆಗಿರ್ಬೇಕು ಇವರಿಗೆ,

ಇತ್ತಾ ರಾಜಾಗಿ ಆಳಬೇಕಣ್ಣಾ
ಇತ್ಲಾಗ ಬೆಳ್ಳಿಯಾಪಾರ ಮಾಡ್ಬೇಕು
ಐದು ಅಂಗಡಿ ಇಟ್ಟಾನ
ಶೇಠಿದವನ ಎದ್ದು ಉಪಾಯನಾ
ಉಳ್ಳವಾದರೆ ಅವಳನಾ
ಬಜೆರಾವ ಹೇಳೀನಿ
ಅಮ್ಮ ನೀಲಮ್ಮ ಐದಾಳ
ಒಂದೆ ವರ್ಷ ಆಯಿತು
ಎಲ್ಲೇ ವರ್ಷ ಆಯಿತು
ಐದು ವರ್ಷದೊಳಗೆ ನೋಡ್ಯಾರ
ಎಂಟೆ ವರ್ಷ ಹಡದಾಳ
ಮೂವರ ಮಕ್ಕಳ ತುಂಬ್ಯಾರ
ಮೂವರ ಮಕ್ಕಳ ಹುಟ್ಟಿದ ಮ್ಯಾಲರ
ಒಬ್ಬರಿಗೆ ಖಂಡೇರಾವ್ ಎಂದನಾ
ನಡುವೋನು ಸಿದ್ದೊ ಎಂದನಾ
ಇಬ್ಬರ್ಗೆ ದೊಡ್ಡೋನು ನೋಡ್ಯಾರ
ರಾಜ ನಾನಂದರಾವ್ ರಾ
ತಾವೇ ಬಂದೇ ಅಣ್ಣಯ್ಯಾ

ಮೂವರು ಮಕ್ಕಳು ನವರು ತಾವಾಗಿ ಆಗ ಎರ್ಡು ವರ್ಷಕೆ ಒಬ್ರು ರಾಮ ನಾಯಿ. ನಾಯಿಗಳು

ಕಳ್ರು ಹಿಡಿತಲೆ ನೋಡಾನ
ಭೂಮಿ ತೂಕದ ನಾಯಿಗಳು
ಅವು ಜ್ವಾಪಾನ ಮಾಡತಾವೆ ನೋಡಾನ
ಅವು ಜ್ವಾಪಾನ ಮಾಡ್ತಾವೆ
ಅಣ್ಣಾ ಗಾಳಿಗೆ ನಾತೆ ಹಿಡಿತಾವ
ಕಳ್ರು ಅವೆ ಹಿಡಿತಾವ

