ಕನಿಷ್ಠ ಗುಣಮಟ್ಟ ಅವಶ್ಯಕತೆಗಳು

 • ಸಂಪೂರ್ಣವಾಗಿ ಬೆಳೆದ, ಗಟ್ಟಿಯಾದ, ಮಾಗಿದ ತಾಜಾ ಹಣ್ಣು ಕಲೆ ಮತ್ತು ಗೀರು ರಹಿತ, ಕೀಟ, ರೋಗ ಹಾಗೂ ಕ್ರಿಮಿನಾಶಕಗಳಿಂದ ಮುಕ್ತ ಇರುವ ಹಣ್ಣುಗಳನ್ನು ಮಾತ್ರ ವರ್ಗೀಕರಣಕ್ಕೆ ಆಯ್ಕೆ ಮಾಡಲಾಗುವುದು.

ವರ್ಗೀಕರಣ

ಎಕ್ಸ್ಟ್ರಾ ಕ್ಲಾಸ್ (ವಿಶೇಷ ವರ್ಗ)

 • ಈ ವರ್ಗದ ಹಣ್ಣುಗಳು ಕನಿಷ್ಠ ಗುಣಮಟ್ಟದ ಆವಶ್ಯಕತೆ ಹಾಗೂ ಗ್ರಾಹಕರ ಬೇಡಿಕೆಯ ಎಲ್ಲ ಅಂಶಗಳನ್ನು ಪೂರೈಸಬೇಕು.
 • ನ್ಯೂನತೆ ರಹಿತ ಹಣ್ಣುಗಳು ಉಜ್ಜುವಿಕೆಯಿಂದಾಗಿ ಗೀರುಗಳು ಹಾಗೂ ಸ್ವಲ್ಪಮಟ್ಟಿನ ಸೊನೆಯ ಕಲೆಗಳು ಹಣ್ಣಿನ ಮೇಲೆ ಇದ್ದರೂ, ಹಣ್ಣಿನ ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಬೀರದಂತಿರಬೇಕು.

ವರ್ಗ

 • ಈ ವರ್ಗದಲ್ಲಿ ಬರುವ ಎಲ್ಲಾ ಕನಿಷ್ಠ ಗುಣಮಟ್ಟದ ಆವಶ್ಯಕತೆ ಹಾಗೂ ಗ್ರಾಹಕರ ಬೇಡಿಕೆಯ ಅಂಶಗಳನ್ನು ಪೂರೈಸಬೇಕು. ಆದರೆ ಹಣ್ಣಿನ ಆಕಾರ, ಉಜ್ಜುವಿಕೆಯಿಂದಾದ ಗೀರುಗಳು, ಸೋನೆಯ ಕಲೆ ಇತ್ಯಾದಿಗಳನ್ನು ಸ್ವಲ್ಪ ಮಟ್ಟಿಗೆ ಅಂದರೆ ೩, ೪, ೫ ಚೌ.ಸೆಂ.ಮೀ. ಹಣ್ಣುಗಳ ಮೇಲೆ (ಎ, ಬಿ, ಸಿ ಗುಂಪುಗಳಲ್ಲಿ ಅನುಕ್ರಮವಾಗಿ) ಇರಲು ಬಿಡಬಹುದು.

ವರ್ಗ

 • ಎಕ್ಸ್‌ಟ್ರಾ ಕ್ಲಾಸ್ ಮತ್ತು ವರ್ಗ – ೧ರಲ್ಲಿ ತೆಗೆದು ಹಾಕಿದ ಅಂದರೆ ಕನಿಷ್ಠ ಗುಣಮಟ್ಟ ಹೊಂದಿದ ಹಣ್ಣುಗಳನ್ನು ಈ ವರ್ಗದಲ್ಲಿ ಸೇರಿಸಲಾಗುವುದು. ಆದರೆ ಹಣ್ಣಿನ ಆಕಾರ, ಹಣ್ಣುಗಳ ಉಜ್ಜುವಿಕೆಯಿಂದಾದ ಗೀರುಗಳು, ಸೊನೆಯ ಕಲೆಗಳು ೫, ೬, ೭ ಚೌ.ಸೆಂ.ಮೀ.ಗಿಂತ (ಎ, ಬಿ, ಸಿ ಗುಂಪುಗಳಲ್ಲಿ ಅನುಕ್ರಮವಾಗಿ) ಹೆಚ್ಚಾಗಿರಬಾರದು.

