ಒರ್ವ ವನಚರಂ ಮಹಾವನದೊಳ್ ವನದಂತಿಯಂ ಕಂಡ ನಿಮಿತ್ತಂ ಕೊಂಡು ನಿಂದಿರ್ಪಿನಮೊಂದು ಮಹಾಹಿ ತೊಟ್ಟಗೆ ಬರೆ ಪುಲುವಟ್ಟಯೊಳ್ ತೊಲಗಲಿಂಬಿಲ್ಲದೆ ಬಿಲ್ಲಂ ಕೊಂಡು ವಿಷದೂಷಿತಮಪ್ಪಂಬಂ ತೊಟ್ಟಿಸುವುದು ನಟ್ಟ ಕೋಲ್ವೆರಸೆಚ್ಚ ಬೇಡನಂ ಬೇಗದಿಂದಜಗರಂ ಕೊಲ್ವುದುಂ ತತಕ್ಷಣದೊಳವನುಮಹಿಯುಮಲ್ಲಿಯೆ ಬಿರ್ದು ಸಾವುದುಂ ಮತ್ತಲ್ಲಿಗತಿಲೌಲ್ಯ ನೆಂಬುದೊಂದು ಜಂಬುಕಂ ಪಲವುಂ  ದಿವಸಮಾಹಾರಂಬಡೆಯದೆ ಅಡವಿಯೊಳಾಹಾರಕ್ಕೆ ತೊಳಲುತ್ತೆ ಬಂದಾ ಶವತ್ರಯಮಂ ಕಂಡಾನಂದಮಯನಾಗಿ ಇಂದಿವನಿಂದೆ ತಿಂದೆನಾದೊಡೆ ಮತ್ತಂ ಪಸಿದು ಸಾವಂತಕ್ಕುಮದಲ್ಲದೆಯುಂ

ಶ್ಲೋ|| ಅನ್ಯಾಯವ್ಯಯಶೀಲಶ್ಚ ಹ್ಯನಾಥಕಲಹಪ್ರಿಯಃ
ಆತುರಸ್ಸರ್ಪಭಕ್ಷೀ ಚ ನರಶ್ಯೀಘ್ರಂ ವಿನಶ್ಯತಿ  ||೨೦೬||

ಟೀ|| ಆಯವಿಲ್ಲದೆ ಬೀಯವ ಮಾಡುವನುಂ ಸಹಾಯವಿಲ್ಲದೆ ಕಲಹಪ್ರಿಯನಾಗಿರುವನುಂ ಅತುರನಾಗಿ ಸರ್ವವಂ ಭಕ್ಷಿಸುವವನುಂ ಶ್ರೀಘ್ರವಾಗಿ ಕಿಡುವರ್ ಎಂಬೀ ನೀತಿಯುಂಟದುಮಲ್ಲದೆ ವಾಕ್ಯಂ || ಸಂಗ್ರಹೀ ನೋವಸೀದತಿ ಟೀ|| ಕೂಡಿಟ್ಟವನು ಬದುಕಿಕೊಳ್ಳವನು ಎಂಬ ಸುಭಾಷಿತಮುಂಟದಱೆಂದೆನೆಗೆ ಸಂಗ್ರಹಮಾಗಿರ್ಕುಮನ್ನೆಗಮೇನಾನುಮಂ ತಿಂಬೆನೆಂದು ಕೆಲನಂ ಶಬರಸಮೀಪದೊಳಿರ್ದು ಧನುವಂ ಕಂಡು

ಶ್ಲೋ || ಷಣ್ಮಾಸಂ ತು ಭವೆನ್ನಾಗಃ ಚಾತುರ್ಮಾಸಂ ತು ಪನ್ನಗಃ
ದ್ವಮಾಸಂತು ನರಶ್ಚೈವ ಅದ್ಯಕ್ಷೋ ಧನುರ್ಗುಣಃ  ||೨೦೭||

