ಅಕ್ಕಿಬ್ಯಾಳೇನೆ ಕೊಟ್ಟಾರೆ
ಹುಳ್ಳು ನುಚ್ಚು ಕೊಟ್ಟಾರೆ
ಲಿಂಗವಂತರು
ಆಗ ಸೊಪ್ಪೆ ಕೊಟ್ಟಾರ
ಅವರೆ ಬಂದೆ ನೋಡಾರ
ಒಂದು ದಿನಾವಲ್ಲರಾ ಸಯ್
ಎಲ್ಡೆ ದಿನಾವಲ್ಲರಾ ಸಯ್
ನಾಕು ದಿನಾವಲ್ಲರಾ ಸಯ್
ಎಷ್ಟು ಜತೆ ನೋಡರಾ ಸಯ್
ಊರೆಲ್ಲ ಬಂದು ಹುಡುಗರಾ ಸಯ್
ಇವರು ತಲ್ಲಿ ಹಗಲು ರಾತ್ರಿ
ಹಗಲು ರಾತ್ರಿ ನೋಡಮ್ಮಾ
ಎಮ್ಮಾ ಕುದ್ರಿಗಳೆ ನೋಡೋದು
ನಾಯಿಗಳೆ ನೋಡೋರೆ

ಅಷ್ಟು ಜತೆ ಆಗಿಬಿಡ್ತಪಾ ಅವರದು, ಆಹಾ ಕುಂತೋರು ಹೊತ್ತಿಗೆ ಬೆಳತನಕ ಅವರತಾಗ ಕುಂದರೋದು, ಆಹಾ ಹಾಲು ಸಕ್ಕರೆ ಕಲಿಸಿಕೆಂಡು ಕಡೀತಾರ, ಅಹಾ ಅನ್ನ ಒಂದೆ ಇಲ್ಲಪಾ ಆಗ ಅಷ್ಟು ಜೀವದಲ್ಲಿ ಇದ್ದೋರಿಗೆತಿ ಏನ್ ಮಾಡಿದರು ಸಿದ್ದೋಗಿ ಏನು ಮಾಡಿದಾ ಅಣ್ಣಾನ ಮಕ್ಕಳು ಎಲ್ಲಿ ಸೇರ‍್ಯಾರ ಮರಕಲ್ಯಾಗ, ಆಹಾ ಈಗ ಕಳ್ಳರು ಕೊಲ್ಲಬಿಟ್ಟರು, ಆಹಾ ಕಳ್ಳರು ಪಟ್ಣ ಹಾಳು ಮಾಡಿಬಿಟ್ಟರು, ಆಹಾ ಅವರು ನಾಕು ಸಾವಿರ ಕೊಡಬೇಕು ಬಡ್ಡಿ ನಾಕು ಸಾವಿರ ಗಂಟು, ಆಹಾ ಅವರದ ಕಡೀತಾರ ಆ ರೊಕ್ಕ ಅವರೇ ಒಯ್ಯಿತಾರ ಆಹಾ,,

ಹಾಳ ಮಾಡ್ತಾರ ನನ್ನಪ್ಪೊ
ಎಂಗಾದ್ರೆ ಅವರನ ಕಡಸಾಲಿ
ಎಂಗಾದ್ರೆ ಅವರನ ಕೊಲ್ಲಸಾಲಿ

09__MS_346-KUH

ಯಾರು ಐದರಪಾ ಅವರನ ಕಡಸಾಲೆ ಏನಿಲ್ಲಾ ಲೇ ಒಂಟೆ ಮ್ಯಾಸನೆ ಬಾರ ಅಂದಾ ಆ ಏನಂದಾತಿ ಈಟಪಾಲೋನು ಪತ್ರ ಬರೆದು ಕೋಡ್ತೀನಿ, ಆಹಾ ನೀನು ಒಯ್ಯಿಬೇಕು ಅಂದಾ, ಆಹಾ ಎಲ್ಲಿಗೆ ಅಂದಾ ಮರಿಕಲ್ಲಿಗೆ ಲಿಂಗವಂತರಿಗೆ ಕೊಡು ಅಂದಾ, ಆಹಾ ನಾಲೋರು ಅಣ್ಣ ತಮ್ಮರಿಗೆ ಅಂದಾ ಸರೆ ಬಿಡು ಅಂತಾ ನೋಡಪಾ ಬಡ್ಡಿ ಕೊಟ್ಟಿಲ್ಲಾ ಗಂಟು ಕೊಟ್ಟಿಲ್ಲ ಇಲ್ಲಿಗೆ ಎಂಟು ವರುಷ ಆಗೈತೆ, ಆಹಾ ಈಗ ಎಂಟು ವರುಷಕೆ ನಾಕು ಸಾವಿರ ಬಡ್ಡಿ ಬಿದೈತೆ, ಆಹಾ ಈಗ ಬಡ್ಡಿ ಗಂಟು ಕಟ್ಟೀರು ಇಲ್ಲದಿದ್ದರೆ ನಿಮ್ಮ ಹೊಲ ಮನಿ ಯಾಲಾಮು ಆಕತೀವಿ ಅಂತಾ ಪತ್ರ ಬರೆದು ಆಗ ಟಪಾಲೋನಿಗೆ ಕೊಟ್ಟರು ಈಗ ಕುಲಕ್ಕಾಗಿ ಅಂತಾ ಅಂದರು ಅಂಬೊತ್ತಿಗೆ ಸರೆ ಅವರಿಗೇನು ದೊಡ್ಡದೇ ಈ ಪತ್ರ ಹೊಯ್ಯಾಕ ನನಗೇನು ಕೊಡತೀರಿ, ಆಹಾ ಅಂದಾ ಎಲೆ ಪತ್ರ ಹೊಯಾಕೆಲ್ಲಾ ನಿನಗೇನು ಕೊಡಬೇಕಲೇ ಒಂಟಿ ಮೇಯಿಸೋನು, ಆಹಾ ನನಗೆ ಒಂದು ಹತ್ತು ರೂಪಾಯಿ ಕೊಡು, ಆಹಾ ನಾನು ಕಾಫಿಕೊಡಾಕ ಸುಮ್ಮೆನೆ ಒಯ್ಯಿಲಾ ಕತ್ತೆ ಒಯ್ದಂಗ ಸರೆ ಹತ್ತು ರೂಪಾಯಿ ಕೊಡು, ಆಹಾ ನಾನು ಕಾಫಿಕೊಡಾಕ ಸುಮ್ಮನೆ ಒಯ್ಯಿಲಾ ಕತ್ತೆ ಒಯ್ದಂಗ ಸರೆ ಹತ್ತು ರೂಪಾಯಿ ಕೊಡ್ತೀನಿ ಗಂಟು ಹೊಯ್ತೀಯಾ ಅಂದರು ಏನು ಗಂಟು ಅಂದಾ ಲಿಂಗವಂತರಿಗೆ ಗಂಟು ಹೊಯಿದು ಕೊಡಬೇಕು ಅಂದಾ ಆಗ ಏನು ಮಾಡಿದಾ ಎಲ್ಡು ಸಾವಿರ ತಗಂಡಾ, ಆಹಾ ಗಂಟು ಕಟ್ಟಿದಾ ಗಂಟು ಕಟ್ಟೆದಾ ಏನಪಾ ಲಿಂಗವಂತರಾ ನಿಮ್ಮ ನಾಕು ಸಾವಿರ ಬಿಡ್ತೀನಿ ಈಗ ನಾಕು ಸಾವಿರ ನೀವೆ ತಿನ್ನಿರಿ, ಆಹಾ ಬಡ್ಡಿಗಂಟು ನೀವೆ ತಿನ್ನಿರಿ, ಅಹಾ ಇಗ ಎಲ್ಡು ಸಾವಿರ ಕೊಡ್ತೀನಿ ನಮ್ಮಣ್ಣನ ಮಕ್ಕಳು ಐದಾರ, ಆಹಾ ಎಷ್ಟೆ ಆಗಲಿ ನಂಬಬ್ಯಾಡರಿ ಹದಿನೈದು ದಿನಕ್ಕೆ ಬಡಿದೆನ್ನ ಹಾಕರಿ ಹದಿನೈದು ದಿನಕ್ಕೆ ಕಡಿದನ್ನ ಹಾಕರಿ, ಆಹಾ ಈ ಯಾವುದೊಂದು ಮಾತಿಗೆ ಹದಿನೈದು ದಿವಾಸ ಹೋದಮ್ಯಾಲೆ ನನಗೆ ತಿಳವರಿಕೆ ಮಾಡಬೇಕು ಈ ಗಂಟು ತಿಂದು ನಮ್ಮಣ್ಣನ ಮಕ್ಕಳ್ನ ಕಡೀರಿ ಅಂತಾ ಬರದು ಬಿಟ್ಟಾ, ಆಹಾ ಒಳಗಾ ಒಳಗ ಬರೆದು ಗಂಟು ಕಟ್ಟಿ ಆಗ ಗೋಣಿ ಚೀಲದಾಗ ಕೈಚೀಲದಾಗ ಟಪಾಲೋನಿಗೆ ಕೊಟ್ಟಾ, ಆಹಾ ಅಬ್ಬಾ ಏನಯ್ಯಾ ಸಿದ್ದೋಗಿ ಇದು ವಜಾ ಐತೆ ಅಂದಾ ಇಲ್ಲಪ್ಪಾ ವಜಾ ಇಲ್ಲ ಸುಮ್ಮನೆ ಹೊಯ್ದು ಅವರಿಗೆ ಕೊಡು ಮತ್ತೆ ಎಲ್ಲಿ ಬಿಚ್ಚಬ್ಯಾಡ ಅಂದಾ ಎಲ್ಲಿ ಬಿಚ್ಚಿಬ್ಯಾಡಂತ ಇಂಗ ಕೈಚಿಲದಾಗ ಇಟ್ಟಕಂಡು ಹೋಗ್ಯಾನ ಯಾರನ್ನ ದಾರ‍್ಯಾಗ ಕಳ್ಳರು ಬಂದರು ಈಗ ನನ್ನ ಬಡಿದರು ರೊಕ್ಕ ಹೊಯ್ಯಿದರು. ಇಲ್ಲ ನೀನೆ ತಂದೀಯಾ ಅಂದ್ರೆ ನಾನೇನು ಮಾಡಲಿ, ಆಹಾ ನೋಡಪಾ ನಿನ ಬಡಿದುವಾಗ ಅವರು ಒಯ್ದುವಾಗ ಅದೃಷ್ಟ ಇದ್ದರೆ ಇರತಾವ ಅದೃಷ್ಟ ಇಲ್ಲಂದರೆ ಅವರಿಗೆ ಮುಟ್ಟಂಗಿಲ್ಲ ಅಷ್ಟೆ ಅಲ್ಲಾ, ಆಹಾ ನಿನ್ನ ಜೀವ ಹೋದಾಗ ಇನ್ನ ಆ ರೊಕ್ಕ ಏನು ಮಾಡ್ತಿ, ಆಹಾ ರೊಕ್ಕಾನೆ ಕಳಿಸೋದು ಆಹಾ ಲಿಂಗವಂತರಿಗೆ ಸಾಲ ಕೇಳ್ಯಾರ ಇನ್ನೊಬ್ಬರು ಮದಿವಿ ಐತಂತೆ ಅದ್ಕೆ ಕೇಳ್ಯಾರ ಕಳಸ್ತೀನಿ ಸರೆ ಬಿಡಯ್ಯ ಮತ್ತೆ ನನಗೆ ಇನ್ನೊಂದು ಹತ್ತುಕೊಡು ಈ ಗಂಟು ಹೊಯಿತೀನಿ ಅಂದಾ, ಆಹಾ ಅರೆ ಹತ್ತುಕೊಟ್ಟಿನಲ್ಲಾ ಇಲ್ಲಾ ಮತ್ತ ಈಸಲು ಹೆಂಡ ಕುಡಿದು ಹೋತೀನಿ ಅಂದಾ, ಆಹಾ ಅರೆ ಹತ್ತುಕೊಟ್ಟಿನಲ್ಲಾ ಇಲ್ಲಾ ಮತ್ತ ಈಸಲು ಹೆಂಡ ಕುಡಿದು ಹೋತೀನಿ, ಆಹಾ ಸುಮ್ಮನೆ ಹೋಗಲಾ ದಾರಿ ನಡದು, ಆಹಾ ಎಲಿಗೆನ್ನಾ ನಡೀಬೇಕು ನಾ, ಆಹಾ ಸರೆ ಬಿಡು ಅಂತಾ ಇನ್ನಾ ಹತ್ತು ಕೊಟ್ಟಾ, ಆಹಾ ಲೇ ನನ ಮನಿಮುಂಡೆ ಒಂಟಿ ಐತೆ ಒಂಟೆ ಜೋಪಾನ ಮಾಡೀನಿ ಒಂಟೆ ಮ್ಯಾಲೆ ಕುಂತ್ಕಂಡು ಹೋಗಾಲೆ ಅಂದಾ, ಆಹಾ ಸರೆ ಬಿಡು ಅಂತಾ

