ಅಂಬಿಗರು – ಮೀನು ಹಿಡಿದು ಜೀವನ ಸಾಗಿಸುವ ಜನವರ್ಗ

ಅಂಬ್ರೆಕಾಳು – ಅವರೆ ಕಾಯಿ, ಅವರೆ ಕಾಳು

ಅಂಗಿ – ಪುರುಸರು ತೊಡುವ ಮೇಲ್ವಸ್ತ್ರ

ಅಗಸರು – ಬಟ್ಟೆ ಸ್ವಚ್ಚಗೊಳಿಸುವ ಸಮುದಾಯ

ಅಚ್ಚೇರು – ಅರ್ಧಸೇರು

ಅರ್ಜೆಂಟ್ – ಶೀಘ್ರ

ಅಡವಿಚೆಂಚರ – ಬೆಂಚು ಬುಡಕಟ್ಟಿನವರು

ಅಧೋನಿ ಜಟ್ಟಿ – ಅದೋನಿಯ ಪೈಲ್ವಾನ

ಅರ್ಪಾವು – ಅರ್ಧಪಾವು

ಅಬದ್ದ – ಸುಳ್ಳು, ಕ್ರಮವಲ್ಲದ

ಅಭ್ಯಾಸ – ರೂಢಿ

ಅಲ್ಲಾರೆ – ದೇತ್ರಿ

ಅಳಿಯ – ರಕ್ತಸಂಬಂಧಿ, ಅಕ್ಕನ ಮಗ

ಆಚಂಪೆ – ಆಗಲ್ಲ

ಆದಿಶಕ್ತಿ – ಮೂಲಶಕ್ತಿ, ಶಕ್ತಿದೈವ

ಅನ್ಸ್ಯಾನ – ಮುಟ್ಟಿಸ್ಯಾನ, ತಗಲಿಸಿದಾನ

ಆನೆಗೊಂದಿಮಾರಮ್ಮ – ಆನೆಗೊಂದಿಯ ಶಕ್ತಿದೈವ ಮಾರಮ್ಮ

ಆಯುಧ – ಮಾರಕಾಸ್ತ್ರ

ಆರಕಟ್ಟಿಗರು – ಪ್ರಾಣಿಗಳನ್ನು ಕೊಲ್ಲುವ ಜನವರ್ಗ

ಆಲ – ಆಲದ ಮರ

ಆಸರ – ದೃಷ್ಟಿ

ಆಹ ಎತ್ತುಗಳು  – ವ್ಯವಸಾಯಕ್ಕೆ ಬಳಸುವ ಎತ್ತುಗಳು

ಇಟ್ಟಗ್ಲೋರು – ಬೇಡ ಸಮುದಾಯದ ಬಂಧುಬಳಗ

ಇರಕಟ್ಟು – ಇಕ್ಕಟ್ಟು

ಇರಿಶೆಟ್ಟಿ – ಆನೆಗೊಂದಿಯ ಶ್ರೀಮಂತ ವ್ಯಾಪಾರಿ

ಇಲಚಿ – ಇಲಿ

ಇಲಾಸ – ವಿಳಾಸ

ಇಷಾ – ವಿಷ

ಈ ಚಂಡಿ – ಈಗಲ್ಲ

ಈಡಲ್ಲಾ – ಜೋರಲ್ಲಾ

ಈಶ್ವರ – ಶಿವ

ಉಚ್ಚಿ – ಕಳಚಿ, ಬಿಚ್ಚು

ಉಣ್ಣ ನೀರಸಮುದ್ರ – ಸಿಹಿನೀರ ಸಮುದ್ರ

ಉಡ್ತೀನಿ – ಹುಟ್ಟುತ್ತೇನೆ

ಉದ್ಮಾನ – ಗೊಲ್ಲರಹಟ್ಟಿ, ಓಣಿ, ಊರ ಹೊರಗೆ

ಉಪಾಸ – ಉಪವಾಸ