ಮಾರ್ವಾಡಿಶೇಠಿ ನಾಯಿಗಳಂದ್ರೆ ಬಹುನಾಯಿಗಳಪ್ಪಾ, ಬರಿಯ ಹಾಲು ಗೋದಿರೊಟ್ಟಿ ಆದ ಅನ್ನ ಇಟ್ಟು ಜ್ವಾಪಾನ ಮಾಡಾನೆ ಅಂತಾ ನಾಯಿಗಳು ಮೈ ತೊಳಿತಾರೆ ಕೊಬ್ಬು ಎಣ್ಣೆ ಹಚ್ಚಿ ಅಂತವು ನಾಯಿಗಳ ಮೇಲೆ ಬೋಚಲೆ ಮಾರ್ವಾಡಿ ಶೇಠಿ ಅಂದರೆ ಆಗ ಕುಲಕ್ಕೆ ಏನ್ಮಾಡಿದ್ರು ತಲೆಗೊಂದೊಂದು ನಾಯಿ ಕೊಟ್ಟಬಿಟ್ರು ಇವರು ಎರಡು ನಾಯಿ ಇಟ್ಟಕಂಡ್ರು ಆಗ ಅವ್ರು ಕೊಟ್ಟಿದ್ದೇ ಸಾಕು ಅಂತಾ ಆಗ ಖಂಡೇರಾಯ ಸಿದ್ದೋಜಿರಾವ್ ಆಗ ಎಲ್ಲಾರು ಕರ್ಕಂಡ್ರು ಹೋಗ್ಬಿಟ್ರು ಸಿದ್ದೋಜಿ ಆಗ ಖಂಡೇರಾಯ ಇಬ್ಬರು ಹೋಗಿ ದಡೇಗಾವು ಬಡೇಗಾವು ಯಾವ ಪೇಟೆ ಈಗ ವೊಸಪ್ಯಾಟೆಗಾಳಿಮಾರಮ್ಮ. ಆಹಾ ಆಯ್ತಪ್ಪಾ ತಮ್ಮ ನೀನೊಂದೂರಾಗೆ ನಾನೊಂದೂರಾಗೆ ಇದ್ದರೆ ಎಂಗಪ್ಪಾ ನೋಡಪ್ಪಾ ಈ ಹೆಣ್ಮಕ್ಕಳು ಹೆಣ್ಣ ಮಕ್ಕಳು ಜತೆ ಇರ್ತಾರೆ ನಾವು ಅಣ್ಣ ತಮ್ಮಂದಿರು ಜತೆ ಇರ್ತೀವಿ ಇದೇ ಊರಾಗ ಇರಾನ ಒಂದೇ ಮನೆಗ ಇರಾನ ಈ ಊರಿನಿಂದ ಆ ಊರಿಗೆ ಹೋಗಿ ರಾಜತಾನ ಮಾಡಾನ ಮನೆ ಬಾಡಿಗೆ ಹೊಲಗುತ್ತಾ ಉಸುಲು ಮಾಡಿಕಂಡು ಬರಾದು ತಿಂಬಾದು ಕುಂದ್ರೋದು ಸರಿಬಿಡಾಂತ ಇಬ್ಬರು ಒಂದೆ ತಲ್ಲಿ ಸೇರಿಬಿಟ್ರು. ಸಿದ್ದೋಜಿ ಖಂಡೇರಾಯ ರಾಜ ಸೋಮಯ್ಯ ನಾಡ ಆಗ ಹೆಂಡ್ತಿ ಎಂಗಾ ಜ್ವಾಪಾನ ಮಾಡ್ತಾಳಂದ್ರೆ ಅತ್ತೆ ಮಾವನ,

01_MS_346-KUH

ಕೋಳಿ ಕೋಗೊದಾಗ ಎದ್ದಾಳೆ
ಕಸ ಮುಸರೆ ಬಳಿಯೋಳೆ
ಹೆಂಡೆ ನೀರ ಕೆಮ್ಮ ನೀಡೋಳೆ
ಅತ್ತೆಮಾವಗೆ ನೀರ ಕಾಸೆವಳೆ
ಮುಂಚಾಗೆ ಗಂಡಗೆ ಹಾಕವಳೆ
ಎತ್ತಾಗಮ್ಮ ಆತ ಹೋಗ್ಯಾವನೆ
ಎಮ್ಮಾ ಹಟ್ಟೆ ಕಟ್ಟೇಲೆ
ಎಮ್ಮಾ ದನಿನ ಮ್ಯಾಗೆ ಎದೆ ತೊಳೆಯಾನೆ
ಹೊತ್ತಿಗೆ ನಾವು ಎದ್ದೀವಿ

ಎಮ್ಮಾ ತಣ್ಣಗೆ ಮೈಗೆ ಯಾಕ ಎದ್ದಾಳೆ, ನಾ ಹೊತ್ತು ಎದ್ದು ಮ್ಯಾಲೆ ಎದ್ದೇಳ್ತೀನಿ ಇಲ್ಲ ಅತ್ತೆ.

ನೀವೆ ಮುಂಚೆ ತೊಳೆಬೇಕು
ಹಿಂದೆ ನಾವು ತೊಳೆತೀವಿ
ಅವ್ರು ಇನ್ನಾ ಎಬ್ಸೋನು

ಅತ್ತೆ ಮಾವಗೆ ನೀರ ಹಾಕಿದ್ಲು ಆಗ ಅಡಿಗೆ ಮಾಡಿದ್ಲು ತಾನು ಸ್ನಾನ ಮಾಡೋದು ದೇವರ ಪೂಜೆ ಮಾಡೋದು ಆಗ,

ಅತ್ತೆ ಮಾವಗ ಉಂಬಾಕಿಕ್ಕೋದು
ಗಂಡ ಊಟ ಮಾಡಿ ಹೋದ ಮ್ಯಾಲೆ
ಆಹಾ ಆಹಾ ಊಟ ಮಾಡಾದು
ತಾಯಿ ತಂದೆ ನೋಡಿದಂಗಾನ
ಆಹಾ ಆಹಾ ನೋಡಿ ನಿಂದಾಳ
ಒಂದೇ ವರ್ಸ ನೋಡ್ಯಾಳ
ಎಲ್ಡೆ ವರ್ಸ ನೋಡ್ಯಾಳ
ಮೂರು ವರ್ಸ ದೊರೆಗೆ ನೋಡ್ಯಾಳ
ಆಕಿ ಗರ್ಭನವಾಗಿನ

