“ಗುರೂಜಿ ಎಂಬ ಹೆಸರು ಲೋಕಪರಿಚಿತ. “ಗುರೂಜಿ” ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕರು. ಅವರ ಹೆಸರು ಮಾಧವ ಸದಾಶಿವ ಗೊಳಲಕರ‍್.

ಎತ್ತರದ ನಿಲುವು, ಗಂಭೀರ ನಡಿಗೆ, ಹೆಗಲ ಮೇಲೆ ಹರಡಿದ ಉದ್ದನೆಯ ಕೇಶರಾಶಿ. ಎದೆಯವರೆಗೆ ಬೆಳೆದ ಕೆದರುಗುಡ್ಡ. ಪ್ರತಿಭೆ ಪಾಂಡಿತ್ಯಗಳಿಂದ ಬೆಳಗುವ ಮುಖ. ಇದಿರಿಗೆ ನಿಂತರೆ ತಲೆಬಾಗಿ ಕೈಮುಗಿಯಬೇಕು ಎನ್ನಿಸುವ ಪ್ರಖರ ವ್ಯಕ್ತಿತ್ವ. ಇವರು ಗುರೂಜಿ.

ದೇಶದ ಲಕ್ಷಗಟ್ಟಲೆ ತರುಣರಿಗೆ ದೇಶಭಕ್ತಿಯ ದರ್ಶನ ಮಾಡಿಸಿದರು. ಭಾರತೀಯ ತತ್ವಜ್ಞಾನ ತಿಳಿಯ ಹೇಳಿದರು. ಸನ್ಮಿತ್ರನಂತೆ ದೇಶಬಾಂಧವರ ಕಷ್ಟ ಸುಖಗಳಲ್ಲಿ ಪಾಲುಗೊಂಡರು. ಭಾರತ ಮಾತೆಯ ಸುಪುತ್ರರನ್ನು ಆಕೆಯ ಆರಾಧನೆಗೆ ಅಣಿಗೊಳಿಸಿದರು. ಸಂಘಟನೆಯಲ್ಲಿ ಶಕ್ತಿಯಿದೆ. ಎಂದು ಸಾಧಿಸಿ ತೋರಿಸಿದರು.   ತಮ್ಮ ಬದುಕಿನ ಅಮೂಲ್ಯವದ ೩೩ ವರ್ಷಗಳ ಕಾಲದೇಶದಾದ್ಯಂತ ನೂರಾರು ಬಾರಿ ಸಂಚರಿಸಿ ಜನಜೀವನದಲ್ಲಿ ದೆಶಪ್ರೇಮದ ಅಮರಜ್ಯೋತಿಯನ್ನು ಬೆಳಗಿದರು. ವ್ಯಕ್ತಿಗತ ಸಾಧನೆಯಿಂದ ಅಧ್ಯಾತ್ಮದ ಶೀಖರ ಸೇರಿದರು. ಬಾಲ್ಯ ತಾರುಣ್ಯಗಳಲ್ಲಿ ವಿದ್ವತ್ತಿನ ಭಂಡಾರವಾಗಿ ಬೆಳೆದರು. ಇತಿಹಾಸ ಧರ್ಮ,ಸಂಸ್ಕೃತಿಗಳ ಮತ್ತು ವಿಜ್ಞಾನ , ಕಲೆ, ಸಮಾಜ ಶಾಸ್ತ್ರ, ಅರ್ಥ ಶಾಸ್ತ್ರಗಳ ಪ್ರಕಾಂಡ ಪಾಂಡಿತ್ಯ ಗಳಿಸಿ ಅವೆಲ್ಲವನ್ನೂ ತನ್ನ ದೇಶ ಸೇವೆಗೆ ಮೀಸಲಿಟ್ಟರು. “ರಾಷ್ಟ್ರೀಯ ಸ್ವಯಂ ಸೇವಕ ಸಂಘ”ವನ್ನು ದೇಶದಾದ್ಯಂತ ಪ್ರಸರಿಸಿ ಲಕ್ಷಾಂತರ ಕಾರ್ಯದಕ್ಷ, ದೇಶಭಕ್ತ ಸ್ವಯಂ ಸೇವಕರನ್ನು ತಯಾರು ಮಾಡಿದರು.

ಮನೆತನ, ಬಾಲ್ಯ:

೧೯೦೬ರ ಫೆಬ್ರವರಿ ೧೯ ರಂದು ಗರೂಜಿ ನಾಗಪುರದಲ್ಲಿ ಜನಿಸಿದರು. ತಂದೆ ಸದಾಶಿವರಾವ ಗೊಳವಲಕರ, ತಾಯಿ ಲಕ್ಷ್ಮೀಬಾಯಿ, ಗೊಳವಲಕರ‍್ ವಂಶಜರು ಮೂಲತಃ ರತ್ನಗಿರಿ ಜಿಲ್ಲೆಯ ಗುಳ್ ವಲ್ಲೀ ಗ್ರಾಮದವರು.

ಸದಾಶಿವರಾಯರು “ಭಾವೂಜಿ” ಎಂದೇ ಪ್ರಸಿದ್ಧರು. ಮೊದಲು ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದು, ನಂತರ ಅಧ್ಯಾಪಕರಾದರು. ಗುರೂಜಿಯವರ ನಾಮಕರದ ಹೆಸರು ಮಾಧವರಾವ. ಮಹಾರಾಷ್ಟ್ರದ ಪದ್ಧತಿಯಂತೆ ಹೆಸರಿನ ಜೊತೆಗೆ ತಂದೆ ಹೆಸರು, ಕುಲನಾಮ ಕೂಡಿಕೊಂಡು ಮಾಧವರಾವ್ ಸದಾಶಿವರಾವ ಗೊಳವಲಕರ ಎಂದು ಪೂರ್ಣ ಹೆಸರಾಯಿತು.

ಮಾಧವನಿಗೆ ಒಬ್ಬ ಅಣ್ಣನಿದ್ದ. ಅವನ ಹೆಸರು ಅಮೃತ ಮಾಧವನನ್ನು ಮನೆಯಲ್ಲಿ “ಮಧು ” ಎಂದೇ ಕರೆಯುತ್ತಿದ್ದರು. ತಾಯಿ ಲಕ್ಷ್ಮೀಬಾಯಿ ದೈವಭಕ್ತೆ, ಅಣ್ಣ ಅಮೃತನದು ಮೇದು ಸ್ವಭಾವ. ಮಧು ತುಂಬ ತುಂಟ ಆಟದಲ್ಲಾಗಲಿ, ಪಾಠದಲ್ಲಾಗಲೀ ಜಾಣ. ಶಾರೀರಿಕವಾಗಿ ಬಲಿಷ್ಠವೆನ್ನುವಂತಿಲ್ಲ. ಆದರೆ ಚಟುವಟಿಕೆಯ ಮಿಡಿ, ತಂದೆ ಪೂಜೆಗೆ ಕುಳಿತರೆ ಮಧು ಹತ್ತಿರವೇ ಕುಳಿತು ಮಂ‌ತ್ರಗಳನ್ನು ಕೇಳಿಯೇ ಕಲಿಯುತ್ತಿದ್ದ.  ಒಮ್ಮೆ ಹೇಳಿದರೆ ಸಾಕು, ಯಾವುದನ್ನೂ ಕಲಿತುಬಿಡುತ್ತಿದ್ದ.ಕಥೆ ಕೇಳಿದರೆ ಅದನ್ನು ಇನ್ನಷ್ಟು ಹಿಗ್ಗಿಸಿ ಇತರರಿಗೆ ಹೇಳಬೇಕು. ಹಾಗಾಗಿ ಗೆಳೆಯರ ಗುಂಪು ಬೆನ್ನಿಗೇ ಇರುತ್ತಿತ್ತು . ಎಲ್ಲವನ್ನೂ ತಿಳಿಯುವ , ಕಲಿಯುವ ಅದಮ್ಯ ಕುತೂಹಲ , ಉತ್ಸಾಹ.

ವಿದ್ಯಾಭ್ಯಾಸ :

ತರಗತಿಯ ಪಾಠಗಳನ್ನು ಮನೆಯಲ್ಲೇ ಓದಿ ಮುಗಿಸುತ್ತಿದ್ದ ಮಧು. ತರಗತಿಯಲ್ಲಿ ಇತರ ಪುಸ್ತಕ ಓದುತ್ತಿದ್ದರೂ ಅಧ್ಯಾಪಕರ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡುತ್ತಿದ್ದ.

ಭಾವೂಜಿಗೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆಗುತ್ತಿತು. ಅಲ್ಲೆಲ್ಲ ಮಧುವಿನ ಗೆಳೆಯರ ಗುಂಪು ಬೆಳೆಯುತ್ತಿತ್ತು.  ಸಂಸ್ಕೃತ, ಇಂಗ್ಲೀಷ್ , ಹಿಂದಿ ಭಾಷೆಗಳ ಜೊತೆಗೆ ಮನೆಮಾತು ಮರಾಠಿ, ಇವೆಲ್ಲವನ್ನೂ ಒಟ್ಟಿಗೆ ಕಲಿಯುತ್ತಿದ್ದ ಮಧು. ಗೆಳೆಯರಿಗೆ ಇಂಗ್ಲೀಷ್ನಲ್ಲೇ ಪತ್ರ ಬರೆಯುತಿದ್ದ. ಅವನು ದಾರಿಯಲ್ಲಿ ನಡೆಯುವಾಗ ಎಂದೂ ಒಂಟಿಯಾಗಿ ಹೋಗುತ್ತಿರಲಿಲ್ಲ. ಯಾವಾಗಲೂ ಒಂದು “ಟೋಲಿ”  ಅವನ ಜೊತೆಗೆ ಇರುತ್ತಿತು.

ಒಮ್ಮೆ ಒಬ್ಬನ ಗೆಳೆತನ ಸಂಪಾದಿಸಿದರೆ ಮಧು ಮತ್ತೆ ಆತನನ್ನು ಮರೆಯುತ್ತಿದ್ದಿಲ್ಲ. ಪತ್ರವ್ಯವಹಾರದ ಸಂಪರ್ಕ ಇರಿಸಿಕೊಂಡು ಗೆಳೇತನ ಬೆಳೆಸುತ್ತಿದ್ದ.

೧೯೧೯ರಲ್ಲಿ ನಡೆದ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿಯೂ ಮಾಧವ ಮೊದಲಿಗನಾಗಿ ಉತ್ತೀರ್ಣನಾದ.

ಮೆಟ್ರಿಕ್ ಪರೀಕ್ಷೆ ಪಾಸಾಯಿತು. ಶಾಲೆಯ ವ್ಯಾಯಾಮ ಶಿಕ್ಷಕರಿಗೆ ಮಾಧವನನ್ನು ಕಂಡರೆ ಹೆಚ್ಚಿನ ಪ್ರೀತಿ. ಕಾರಣ ಅವನು ಶಾರೀರಿಕ ಕಸರತ್ತಿನಲ್ಲಿಯೂ ಕುಶಲಿ. ಒಂದು ವರ್ಷ ಆವನನ್ನು ಅಲ್ಲಿಯೇ ಉಳಿಸಿಕೊಂಡರು. ಕಲಿಯಬೇಕಾದುದನ್ನು ಕ್ರಮಬದ್ಧವಾಗಿ ಕಲಿತು ಸಫಲತೆ ಸಾದಿಸುವುದು ಬಾಲ್ಯದಿಂದ ಮಾಧವನ್ನಲ್ಲಿ ಬೆಳೆದುಬಂದಿದ್ದ ಪ್ರವೃತ್ತಿ.

ಕಾಲೇಜು ವಿದ್ಯಾರ್ಥಿ:

ತಂದೆ ಬಾವೂಜಿಗೆ ಮಗನನ್ನು ಡಾಕ್ಟರ ಮಾಡಬೇಕೆಂಬ ಹಂಬಲ. ಹೀಗಾಗಿ ೧೯೨೨ರ ಜೂನನಲ್ಲಿ ಮಾ.ಸ.ಗೊಳವಲಕರ‍್ ಪುಣೆಯ ಫರ್ಗುಸನ್ ಕಾಲೇಜಿಗೆ ವಿಜ್ಞಾನದ ಪ್ರಥಮ ತರಗತಿಗೆ ಸೇರಿದರು. ಅದು ವೈದ್ಯಕೀಯ ಶಿಕ್ಷಣಕ್ಕೆ ದಾರಿ. ಆದರೆ ಪುಣೆಯ ಕಾಲೇಜಿನಲ್ಲಿ “ಆ ಪ್ರಾಂತದವರಿಗೆ ಮಾತ್ರ ಜಾಗ” ಎಂಬ ಕಾನೂನು ಬಂದು ಮಾಧವರಾವ್ ಹಿಂತಿರುಗಿ ನಾಗಪೂರದ ಹೆಸ್ಲಾಪ್ ಕಾಲೇಜು ಸೇರಿದರು. ನಾಗಪೂರದ ಸೋದರಮಾವನ ಮನೆಯಲ್ಲಿ ಊಟ, ವಸತಿ.