ಉಪ್ಪಾರ – ಗೋಡೆ ಕಟ್ಟುವ, ಉಪ್ಪು ತಯಾರಿಸುವ ಜನವರ್ಗ

ಉರಪಟ – ಬೆಂಕಿ ಬೀಳುವುದು

ಉರ್ಲುಗಡ್ಡೆ – ಆಲೂಗಡ್ಡೆ

ಉಳ್ಳೊಗ – ಹುಳಿ

ಉದುನ ಗೋಲು – ಕೊಳಲು

ಊರು – ಗ್ರಾಮ

ಎಡೆ – ನೈವೇದ್ಯ

ಎರ‍್ರಿತಾತ – ಮುದಿಯಾತ, ತಾತ

ಎಲೆವನಂತ್ರ – ವಿಳ್ಯದೆಲೆಯ ತೋಟ

ಏಟ – ಹೊಡೆತ

ಏಷಾ – ವೇಷಾ

ಐಲು – ಹುಚ್ಚು

ಒಟ್ಟಿಗೆ – ಹೊಟ್ಟಿಗೆ, ಸಟ್ಟೆಗೆ, ಬಾಳೆಹಣ್ಣಿನ ಸಿಪ್ಪೆ

ಒಡ್ರು – ಕಲ್ಲು ಒಡೆಯುವ ಜನವರ್ಗ

ಒಣಕಿ – ಕಟ್ಟಿಗೆಯ ಉದ್ದನೆಯ ಕುಟ್ಟುವ ಸಾಧನ

ಒತ್ತಿಬಾಣ – ಬೊತ್ತಿದ್ರೆ ಬಾಣ ಪ್ರಯೋಗವಾಗುವುದು

ಒನಾಮ – ಓಂ ನಮಃ ಶಿವಾಯ, ಶಿಕ್ಷಣದ ಮೊದಲಾಯಿತು

ಒಪ್ಪಿಗಲ್ಲಾಗಿ – ಒಪ್ಪಿಗೆಯಾಗಿ, ಮೆಚ್ಚಿ

ಕಟ್ಟಿಸಿ – ಜಿಗಿದು

ಕಡ್ಗಿಬಾಕ್ಲ – ಕಬ್ಬಿಣದಿಂದ ತಯಾರಿಸಿದ ಬಾಗಿಲು

ಕತ್ತಿ ಮಹಲು – ಖಡ್ಗಗಳಿಂದ ತಯಾರಿಸಿದ ಮಹಲು

ಕಬ್ಬಿಣ ಚೇಳು – ಕಪ್ಪು ಚೇಳು

ಕದೆಬಿಳು – ಗೋಣು ಎತ್ತುವುದು

ಕರಣಗಿ – ಲೇಖನಿ

ಕರಕಂಚಿ – ಬೆಳಂಕಿ, ನೀರು ಕೋಳಿಯಂತದ್ದೂ

ಕಳಸೇರ – ಕ್ಷೌರಿಕರು

ಕಾಮದೇವತಿ – ದೇವಲೋಕದ ಕಾಮಧೇನು

ಕಾಲ್ಮರಿ – ಚಪ್ಪಲಿ, ಪಾದರಕ್ಷೆ

ಕಾವು – ಬೆಚ್ಚಗೆ, ಬಿಸಿ

ಕಾಸ್ಯಾಕಿ – ಕಟ್ಟಿಹಾಕಿ

ಕಾಸು – ಬಿಸಿ ಮಾಡು

ಕಾಸುಬಾಕು – ವಿಳ್ಯೆದೆಲೆಯ ವನ

ಕ್ವಾಮೆಟ್ರು – ವ್ಯಾಪಾರಿ ಸಮುದಾಯ

ಕಿದರ್ – ಎಲ್ಲಿಗೆ

ಕಿರಿಕಿ ಕಾಲ್ಮರಿ – ಕಿರ್ಕ್‌ ಎಂದು ಸದ್ದು ಮಾಡುವ ಠೇಕಿನ ಪಾದರಕ್ಷೆ

ಕುಂದಲ – ಮೊಲ

