ಮಾವು ರಫ್ತು ಬೇಡಿಕೆ ಇರುವ ದೇಶಗಳು

ಪ್ರಸ್ತುತ ದಿನಮಾನಗಳಲ್ಲಿ ಐರೋಪ್ಯ ದೇಶಗಳಾದ ನೆದರ್‌ಲ್ಯಾಂಡ್, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತು ಮಧ್ಯಪ್ರಾಚ್ಯ ದೇಶಗಳಾದ ದುಬೈ, ಕುವೈತ್, ಯು.ಎ.ಇ., ಹಾಗೂ ಪೌರ್ವಾತ್ಯ ದೇಶಗಳಾದ ಸಿಂಗಪೂರ್, ಜಪಾನ್ ಇತ್ಯಾದಿಗಳಿಂದ ಭಾರತದ / ಕರ್ನಾಟಕದ ಮಾವಿನ ಹಣ್ಣುಗಳತ್ತ ವಿಶೇಷವಾಗಿ ಹೆಚ್ಚಿನ ಬೇಡಿಕೆ ಇರುವುದು ಕಂಡುಬಂದಿದೆ. ಅಲ್ಲದೆ, ಅಮೆರಿಕಾ ದೇಶವು ಸುಮಾರು ಹದಿನೆಂಟು ವರ್ಷಗಳ ನಂತರ ಆಮದು ನಿರ್ಬಂಧವನ್ನು ತೆಗೆದು ಹಾಕುವ ಮೂಲಕ ಭಾರತದ ಮಾವಿನ ಹಣ್ಣುಗಳಿಗೆ ಸ್ವಾಗತವನ್ನು ಕೋರಿದೆ.

ಇತರೆ ಪ್ರಮುಖ ದೇಶಗಳಿಗೆ ಭಾರತದಿಂದ ರಫ್ತಾಗುತ್ತಿರುವ ಮಾವಿನ ಹಣ್ಣುಗಳು

ದೇಶಗಳು ಪ್ರಮಾಣ (ಮೆಟ್ರಿಕ್ ಟನ್ಗಳಲ್ಲಿ)
೨೦೦೩೦೪ ೨೦೦೪೦೫ ೨೦೦೫೦೬
ಬಹ್ರೇನ್ ೬೩೫.೬೫ ೮೦೩.೬೯ ೧೯೭.೮೪
ಬಾಂಗ್ಲಾದೇಶ ೨೩೭೯೭.೧೩ ೩೨೫೦೩.೨೨ ೨೬೯೮.೬೭
ಬೆಲ್ಜಿಯಂ ೧೦೫.೮೮ ೩೧.೪೫ ೮.೫೩
ಕೆನಡಾ ೧೧೬.೮೦ ೨೮.೧೯ ೨೯.೦೭
ಫ್ರಾನ್ಸ್ ೨೪೫.೦೫ ೪೧.೧೯ ೧೨.೩೧
ಕುವೈತ್ ೪೩೮.೩೦ ೨೬೭.೯೬ ೩೫.೦೩
ಮಲೇಶಿಯಾ ೨೯೪.೨೩ ೧೮೫ ೫೨.೩೭
ಮಾಲ್ಡೀವ್ಸ್ ೧೨.೪೯ ೪.೩೨ ೩.೫೩
ನೇಪಾಳ ೨೯೩೦.೧೧ ೩೪೦೦.೯೪ ೩೦೧.೬೩
ಓಮಾನ್ ೫೫೬.೭೩ ೧೪೩.೪೦ ೫೯.೬೦
ಕತಾರ್ ೨೩೨.೨೩ ೧೬೦.೨೯ ೧೬.೬೬
ಸೌದಿ ಅರೇಬಿಯಾ ೩೮೪೫.೭೨ ೨೩೦೦.೫೩ ೩೯೦.೫೮
ಸಿಂಗಾಪೂರ್ ೨೩೮.೮೪ ೧೫೯.೬೩ ೭೭.೪೬
ಯು.ಎ.ಇ. ೨೧೦೫೬.೧೬ ೯೪೮೦.೯೩ ೫೨೧೯.೪೦
ಯು.ಕೆ. ೧೫೧೧.೬೩ ೧೨೦೨.೩೬ ೨೦೫.೫೫