ಪ್ಯಾಕಿಂಗ್

 • ವರ್ಗೀಕೃತ ಹಣ್ಣುಗಳನ್ನು ಪ್ಯಾಕಿಂಗ್ ಮಾಡಲು ಸ್ವಚ್ಛವಾದ ಹೊಸ ಕೊರೊಗೆಟೆಡ್ ಕಾರ್ಡಬೋರ್ಡ ಪೆಟ್ಟಿಗೆಗಳನ್ನು ಬಳಸಬೇಕು.
 • ಪೆಟ್ಟಿಗೆಯ ರಟ್ಟಿನ ತೂಕ (ಪ್ರತಿ ಚೌ.ಮೀ.ಗೆ) ಕನಿಷ್ಠ ೩೦೦ ಗ್ರಾಂ ಇರಬೇಕು. ಪೆಟ್ಟಿಗೆಯ ಅಳತೆ ೪೦ ಸೆಂ. ಮೀ.X ೩೦ ಸೆಂ.ಮೀ. ಇರಬೇಕು. ಸರಿಯಾಗಿ ಗಾಳಿಯಾಡಲು ಪ್ಯಾಕ್ ಮಾಡಿದ ಹಣ್ಣಿನ ಮೇಲ್ಪದರಿನಿಂದ ೧ ಸೆಂ.ಮೀ. ಮುಕ್ತ ಸ್ಥಳಾವಕಾಶ ಇರಬೇಕು.
 • ಪೆಟ್ಟಿಗೆಯ ಹೊರಮೈ ಪ್ರತಿಶತ ೮ರಷ್ಟು ಕಿಂಡಿಯನ್ನು ಹೊಂದಿರಬೇಕು.
 • ಪೆಟ್ಟಿಗೆಯ ಅಳತೆಗನುಸಾರವಾಗಿ ಪ್ರತಿ ಪೆಟ್ಟಿಗೆಯಲ್ಲಿ ೪ ರಿಂದ ೫ ಕಿಲೋ ಅಥವಾ ೮ ರಿಂ ೨೦ ಹಣ್ಣುಗಳನ್ನು ಪ್ಯಾಕ್ ಮಾಡಬಹುದು.
 • ಮಾವಿನ ಹಣ್ಣುಗಳಿಗೆ ಪೆಟ್ಟಾಗದಂತೆ ನೋಡಿಕೊಳ್ಳಲು ಪಾಲಿಸ್ಟೆರಿನ್ ಬಲೆ, ಕಾಗದ ಅಥವಾ ಕಾಗದ ಹುಲ್ಲನ್ನು ಪ್ಯಾಕಿಂಗ್‌ಗೆ ಬಳಸಬೇಕು.

ತಂಪು ಮಾಡುವುದು

 • ದೂರದ ಮಾರುಕಟ್ಟೆಗಳಿಗೆ ಹಣ್ಣುಗಳನ್ನು ಸಾಗಿಸಲು ಪ್ಯಾಕಿಂಗ್ ಮಾಡಿದ ಹಣ್ಣುಗಳನ್ನು ಸುಮಾರು ೧೩ ಸೆ.ಮೀ. ಉಷ್ಣತಾಮಾನವಿರುವ ಹಾಗೂ ೮೫ ರಿಂದ ೯೦ ಪ್ರತಿಶತ ಆರ್ದ್ರತೆ ಹೊಂದಿದ ಶೈತ್ಯಾಗಾರದಲ್ಲಿ ಇಡಲು ಸಾಗಿಸಬೇಕು.
 • ಇದರಿಂದ ಹಣ್ಣುಗಳ ಉಷ್ಣತಾಮಾನ ೩೭ ಸೆಂ.ಮೀ. ನಿಂದ ೧೩ ಸೆಂ.ಮೀ. ಬರಲು ೬ ಗಂಟೆಗಳ ಸಮಯ ತಗಲುವುದು.
 • ತಂಪು ಮಾಡಿದ ಪೆಟ್ಟಿಗೆಗಳನ್ನು ೧೧೦ ಸೆಂ.ಮೀ. ೮೦ ಸೆಂ.ಮೀ. x ೧೩ ಸೆಂ.ಮೀ. ಇರುವ ಹಲಗೆಯ ಮೇಲೆ ಇಟ್ಟು ಸ್ಟ್ರೆಪ್ ಪ್ಯಾಕಿಂಗ್ ಮಾಡಿದ ನಂತರ ೧೨.೫೦ ಸೆಂ.ಮೀ. ಉಷ್ಣತೆ ಇರುವ ಶೀತಲ ಗೃಹಕ್ಕೆ ಸಾಗಿಸಬೇಕು.

ಸಾಗಾಣಿಕೆ

 • ಶೈತ್ಯಾಗಾರ ವ್ಯವಸ್ಥೆಯಿರುವ ಕಂಟೇನರ್‌ನಲ್ಲಿ ತಂಪು ಮಾಡಿದ ಪೆಟ್ಟಿಗೆಗಳನ್ನು ಜೋಡಿಸಿ ಸಾಗಿಸಬೇಕು.

ಆರೋಗ್ಯ ಮತ್ತು ನೈರ್ಮಲ್ಯತೆ

 • ಅಂತಾರಾಷ್ಟ್ರೀಯ ಆರೋಗ್ಯ ಮತ್ತು ನೈರ್ಮಲ್ಯ ಕಾಯ್ದೆ ಅನುಸಾರವಾಗಿ ಮಾವಿನ ಹಣ್ಣಿನ ರಫ್ತಿಗೆ ಸೂಚಿಸಿದ ಎಲ್ಲಾ ನಿರ್ಮಲತೆ ಗುಣಮಟ್ಟ ಹೊಂದಿರುವ ಮತ್ತು ಕೀಟ ಹಾಗೂ ಸಸ್ಯರೋಗಗಳು ಇರದೇ ಇರುವ ಬಗ್ಗೆ ದೃಢೀಕರಿಸಲ್ಪಡುವ ಪ್ರಮಾಣ ಪತ್ರವನ್ನು ಎಲ್ಲ ರಫ್ತಿನ ರವಾನೆಗಳು, ಪ್ಲಾಂಟ್ ಕ್ವಾರಂಟಾಯಿನ್ ನಿರ್ದೇಶಕರು, ಕೃಷಿ ಮಂತ್ರಾಲಯ, ಭಾರತ ಸರ್ಕಾರ ಇವರಿಂದ ಪಡೆಯಬೇಕು.