ಕುವಾಡಾದ್ತರ್ಯಾ – ನಾಟಕೀಯವಾಗಿ ಹೇಳುವುದು, ಸಲುಗೆಯಿಂದ ಹೇಳುವುದು

ಕೂಳು – ಊಟ

ಕೆರ್ಸೆ – ಕಾಳು ಸಂಗ್ರಹಿಸುವ ಸಾಧನ

ಕೇಜಿ – ಕಿಲೋಗ್ರಾಂ

ಕೊಂತೆ – ಊರು

ಕೊಡಬು – ಕಡಬು, ತಿನ್ನುವ ಪದಾರ್ಥ

ಕೊಡಪಾನ – ನೀರ ತುಂಬುವ ಬಿಂದಿಗೆ

ಕೊಬ್ಬು – ಕಬ್ಬು

ಖಂಡುಗ – ಇಪ್ಪತ್ತು

ಖಣಾ ಅಡ್ಡಾಲಿ – ಖಳಾ, ರಾಶಿಮಾಡುವ ಸಾಧನ

ಖರ್ಯಿ – ದವಸಧಾನ್ಯಗಳನ್ನು ಸಂಗ್ರಹಿಸುವ ಸಾಧನ

ಖರೆವಾ – ನಿಜತೀ

ಖೂಣ – ಪರಿಚಯ

ಗಂಗಾ ದೇವತಿ – ನೀರಿನ ದೈವ

ಗಂಗಾಜ್ಞೆ – ಗಂಗೆಯ ಆಣೆ, ನೀರಿನ ಪ್ರಮಾಣ

ಗಂಮಾನ – ಗುಳಿ, ಬಾಗಿಲ, ಹಿಂದಿರುವ ಬಾಗಿಲ ಮುಚ್ಚುವ ಬಲವಾದ ಕಟ್ಟಿಗೆ

ಗಡಾರ – ಹಾರೆ, ಗುಸ್ವಿ

ಗವಾಕ್ಷಿ – ಗಾಳಿ ಬೆಳಕು ಬರುವುದಕ್ಕಾಗಿ ಮಾಡಿರುವ ಕಿಂಡಿ

ಗಾಜಿನ ಬುಡ್ಡಿ – ಗಾಜಿನ ಸೋಸ, ಬಾಟಲಿ

ಗಾವುದ – ಐದು ಹರ್ದಾರಿ

ಗ್ಯಾಡಿ – ಗೋಡೆ

ಗ್ಯಾನ – ಜ್ಞಾನ

ಗುಂಡಾಳು – ಅಡುಗೆ ಮಾಡುವ ಪಾತ್ರೆ

ಗುಜ್ಲೋರು – ಬೇಡ ಬುಡಕಟ್ಟಿನ ಒಂದು ಬಳಿ

ಗುಡಿಮಿ – ಚಿಕ್ಕ

ಗುತ್ತ – ಕಂದಾಯ

ಗೋಸ – ಪಂಚೆಕಟ್ಟಿ

ಚಂಪೆ – ಗಲ್ಲ

ಚಂದಪ್ಪನ ಕುಂಕುಮ – ಚಂದ್ರನಂತೆ ದುಂಡಾಗಿ ಕುಂಕುಮ ಧರಿಸುವುದು

ಚಾರಕ್ಕಿ – ಒಂದು ಮುಷ್ಟಿಯಷ್ಟು ಅಕ್ಕಿ

ಚಿಪ್ಲೋರು – ಬೇಡ ಬುಡಕಟ್ಟಿನ ಒಂದೆ ಬಳಿ

ಛವ್ನ – ಶೀಘ್ರ

ಛೊಲ್ವಿ – ಚೆನ್ನಾಗಿ

ಛೋಡ – ಬಿಡು

ಜಗದಾಂಬ – ಜಗದಾಂಬೆ

ಜಗ್ಗಿ – ಹೆಚ್ಚು, ಬಹಳ

ಜಪ್ನ – ಅಂಗಿ