ರಫ್ತು ಮಾಡುವಾಗ ಅನುಸರಿಸಬೇಕಾದ ನಿರ್ದಿಷ್ಟ ಗುಣಮಟ್ಟಗಳು

  ಮಧ್ಯಪೂರ್ವ ನೆದರ್ಲ್ಯಾಂಡ್ ಯು.ಕೆ.
  ತೂಕ : ತೂಕ : ತೂಕ :
ತಳಿ ಅಲ್ಫಾನ್ಸೊ ೨೦೦-೨೫೦ ಗ್ರಾಂ. ೨೫೦-೩೦೦ ಗ್ರಾಂ. ೨೫೦-೩೦೦ ಗ್ರಾಂ.
ಕೇಸರ ೨೦೦-೨೫೦ ಗ್ರಾಂ. ೨೨೫-೨೫೦ ಗ್ರಾಂ. ೨೨೫-೨೫೦ ಗ್ರಾಂ.
ಪ್ಯಾಕಿಂಗ್ ೧ ಡಜನ್/೨.೫ ಕೆ.ಜಿ. ೧ ಡಜನ್/೨.೫ ಕೆ.ಜಿ. ೧ ಡಜನ್/೨.೫ ಕೆ.ಜಿ.
ಸಂಗ್ರಹಣಾ ತಾಪಮಾನ ೧೩ ಡಿಗ್ರಿ ಸೆಂ. ೧೩ ಡಿಗ್ರಿ ಸೆಂ. ೧೩ ಡಿಗ್ರಿ ಸೆಂ.
ರಫ್ತು ಮಾರ್ಗ ಸಮುದ್ರಯಾನ ವಿಮಾನಯಾನ ವಿಮಾನಯಾನ

ರಫ್ತು ಸಾರಾಂಶ ಪಟ್ಟಿ ಮಾವಿನ ತಿರುಳು

ಕ್ರ.ಸಂ. ವರ್ಷ ಪ್ರಮಾಣ
(ಮಿಲಿಯನ್ ಟನ್)
ಬೆಲೆ
(ಕೋಟಿಗಳಲ್ಲಿ)
೧. ೧೯೯೫ – ೯೬ ೩೬೦೨೩.೩೩ ೮೪.೬೧
೨. ೧೯೯೬ – ೯೭ ೪೦೩೦೨.೨೨ ೧೦೫.೦
೩. ೧೯೯೭ – ೯೮ ೪೫೮೭೪.೫೩ ೧೨೫.೩
೪. ೧೯೯೮ – ೯೯ ೩೮೧೩೩.೭೩ ೧೩೮.೫
೫. ೧೯೯೯ – ೦೦ ೭೨೩೮೪.೨೨ ೧೯೬.೫
೬. ೨೦೦೦ – ೦೧ ೫೭೩೦೩.೫೩ ೨೬೩.೮
೭. ೨೦೦೧ – ೦೨ ೭೬೭೩೫.೧೮ ೨೪೧.೩
೮. ೨೦೦೨ – ೦೩ ೯೬೧೦೭.೩೧ ೨೯೭.೦
೯. ೨೦೦೩ – ೦೪ ೮೯೫೧೪.೮೪ ೨೪೧.೯
೧೦. ೨೦೦೪ – ೦೫ ೯೦೯೮೮.೬೦ ೩೦೦.೮೬

ರಫ್ತಿಗಾಗಿ ಮಾವಿನ ಹಣ್ಣುಗಳನ್ನು ಉತ್ಪಾದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು

  1. i) ಕೀಟರೋಗಗಳ ನಿಯಂತ್ರಣ ಕ್ರಮ

ಇದಕ್ಕಾಗಿ ಅನಗತ್ಯ ಪ್ರಮಾಣದಲ್ಲಿ ರಾಸಾಯನಿಕ ಔಷಧಗಳ ಸಿಂಪಡಣೆ ಮಾಡಬಾರದು. ಹೆಚ್ಚು ವಿಷಕಾರಿಯಾದ ಹಾಗೂ ನಿಷೇಧಿಸಲ್ಪಟ್ಟ ಔಷಧಿಗಳನ್ನು ಬಳಸಬಾರದು. ರಾಸಾಯನಿಕ ಸಿಂಪಡಣೆಯನ್ನು ಹೂವು ಹಾಗೂ ಕಾಯಿ ಹಂತಕ್ಕೆ ಮಾತ್ರ ಸೀಮಿತಗೊಳಿಸಬೇಕು.

  1. ii) ಮಾವಿನ ಗಿಡಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವುದು

೧೨ ವರ್ಷದ ಫಲ ಬಿಡುವ ಮಾವಿನ ಮರವೊಂದಕ್ಕೆ, ಪ್ರತಿ ವರ್ಷ ಈ ಕೆಳಕಾಣಿಸಿದ ರೀತಿಯಲ್ಲಿ ವೈಜ್ಞಾನಿಕವಾಗಿ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ.

ತಿಪ್ಪೆಗೊಬ್ಬರ ೫೦ ರಿಂದ ೧೦೦ ಕೆ.ಜಿ. ಪ್ರತಿ ಗಿಡಕ್ಕೆ
ರಂಜಕ ೪೦೦ ಗ್ರಾಂ
ಸಾರಜನಕ ೧೬೦ ಗ್ರಾಂ
ಪೊಟ್ಯಾಷ್ ೬೦೦ ಗ್ರಾಂ
ಜಿಂಕ್‌ಸಲ್ಫೇಟ್ ೧೦೦ ಗ್ರಾಂ
ಬೋರಾಕ್ಸ್ ೫೦ ಗ್ರಾಂ
ಸುಣ್ಣ ೨ ಕೆ.ಜಿ. (ಹುಳಿ ಮಣ್ಣು ಮತ್ತು ಮರಳುಭೂಮಿಗಳಲ್ಲಿ)

iii) ನೀರುಣಿಸುವಿಕೆ

ಹೂ ಬಿಡುವ ಮೊದಲು, ಹೂ ಬಿಟ್ಟಾಗ ಮತ್ತು ಕಾಯಿ ಕಚ್ಚುವವರೆಗೆ ನೀರುಣಿಸಬಾರದು. ಕಾಯಿಗಳು ಸಣ್ಣ ಬಟಾಣಿ ಕಾಳಿನಷ್ಟಾದಾಗ ಒಮ್ಮೆ ಮತ್ತು ನಂತರ ತಿಂಗಳಿಗೊಮ್ಮೆ ಒಂದು ಸಾರಿ ನೀರುಣಿಸಿದರೆ ಕಾಯಿಗಳ ಗಾತ್ರ ಮತ್ತು ಇಳುವರಿ ಹೆಚ್ಚುತ್ತದೆ. ಸ್ಪ್ರಿಂಕ್ಲರ್ ವಿಧಾನದಿಂದ ನೀರುಣಿಸಬಾರದು.

ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ

ಇತ್ತೀಚೆಗೆ ಶ್ರೀ ಎಸ್.ಬಿ. ಸಾಧನಿ, ಧಾರವಾಡ ಇವರ ಕ್ಷೇತ್ರದಲ್ಲಿ ದೂರದರ್ಶನ ಕೇಂದ್ರದ ಸಹಯೋಗದೊಂದಿಗೆ ಕೊಯ್ಲೋತ್ತರ ತಂತ್ರಜ್ಞಾನದ ಕುರಿತು ವಿವರವಾಗಿ ಚಿತ್ರೀಕರಣ ಮಾಡಲಾಗಿದ್ದು ಉಳಿದ ರೈತರ ಮಾಹಿತಿಗಾಗಿ ದೂರದರ್ಶನದಲ್ಲಿ ಸನಿಹದಲ್ಲೆ ಬಿತ್ತರಗೊಳ್ಳಲಿದೆ.

) ಕೊಯ್ಲು ಹಂತ : ರಫ್ತಿಗಾಗಿ ಬಲಿತ ಮಾವಿನ ಕಾಯಿಗಳನ್ನು ಈ ಕೆಳಕಂಡಂತೆ ಕಟಾವು ಮಾಡಬೇಕು.

ಬಾದಾಮಿ  ಕಾಯಿ ಕಚ್ಚಿದ ನಂತರ ೧೧೦ ದಿನಗಳ ಅವಧಿ.
ಬಂಗನ್ಪಲ್ಲಿ  ಕಾಯಿ ಕಚ್ಚಿದ ನಂತರ ೧೧೫ – ೧೨೦ ದಿನಗಳ ಅವಧಿ.
ಮಲ್ಲಿಕ  ಕಾಯಿ ಕಚ್ಚಿದ ನಂತರ ೧೧೫ – ೧೨೦ ದಿನಗಳ ಅವಧಿ.
ತೋತಾಪುರಿ  ಕಾಯಿ ಕಚ್ಚಿದ ನಂತರ ೧೩೦ – ೧೪೫ ದಿನಗಳ ಅವಧಿ.

) ಕಟಾವು ವಿಧಾನ : ರಫ್ತಿಗಾಗಿ ಬಲಿತ ಕಾಯಿಗಳನ್ನು ಕೊಯ್ಯುವಾಗ ಸೊನೆ (ರಸ) ಕಾಯಿಗಳ ಮೇಲೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ೧ ಸೆಂ.ಮೀ. ಉದ್ದದ ತೊಟ್ಟನ್ನು ಬಿಟ್ಟು ಕತ್ತರಿಸಿದರೆ ಸೊನೆ ಇಳಿವುದನ್ನು ತಪ್ಪಿಸಬಹುದಾಗಿರುತ್ತದೆ. ಚಿಕ್ಕ ವಯಸ್ಸಿನ ಮರಗಳಲ್ಲಿ ಗಿಡದ ಎತ್ತರ ಕಡಿಮೆ ಇದ್ದಾಗ ಇದು ಸಾಧ್ಯ. ಇದು ಸಾಧ್ಯವಿಲ್ಲದಾಗ ಹಣ್ಣುಗಳನ್ನು ಕಿತ್ತ ತಕ್ಷಣ ಸೊನೆಯನ್ನು ಒರೆಸಿ ತೊಟ್ಟಿನ ಭಾಗವನ್ನು ಕೆಳಮುಖವಾಗಿ ಇಡಬೇಕು. ಆಗ ಸೊನೆ ಕೆಳಮುಖವಾಗಿ ಬಸಿದು ಹೋಗುತ್ತದೆ.

) ವಿಂಗಡಣೆ (Grading) : ಹಣ್ಣುಗಳನ್ನು ಅವುಗಳ ಗಾತ್ರಕ್ಕನುಸಾರವಾಗಿ ವಿಂಗಡಿಸಬೇಕಾಗುತ್ತದೆ. ಯೂರೋಪ್ ಮಾರುಕಟ್ಟೆಗೆ ಕಳಿಸಬೇಕಾದಲ್ಲಿ ಹಣ್ಣಿನ ಗಾತ್ರವನ್ನು ಅನುಸರಿಸಿ ಂ, ಃ ಗುಂಪುಗಳನ್ನಾಗಿ ವಿಂಗಡಿಸಬೇಕಾಗುತ್ತದೆ.

ಗ್ರೇಡ್

ತೂಕ

೨೦೦ – ೩೫೦ ಗ್ರಾಂ (+ ೭೫ ಗ್ರಾಂ)
೩೫೧ – ೫೫೦ ಗ್ರಾಂ (+ ೧೦೦ ಗ್ರಾಂ)
೫೫೧ – ೮೦೦ ಗ್ರಾಂ (+ ೧೨೦ ಗ್ರಾಂ)

ಅಲ್ಲದೆ, ಗುಣಮಟ್ಟಕ್ಕನುಸಾರವಾಗಿ ಹಣ್ಣುಗಳನ್ನು ೩ ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

Extra Class ………… ಅತ್ಯುತ್ತಮ, ಹಾಗೂ ಎಲ್ಲಾ ರೀತಿಯಲ್ಲೂ ಸೂಕ್ತ.
Class – I …………. ಅತ್ಯುತ್ತಮ, ಸಾಕಷ್ಟು ಸೂಕ್ತ.
Class – II…………. ಉತ್ತಮ ಮತ್ತು ಕೆಲವೊಂದು ಕೊರತೆಗಳನ್ನು ನಿರ್ಲಕ್ಷಿಸಿದ್ದು.

) ಕೊಯ್ಲೋತ್ತರ ಚಿಕಿತ್ಸೆ : ಕಟುವಾದ ಕಾಯಿಗಳನ್ನು ಬೆನ್ಲೇಟ್ ಶಿಲೀಂದ್ರ ನಾಶಕ ದ್ರಾವಣದಲ್ಲಿ ಅದ್ದಿ ತೆಗೆಯಬೇಕು, (೧ ಗ್ರಾಂ/ಲೀ. ನೀರಿನಲ್ಲಿ ೨ ನಿಮಿಷ ನೆನೆಸುವುದು) ನಂತರ ದ್ರಾವಣದಿಂದ ಕಾಯಿಗಳನ್ನು ಹೊರತೆಗೆದು ಶುದ್ಧ ನೀರಿನಲ್ಲಿ ತೊಳೆಯಬೇಕು. ಇವುಗಳನ್ನು ನೆರಳಲ್ಲಿ, ಗಾಳಿಯಾಡುವಲ್ಲಿ ಇಟ್ಟು ವ್ಯಾಕ್ಸ್ಎಮಲ್ಷನ್ ದ್ರಾವಣದಲ್ಲಿ ಅದ್ದಿ ತೆಗೆದು ಅವುಗಳು ಒಣಗಿದ ನಂತರ ಪ್ಯಾಕಿಂಗ್ ಮಾಡಬೇಕು.

) ಪ್ಯಾಕಿಂಗ್ : ರಫ್ತಿಗಾಗಿ ಕಾಯಿಗಳನ್ನು ಪ್ಯಾಕಿಂಗ್ ಮಾಡಲು ಕೊರೊಗೇಟೆಡ್ ರಟ್ಟಿನ ಡಬ್ಬಗಳನ್ನು ಶಿಫಾರಸ್ಸು ಮಾಡಲಾಗಿದೆ. ಈ ಡಬ್ಬದ ಗಾತ್ರ ೪೦ ಸೆಂ.ಮೀ. X ೨೭. ಸೆಂ.ಮೀ. X ಸೆಂ.ಮೀ. (ಉದ್ದ X ಅಗಲ X ಎತ್ತರ) ಇದ್ದರೆ ಬಹುಯೋಗ್ಯ. ವಿವಿಧ ತಳಿಗನುಗುಣವಾಗಿ ಈ ಡಬ್ಬದಲ್ಲಿ ಬದಲಾವಣೆಗೆ ಅವಕಾಶವಿದೆ. ಈ ಡಬ್ಬದ ಮೇಲೆ ಹಣ್ಣಿನ ಚಿತ್ರ, ಟ್ರೇಡ್‌ಮಾರ್ಕ್, ತಳಿಯ ಹೆಸರು, ಉತ್ಪಾದನೆಯಾದ ಸ್ಥಳ, ದೇಶ ಇತ್ಯಾದಿ ವಿವರಗಳು, ಸಂಖ್ಯೆ ಅಥವಾ ತೂಕ ಇವುಗಳನ್ನು ನಮೂದಿಸುವುದು ಅವಶ್ಯ ಮತ್ತು ಅಪೆಡಾ ನಿಯಮಾವಳಿಯಂತೆ ‘ಭಾರತ ದೇಶದ ಉತ್ಪಾದನೆಎಂದು ನಮೂದಿಸಬೇಕು. ಈ ಡಬ್ಬಗಳಲ್ಲಿ ಕೆಳಭಾಗ, ಮೇಲ್ಭಾಗ ಹಾಗೂ ಎಲ್ಲಾ ಬದಿಗಳಲ್ಲಿ ಗಾಳಿಯಾಡಲು ಯಂತ್ರದಿಂದ ಗುಂಡಾಗಿ ಕೊರೆದ ೧.೫ ಸೆಂ.ಮೀ. ವ್ಯಾಸದ ರಂಧ್ರಗಳನ್ನು ಮಾಡಬೇಕು. ಡಬ್ಬದ ಒಳಗೆ, ಹಣ್ಣುಗಳ ಕೆಳಗೆ ತೆಳುವಾದ ಕಾಗದ ಹಣ್ಣುಗಳು ಒಂದಕ್ಕೊಂದು ತಾಗದಂತೆ ಕಂಪಾರ್ಟಮೆಂಟ್ ಮತ್ತು ಹಣ್ಣುಗಳಿಗೆ ಕುಷನ್‌ಸ್ಲೀವ್ ಅಳವಡಿಸಬೇಕಾಗುತ್ತದೆ. ಅಥವಾ ಪೇಪರ್ ಶ್ರೇಡ್‌ಗಳನ್ನು ಸಹ ಹಾಕುವುದರ ಮೂಲಕ ಹಣ್ಣುಗಳ ನಡುವಿನ ಘರ್ಷಣೆ ತಪ್ಪಿಸಬಹುದಾಗಿದೆ.

) ಪ್ರೀ ಕೂಲಿಂಗ್ : ಸೀಲ್ ಮಾಡಿದ ರಟ್ಟಿನ ಡಬ್ಬಗಳನ್ನು ೧೩ ಸೆಂಟಿಗ್ರೇಡ್ ಉಷ್ಣಾಂಶವಿರುವ ಮತ್ತು ಶೇ. ೮೫ ರಿಂದ ೯೦ ತೇವಾಂಶ ಭರಿತ ಶೀತಲಗೃಹದಲ್ಲಿ ಪ್ರೀ – ಕೂಲಿಂಗ್‌ಗೆ ಒಳಪಡಿಸಬೇಕಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ೪ ರಿಂದ ೬ ಗಂಟೆ ತಗಲುತ್ತದೆ. ತಣ್ಣನೆಯ ಗಾಳಿ ಬಿಡುವುದರ ಮೂಲಕ ಇದನ್ನು ಸಾಧಿಸಲಾಗುತ್ತದೆ.

) ಡಬ್ಬಗಳನ್ನು ಒಟ್ಟುಗೂಡಿಸುವಿಕೆ : ಪ್ರೀ – ಕೂಲಿಂಗ್ ಡಬ್ಬಗಳನ್ನು ಇನ್ನೂ ದೊಡ್ಡದಾದ ಸೂಚಿತ ಅಳತೆಯ ೧೧೦ ಸೆಂ.ಮೀ. X ೮೦ ಸೆಂ.ಮೀ. X ೧೩ ಸೆಂ.ಮೀ. ಅಳತೆಯ ಕಟ್ಟಿಗೆಯ ಡಬ್ಬಗಳಲ್ಲಿ ಸೇರಿಸಲಾಗುತ್ತದೆ. ನಂತರ ಇವುಗಳನ್ನು ಕಂಟೈನರ್‌ಗಳಲ್ಲಿ ಜೋಡಿಸಲಾಗುತ್ತದೆ. ಈ ಕಂಟೈನರ್‌ಗಳಲ್ಲಿ ಉಷ್ಣಾಂಶ ೧೨.೫ ಸೆಂಟಿಗ್ರೇಡ್ ಇರುತ್ತದೆ.

ಪ್ರೀ – ಕೂಲಿಂಗ್ ಮತ್ತು Pallatization ಕ್ರಮಗಳು ಮತ್ತು ಕಂಟೈನರ್‌ಗಳಲ್ಲಿ ಸೇರಿಸುವುದು ಹಣ್ಣುಗಳನ್ನು ಸಮುದ್ರದ (ಹಡಗಿನ) ಮೂಲಕ ರಫ್ತು ಮಾಡುವಲ್ಲಿ ಮಾತ್ರ ಪಾಲಿಸಬೇಕಾಗುತ್ತದೆ. ವಿಮಾನಗಳ ಮೂಲಕ ರಫ್ತು ಮಾಡುವುದಿದ್ದಲ್ಲಿ ಪ್ರೀ – ಕೂಲಿಂಗ್‌ಗಳ ಆವಶ್ಯಕತೆ ಇರುವುದಿಲ್ಲ. ರಟ್ಟಿನ ಕಾರ್ಡ್‌ಬೋರ್ಡ್ ಡಬ್ಬಗಳನ್ನು ನೇರವಾಗಿ ಸರಕು ಸಾಗಾಣಿಕೆಗಳಲ್ಲಿ ತುಂಬಿ ಸಾಗಾಣಿಕೆ ಮಾಡಲಾಗುತ್ತದೆ.

ಯೂರೋಪ್ ಗ್ಯಾಪ್ ಪ್ರಮಾಣಪತ್ರ ಕೆಳಕಂಡ ವಿಭಾಗಗಳಲ್ಲಿ ಲಭ್ಯವಿದೆ.

೧. ತಾಜಾ ಹಣ್ಣು ಮತ್ತು ತರಕಾರಿಗಳು.

೨. ತಾಜಾ ಹೂವುಗಳು ಹಾಗೂ ಆಲಂಕಾರಿಕ ವಸ್ತುಗಳು.

೩. ಮೀನುಗಾರಿಕೆ ಹಾಗೂ ಇತರ ಸಮುದ್ರಜನ್ಯ ವಸ್ತುಗಳು.

೪. ಕಾಫೀ.

೫. ಪ್ರಾಣಿಗಳು ಮತ್ತು ಕೃಷಿ.

೬. ಸಸ್ಯಾಭಿವೃದ್ಧಿ ಸಂಸ್ಥೆಗಳು (NURSERY).

ಪ್ರಮಾಣಪತ್ರ ಪಡೆಯುವ ಬಗೆ

ಆಸಕ್ತಿಯುಳ್ಳ ರೈತರು ತಮ್ಮ ತೋಟದ ವಿವರಗಳೊಂದಿಗೆ ಪ್ರಮಾಣೀಕರಿಸುವ ಸಂಸ್ಥೆಗೆ ಭೆಟ್ಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಸಂಸ್ಥೆಯ ಪ್ರತಿನಿಧಿಗಳು ರೈತರ ಹೆಸರುಗಳನ್ನು ಸಂಪರ್ಕಿಸಿ, ತೋಟದ ಪರಿಶೀಲನೆ ಹಾಗೂ ಪ್ರಮಾಣಪತ್ರದ ಒಟ್ಟು ಶುಲ್ಕವನ್ನು ತಿಳಿಸುತ್ತಾರೆ. ರೈತರು ಆ ಶುಲ್ಕವನ್ನು ಪಾವತಿಸಿದಾಗ, ಪ್ರಮಾಣೀಕರಿಸುವ ಸಂಸ್ಥೆಯಿಂದ ಪ್ರತಿನಿಧಿಗಳು ತೋಟ ಹಾಗೂ ದಾಖಲೆಗಳ ಪರಿಶೀಲನೆ ಮಾಡಿ ಪ್ರಮಾಣಪತ್ರದ ಬಗ್ಗೆ ತಿಳಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಪ್ರಮಾಣಪತ್ರ ಕೊಡುತ್ತಾರೆ. ಮುಖ್ಯವಾಗಿ ರೈತರು ಶುಲ್ಕವನ್ನು ಪಾವತಿಸಿದ ನಂತರ ಹಾಗೂ ಪ್ರಮಾಣೀಕರಿಸುವ ಸಂಸ್ಥೆಯ ಪ್ರತಿನಿಧಿಗಳು ಪರಿಶೀಲನೆಗೆ ಬರುವ ಮುನ್ನ ಸ್ವಯಂ ಪರಿಶೀಲನೆಯನ್ನು ಮಾಡಬೇಕು ಹಾಗೂ ‘ಉತ್ತಮ ಕೃಷಿ ಪದ್ಧತಿ’ಯ ನಿಯಮಾವಳಿಗೆ ಪದ್ಧತಿಗಳನ್ನು ಸರಿ ಮಾಡಬೇಕು. ಪ್ರಮಾಣಪತ್ರವನ್ನು ಒಬ್ಬರೆ ರೈತರು ಪಡೆಯಬಹುದು ಅಥವಾ ರೈತರ ಸಂಘಟನೆ ಮಾಡಿ ಪಡೆಯಬಹುದು. ಇದರ ವಿವರಗಳು ಪ್ರಮಾಣಪತ್ರ ಕೊಡುವ ಸಂಸ್ಥೆಯಲ್ಲಿ ದೊರೆಯುತ್ತದೆ.

ಗ್ರಂಥಋಣ

. ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು. ೨೦೦೭, ಕೃಷಿ ವಿಶ್ವವಿದ್ಯಾಲಯ, ಧಾರವಾಡ.