ಕಾಲೇಜಿನಲ್ಲಿ  ಮಾಧವರಾವ್ ಮೇಧಾವಿ ವಿದ್ಯಾರ್ಥಿ. ಒಮ್ಮೆ ತರಗತಿಯಲ್ಲಿ ಫ್ರೊಫೆಸರ ಗಾರ್ಡಿನರವರು ಬೈಬಲ್ನ ಪಾಟ ಮಾಡುತ್ತ ಒಂದು ಸೂಕ್ತಿಯನ್ನು ತಪ್ಪಾಗಿ ಉದಾಹರಿಸಿದರು. ಆಗ ಮಾಧವರಾವ   ಎದ್ದು ನಿಂತು “ಅದು ಹಾಗಲ್ಲ ಹೀಗೆ” ಎಂದರು. ತರಗತಿಗೆ ಬೈಬಲ್ ನ ಪ್ರತಿ ತರಿಸಿ ನೋಡಿದಾಗ ಮಾಧವರಾವ್ ಹೇಳಿದುದು ಸರಿಯಾಗಿತ್ತು.  ಗಾರ್ಡಿನರ‍್ವರು ತರುಣ ವಿದ್ಯಾರ್ಥಿಯ ಪ್ರತಿಭೆಯನ್ನು ಪ್ರಶಂಶಿಸಿದರು. ಸಸ್ಯಶಾಸ್ತ್ರದ ಅಧ್ಯಾಪಕರು ಪಾಠ ಮಾಡುತ್ತಾ “ಎಲ್ಲೂ ಸಿಗುವುದಿಲ್ಲ” ಎಂದು ಹೇಳಿ ಒಂದು ಜಾತಿಯ ಸಸ್ಯವನ್ನು ವಿವರಿಸಿದಾಗ ಮರುದಿನ ಊರ ಹಳೆಯಸೇತುವೆಯ ಕೆಳಗಿನಿಂದ  ಆ ಸಸ್ಯ ತಂದು ಮಾಧವರಾವ್ ತರಗತಿಯಲ್ಲಿ ತೋರಿಸಿ ತನ್ನ ಸೂಕ್ಷ್ಮ ನಿರೀಕ್ಷಣೆಯ ಸಾಮರ್ಥಯವನ್ನು ಪ್ರದರ್ಶಿಸಿದ್ದರು.  ೧೯೨೪ರಲ್ಲಿ ಇಂಟರಮಿಡಿಯೇಟ್ ಪರೀಕ್ಷೆಯಲ್ಲಿ ಅವರು ಪ್ರಥಮ ದರ್ಜೆಯಲ್ಲಿ ಪಾಸಾದರು.

ಮಾಧವರಾವ್ ಬಿ.ಎಸ್ಸ.ಸಿ. ಓದಲು ಕಾಶಿಯ ಹಿಂದೂ ವಿಶ್ವವಿದ್ಯಾಲಯ ಸೇರಿದರು.

ಹೃದಯ ಗೆದ್ದ ಕಾಶಿ:

ಎಲ್ಲವನ್ನೂ ಕಲಿಯಬೇಕು, ಸಕಲವನ್ನೂ ತಿಳಿಯಬೇಕೆಂಬ ಹಂಬಲದ ಮಾಧವರಾವ್ ಕಾಶಿಗೆ ಬಂದು ಪುಸ್ತಕಗಳ ಮೇಲೆ ಮುಗಿಬಿದ್ದರು. ವೇದಾಂತ, ಪುರಾಣ, ಶಾಸ್ತ್ರಗಳ ಅಧ್ಯಯನಕ್ಕಾಗಿ ಹೆಚ್ಚಿನ ಸಂಸ್ಕೃತ ಕಲಿತರು. ವೇದಾಂತ ವಿಷಯ ಚರ್ಚಿಸಲು ಬರುತಿದ್ದ ಗೆಳೆಯರಿಗಾಗಿ  ಹೆಚ್ಚು ಹೆಚ್ಚು ಓದಿದರು. ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ತನ್ನ ವಿಷಯವಲ್ಲದಿದ್ದರೂ ಸಹಪಾಠಿಗಳಿಗೆ ವಿವರಿಸಲು ಕಲಿತರು. ಜೊತೆಗೆ ಈಜು, ಯೋಗಭ್ಯಾಸ, ಕೊಳಲು  ನುಡಿಸುವುದು, ಸಿತಾರ‍್ ನುಡಿಸುವುದು, ಓದುವುದರಲ್ಲಿ ತಲ್ಲೀನರಾದರೆ ಚೇಳೂ ಕುಟುಕಿದರೂ ಚಿಂತಿಲ್ಲ. “ಆದು ಕುಟುಕಿರುವುದು ಕಾಲಿಗೆ”- ಎಂದು ಓದು ಮುಂದುವರೆಸುತ್ತಿದ್ದರು. ಜ್ವರ ಬಂದಿದರೆ”, ಅದರ ಪಾಡಿಗೆ ಅದು, ನನ್ನ ಪಾಡಿಗೆ ನಾನು” ಎಂದು ಓದುತ್ತಿದ್ದರು. ಕೋಣೆ ತುಂಬ ಪುಸ್ತಕಗಳ ರಾಶಿ. ಓದು, ಓದು, ಓದು ಮೂರು ಹೊತ್ತೂ ಅದೇ ಕೆಲಸ. ಉಳಿದ ವೇಳೆ ಚರ್ಚೆ. ಬೆಳಿಗ್ಗೆ ಈಜು, ಸಂಜೆ ವ್ಯಾಯಾಮ, ನಡುನಡುವೆ ಊರಿಗೆ ಬಂದಾಗ ಮಗನ ಗಂಭೀರ  ಮುಖ ನೋಡಿ ತಂದೆ ತಾಯಿಗೆ ಸಂತಸ. ಅನುಭವದಿಂದ ಅರಳೀದ ತೇಜಸ್ಸು ಕಂಡು ಖುಷಿ.

೧೯೨೬ರಲ್ಲಿ ಬಿ.ಎಸ್.ಸಿ. ಮುಗಿಯಿತು. ಆದರೂ ಕಾಶೀ ಬಿಟ್ಟು ಬರುವುದು ಸಾಧ್ಯವಾಗಲಿಲ್ಲ. ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್.ಸಿ.ಮಾಡುವ ನೆವಹೂಡಿ, ಮತ್ತೇರಡು ವರ್ಷ ಕಾಶಿಯಲ್ಲಿಯೇ ಉಳಿದರು. ಆಗ ಓದಿದ್ದು, ರಾಮಕೃಷ್ಣ ಪರಮಹಂಸರ, ವಿವೇಕಾನಂದರ ಪುಸ್ತಕಗಳನ್ನು. ಆಗ ಕಾಶಿಯಲ್ಲಿ “ಥಿಯಾಸಫಿ” ಎಂಬ ಹೊಸ ಚಿಂತನ ಪದ್ಧತಿ ಬೆಳೆಯುತ್ತಿತ್ತು. ಮಾಧವರಾವ್ ಆ ಗುಂಪಿನ ಸದ್ಯರಾದರು. ವಿಚಾರಧಾರೆರಯ ಜೊತೆಗೆ ಉಡುಗೆ ತೊಡುಗೆಯಲ್ಲಿಯೂ ಬದಲಾವಣೆ ಉಂಟಾಯಿತು. ಉದ್ಧನೆಯ ಬಿಳಿಯದೊಗಲೆ ಜುಬ್ಬಾ, ಸಡಿಲವಾದ ಬಿಳಿಯ ಪಾಯಿಜಾಮ, ಇದು ಥಿಯಾಸಫಿಯರ ಉಡುಗೆ. ಮಾಧವರಾವ್ ಗೆ ಈ ಉಡುಗೆ ಹಿಡಿಸಿತು. ೧೯೨೮ರಲ್ಲಿ ಎಂ.ಎಸ್.ಸಿ. ಯೂ ಮುಗಿಯಿತು. ಇಷ್ಟವಿಲ್ಲದೆ ಕಾಶಿಯಿಂದ ಬಂದರು.

ಮದರಾಸಿನಲ್ಲಿ :

ಮತ್ಸ್ಯ ಶಾಸ್ತ್ರದಲ್ಲಿ ಪಿ.ಎಚ್.ಡಿ. ಮಾಡಲು ಮದರಾಸಿಗೆ ಹೋದರು. ಹಾಗಾದರೂ ಮಗ ಡಾಕ್ಟರ ಎಂದಾಗಲಿ ಎಂಬ ಆಸೆ ತಂದೆ. ಮದರಾಸಿನಲ್ಲಿ ಬಹಳ ಕಷ್ಟದ ಜೀವನ. ೫೦ ರೂಪಾಯಿಗಳಲ್ಲಿ ಎಲ್ಲ ಆಗಬೇಕು. ತನ್ನ ಕೆಲಸ ತಾನೇ ಮಾಡಿಕೊಳ್ಳಬೇಕು. ತಿಳೀಯದ ಭಾಷೆ, ಅರಿಯದ ಗೆಳೇಯರು. ಹೀಗಾಗಿ ಇಂಗ್ಲೀಷಿಗೆ ಇನ್ನಷ್ಟು ಮೆರಗು ಬಂದಿತು. ಚಿಂತನಕ್ಕೆ ಏಕಾಂತ ದೊರೆಯಿತು. ಕಾಶಿಯಲ್ಲಿ ಕುಡಿಯೊಡೆದ ದೇಶ ಪ್ರೇಮ ಮದರಾಸಿನಲ್ಲಿ ಇದ್ದಾಗ ಬಲಿತು ಬೆಳೆಯಿತು. “ದೇಶಕ್ಕಾಗಿ ಏನನ್ನಾದರೂ ಸಾಧಿಸಲೇಬೇಕು” ಎಂಬ ಅವರ ಸಂಕಲ್ಪ ದೃಢವಾಯಿತು.  ನಡೆನುಡಿಗಳಲ್ಲಿ ನಿಖರತೆ, ಮಾನಸಿಕ, ಶಾರೀರಿಕ ಶಕ್ತಿಯಲ್ಲಿ ದೃಢನಂಬಿಕೆ, ಬೌದ್ಧಿಕ ಬೆಳವಣಿಗೆಯಿಂದ ಮಾಡಿದ ನಿರ್ಭಯ ಸ್ವಭಾವ. ಒಮ್ಮೆ ಹೋಟೆಲೊಂದರಲ್ಲಿ ಉಪಹಾರ ಸ್ವೀಕರಿಸುತ್ತಿರುವಾಗ ಟೇಬಲ್ಲಿಗೆ ಹಾಕಿದ್ದ ಗಾಜಿನ ಗಟ್ಟಿತನದ ಕುರಿತು ಚರ್ಚೆ ಬಂತು. “ಈ ಗಲಾಟೆಯಲ್ಲಿ ಇದು ಹೇಗೆ ಉಳಿಯುತ್ತದೆ? ಎಂಬ ತಮಾಶೆ ಮೂಡಿತು. ” ಅದು ಅಷ್ಟು ಸುಲಭದಲ್ಲಿ ಒಡೆಯುವುದಿಲ್ಲ” ಎಂದು ಹೋಟೇಲು ಮಾಲೀಕ. “ಒಂದೇ ಏಟಿಗೆ ಒಡೆದರೆ ಎಮಬ ಸವಾಲು ಮಾಧವರಾಯರದು. “ಒಂದೇ ಏಟಿಗೆ ಒಡೆದರೆ”  ನಿಮಗೆ ಮತ್ತು ನಿಮ್ಮಗುಂಪಿಗೆ ಪು‌ಕ್ಕಟೆ ತಿಂಡಿ ತಿನಿಸು ಎಂದ ಹೋಟೇಲು ಮಾಲೀಕ. ಈ ಚರ್ಚೆ ಕೇಳಿ ಸುತ್ತಮುತ್ತ ಕುಳಿತವರು ಎದ್ದು ಬಂದರು. ಗೆಳೆಯರು ಮಾಧವರಾಯರ ಮುಖ ನೋಡಿದರು. “ಹಾಗಾದರೆ ಒಡೆಯಲೇ?:” ಎಂದರು ಮಾದವರಾಯರು. “ಒಡೆಯಿರಿ” ಎಂದರು ಗೆಳೇಯರು. ಎದ್ದುನಿಂತು ಮುಷ್ಠಿ ಬಿಗಿದು ಕೈ ಎತ್‌ಇತ ಬೀಸಿ ಬಾರಿಸಿದ ಹೊಡೆತಕ್ಕೆ ಮೇಜಿಗೆ ಹಾಕಿದ್ದ ಗಾಜಿನ ಹಲಗೆ ಪುಡಿಪುಡಿಯಾಯಿತು. ಹೋಟೇಲ ಮಾಲೀಕ, ಗೆಳೆಯರು ಸುತ್ತಲ ಜನ ಬೆರಗಾಗಿ ನೋಡಿದರು.

