ಕನಿಕರ ಬಂದೆ ಬಿಡತೈತೆ
ನಿಮ್ಮನ ಕರ್ಕಂಡು ಹೊತಾರ
ನಿಮ್ಮನ ಕರ್ಕಂಡು ಹೊತಾರ ಸೈ
ಒಳ್ಳೆ ತಾಕವಾದರೆ ಸೈ
ಅಲ್ಲೆ ಇದ್ದೇ ಬಿಡಿರ ಸೈ
ದೊಡ್ಡಾರದ ಮ್ಯಾಲೆ ಬರುವರು ಸೈ
ಇನ್ನ ಒಳ್ಳೆವನಾಗದಿದ್ದರೆ ಸೈ
ಅತ್ತು ಬಂದ್ರು ಶರಣೆ ಇದ್ದರೆ ಸೈ
ಹತ್ತು ವರ್ಸಕ್ಕೆ ನೋಡರ
ನಿಮ್ಮಟಿಗೆ ನೀವೆ ಬರ್ಯಾರ
ಅಪ್ಪಾ ಹುಡುಗುರ ಕೇಳ್ರಾ

ನಿಮ್ಮ ಹೊಲಮನೆ ಎತ್ತ ಹೋಗಾದಿಲ್ಲ ನಾವು ಬೆಳ್ಸೆಕಂತ್ತೀರ್ತೀವಿ ನಿಮ್ಮ ಮನೆ ದೀಪ ಹಚ್ಕಂತ್ತರ್ರೀವಿ ಏನ್ ಪರ್ವಾಗಿಲ್ಲ ತಮ್ಮ ಈಗ ನಮ್ಮೋರಿಗೆ ನೀವು ಸೇರ್ಯವಂತಿರಿ… ಆಹಾ ದೊಡ್ಡ ದೊಡ್ಡ ಯಜಮಾನೆಲ್ಲ ಹೇಳ್ಬಿಟ್ಟು ಅವ್ರಿಗೆ ಸರೆ ಬಿಡಾಂತ,

ಆಗ ಹುಡುಗುರ ನೋಡ್ಯಾನ
ಮೂವರ
ಅಣ್ಣ ತಮ್ಮೋರ

ಒ ಮೂವರ ಅಣ್ಣ ತಮ್ಮಂದಿರು ಏನ ಮಾಡಿದ್ರು ಅಂದ್ರೆ ಆಗ ತಂದೆ ಇನ ಅವರಣ ತಂದೆ ಹಿಂದೆ ಹುಟ್ಟಿದವನು ತಮ್ಮ ಬಂದು ಕುದ್ರಿಮ್ಯಾಲೆ ಕೆಳಗಿಳಿದ ಹೊತ್ತೆಗೆ,

ತಂದೆನ ಕಣ್ಣಿಗೆ ನೋಡ್ಯಾನ
ಸತ್ತವನ ಕಕ್ಕ ಬೈದಾನ
ಯಾಪ್ಪೋ ನೀನೆ ನನತಂದೆ ಐದಿಯಾ
ತಂದೆ ತಾಯಿ ಇಲ್ಲದವರಪ್ಪ
ನಮ್ಮಪ್ಪ ಸತ್ತೆ ಹೋಗ್ಯಾನ
ನಿಮಗೆ ನಿಮ್ಮಣ ಬೈದನೆ
ನಮಗೆ ನಮ್ಮಪೈದನ
ಐದು ವರುಷ ಹುಡುಗರೈದಿವೆ
ಕಕ್ಕ ಈಗ ನೀನು ಬಂದುಬಿಟ್ಟಿಯಾ
ಈಗ ನೀನೇ ಬಂದಿಯಾ
ಹೇಳೋ ನಮ್ಮ ಕಕ್ಕಯ
ನಮ್ಮನು ಸಲುಹಾಕಿ ಬಂದೆಯ
ನಮ್ಮನು ಕಳಸಾಕೆ ಬಂದೆಯ
ಜೋಪಾನ ಮಾಡಕೆ ಬಂದಿಯಾ
ನೀನೇ ಬಾದಿಯೇ ವೈದಿಯೇ
ಈಗಪ್ಪ ಕರ್ಕಂಡು ಹೋಗಕೆ ಬಂದಿಯಾ

ಹುಡುಗುರು ಅಂಥರೆ ಮಾತು ಅಂಥ ಪಾದ ಮೇಲೆ ಎಲ್ಡ ಕೈ ಹಾಖಿ ಎಲ್ಡ ಪಾದಗಳು ಹಿಡ್ಕಂಡು ಒಟ್ಟಾಗೆ ತಲೆಯಿಟ್ಟರೆ

