ಜನನ :

ಮನೆತನ : ಸಂಗೀತಾಸಕ್ತರ ಮನೆತನ. ತಂದೆ ಎಂ.ಎಸ್. ಶ್ರೀಕಂಠಯ್ಯ ಪತ್ರಕರ್ತರು, ಅಣ್ಣ ಎಂ. ಎಸ್.ಪ್ರಕಾಶ್ ಅತ್ತಿಗೆ ರತ್ನಮಾಲ ಪ್ರಕಾಶ್‌ ಶ್ರೇಷ್ಠ ಗಾಯಕರು.

ಗುರು ಪರಂಪರೆ :

ಸಾಧನೆ : ಕಳೆದ ೨೫ ವರ್ಷಗಳಿಂದ ರಾಜ್ಯದ ನಾನಾ ಕಡೆ ಸ್ವತಂತ್ರವಾಗಿ ಕಾರ್ಯಕ್ರಮ  ನೀಡಿರುವುದೇ ಅಲ್ಲದೆ ಅತ್ತಿಗೆ ರತ್ನಮಾಲಾ ಪ್ರಕಾಶ್‌ರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆಯಲ್ಲಿದ್ದಾರೆ. ಇತ್ತೀಚೆಗೆ ’ಎ’ ಟಾಪ್ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ. ದೂರದರ್ಶನ ಕೇಂದ್ರದಿಂದಲೂ ಅನೇಕ ಗಾಯನ ಕಾರ್ಯಕ್ರಮಗಳು ಪ್ರಸಾರವಾಗಿದೆ. ಬೆಂಗಳೂರು ದೂರದರ್ಶನ ಕೇಂದ್ರ ನಿರ್ಮಿಸಿ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ ’ನೇಚರ್ ಇನ್‌ಸ್ಟೋನ್‌’ನ ಪ್ರಮುಖ ಗಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಿನ್ನೆಲೆ ಗಾಯಕಿಯಾಗಿ ಕೆಲವು ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ. ಸುಮಾರು ೫೦ ಕ್ಕೂ ಮಿಕ್ಕಿ ಧ್ವನಿ ಸುರುಳಿಗಳ ಮೂಲಕ ಕನ್ನಡ ಸಾರಸ್ವತ ಲೋಕದ ಹಿರಿಯ, ಕಿರಿಯ ಕವಿಗಳ ಗೀತೆಗಳನ್ನು ಜನಪ್ರಿಯ ಗಳಿಸಿರುತ್ತಾರೆ.

ನಾಟಕರಂಗದಲ್ಲೂ ಸಹ ಸಾಕಷ್ಟು ಪರಿಶ್ರಮವಿದೆ. ಎಂ. ಎಸ್. ಸತ್ಯು, ಬಿ.ವಿ. ಕಾರಂತ, ಪ್ರಸನ್ನ, ನಾಗೇಶ್ ಅವರುಗಳು ನಿರ್ದೇಶಿಸಿರುವ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸುಗಮ ಸಂಗೀತ ಕ್ಷೇತ್ರದ ಹಿರಿಯ ಸಂಯೋಜಕರುಗಳಾದ ಮೈಸೂರು ಅನಂತಸ್ವಾಮಿ, ಪದ್ಮಚರಣ್, ಸಿ. ಅಶ್ವತ್ಥ್‌, ಹೆಚ್.ಕೆ. ನಾರಾಯಣ ಅವರುಗಳ ನಿರ್ದೇಶನದ ಧ್ವನಿ ಸುರುಳಿಗಳಲ್ಲಿ ಆಕಾಶವಾಣಿ ಪ್ರಸಾರಗಳಲ್ಲಿ ಹಾಡಿದ್ದಾರೆ.

ಪ್ರಶಸ್ತಿ – ಸನ್ಮಾನ : ಕೆಲವೊಂದು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ೧೯೯೪-೯೫ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಇವರಿಗೆ ಸಂದಿದೆ.