ಒಂಟಿ ಮ್ಯಾಲೆ ಗಂಟು ಇಟಕಂಡು ಕುಂತ್ಕಂಡಾ
ಒಂಟಿಮ್ಯಾಲೆ ಅವನು ಬರ್ತಾನ
ಒಂಟಿಮ್ಯಾಲೆ ಬದಾವನೆ
ಟಪಾಲೋನೆ ಬರೋದೆ
ಹೊಳೆದಂಡಿಗೆ ಬಂದಾ
ಎಲ್ಲ ಈಸಲು ಹೆಂಡಾ ಬಂದು
ಆಗ ಕೊಡಗಳಿಗೆ ಹಾಕ್ತಾರ ಆಹಾ
ಲೇ ಈಡಿಗರ
ಇಪ್ಪತ್ತು ರೊಪಾಯಿ ಕೊಡ್ತೀನಿ
ಒಂದು ಕೊಡಾ ಇನ್ನ ಕೊಡಾರೆ
ನೀವೆ ಇನ್ನ ಹೆಂಡ ಆಕಾರಾರೆ
ಈಸಲು ಹೆಂಡ ನನಗೆ ಆಕಾರಾರೆ

ಬೇಸು ಸೀಯಗ ಇರೋದು, ಒಳ್ಳೆ ಈಸಲು ಹೆಂಡ ಆಕರಿ ಎಂದಾ, ಅಬಾ ಇಪ್ಪತ್ತು ರೊಪಾಯಿ ಕೊಡ್ತಾನಂತೆ, ಆಹಾ ಲೇ ದೊಡ್ಡೋನು ಬರದ ಮುಂಚ್ಯಾಗೆ ನಾವು ಮಾರಿಕೆಂಬಾನ, ಆಹಾ ಕೊಡಾ ಕೊಟ್ಟು ಬಿಡಾನ ತಂಬಿಗೆ ಇಪ್ಪತ್ತು ರೂಪಾಯಿ ಇದ್ರೆಲೆ ಆಗ ನಮ್ಮಿಗೆ ಬೀಡಿ ಬೆಂಕಿಪೆಟ್ಟಿಗೆ ಬರ‍್ತೈತೆ, ಆಹಾ ತಾರಯ್ಯ ಒಂಟಿಮೇಸಾತನವಲ್ಲಿಗೆ ಇಪ್ಪತ್ತು ರೂಪಾಯಿ ಇಸಕಂಡ್ರು, ಆಹಾ ಲೇ ಪಾಪ ಇಪ್ಪತ್ತು ರೂಪಾಯಿಗೆ ಒಂದು ಕೊಡ ಕೊಟ್ಟರೆ ಎಂಗ ಎಲ್ಡು ಕೊಡಾ ಕೊಡಾನ, ಆಹಾ ಲೇ ಪಾಪ ಇಪ್ಪತ್ತು ರೂಪಾಯಿಗೆ ಒಂದು ಕೊಡ ಕೊಟ್ಟರೆ ಎಂಗ ಎಲ್ಡು ಕೊಡಾ ಕೊಡಾನ, ಆಹಾ ಕುಡಿದೋನು ಕುಡಿಲಿ ಉಳಿದಿದ್ದೋಟು ಬಿಟ್ಟು ಹೋಗಲಿ, ಆಹಾ ಎಲ್ಡು ಮಣ್ಣು ಅರಿವೆಪಾ ಎಲ್ಡು ಕೊಡಾ ತುಂಬಾ ಇಟ್ಟರು ಮುಂದೆ ಮಣ್ಣರವಿ, ಆಹಾ ಇವನು ಎನು ಮಾಡಿದಾ ಒಂಟಿ ಮ್ಯಾಲೆ ಅಂಗೆ ಐತೆ ಗಂಟು ರೊಕ್ಕಾ, ಆಹಾ ಆಗ ಈಸಲು ಗಿಡಕಾ ಕಟ್ಟಿ ಹಾಕಿದಾ ಆಹಾ ಆಗ ಕುಂತ್ಕಂಡು ಕುತ್ಕಂಡು

ಒಂಟಿ ಮೇಯಿಸುವಾನಣ್ಣಾ
ಟಪಾಲುದೋನು ನೋಡಣ್ಣಾ
ಒಂದು ಕೊಡ ಇಡಕೊಂಡಾನ ಸಯ್
ಗಡಗಡ ಕುಡಿದಾನ
ಒಂದೆ ಕೊಡ ಇಡದಾನೆ
ಗಡ ಗಡ ಕುಡಿದನ
ಒಂದೆ ಕೊಡ ಇಡದಾನೆ
ಗಡ ಗಡ ಇನ್ನ ಕುಡಿದಾನ