ಒಮ್ಮೆ ಹೈದರಾಬಾದಿನ ನಿಜಾಮರು ಮದರಾಸಿನ ಮತ್ಸಾಲಯ ಸಂದರ್ಶನಕ್ಕೆ ಬರುವ ಕಾರ್ಯಕ್ರಮ. ಅವರು ಬಂದಾಗ ಟಿಕೆಟ್ ಪಡೆದು ಬಿಡುವುದೇ, ಹಗೆ ಬಿಡುವದೇ ಎಂಬ ಸಮಸ್ಯೆ ಬಂದಾಗ ಮಾಧವರಾವ್” ನಿಯವನ್ನು ಯಾರು ಮುರಿಯುವಂತಿಲ್ಲ” ವೆಂದು ಟಿಕೆರ್ಟ ಪಡೆದೇ ನಿಜಾಮರನ್ನು ಮತ್ಸಾಲಯ ನೋಡಲು ಬಿಟ್ಟರು. ಭಯಪಟ್ಟಿದ್ದ ಅಧಿಕಾರಿಗಳು ಸಂತಸದ ನಿಟ್ಟಿಸಿರು ಬಿಟರಟರು. ಚಿಗುರು ಮೀಸೆಯ ತರುಣ; ಮದುವೆ, ಮಡದಿ, ಮಕ್ಕಳು ಎಂಬ ಯೋಚನೆ ಬರುವುದು ಸಹಜ. ಆದರೆ ಮಾಧವರಾಯರ ಮನಸ್ಸಿನ ಹೊಸಲು ದಾಟಿ ಈ ಭಾವನೆಗಳು ಬರಲೇಇಲ್ಲ.   ಈ ಸಂಸಾರದ ಗಡಿದಾಟಿ ಸಂನ್ಯಾಸ ಸ್ವೀಖರಿಸಿ ಹಿಮಾಲಯದ ಏಕಾಂತದಲ್ಲಿ ಕುಳಿತು ಅಖಂಡ ತಪ್ಪಸ್ಸು ಮಾಡಿ ಆನಂದ ಪಡೆವ ಹಂಬಲ. ದೇಶದ ವರ್ತಮಾನ ಸ್ಥಿತಿ ಯೋಚಿಸಿದಾಗ ಈ ನಿರ್ಧಾರ ಅಲುಗಾಡುತ್ತಿತು. ಕೊನೆಗೆ “ನಾನು ಹಿಮಾಲಯಕ್ಕೆ ಹೋಗುವುದಿಲ್ಲ. ಅದೇ ನನ್ನ ಬಳಿಗೆ ಬರುತ್ತದೆ: ಎಂದು ಮಿತ್ರರೊಬ್ಬರಿಗೆ ಪತ್ರ ಬರೆದಾಗ ತಿಳಿಸಿದರು. ಅದು ಸತ್ಯವಾಯಿತು.

ಇತ್ತ ಭಾವೂಜಿ ನಿವೃತ್ತರಾದರು,. ಆದಾಯದ ಮೂಲ ನಿಂತಿತು. ಮದರಾಸಿನಲ್ಲಿ ಓದು ಮುಂದುವರೆಸುವುದು ಅಸಾಧ್ಯವಾಯಿತು. ಒಲ್ಲದ ಮನಸ್ಸಿನಿಂದಲೇ ಮಾಧವರಾವ ನಾಗಪುರಕ್ಕೆ ಮರಳಿದರು.

ನಾಗಪೂರದ ಧಂತೊಲಿಯಲ್ಲಿರುವ ರಾಮಕೃಷ್ಣಾರ್ಶರಮದ ಸಂಪರ್ಕ ಬೆಳೆದು ಕ್ರಮೇಣ ಬಲಿಯಿತು. ವಿವೇಕಾನಂದರ ವಾಣಿ ಮೆದುಳಿಗೆ ಅಪ್ಪಳಿಸಿದಂತೆ ಕೇಳುತ್ತಿತು.

ಅಧ್ಯಾಪಕ ಗೋಳವಲಕರ‍್- “ಗುರೂಜಿ”

೧೯೩೦ರ ಮೇ ತಿಂಗಳಲ್ಲಿ ಕಾಶಿಯ ಹಿಂದೂ ವಿಶ್ವವಿದ್ಯಾಲಯದಲ್ಲಿ ಶ್ರೀ ಮಾ.ಸ. ಗೊಳವಲಕರ‍್ ಅವರನ್ನು ಪ್ರಾಣೀ ಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗಿದೆ ಎಂಬ ಪತ್ರ ಬಂದಾಗ ತಂದೆ ತಾಯಿಗಳ ಆಸೆ ಫಲಿಸಿತು. ಪ್ರಾಧ್ಯಾಪಕರಾಗಿ ಕಾಶಿಗೆ ಬಂದ ಗೊಳವಲಕರ‍್ ಶಿಸ್ತಿನ ಸಿಪಾಯಿ. ಬೌದ್ಧಿಕ ಸ್ಥಿರತೆ, ವೈಚಾರಿಕ ಸ್ಫಟತೆ  ಕೆನೆಗಟ್ಟಿದ ಪ್ರಾಧ್ಯಾಪಕ.  ವಿದ್ಯಾರ್ಥಿಯಾಗಿದ್ದಾಗ ನಡೆಸಿದ್ದ ಚಟುವಟಿಕೆಗಳೇ ಬೇಋಎ. ಈಗ ಬೇರೆ. ದಿನನಿತ್ಯದ ಕಾರ್ಯಕ್ರಮಗಳಲ್ಲಿ ಗಡಿಯಾರದಂತೆ ಪ್ರತಿಯೊಂದಕ್ಕೂ ನಿಶ್ಚಿತ ಸ್ಥಾನ. ಸ್ನಾನ, ಸಂಧ್ಯಾವಂದನೆಗಳ ಜೊತೆಗೆ ಆಸನ ಪ್ರಾಣಾಯಾಮಗಳೂ. ಚಿಂತನ ಮನನಗಳು ಇಮ್ಮಡಿಗೊಂಡಿದ್ದವು. ತನ್ನ ವಿದ್ಯಾಭ್ಯಾಸ ಕಾಲದ ಬಡತನದ ನೆನಪು ಇದ್ದುದರಿಂದ ಬಡ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು. ತರಗತಿಯಲ್ಲಿ ಕಲಿಸುವುದು ಪ್ರಾಣಿಶಾಸ್ತ್ರವಾದರೂ ಹೊರಗೆ ಇಂಗ್ಲೀಷ್, ಗಣಿತ, ಅರ್ಥಶಾಸ್ತ್ರ, ದರ್ಶನಗಳ ಪಾಠ ಯಾವ ಪ್ರತಿಫಲವೂ ಇಲ್ಲದೆ  ಹೇಳುತ್ತಿದ್ದರು. ಹೀಗಾಗಿ ಗೊಳವಲಕರ, ಇಡೀ ವಿಶ್ವವಿದ್ಯಾಲಯದ ವಿದ್ಯಾರ್ಥಿ. ಸಮಯದಾಯಕ್ಕೆ “ಪ್ರೀಯ ಗುರೂಜಿ”. ಕ್ರಮೇಣ ಅದೇ ಹೆಸರು ವಾಢಿಕೆಯಾಗಿ, ರೂಢಿಯಾಗಿ, ಜನ ಪ್ರೀಯರಾಗಿ ದೇಶದಾದ್ಯಂತದ ತರುಣ ಜನಾಂಗಕ್ಕೆ ಆಪ್ಯಾಯಮಾನವಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ :

ಆ ವೇಳಗಾಗಲೇ ಕಾಶಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಪ್ರಾರಂಭವಾಗಿದ್ದವು. ಸಂಘ ಸ್ಥಾಪಕ ಡಾಕ್ಟರ ಹೆಡಗೇವಾರ‍್ ರವರು ಭಯ್ಯಾಜಿ ದಾಣಿಯವರನ್ನು ಸಂಘ ಕಾರ್ಯ ಮುಂದುವರೆಸಲು ಹಾಗೂ ಕಾಲೇಜಿನಲ್ಲಿ ಕಲಿಯಲು ಕಾಶಿಗೆ ಕಳೂಹಿಸಿದ್ದರು. ಗುರೂಜಿಗೆ ಭಯ್ಯಾಜಿಯನ್ನುಕಂಡರೆ ಅತೀವ ಪ್ರೇಮ. ಅವರಿಬ್ಬರ ಪ್ರೇಮ ಕೆನೆಗಟ್ಟಿ ಗುರೂಜಿ ಸಂಘದ ಕಡೆಗೆ ಆಕರ್ಷಿತರಾದರು. ಸಂಘದ ಚಟುವಟಿಕೆಗಳನ್ನು ಪರೀಕ್ಷಿಸಿ ಅಲ್ಲಿ ನಡೆಯುವ ಪ್ರಾರ್ಥನೆ, ಆಟ, ಚರ್ಚೆ, ಭೌದ್ಧಿಕ ಚಟುವಟಿಕೆ, ವ್ಯಾಯಾಮ, ರಾಷ್ಟ್ರ ಚಿಂತನೆಗಳನ್ನು ಗಮನಿಸಿ; ಇವೆಲ್ಲ ನನಗೆ ಪ್ರೀಯವಾದುದೇ ಎಂದು ಗುರೂಜಿ ಸಂಘದ ಜೊತೆಗೆ ಬೆರೆತರು.

ಯುವಕ ಗೋಳವಲಕರ್ ಹೆಡೇವಾರ್ರೊಂದಿಗೆ

ಮದರಾಸಿನಿಂದ ಬಂದು ಒಂದು ವರ್ಷ ನಾಗಪೂರದಲ್ಲಿದ್ದಾಗ ಗುರೂಜಿ ಸಂಘ ಹಾಗೂ ಹೆಡಗೇವಾರರವರ ಬಗೆಗೆ ತಿಳಿದಿದ್ದರು. ಸರಿಯಾದ ವ್ಯಕ್ತಿಯನ್ನು ತನ್ನ ಮಧುರ ಸಂಪರ್ಕದಿಂದ ಹತ್ತಿರ ಸೆಳೆದುಕೊಳ್ಳಬಲ್ಲ ಅಯಸ್ಕಾಂತದಂತಹ ವ್ಯಕ್ತಿತ್ವ ಡಾಕ್ಟರ‍್ ಜೀಯವರದು.

ಕಾಶಿಯಲ್ಲಿದ್ದಾಗ ಗುರೂಜಿ ಸಂಘದ ಚಟುವಟಿಕೆಗಳಿಗೆ ಪಂಡಿತ ಮದನ ಮೋಃನ ಮಾಳವೀಯರಂತಹ ಹಿರಿಯರ ಆಶಿರ್ವಾದ ಗಳಿಸುವುದರಲ್ಲಿ ಸಫಲರಾಗಿದ್ದರು. ವಿಶ್ವವಿದ್ಯಾಲಯದ ಕಟ್ಟಡದಲ್ಲಿಯೇ ಸಂಘದ ಕಚೇರಿಗೆಂದು ಕೋಣೆ ಹಾಗೂ ಆಟ- ಕೂಟಗಳಿಗೆ ಒಂದು ಮೈದಾನವನ್ನು ಶ್ರೀ ಮಾಳವೀಯರು ಒದಗಿಸಿಕೊಟ್ಟಿದ್ದರು.  ಎಷ್ಟೋ ಸಲ ಮಾಳವೀಯರು ಗುರೂಜಿಯವರೊಡನೆ ದೇಶದ ಭವಿಷ್ಯ ಕುರಿತು ಚರ್ಚಿಸಿದ್ದರು.  ಸಂಘದ ಸ್ವಯಂ ಸೇವಕರ ಶಿಸ್ತು, ಕಾರ್ಯದಕ್ಷತೆಯನ್ನು ಕಂಡು ಮೆಚ್ಚಿದರು.

೧೯೩೩ರಲ್ಲಿ ಕಾಶಿಯ ಪ್ರಾಧ್ಯಾಪಕ ಹುದ್ದೆಯ ಮೂರು ವರ್ಷಗಳ  ಒಪ್ಪಂದ ಮುಗಿಯಿತು. ಗುರೂಜಿ ನಾಗಪುರಕ್ಕೆ ಬಂದರು. “ಮಗ ವಕೀಲಿ ಕಲಿತರೆ ಉತ್ತಮ. ಚೆನ್ನಾಗಿ ಸಂಪಾದಿಸಬಹುದು”.ಇದು ತಂದೆ-ತಾಯಿಗಳ ಬಯಕೆಯಾಗಿತ್ತು. ಗುರೂಜಿ ಅದನ್ನು ಪೂರೈಸಿದರು. ವಕೀಲಿ ಓದಲು ದಿನವೆಲ್ಲ ಬೇಕಿಲ್ಲವಲ್ಲ? ಹೆಚ್ಚಿನ ಕಾಲ ಧಂತೋಲಿಯ ರಾಮಕೃಷ್ಣಾಶ್ರಮದಲ್ಲೇ ಕಳೆಯುತ್ತಿತ್ತು.