ಭೂಮಿಗನ್ನ ಕರುಣೆ ಬರ್ತಾದೆ
ಯಾಮ್ಮ ಅವನ ಜೀವಕ ಕನಿಕರವಿಲ್ಲರಾ
ಕಲ್ಲುಗಳಿಗೆ ಕನಿಕರ ಹುಟ್ತಾದೆ
ಯಾಮ್ಮ ಅಂವ ಕಣ್ಣಲಿನೀರು ಬರ್ವದು

ಆಗ… ಕಲ್ಲಿಗನ ಕನಿಕರ ಬರತೈತೆ ಭೂಮಿಗೆನ ನೀರ ಉಕ್ಕೇಳ್ತವ ಅವನ ಕಣ್ಣಲಿ ನೀರ ಬರುವಲ್ದೂ ಸುಮಕ ನಿಂತಾವನೆ, ದೊಡ್ಡವ ಪೊರಗಂಜಿ,

ಪಾದಮ್ಯಾಲೆ ಬಿದ್ದ ಹುಡುಗುರನ ಸೈ
ಅವನು ಏನ ಮಾಡ್ಯಾನ ಸೈ
ಜಾಡ್ಸಿ ಎಡಗಾಲಲಿ ಒದ್ದನ
ಕಾಲಮ್ಯಾಲೆ ಬಿದ್ದ ಹುಡುಗೊರು
ಮೂರು ಸರ್ತಿ ಹೊಳ್ಯಾಡರೆ
ಮೂವರ ಮಕ್ಕಳ ವದ್ಯರ
ಮೂರು ಸರ್ತಿ ಉಳ್ಳಾಡ್ಯಾರೆ
ಮೂವರ ಮಕ್ಕಳ ದೊಡ್ಯಾನ
ಮೂವರ ಹುಡುಗುರ ವದ್ದರ ಸೈ
ತಾವು ಒದ್ದ ಜಾವದಲ್ಲರ ಸೈ
ಇನ್ನ ನಮ್ಮಪ್ಪ ನೋಡ್ಯಾರ ಸೈ
ಸಿಟ್ಟಮ್ಯಾಲೆ ನಮನ ಒದ್ದಾನ ಸೈ
ಅಪ್ಪಾ ಒದ್ದೋರಾಂತ ಸೈ
ಯಾರ ನಮನ ಒಬ್ಬರ ಬೇಕುರಾ ಸೈ
ಬಂದೇನ ಸಿಟ್ಟಮ್ಯಾಲೆ ಒದ್ದನ
ತಂದೆ ಕಲಾಗಡಿ ಯಾರಮ್ಮ

ತಂದೆ ಒದಿಲಾರದೆ ಯಾರ ಒದಿಬೇಕು ತಂದೆ ಬಡಿಲಾಕ್ಕೆ ಯಾರು ಬಡಿಬೇಕು ಈವತ್ತು ಒದ್ದಾನ ನಾಳೇ ಜೋಪಾನ ಮಾಡ್ತಾನ ಯಪ್ಪಾ ಕಕ್ಕ…. ಈಗ ತನ್ದೆ ಹಿಂದೆ ತಮ್ಮ ಹುಟ್ಟಿದೋನು ಈಗ ಜೋಪಾನ ಮಾಡಕ ಬಂದಿಯ ಲೇ

ನಿಮ್ಮನ ಸಲುಹಕಿ ಬಂದಿಲ್ಲ
ಬೆನ್ನ ಹಿಂದೆ ಹುಟ್ಟಿದ ತಮ್ಮ ನಾ
ಎಂಜಲಾಲನು ಕುಡ್ಡೋನು ನಾನಾ
ಅಣ್ಣನಾಸ್ತಿ ಒಯಕೆ ಬಂದಿನಿ
ಭೂಮಿ ಹೊಲ ಮಾರ್ಯಾನು
ಬೆಳ್ಳಿ ಬಂಗಾರ ರೊಕ್ಕನ
ನಾನು ವೈಯಲಿಕೆ ಬಂದಿನಿ
ನಿಮ್ಮನು ಸಲುಹಕಿ ಬಂದಿಲ್ಲ ಸೈ
ಸತ್ರೆ ನನ್ಗೆ ಸುಖ ಸೈ
ಇದ್ರೆ ನನಗೆ ಲಾಭರಾ ಸೈ
ಎತ್ತಗನ ಹಾಳಗಿ ಹೋಗರ ಸೈ
ನಿಮ್ಮ ಗುಣವನು ಯಾಕಾರ
ಎತ್ತಗನ ಹಾಳಾಗ ಹೋಗರೆ
ನನ್ನ ಗಂಟ ಕೊಡ ಏನರೆ
ಎಂಥಾ ಪಾಪಿಗಳೈದಿರೋ ಸೈ
ಎಂಥಾ ದುಷ್ಠರೈದಿರೋ ಸೈ
ಮಕ್ಕಳಿಲ್ಲದ ಕರ್ಮದವರೋ ಸೈ
ಎಂಥಾ ಕವಿಕರ ಇಲ್ಲಪಾ
ಎಂಥಾ ಪಾಪಿ ಕೈ