ಜಲ್ಲಿಪುಟ್ಟಿ – ಬಿದರಿನ ಬುಟ್ಟಿ

ಜಾಜ – ಗೋಡೆಗೆ ಬಳಿಯುವ ಕೆಂಪುಬಣ್ಣ

ಜಾಯ್ – ಗ್ಲಾಸ್, ಕಪ್, ಚಿಕ್ಕಲೋಟ

ಜ್ವಾಳ – ಜೋಳ

ಜೀವನ – ಜೀವನದ ಗಂಡ

ಜ್ಯೋತಿ – ದೀಪ

ಠೇಕು – ಠೀವಿ

ಡಂಗು – ಡಂಗುರ

ಡಿರಸು – ಉಡುಪು

ತಂಟೆಗೊಲ್ರು – ಜಗಳಗಂಟಿ ಗೊಲ್ರು

ತಖ್ತ – ಸಿಂಹಾಸನ ಪೇಠಿ

ತಟ್ಕ – ಸ್ವಲ್ಪ

ತಟ್ಟ – ಊಟದ ತಟ್ಟೆ

ತಬ್ತ – ಪೀಠ, ಆಸನ

ತಳವಾರ – ಗ್ರಾಮದ ಕಾವಲುಗಾರ

ತಾಬೇಲು – ಆಮೆ

ತಾಳನು ಹೊತ್ತಿಗೆ – ಪಂಚಾಂಗ

ತ್ಯಾಟ – ತೋಟ

ತುರುಕರು – ಮುಸ್ಲಿಮರು, ಇಸ್ಲಾಮರು

ತೆತ್ತೆ – ತತ್ತಿ ಮೊಟ್ಟೆ

ತೊಗೆ – ಉಣ್ಣುವ ಗಟ್ಟಿಬೇಳೆ

ತೊಲ – ಹತ್ತು ಗ್ರಾಂ

ತೌಡು – ಹೊಟ್ಟು

ತಿರುವಣ – ಪರಸ್ಪರ ಪಡೆಯುವುದು

ಥೇರು – ತೇರು

ದಡೆವು – ಭಾರ ಮಾಪನ

ದಾದಿ ಮಾವಳ ಹಣ್ಣು – ಮಾವಿನ ಹಣ್ಣಿನ ಜಾತಿಯಲೊಂದು ಹಣ್ಣು

ದ್ವಾಣ್ರ – ಧೋತ್ರ, ತೋಡುವ ವಸ್ತ್ರ

ದಿವ್ಯ – ತಿಥಿ

ದೇತಾಂದು – ದೈವ

ದೊಡ್ಡಬೊವಳಿ -ದೊಡ್ಡ ಮಾವಿನಕಾಯಿ

ನಕೋ – ಬೇಡ

ನಾಕ್ಕಿಳ್ಳಿ – ಚಿಕ್ಕಹಳ್ಳ

ನಾಗಿಶ್ವರ – ನಾಗದೇವ

ನಾಯಕರು – ಬೇಡ ಸಮುದಾಯ

ನಾರು ಹಣ್ಣು – ಹಣ್ಣುಗಳಲ್ಲೊಂದು

ನಾಶನ – ನಾಶ

ನಿವ್ವಾಳಿ – ಹೂವಿಂದ ಅಲಂಕೃತಗೊಂಡ ಶವದ ಆಸನ

ನಿಶದಬ್ಯೊಲೆ – ಮತ್ತಿನಲ್ಲಿ

ನೆರ್ತ್‌ – ಋತುಮತಿ

ನೆವಿಲು – ನವಿಲು

ನೈಯಾಪೈಸಾ – ಒಂದು ಪೈಸೆ

ಪಂಚಕಲ್ಯಾಣ ಕುದರಿ – ಐದು ಬಣ್ಣದ ಕುದುರೆ

ಪಕ್ಕ – ಎಲುಬು