ಇನ್ನೊಂದು ಎರಡು ತಿಂಗಳು ಹೋದರೆ ಹಡೆತಾಳಪ್ಪ ಅಷ್ಟರವೊಳಗೆನೆ

ಕೊಟ್ಟೆದೇವ್ರು ತಟೆ ಮಾಡ್ಯಾನ
ಮುದೇರಿಗಾಗಿ ನೋಡ್ಯಾನ
ಅವ್ರು ಮಾಡಿದ ಪುಣ್ಯಾನ
ಅವ್ರು ಮಾಡಿದ ಧರ್ಮಾನ

ಮಾರ್ವಾಡಿ ಶೇಠಿ ಅವ್ರು

ವರ್ಸದ ಮ್ಯಾಲೆ ನೋಡ್ಯಾರ
ಸತ್ತ ಸರವೊತ್ತು ನೋಡ್ಯಾರ
ಹನ್ನೆರಡು ಗಂಟೆ ಒಳಗರ
ಗಂಡ ಹೆಂಡ್ತಿ ಜೀವ ಬಿಟ್ಟಾರ
ಇಬ್ಬರು ಹೊಂಟೆಬಿಟ್ಟಾರ
ಅವ್ರು ಜನ್ಮ ಬಿಟ್ಟಾರೆ
ಪುಣ್ಯ ಮಾಡಿದವು ನೋಡ್ಯಾರ
ಸುಖ ಜೀವ ಅವ್ರು ಹೋಗಿರ
ಸುಖದಲ್ಲಿ ಜನ್ಮ ಹೋಗೈತೆ
ಸುಖದಲ್ಲಿ ಜೀವ ಹೊಗೈತೆ

ಸೊಸಿ ಏನು ಮಾಡಿಬಿಟ್ಲು, ಗಂಡನ ನೀರು ಕಾಸಿ ಕಾಸಿ ಹಾಕಿದ್ದಲು ನೀರು ಕಾಸಿದ್ಲು ಆಗ ಬಕೀಟಿಗೆ ಹಾಕಿಬಿಟ್ಲು,

ಎದ್ದೇಳು ಎದ್ದೇಳು ಅತ್ತೆಮ್ಮ
ಎದ್ದೇಳು ಎದ್ದೇಳು ಮಾವ
ಒಳ್ಳಾಡಿಸಿದರೆ ಒಳ್ಳಾಡತಾರ
ಒಬ್ರು ಮಾತಾಡವಲ್ರು
ಒಲ್ಲರೇ ಒಬ್ಬರೂ ಮಾತಾಡವಲ್ರು
ಅವರೇ ಜಲ್ಮ ಹೋಗೈತಾ

ಜೀವ ಹೋಗಿ ಬಿಟೈತೆ ಆಹಾ ಒಳ್ಳಾಡತಾವ ಹೆಣಗಳು ಒಳ್ಳಾಡಿ ಸಾರೆ ಎದ್ದೇಳು ವಲ್ರು ಆಗ ಅತ್ತೆ ಅತ್ತೆ ಅತ್ತೆಲ್ಲ ಮಾವ ಮಾವ. ಆಹಾ ಆಗ ಅತ್ತೆ ಮಾವ ತಲೆ ಇಡಕೊಂಡ್ರು,

ಎಷ್ಟು ದೊಡ್ಡವರಿದ್ದಿರೋ
ನಮಗೆ ಇನ್ನು ಯಾರು ಬುದ್ದಿ ಹೇಳ್ತಾರೆ
ದೇವ್ರು ಇದ್ದಂಗ ಇದ್ದೀರಾ
ಸೊಸಿ ಆಳ್ತಾಳಪ್ಪಾ ಆಹಾ
ದೇವರು ಇದ್ದಂಗ ಇದ್ದೀರಮ್ಮ
ಯಾರು ನಮ್ಮಗೇಳುತ್ತಿದ್ದರೇ ಪರಮಾತ್ಮ
ಎಮ್ಮ ಸುಖ ನೀವು ನಡೆಸಿರಾ