ಉತ್ತುಂಗದಲ್ಲಿರುವ ೧೨ ದೇಶಗಳ ಮಾವು ಉತ್ಪಾದಕರು

ದೇಶಗಳು ಹೆಕ್ಟೇರುಗಳು
ಭಾರತ ೧,೬೦೦,೦೦೦
ಚೀನಾ ೪೩೩,೬೦೦
ಥೈಲ್ಯಾಂಡ್ ೨೮೫,೦೦೦
ಇಂಡೋನೇಶಿಯಾ ೨೭೩,೪೪೦
ಮೆಕ್ಸಿಕೊ ೧೭೩,೮೩೭
ಫಿಲಿಫೈನ್ಸ್ ೧೬೦,೦೦೦
ಪಾಕಿಸ್ತಾನ ೧೫೧,೫೦೦
ನೈಜೀರಿಯಾ ೧೨೫,೦೦೦
ಜಿನೇವಾ ೮೨,೦೦೦
ಬ್ರೆಝಿಲ್ ೬೮,೦೦೦
ವಿಯೆಟ್ನಾಮ್ ೫೩,೦೦೦
ಬಾಂಗ್ಲಾದೇಶ ೫೧,೦೦೦
ವಿಶ್ವದ ಒಟ್ಟು ,೮೭೦,೨೦೦

ಮಾವಿನ ಹಣ್ಣುಗಳ ಮಾರಾಟ

ನಮ್ಮ ದೇಶದಲ್ಲಿ ತಾಜಾ ಹಣ್ಣುಗಳ ಮಾರಾಟ ನಿಯಂತ್ರಿತ ಮಾರುಕಟ್ಟೆಗಳ ನಿಯಮದ ಅಡಿಯಲ್ಲಿ ಬರದೇ ಇರುವುದರಿಂದ ಇವುಗಳ ಮಾರಾಟ ವೈಜ್ಞಾನಿಕ ರೀತಿಯಲ್ಲಿ ಆಗುತ್ತಿಲ್ಲ. ಸಧ್ಯದ ಸ್ಥಿತಿಯಲ್ಲಿ ಮಾವು ಬೆಳೆಗಾರರು ಗುತ್ತಿಗೆದಾರರಿಗೆ ಹೂ ಹಾಗೂ ಕಾಯಿ ಬಿಡುವ ಮೊದಲೇ (ಮಾರ್ಗ – ೧) ಅಥವಾ ಕಾಯಿಗಳು ಆದ ಮೇಲೆ (ಮಾರ್ಗ – ೨) ಮಾರಾಟ ಮಾಡುವುದು ಸಾಮಾನ್ಯ ಪದ್ಧತಿಯಾಗಿರುವುದು. ಇದರೊಂದಿಗೆ ಕೆಲವೇ ರೈತರು ಮಾಗಿದ ಮಾವಿನ ಹಣ್ಣುಗಳನ್ನು ಕೊಯ್ಲು ಮಾಡಿ, ಕಚ್ಚಾ ಹಣ್ಣುಗಳನ್ನು ಟನ್ ತೂಕದ ಆಧಾರದ ಮೇಲೆ (ಮಾರ್ಗ – ೩) ಸಂಸ್ಕರಣಾ ಘಟಕಕ್ಕೆ ಮಾರಾಟ ಮಾಡುವದು ಇನ್ನೊಂದು ಮಾರಾಟ ಮಾರ್ಗವಾಗಿದೆ. ಹೀಗೆ ಒಟ್ಟಿನಲ್ಲಿ ಮಾವಿನ ಹಣ್ಣುಗಳನ್ನು ಮೂರು ವಿಧಾನದ ಮಾರಾಟ ಮಾರ್ಗಗಳಲ್ಲಿ ರೈತರು ಮಾರುವರು. ಈ ಮೂರು ಮಾವಿನ ಹಣ್ಣಿನ ಮಾರಾಟ ಮಾರ್ಗಗಳಲ್ಲಿ ಬೆಳೆಗಾರರ ಪಾಲು ಗ್ರಾಹಕರ ಬೆಲೆಯಲ್ಲಿ ಶೇ. ೩೪.೦೦, ಶೇ. ೭೨.೦೦ ಹಾಗೂ ಶೇ. ೮೦.೦೦ರಷ್ಟು ಅನುಕ್ರಮವಾಗಿರುವುದೆಂದು ಸಂಶೋಧನಾ ಮಾಹಿತಿಯಿಂದ ತಿಳಿದುಬಂದಿದೆ. ಇದರಿಂದ ರೈತರು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಮಾವಿನ ಹಣ್ಣುಗಳನ್ನು ಮಾಗಿದ ನಂತರ ಕೊಯ್ಲು ಮಾಡಿ ಸಂಸ್ಕರಣಾ ಘಟಕಕ್ಕೆ ಹಣ್ಣುಗಳನ್ನು ಮಾರಾಟ ಮಾಡುವುದರಿಂದ ಪಟ್ಟ ಪರಿಶ್ರಮಕ್ಕೆ ಗ್ರಾಹಕರ ಬೆಲೆಯಲ್ಲಿ ಶೇ. ೮೦.೦೦ ರಷ್ಟು ಮಾವಿನ ಬೆಳೆಗಾರ ತನ್ನ ಪಾಲನ್ನು ಯಾವುದೇ ಆತಂಕವಿಲ್ಲದೇ ಪಡೆದುಕೊಳ್ಳಬಹುದು.

