೧. ಬಜೆರಾವ್ – ಮಹಾರಾಜ ಮಾರ‍್ವಾಡಿ ಶೇಠ್. ಕವಲೇಸುಕೋಟ, ಮವಲೇಸು ಕೋಟ, ದಡೆಗಾವು ಹಾಗೂ ಬಡೆಗಾವು ಊರುಗಳನ್ನು ಕಟ್ಟಿದವನು.

೨. ನೀಲಮ್ಮ – ಬಜೆರಾವ್‌ನ ಹೆಂಡತಿ

೩. ಬಜೇರಾವ್‌ನ ಮಕ್ಕಳು
೧. ನಾನಂದರಾವ್
೨. ಸಿದ್ದೋಜಿ
೩. ಖಂಡೇರಾವ್

೪. ದ್ವಾರಕಾಯಿ – ನಾನಂದರಾವ್‌ನ ಹೆಂಡತಿ, ಬಜೆರಾವ್‌ನ ಸೊಸೆ

೫. ನಾನಂದರಾವ್‌ನ ಮಕ್ಕಳು
೧. ಸೋಮೋಜಿ
೨. ಈರೋಜಿ
೩. ಪೀರೋಜಿ

೬. ನಾಯಕರ ಕೇರಿಯ ಕಳ್ರು ದತ್ಯೆ ಮಕ್ಕಳು
೧. ಸಂಚಿತ
೨. ಮಂಚಿಗ
೩. ಮಂತ್ರಾಳು ಮಹಾದೇವ
೪. ಅಶ್ರಾಪ

೭. ಮಾರ‍್ವಾಡಿ ಶೇಠರ ನಾಯಿಗಳು
೧. ಚಿಕ್ಕನಾಯಿ
೨. ಶೇರನಾಯಿ
೩. ಮಟ್ಟನಾಯಿ
೪. ಕರಡಿನಾಯಿ
೫. ರಾಮನಾಯಿ

೮. ಲಂಬಡ ಕೇರಿ ರೌಡಿಗಳು
೧. ರಾಮನಾಯ್ಕ
೨. ಭೀಮನಾಯ್ಕ
೩. ಲಚ್ಮಿನಾಯಕ

೯. ಒಂಟಿವೀರ್ ಸಾಬ್ – ಟಪಾಲಿನವನು (ಅಂಚೆಯವನು) ಸಿದ್ದೋಜಿಯು ಈತನಿಂದ ಪತ್ರಗಳನ್ನು ಲಿಂಗವಂತರಿಗೆ ಕಳುಹಿಸುತ್ತಾನೆ.

೧೦. ಇರಿಶೆಟ್ಟಿ – ಡಾವುಡಿಂಗಲು ಪಟ್ಟಣದ ಶ್ರೀಮಂತ ವ್ಯಾಪಾರಿ ಯಲ್ಲಪ್ಪ ಸಾಹುಕಾರನ ಅಳಿಯ

೧೧. ಗೊಲ್ಲರ ನಾರಾಣಮ್ಮ – ಗೊಲ್ಲರ ಶ್ರೀಮಂತ ಮುದಿ ಹೆಂಗಸು

೧೨. ತುಳೆರಾವ್ – ಸೋಮೋಜಿಯ ಮಗ

೧೩. ಅಂತುಬಾಯಿ – ಸೋಮೋಜಿಯ ಹೆಂಡತಿ, ಡಾವುಡಿಯಲ ಪಟ್ಟಣದ ಶ್ರೀಮಂತ ಶೇಠರ ಮೊದಲ ಮಗಳು

೧೪. ಬ್ಯಾಗರ ಸುಂಕ – ಸಿದ್ದೋಜಿಯ ಕುದುರೆಯನ್ನು ನೋಡಿಕೊಳ್ಳುವ ಸೇವಕ.

೧೫. ಗಿರಿಸಾಲು ಗಿರಿಮಾಜಿ – ಸಿದ್ದೋಜಿಯ ಮಂತ್ರಿ

೧೬. ಖಂಡೇರಾಯ ಸ್ವಾಮಿ – ಮಾರವಾಡಿ ಶೇಠರ ಮನೆದೇವ್ರು

೧೭. ಕೇಶಣ್ಣ – ಕರಣೆಕಲ್ಲಿನ ಅಗಸೆಯನ್ನು ಕಾಯುವ ಕಾವಲುಗಾರ

೧೮. ಬ್ಯಾಗರ ಯಂಕಣ್ಣ – ಪೀರೋಜಿಯ ಕುದುರೆಯನ್ನು ನೋಡಿಕೊಳ್ಳುವ ಸೇವಕ

೧೯. ಸಾಹುಕಾರ ಯಲ್ಲಪ್ಪ – ಕ್ವಾಮುಟ್ರು ಶೆಟ್ಟಿ, ಶ್ರೀಮಂತ ವ್ಯಾಪಾರಿ, ನಾನಂದರಾವ್ ತೀರಿದ ಬಳಿಕ ಅವನ ಚಿಕ್ಕ ಮಕ್ಕಳನ್ನು ಸಾಕಿದವನು

೨೦. ಶೇಠರು  ಕಟ್ಟಿದ ಪಟ್ಟಣಗಳು
೧. ಕವಲೇಸುಕೊಟ
೨. ಮವಲೇಸುಕೊಟ
೩. ದಡೆಗಾವು
೪. ಬಡೆಗಾವು

೨೧. ಶೇಠರ ಮೊಮ್ಮಕ್ಕಳು ಕಟ್ಟಿದ ಊರು
೧. ಕರಣಿಕಲ್ಲು

೨೨. ಕಾವ್ಯದಲ್ಲಿ ಬರುವ ಹೂಗಳು
೧. ಬೆಳೆಗನ್ನರಿ
೨. ಕೆಂಪುಗೆನ್ನರಿ
೩. ನಾಗಮ್ಮಲಿಗೆ