ಎಷ್ಟು… ಎಮ್ಮಾ

ತಾಯಿ ತಂದೆ ಏಂಗ ನೋಡ್ತಾರ
ತಲೆ ಮ್ಯಾಲೆ ಬಿದ್ದು ಅಳ್ತಾಳ ಆಹಾ

ದೊಡ್ಡ ಸೊಸೆ

ಎಮ್ಮಾ ಒಳ್ಳಾಡಿ ಒಳ್ಳಾಡಿ ಅಳ್ತಾರೆ
ಅವ್ರೆ ದುಃಖ ಮಾಡ್ತಾರ ಆಹಾ
ಅವರೇನು ದುಃಖ ಮಾಡ್ತಾರ

ದುಃಖ ಮಾಡತಿದ್ದರೆ ಎಲ್ಲರೂ ಊರಾಗ ಬಂದರು ಅಯ್ಯಯ್ಯೋ ಎಷ್ಟು ಬುದ್ದಿವಂತಪ್ಪಾ ನಮ್ಮಗೆ ಭೂಮಿ ಕೊಟ್ಟ ಈಗ ಹೊಲಗುತ್ತತ ಗಂಬಲಿಲ್ಲ ಮನೆ ಕಟ್ಯಾರ ಮನೆ ಬಾಡಿಗೆ ಕೇಳಲಿಲ್ಲ, ಎಪ್ಪಾ ಎಲ್ಡು ಪಲ್ಲಾ ಜ್ವಾಳ ಕೊಟ್ಟಾ ಇನ್ನಾ ಒಂದು ಪಲ್ಲಾ ಕೊಟ್ಟು ಇನ್ನಾ ಒಂದು ಪಲ್ಲಾ ಒಂದು ಕೊಡಬೇಕು.

ಎಷ್ಟು ಮಾರ್ವಾಡಿ ಸೇಠಮನೆ
ಎಷ್ಟು ಬುದ್ದಿವಂತರಿದ್ದಿರೋ
ಎಷ್ಟು ಶಾಸ್ತ್ರ ನೀವುರೆ
ಎಪ್ಪಾ ಅವರು ಹೇಳಿದರೆ ತೂಕ ಮಾಡ್ತಾರೆ
ಬಂಗಾರ ತೂಕ ಮಾಡ್ತಾರ ಅವರು
ಎಷ್ಟು ಸಹಾಯ ಮಾಡಿದಾಳ

ಎಷ್ಟು ಸಹಾಯ ಮಾಡಿದಿ ಅಂತ ದುಃಖ ಮಾಡ್ತಾನ ಆಹಾ ಬಡವರೆಲ್ಲ ದುಃಖ ಮಾಡಿದರೆ ಆಗ ಏನಾದರು ದೊಡ್ಡವರು ಚಿಕ್ಕವರು ನೋಡಪ್ಪಾ ಹೋದವರು ಬರಾಂಗಿಲ್ಲ ಅಮ್ಮ ದಿಮ್ಮ ಸೋಳ. ಆಹಾ ಗರ್ಭವತಿ ಅಹಾ ಬ್ಯಾಡಮ್ಮ ನಿಮ್ಮಗೆ ಹೊಟ್ಟೆ ಇಡಕಮತೈತೆ ಹೋಗಿ ಜೀವ ತರಂಗಿಲ್ಲ ಮುದಿಯವರು ಅವರನ್ನ ಪುಣ್ಯಾತ್ಮರು ನಾಕು ದಿವಸ ಕಾಲ ಕಳದು ಸತ್ತು ಹೋಗ್ಯಾರ ಹರೆಯದವರು ಸಾಯಿತಾರಲ್ಲಮ್ಮ ಏನಮ್ಮಾ ಈ ಹೆಣಗಳು ಇಟಕಂಡು ದುಃಖ ಮಾಡಬ್ಯಾಡರಿ ಈಗ ಅವರ ಬೆನ್ನಹಿಂದೆ ಹುಟ್ಟಿದವರು ಇಬ್ಬರು ತಮ್ಮವರು ಐದಾರ ನಿನಗಪ್ಪಾ ದಡೇಗಾವ ಬಡೇಗಾವದವರು. ಆಹಾ ನಿಮ್ಮ ತಮ್ಮನವರು ಕರೆಕಳಿಸಿ ತಾಯಿ ತಂದಿನ್ನ ಮಣ್ಣ ಮಾಡರಪ್ಪಾ ಅಂತ ಕೇಳಿದರು ಸರೆಪ್ಪಾ ಹೋಗವರು ಯಾರು ಈಗ ಪತ್ರ ಬರೆದು ಕೋಡ್ತೀನಿ ನೀವು ಹೋಗಿ ಕರಕಂಡು ಬರ್ರೆಪ್ಪಾ. ಆಹಾ ಏನಪ್ಪಾ ತಮ್ಮನವರೆ ತಂದೆ ಹೋದರೆ ತಂದೆ ಸಿಗಾಂಗಿಲ್ಲ ತಾಯಿ ಹೋದರೆ ತಾಯಿ ಸಿಗಾಂಗಿಲ್ಲ ಈಗ ಇದೇ ಮುಖ ನಾವು ಮೂವರು ಇರ್ತೀವಿ ಸಾಯುವಾಗ ಕಲಿದಿದ್ದರೆ ಇನ್ಯಾವಾಗ ಕಲೀಬೇಕು.