ಇದರೊಂದಿಗೆ ಕಡಿಮೆ ಸಂಖ್ಯೆಯಲ್ಲಿರುವ ಮಾರುಕಟ್ಟೆಯ ಮಧ್ಯವರ್ತಿಗಳ ಬೆಲೆ ನಿಯಂತ್ರಣ ಕ್ರಮವನ್ನು ಮುರಿಯಲು ಹಾಗೂ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೇಡಿಕೆ ಮತ್ತು ಪೂರೈಕೆಯನ್ನು ಯಶಸ್ವಿಯಾಗಿ ನಿರ್ವಹಿಸಲು ರೈತರ ಸಂಘಟನೆಗಳನ್ನು ಹುಟ್ಟುಹಾಕುವುದು ಅವಶ್ಯವಿರುವುದು. ಹೀಗೆ ಸಂಘಟನೆಗಳ ಸ್ಥಾಪನೆಯಿಂದ ಗ್ರಾಹಕರಿಗೆ ಬೇಕಾದ ಪ್ರಮಾಣದಲ್ಲಿ ತಾಜಾ ಹಣ್ಣುಗಳನ್ನು ಪೂರೈಸಿ, ಉಳಿದ ಮಾವಿನ ಹಣ್ಣುಗಳನ್ನು ಸಂಸ್ಕರಣಾ ಘಟಕಕ್ಕೆ ಮೌಲ್ಯವರ್ಧೀಕರಿಸಲು ಪೂರಕವಾದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುವುದು.

ಅಲ್ಲದೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯ ಲಾಭವನ್ನು ಪಡೆಯಲು ಈ ಸಂಘಟನೆಗಳು ಪ್ರಮುಖ ಪಾತ್ರವನ್ನು ನಿರ್ವಹಿಸಲು ಹಾಗೂ ಸುಗಮವಾಗಿ ನಮ್ಮ ದೇಶದಿಂದ ಉತ್ತಮ ಗುಣಮಟ್ಟದ ತಾಜಾ ಮಾವಿನಹಣ್ಣುಗಳನ್ನು ನೆರೆಯ ರಾಷ್ಟ್ರಗಳಿಗೆ ರಫ್ತು ಮಾಡಲು ಇನ್ನೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳಲು ಅನುಕೂಲವಾಗುವುದು.

ರೈತರು ಮಾವಿನ ಹಣ್ಣುಗಳ ಗುಣಮಟ್ಟವನ್ನು ಕಾಪಾಡಲು ಕೃಷಿ ಪದ್ಧತಿಯಲ್ಲಿ ಅನೇಕ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ – ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಹಾಗೂ ರೋಗ ನಿಯಂತ್ರಣ ಹಾಗೂ ನಿರ್ವಹಣೆ, ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಮಾನವನ ಆರೋಗ್ಯ, ಭದ್ರತೆ ಹಾಗೂ ಬೆಳವಣಿಗೆ. ಈ ಎಲ್ಲ ಪದ್ಧತಿಗಳನ್ನು ಒಟ್ಟಿಗೆ ನೋಡಿದಾಗ ಆಗುವ ಪದ್ಧತಿಗಳೇ “ಉತ್ತಮ ಕೃಷಿ ಪದ್ಧತಿಗಳು.”

ಉತ್ತಮ ಕೃಷಿ ಪದ್ಧತಿಯ ಉಪಯೋಗ

 • ಈ ಪದ್ಧತಿಯಲ್ಲಿ ಬೆಳೆದ ಹಣ್ಣುಗಳಲ್ಲಿ ಯಾವುದೇ ವಿಷಕಾರಿ ವಸ್ತುಗಳು ಇರುವುದಿಲ್ಲ.
 • ವಸ್ತುಗಳಲ್ಲಿ ಯಾವುದೇ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಇರುವುದಿಲ್ಲ.
 • ಈ ಪದ್ಧತಿಯಿಂದಾಗಿ ವಾತಾವರಣದಲ್ಲಿ ಯಾವುದೇ ತರಹದ ಮಾಲಿನ್ಯತೆಯುಂಟಾಗುವುದಿಲ್ಲ.
 • ಗ್ರಾಹಕರು ಯಾವುದೇ ಭಯವಿಲ್ಲದೇ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಮತ್ತು ಸೇವಿಸುತ್ತಾರೆ.
 • ಮಾರಾಟಗಾರರು ಹಣ್ಣುಗಳ ಗುಣಮಟ್ಟದ ಬಗ್ಗೆ ವಿಶ್ವಾಸ ಹೊಂದಿರುತ್ತಾರೆ.