ಅಪಪಾ ಎಂಥಾ ಕರ್ಮಿಷ್ಟ ಇರಬೋದು ನಿನ್ಗೆ ಎಂಥಾ ಕನಿಕರ ಇಲ್ಲ ಪಾದಮ್ಯಾಲೆ ಬಿದ್ದೋರ ಜಾಡ್ಸಿ ಒದ್ದು ಬಿಟ್ಟೀ ನಾವು ಮಾರ್ ಸರ್ತಿ ಹೊಳ್ಳಾಡಿ ಮ್ಯಾಕೆ ಎದ್ದೀವಿ ಆಹಾ ತಂದೆ ಆಸ್ತಿ ಒಯಾಕೆ ಬಂದಿಯಾ ಅಣ್ಣ ತಮ್ಮ ಯಿರ್ಲಿಕೆ ಜೀವಯಿರ್ಲಿಕೆ ಬರ್ಬೇಕು ಈಗ ಗುದ್ದಾಟಬೇಕು ಸರಿಭಾಗ ಹಂಚಿಕ್ಕಂಡು ಹೋಗ್ಬೇಕು ಇದೋ ನಮ್ಮ ತನ್ದೆ ಸತ್ತ ಮ್ಯಾಲೆ,

ಆಸ್ತಿ ಒಯಲಿಕೆ ಬಂದಿಯಾ
ಇಬ್ರುಗಾಗ ಒಬ್ರು ಇದ್ದಾರೆ
ಒಬ್ರುಗಾಗ ಇಬ್ರು ಇದ್ದಾರೆ
ತಾಯಿಯಾಗ್ಲಿ ನಿನ್ಗೆ ಉಳಿದಾರೆ

ತಾಯಿಯಾಗ್ಲಿ ತಂದೆಯಾಗ್ಲಿ ಏ ಇನ್ನ ನೀನ ಆಸ್ತಿ ಒಯ್ತಿಯ ಆಸ್ತಿಗೆ ನೀನು ಬರ್ತೀಯಾ,

ಗಂಡನ ಆಸ್ತಿ ನೋಡರ ಸೈ
ನನಗೆ ಮಕ್ಕಳ ಬೈದರ ಸೈ
ಹೆಂಗ ವೈಯ್ತಿ ವೈಯಿ ಮಗನೆ ಸೈ

ನಿನ ರಕ್ತ ಕುಡ್ದೇನು ಅಂತುದ್ದಳಲ್ಲಾ ನಮ್ಮ ತಾಯಿ ಇದ್ರೆ ನಮ್ಮಪ್ಪಿಲ್ಲ ಹೇ ನನಮಕ್ಕಳ ಇರಲೇ ಅಂಮ್ತಿದನಲ್ಲ ಏನಪ್ಪ ಈಗ ಧರ್ಮ ಅಲ್ಲ ಆಹಾ ನಮ್ಮ ತನ್ದಿ ಆಸ್ತಿ ಒಯ್ತು ಅಂದ್ಕೊ ಈಗ ನಮ್ಮನ ಕರ್ಕಂಡು ಹೋಗು ನೀನು ಅರ್ಧ ಊಟ ಮಾಡು ನಮ್ಗೆ ಅರ್ಧ ಇಡು,

ಈಗ ಹತ್ತು ವರ್ಸ ನಮನ ಕೈಲಿಡಿಯೊ
ನಮ್ಮನ ಜೋಪಾನ ಮಾಡಪ್ಪ
ಹೋ ಧರ್ಮ ನೀ ಬರತೈತೆ
ಎಷ್ಟು ಕಾಲ ಸಲುವಾದಿಲ್ಲನಾ
ನಿಮ್ಮಗ ಹಾಕೋ ಅನ್ನನ ನೋಡ್ಯಾನ
ನಾಯಿಗಾಕಿ ಬೆಳೆಸ್ಯಾನ