ಎಲ್ಲಾರು ಕಲಿಯನ ಬರ್ರೋ

ತಾಯಿ ತಂದೆ ಮಣ್ಣು ಮಾಡ್ಯಾರ
ನೀವೇ ಬರ್ರೆ ತಮ್ಮರೇ
ಆಗ ಮಣ್ಣವಾಗ ಮಾಡ್ಯಾರೇ
ತಮ್ಮರೆ ಜಲ್ದಿ ನೀವು ಬರಬೇಕರಾ
ಅವ್ರೆ ಪತ್ರ ಕಳ್ಸಾರ

ಮೂರು ಗಂಟೆಗೆಲ್ಲಾ ಬರಬೇಕು
ತಮ್ಮ ನೋರು
ಆರು ಗಂಟೆಗೆಲ್ಲಾ ಮಣ್ಣಿನ ಮಾಡ್ಯಾರ
ತಾಯಿ ತಂದೆರಾ
ಆರು ಗಂಟೆ ಮಣ್ಣು ಮಾಡ್ತೀವಿ

02__MS_346-KUH

ಮೂರು ಗಂಟೆಗೆಲ್ಲಾ ಬರಬೇಕು ಅಂತಾ ಪತ್ರ ಬರ್ದಾನ ತಪ್ಪದೇ ಪತ್ರ ಬರ್ದು ಆಗ ತಳವಾರನೆ ಕೊಟ್ಟು ಕಳಿಸಿದ ತಳವಾರಗೆ ಕೊಟ್ಟು ಕಳ್ಸೊ ಹೊತ್ತಿಗೆ ದಡೇಗಾವು ಬಂದಾನ ಪೂಜೆ ಮನೆಗಿದ್ದರು ಇಬ್ಬರು ಏನಪ್ಪಾ ಸಿದ್ದೋಜಿ ಖಂಡೇರಾವು ಇಬ್ಬರು ಮಾರವಾಡೆರು ಏನ್ರಪ್ಪಾ ತಲವಾರಿ ಇಗೋ ಪತ್ರ ಕೊಟ್ಟು ಕಳ್ಸಾನ ನಿಮ್ಮಣ್ಣಾ ಓದಿಕ್ಯಾಳಂತಾ ಕೊಟ್ಟ ನಡುವೋನು ಸಿದ್ದೋಜಿ ಪಟಪಟನೆ ಓದಿಕೆಂಡ ತಾಯಿ ತಂದೆ ಸತ್ತಾರೆಂದರೆ ಅಳ್ತಾರ ನಗ್ತಾರ ಭೂಮಿ ಮ್ಯಾಗೆ ಅಳಬೇಕಂದ ಅವನೇನಂಥನೆ

ಕಿಲಿ ಕಿಲಿ ಕಿಲಿ ನಕ್ಕಾನೆ
ಕಿಲಿ ಕಿಲಿ ಹಾಲೆ ನಕ್ಕಾನೆ
ತಂದೆ ಆಸ್ತಿ ತಿಂಬೋನೆ

ನಾವು ಇನ್ನು ಯಾಕ ಹೋಗಾನ
ತಂದೆ ಆಸ್ತಿ ನಾವು ತಿಂದಿಲ್ಲಾ
ತಂದಿ ಮುಖ ನೋಡಬಾರದು
ತಂದಿ ಮಣ್ಣ ಹಾಕಬಾರದು
ಅವ್ರೆನ್ ತಿಮ್ತಾರ ನೋಡಾನ
ಅವನೇ ಮಣ್ಣೇ ಹಾಕಲಿ
ಅವನೆ ದಿನ್ನಾ ಮಾಡಲಿ
ಅವನೆ ಎಲ್ಲಾ ತಿಂತಾನ
ಅವನೆ ಮಣ್ಣು ಹಾಕವನೆ
ನಾವು ತಂದೆ ಆಸ್ತಿ ತಿಂದ್ಯಾ