ಉತ್ತಮ ಕೃಷಿಯ ಪದ್ಧತಿಗಳ ನೀತಿ ಮತ್ತು ನಿಯಮಗಳು ಹಾಗೂ ಪ್ರಮಾಣಪತ್ರ

ಯೂರೋಪ ದೇಶಗಳಲ್ಲಿ ವ್ಯಾಪಾರಸ್ಥರು ಸಂಘಟನೆ ಮಾಡಿ (Europe Retailers Produce Working Committee) ಈ ಪದ್ಧತಿಗಳ ನೀತಿ ಮತ್ತು ನಿಯಮಾವಳಿಗಳನ್ನು ರೂಪಿಸಿದ್ದಾರೆ. ಇದು ಆಂಗ್ಲ ಭಾಷೆಯಲ್ಲಿ GOOD AGRICULTURAL PRACTICE (GAP) ಎಂದು ಕರೆಯಲ್ಪಟ್ಟಿದೆ. ಒಟ್ಟಾಗಿ ಯೂರೋಪಿನ ಸಂಘಟನೆ EUREP ಮತ್ತು GAP ಪದ್ಧತಿ ಸೇರಿ ‘EUREP GAP’ ಎಂಬ ಆಂಗ್ಲ ಭಾಷೆಯ ಪದ ಹುಟ್ಟಿದೆ. ಈ ನೀತಿ ಮತ್ತು ನಿಯಮಾವಳಿಗಳನ್ನು ತಯಾರು ಮಾಡಿ ಮತ್ತು ಅದರ ನಿಯಂತ್ರಣವನ್ನು ಜರ್ಮನಿ ದೇಶದ ಫುಡ್ ಪ್ಲಸ್ (FOOD PLUS) ಸಂಸ್ಥೆ ಹೊಂದಿದೆ. ಈ ರೀತಿ ಮತ್ತು ನೀತಿಗಳನ್ನು ಅಳವಡಿಸಿಕೊಂಡು ಬೆಳೆದಂಥ ವಸ್ತುಗಳಿಗೆ ಅಪಾರ ಬೇಡಿಕೆ ಯೂರೋಪ್ ದೇಶಗಳಲ್ಲಿ ಇದೆ. ಈ ಪದ್ಧತಿಗಳಲ್ಲಿ ಬೆಳೆದಂಥ ಹಣ್ಣುಗಳನ್ನು ರಫ್ತು ಮಾಡಲು ಪ್ರಮಾಣಪತ್ರ ಆವಶ್ಯಕ. ಈ ಪ್ರಮಾಣಪತ್ರ ಪಡೆಯಲು ರೈತರು ಮತ್ತು ರಫ್ತುದಾರರು ಈ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳು ಯಾವುವೆಂದರೆ –