ನಾಯಿಗಾಕಿ ಬೆಳೆಸ್ಯಾನು ನಿಮ್ಮನು ಬೆಳೆಸೋದಿಲ್ಲ ಆಹಾ ಅಣ್ಣ ಮಕ್ಕಳ ನಂಬಾದಿಲ್ಲ ನಾಗರ ಹಾವು ನಂಬೇನು ನಿಮ್ಮನ ನಂಬಾದಿಲ್ಲ, ಹಂಗಾರೆ ನಮ್ಮನ ನಂಬದಿಲ್ಲವಾ ನಂಬದಿಲ್ಲ, ಹಂಗಾರೆ ನಮ್ಮಪ್ಪ ಸಾಯುವಾಗ ನಮ್ಮಗೆ ಆಸ್ತಿಯಲ್ಲ ತೋರ್ಸಿ ಜೀವ ಬಿಟ್ಟಾನೆ ಈಗ ನನ್ನಪ್ಪನಾಸ್ತಿ ನಿನಗೆಂಗಾತೈತಿ ಎಲ್ಲಿ ಬಚ್ಚಿಟ್ಟಿದು ಎಲ್ಲಿ ಇಲ್ಲದವರ ತಾವಾಗಿ ಈಗ ಕೂಡಿಟ್ಟದ್ದೂ ನಿನಗೆಂಗಾಗತೈತಿ,

ವೈಯೋ ಮನ್ಯಾಕೆ ಹೋಗಾನ
ಹೆಂಗೆ ವೈತಿಯೋ ವೈತಾನ
ವೈಇ ಕಕ್ಕ ನೀನಾಗಿ
ವೈ ಕಕ್ಕ ಮಾತಾಗಿ
ಹೊರಗ ಇರ್ತಿವಿ ವೈಯಪ್ಪ

ತಂದೆ ಸಿದ್ದೋಜಿ ನೋಡ್ಬಿಟ್ಟ ಅಲೆಲೆಲೆ ಈಗ ನಮ್ಮ ತಂದೆ ಭಾಗ ಹಂಚಿ ಕೊಟ್ಟಿದ್ದೀರಿ ನಾವು ಹೋಗಿದ್ದೀವಿ ಅಗಲಿದ್ದ ಬಂದಿಲ್ಲ ನಮ್ಮ ಅಣ್ಣ ಎಲ್ಲಿ ಬಚ್ಚಿಟ್ಟಿದ್ದಾನೆ ಬೆಳ್ಳಿ ಬಂಗಾರ ರೊಕ್ಕ ಆಹಾ ಈ ಹುಡುಗುರಿಗೆ ಜೀವ ಬಿಡುವ ಕಾಲಕ್ಕೆ ಗಂಡ ಹೆಂಡ್ತಿ ತೋರ್ಸಿರ್ತಾರೆ. ಆಹಾ ಜೀವ ಬಿಟ್ಟಿರ್ತಾರೆ ಈ ಹುಡುಗುರನ ಮರಳು ಮಾಡಿಕ್ಕಂಡು ಆಹಾ ಈ ಹುಡುಗರನ ಕೈ ಹಿಡಕ್ಕಂಡು ಆಹಾ ನಾನು ಎಷ್ಟೊ ಬಗಳ ದುಃಖ ಮಾಡಿ ಆಹಾ ಈಗ ಆಸ್ತೆಲ್ಲ ತೋರ್ಸಿಕ್ಕೆಂಡು ಆಹಾ ನಾನ ಕಸ್ಕಂಡು,

ಹುಡುಗುರ ಬಿಟ್ಟು ಹೋಗ್ತೀನಿ
ಆಸ್ತೆಲ್ಲ ತಕ್ಕಂಡು ಹೋಗ್ತೀನಿ
ಕೈ ಕಾಲು ತಿರುವಿ ಹೋಗ್ತೀನಿ
ಸೇದಗ್ಗಾಕಿ ಕಟ್ಟೇನ

ಕಂಬಕೆ ಬಿಗಿಸಿ ಹೋಗೇನ
ಕಂಬಕೆ ಬಿಗಿಸಿ ಕಟ್ಟೇನ
ಗೊಡ್ಡು ಕವನ ಕರ್ಮಿಷ್ಟವನು
ಮಕ್ಕಳಿಲ್ಲದ ಪರಬಂಜವನು