ಕಾರ್ಯವಾಹಕ:

೧೯೩೪ರಲ್ಲಿ ಗುರೂಜಿ ಸಂಘದ ಕೇಂದ್ರೀಯ ಶಾಖೆಯ “ಕಾರ್ಯವಾಹಕ”ರಾದರು. ಡಾಕ್ಟರ‍್ ಜೀ ಈ ತರುಣದಲ್ಲಿರುವ ಅದಮ್ಯ ಕಾರ್ಯಶಕ್ತಿಯನ್ನು ಗುರುತಿಸಿ ಹೆಚ್ಚು ಹೆಚ್ಚು ಕೆಲಸ ಕೊಡುತ್ತಿದ್ದರು.  ಅವರ ಸಲಹೆಯಂತೆ ಗುರೂಜಿ  ಕೆಲವು ಕಾಲ ಬೊಂಬಾಯಿಯಲ್ಲಿ ಸಂಘದ ಪ್ರಚಾರಕರಾಗಿಯೂ ಇದ್ದು ಬಂದರು. ತಾಯಿ ಲಕ್ಷ್ಮೀಬಾಯಿಯವರಿಗೂ ಮಗನಿಗೆ ಮದುವೆ ಮಾಡಬೇಕೆಂಬ ಆಸೆ. ತಂದೆಗೂ ಸಹ ಅದೇ ಆಸೆ. ಆದರೆ ಮಗ ಸುಲಭವಾಗಿ ಜಾರಿಕೊಂಡ. “ನಿಮಗಾಗಿ ಬೇಕಾದರೆ ಆಗುತ್ತೇನೆ.  ಆದರೆ ನನಗೆ ಆದರಲ್ಲಿ ಆಸಕ್ತಿಯೇ ಇಲ್ಲ” ಎಂದ. ತಂದೆ ತಾಯಿ ಸುಮ್ಮನಾದರು. ವಕೀಲಿವೃತ್ತಿಯಲ್ಲಿ ಜಾಣನಾದರೂ ಸುಳ್ಳು ಸಾಕ್ಷ್ಯ ಒದಗಿಸುವ ಕೆಲಸ ಆಗದು. ಹಾಗಾಗಿ ತರ್ಕ, ಬುದ್ಧಿವಂತಿಕೆಯಿಂದ ಗೆಲ್ಲುವ “ಅಪೀಲು”ಗಳಿಗೆ ಗೊಳವಲಕರ ವಕೀಲರು ಎಂದು ಖ್ಯಾತಿ ಬಂದಿತು.

ಒಂದು ದಿನ ಇದ್ದಕ್ಕಿಂತೆಯೇ ಗುರೂಜಿ ನಾಪತ್ತೆಯಾದರು.

“ಬೇರೆ ಕೆಲಸ ಕಾದಿದೆ”

ಗುರೂಜಿ ಹೋದುದು ಬಂಗಾಲದ ಮುರ್ಶಿದಾಬಾದ್ ಜಿಲ್ಲೆಯ ಸಾರಾಗಾಛಿಗೆ. ಅಲ್ಲಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಅಖಂಡಾನಂದರಿದ್ದರು.  ಅವರು ವಿವೇಕಾನಂದರ ಗುರುಸೋದರ. ಅವರಿಂದ ಧೀಕ್ಷೆ ಪಡೆಯುವ ಹಂಬಲ. ಅಖಂಡಾನಂದರು ಆತ್ಮ ಜ್ಞಾನ ಪಡೆದ ವೃದ್ಧಸಂತ. ಆ ಮಹಾಗುರುವಿನ ಸೇವೆ ಮಾಡಿ- ಗುರುವಿನ ಗುಲಾಮನಾಗಿ- ಧೀಕ್ಷೆ ಪಡೆದರು. ಅತ್ಯಂತ ಮೇಧಾವಿ ಉಚ್ಛ ಶಿಕ್ಷಣ ಪಡೆದ ತನ್ನ ಶಿಷ್ಯನ ಮೇಲೆ ಅಖಂಡಾನಂದರಿಗೆ ಅತೀವ ಮಮತೆ. ತನ್ನ ಆಧ್ಯಾತ್ಮ ಸತ್ವವನ್ನು ಶಿಷ್ಯನಿಗೆ ಧಾರೆ ಎರೆದ ಗುರು ಅಖಂಡಾನಂದರು “ಗೊಳವಲಕರ ಸಂನ್ಯಾಸಿನಿಯಾಗುವುದಿಲ್ಲ. ಅವನಿಗೆ ಬೇರೆ ಕೆಲಸ ಕಾದಿದೆ” ಎನ್ನುತ್ತಾ ತಮ್ಮ ಶಿಷ್ಯನನ್ನು ಭಾರ‍್ತಮಾತೆಯ ಸೇವೆಗೆ ಅಣೀಗೊಳಿಸಿದರು. ಸ್ವಾಮಿ ಅಖಂಡಾನಂದರು ತೀರಿಕೊಂಡನಂತರ ೧೯೩೭ರಲ್ಲಿ ಗುರೂಜಿ ನಾಗಪುರಕ್ಕೆ ಮರಳಿದರು. ಸುದ್ಧಿ ತಿಳಿದು ಡಾಕ್ಟರಜೀ ಹೊಸ ಉಸಿರು ಬಂದವರಂತೆ ಸಂತಸಗೊಂಡರು.

ಸರಸಂಘಚಾಲಕ :

“ದೇಶಕ್ಕಗಿ ಏನನ್ನಾದರೂ  ಘನವಾದುದ್ದನ್ನು ಮಾಡಬೇಕು,. ಜನರನ್ನೆ ಜನಾರ್ಧನನೆಂದು ಸೇವಿಸಬೇಕು, ನರನಲ್ಲಿ ನಾರಾಯಣನ್ನನು ಕಾಣಬೇಕು. ಇದಕ್ಕಾಗಿ ಒಂದು ಕಾರ್ಯಕ್ಷೇತ್ರ ಬೇಕು” ಎಂದು ನಿರ್ಧರಿಸಿದ್ದ ಗುರೂಜಿ ಡಾಕ್ಟರಜಿಯವರ ಕಾರ್ಯದಲ್ಲಿ ಆಸಕ್ತಿ ವಹಿಸತೊಡಗಿದರು.

ಜನನಾಯಕರು :

೧೯೪೦ರಲ್ಲಿ ಡಾಕ್ಟರಜಿಯವರು ವಿಷಮ ಶೀತ ಜ್ವರಕ್ಕೆ ತುತ್ತಾಗಿ ಚೇತರಿಸಿಕೊಳ್ಳಲಾರದಷ್ಟು ಕುಸಿದರು. ಅವರ ನೆರಳಿನಂತೆ ಜೊತೆಗಿದ್ದ ಕೊನೆಯ ತನಕವೂ ಅವರ ಸೇವೆ ಮಾಡಿದರು.  ೧೯೪೦ರ ಜೂನ್ ೩೦ ರಂದು ಡಾಕ್ಟರಜೀ ಸಂಘದ ಕಾರ್ಯವನ್ನು ಗುರೂಜಿಯವರ ವಶಕ್ಕೆ ಒಪ್ಪಿಸಿ, ಸಮಾಜದ ಅಂತಕರಣದಲ್ಲಿಲೀನರಾದರು.

ಡಾಕ್ಟರಜೀಯವರ ವೈಕುಂಠ ಸಮಾರಾಧನೆ ದಿನದಂದು ಗುರೂಜಿ ಸಂಘದ ನೂತನ ಸರಸಂಘಚಾಲಕರಾದರು. ನಾವು ಯಾವುದೇ ಹೊರಗಿನ ಶಕ್ತಿ ಸಾಧನಗಳನ್ನು ಅವಲಂಬಿಸುವುದಿಲ್ಲ.  ಅಚಲ ಶ್ರದ್ದೇ,ಧ್ಯೇಯದ ಕಡೆ ನೇರ ನೋಟ, ನಾಯಕನ ಮಹಾನ ಸ್ಮೃತಿ, ಪ್ರಜ್ವಲಿಸುತ್ತಿರುವ ರಾಷ್ಟ್ರ ಪ್ರೇಮದ ಬೆಳಕಿನಲ್ಲಿ ನಾವು ನಮ್ಮ ಕಾರ್ಯ ಪೂರೈಸುವೆವು. ಉದ್ದೇಶವನ್ನು ಸಾಧಿಸಿ ಹಿಂದೂ ರಾಷ್ಟ್ರವನ್ನು ವಿಶ್ವವಂದ್ಯವನ್ನಾಗಿ ಮಾಡುವೆವು” ಎಂದು ಗುರೂಜಿ ತಮ್ಮಮೊದಲ ಪ್ರವಾಶದಲ್ಲಿ ವಾರ್ಧಾದ ಸ್ವಯಂ ಸೇವಕರು ತಯ್ಯಾರಿಸಿದ ಕೈಬರಹದ ಪತ್ರಿಕೆಗೆ ನೀಡಿದ ಸಂದೇಶದಲ್ಲಿ ಸಾರಿದರು. ಅದರಂತಎ ಕೊನೆಯ ತನಕ ಸಾಗಿದರು.

ಸ್ಫೂರ್ತಿಯ ಸೆಲೆಯಾಗಿ:

ದೇಶದ ಉದ್ದಗಲಕ್ಕೂ ಪೂರ್ವ ಯೋಜಿತ  ಪ್ರವಾಸ ಆರಂಭವಾಯಿತು. ದಿನಕ್ಕೊಂದು ಊರಲ್ಲಿ ನಿಲ್ಲುವ ಪರಿವಾರಜಕನಂತೆ, ಗುರೂಜಿ  ಪ್ರತಿಪ್ರಾಂತದಲ್ಲಿನ ರಾಲಿ, ಬೈಠಕ್, ಚರ್ಚೆ ಸಭೆ, ಸಂಪರ್ಕ, ಶಿಬಿರ, ಶಿಕ್ಷಾವರ್ಗಗಳಲ್ಲಿಯೂ ಭಾಗವಹಿಸಿ ಸಹಸ್ರಾರು ಯುವಕರಲ್ಲಿ ಕಾರ್ಯಶಕ್ತಿ ತುಂಬಿ, ಸಂಘ ಕಾರ್ಯದ ಮಹತ್ವ ತಿಳಿಸಿ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿದರು. ಈ ನಡುವೆ ಸಂಘದ ಚಟುವಟಿಕೆಗಳನ್ನು ಕಂಡು ಸಹಿಸದ ಆಂಗ್ಲ ಸರಕಾರದ ಕೆಂಗಣ್ಣೀನ ಕೇಡಿನಿಂದ ಸಂಘವನ್ನು ರಕ್ಷಿಸುವ ಕಾರ್ಯವೂ ಗುರೂಜಿಯವರ ಸಮರ್ಥ ನೇತೃತ್ವದಲ್ಲಿಯೇ ಆಗಬೇಕು. ಅಂಥ ಆಡಚಣೆಗಳನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ಪಾರುಮಾಡುತ್ತಿದ್ದರು.  ೧೯೪೨ರಲ್ಲಿ ಗುರೂಜಿ ನೀಡಿದ ಕರಗೆ ಓಗೊಟ್ಟು ದೇಶದಾದ್ಯಂತ ಸಹಸ್ರಾರು ಯುವಕರು ತಮ್ಮ ಜೀವನವನ್ನೇ  ಸಂಘ ಕಾರ್ಯಕ್ಕಾಗಿ ಮುಡುಪಿಟ್ಟು ಟೊಂಕಕಟ್ಟಿ ನಿಂತರು. ದೇಶದ ಮೂಲೆ ಮೂಲೆಗಳಲ್ಲಿಯೂ ಸಂಘದ ಶಾಖೆಗಳು ಪ್ರಾರಂಭವಾದವು. ದೇಶ ಕಟ್ಟುವ ಕಾರ್ಯ ಇಮ್ಮಡಿ ಮುಮ್ಮಡಿ ವೇಗದಲ್ಲಿ ಸಾಗಿತು.