ಮಣ್ಣು / ನೀರು     ಮಣ್ಣು ಮತ್ತು ನೀರನ್ನು ಸಮಗ್ರವಾಗಿ ನಿರ್ವಹಿಸಬೇಕು. ಹತೋಟಿಯಿಂದ ಬಳಸಬೇಕು.
ಕೀಟ / ರೋಗಗಳು           ಸಮಗ್ರ ಕೀಟ ಹಾಗೂ ರೋಗಗಳ ನಿಯಂತ್ರಣ.
ತ್ಯಾಜ್ಯ ವಸ್ತುಗಳು            ತ್ಯಾಜ್ಯ ವಸ್ತುಗಳ ಸರಿಯಾದ ಪುನರ್ಬಳಕೆ.
ತಳಿಗಳು ಹಾಗೂ ಸಸ್ಯಾಭಿವೃದ್ಧಿ      ತಳಿಗಳ ಮತ್ತು ಸಸ್ಯಾಭಿವೃದ್ಧಿಯ ಪದ್ಧತಿಗಳು.
ತೋಟದ ಇತಿಹಾಸ ಹಾಗೂ ನಿರ್ವಹಣೆ           ತೋಟದ ಇತಿಹಾಸ ಹಾಗೂ ಭೂಮಿಯ ನಿರ್ವಹಣೆ.
ಗೊಬ್ಬರಗಳ ನಿರ್ವಹಣೆ      ಸಮಗ್ರ ಪೋಷಕಾಂಶಗಳ ನಿರ್ವಹಣೆ.
ಕೊಯ್ಲು  ಸ್ವಚ್ಛತಾ ರೀತಿಯಲ್ಲಿ ಕೊಯ್ಲು ಮಾಡುವುದು.
ಕೊಯ್ಲೋತ್ತರ ತಂತ್ರಜ್ಞಾನ  ಕೊಯ್ಲಿನ ನಂತರ ಹಣ್ಣುಗಳನ್ನು ರಕ್ಷಿಸುವ ತಂತ್ರಜ್ಞಾನ ಅಳವಡಿಕೆ.
ಆರೋಗ್ಯ           ರೈತರು ಮತ್ತು ಕೆಲಸಗಾರರ ಆರೋಗ್ಯ ಭದ್ರತೆ.
ಪರಿಸರ ಹಾಗೂ ವನ್ಯಜೀವಿ            ಪರಿಸರದ ಸದ್ಬಳಕೆ ಹಾಗೂ ಮಾಲಿನ್ಯ ಹತೋಟಿ ವನ್ಯಜೀವಿಗಳ ರಕ್ಷಣೆ.
ದಾಖಲೆಗಳು       ಕೃಷಿ ಪದ್ಧತಿಯ ಪ್ರತಿಯೊಂದು ಕೆಲಸಗಳ ದಾಖಲೆಗಳು.
ದೂರುಗಳು         ವಸ್ತುಗಳ ಗುಣಮಟ್ಟದ ಹಾಗೂ ಇತರೆ ದೂರುಗಳು ಬಂದಾಗ ಅವುಗಳ ದಾಖಲೆಗಳು ಹಾಗೂ ಸರಿಪಡಿಸುವಿಕೆ.
ಅನ್ವೇಷಣೆ           ಯಾವುದೇ ಹಣ್ಣುಗಳು ಗ್ರಾಹಕರಿಗೆ ತಲುಪಿದಾಗ ಅದು ಯಾವ ತೋಟದಿಂದ ಬಂದಿದೆ ಎಂದು ತಿಳಿಯಬೇಕು.
ಸ್ವಯಂ ಪರೀಕ್ಷೆ    ಪ್ರತಿ ವರ್ಷಕ್ಕೆ ಒಂದು ಬಾರಿ ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ ಬಗ್ಗೆ ಸ್ವಯಂ ಪರೀಕ್ಷೆ ಮಾಡಬೇಕು ಹಾಗೂ ಅಳವಡಿಕೆ ಕಮ್ಮಿ ಆಗಿದ್ದರೆ ಅವುಗಳನ್ನು ಸರಿಪಡಿಸಬೇಕು.
ಪ್ರಯೋಗಶಾಲೆ   ಯಾವುದೇ ಹಣ್ಣು ಮತ್ತು ತರಕಾರಿಗಳನ್ನು ಕೊಯ್ಲಿನ ಮುನ್ನ ಪ್ರಯೋಗಾಲಯಕ್ಕೆ ಕಳಿಸಿ ವಿಷವಸ್ತುಗಳ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಪತ್ತೆ ಮಾಡಬೇಕು.

ರಫ್ತು ಉದ್ದೇಶಿತ ಮಾವಿನ ಹಣ್ಣುಗಳಲ್ಲಿ ನಿಗದಿಪಡಿಸಿದ ರೋಗನಾಶಕ / ಕೀಟನಾಶಕ ವಿಷಾಂಶಗಳ ಗರಿಷ್ಠ ಮಟ್ಟ

ಕ್ರ.ಸಂ. ಪೀಡೆನಾಶಕ ಔಷಧಿ ಹೆಸರು ಅನುಮತಿಸಲಾದ ಗರಿಷ್ಠ ವಿವಾದಾಂಶ ಮಟ್ಟ (ಮಿ.ಗ್ರಾಂ. / ಕೆ.ಜಿ.)
೧. ಮ್ಯಾಂಕೋಜೆಬ್ ಥೈರಾಂ, ಪ್ರೊಪೈನೆಬ್, ಜೈನೆಬ್ ೦.೦೫
೨. ಮೆಥಾಮಿಡೊಫಾಸ್ ೦.೦೧
೩. ಅಮೈನೋಟ್ರೆಅಜೋಲ್ ೦.೦೫
೪. ಅಟ್ರಾಜೈನ್ ೦.೧
೫. ಬೈನಾಪಾಕ್ರಿಲ್ ೦.೦೫
೬. ಬ್ರೊಮೋಪಾಸ್ ಇಥೈಲ್ ೦.೦೫
೭. ಕ್ಯಾಪ್ಟಾಟಾಲ್ ೦.೦೨
೮. ಡೈಕ್ಲೋರ್‌ವಾಸ್ ೦.೦೫
೯. ಡೈನೋಸೆಲ್ ೦.೦೫
೧೦. ಡೈ ಆಕ್ಸಾಫಿಯಾನ್ ೦.೦೫
೧೧. ಎಂಡ್ರಿನ್ ೦.೦೧
೧೨. ಡೈಬ್ರೋಮೋ ಇಥೇನ್ ೦.೦೧
೧೩. ಫೆನ್‌ಕ್ಲೋರೋಪಾನ್ ೦.೦೧
೧೪. ಹೆಪ್ಟಾಕ್ಲೋರ್ ೦.೦೧
೧೫. ಮ್ಯಾಲಿಕ್ ಹೈಡ್ರಾಜೈನ್ ೧.೦೦
೧೬. ಮಿಥೈಲ್ ಬ್ರೊಮೈಡ್ ೦.೦೫
೧೭. ಪ್ಯಾರಕ್ಟಾಟ್ ಡೈಕ್ಲೋರೈಡ್ ೦.೦೫
೧೮. T.E.P.P. ೦.೦೧
೧೯. ಕ್ಯಾಂಫೆಕ್ಲೋರ್ ೦.೦೧
೨೦. ೨, ೪, ೫ – ಖಿ ೦.೦೫

ಮಾವು ರಫ್ತು ಬೇಡಿಕೆ ಇರುವ ದೇಶಗಳು

ಭಾರತದ / ಕರ್ನಾಟಕದ ಮಾವಿನ ಹಣ್ಣುಗಳಿಗೆ ಈ ಕೆಳಕಾಣಿಸಿದ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.