ಆ ಸಿದೋಜಿ ಏನೆಂದು ಬಿಟ್ಟಾ ಆಗ ಮಕ್ಕಳ ಮುಂದೆ ಏನಂತ ದುಃಖ ಮಾಡ್ತಾನೆ

ಯಪ್ಪಾ ಅಣ್ಣ ಸ್ತು ಹೋದನೆ
ತಮ್ಮ ಅತ್ಗೆ ಹೋಗೆ ಬಿಟ್ಟಾಳ
ಅತ್ಗೆ ಹೋಗೆ ಬಿಟ್ಟಾಳ
ಅಣ್ಣಯ ತೀರೆ ಹೋಗೆನ
ಎಷ್ಟು ಜೀವಾಂತ ಇದ್ದುರೆ
ಮಕ್ಕಳ ನೀವು ಹುಟ್ಟಿರ ಟೇಮು ಏನಾರು
ಮೂವರು ಹುಟ್ಟಿದ ಮ್ಯಾಲರ
ಮಕ್ಕಳ ನಿಮ್ಮ ತಾಯಿ ತಂದೆ ಸತ್ತರ
ನೀವು ಹುಟ್ಟಿದ ಟೇಮು ಏನುರು
ಮೂವರು ರಂಜೆದ ಸತ್ತುರ
ನೀವು ಮೂವರು ಹುಟ್ಟಿದಂತ ವ್ಯಾಳದಲ್ಲಿ ಹುಟ್ಟಿರೊ
ತಾಯಿ ತಂದೆ ಸತ್ತೋದ್ರು ಅಂತಸಿಟ್ಟು ಮ್ಯಾಲೆ,
ನಿಮ್ಮನೆ ನಾನೇ ಒದ್ದಿನಿ
ಯಪ್ಪಾ ನಾನು ಬೈದಿನಿ
ಸಿಟ್ಟುಮ್ಯಾಲೆ ನಾನು ಒದ್ದಿನಿ
ನಿಮ್ಮನು ನಾನೇ ಬೈದಿನಿ
ನನಗೆ ಮಕ್ಕಳು ಇಲ್ಲರ
ಯಪ್ಪಾ ತಮ್ಮಗೆ ಮಕ್ಕಳು ಇಲ್ಲರ
ನೀವೆ ನನಮಕ್ಕಳ ಐದಿರಿ

ನಿಮ್ಮನು ಕರ್ಕಂಡು ಹೋತಿನಿ
ನಾನೇ ಜೋಪಾನ ಮಾಡ್ತೀನಿ ಸೈ
ಸಾಯತನಕ ನಿಮ್ಮ ಸಲುವೇನು
ಸಾಯತನಕ ಜೋಪಾನ ಮಾಡ್ತೀನಿ
ಸಾಯತನಕ ನಾನು ಸಲುವೇನ
ನಿಮ್ಮಿಗೆ ವಿದ್ಯಾ ಕಲ್ಸ್ತೀನಿ ಸೈ
ನಿಮ್ಮಗೆ ಮದ್ವೆ ಮಾಡ್ತೀನಿ ಸೈ
ನೀವೆ ನನ್ನ ಮಕ್ಕಳು ಐದಿರಿ ಸೈ
ನಾನೆ ನಿಮ್ಮ ತಂದೆ ಐದಿನಿ
ನಾನೇ ನಿಮ್ಮ ತಂದೆ ಐದಿನಿ
ನಿಮ್ಮಗಳ ಕೈ ಹಿಡಿತೀನಿ

ಅಂತ ಮಕ್ಕಳ ಹಿಡಿಕ್ಕಂಡು ಬಕ್ಕಳ ದುಃಖ ಮಾಡೋ ಹೊತ್ತಿಗೆ, ಮೂವರು ಮಕ್ಕಳಿಗೆ ಬಾಳ ಜೀವ ಬಂತು. ನೋಡ್ಯಾ ನಮ್ಮ ಕಕ್ಕು ಕೂಡ ದುಃಖ ಮಾಡ್ತಾನಲ್ಲ ಈಗ ಯಪ್ಪಾ ಈಗ ಈ ಊರು ಬಿಟ್ಟು ನಿಮ್ಮಪ್ಪ ನಿಮ್ಮಮ್ಮ ಸತ್ತೋಗೆರೆ ಈ ಮನ್ಯಾಗೆ ಇರಬಾರ್ದು ಆ… ನಮ್ಮೂರಿಗೆ ನಾವು ಹೋಗಾನ ಆಹಾ… ಯಪ್ಪಾ ಈ ಊರೋರು ಒಳ್ಳೆವರಲ್ಲ ಕನ್ನ ಹೋಡಿತಾರೆ ಗೋಡೆ ಒಡೆತಾರೆ ಈಗ ಬ್ಯಾಂಕಿನ ರೊಕ್ಕ ಹೊಡೆತಾರೆ ಈಗ ಬೆಳ್ಳಿಬಂಗಾರ ವೈತಾರ,