ದೊಪ್ಪನಂತಾ ಇನ್ನ ಕೊಡ ಬೀಸಕಿದ, ಆಹಾ ಬರೆ ಕೊಡಾ ಬೀಸಾಕಿದ ಆಹಾ ಒಂದು ಕೊಡಾ ಈಸಲು ಹೆಂಡ ಕುಡಿದಪಾ, ಆಹಾ ಕುಡಿದು ಮ್ಯಾಲೆ ಇನ್ನೊಂದು ಕೊಡಾ ಇಟ್ಟಾರೆ ಇಪ್ಪತ್ತು ರೂಪಾಯಿ ಕೊಟ್ಟೀನಿ, ಆಹಾ ಆಗಲಿ ಕೊಡಾ ಯಾಕ ಬಿಟ್ಟು ಹೋಗಬೇಕು ಅದು ಎಂಗನ್ನ ಮಾಡಿ ಕುಡೀತಿನಿ ಸತ್ತನ್ನ ಹೋಗಲಿ ಇದ್ದನ್ನ ಇರಲಿ ಅಂದಾ ಆಹಾ,

ಆಗ ಇನ್ನಾ ಕೊಡಾ ಇಡದಾನೆ ಸಯ್
ಅಂಗಾ ಮಾಡಿ ಇಂಗಾ ಮಾಡೀರಾ ಸಯ್
ಒಂದೂವರೆ ಕೊಡಾ ಕುಡಿದಾನ
ಒಂದೂವರೆ ಕೊಡಾ ಕುಡಿದಾನ

ಇನ್ನಾ ನೋಡರೆ ಮೇಸೋನು ಕುಡಿದು ಮ್ಯಾಲೆ ಏನು ಮಾಡಿಬಿಟ್ಟಾ, ಕೆಳಗೆ ಕಣ್ಣು ಕೆಳಗೆ ನೋಡತಾನ ಮ್ಯಾಕ ಕಣ್ಣ ಮ್ಯಾಕ ನೋಡತಾವ ಆಹಾ,

ಬಕ್ಕ ಬಾರ್ಲ ಬಿದ್ದು ಬಿಟ್ಟಾನೆ
ನಿಶಕಾ ತಡಿಯಲಾರದೆ
ಅಬ್ಬಾ ಸಾಯಿತೀನಿ ಅಂತಾನೆ
ಎಮ್ಮಾ ಸತ್ತೋತಿನಿ ಅಂತಾನೆ

ಹೆಂಡಾಕಿದೋರು ಈಡಿಗರು ನೋಡಿದರು ಅಲೆಲೆಲೆಲೆ ಇವನಿಗೇನು ಬಂದೈತಲೆ ಇಪ್ಪತ್ತು ರೂಪಾಯಿ ಹಾಳಾಗಿ ಹೋಗಾ ನಾವು ತಗಂಡೀವಿ ಎಲ್ಡು ಕೊಡಪಾನ ಕೊಟ್ಟೀವಿ ಒಂದೂವರೆ ಕೊಡ ಕುಡಿದು ಅವ್ನು ಹೊಟ್ಟೆ ಹೊಡೆದು ಹೋಗಲಿ ನಮ್ಮ ದೊಡ್ಡೋನು ಬಂದ್ರೆ ಏನಂತಾನೆ ಲೇ ಕಳ್ಳತಾನ ಮಾಡಿ ಕಂಡು ರೊಕ್ಕತಗಂಡು ಎಷ್ಟು ಮಾರಿಕೊಂಡೀರೊ ಅಂತಾ ಐವತ್ತು ರೂಪಾಯಿ ಸಂಬಳ ಹೋತೈತೆ, ಆಹಾ ದಿನಾ ಐವತ್ತು ರೂಪಾಯಿ ಆಹಾ ಹಾಳಾಗಿ ಹೋತೈತೆ ಎಂಗ ಮಾಡಬೇಕಲೆ ಏನಿಲ್ಲಾ ಇವನು ಇಡಕಂಡು ಹೋಗಿ ಬಿಟ್ಟು ಬರಬೇಕು ಏನೋ ಗಂಟು ಪಂಟು ಇದ್ದಂಗೆ ಐತೆ, ಆಹಾ ಲೇ ತಗಂಡರೆ ಏನಂತಾನ, ಆಹಾ ಯಾವನನ ತಗಂಡು ಹೋದ ಅಂತಾನ ಏನಂತಾನ ಲೇ ಈಡಿಗರೆ ನೀವೆ ಮೋಸ ಮಾಡಿರಿ ಹೆಂಡಾ ಆಕಿ ನೀವೆ ತಗಂಡೀರಿ ಅಂತಾನ, ಆಹಾ ಇಲ್ಲದ್ದು ಕೇಸು ಯಾಕಪಾ, ಆಹಾ ನಾವು ಹಾಕಿದ್ದು ಬುದ್ದಿಕಮ್ಮಿ ಒಂಟೀನಾ ಇಡಕಂಡು ಅವನು ದಬ್ಬಿಕೆಂತಾ ದಬ್ಬಿಕೆಂತಾ ಹೋಗಿ ಕಳ್ಳಿ ಓಣ್ಯಾಗ ಬಿಟ್ಟು ಬರಾನ, ಆಹಾ ಮರಕಲ್ಲಿಗೆ ಅವನು ಊರಾಗನ ಹೋಗಲಿ ಕಳ್ಳಿ ಓಣ್ಯಾಗನ ಒದ್ಯಾಡಲಿ ಸರೆ ಬಿಡು ಅಂತಾ ಒಂಟೇನಾ ಒಬ್ಬರು ಇಡಕಂಡರು, ಆಹಾ ಒಬ್ಬನು ಅವನ ಕೈ ಇಡಕಂಡು,

ದೊಬ್ಬಿಕೆಂತಾ ದೊಬ್ಬಿಕೆಂತಾನೆ ಬಂದಾರೆ
ದೊಪ್ಪನೆ ಬಿದ್ದು ಎದ್ದೇಳು ತಾನೆ
ಅಲ್ಲಾ ಅಂತಾನೆ ಬಿಡತಾನೆ
ಆಗ ಕರಕಂಡು ಬಂದಾನೆ
ಒಂಟಿ ಮೇಯಿಸೋನ ಕರಕಂಡು ಬರ್ತಾರೆ

ಕಳ್ಳೀ ಓಣ್ಯಾಗ ಕರಕಂಡು ಬಂದರು ಊರಾಕ ಹೋದರೆ ಏನಂತಾರೆ ಲೇ ಈಡಿಗರ ನೀವು ಕಳ್ಳತಾನ ಹೆಂಡಾಕಿ ಏಸು ಮಂದೀನ ಮೋಸ ಮಾಡಬೇಕಂತಿದ್ದರೆ, ಆಹಾ ಅಂತಾ ನಮ್ಮನ ಬೈತಾರ ಹೆಣ್ಮಕ್ಕಳು ಗಣಮಕ್ಕಳು ಒಂಟೀನಾ ಇಡಕೊಟ್ಟರು ಏನಪಾ ಒಂಟಿ ಮೇಯಿಸುದಾ ಟಪಾಲೋನೆ ಇಗೋ ಮರಿಕಲ್ಲು ಓಣಿ ಇದೇ ದಾರಿ ಇಡಕಂಡು ಹೋಗು, ಆಹಾ ಮ್ಯಾಗ ಹೋಗಬ್ಯಾಡ ಮತ್ತೆ ಗುಡ್ಡಕ ಹೋತೈತೆ ನೋಡು ಕಾರಂಡಿ ಗುಡ್ಡಕ ಹೋತೈತೆ ನೋಡು ಇಂಗೆ ಹೋಗು, ಆಹಾ ಯಾ ಹೋತೀನಿ ತಾರೋ ಈಡಿಗರೆ ಅಂದಾ ಒಂಟೀನ ಇಡಕೊಟ್ಟರು,

ಆಗ ಕಣ್ಣು ಕಾಣುವಲ್ದಣ್ಣೊ
ಮುಚ್ಚಿಕಂತಾ ತೆರಿಕೆಂತಾನ
ಮದ್ಯಾನಕ ಇನ್ನಾ ಬರಾದು ಟೀಮು ಆತು
ಅಲ್ಲೆ ಒದ್ದಾಡತಾನ ಆಹಾ
ದಾರಿ ದಾರಿಯಾ
ಅಡವಿಗೆ ಬಂದೆ ಬಿಡ್ತಾನ
ಊರು ದಾರಿ ಬಿಟ್ಟಾನ ಗುಡ್ಡಾಕ ಹೋಗೊ ದಾರಿ ಇಡದಾನ
ಆಗ ಕೊಲ್ಲು ತಟ್ಟಿ ದಬ್ಬನೆ ಬಿಳ್ತಾನ
ಗಿಡ ತಟ್ಟಿ ಗಿಡಕ ಬಿಳ್ತಾನೆ
ಮೆಣಕಾಲು ಟಕ್ ಟಕ್ ಹಾಕ್ಯಾನ
ಮೊಣಕಾಲು ಒಡದೆ ಹೋಗ್ಯಾವ