ಪಟ್ಲೆ – ಕುರಿಮರಿ

ಪಡಗ – ಮಣ್ಣಿನ ದೊಡ್ಡಗಡಿಗೆ

ಪತ್ರಾಳ ಸುಳಿ – ಮುತ್ತಲ ಎಲೆಗಳಿಂದ ಮಾಡಿದ ಊಟದೆಲೆಯ ಆಕಾರದ ಸುಳಿ

ಪರಮಾತ್ಮ – ದೈವ

ಪಲ್ಲ – ಚೀಲ

ಪಾಂಟಗೆ – ಪಾವಟಿಗೆ

ಪಿಂಜಾರ – ಗೋಡೆ ಕಟ್ಟುವ ಸಮುದಾಯ

ಪುಗಸಟ್ಟಿ – ಪುಕ್ಕಟ್ಟೆ

ಪೊಡಗ – ಮಣ್ಣಿನ ಪಾತ್ರೆ

ಪುಟ್ಯ – ಸೌತೆಕಾಯಿ

ಪೊಡುಗ – ಮಣ್ಣಿನ ದೊಡ್ಡ ಪತ್ರೆ

ಪೌರ್ – ಶಕ್ತಿ

ಬಂಗಳ ದುಃಖ – ನವನೆಯ ದುಃಖ

ಬಕ್ಕಣದಾಗ – ಜೇಬಿನಲ್ಲಿ

ಬಗಡಿಮೊಲ – ಹಳ್ಳದ ದಡೆಯ ಮೇಲೆ

ಬರಂಗಿ – ಕುಣಿ, ಸುರಂಗ

ಬಸುವೇಶ್ವರ – ಕಾಮದೇವತಿಯ ವರ್ಣ, ಕಾಮದೇನುವಿನ ಕರು

ಬಾಯಿ ಸತ್ತಾಕಿ – ಮೆದು ಮಾತಾಡುವಳು, ಶಾಂತ ಸ್ವಭಾವದವಳು

ಬ್ಯಾಕಳ ಕಟ್ಟಿಗೆ – ಆಲದ ಕಟ್ಟಿಗೆ

ಬ್ಯಾಗಾರ – ಕುಣಿ ತೊಡುವ ಸಮುದಾಯ

ಬ್ಯಾಟಿ – ಬೇಟೆ

ಬ್ಯಾಮಣ್ರು – ಬ್ರಾಹ್ಮಣರು

ಬ್ಯಾಸಾಯ – ಬೇಸಾಯ, ಒಕ್ಕಲುತನ

ಬ್ಯಾಸಿಗೆ – ಬೇಸಿಗೆ ಕಾಲ

ಭಾಳ – ಬಹಳ, ಹೆಚ್ಚು

ಬಿಜ್ಲೋರು – ಬೇಡ ಸಮುದಾಯದ ಒಂದು ಬಳಿ

ಬಿದರೆರು – ಮೇದರು

ಬುಗ್ಡಿ – ದಡಿ, ದಂಡಿ

ಬುಡಿಗಿ – ಪ್ಯಾಂಟ್

ಬುಡಿಮಟ್ಟ – ಬಣವೆ

ಬುಡ್ತಿ – ಚಡ್ಡಿ, ನಿಕ್ಕರ್

ಭೂಯಾರ – ಗವಿ, ನೆಲದಲ್ಲಿನ ಗುಪ್ತಮಾರ್ಗ

ಬೆಳ್ಳಿಮಟ – ಬೆಳ್ಳಿ ಧಾತುವಿನಿಂದ ತಯಾರಿಸಲ್ಪಟ್ಟ ಮಟ

ಬೋಳು – ಕೂದಲಿಲ್ಲದ

ಮಂಜೂರಾದ – ಮುಂದಾದ

ಮಾವಳಿಗಿಡ – ಮಾವಿನ ಗಿಡ

ಮೀಟ್ರುವಾಯ್ – ಪ್ರಮೇರೋಗ