ಅಂತ ಮಕ್ಕಳ ಹಿಡಿಕಕ್ಕಂಡು ಬಕ್ಕಳ ದುಃಖ ಮಾಡೋ ಹೊತ್ತಿಗೆ, ಮೂವರು ಮಕ್ಕಳಿಗೆ ಬಾಳ ಜೀವ ಬಂತು. ನೋಡ್ಯಾ ನಮ್ಮ ಕಕ್ಕು ಕೂಡ ದುಃಖ ಮಾಡ್ತಾನಲ್ಲ ಈಗ ಯಪ್ಪಾ ಈಗ ಈ ಊರು ಬಿಟ್ಟು ನಿಮ್ಮಪ್ಪ ನಿಮ್ಮಮ್ಮ ಸತ್ತೋಗೆರೆ ಈ ಮನ್ಯಾಗೆ ಇರಬಾರ್ದು ಆ… ನಮ್ಮೂರಿಗೆ ನಾವು ಹೋಗಾನ ಆಹಾ… ಯಪ್ಪಾ ಈ ಊರೋರು ಒಳ್ಳೆವರಲ್ಲ ಕನ್ನಡ ಹೋಡಿತಾರೆ ಗೋಡೆ ಒಡೆತಾರೆ ಈಗ ಬ್ಯಾಂಕಿನ ರೊಕ್ಕ ಹೊಡೆತಾರೆ ಈಗ ಬೆಳ್ಳಿಬಂಗಾರ ವೈತಾರ,

ತಂದೆ ಆಸ್ತಿ ನೀ ತೋರ್ಸಾನೆ
ಯಪ್ಪಾ ನೆಪ್ಪು ಇದ್ದೋರಲ್ಲ ತೋರ್ಸಾನೆ
ತಂದೆ ತೋರ್ಸಿದೆಲ್ಲ ತೋರ್ಸಾನೆ
ಅಪ್ಪ ಕಕ್ಕ ಕೇಳಾದು ಸೈ
ನೆಪ್ಪಿದ್ದನ್ನ ಹೇಳ್ತೀನಿ ಸೈ
ನೋಡಿದ ನಾವು ತೋರ್ಸಿನಿ ಸೈ
ನೋಡಲಾಗದವ ನಾವು ಬಿಡ್ತೀನ
ನೋಡಿದು ನಾವೇ ಹೇಳ್ತೀವಿ
ತಪ್ಪಿದು ನಾವೇ ಹೇಳ್ತೀವಿ

ನೋಡಪ್ಪಾ ಮೂವರು ಅಣ್ಣ ತಮ್ಮಂದಿರು ಕಲ್ತು ಒಬ್ಬರಿಲ್ದಿದ್ರೆ ಒಬ್ರು ಬೇಸ ನೆಪ್ಪ ತರಕ್ಕಂಡ ತೋರ್ಸಿ… ಬೇಸ ನಿಮ್ಮ ತಂದೆ ತೋರ್ಸಿ ಹೋಗೆನಲ್ಲ… ಅಂತ ಮೂವರನ ಕೈ ಹಿಡಕಂಬೊತ್ತಿಗೆ…

ಆಗ ಮನಿಗೆ ಬಂದಾರ
ಮನೆ ಒಳಗೆ ಬಂದಾರ
ನಟ್ಟಗೆ ಕರ್ಕಂಡು ಹುಡುಗುರೆ
ಬ್ಯಾಂಕಿನಲ್ಲಿಗೆ ಬಂದಾರೆ
ಉಕ್ಕಿನ ಬ್ಯಾಂಕಿನ ಬ್ಯಾಂಕನ
ಅವರೆ ಬಂದೇ ಬಂದಾರೆ

ಉಕ್ಕನ ಇನ್ನ ಬ್ಯಾಂಕ್ ಆಹಾ ಆಗ ಬ್ಯಾಂಕಿನ ತೆಗೆ ಬಂದು ಆಗ ಕೈಯಿಟ್ಟು

ಬೀರಮ್ಯಾಲೆ ಕೈ ಇಟ್ಯಾರ
ಎಲ್ಲೆಲ್ಲಿ ಬೀಗ ಸಿಗಲಿಲ್ಲ
ಬೀಗ ಸಿಗಲಿದ್ರೆ ನೋಡಾರ ಸೈ
ಎಲ್ಲಿ ಇಟ್ಟಾರ ಹುಡುಗುರ ಸೈ
ಬೋದಿಗೆ ಮ್ಯಾಲೆ ಇಟ್ಟಾರ
ಬೋದಿಣಿ ಮ್ಯಾಲೆ ಇಟ್ಟಾರ
ಬೀಗ ಕಂಬದ ಬಗಲಾಗ