ಪ್ರವಾಸದಲ್ಲಿದ್ದಾಗ ಗುರೂಜಿಯವರು ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು.  ಮಳೆ, ಗಾಳಿ, ಬಿಸಿಲುಗಳಂತಹ ಪ್ರಾಕೃತಿ ಸಂಕಟಗಳು ಅವರನ್‌ಉ ತಡೆಯಲಾಗುತ್ತಿರಲಿಲ್ಲ. ತಾವು ಸರಸಂಘಚಾಲಕನೆಂಬ ಹಮ್ಮು ಅವರಿಗಿರಲಿಲ್ಲ. ವಾಹನ ಸೌಕರ್ಯವಿಲ್ಲದಿದ್ರೆ ಕಾಲ್ನಡಿಗೆಗೂ ಸಿದ್ಧ! ಒಮ್ಮೆ ಒಂದು ಕಡೆ ಪ್ರಾರ್ಥನೆಯಾಗುವಷ್ಟರಲ್ಲಿ ಮಳೆ ಬಂತು. ಕಾರ್ಯಕರ್ತರು  ಚಡಪಡಿಸಿದರು. ಒಬ್ಬರು ಕೊಡೆ ಬಿಡಿಸಿ ಗುರೂಜಿಗೆ ಹಿಡಿದರು. ಪ್ರಾರ್ಥನೆ ನಿಂತ ಸ್ಥಿತಿಯಲ್ಲಿಯೇ ಎಡಗೈಯಿಂದ ಕೊಡೆಯನ್ನುತಳ್ಳಿದ ಗುರೂಜಿ ಮಳೆಯಲ್ಲಿ ನೆನೆಯುತ್ತಲೇ ಪ್ರಾರ್ಥನೆ ಪೂರೈಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, “ಮಳೆ, ಬಿಸಿಲು, ಚಳಿಯಂತಹ ಪ್ರಕೃತಿ ವಿಪತ್ತಿಗೆ ನವು ಹೆದರಿದರೆ ನಮ್ಮ ಕಾರ್ಯವನ್ನು ಸಾಧಿಸುವುದು ಹೇಗೆ? ದೇಶ ಕಾರ್ಯಕ್ಕೆ ಸಿದ್ಧನಾದವನಿಗೆ ತನ್ನ ದೇಹದ ಕಡೆಗೆ  ಕಾಳಜಿ ಕಡಿಮೆಯಾಗಬೇಕು. ಪ್ರಕೃತಿಯನ್ನು ಗೆಲ್ಲಲಾರದೆ ನಾವು ದೇವರನ್ನು ಆರಾಧಿಸಲು ಸಮರ್ಥರಾಗಲಾರೇವು” ಎಂದು ನುಡಿದರು. ವ್ಯಕ್ತಿಯನ್ನು ಪರೀಕ್ಷಿಸಿ, ಸಂಘ ಕಾರ್ಯವನ್ನು ತಿಳಿಸಿ, ಒಪ್ಪಿಸಿ, ಒಲಿಸಿ, ಸಂಘ ಸ್ಥಾನಕ್ಕೆ ಕರೆತರುವುದು: ಸಂಘದ ನಿತ್ಯ ನೈಮಿತಿಕ ಕಾರ್ಯಕ್ರಮಗಳಿಂದ ವ್ಯಕ್ತಿಯನ್ನು ಧ್ಯೇಯನಿಷ್ಠ ದೇಶಪ್ರೇಮಿಯನ್ನಾಗಿ ಮಾಡುವುದು ಸಂಘದ ಕಾರ್ಯದ ಮೂಲ ಸೂತರ. ಸಂಘದ ಚಟುವಟಿಕೆಗಳಲ್ಲಿ ಇದಕ್ಕೆ  ಪೂರಕವಾಗಿ ಆಟ, ಭೈಠಕ್, ಚರ್ಚೆ, ಶಾರೀರಿಕ ವ್ಯಾಯಾಮ, ಗೀತೆ, ಪ್ರಾರ್ಥನೆಗಳು. ರಾಷ್ಟ್ರೀಯ ಭಾವನೆಯ ವ್ಯಕ್ತಿಗಳು ಪರಸ್ಪರ ಕಲೆತು ಒಂದಾಗಿ ಅನುಶಾಸನದ ವಜ್ರಲೇಪದಿಂದ ಒಂದಾಗಬೇಕು. ಆಗ ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯ. ಇದು ಗೂರೂಜಿಯವರ ಸಿದ್ಧಾಂತ.

ಕಾಪಾಡುವ ತೋಳು ಕೈ:

ಸ್ವಾತಂತ್ರ ಚಳುವಳಿ ಬಲಗೊಳ್ಳುವುದರ ಜೊತೆಗೆ ಆಂಗ್ಲರು ಬಿತ್ತಿದ ವಿಷ ಬೀಜ ಫಲ ನೀಡಿ ಪಾಕಿ‌ಸ್ಥಾನದ ಬೇಡಿಕೆ ಬಲಗೊಳ್ಳುತ್ತಿತ್ತು. ಅತ್ಯಚಾರ, ಅನ್ಯಾಯ, ಬಲತ್ಕಾರ‍್, ಹಿಂಸೆ, ದಂಗೆಗಳು, ಹೆಚ್ಚಿದವು. ಪಂಜಾಬ ಸಿಂಧ್ ಪ್ರಾಂತ್ಯಗಳಲ್ಲಿ, ಅಮೃತಸರ, ಲಾಹೋರ, ರಾವಲ್ಪಿಂಡಿಗಳಲ್ಲಿ ಸಂಘ ಕಾರ್ಯವು ಬೆಳೆದಿತು. ಹಿಂಸೆ ಹಾನಿಗಳಿಗೆ ತುತ್ತಾದ ನಿರ್ವಾಸಿತರ ಸೇವೆಗೆ ಸಂಘದ ಸ್ವಯಂ ಸೇವಕರು ಕಟ್ಟಿಬದ್ಧರಾರು. ಪಾಕಿಸ್ತಾನದ ಅಗತ್ಯವನ್ನು ಮನಗಾಣಿಸಲು  ಪೂರ್ವನಿಶ್ಚಿತ ಕಾರ್ಯಕ್ರಮದಂತೆ ದಂಗೆಗಳೂ ನಡೆಯುತ್ತಿದ್ದವು. ಅಂಥವುಗಳನ್ನು ತಡೆಯುವುದು ಸ್ವಯಂ ಸೇವಕರ ಕಾರ್ಯ , ಸಹಸ್ರಾರು ಮಂದಿ ಬಂಧು-ಭಗಿನಿಯವರನ್ನು ಸಾಹಸ, ಕೌಶಲಗಳಿಂದ ಗಡಿಯೊಳಗೆ ಸಾಗಿಸಿದರು. ವಲಸೆ ಬಂದವರಿಗೆ ಶಿಬಿರಗಳು, ಶಾಲೆಗಳು, ಔಷಧಾಲಯಗಳು, ರಕ್ಷಣಾ ಕೇಂದ್ರಗಳೂ ಪ್ರಾರಂಭವಾದವು. ಚೈತನ್ಯದ ಅಗ್ನಿಪುಂಜವಾಗಿ, ಸಾಂತ್ವನ , ಮಾರ್ಗದರ್ಶನ, ರಕ್ಷಣಾವಿಧಾನಗಳನ್ನು ನೋಡಿಕೊಳ್ಳುತ್ತ ಗುರೂಜಿ ಪಾದರಸದಂತೆ ಓಡಾಡಿದರು. ಧೈರ್ಯ ಸಾಹಸಗಳ ಪ್ರವಾಹವಾಗಿ ಹರಿದರು. ಒಮ್ಮೆ ಜಲಂಧರದಿಂದ ಲೂಧಿಯಾನಕ್ಕೆ ಹೋಗುವ ಹಾದಿಯಲ್ಲಿ ಪ್ರಾಣಭಯ ತೊರೆದು ಪ್ರವಾಹದಿಂದ ಕುಸಿಯುತ್ತಿದ್ದ ರೇಲ್ವೆ ಸೇತುವೆಯನ್ನು ಕಾಲ್ನಡಿಗೆಯಲ್ಲೇ ದಾಟಿದರು. ಕಾರ್ಯನಿಷ್ಠೇ ಧ್ಯೇಯನಿಷ್ಠೆಗೆ ಉದಾಹರಣೆಯಾಗಿ ಸ್ವಯಂ ಸೇವಕರನ್ನು ನಿರ್ದೆಶಿಸಿದರು.

ಆದರೂ ಆಗಬಾರದ ವಿಭಜನೆ ಆಗಿ ಹೋಯಿತು. ಸ್ವಾತಂತ್ರದ ಸಿಹಿಯ ಜೊತೆಗೆ ದೇಶ ವಿಭಜನೆಯ ಕಹಿಯೂ ಸಹ ಕೂಡಿಕೊಂಡಿತು. ೧೯೪೮ರ ಜನೆವರಿ ೩೦ ರಂದು ಗುರೂಜಿ ಮದರಾಸಿನಲ್ಲಿದ್ದರು. ಅದೇ ದಿನ ರಾತ್ರಿ ಮಹಾತ್ಮ ಗಾಂಧಿಯಿವರು ಕೊಲೆಯಾದ ಸುದ್ಧಿ ತಿಳಿಯಿತು ತಮ್ಮ ಮುಂದಿನ ಕಾರ್ಯಕ್ರಮಗಳನ್ನೆಲ್ಲಾ ಆ ಕೂಡಲೇ ರದ್ದುಗೊಳಿಸಿ ಗುರೂಜಿಯವರು ನಾಗಪೂರಕ್ಕೆ ಮರಳಿದರು. “ಆಧುನಿಕ ಯುಗದ ಅತ್ಯಂತ ಅಧರಣೀಯ ವ್ಯಕ್ತಿಯ ನೃಶಂಸಹತ್ಯೆ ಅಸಾಧಾರಣ ಪಾಶವಿಕ ಘಟನೆ. ಇದರಿಂದ ನನ್ನ ಮನಸ್ಸಿಗೆ ಅತೀವ ದುಃಖವಾಗಿದೆ” ಎಂದು ಗುರೂಜಿಯವರು ನುಡಿದರು.

ಅಗ್ನಿ ಪರೀಕ್ಷೆ :

ಜನೆವರು ೩೧ ರಂದು ನಾಗಪೂರದಲ್ಲಿ ಸಂಘ ವಿರೋಧಿಗಳು ಗಲಭೇ, ಕಲ್ಲುತೂರಾಟ, ಆರಂಭಿಸಿದರು. ಗುರೂಜಿಯವರ ನಿವಾಸಕ್ಕೂ ಕಲ್ಲುಗಳು ಬಿದ್ದವು. ದಾಳಿ ನಡೆಯುವ ಸಂಭವವಿತ್ತು. ಆದರೂ ಗುರೂಜಿ ಧೈರ್ಯದಿಂದ ಕದಲದೆ ಗೀತಾಪಾರಾಯಣ ಮಾಡುತ್ತ ಕುಳಿತರು.

ಗಾಂಧೀಜಿಯ ಕೊಲೆ ಸುಳ್ಳು ಆರೋಫ ಹೇರಿ  ಗುರೂಜಿಯವರನ್ನು ಪೋಲಿಸರು ಬಂಧಿಸಿದರು. ಸಂಘದ ಮೇಲೆ ನಿಷೇಧ ಹೇರಿ ದೇಶದಾದ್ಯಂತ ಸಹಸ್ರಾರು ಸ್ವಯಂ ಸೇವಕರನ್ನು ಕಾರ್ಯಕರ್ತರನ್ನು ಬಂಧಿಸಲಾಯಿತು. ಸರಕಾರ ಸಂಘ ಶಕ್ತಿಯ ಬೆಳವಣಿಗೆ, ಗುರೂಜಿಯವರ ಪ್ರಭಾವ ಕಂಡು ಹೆದರಿ ಎಲ್ಲಿ  ಈ ಎಲ್ಲಾ ಆರೋಪ ಹೊರಿಸಿ, ಸಂಘ ಶಕ್ತಿಯನ್ನು ಕುಂದಿಸಲು ಬಗೆದಿತ್ತು. ಗಾಂಧಿ ಕೊಲೆಗೂ ಗುರೂಜಿಗೂ ಯಾವ ಸಂಬಂಧವೂ ಇರಲಿಲ್ಲ. ಐದಾರು ದಿನಗಳಲ್ಲೇ ಸರಕಾರ ತನ್ನ ಆರೋಪಗಳನ್ನು ಹಿಂತೆಗೆದುಕೊಂಡಿತು. ಸ್ವಯಂ ಸೇವಕರುಗಳನ್ನೂ  ನ್ಯಾಯಾಲಯಗಳು ಬಿಡುಗಡೆ ಮಾಡಿ ಸರಕಾರದ ಕ್ರಮವನ್ನು ಖಂಡಿಸಿದವು. ಆಗಸ್ಟ ೬ನೇ ತಾರೀಕು ಕೆಲವು ಷರತ್ತುಗಳನ್ನು ಹೇರಿ ಸರಕಾರ ಗುರೂಜಿಯವರನ್ನು ಬಿಡಗುಡೆ ಮಾಡಿತು. ದೇಶದ ಪ್ರಮುಖ ನಾಯಕರೊಡನೆ ಗುರೂಜಿ ಪತ್ರ ವ್ಯವಹಾರ ಆರಂಭಿಸಿದರು. ಆರೋಪ ನಿರಾಧಾರವೆಂದುಸಾರಿ ಸಂಘದ ಮೇಲಿನ ನಿಷೇಧ ತೆಗೆದುಹಾಕುವಂತೆ ಒತ್ತಾಯಿಸಿದರು.  ಗುರೂಜಿಗೆ ವಿಧಿಸಿದ ನಿರ್ಬಂದ ತೆಗೆಯಲ್ಪಟ್ಟಿತ್ತು. ಗುರೂಜಿ ದೆಹಲಿಗೆ ಹೋದರು. ಸಹಸ್ರಾರು ಜನ ಅವರನ್ನು ಹೂವಿನ ಮಳೆಗರೆದು ಸ್ವಾಗತಿಸಿದರು. ಮಾತುಕತೆಗಳು ನಡೆದವು. ಸಂಘವು ಕಾಂಗ್ರೆಸ್ಸಿನ ಜೊತೆಗೆ ಸೇರಬೇಕೆಂಬ ಸಲಹೆ ಬಂತು. ಗುರೂಜಿ ಅದನ್ನು ತಿರಸ್ಕರಿಸಿದರು. ಮಾತುಕತೆ, ಪತ್ರವ್ಯವಹಾರಗಳು ವಿಫಲಗೊಂಡವು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಸಂಘದ ಶಾಖೆಗಳನ್ನು ನಡೆಸುವ ಅಂದೋಲನದ ಸಿದ್ಧತೆಗಳು ಒಂದೇ ರಾತ್ರಿಯಲ್ಲಿ ಮಿಂಚಿನಂತೆ ನಡೆದವು. ಊಹಿಸಿದಂತೆ ಗುರೂಜಿ ಮತ್ತೇ ಬಂಧಿಸಲ್ಪಟ್ಟರು. ದೇಶದಾದ್ಯಂತ ಪಟ್ಟಣ, ಹಳ್ಳಿಗಳಲ್ಲಿ ಸಂಘ ಶಾಖೆಗಳು ಪುನರಾರಂಭವಾದವು.  ಲಕ್ಷಾಂತರ ಸ್ವಯಂ ಸೇವಕರು ಬಂಧನಕ್ಕೆ ಒಳಗಾದರು. ಅವರಿಗೆ ಹತ್ತು ಹಲವು ವಿಧದ  ಚಿತ್ರಹಿಂಸೆಗಳು, ನಾಗರಿಕರೂ “ನಿಷೇಧ ತೆಗೆದು ಹಾಕಿ” ಎಂದು ಪ್ರತಿಭಟನಾ ಮೆರವಣಿಗೆ ಮಾಡಿದರು.ಕೆಲವು ಅಗ್ರಗಣ್ಯ ವ್ಯಕ್ತಿಗಳು ಸರಕಾರದೊಡನೆ ಸಂಧಾನಕ್ಕೆ ಮುಂದಾದರು. ಜೈಲಿನಲ್ಲಿ ಸಾಮಾನ್ಯ ಖೈದಿಯ ಸೌಲಭ್ಯಗಳೂ ದೊರೆಯದೇ ಆರೋಗ್ಯ ಕುಸಿದಿದ್ರೂ, ಗುರೂಜಿ ಸರಕಾರದೆದುರು ತಲೆಬಾಗಲಿಲ್ಲ. “ಸತ್ಯವು ಎಂದಿದ್ರೂ ಜಯಿಸುವುದು” ಎಂಬ ಅವರ ನಂಬಿಕೆ ಫಲಿಸಿತು.ಹದಿನೆಂಟು ತಿಂಗಳ ನಂತರ ಸರಕಾರ ಸಂಘದ ಮೇಲಿನ ನಿಷೇಧ ತೆಗೆದುಹಾಕಿತು. “ಸಂಘದ ಬಂಧನದ ಪ್ರಕರಣಗಳನ್ನು ಮರೆತುಬಿಡಿ, ನಿಮಗೆ ಅನ್ಯಾಯ ಮಾಡಿದರು, ನೋಯಿಸಿದರು ಎಂದೆನ್ನಿಸಿದವರ   ಕುರಿತು ನಿಮ್ಮಲ್ಲಿ ಲವೇಶವೂ ಕಟುತ್ವ ಇರಬಾಋದು.ಹಲ್ಲು ನಾಲಿಗೆ ಒಟ್ಟಿಗೆ ಇರುತ್ತವೆ.  ಅಕಸ್ಮಾತ್ ಹಲ್ಲು ನಾಲಿಗೆಯನ್ನು ಕಡಿದರೆ ಅದನ್ನು  ಉದುರಿಸಿಬಿಡುವುದಿಲ್ಲ. ಕಾಲಿಗೆ ಕಾಲು ತೊಡರಿ ಮುಗ್ಗರಿಸಿದರೆ ಕಾಲನ್ನೆ ಕತ್ತರಿಸಿ ಬಿಡುವುದಿಲ್ಲ. ನಮಗೆ ಅನ್ಯಾಯ  ಮಾಡಿದವರು ನಮ್ಮವರೇ, ಬೇರೆಯವರಲ್ಲ, ಹಾಗಾಗಿ ಕಳೆದುದನ್ನು ಮರೆತು ಕ್ಷಮಾಶೀಲರಾಗಬೇಕಕು” ಎಂದು ಗುರೂಜಿಯವರು ಸ್ವಯಂ ಸೇವಕರಿಗೆ ಉಪದೆಶ ಮಾಡಿದರು.

ಮತ್ತೇ ಜನತೆಯ ರಕ್ಷೆ :

ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಬಲಾತ್ಕಾರದಿಂದ ಮತಾಂತರಗೊಳಿಸುವ ಕಾರ್ಯ ಆರಂಭವಾದಾಗ ಅಲ್ಲಿಂದ ಸಹಸ್ರಾರು ಹಿಂದೂಗಳು ಭಾರತಕ್ಕೆ ಓಡಿ ಬಂದರು. ಸಂಘವು ಗುರೂಜಿಯವರ ನೇತೃತ್ವದಲ್ಲಿ ಅಂಥ ನಿರ್ವಾಸಿತರ ಸೇವೆಗೆ ಎದ್ದು ನಿಂತಿತು. ಇಲ್ಲಿ ಗುರೂಜಿ ಪ್ರೇರಕ ಶಕ್ತಿ. ಸರಕಾರವನ್ನು ಸರಿಯಾಧ ದಾರಿಗೆ ಬಡಿದೆಬ್ಬಿಸಿ ದಾರಿ ತೋರಿದರು. ಜನತೆಗೆ ಶಾಂತರಾಗಿದ್ದು, ಸಹಾಯ ಸಲ್ಲಿಸಲು ಮನವಿ ಮಾಡಿದರು.

ಅದೇ ವರ್ಷ ದೆಹಲಿಯ ನಾಗರಿಕರು ಸಂಘ ಕಾರ್ಯಕ್ಕಾಗಿ ಗುರೂಜಿಯವರಿಗೆ ಒಂದು ಲಕ್ಷ ಒಂದು ಸಾವಿರದ ಒಂದು ರೂ.ಗಳನಿಧಿಯನ್ನು ಅರ್ಪಿಸಿದರು. ಅಮೇರಿಕಾದ ಪತ್ರಕರ್ತ ಜೆ.ಎ.ಕುರನ್, ಆಸ್ಟ್ರೇಲಿಯಾದ ಪ್ರೋಫೆಸರ ವಿಲ್ಸನ್ ಸಂಘದ ಕಾರ್ಯಪ್ರಣಾಲಿಗಳ ಅಧ್ಯಯನಕ್ಕೆಂದು ಭಾರತಕ್ಕೆ ಬಂದರು. ಪ್ರಪಂಚದ ಮೂಲೆಮೂಲೆಗಳಿಗೂ ಸಂಘ ಕೀರ್ತಿ ಹರಡಿತು.

ನಂತರ ಗೋಹತ್ಯಾ ನಿಷೇಧ ಚಳುವಳಿಯ ನೇತೃತ್ವ ವಹಿಸಿದ ಗುರೂಜಿ ಜನಮನದಲ್ಲಿ ಸಂಸ್ಕೃತಿ, ಧರ್ಮಗಳ ಶ್ರದ್ಧಾಂಬಿದುವಾದ ಗೋವಿನ ಬಗೆಗೆ ಗೌರವ ಭಾವನೆ ಮೂಡುವಂತೆ ಮಾಡಿ ಸರಕಾರಕ್ಕೆ ಜನರ ಭಾವನೆಗಳನ್ನು ತಿಳಿಸಿದರು.  ಐವತ್ತನಾಲ್ಕು ಸಾವಿರ  ಗ್ರಾಮಗಳಲ್ಲಿ ಸಂಚರಿಸಿ ಒಂದು ಕೋಟಿ ಎಪ್ಪತ್ತನಾಲ್ಕು ಲಕ್ಷ ಎಂಬತ್ತೊಂಬತ್ತು ಸಾವಿರದ ಮುನ್ನೂರು ಮೂವತ್ತೆರಡು ಜನರ ಸಹಿ ಸಂಗ್ರಹಿಸಿದರು.

ದೇಶದ ಐಕ್ಯತೆಗೆ, ಸಮಗ್ರತೆಗೆ ಧರ್ಮ ಸಂಸ್ಕೃತಿಗಳಿಗೆ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ಯುಂಟಾಗುವುದನ್ನು ಗುರೂಜಿಯವರು ಸಹಿಸಲಾರದಾದರು. ಭಾರತೀಯರು ಸ್ವ ಸಾಮರ್ಥ್ಯವನ್ನು ಮರೆತು ನರಿ ಮುಂದೆ ಸೇರಿದ ಸಿಂಹದ ಮರಿಗಳಂತೆ ಇರುವುದನ್ನು  ಕಂಡು, ಕಸಿವಿಸಿಗೊಂಡರು. ನಿಜವನ್ನು ತಿಳಿಸಿ ಅವರನ್ನು ಮತ್ತೇ ಸಿಂಹಗಳನ್ನಾಗಿ ಎತ್ತಿ ನಿಲ್ಲಿಸಿ ಗರ್ಜಿಸಲು ಪ್ರಾರಂಭದಿಂದಲೂ ಗುರೂಜಿಕಲಿಸಿಕೊಡುತ್ತಿದ್ದರು. ಭಾರತದ ಸಮಗ್ರತೆಯನ್ನು ಕಡೆಗಾಣಿಸುವ ಪ್ರತಿಯೊಂದು ಸಂಗತಿಯನ್ನು ಗುರೂಜಿ ಪ್ರತಿಭಟಿಸಿದರು. ದೇಶದ್ರೋಹದ ಪ್ರತಿಯೊಂದು ಮಾತನ್ನೂ ಗುರೂಜಿ ವಿರೋಧಿಸಿದರು. ಸರಕಾರದ ಅಜಾಗರೂಕತೆಯಿಂದ ಟಿಬೆಟ್ಟಿನ ಮೇಲೆ ಚೀಣ ಅಕ್ರಮಣ ಮಾಡಿತು. ಭಾರತ ಸರಕಾರ ಸುಮ್ಮನಿತ್ತು. ಭಾರತದ ಭಾಗವಾದ ಗೋವೆಯನ್ನು ಪೋರ್ಚುಗೀಸರು ದಬ್ಬಾಳಿಕೆ ನಡೆಸಿದ್ದರು. ಭಾರತ ಸರಕಾರವನ್ನು ಏನನ್ನೂ ಮಾಡಲಿಲ್ಲ. ಗುರೂಜಿ ಸರಕಾರವನ್ನು ಎಚ್ಚರಿಸಿದರು. ಭಾಷಾವಾರು ಪ್ರಾಂತಗಳ ರಚನೆಯಿಂದ ದೇಶದ ಐಕ್ಯತೆಗೆ ಭಂಗಬರುವುದೆಂದು ಅವರು ಸಾರಿ ಹೇಳಿದರು. ಗುರೂಜಿ ದೇಶಧ ಲಕ್ಷ ಲಕ್ಷ ಯುವಕರ ಸ್ಪೂರ್ತಿಯ ಕೇಂದ್ರಬಿಂದು. ಸಣಕಲ ದೇಹದ ಪ್ರಸನ್ನ ಮುಖಮುದ್ರೆಯ ನಡೆದಾಡುವ ಕರ್ಮಯೋಗಿ. ಹೆಗಲು ಬೆನ್ನುಗಳಲ್ಲಿ ಗುಂಗುರು.

ವಿವೇಕಾನಂದರ ಶಿಲಾ ಪ್ರತಿಮೆಗೆ ನಮನ.

ಗುಂಗುರಾಗಿ ತೊನೆದಾಢುವ ಕೂದಲು. ಕೆದರಿದ ಗಡ್ಡ, ಎತ್ತರದ ಹಣೆ, ಹೊಳೆಯುವ ಕಣ್ಣುಗಳು- ಮಾತು ಮಾತಿಗೆ ನಗೆ ಸಿಡಿಸುವ, ಕಟು ವ್ಯಂಗ್ಯವನ್ನೂ ನಗೆಯ ಜೊತೆಗೆ ಹಾರಿಸುವ, ಮೀಸೆ ಮರೆ ಮಾಡಿರುವ ತುಟಿಗಳು. ದೊಗಲೆ ಧೋತರ ಮೇಲೆ ಸಡಿಲವಾದ ಕುರ್ತಾ, ಹೆಗಲಿಗೊಂದು ಶಾಲು, ಎದೆಯುಬ್ಬಿಸಿ ವೇಗವಾಗಿ ನಡೆವ ಈ ಸಂನ್ಯಾಸಿಯಲ್ಲಿ ಕ್ಷತ್ರೀಯನ ಛಲ,ಆತ್ಮದಲ್ಲಿ ಶತಸಿಂಹಗಳ ಬಲ. ಇಷ್ಟಾದರೂ ಪ್ರಚಾರ ಬೇಡ ಎನ್ನುವ ನಿರ್ಮಮತ್ವ.

೧೯೫೬ರಲ್ಲಿ ಗುರೂಜಿಯವರ ೫೦ನೇಯ ಹುಟ್ಟು ಹಬ್ಬ. ದೇಶದಾದ್ಯಂತ ವೈಭವದಿಂದ ಆಚರಿಸಲಾಯಿತು. ಸಂಘದ ಕಾರ್ಯಕರ್ತರು ಯಶಸ್ವಿಯಾಗಿ ಉತ್ಸವ ಆಚರಿಸಿವುದರ ಜೊತೆಗೆ ಗುರೂಜಿಯವರ ವಿಚಾರ ಪ್ರವಾಹವನ್ನೂ ದೇಶದ ಮನೆಮನೆಗೆ ತಲುಪಿಸಿದರು.

೧೯೬೩ರಲ್ಲಿ ಬೃಹತ್ ಸಭೆಯಲ್ಲಿ ಗುರೂಜಿ ಭಾಷಣ ಮಾಡಿದರು. ಹಿಂದೂಗಳಲ್ಲಿ ಒಗ್ಗಟ್ಟಿಲ್ಲ ಎಂದು ವಿವೇಕಾನಂದರು ಕೊಟ್ಟ ಎಚ್ಚರಿಕೆಯನ್ನೇ ನೆನಪಿಗೆ ತಂದುಕೊಟ್ಟರು.

ದೇಶಕ್ಕೆ ಹೊರಗಿನಿಂದ ಆಪತ್ತು ಬಂದಾಗ ಗುರೂಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೇಶದ ತೋಳನ್ನಾಗಿ ಮಾಡಿದರು. ಗುರಾಣಿಯನ್ನಾಗಿ ಮಾಡಿದರು. ೧೯೬೨ರಲ್ಲಿ ಚೀನ ಭಾರತಕ್ಕೆ ದ್ರೋಹ ಮಾಡಿತು. ತನ್ನ ಸೈನ್ಯವನ್ನು ಭಾರತಕ್ಕೆ ಸೇರಿದ ಪ್ರದಶದಲ್ಲಿ ನುಗ್ಗಿಸಿತು. ಗುರೂಜಿ ಸ್ವಯಂ ಸೇವಕರಿಗೆ ಸರಕಾರದೊಡನೆ ಸಹಕರಿಸಿ ದೇಶವನ್ನು ರಕ್ಷಿಸಲು ಕರೆ ನೀಡಿದರು. “ಈಗ ಪ್ರಬಲ ಶತ್ರು ದೇಶಧ ಗಡಿಯಲ್ಲಿ ನುಗ್ಗಿ ಬಂದಿದ್ದಾನೆ… ಎಲ್ಲ ರಾಷ್ಟ್ರಭಕ್ತರು ತಮ್ಮ ವೈಯುಕ್ತಿಕ ಸಣ್ಣ ಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ ಅಭೇದ್ಯ ಶಕ್ತಿಯನ್ನಾಗಿ ನಿಲ್ಲುವುದು ಅತ್ಯಗತ್ಯ… ಭಾರತದ ಜನತೆಯೆಲ್ಲ ಏಕಾಗ್ರತೆಯಿಂದ ಏಕದೇಹಿಗಳಾಗಿ ರಾಷ್ಟ್ರ ರಕ್ಷಣೆಯ ಬೆನ್ನೆಲುಬಾಗಿ ನಿಲ್ಲಬೇಕು.”

ಗುರೂಜಿಯ ಕರೆಗೆ ಲಕ್ಷಾಂತರ ಹೃದಯಗಳು ಸ್ಪಂದಿಸಿದವು. ಸ್ವಯಂ ಸೇವಕರು ಸರಕಾರದ ಕಾರ್ಯಗಳಿಗೆ ಒತ್ತಾಸೆಯಾಗಿ ನಿಂತರು. ದೆಹಲಿ, ಕಲ್ಕತ್ತ, ಮುಂಬಯಿ ಮುಂತಾದ ಮಹಾನಗರಗಳಲ್ಲಿ ಆಂತರಿಕ ಭದ್ರತೆಯ ಕಾರ್ಯಗಳಲ್ಲಿ ಸಹಾಯ ಮಾಡಿದರು.

ವಿಶ್ವ ಹಿಂದೂ ಪರಿಷತ್ತು :

ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸುವುದರಲ್ಲಿ ಗುರೂಜಿಯವರಿಗೆ ಕಳಕಳಿ ಇದ್ದಂತೆಯೇ ಸಮಾಜ ಸುಧಾರಣೆಯಲ್ಲಿಯೂ ಕಳಕಳಿಯಿತ್ತು. ಹಿಂದೂಗಳಲ್ಲಿ ಬಹುಮಂದಿ ಭಾರತದಲ್ಲಿಯೇ ಇದ್ದಾರೆ. ಆದರೆ ಲಕ್ಷಾಂತರ ಮಂದಿ ಹಿಂದೂಗಳು ಹಲವಾರುದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಓದಿಗಾಗಿ,  ಕೆಲಸಕ್ಕಾಗಿ, ವ್ಯಾಪಾರಕ್ಕಗಿ ದೂರ ದೆಶಗಳಿಗೆ ಹೋದವರು ಅಲ್ಲಿಯೇ ನೆಲೆಸಿದ್ದಾರೆ. ಪ್ರಪಂಚದಲ್ಲಿರುವ ಎಲ್ಲ ಹಿಂದೂಗಳನ್ನು ಒಟ್ಟುಗೂಡಿಸುವೊಂದು ಸಂಸ್ಥೆ ಬೇಕು ಎಂದು ಅನೇಕ ಮಂದಿ ಹಿರಿಯರಿಗೆ ತೋರಿತು. ೧೯೬೪ರಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯ ದಿನ ವಿಶ್ವ ಹಿಂದೂ ಪರಿಷತ್ತಿನ ಮೊದಲ ಸಭೆ ನಡೆಯಿತು. ಗುರೂಜಿ ತಮ್ಮಪರವಾಗಿ ದಾದಾಸಾಜಹೇಬ ಅಪಟೆಯವರನ್ನು ಕಳುಹಿಸಿದರು.

೧೯೬೯ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಮ್ಮೇಳನ ಕನ್ನಡನಾಡಿನ ಉಡುಪಿಯಲ್ಲಿ ನಡೆಯಿತು. ಗುರೂಜಿ ಇದರಲ್ಲಿ ಭಾಗವಹಿಸಿದ್ದರು. ಅಲ್ಲಿ ಒಪ್ಪಿಗೆಯಾಧ ಮೊದಲನೆಯ ನಿರ್ಣಯ ಇದು:

“ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಕಾರ್ಯಾಲಯಕ್ಕೆ ಬಂದಿರುವ ನಮ್ಮ ಪೂಜ್ಯ ಜಗದ್ಗುರುಗಳು, ಆಚಾರ್ಯರ ನಿರ್ದೆಶನಕ್ಕೆ ಅನುಸಾರವಾಗಿ, ಎಲ್ಲ ಹಿಂದೂಗಳು ತಮ್ಮ ಸಾರ್ವಜನಿಕ ಹಾಗೂ ಧಾರ್ಮಿಕ ಜೀವನದಲ್ಲಿ ಉಚ್ಛ, ನೀಚ, ಸ್ವಸ್ಥ, ಅಸ್ಪ್ರಶ್ಯ ಮುಂತಾದ ವಿಮಷತೆ ಹಾಗೂ  ಅಸಮಾನತೆಯ ವ್ಯವಹಾರಗಳನ್ನು ಕೈಬಿಟ್ಟು ತಮ್ಮ ತಮ್ಮ ಜಾತಿ, ಮತ ಕುಲ, ಸಂಪ್ರದಾಯಗಳ ಭೇಧಗಳು ಏನೇ ಇರಲಿ ತಾವೆಲ್ಲರೂ ಒಬ್ಬ ಹಿಂದೂ ಮಾತೆಯ ಮಕ್ಕಳೆಂಬ ಸಮಾನತೆಯ ಆಧಾರದ ಮೇಲೆ ತಮ್ಮೆಲ್ಲ ಧಾರ್ಮಿಕ ವ್ಯವಹಾರಗಳನ್ನು ನಡೆಸಬೇಕೆಂದು ಈ ಸಮ್ಮೇಳನವು ಆಗ್ರಹಪೂರ್ವಕವಾಗಿ ವಿನಂತಿಸುತ್ತದೆ.

ಹೀಗೆ ಹಿಂದೂ ಧರ್ಮದ ಅತ್ಯಂತ ಪ್ರಭಾವಿ ಗುರುಗಳೆಲ್ಲರ ಸಮ್ಮುಖದಲ್ಲಿ ಹಿಂದೂ ಸಮಾಜಕ್ಕೆ ನೂರಾರು ವರ್ಷಗಳಿಂದ ಅಂಟಿಕೊಂಡು ಬಂದ ಅಸ್ಪ್ರಶ್ಯತೆ ತಪ್ಪು ಎಂಬು ಘೋಷಣೆಯಾಯಿತು.ಹಿಂದೂಗಳೆಲ್ಲ ಸಮನಾರು ಎಂದು ಸ್ಪಷ್ಟವಾಯಿತು.

ನಿರ್ಣಯವನ್ನು ಸಾವಿರಾರು ಜನಸೇರಿದ್ದ ಮಹಾಸಭೆ ಒಪ್ಪಿದಾಗ ಗುರೂಜಿಯವರ ಕಣ್ಣಿನಲ್ಲಿ ಸಂತೋಷದಿಂದನೀರು ತುಂಬಿತು.

ಪ್ರತಿ ವರ್ಷವೂ ಒಂದು ಸಲ ದೇಶದ ಉದ್ದಗಲ್ಲಕ್ಕೂ ಗುರೂಜಿ ಸಂಚರಿಸಬೇಕು. ಸಂಚಾರ ಕಾಲದಲ್ಲಿ ಶಿಬಿರ ಭೇಟಿ, ಬೈಟಕಗಳ ಮೂಲಕ ಸ್ವಯಂ ಸೇವಕರ ಸಂಪರ್ಕ, ಕಷ್ಟ ಸುಖ ವಿಚಾರಣೆ, ಜಾತಿ, ಪ್ರಾಂತ, ಭಾಷೆಯ ಬೇಧವಿಲ್ಲದೇ ಎಲ್ಲರೊಡನೆ ಬೆರತು ರಾಷ್ಟ್ರಹಿತ ಚರ್ಚಿಸಬೇಕು. ಸಂಶಯಗಳಿಗೆ ಸಮರ್ಪಕ ಉತ್ತರ . ಕಾರ್ಯಗಳಿಗೆ ಮಾರ್ಗದರ್ಶನ ಈ ನಡುವೆ ಸರಕಾರ ಆಗಾಗ ಕೊಡುವ ಕಿರುಕುಳಗಳು.

ಬಳಲುತ್ತಿದ್ದ ದೇಹ:

ರಾಷ್ಟ್ರ ಜಾಗರಣಕ್ಕಾಗಿ ಪರಿವ್ರಾಜಕ ದೀಕ್ಷೆ  ಪಡೆದ ಗುರೂಜಿಗೆ ಶಾರೀರಿಕ ಕಷ್ಟಗಳು ಇಲ್ಲದಿರಲಿಲ್ಲ. ರಟ್ಟೆ ನೋವಿನಿಂದ ಪ್ರಾರಂಭವಾದ ಕಾಯಿಲೆ ಹತ್ತು ಹಲವಾರು ತರಹದ ಚಿಕಿತ್ಸೆಗಳು ನಡೆದವು.ಆದರೂ ನೋವು ನಿಲ್ಲಲಿಲ್ಲ. ಅದಕ್ಕೆ ಗುರೂಜಿ ಹೆದರಿ ನಿಲ್ಲಲೂ ಇಲ್ಲ.

೧೯೬೯ರಲ್ಲಿ ಶಸ್ತ್ರ ಕ್ರಿಯೆ, ನಡೆಸಿ ವೈದ್ಯರುಗಳು ಕ್ಯಾನ್ಸರ‍್ ರೋಗವೆಂದು ತೀರ್ಮಾನಿಸಿದರು. ಸುದ್ಧಿ ತಿಳಿದ ದೇಶದ ಜನರೆಲ್ಲ ಕಂಗಾಲಾದರು. ಪ್ರಾರ್ಥನೆ, ಭಜನೆ, ಪೂಜೆ, ಆರಾಧನೆಗಳು  ಅವರ ಆರೋಗ್ಯಕ್ಕಾಗಿ ದೇಶದಾದ್ಯಂತ ನಡೆದವು. ಆದರೆ ಸ್ವತಃ ಗುರೂಜಿಯವರೇ ಗಾಬರಿಯಾಗಲಿಲ್ಲ. ಶಾಂತಚಿತ್ತರಾಗಿ ರೋಗದ ಬಗ್ಗೆ ಮಾಹಿತಿ ಪಡೆದು ಶಸ್ತ್ರ ಚಕಿತ್ಸೆಗೆ ಒಳಗಾದರು. ಶಸ್ತ್ರ ಚಕಿತ್ಸೆ ಯಶಸ್ವಿಯೆನೋ ಆಯಿತು. ಆದರೂ ತಾವಿನ್ನು ಹೆಚ್ಚುಕಾಲ ಬದುಕುವುದಿಲ್ಲವೆಂಬ ಸಂಗತಿಯು ಅವರಿಗೆ ತಿಳಿದಿತ್ತು. ತನ್ನಸಾವನ್ನು ಗುರುತಿಸಿ ತನ್ನೆಲ್ಲ ಕಾರ್ಯಗಳಲ್ಲಿ ಬೇಗ ಬೇಗ ಮುಕ್ತಾಯದ ಕಡೆ ಧಾವಿಸಿದರೂ ಚಕಿತ್ಸೆಯ ಜೊತೆಗೆ ಸಂಚಾರ-ಸಂಚಾರದ ಜೊತೆ ಚಕಿತ್ಸೆ.

ಚಕಿತ್ಸೆ, ಔಷಧಿಗಳಿಗೆ ಮಿತಿಯೇ ಇಲ್ಲ. ಎಲ್ಲ ಉತ್ತಮವಾದುದೂ ಸಾಧ್ಯವಾಯಿತು.೧೯೭೩ರ ಏಪ್ರೀಲ್ ತಿಂಗಳ ಮೂರರಂದು ಗುರೂಜಿ ಮೂರು ಅಂತಿಮ ಪತ್ರಗಳನ್ನು ಬರೆದು ತನ್ನ ಮರಣಾನಂತರ ಅದನ್ನುತೆಗೆಯಬೇಕೆಂದು ತಿಳಿಸಿದರು. ಒಂದು ಸರ್ವ ಸ್ವಯಂ ಸೇವಕ ಬಂಧುಗಳಿಗೆ, ಎರಡನೆಯದು ತಮ್ಮ ಉತ್ತರಾಧಿಕಾರಿಯ ಬಗೆಗೆ, ಮೂರನೆಯದು ತಮ್ಮ ಮರಣಾನಂತರದ ಕ್ರಿಯೆಗೆ ಸಂಬಂಧಪಟ್ಟಂತೆ.

ಕೀರ್ತಿಕಾಯರಾದರು:

ಏಪ್ರೀಲ್ ೧೦ ರಂದು ಗುರೂಜಿ ಕುರ್ಚಿಯಿಂದ ಇಳಿಯುವಾಗ ಉರುಳಿ ಬಿದ್ದರು. ಫಕ್ಕೆನೆ ನೋವು ಬಂದು.೧೦ ರಂದು ರಾಮನವಮಿ ಉಪವಾಸ ಮಾಡಿದರು. ತಮ್ಮ ಬಳಿಯಿದ್ದ ನಿತ್ಯ ಉಪಾಸನೆಯ ಸಾಧನಗಳನ್ನು ತಮ್ಮ ದಾಯಾದಿ ಸೋದರನಿಗೆ ಕಳಿಸಿದರು.

೧೯೭೩ರ ಜೂನ್ ಐದನೇ ತಾರಿಖು. ಜೇಷ್ಠ ಶುಕ್ಲ ಪಂಚಮಿ, ಉಸಿರಾಟದ ತೊಂದರೆ ಇನ್ನಷ್ಟು ಹೆಚ್ಚಿತ್ತು. ಸ್ನಾನ ಮಾಡಿಸಲಾಯಿತು. ತಮ್ಮ ನಿತ್ಯದ ಸಂಧ್ಯಾವಂದನೆ ಮುಗಿಸಿ ಆರಾಮ ಕುರ್ಚಿಯಲ್ಲಿ ಕುಳಿತಾಗ ಕಮಂಡಲವನ್ನು ಬಲಗಡೆ ಇರಿಸಿಕೊಂಡರು. ಯಾವಾಗಲೂ ಅಅವರು ಅದನ್ನು ಎಡಭಾಗದಲ್ಲಿ ಇರಿಸಿಕೊಳ್ಳುವ ರೂಢಿ ಇತ್ತು. ಯಾತ್ರೆ ಹೊಡುವ ದಿನ ಮಾತ್ರ ಬಲಗಡೆ ಇರಿಸಿಕೊಳ್ಳುತ್ತಿದ್ದರು. ಭೇಟಿಗೆಂದು ಬಂದವರೊಬ್ಬರೊಡನೆ “ಎಲ್ಲವೂ ಸಿದ್ಧವಾಗಿದೆ, ಹೊರಡುವುದು ಮಾತ್ರ ಬಾಕಿ” ಎಂದರು.

ರಾತ್ರಿ ಒಂಬತ್ತಾಗಿ ಐದು ನಿಮಿಷಕ್ಕೆ ಅವರ ಪ್ರಾಣ ಪಕ್ಷಿಯು ಹಾರಿ ಹೋಐಇತು. ಗುರೂಜಿ ಅಮರರಾಗಿದ್ದರು.

ಮನಸ್ಸಿನಲ್ಲಿ ಕೆತ್ತಬೇಕಾದ ಮಂತ್ರಗಳು:

ಗುರೂಜಿಯವರು ಮಾಡಿದ ಅಸಂಖ್ಯ ಭಾಷಣಗಳು, ಬರೆದ ಸಹಸ್ರಾರು ಪತ್ರಗಳು, ಪತ್ರಿಕಾಗೋಷ್ಠಿಯಲ್ಲಿ ನೀಡಿದ ನೂರಾರು ಹೇಳೀಕೆಗಳು ಇಂದೂ ವಿಶ್ವ ಸಾಹಿತ್ಯದ ಚಿಂತನ ಭಂಡಾರದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿವೆ.  ಗುರೂಜಿಯವರ ಜೀವನ ವಜ್ರದಂತೆ. ಅದಕ್ಕೆ ಎಲ್ಲ ಕಡೆಯೂ ಮುಖಗಳೇ.

ಅವರ ಚಿಂತನ ಪದ್ಧತಿ, ವಿಚಾರಧಾರೆಗಳೂ ಜಗತ್ತಿನ ಜನಾಂಗಕ್ಕೆ ಸ್ಪೂರ್ತಿಯ ಸೆಲೆಗಳು. ಅಂತಹ ಚಿಂತನಗಂತೆಗಯ ಕೆಲವು ತುಣುಕುಗಳಿವು.

೧) ವೀರನ  ಮೊಟ್ಟ ಮೊದಲನೆಯ ಸದ್ಗುಣ ಎಲ್ಲ ಉದಾತ್ತ ಸದ್ಗುಣಗಳ ಪ್ರಾರಂಭ ಬಿಂದು, ಅಭಯ.

೨) ಇದು ನನ್ನ ಧರ್ಮ, ಇದು  ನನ್ನ ವೇದಾಂತ, ಇದು ನನ್ನ ಹಿಂದೂ ರಾಷ್ಟ್ರ, ಅದಕ್ಕನುಗುಣವಾಗಿ ನಾನು ಬದುಕಬೇಕು, ಇತರ ನಾಡವರು ಅನುಸರಿಸಲು ಒಂದು ಮೇಲ್ಪಂಕ್ತಿಯನ್ನು ಹಾಕಿಕೊಡಬೇಕು ಎಂಬ ದೃಢ ನಂಬಿಕೆಯೇ ಹಿಂದೂಗಳ ಪುನಃ ಸಂಘಟನೆಗೆ ಭದ್ರ ಬುನಾಧಿ.

೩) ನ್ಯಾಯ ಸಮ್ಮತವಾದ ಭವ್ಯವಾದ ಗುರಿಗಾಗಿ, ಆತ್ಮಾರ್ಪಣೆಗೆ ಸಿದ್ಧನಾದಾಗ ಮನುಷ್ಯನ ಇಚ್ಛಾಶಕ್ತಿ ಉಕ್ಕಿನಂತಾಗುತ್ತದೆ.

೪) ದೇವರನ್ನು ಪೂಜಿಸುವ ವಿಧಾನವನ್ನು ಬದಲಾಯಿಸಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಈ ನೆಲದ ಮಗನೇ ಅಲ್ಲ ಎಂದು ಹೇಳುವಷ್ಟು ಸಣ್ಣ ಮನಸ್ಸಿನವರು ನಾವಲ್ಲ. ಭಗವಂತನನ್ನು ಯಾವ ಹೆಸರಿನಿಂದ ತಿಳಿದರೂ ನಮ್ಮ ಆಕ್ಷೇಪಣೆಯಿಲ್ಲ. ಈ ಸಂಘದಲ್ಲಿರುವ ನಾವು ಕಣಕಣದಲ್ಲಿಯೂ ಹಿಂದೂಗಳು. ಆದುದರಿಂದಲೇ ನಮಗೆ ಎಲ್ಲ ಮತಗಳಲ್ಲಿಯೂ ಮತ್ತು ಧಾರ್ಮಿಕನಂಬಿಕೆಗಳಲ್ಲಿಯೂ ಗೌರವ. ಇತರ ಮತಗಳ ಬಗ್ಗೆ ಅಸಹನೆಯುಳ್ಳವನು ಹಿಂದುವೇ ಅಲ್ಲ.

೫) ದುರ್ಬಲರಾಗಿ ಉಳಿಯುವುದು ಜಗತ್ತಿನಲ್ಲಿ ಅತಿ ಹೀನ ಪಾಪಕೃತ್ಯ. ಯಾಕೆಂದರೆ ಅದು ನಮ್ಮನ್ನು ನಾಶ ಮಾಡುವುದು ಮಾತ್ರವಲ್ಲ.  ಇತರರಲ್ಲಿಯೂ ನಮ್ಮನ್ನು ಆಕ್ರಮಿಸುವಂತಹ ಹಿಂಸಾಪ್ರವೃತ್ತಿಯನ್ನು ಪ್ರಚೋದಿಸುತ್ತದೆ.

೬) ಯುದ್ಧಮಾಡಲು ಇಬ್ಬರಾದರೂ ಬೇಕೆಂಬುವುದೇನೋ ನಿಜ. ಆದರೆ ಇಬ್ಬರೂ ಯೋಧರಾಗಿಯೇ ಇರಬೇಕೆಂಬುವುದೇನೂ ಇಲ್ಲವಲ್ಲ. ಒಬ್ಬ  ಪೆಟ್ಟು ಕೊಟ್ಟು ಇನ್ನೊಬ್ಬ ಪೆಟ್ಟು ತಿಂದರೂ ಸರಿಯೆ. ನಾವು ಶಾಂತಿಯಿಂದ ಇದ್ದು ಉಳಿದವರೊಡನೆ ಸರಿಯಾಗಇ ನಡೆದುಕೊಂಡರೆ ಇತರರೂ ನಮ್ಮೊಡನೆ ಹಾಗೇ ನಡೆದುಕೊಳ್ಳುತ್ತಾರೆಂದು ಭರವಸೆಯೇನು?

೭) ಚಕ್ರ ತಿರುಗಬೇಕಾದರೆ ಅದರ ಒಳಗಡೆ ತಿರುಗಣಿ ಚಕ್ರ ಇರುವುದು ಅಗತ್ಯ. ತಿರುಗಣಿ ಚಕ್ರ ಹೊರಗಿದ್ದರೆ ಚಕ್ರವು ತಿರುಗಲಾರದು. ತನ್ನ ಆಚೆಗೆ ಕೇಂದ್ರವಿರುವ ವೃತ್ತ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಅದು ಉಳಿಯಲಾರದು,.ನಮ್ಮ ರಾಷ್ಟ್ರದಾಚೆ ಯಾರಿಗಾದರೂ ನಿಷ್ಠೇ ಇದ್ದರೆ ಅವರನ್ನು ದ್ರೋಹಿ ಎಂದೇ ಕರೆಯುತ್ತೇವೆ.  ಒಬ್ಬ ಮನುಷ್ಯ ನಮ್ಮ ರಾಷ್ಟ್ರದಾಚೆಗಿನ ತತ್ವಗಳಿಂದ ಸ್ಫೂರ್ತಿ ಪಡೆಯುವುದು ಇನ್ನೂ ಹೆಚ್ಚಿನ ದ್ರೋಹವಲ್ಲವೇ?

೮) ನೀರಿನಲ್ಲಿ ಉಪ್ಪಿನ ಹರಳು ಹಾಕಿದರೆ ಕರಗಿ ಹೋಗುತ್ತದೆ. ಅದಕ್ಕೆ ಬೇರೆ  ಅಸ್ತಿತ್ವ ಇರುವುದಿಲ್ಲ. ಆದರೆ ನೀರಿನ  ಪ್ರತಿಯೊಂದು ಬಿಂದುವಿನಲ್ಲೂ ಅದರ ರುಚಿಯನ್ನು ಸವಿಯಬಹುದು. ವ್ಯಕ್ತಿಯು ಇದೇ ರೀತಿ ಸಮಷ್ಟಿಯಲ್ಲಿ ಸಮರಸವಾಗಬೇಕು.