ಮೈತುಂಬ ರಕ್ತಾನೆ ಮದ್ಯಾನಕ ಹನ್ನೆರಡು ಗಂಟೆಗೆ ಆಗ ನಿಶಾ ಇಳಿದು ಹೋಯಿತಪಾ ಅರ್ಧ ಬೇಸು ತಿಳಿವರಿಕೆ ಆಯಿತಪಾ ಅಲೆಲೆಲೆಲೆ ಇತ್ತಾಗ ಐತೆ ಮರಕಲ್ಲು ನಾನು ನೋಡಿದರೆ ಇತ್ಯಾಗ ಬಂದೀನಿ ಬೆಟ್ಟದ ಗುಡ್ಡಾಕ, ಆಹಾ ಕಾರಂಡಿ ಗುಡ್ಡಾಕ ಬಂದೀನಿ ಏ ಅತ್ತಾಗ ಐತೆ ಪಾಪ ಊರು ಅಂತಾ ಆಗ ಒಂಟೀನ ಇಡಕಂಡು ಲಿಂಗವಂತರ ತಲ್ಲಿಗೆ ಬರ್ತಾನಪಾ, ಆಹಾ ಬಂದರೆ ತಾವು ಕುಲಕ್ಕೆ ಏನು ಮಾಡಿದರು, ಆಹಾ ಅವರು ಲಿಂಗಾಯತರು ಮದ್ಯಾಹ್ನದಾಗ ಊಟ, ಆಹಾ, ಇವರು ಮುಂಜಾಲೆ ಸಾನ ಮಾಡಿಕೊಂಡು ನಾಯಿಗಳು ಮೈ ತೊಳದು ಅಡಿಗೆ ಮಾಡಿಕೊಂಡು ನಾಯಿಗಳು ಬಿಟ್ಟು ತಾವು ಊಟ ಮಾಡಿ ಕಟ್ಯಾಕಿ ನಾಯಿಗಳು ಕಟ್ಯಾಕಿ, ಆಹಾ ಇವರು ಬರ್ತಾರಪಾ ರಾಜರ ಕಛೇರಿಗೆ ನೋಡಪಾ ಎತ್ತಾಗನ್ನ ಇತ್ತಾಗ ಪತ್ರ ಬಂದರೆ ಓದಬೇಕಂತಾ, ಆಹಾ ಆ ಪತ್ರ ನಮ್ಮಿಗೆ ತೋರಸಬೇಕು ಅಂತಾ ಅವರು ಹೇಳಿದರು ಊಟಕ್ಕೆ ಹೋತೀವಂತ ಹೋದರು, ಆಹಾ ಇವನು ಒಂಟೀ ಮೇಯಿಸೋನು ಬಂದಾ ಎಲ್ಡು ಕಣೀಲೆ ತರದು ನೋಡಿದಾ, ಆಹಾ ಕೆಂಪಗ ಐದಾರೆ ಹುಡುಗರು ಮಾರವಾಡಿ ಶೇಠಿದೋರು ಇವರೆಲ್ಲಾ ಲಿಂಗಾಯತರು ಅಂತಾ ತಿಳಕಂಡಾನ ಆಹಾ,

ಸಲಾಮರಯ್ಯ ಲಿಂಗಾಯತರೆ
ಲಿಂಗವಂತರೆ ನಿಮಗೆ ಶರಣಯ್ಯಾ
ಸಿದ್ದೋಗಿ ಒಂದೆ ನೋಡಯ್ಯಾ ಸಯ್
ಗಂಟು ಕೊಟ್ಟಿ ಕಳಿಸ್ಯಾನ ಸಯ್
ಪತ್ರಕೊಟ್ಟಿ ಕಳಿಸ್ಯಾನ ಸಯ್
ಪತ್ರಕೊಟ್ಟು ಕಳಿಸ್ಯಾನ
ತಗೋರಿ ನೀವು ಅಂದಾನ
ಪತ್ರಕೊಟ್ಟು ಕಳಿಸ್ಯಾನ
ತಗೋರಯ್ಯ ನೀವುರೆ

ಏನಪಾ ಸಿದ್ದೋಗಿ ಗಂಟು ಪತ್ರಕೊಟ್ಟು ಕಳಸ್ಯಾನ ತಗೋರಿ ಲಿಂಗವಂತರೆ ಅಂದುಬಿಟ್ಟಪಾ, ಆಹಾ ಲಿಂಗಾಯತರು ಅಂತಾ ತಿಳಕಂಡಾನ, ಆಹಾ ಅವರು ಕೊಟ್ಟಿಲ್ಲ ಈಸಲು ಗಿಡ ಕೊಟೈತೆ ಹೆಂಡ ಕೊಟೈತೆ, ಆಹಾ ಅವನು ತಿಳವರಿಕೆ ಇದ್ದರೆ ಕೊಡಾನಲ್ಲ, ಆಹಾ ಇವರೆಲ್ಲ ಲಿಂಗಯಾಯತರಂತಾ ತಿಳಕಂಡಾನ, ಆಹಾ ಎಪ್ಪಾ ಈಗ ಇನ್ನ ಟಪಾಲೋನೆ ಈಗ ಗಂಟು ಕೊಟ್ಟ ಈಗ ಪತ್ರಕೊಟ್ಟ, ಆಹಾ ಪತ್ರ ತಗಂಟು ಫಟ ಫಟ ಓದಿಕೆಂಡರೆ ನೋಡಪಾ ನಮ್ಮಣ್ಣನ ಮಕ್ಕಳ್ನ ನಾಲೋರು ಲಿಂಗಾಯತರೆ ಹದಿನೈದು ದಿನಾಕೆ ಕಡದಾನ ಹಾಕರಿ ಬಡದಾನ ಹಾಕರಿ, ಆಹಾ ಹದಿನೈದು ದಿನಾ ಹೋದಮ್ಯಾಲೆ ಯಾವುದೊಂದು ಮಾತು ತಿಳಿವರಿಕೆ ಮಾಡಬೇಕು ನನಗೆ, ಆಹಾ ಇಗೋ ನಾಕು ಸಾವಿರ ಬಡ್ಡಿ ಗಂಟು ನೀವೆ ತಿನ್ನಿರಿ ಆಹಾ ಈಗ ಎಲ್ಡು ಸಾವರಿ ತಗಂಡು ನಮ್ಮಣ್ಣನ ಮಕ್ಕಳು, ಆಹಾ ಎಂಗನ್ನ ಮಾಡಿ ನೀವು ಕೊಲ್ಲುಬೇಕು ಅಂತಾ ಬರದಾನಪಾ, ಆಹಾ ನೋಡಿದಾ ನಮ್ಮ ಕಕ್ಕಗೇನು ಪಾಪ ಮಾಡಿದ್ವೆ, ಆಹಾ ಟಪಾಲಾಗ ಕೊಟ್ಟು ಕಳಿಸ್ಯಾನೆ ಪಾಪ ಇವನೆ ಪುಣ್ಯಾತ್ಮ ಆಗ ನಿಶಾ ಮ್ಯಾಲೆ ಬಂದಾನ ನಮ್ಮಿಗೆ ಕೊಟ್ಟಾನ ಲಿಂಗಾಯತರಿಗೆ ಕೊಟ್ಟಿದ್ದರೆ, ಆಹಾ ನಮ್ಮಿಗೆ ಕೊಟ್ಟಿದ್ದಕ್ಕೆ ಒಳ್ಳೇದು ಆಯಿತು, ಆಹಾ ನಾವು ಓದಿಕೆಂಡೀವಿ ಗಂಟು ಬಿಚ್ಚಿದರೆ ಎಲ್ಡು ಸಾವಿರ ಅಲೆಲೆಲೆ ಆ ಕಾಲಕ್ಕೆ ನಮ್ಮಪ್ಪ ಆಸ್ತಿ ಹೊಯ್ದಿದ್ದಕ್ಕೆ ಈಗ ನಮ್ಮಪ್ಪ ಆಸ್ತಿ ಕಳಿಸ್ಯಾನ, ಆಹಾ ಅಂತಾ ಎಲ್ಡು ಸಾವಿರ ಅಲೆಲೆಲೆ ಆ ಕಾಲಕ್ಕೆ ನಮ್ಮಪ್ಪ ಆಸ್ತಿ ಹೊಯ್ದಿದ್ದಕ್ಕೆ ಈಗ ನಮ್ಮಪ್ಪ ಆಸ್ತಿ ಕಳಿಸ್ಯಾನ, ಆಹಾ ಅಂತಾ ಎಲ್ಡು ಸಾವಿರ ತಗಂಡೋಗಿ ಮನ್ಯಾಗ ಬಚ್ಚಿಟಾರು, ಆಹಾ ಪತ್ರ ತಗಂಡೋಗಿ ಮನ್ಯಾಗ ಇಟ್ಟಕಂಡರು, ಆಹಾ ಇಟ್ಕಂಡು ಏನಂತಾ ಬರದರು ಕೇಳಪಾ ನಿನಗೆನ್ನ ಮುಂಚ್ಯಾಗ ಸಿದ್ದೋಗಿ ನಿಮ್ಮಣ್ಣನ ಮಕ್ಕಳು ನಾವು ಕಡೀಬೇಕಂತಾ ತಯಾರು ಮಾಡೀವಿ, ಆಹಾ ಈಗ ನೀನು ಐದು ದಿವ್ಸಾ ಅಲ್ಲಾ ಹದಿನೈದು ದಿವ್ಸಾ ಅಂದೀಯಾ ನಾವೇ ಐದೆ ದಿವ್ಸಾಕೆ ತಿಳಿವರಿಕೆ ಮಾಡತೀವಿ, ಆಹಾ ಐದು ದಿವ್ಸಾ ಒದ್ದಾಡತೀವಿ ಈಗ ಸಿಕ್ಕರೆ ಕಡೀತೀವಿ ಸಿಗಲಿದ್ದರೆ ಯಾವುದೊ ಒಂದು ಮಾತು ತಿಳಿವರಿಕೆ ಮಾಡತೀವಿ, ಆಹಾ ನಿನಗೆ ಎಲ್ಡು ಸಾವಿರ ತಂತೀವಿ ಈಗ ನಾಕು ಸಾವಿರ ತಿಂದೀವಿ ಅಂತಾ ಪತ್ರ ಬರೆದರು ಟಪಾಲೋನಿಗೆ ಕೊಟ್ಟರು ಏನ್ರಿ ಗಂಟು ತಂಆ ಲಿಂಗಾಯತರೆ ನನಗೇನನ ಹತ್ತು ರೂಪಾಯಿ ಕೊಡರಿ ಏ ಹತ್ತು ಯಾಕ ಕೇಳತಿ ಇಪ್ಪತ್ತು ತಗಂಡು ಹೋಗ ಅಂತಾ ಕೊಟ್ಟಾ ಎಪ್ಪಾ ಲಿಂಗಾಯತರೆ,