ಮ್ಯಾಲೆ ಬೋದಿ ಮ್ಯಾಲೆ ಕಂಬದ ಬಗಲಾಗ ಇಟ್ಟಿದ್ರು ಆಹಾ ಆಗ ತಗಂಡ್ರು ತಗಂಡು

ಒಳಗಡೆ ಬೀಗ ತಗದಾನ
ಹೊರಗಡೆ ಬೀಗ ತಗದಾನ
ಆಗ ಬ್ಯಾಂಕಿಗೆ ಶರಣು ಮಾಡ್ಯಾನ
ಬ್ಯಾಂಕಿಗೆ ಶರಣು ಮಾಡ್ಯಾರೆ
ಬೀರಿಗೆ ಶರಣ ಮಾಡಿ …. ಆಗ ತೆರೆದು ನೋಡದ್ರೆ
ಬೆಳ್ಳಿ ಬಂಗಾರ ಐತಮ್ಮಾ
ಮಾರುಸೇರು ಬೆಳ್ಳಿ ಐತಮ್ಮ
ಐದು ವಾದ ದಡೆನೆ
ಐದೇ ದಡೆ ನೋಡ್ಯಾನೆ
ಬಂಗಾರಾಗಿ ಹೋಯ್ತಲ್ಲ
ಆಗ ಎನ್ನ ಮಕ್ಕಳನಾ
ಬೆಳ್ಳಿ ಬಂಗಾರ ಮಾಕ್ಕಂಡು
ರೊಕ್ಕ ಪೂರ್ಣ ತೋರ್ಸಿನ

ಭೂಮಿ ಪತ್ರಗಳು ಮನಿ ಪತ್ರಗಳು ತಕ್ಕಂಡು ಆಗ ಐದು ಹಿಡಿಕೆ ರೊಕ್ಕ ಬೆಳ್ಳಿ ರೊಕ್ಕ ಆ.. ಬೀರ ಮ್ಯಾಗೆ ಇಟ್ಟು ಬೀರಗೆ ಶರಣು ಮಾಡಿ

ಬೀಗ ವಂದೆ ವಾಕೆನ
ಬೀರಿಗೆ ಶರಣು ಮಾಡ್ಯಾನ
ಒಳಗಡೆ ಬೀಗ ಹಾಕ್ಯಾನ ಸೈ
ಹೊರಗಡೆ ಬೀಗ ಹಾಕ್ಯಾನ
ಮಾರ್ವಡಿ ನಾಯಿಗಳು
ಎಷ್ಟು ನಾಯಿಗಳೇ ಐತವೆ
ಚಿಕ್ಕ ನಾಯಿ ನೇರ ನಾಯಿರ
ಮನೆಗಳೊಗೆ ಬಂದು ಬಿಟ್ಟಾವೆ
ಮನೆ ಹಾಗೇವು ತೋರ್ಸಿವ
ಬಂಡೆ ಮುಚ್ಚಿಬಿಟ್ಟಾನ

ಜೋಳ ಹಗೇವು ಐತೆ ನವಣೆ ಹಗೇವು ಐತಿ ಸಜ್ಜೆ ಹಗೇವು ಐತೆ ಎಲ್ಲಾ ತೋರ್ಸಿ ಬಂಡೆ ಮುಚ್ಚವತ್ತಿಗೆ ಆ… ನಾಯಿಗಳು ತೋರ್ಸಿ ಬಿಟ್ಟಾನ ಬರಬರ ಎನ್ನ ತೋರನ

ಬೌ…. ಎಂದು ಅರಚ್ಯಾವ ಸೈ
ಇಲ್ಲಿ ವೆ ಜೆಬ್ಬರಿ ಅಂತಾರ ಸೈ
ಆಗ ಮರ ಮರ ತೋಡರ ಸೈ
ನಾಯಿಕ್ರ ಒಂದೇ ಜನ್ಮರ
ಇನ್ನ ನಾಯಿಗಳು ತೊರ್ಸವ
ಅವು ವಂದೇ ನಾಯಿಗಳು
ಇಳುದು ತೋಡೆ ಬಿಟ್ಟಾರೆ ಸೈ
ಜ್ಯೋಳ ನಾವಣೆ ತಗದನ ಸೈ
ಸಜ್ಜೆ ವಂದೆ ತಗದನ ಸೈ
ಕಾಲಕೆ ಅಣ್ಣಯ್ಯಾ ಸೈ
ಬಂಡಿಗಳೊ ಬಾಗೆ ಇಲ್ಲನ
ಎತ್ತೊಗಳು ಗಾಗೆ ಹಾಕ್ಯಾರ
ಎಮ್ಮೆಗಳುಗಾಗೆ ಹಾಕ್ಯಾರ ಸೈ
ಆಕಳ ಮ್ಯಾಗೆ ಹಾಕ್ಯಾನ ಸೈ
ಎತ್ತುಗಳು ಆಕಳು ಹಾಕ್ಯಾನ
ತಾಬೆಯಮಡಿ ಹಾಕ್ಯಾನ