ಮೀನಲೋರು – ಬೇಡ ಸಮುದಾಯದ ಒಂದು ಬಳಿ

ಮುಂಜೂರಾದವನ – ಮುಂದಿದ್ದವನು

ಮುಕ್ಕಳ್ – ಮುಂದೆ, ಆರಂಭದ್ದು

ಮುಗುಳಿ – ಕುಂಡಿ, ಗುದ

ಮುನೀಶ್ವರ – ದೈವ

ಮೂರು ಅಂಕಣದಮನಿ – ಮೂರು ದಾರಿ ಎರಡು ಕಂಬ ಹೊಂದಿರುವ ಮನೆ

ಮೆಕಾ – ಮುಖ

ಮೆಲ್ಲುವು – ಮಲ್ಲಿಗೆ ಹೂ

ಮೈಂಡು – ಬುದ್ದಿ, ಮತಿ

ಮೋಡ್ಯೊರು – ಬೇಡ ಬಳಿ

ಮೋನ್ – ಮುಖ್ಯ

ರಣಬೇನ – ರಣರಂಗದಲ್ಲಿ ಬಾರಿಸುವ ವಾದ್ಯ

ರಸನ್ಹಾಡ – ಲೈಂಗಿಕ ಬೈಗಳು

ರಸ್ತಾ – ದಾರಿ

ರಾಗಳ ಕವಿಗಿ – ಆಲದ ಮರದ ಕಟ್ಟಿಗೆ

ರಾಗಿ ಕೊಡಪಾನ – ತಾಮ್ರದ ಕೊಡ

ವರಸು – ಹೊರಸು, ಮಂಚ

ವಾಚ್ – ಗಡಿಯಾರ

ವಾಯ್ಲೋರು – ಬೇಡಬಳಿ

ಶಂಬೀಸ – ಸಿಂಹಾಸನ

ಶಾರಗಲ – ಅಂಗೈಯಗಲ

ಸಟ್ಟಸರಿಹೊತ್ತು – ಮಧ್ಯರಾತ್ರಿ

ಸಲಾಂ – ನಮಸ್ಕಾರ

ಸಾಂಬಶಿವ – ದೈವ, ಶಿವ

ಸ್ಯಾಚಿ – ಗಲ್ಲ

ಸೀತಿಕ್ಕಿದ್ರೆ – ಚೂಂದ್ರೆ

ಸುಟ್ಟು ಸುರಮಂಡಲ – ಸುಟ್ಟು ಭಸ್ಮ ಮಾಡುವುದು

ಸೂಸುಗ – ದಂಡೆ ಹೆಣಗಳು

ಸೆರ್ಕೆ – ಬಾವಿಯಲ್ಲಿ ಹಿಡಿದುಕೊಳ್ಳಲು ಸಿಕ್ಕ ಸಂದಿಕಲ್ಲು

ಸೆಡೆ – ಕಸಕಡ್ಡಿ

ಸೇದ್ಹಗ್ಗ – ನೀರು ಸೇದುವ ಹಗ್ಗ

ಹಗೆ – ಭೂಗತ ಮನೆ

ಹರಿ – ರಂಜಣಗಿ, ನೀರು ತುಂಬುವ ಪಾತ್ರೆ

ಹತ್ತಿನದಿಂಡು – ಹತ್ತಿಯ ಹಾಸಿಗೆ

ಹಾಲದ ಕಡಗ – ಬಲಗೈಯಲ್ಲಿ ತೊಡುವ ಬೆಳ್ಳಿಯ ಅಥವಾ ಹಿತ್ತಾಳೆಯ ಆಭರಣ

ಹಾಳಗದ್ದಿ – ಹದ್ದು, ರಣಹದ್ದು

ಹಿತ್ತಾಳಿ ಮದ – ಹಿತ್ತಾಳಿ ಧಾತುವನಿಂದ ತಯಾರಿಸಿದ ಮಟ

ಹೆಣಸು – ಹೆಂಗಸು