ತಣ್ಣಾಗ ಉದ್ದಾರ ಆಗರೆ
ಅಲ್ಲಿ ಇಪ್ಪತ್ತು ಕಳದೆ ಬಿಟ್ಟಪ್ಪಾ
ಇಲ್ಲಿ ಇಪ್ಪತ್ತು ಅಂಗೆ ಬಂದೈತೊ
ಎಪ್ಪಾ ತಣ್ಣಾಗ ಉದ್ದಾರ ಆಗಾರೆ
ಆಗ ಬಂದೆ ವಣ್ಣಾಯ್ಯ

ಅಂತಾ ಅಂಬೊತ್ತಿಗೆ ತಣ್ಣಾಗ ಉದ್ದಾರ ಆಗರಿ ಅಂದಾ ಅಷ್ಟೆ ಆಗಲಪ್ಪಾ, ಆಹಾ ಟಪಾಲೋನೆ ತಣ್ಣಾಗ ಉದ್ದಾರ ಆತೀವಪಾ ಅಂದಾ ಅಂದರೆ ಒಂಟೆ ಮೇಲೆ ಸಾಬು ಬಂದಾ ದಡೇಗಾವ್‌ಗೆ ಸಿದ್ದೋಗಿ ಐದೀಯಾ ಏನಪಾ ಐದೀನಪಾ ಟಪಾಲೋನೆ ಐದೀನಪಾ ಟಪಾಲೋನೆ ಈಗ ಲಿಂಗವಂತರು ಗಂಟು ತಗಂಡು ಪತ್ರ ಬರೆದು ಕೊಟ್ಟಾರ ಓದಿಕ್ಯಾ ಅಂದಾ ನನಗೆನ್ನ ಮುಂಚ್ಯಾಗ ಅವರೆ ಪ್ರಯತ್ನ ಮಾಡ್ಯಾರಂತೆ ನಮ್ಮಣ್ಣನ ಮಕ್ಕಳು ಕೊಲ್ಲಾಕ, ಆಹಾ ಆಗ ನಾನು ಹದಿನೈದು ದಿನಾ ಅಂದೀನಿ ಅವರೆ ಆಕು ದಿಸಾ ಅಲ್ಲ ಐದು ದಿನಗೆಲ್ಲಾ ಕಡೆಗನ್ನ ಸಿಕ್ಕರೆ ಕಡೀತಾರಂತೆ ಇಲ್ಲದಿದ್ದರೆ ಬರೆದಾಕತಾರಂತೆ ಈ ರೊಕ್ಕಾನ ತಿಂತಾರಂತೆ,

ಅಣ್ಣಾ ಮಕ್ಕಳು ಸತ್ತಾರೆ

ಇವರಿಬ್ಬರು ಅಣ್ಣ ತಮ್ಮರು ನೊಡಿದರು ಅಣ್ಣಾ ನೋಡಿದ್ಯಾ ನಮ್ಮಪ್ಪಗೇನನ ಪಾಪ ಮಾಡೀವಾ ನಾವು, ಆಹಾ ಯಾರೋ ಊರಾಗ ಇದ್ದು ಪಾಪ ಎಷ್ಟು ಜತಿ ಇದ್ದರು ಇವರು ಆಹಾ ನಾಕು ದಿವ್ಸಾ ಅಣ್ಣನ ಮರೆತು ಅನ್ನ ಊಟ ಮಾಡಿ ಹೋಗಾನ ಅಂದರೆ ನಮ್ಮ ಅತ್ತಿಗೆ ಮೊಖ ನೋಡಿದಂಗೆಲ್ಲಾ ಬೈತಾಳಂತ ನಾವು ಅಂದುಕೊಂಡರೆ ನೋಡಿದಾ ರೊಕ್ಕ ಕೊಟ್ಟು ಕಳಿಸ್ಯಾನ, ಆಹಾ ಪತ್ರ ಬರೆದು ಕಳಿಸ್ಯಾನ ನಮ್ಮಿಗಿನ್ನ ಮುಂಚ್ಯಾಗ ಎಷ್ಟು ಕಳಿಸ್ಯಾನೊ ಆ ಲಿಂಗಾಯತರಿಗೆ, ಆಹಾ ತಮ್ಮಾ ಅವರು ನಾಲೋರು ಐದಾರ ನಾವು ಇಬ್ಬರೆ ಐದೀವಿ, ಆಹಾ ನಡೆಪಾ ಯಾವುದು ಬ್ಯಾಡ ಬೇವೂರಾಗ ಇರೋದು ಬ್ಯಾಡ ನಮ್ಮೂರಿಗೆ ನಾವು ಹೋಗಾನ ನಡಿ, ಆಹಾ ಅಣ್ಣಾ ಚೆರಿಗೆ ನೀರು ಅಂಜಿಕೆಂಡರೆ ಗಡಿಗೆ ನೀರು ಯಾವಾಗ ಹೋರುಬೇಕು, ಆಹಾ ಎಂತವನಣ್ಣಾ ಇತರು ಒಳ್ಳೆವರು ಅಂದರೆ ಲಿಂಗಾಯತರನ ಬಿಟ್ಟೆಗನ,

ಕೆಡುಗರು ಆದರೆ ಇವರನ ಕಡಿಕಂಡು ಹೋಗಾನ
ಜತೇಗಾರನ ನೋಡಣ್ಣಾ ಜೀವ ಇನ್ನ ಜತೇಗಾರರು

ತಮ್ಮಾ ಏನು ಮಾಡತೀಯಪ್ಪಾ ಅವರು ನಾಲೋರು ನಾವು ಇಬ್ಬರೆ ಅಂದಾ ಆಹಾ ಏನು ಪರವಾಲ್ಲಣ್ಣಾ ನೀನು ಜೀವಕ ನನ್ನ ಜೀವ ಐತೆ ಏನು ಹದರಬ್ಯಾಡ ಚರಿಗೆ ನೀರಿಗೆ ಅಂಜಿಕೊಂಡು ಹೋದರೆ ಎಂಗಾ, ಆಹಾ ಅಂತಾ ದಿನಾಲು ಹಾಲು ಆಗ ಸಕ್ಕರೆ ಕಾಯಿಸಿಕೊಂಡು ಬಂದುಕೊಟ್ಟರೆ ಲಿಂಗಾಯತರು ಇವರು ಕುಡಿತಿದ್ದರು ಮರವಾಡಿಶೇಠಿದೋರು ಆವೊತ್ತು ಬೇಸಿ ಊಟ ಮಾಡಿ ಹಾಲು ಸಕ್ಕರಿ ಕಲಿಸಿಕೆಂಡು ತಂದರು ಕುಡಿರೆಪ್ಪಾ ಮಾರವಾಡಿಶೇಠಿದೋರೆ ನೋಡ್ರಪಾ ನಮ್ಮದು ರಂಗನಾಯಕ ಸ್ವಾಮಿ ಈಗ ಖಂಡೇರಾಯ ಸ್ವಾಮಿ ಖಂಡೇರಾಯ ದೇವ್ರು ಆದರೆ ನಾವು ತಿಂಗಳು ಪೂಜೆ ಇರಲಿಕ್ಕೆ ಒಬ್ಬರು ಕೈಯಾಗ ಏನೇನು ತಿನ್ನಾದಿಲ್ಲ ಆಹಾ,