ಅ. ಯೂರೋಪ್ನೆದರ್‌ಲ್ಯಾಂಡ್, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಇತ್ಯಾದಿ.

ಆ. ಮಧ್ಯಪ್ರಾಚ್ಯ ದೇಶಗಳುದುಬೈ, ಕುವೈತ್, ಯು.ಎ.ಇ. ಇತ್ಯಾದಿ.

ಇ. ಪೌರ್ವಾತ್ಯ ದೇಶಗಳುಸಿಂಗಪುರ್, ಜಪಾನ್ ಇತ್ಯಾದಿ.

ರಫ್ತು ಮಾರುಕಟ್ಟೆ ವಿಶ್ಲೇಷಣೆ

. ಯೂರೋಪ್ ಮಾರುಕಟ್ಟೆ : ಕಳೆದ ೧೫ ವರ್ಷಗಳಿಂದೀಚೆಗೆ ಯೂರೋಪ್ ದೇಶಗಳಲ್ಲಿ ಮಾವಿನ ಬೇಡಿಕೆ ಹೆಚ್ಚಾಗುತ್ತಲಿದ್ದು, ಆಮದು ಪ್ರಮಾಣವು ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಪ್ರತಿ ವರ್ಷ ಸುಮಾರು ೬೦,೦೦೦ ಟನ್‌ಗಳಿಗಿಂತ ಹೆಚ್ಚು ಮಾವಿನ ಹಣ್ಣುಗಳು ರಫ್ತಾಗುತ್ತಲಿವೆ. ಬ್ರೆಜಿಲ್, ಅಮೇರಿಕ, ದಕ್ಷಿಣ ಆಫ್ರಿಕಾ, ಐವರಿ ಕೋಸ್ಟ್, ವೆನಿಜುವೆಲಾ, ಇಸ್ರೇಲ್, ಮೆಕ್ಸಿಕೋ, ಪೆರು, ಪಾಕಿಸ್ತಾನ, ಭಾರತ ಇತ್ಯಾದಿ ದೇಶಗಳಿಂದ ಹಣ್ಣುಗಳು ಆಮದಾಗುತ್ತಿವೆ. ಪ್ರಸಕ್ತ ಯೂರೋಪ್‌ನ ಒಟ್ಟು ಆಮದಿನಲ್ಲಿ ಭಾರತದ ಪಾಲು ಶೇಕಡ ೪ರಷ್ಟು ಮಾತ್ರ. ಇಲ್ಲಿ ಭಾರತದ ಅಲ್ಫಾನ್ಸೋ (ಬಾದಾಮಿ) ಮತ್ತು ಬಂಗನ್‌ಪಲ್ಲಿ, ತೋತಾಪುರಿ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. (೯೦%, ೮%, ೨% ಕ್ರಮವಾಗಿ).

ಸರಾಸರಿ ರಫ್ತು ಮಾರುಕಟ್ಟೆಯಲ್ಲಿನ ಬೆಲೆ

ಜರ್ಮನಿ ರೂ.೨೫೦/ – ಕಿಲೋ ಗ್ರಾಂ.
ಇಂಗ್ಲೆಂಡ್ ರೂ. ೧೭೦/ – ಕಿಲೋ ಗ್ರಾಂ.
ನೆದರ್‌ಲ್ಯಾಂಡ್ ರೂ. ೧೫೦/ – ಕಿಲೋ ಗ್ರಾಂ.
ಫ್ರಾನ್ಸ್ ರೂ. ೧೭೫/ – ಕಿಲೋ ಗ್ರಾಂ.

. ಮಧ್ಯಪ್ರಾಚ್ಯ ದೇಶಗಳು : ಇಲ್ಲಿನ ಆಮದು ಬೇಡಿಕೆಯನ್ನು ಹೆಚ್ಚಾಗಿ ಪಾಕಿಸ್ತಾನ ಹಾಗೂ ಸ್ವಲ್ಪ ಮಟ್ಟಿಗೆ ಭಾರತ ದೇಶಗಳು ಪೂರೈಸುತ್ತಿವೆ.

ಸರಾಸರಿ ಬೆಲೆ

ಬಾದಾಮಿ ರೂ. ೧೫೦ – ೨೦೦/ – ಕಿಲೋ ಗ್ರಾಂ.
ದಶಹ ರೂ. ೧೨೫ – ೧೫೦/ – ಕಿಲೋ ಗ್ರಾಂ.
ಸಫೇದ, ರಟೌಲ್, ಚೌಸಾ ರೂ. ೧೦೦ – ೧೫೦/ – ಕಿಲೋ ಗ್ರಾಂ.

ರಫ್ತು ಯೋಗ್ಯ ಮಾವಿನ ತಳಿಗಳ ಗುಣಲಕ್ಷಣಗಳು

 1. i) ಹಣ್ಣುಗಳು ತಳಿಗನುಗುಣವಾಗಿ ಸರಾಸರಿ ಕೆಳಗಿನ ತೂಕ ಹೊಂದಿರಬೇಕು.
ಅಲ್ಫಾನ್ಸೋ ೨೦೦ – ೨೫೦/ – ಗ್ರಾಂ.
ಬಂಗನ್‌ಪಲ್ಲಿ ೨೫೦ – ೩೫೦/ – ಗ್ರಾಂ.
ಮಲ್ಲಿಕ ೩೦೦ – ೪೦೦/ – ಗ್ರಾಂ.
ತೋತಾಪುರಿ ೩೦೦ – ೪೦೦/ – ಗ್ರಾಂ.
 1. ii) ಹಣ್ಣುಗಳ ಬಣ್ಣ : ಹಣ್ಣು ಮಾಗಿದಾಗ ತಳಿಗನುಗುಣವಾದ ಗಾಢವರ್ಣ ಹೊಂದಿರಬೇಕು. ಬಾದಾಮಿಯಲ್ಲಿ ಹಳದಿ ವರ್ಣದ ಹಿನ್ನೆಲೆಯಲ್ಲಿ ಕೆಂಪು ವರ್ಣ ಸಂಚಯವಾಗಿದ್ದರೆ ಹೆಚ್ಚಿನ ಆದ್ಯತೆ.

iii) ಆಕಾರ : ತಳಿಗನುಗುಣವಾಗಿ ನಿರ್ದಿಷ್ಟ ಆಕಾರ ಹೊಂದಿರಬೇಕು. ಆಕಾರವನ್ನು ತಪ್ಪಿದ ಹಣ್ಣುಗಳಿಗೆ ಬೇಡಿಕೆಯಿಲ್ಲ.

 1. iv) ಮಾಗುವಿಕೆ (ಪಕ್ವತೆ) ಸ್ಥಿತಿ : ಪೂರ್ಣ ಪ್ರಮಾಣದಲ್ಲಿ ಮಾಗಿದ್ದು, ಧೃಡವಾಗಿರಬೇಕು, ಸಿಪ್ಪೆ ಮೇಲೆ ನಿರಿಗೆಗಳು (ಸುಕ್ಕು) ಇರಬಾರದು. ಪಕ್ವತೆಯ ಮಿತಿ ದಾಟಿರಬಾರದು. (Should not be over – ripe).
 2. v) ಹಣ್ಣುಗಳ ನೋಟ : ಹಣ್ಣುಗಳು ಆಕರ್ಷಕವಾಗಿರಬೇಕು, ಸಿಪ್ಪೆಗಳ ಮೇಲೆ ಯಾವುದೇ ರೋಗ ರುಜಿನ, ಕೀಟಗಳ ಬಾಧೆಯ ಕಲೆ, ಸೂರ್ಯನ ಉರಿತ, ಸೋನೆಯ ಕಲೆ, ಕೊಳೆತದ ಚಿಹ್ನೆ, ಕಂದು ವರ್ಣದ ಲೆಂಟಿಸೆಲ್‌ಗಳಿಂದ ಮುಕ್ತವಾಗಿರಬೇಕು.
 3. vi) ರುಚಿ : ಹಣ್ಣುಗಳು ತಳಿಗನುಗುಣವಾಗಿ ನಿರ್ದಿಷ್ಟ ಶ್ರೇಷ್ಠ ರುಚಿ ಹಾಗೂ ಮಧುರ ಸುವಾಸನೆಯನ್ನು ಹೊಂದಿರಬೇಕು. ತಿರುಳು ರುಚಿಭರಿತವಾಗಿರಬೇಕು, ನಾರಿ ಅಂಶ ಇರಬಾರದು, ಸ್ಪಾಂಜಿ ಟಿಶ್ಯೂ, ಹಣ್ಣಿನ ಹುಳಗಳು ಹಾಗೂ ಅವುಗಳ ಮೊಟ್ಟೆಗಳಿಂದ ಮುಕ್ತವಾಗಿರಬೇಕು. ಓಟೆ ಕೊರಕದ ಹಾವಳಿಯಿಂದ ಮುಕ್ತವಾಗಿರಬೇಕು.

vii) ಹಣ್ಣುಗಳ ಹೊರಮೈ ಯಾವುದೇ ರಾಸಾಯನಿಕ ಸಿಂಪರಣೆಯ ಕಲೆಗಳಿಂದ ಮುಕ್ತವಾಗಿರಬೇಕು, ಹಣ್ಣಿನಲ್ಲಿ ನಿರ್ದಿಷ್ಟಪಡಿಸಿದ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳ ಉಪಸ್ಥಿತಿ ಇರಬೇಕು ಅಥವಾ ರಾಸಾಯನಿಕಗಳಿಂದ ಸಂಪೂರ್ಣ ಮುಕ್ತವಾಗಿರಬೇಕು. ಸಾವಯವ ಪದ್ಧತಿಯಿಂದ ಉತ್ಪಾದಿಸಿದ ಮಾವುಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ.