ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ೧೮೯೧ ರಲ್ಲಿ ಜನಿಸಿದರು. ೧೯೧೩ ರಲ್ಲಿ ಮೈಸೂರು ಸಿವಿಲ್ ಪರೀಕ್ಷೆಯನ್ನು ಪಾಸು ಮಾಡಿ ಅದೇವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು. ಸಣ್ಣಕಥೆಗಳ ಕ್ಷೇತ್ರದಲ್ಲಿ ಮಾಸ್ತಿಯವರದು ಬಹಳ ದೊಡ್ಡ ಹೆಸರಾಗಿದೆ. ಕೆಲವು ಸಣ್ಣ ಕಥೆಗಳು, ರಂಗನ ಮದುವೆ, ವೆಂಕಟಶಾಮಿಯ ಪ್ರಣಯ ಕಲ್ಮಾಡಿಯ ಕೋಣ, ಮೊಸರಿನ ಮಂಗಮ್ಮ, ಇವು ಅವರ ಕಥೆಗಳು.

ರಂಗಪ್ಪನ ಕಥೆಗಳು, ಹೊಸಸಾಹಿತ್ಯಲೋಕವೊಂದನ್ನು ತೆರೆದು ತೋರಿದವು. ಈ ಕಥೆಗಳಲ್ಲಿ ಇವರು ಶ್ರೇಷ್ಟತೆಯ ಅಂಶಗಳನ್ನು ಬಳಸಿಕೊಂಡಿದ್ದಾರೆ. ಶ್ರೀನಿವಾಸರು ಸಣ್ಣಕಥೆಯನ್ನು ತಮ್ಮ ಅಬಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿ ಮಾಡಿಕೊಂಡರು. ಕೆಲವು ಸಣ್ಣಕಥೆಗಳು ಎಂಬ ಪುಸ್ತಕ ೧೯೨೦ ರಲ್ಲಿ ಪ್ರಕಟವಾಯಿತು.

ಇದು ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಠವಾದ ಮೊದಲ ಪುಸ್ತಕವೆನಿಸಿಕೊಂಡಿತು. ಹಾಗೆ ನೋಡಿದರೆ ಸಣ್ಣ ಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಹೋದರೂ ಕಥೆಗಳಿಗೂ ಮಾಸ್ತಿಯವರಿಗೂ ಒಂದು ರೀತಿಯ ಅರಿಯದ ಬಾಂಧವ್ಯ. ಆದ್ದರಿಂದಲೇ ಮಾಸ್ತಿಯವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು ಕನ್ನಡದ ಆಸ್ತಿಯಾಗಿಯೇ ಅಮರರಾಗಿದ್ದಾರೆ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ, ಜೀವನದ ನಿಚ್ಚಳ ಅನುಭವಗಳು ತುಂಬಾ ಸರಳವಾಗಿದ್ದು ಎಂತಹ ಓದುಗರನ್ನೂ ತನ್ನೊಳಗೆ ಆವರಿಸಿಕೊಂಡು ಬಿಡುವ ಗತ್ತು ಮಾಸ್ತಿಯವರ ಸಾಹಿತ್ಯದ್ದು. ವೆಂಕಟಶಾಮಿಯ ಪ್ರಣಯ, ದಲ್ಲಿ ನಾಯಿಂದರ ಮಗನಾದ ವೆಂಕಟಶಾಮಿ ದೊಂಬರ ಹುಡುಗಿಯನ್ನು ಸಮಾಜಕ್ಕೆ ವಿರೋದವಾಗಿ ಪ್ರೀತಿಸಿ ಅವಳೊಡನೆ ಓಡಿಹೋಗುತ್ತಾನೆ. ಇವರ ಎಲ್ಲ ಸಾಮಾಜಿಕತೆಗಳೂ ಈ ಜೀವನ ಶ್ರದ್ದೆಯನ್ನು ಪ್ರತಿಬಿಂಬಿಸುತ್ತವೆ. ಮಾಸ್ತಿಯವರ ಸಾಹಿತ್ಯ ಸೃಷ್ಟಿ ಸಣ್ಣಕಥೆಗಳಿಗಷ್ಟೇ ಸೀಮಿತವಾಗಿಲ್ಲ. ಕವನ, ಕಾದಂಬರಿ, ನಾಟಕಗಳನ್ನೂ ಬರೆದಿದ್ದಾರೆ. ಸುಬ್ಬಣ್ಣ, ಚನ್ನಬಸವ ನಾಯಕ, ಚಿಕವೀರರಾಜೇಂದ್ರ೧೯೫೯ ಇವು ಅವರ ಕಾದಂಬರಿಗಳು. ಚನ್ನಬಸವನಾಯಕದಲ್ಲಿ ಕೆಲವು ವ್ಯಕ್ತಿಗಳು ಐತಿಹಾಸಿಕವಾಗಿ ಮತ್ತು ಕೆಲವು ಕಲ್ಪಿತವಾಗಿವೆ. ರಾಜಕೀಯದ ತಂತ್ರ-ಪ್ರತಿತಂತ್ರಗಳ ಈ ಸಂವಿಧಾನದ ಮೇರೆಗೆ ಮಾಸ್ತಿಯವರು ಅಳಿಯಲಾಗದ ಸಂಪ್ರದಾಯ, ಸಂಸ್ಕೃತಿಗಳ ದರ್ಶನವನ್ನು ತೋರಿದ್ದಾರೆ. ಚಿಕವೀರ ರಾಜೇಂದ್ರ ಕೊಡಗಿನ ಕೊನೆಯ ಅರಸನಾದ ಚಿಕವೀರರಾಜೇಂದ್ರ ನೈತಿಕ ಅಧಃಪತನದ ಮೂಲಕ ರಾಜ್ಯವನ್ನು ಕಳೆದುಕೊಂಡ ದುರಂತ-ಚಿತ್ರ ಈ ಕಾದಂಬರಿಯ ಕಥಾವಸ್ತುವಾಗಿದೆ. ಚಿಕವೀರರಾಜೇಂದ್ರ ಕಾದಂಬರಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಶಾಂತ, ಮತ್ತು ಮಂಜುಳ ಎಂಬ ಸಾಮಾಜಿಕ ನಾಟಕಗಳು ೧೯೨೩ ಪ್ರಕಟಗೊಂಡಿವೆ. ಚಂಡಮಾರುತಗಿಡಿಣಿಥಥಿ ಲಿಯರ್ ಮಹಾರಾಜಒಟಿಣಟ ಡಛಿತಿ ನಾಟಕಗಳನ್ನು ಭಾಷಾಂತರಿಸಿದ್ದಾರೆ. ಹೀಗೆ ಸತ್ವ, ಸಂಖ್ಯೆ, ಗುಣವೈವಿದ್ಯದಲ್ಲಿ ಎಂದೂ ಕಡೆಗಣಿಸದಂತಹ ಇವರು ನವೋದಯ ಕವಿಗಳಲ್ಲಿ ಪ್ರಮುಖರಾಗಿದ್ದಾರೆ.

ಮಾಸ್ತಿಯವರ ಸಾಹಿತ್ಯ ಸೃಷ್ಟಿಗಿಂತ ದೊಡ್ಡದು ಅವರ ವ್ಯಕ್ತಿತ್ವ ಅವರ ಸರಳ ಜೀವನ, ಉದಾರತೆ, ಸ್ನೇಹಶೀಲತೆ, ಉದಾತ್ತಭಾವನೆ, ಅಪೂರ್ವವಾದುದು. ಈ ಗುಣಗಳಿಂದಾಗಿ ಮಾಸ್ತಿ ಘನವಂತ ವ್ಯಕ್ತಿಯಾಗಿದ್ದಾರೆ. ೧೯೭೨ ರಲ್ಲಿ ಅವರ ೮೧ನೇ ಹುಟ್ಟು ಹಬ್ಬದಲ್ಲಿ ಶ್ರೀನಿವಾಸ ಎಂಬ ಸಂಭಾವನಾ ಗ್ರಂಥವನ್ನು ಅವರಿಗೆ ಅರ್ಪಿಸಲಾಯಿತು.