ನಾವು ಒಂದೊತ್ತಿಲೇ ಐದೇವಿ
ಹಾಲು ಕುಡಿಯಂಗಿಲ್ಲಪಾ
ಅನ್ನ ಉಂಬಂಗಿಲ್ಲಪಾ
ನೀರು ಕುಡಿಯಂಗಿಲ್ಲಪಾ

ಏನು ಪರವಿಲ್ಲಪಾ ಇದೇನು ಹಾಲು ಸಕ್ಕರೆ ಅದರಗೇನು ಬೇಧವಿಲ್ಲ, ಆಹಾ ಒಂದೊತ್ತಲಿದ್ದರೆ ಪರವಾಗಿಲ್ಲಪಾ ಅನ್ನ ಉಣಂತ ಹೇಳಿದರೆ ನೀವ್ಯಾ ಮಾಡಿ ಕೆಂತೀರಿ ಅಂದರೆ ಇಲ್ಲಪಾ ಅಣ್ಣಾ ನೋಡು ಬಾಳ ಉಶಾರು ಇರಬೇಕು ನಮ್ಮಣ್ಣಾ ಸಾಯುವಾಗ ಏನಂತ ಹೇಳಿಹೋಗಿದ್ದಾ ನೋಡಪಾ ಜತೆ ಜತೆ ಜೀವಕ ಜತೆ ಆತೈತೆ ಅಂದಾ, ಆಹಾ ಇವರೇಸು ಜತಿಗಾರರು,

ಇವರು ಜೀವ ಕಳಿಯೋರು ಐದಾರ
ನೋಡನಣ್ಣಾ ಇವರು ಲಿಂಗಾಯತರು
ನಮ್ಮ ಕಕ್ಕ ಇದ್ದಂಗ ಸಯ್
ಕೆಟ್ಟು ಗುಣ ಇದ್ದರೆ ಸಯ್
ಇವರೇ ಕಡಿದು ಹೋಗಾನ ಸಯ್
ಕೆಟ್ಟು ಗುಣ ಇಲ್ಲದಿದ್ದರೆ ಸಯ್

ನಾವು ಕೈಮುಗಿದು ಹೋಗಾನ ಕೆಟ್ಟ ಗುಣ ಇದ್ದರೆ ಕಡಕಂಡು ನಾವೇ ಹೋಗಾನ ಅಂತಾ ಏನು ಮಾಡಿದರು ಈಗ ಅವರು ಕುಡೀಲಿಲ್ಲ, ಆಹಾ ಇನ್ನಪಾ ನಾವು ಅಡಿಗೆ ಮಾಡಿಕೆಂಬಾಕ ಹೋತೀವಿ ಅಂದರೆ ಸರೆ ಹೋಗರಪಾ ಅಂದರು ಈ ಪತ್ರ ಬಂದಿದ್ದು ತೋರಿಸಲಿಲ್ಲಾ ರೊಕ್ಕ ಬಂದಿದ್ದು ಹೇಳಲಿಲ್ಲಾ, ಆಹಾ ಒಂದು ದಿನಾ ಎಲ್ಡು ದಿನಾ ಅಮ್ಮಾ ಐದೆ ದಿನಾ ಹೊಂಟೋಯಿತು ಆರು ದಿನಾ ನೋಡಿದರು ಪತ್ರ ಬಂದಿಲ್ಲೆ ಸತ್ತಿದ್ದು ತಿಳಿಲಿಲ್ಲ, ಆಹಾ ಆಗ ಜೀವ ಇದ್ದಿದ್ದು ತಿಳಿದಿಲ್ಲ ಲಿಂಗಾಯತರು ತಿಳಿವರಿಕೆ ಮಾಡ್ತಾರಂತೆ ಪತ್ರ ಕಳಿಸ್ತೀನಿಂದರು ಬರಲಿಲ್ಲ ಲೇ ಟಪಾಲೋನೆ ಬಾರಾ ಅಂದರು ಏನ್ರಿ ಇಲ್ಲ ಪತ್ರ ಹೊಯ್ಯದಿದ್ದೆ ಐದಿವ್ಯಾಕೆ ಯಾವೂರೋದು ತಿಳಿವರಿಕೆ ಮಾಡ್ತೇ ಅಂದರು ಮರಕಲ್ಲು ಲಿಂಗಾಯತರು ಆಗ ಕಳಿಸಲಿಲ್ಲ ಈಗ ಏಳು ದಿನಾ ಆಗೈತೆ, ಆಹಾ ನೀನು ಪತ್ರ ಬರೆದು ಕೊಡ್ತೀನಿ ಮತ್ತೆ ಒಯ್ಯಿ, ಆಹಾ ಕೇಳಪಾ ಎಷ್ಟಾದರೆ ನಮ್ಮಣ್ಣಾನ ಮಕ್ಕಳು ನಂಬಬಾರದು ಈಗ ನಿಮ್ಮ ಜೀವ ಐತೆ ಆಗ ಮಾಡಬ್ಯಾಡರಿ ಈಗ ನಮ್ಮಣ್ಣನ ಮಕ್ಕಳು ನಿಮ್ಮನ ಕಡೀತಾರ, ಆಹಾ ನಿಮ್ಮ ಹೆಂಡರು ಕರ್ಕಂಡು ಹೋತಾರ, ಆಹಾ ಆಗ ಅವರು ಕುತ್ತಿಗೆ ಕೊಯ್ಯೊ ಸೂಳೆ ಮಕ್ಕಳು ಈಗ ತಂದೀನಾ ಅಂತನನನ್ನೆ ಹಾಳು ಮಾಡಿಬಿಟ್ಟರು ಕಳ್ಳರು ಅಂತವರನ ಕೊಲ್ಲಿ ಬಿಟ್ಟರು, ಆಹಾ ಅಂತಾ ಆಗ ಎಷ್ಟಾಗಲೀ ನಾಕು ದಿವ್ಸಾಕೆ ಅವರನ ಕಡಿದೆ ಮಾಡಬೇಕು ಅಂತಾ ಬರೆದಾ ಬರೆದು ಆಗ ಕಳಿಸಿದಾ ನೋಡು ಎಲ್ಡು ಸಾವಿರ ತಂದೀರಿ ನಾಕು ಸಾವಿರ ತಿಂದೀರಿ ಆಗ ಕಡಿಲಿಲ್ಲ ಮಾಡಲಿಲ್ಲ, ಆಹಾ ಅಂತಾ ಬರೆದು ಬಿಟ್ಟರು ಟಪಾಲೋನಿಗೆ ಕೊಟ್ಟಾ ಆವೊತ್ತು ಏನು ಮಾಡಿರಾ ಬೇಗನ್ಯಾಗ ಬಂದಾ ಮೂರು ಗಂಟ್ಯಾಗ, ಆಹಾ ಲೇ ಈಡಿಗರ ಹೆಂಡ ಐತೇನಲೆ ಹಾಕರಲೇ ಹತ್ತು ರೂಪಾಯಿ ನಾಯಿ ಕೊಡ್ತೀನಿ ಏ ಬೇಗನ್ಯಾಗ ಎಂಗ ಬರ್ತಾಲೆ ಈವಾಗ ಕೊಡಗಳು ಕಟ್ಟೀವಿ ಮುಂಜಾಲೆ ಬಾ ಮುಂಜಾಲಿಗೆಲ್ಲಾ ರಾತ್ರೆಲ್ಲಾ ಇಳಕಂಡೈತೆ ಮುಂಜಾಲಾದ್ರೆ ಹಾಕತೀವಪಾ ಆ ಹೊತ್ತು ಮುಂಜಾಲೆ ಬಂದಿದ್ದೆ ಹಾಕಿದಿವಪಾ ಮಧ್ಯಾಹ್ನ ಬಂದರೆ ಏನೈತೆ ಕೊಡಗಳು ಕಡತಿದ್ದಿವಿ ನೋಡು, ಆಹಾ ಆ ಹೊತ್ತು ಬೇಸು ತಿಳಿವರಿಕೆ ಮ್ಯಾಲೆ ಬಂದು ಬಿಟ್ಟಾ ರಾಜ ಕಛೇರಿಗೆ ಬಂದು ನೋಡಿದಾ ಇವರು ಕರೆ ಕಲ್ಲೀಗ ಆವೊತ್ತು ಬೆಳ್ಳಗ ಇದ್ದರು, ಆಹಾ ಇಬ್ಬರೆ ಇದ್ದರು ಇವೊತ್ತು ನಾಲೋರಿ ಐದಾರ, ಆಹಾ ಅಲೆಲೆಲೆಲೆ ಆಗಂಟು ಪತ್ತಾಲಿಂಗಾಯಕರಿಗೆ ಕೊಟ್ಟಿಲ್ಲಾ ಮಾರವಾಡೋರಿಗೆ ಕೊಟ್ಟೀನಿ ನಾನು ಕೊಟ್ಟಿಲ್ಲ ಈಸಲು ಗಿಡ ಕೊಟ್ಟೈತೆ, ಆಹಾ ಮಾಸಮ್ಯಾಲೆ ಹೆಂಡ ಕೊಟೈತೆ, ಆಹಾ ಮತ್ತೆ ಎಂಗ ಮಾಡಬೇಕರಾ ಇವಾಗ ಪತ್ರ ತಂದೀನಿ ಟಪಾಲೋನು ಇತ್ತಾಳ ಪತ್ತಾ ಅತ್ತಾಗ ಕೊಡೋನು ಅಪ್ಪಾಳ ಪತ್ರ ಇತ್ತಾಗ ಕೊಡೋನು ಅತ್ತಾಗ ಮಾತು ಇತ್ತಾಗ ತಿರಿವಿ ಅಕ್ಯಬೇಕು ಇತ್ತಾಗ ಮಾತು ಅತ್ತಾಗ ತಿರಿವಿ ಅಕ್ಕಬೇಕು ಅಂತಾ ಏನಂದಾ ಪತ್ರ ತಗಂಡು ಸುಮ್ಮನೆ ಹೋಗಲಾ ಅಂತಾ ಸಲಾಮಯ್ಯ ಲಿಂಗವಂತೆ ಮರಕಲ್ಲೋರೆ ಏನ್ರಪಾ ಟಪಾಲೋನೆ ಈಗ ಪತ್ರಾಕೊಟ್ಟು ಕಳಿಸ್ಯಾನ ಓದಿಕೇರ‍್ರೀ ಅಂದಾ ಆಹಾ ಎಪ್ಪಾ ಫಟಫಟ ಓದೆಕೆಂಡಾ ನೋಡಪಾ ಎಲ್ಡು ಸಾವಿರ ತಿಂದಿರಿ ನಾಕು ಸಾವಿರ ತಿಂದಿರಿ ಈಗ ನನಕೈಲಿದ್ದ ಕೊಟ್ಟಿದ್ದು ತಿಂದರಿ ನನಕೈಲಿದ್ದ ಕೊಡಾವು ತಂದಿರಿ, ಆಹಾ ಅಣ್ಣಾನ ಮಕ್ಕಳು ಐದು ದಿವ್ಸಾಕೆ ಕಡೀತೀವಿ ಅಂದರಿ, ಆಹಾ ಆರು ದಿನದಲಿ ತಿಳಿವರಿಕೆ ಮಾಡತೀನಿ ಅಂದರಿ ಈಗ ಏನು ತಿಳಿವರಿಕೆ ಮಾಡಿಲ್ಲ, ಆಹಾ ಏಳು ದಿಸಾ ದಿನ ಪತ್ರ ಕಳಿಸೀನಿ ಅಣ್ಣಾ ಮಕ್ಕಳು ಎಷ್ಟಾಗಲೀ ಜತೆ ಇಡಿಬ್ಯಾಡರಿ, ಆಹಾ ಆಗ ನಿಮ್ಮನ ಕಡಿದು ನಿಮ್ಮ ಹೆಂಡರನ ಕರಕಂಡು ಹೋತಾರ, ಆಹಾ ಕಳ್ಳರಂತಾದು ಕಡದ್ರು ಈಗ ಎಷ್ಟಾಗಲೀ ನಾಕು ದಿನಕೆ ಕಡಿದು ಬೀಸಾಕಬೇಕು ಅವರನ ಇಡಗೊಡಸಬಾರದು ಇಲ್ಲದ್ದರೆ ಊರು ಬಿಡಿಸಿ ಓಡಿಸಬೇಕು, ಆಹಾ ಅಂತಾ ಪತ್ರ ಬಂತು ಇವರು ನೋಡಿಕೆಂಡರು ಈಗ ನಾಕು ಸಾವಿರ ತಿಂದಿಲ್ಲ, ಆಹಾ ಈಗ ಎಲ್ಡು ಸಾವಿರ ನಮ್ಮ ಕೈಗಾ ಕೊಟ್ಟಿಲ್ಲ ಇನ ಟಪಾಲೋನು ಮೊಖಾನೆ ನೋಡಿಲ್ಲ, ಆಹಾ ನನಗೆ ತಂದು ಕೊಟ್ಟಿಲ್ಲ ಇವೊತ್ತು ಒಂದು ಬಂದಿದ್ದು ನಮಗೆ ಕೊಟ್ಟಾನ ಟಪಾಲು, ಆಹಾ ನೋಡಪಾ ಇವೊತ್ತು ತಂದಿದ್ದು ನಮ್ಮಿಗೆ ಕೊಟ್ಟಾನ ಆದ್ರೆ ನಮ್ಮ ಕೈಲಿದ್ದ ರೊಕ್ಕ ಖರ್ಚು ಮಾಡಿ ಈ ನಿಮ್ಮ ಅಣ್ಣಾನ ಮಕ್ಕಳು ಕಡೀತೀವಿ ಕಡದ ಮ್ಯಾಲೆ ನಮಗೆ ಹತ್ತು ಸಾವಿರ ಕೊಡಬೇಕು ಅಂತಾ ಪತ್ರ ಬರೆದರು ಟಪಾಲೋನೆಗೆ ಕೊಟ್ಟು ಕಳಿಸಿದ್ರು, ಆಹಾ ಟಪಾಲೋನು ಓದಿಕೆಂಡರು ಆಹಾ ಎಂಗ ಮಾಡಬೇಕಪಾ ಈ ಲಿಂಗಾಯತರು ಏನಂತಾ ಬರೆದಾರ, ಆಹಾ ಬೇಸು ನನ್ನ ನೋಡೆ ನೋಡಿಲ್ಲಂತೆ, ಆಹಾ ಎಲ್ಡು ಸಾವಿರ ತಿಂದಿಲ್ಲಂತೆ ಇವಾಗ ಬಂದು ಪತ್ರ ಒಂದೆ ಮಟೈತಂತೆ ಈಗ ಹತ್ತು ಸಾವಿರ ಖರ್ಚು ಮಾಡಿ ಅವರೆ ಕಡೀತಾರಂತೆ, ಆಹಾ ಈಗ ಹತ್ತು ಸಾವಿರ ಇವರಿಗೆ ಕೊಡಬೇಕಂತೆ ಆಹಾ ಈ ಪತ್ರ ಓದಿಕಂಡಮ್ಯಾಲೆ ಏ ಮೊನ್ನೆ ಓಯ್ದಿದ್ದು ರೊಕ್ಕ ಪತ್ರ ಯಾರಿಗೆ ಕೊಟ್ಟಿಯಾ ಅಂತಾ ನನ್ನ ಬಡ್ತಾ ಬಡಿತಾನ, ಆಹಾ ಸಿದ್ದೋಗಿ ಎಂಗ ಮಾಡಬೇಕು ಏ ಅತ್ತಾಗ ಮಾತು ಇತ್ತಾಗ ತಿರುಮಣಿ ಮಾಡ್ತೀನಿ ಇತ್ತಾಗ ಮಾತು ಅತ್ತಾಗ ತಿರುಮಣಿ ಮಾಡ್ತೀನಿ ಪತ್ರ ಕಟ್ಟೋನು ಮಾತು ತಿರುವಿ ಅಕ್ಯಂಬಲಾರೇನು ಹೋಗಲಿ ಮಾರವಾಡೇರು ಆಗಿದ್ದು ಲಿಂಗಾಯತರು ಆಗಿದ್ದು ನನಗೇನು ಕಣ್ಣಿಲ್ಲಾ, ಆಹಾ ನಾನೇನು ಮುದಿಯವನಾ ಅವರೇ ಬೇಸು ಒದ್ದಾಡ್ಯಾರ ಮಾರವಾಡೇರು ಹುಡುಗರು ಸಿಗಲಿಲ್ಲ ಇವರು ಮ್ಯಾಲೆ ಬರಿಯಾನಂತಾ,