ಮೂರು ಮೂರು ಚೀಲ ಕಟ್ಟಾದು ಆಗಿನವರ ತಾವಾಗಿ ಎತ್ತ ಮ್ಯಾಲೆ ಆಕಳ ಮ್ಯಾಲೆ ಈಗ ಹಾಕಿಬಿಡಾದು ಹಾಕಿದ ಮ್ಯಾಲೆ ಈಗ ನೋಡ್ದಾ ಲೇ … ನಾಯಿಕ್ರಲಾ ಈಗ ಲೂಟಿ ಮಾಡ್ಬೇಕು ಊರಾಗ ಆ… ಅಂಬೋತ್ತಿಗೆ ಲೂಟಿ ಮಾಡ್ರುಂಬುತ್ತಿಗೆ ಸೆಂಚಿಗ ಮೆಂಚಿಗಾ ಮಂತ್ರ ಮಾಂತ್ರ ಮಾದೇವ ಅಸ್ರಪ ಕಳ್ರು ಕಳ್ಳು ದತ್ತೈ ಮಕ್ಕಳು,

ಆಗ ವಂದೆ ನೋಡುರ ಸೈ
ಬಚ್ಚಿ ಬಂದೆ ಬಿಟ್ಟರ ಸೈ
ಉಳಿಕಿ ಬಿಟ್ಟಿಗಳೇ ಬಿಟ್ಟರ ಸೈ
ಬ್ಯಾಂಕ್ ಬಾಗಲೆ ನೋಡ್ಯಾರ
ಬ್ಯಾಗಳ ಕಟ್ಟಿಗೆ ಇಳಿದರ
ಊರಾಗ ಪೂರ ಬಿಟ್ಟರ
ತಮ್ಮ ತಮ್ಮ ತಮ್ಮ ಬಡಿತಾರ
ಯಪ್ಪ ಹೊಡಿಬ್ಯಾಡ ಬಡಿಬ್ಯಾಡ ಅಂತಾರೆ

ಯಾರಪ್ಪಾ ಸಂಪಾದಿಸಿಟ್ಟುದ
ಮೂಗು ನಿನ್ನ ಮುಂದುರ
ಹಂಗೆ ಮೊಗೆ ಕೊಯ್ತೆರ
ಕಿಮ್ಮಿ ಬೆಂಡಾಲೆ ಇದ್ದರೆ
ಕಿವಿ ಹಂಗೆ ಕೊಯ್ತಾನ
ಆಗ ಬಂದೆ ನೋಡ್ಯಾರ
ಕೊಳ್ಳಗೆ ತಾಳೆ ಇದ್ದುರೆ ಸೈ
ಬಲಗೈ ಹಾಕಿ ಹಂಗೆ ಹರಿತಾನ
ತಾವೆ ಕೊಳ್ಳಾಗ ತಾಳಿರ
ಜಾಡ್ಯ ಹರಿ ಹರಿತಾರ
ಯಾಪ್ಪೋ ಲೂಟಿ ಮಾಡುವರೆ ಬಂದರೆ
ಇದ್ದಕ್ಕಾಗಿ ಬಂದಾನ
ಊರೆಲ್ಲ ಹಾಳ ಮಾಡ್ತಾನ
ಊರಗಿದ್ದಾ ಮಂದಿ ಒಡ್ತಾನಾ
ಗಂಡು ಹೆಣ್ಣು ಬಿಡ್ಯಾರೆ

ಎಲ್ಲಾ ಊರು ಬಿಟ್ಟು ಓಡೋತರಪ್ಪ, ಆಗ ಓಡೋದು ಮ್ಯಾಲೆ ಏನಂತ ಬೋಡ್ರು ಹಾಕ್ತಾನೆ, ನೋಡಾಪ್ಪಾ, ಅಗಸಿಗೆ ಈ ಕವಲೇಶ ಕೋಟ ದಡೇಗಾವು ಸಿದೋಯಿ ಹೆಸ್ರುಮ್ಯಾಲೈತೆ,