ತಂದೆ ಆಸ್ತಿ ಅವನ ತಿಂದಾನೆ ಅವನೆ ಮಣ್ಣಾಕ್ಲಿ ಅವನೆ ಮುಖ ನೋಡ್ಲಿ ಲೇ ಈಗ ಮುಖ ನೋಡಾನಂತ ಹೋದ್ರೆ

ಒಬ್ಬನಿಗೆ ನೋಡಲಿ
ಮೂರು ಮೂರು ಸಾವು ಹಾಕ್ತಾನ
ದಾಡಿಗೆ ಬಂದೆ ನೋಡಲ್ಲೆ
ಮೂರು ಮೂರು ಸಾವು ಹಾಕೋವನು
ಮಂದಿಕೈಲಿ ಏನಂತಾನ
ನೀವೆ ಹುಟ್ಟಿ ಇಲ್ಲವೆನಾದೆ
ನೀವೆ ಹುಟ್ಟಿಲ್ಲ ಇಲ್ಲಿ ನೋಡಿ
ನಿನ್ನೆಗೆ ಹಕ್ಕು ದಾರನಂತನೆ
ಮಂದಿ ಬಂದು ನನ್ನ ಬೈತಾರ
ಆಸ್ತೀ ಪಾಸ್ತಿನ ನಂಬಿನಿ
ನಮ್ಮೇ ಅಷ್ಟೆರೇವಣ್ಣಾ

ನಂಬ್ಗಾದಾಳ ಲೇ ಹೋಗದು ಬ್ಯಾಡ ಮುಖ ನೋಡದು ಬ್ಯಾಡ ಮೂರು ಸಾವು ಹಾಕೆಂಬದು ಬ್ಯಾಡ ಅದೇ ಮೂರು ಸಾವುದಲಿ ಬಂದು ಸಾವು ತಿಮ್ಮಾಲೆ ಬೇಷ್ ಇರ್ತಿ ಅಂತ ಏನಾಂತ ಬದ್ರು ಆಗ ತಳವಾರಗೆ ನೋಡಪ್ಪಾ ನಾವು ಬರಾದಿಲ್ಲ ತಂದೆ ಆಸ್ತಿ ನಮ್ಗೆ ಬೇಕಿಲ್ಲ ತಂದೆಗೆ ಮಣ್ಣ ಮಾಡಾಕಾ ಬರಾದಿಲ್ಲ ತಂದಿ ಮುಖ ನೋಡಾದಿಲ್ಲ ಆತ ಮಣ್ಣ ಮಾಡಬೇಕ ಆತ ನೋಡಬೇಕು,

ನಾವು ಬರೋದಿಲ್ಲ ಅಂದಾನ
ಪತ್ರ ಬರ್ದೆ ಕಳ್ಸ್ಯಾನ
ಬರೋದಿಲ್ಲ ಅಂತಾನ
ವಾಪಸ ಹಾಗೆ ಕಳ್ಸ್ಯಾನ

ಪತ್ರ ವಾಪಸ ಕಳ್ಸಾವೊತ್ತಿಗೆ ವಾಪಸ ತಗಂಡು ಬಂದಾನ ಶರಣ್ರಿ ನಾನಂದರಾವ್, ನಿಮ್ಮ ತಂದೆ ಬಜೆರಾವ್ ಪತ್ರಕೊಟ್ರಿ ಈಗ ಸಿದ್ದೋಜಿ ಖಂಡೇರಾವ್ ನಿಮ್ಮ ತಮ್ಮೂರು ಏನಂದ್ರು ಈಗ ಪತ್ರಬರ್ದು ಕೊಟ್ಟಾರ ಓದಿಕೋ ಅವ್ರು ಬರ್ಲಿಲ್ಲಪ್ಪಾ ಪಟಪಟ ಪತ್ರ ಓದ್ಯಾನಂತ ಲೇ