ನನ ಮ್ಯಾಲೆ ಬರೆದು ಬಿಟ್ಟಾರ
ಅಲ್ಲಿ ಓದಿಕೆಂಡಿದ್ದರೆ
ಅವರ ಮೊಖದ ಮ್ಯಾಲೆ ಬೀಸಾಕತಿದ್ದೆ

ಅಂಗೆ ಇನ್ನವರಕ್ಕೆಗೆ ಕೊಟ್ಟರೆ ಕೈಸೀಲದಾಗ ಇಟಕಂಡು ಬಂದೆ, ಆಹಾ ಅಂತಾ ಹೇಳತೀನಿ ಅಂತಾ ಹೋಗಿ ಬರ‍್ತೀನಪಾ ಲಿಂಗವಂತರೆ ಹೋಗಿ ಬಾರಪ್ಪಾ ಟಪಾಲೋನೆ,

ಆಗ ತಾವು ಇನ್ನ ಬರ್ತಾರ
ಇನ್ನವಾದರೆ ಊರಿಗೆ ಬರ್ತಾರ

ಸಲಾಮಯ್ಯ ಸಿದ್ದೋಗಿ, ಆಹಾ ಓದಿಕಾ ಅಂತಾ ಕೊಟ್ಟಾ ಲೇ ಟಪಾಲೋನೆ ಮೊನ್ನೆ ಹೊಯ್ದಿದ್ದು ರೊಕ್ಕ ಟಪಾಲು ಯಾರಿಗೆ ಕೊಟ್ಟಿಯಾ ಅಂದಾ, ಆಹಾ ಏ ನಿನಗೇನು ಹುಚ್ಚು ಇಡಿದೈತಾ ಐಲು ಬಂದೈತಾ ಆಹಾ ಯಾರಿಗೆ ಕೊಡ್ತೀನಿ ಲಿಂಗವಂತರಿಗೆ ಕೊಡ್ತೀನಿ ಇನ್ನಾರಿಗೆ ಕೊಡಬೇಕು ಅಂದಾ ಪತ್ತಾ ನೋಡಿಲ್ಲಂತೆ ಇನ್ನ ರೊಕ್ಕ ಕೊಟ್ಟಿಲ್ಲಂತೆ, ಆಹಾ ನಿನ್ನ ನೋಡೆ ನೋಡಿಲ್ಲಂತೆ ಆಹಾ ಇವೊತ್ತು ಇನ್ನ ಹೋಗಿದ್ದು ನೋಡ್ಯಾರಂತೆ ಇವೊತ್ತು ಪತ್ರ ಮುಟೈತಂತೆ, ಆಹಾ ಏ ಹೋಗಯ್ಯ ಅವರು ಒದ್ದಾಡ್ಯಾರ ಸಿಗಲಿಲ್ಲ ತಿಂದ ರೊಕ್ಕ ಹಿಂದಕ ಕೊಡ ಅಂತಾರಂತಾ ಇವನ ಮ್ಯಾಲೆನ್ನ ಬರಿಯಾನಂತಾ ನನಮ್ಯಾಲೆ ಬರದಾರ, ಆಹಾ ಅಲ್ಲೆ ನೋಡಿಕೆಂಡಿದ್ದರೆ ಅವನು ತೊಖದ ಮ್ಯಾಲೆ ಬೀಸಾಕಲಿದ್ದೆ ಲಿಂಗಾಯತರಿಗೆ, ಆಹಾ ಏನಯ್ಯಾ ಸಿದ್ದೋಗಿ ಅಂಗ ಮಾತಾಡುತ್ತಿ ಸರೆ ಬಿಡಲೆ ಇದೊಂದು ಐದು ದಿವಾಸಿ ನೋಡಾನ ಇನ್ನಾವೈತೆ ಲೋಕಕೆ ಅಂತಾ ಓದಿಕೊಂಡು ಸುಮ್ಮನಾದ ಆದಮ್ಯಾಲೆ ಇವರು ಲಿಂಗಾಯತರು ಸುಮ್ಮನಿದ್ದರೆ ಬೇಸಿತ್ತು ರೊಕ್ಕ ಕಳಕಂಬಾರು ಜೀವಕಳ ಕಂಬಾರು ಐತಲ್ಲ, ಆಹಾ ಲಕ್ಷಕ ಆಸ್ಯಾ ಅಂತಾಲೇ ಹತ್ತು ಸಾವಿರ ಕೊಡ್ತಾನಂತೆ ಆಹಾ ನೋಡಿದ್ಯಾ ಇವೊತ್ತು ಎಲ್ಡು ಸಾವಿರ ಬಂದಿದ್ದು ಬಚ್ಚಿಕೆಂಡಾರ ಪತ್ರಾ ಬಂದಿದ್ದು ತೋರಿಸಿಲ್ಲ, ಆಹಾ ರೊಕ್ಕಾನ್ನ ಕೊಡಲಿಲ್ಲ, ಆಹಾ ಪತ್ರಾ ಕೊಡಲಾರದೋರು ಈ ರೊಕ್ಕಾ ತೋರಸಲಾದೋರು ನಾಳೆ ನಮ್ಮನ ಬಿಟ್ಟು ಹೋತರ ಇವರು ಬಿಟ್ಟು ಹೋಗೋದಿಲ್ಲ ನಮ್ಮನ ಕಳದೆ ಹೋತಾರ, ಆಹಾ ಲೇ ಇವರನ ನಾವು ಕಡೀಬೇಕು ಮಾರವಾಡಿ ಶೇಠಿ ಹುಡುಗರು,

ಕುದ್ರಿ ಕೂಡ ನಮಗೆ ಬರ್ತಾವ
ನಾಯಿಗಳು ಕೂಡ ನಮಗೆ ಬರ್ತಾವ

ಎಷ್ಟು ಉಪಾಯ ಮಡ್ಯಾರ ನೋಡು ಲಿಂಗಾಯತರು ಏನಪಾ ಹುಡುಗರಾ,

ನನ್ನ ಮಾತ ನೀವು ಕೇಳಾರೆ
ಕೈಯಾಗಿರುವುದು ನೋಡಪಾ
ಬೋಚೆಂದ ಅವು ಕಾಣತಾವಾ

ಏನಪಾ ಬೆಳ್ಳಿ ಆಯುಧಗಳು ಬೋಚಂದಾಕಾಣ್ತಾವ, ಆಹಾ ನಮ್ಮವು ಕೆಬ್ಬಿಣವು ಆಗಚೆಂದಾ ಕಾಣವಲ್ಲವು ಕರ‍್ರಗ ಕಾಣತಾವ ಕೊಡ್ರಪಾ ನಮ್ಮ ಕೈಗೆ ನಾವು ನೋಡತೀವಿ ಅಂದರು, ಆಹಾ ಇವು ಪಕ್ಕಾ ಉಶಾರಪಾ ಚಿಕ್ಕ ತಮ್ಮ ಫಿರೋಜಿ ಏ ಅಣ್ಣಾ ನಮ್ಮ ಕೈಯಾಗಳವು ಕೊಡ್ತೀವಿ ಬರೇ ಕೈ ಇರ‍್ತಾವ ನಮ್ಮನೆ ಆಯುಧಗಳು ತಗಂಡು ನಮ್ಮ ಕುತ್ತಿಗೆ ಕೊಯ್ಯಿತಾರ, ಆಹಾ ಅಂಗೆಲ್ಲಾ ನಾವು ಮಾಡತೀನಿ ಸುಮ್ಮನಿರು, ಆಹಾ ಕೇಳ್ರಪಾ ಲಿಂಗಾಯತರೆ, ಆಹಾ ನಿಮ್ಮ ಕೈಯಾಗ ಇರೋರು ನಾವು ಗುಮಾಸ್ತರು ಸಂಬಳದೋರು ಇದ್ದಂಗ, ಆಹಾ ಸಂಬಳದೋರು ಇಡೋದು ಏನು ಚೆಂದಾಗಿ ಐದಾವ ನಮ್ಮವು ಚೆಂದಾಗಿ ಐದಾವ ನೋಡಿತೀವಿ ಅಂದಿರಿ ನೋಡುವಂತಿರಿ ನಿಮ್ಮವು ನೋಡುವಂಗ ಆಗೈತೆ,

ಮುಚ್ಯಾಗ ನಿಮ್ಮವು ಕೊಡಪಾ ಹಿಂದೇಲಿ ನಾವು ಕೊಡತೀವಿ

ಅಂದರೆ ಇನ್ನ ಕೇಳಿದಾಗ ಕೊಡಲಿದ್ದರೆ ಆಗೈತು ನಮ್ಮವು ನೋಡವಾದಂತೆ ಅವರು, ಆಹಾ ಕೇಳಿದಾಗ ಕೊಡಲಿದ್ದರೆ ಆತೈತೆ, ಆಹಾ ನೋಡ್ರಪಾ ಅಂತಾ ಕೊಟ್ಟರು ಅವ್ರು ಮುಂಚ್ಯಾಗ ಇಸಕೊಂಡು ಹಿಂದೇಲಿ ಇವ್ರುವು ಕೊಟ್ಟಾರ, ಆಹಾ ನೋಡಣ್ಣಾ ಅವ್ರು ಆಯುಧಗಳು ಇರ್ತಾವಲ್ಲಾ, ಆಹಾ ನಮ್ಮನ್ನ ಆಯುಧಗಳು ತಗಂಡು ಕಡಿಯಾಕ ಬಂದರೆ ಅವ್ರು ನಮ್ಮ ಕೈಯಾಗ ಇರ್ತಾವಲ್ಲಾ ನಾವು ಕಡಿಯಾಕ ಬರತೀವಿ ಸರೆ ಹೇಳು ತಮ್ಮಾ ಬೇಸು ಮಾಡಿಯಪ್ಪಾ, ಆಹಾ ಚಕ್ಕೋನಾದ್ರೆ ಬಾಳ ಇದ್ಯೆ ಐತಲ್ಲಪಾ ನಿನಗೆ, ಆಹಾ ಅಂತಾ ಅವರುವು ಇವರು ನೋಡಿದರು, ಆಹಾ ಇವರುವು ಅವರು ನೋಡಿದರು ಅಹಾ ನೋಡಿದ ಮ್ಯಾಲೆ ತಮ್ಮ ಇನ್ನೇನಪಾ ಮುಂಚ್ಯಾಗ ನಾವು ಕೊಟ್ಟಿರಲ್ಲಾ ನಮ್ಮ ಕೈಯಾಗಳುವು ನಿಮ್ಮ ಕೈಯಾಗ ಕೊಟ್ಟೀವಿ ಈಗ ಕೊಡರಪ್ಪಾ ನಮಗೆ ನಿಮ್ಮವು ಕೊಡ್ತಿವಿ ಅಂದರು ಅಂಗಲ್ಲ ಮುಂಚ್ಯಾಗ ಕೊಟ್ಟಿದ್ದಿರಿ ನೋಡಪಾ,