ಟೀ|| ಆನೆ ಆಱು ತಿಂಗಳ ಗ್ರಾಸ ಹೆಬ್ಬಾವು ನಾಲ್ಕು ತಿಂಗಳ ಗ್ರಾಸ ಮನುಷ್ಯನೆರಡು ತಿಂಗಳಗ್ರಾಸ ಈಗಿನ ವೇಳೆಗೆ ಬಿಲ್ಲಿನ ಹೆದೆಯೇ ಭಕ್ಷಿಸಲ್ತಕ್ಕದು. ಅಂತು ಸಂವತ್ಸರಾಂತಗ್ರಾಸಮಂ ನೆಱೆದುಕೊಂಡಿರ್ಪೆನೆಂದು ಇಂದಿಂಗೀ ಬಿಲ್ಲ ಹೆದೆಯ ಸಾಲ್ಗುಮೆಂದುಮದಂ ಕಡಿವುದುಮದು ಪರಿಯಲೊಡಂ  ಬಿಲ್ಲ ಕೊಪ್ಪು ತಾಳಿಗೆಯಂ ಚುರ್ಚಿ ನೆತ್ತಯೊಳ್ ಮೂಡುವುದುಮಾ ನರಿ ಬಿಱುವರಿದು ಸತ್ತದು. ಅದರಿಂದತಿಲೋಬಂ ಬೇಡೆಂದೆನಿತಾನುಂ ತೆಱದಿಂ ಬಿಟ್ಟಕ್ಷಣ ಬುದ್ದಿವೇಳ್ದೊಡೆಂತುಂ ಕೈಕೊಳ್ಳದಾ ಪುರದ ಪೊಱವೊೞಲೊಳಗಿರ್ಪ ಮಠದೊಳ್ ಪೊನ್ನಂ ಪೊೞ್ದು ಪಲವುಕಾಲಮಿರ್ದು ಕುತ್ತಂಬಟ್ಟರ್ಥಧ್ಯಾನದಿಂದ ಸತ್ತು  ಹಿರಣ್ಯವರ್ಣದ  ಮೂಷಕನಾಗಿ ಪುಟ್ಟಿ ಮತ್ತಂ ಪೊನ್ನಂ ಕಾದಿರ್ದೆನಿರ್ಪುದುಂ ಎನ್ನ ಶಿಷ್ಯಂ ಬಿಟ್ಟಕಣ್ಣಂ ಪೊನ್ನಿರ್ದೆಡೆಯನಱ*ಯದೊಡವಕುಟ್ಟುತ್ತುಂ ಮಠಮಂ ಪತ್ತುವಿಡದೆ ಪಿರಿಯದೊಂದು ಕರಕೆಯ ಕೊೞಂ ತಂದು ತಾನೊಂದು ಭಾಗಮನುಂಡು ,ಮಿಕ್ಕುದಂ ಭಿಕ್ಷಾಪಾತ್ರದೊಳ್ ಕಟ್ಟಿರ್ದುದನಾನುಂ ಪರಿಗ್ರಹಮುಮಾ ಕೂೞನನುದಿನಂ ತಿಂದು ಬೇರೆಯವರಿಗೆ ಉಪಯೋಗಕ್ಕಾಗಿ ಕೊಟ್ಟವರ ಐಶ್ವರ್ಯವು ಕೆಡುವುದಿಲ್ಲವಲ್ಲವೆ. ಶ್ಲೋ || ಧರ್ಮಕ್ಕಾಗಿ ಬಡವನಾದವನಿಗೆ ಬಡತನ ಬಂದರೂ ಅವನು ಶೋಭಿಸುವನು. ಅದು ಹೇಗೆಂದರೆ ದೇವತೆಗಳು ಕುಡಿದು ಬಿಟ್ಟ ಬೆಳದಿಂಗಳಿನ ಹಾಗೆ ! ಎಂಬ ಯುಕ್ತಿಯುಂಟು. ವ|| ಧನವನ್ನು ದರ್ಮೋದ್ದೇಶಕ್ಕಾಗಿ ವಿನಿಯೋಗಿಸಿದಲ್ಲಿ ಬಡತನವೂ ತಪಸ್ಸಿನಿಂದ ಕಳೆದ ದೇಹವೂ ಲೋಕದಲ್ಲಿ ಭೂಷಣವಾಗುವುದಲ್ಲದೆ ಬೇರೆಯಿಲ್ಲ. ನೀವು ಹೀಗೆ ಮೋಹಿತರಾದಲ್ಲಿ ಮೋಹಿತವಾದ ನರಿಯ ಹಾಗೆ ಅಗುವುದು ಎನ್ನಲು ಅದೇನು ಎಂದು ಕೇಳಲು ಬಿಟ್ಟ ಕಣ್ಣನ್ನು ಹಿಗೆಂದನು: ಒಬ್ಬ ಬೇಡನು ಒಂದು ದೊಡ್ಡ ಕಾಡಿನಲ್ಲಿ ಕಾಡಾನೆಯನ್ನು ಕಂಡ ಕಾರಣ ಕೊಂದು ನಿಂತಿರಲು ಒಂದು ದೊಡ್ಡ ಸರ್ಪವು ಕೋಡಲೇ ಬರಲು ಹುಲ್ಲು ದಾರಿಯಲ್ಲಿ ಹೋಗಲು ಎಡೆ ಇಲ್ಲದೆ ಬಿಲ್ಲನ್ನು ಕೊಂಡು ವಿಷದೂಷಿತವಾದ ಬಾಣವನ್ನು ಬಿಡಲು ನಟ್ಟ ಬಾಣಸಹಿತವಾಗಿ ಬೇಡನನ್ನು ಬೇಗನೆ  ಸರ್ಪವು ಕೊಲ್ಲಲು ಆ ಕ್ಷಣದಲ್ಲಿ ಅವನೂ ಸರ್ಪವೂ ಅಲ್ಲಿಯೇ ಬಿದ್ದು ಸಾಯಲು ಅಲ್ಲಿಗೆ ಅತಿಲೌಲ್ಯನೆಂಬ ಒಂದು ನರಿಯು ಹಲವು ದಿವಸಗಳಿಂದ ಆಹಾರ ಕಾಣದೆ ಅಡವಿಯಲ್ಲಿ ಆಹಾರಕ್ಕಾಗಿ ತೊಳಲಾಡುತ್ತ ಬಂದಿತು. ಅಲ್ಲಿ ಆ ಮೂರು ಹೆಣಗಳನ್ನೂ ಕಂಡು ಅನಂದಮಯವಾಗಿ ಇವತ್ತೆ ಇವನ್ನು ತಿಂದೆನಾದರೆ ಬಳಿಕ ಹಸಿದು ಸಾಯುವಂತಾಗುವುದು. ಅದಲ್ಲದೆ, ಶ್ಲೋ|| ಅಳತೆಯಿಲ್ಲದೆ ವ್ಯಯ ಮಾಡುವವನೂ ಸಹಾಯವಿಲ್ಲದೆ ಕಲಹಪ್ರಿಯನಾಗಿರುವವನೂ ಆತುರನಾಗಿ ಸರ್ವವನ್ನು ಭಕ್ಷಿಸುವನೂ ಬೇಗನೆ ನಾಶವಾಗುವರು, ಎಂಬನೀತಿಯುಂಟು. ವ|| ಅಲ್ಲದೆ ’ಸಮಗ್ರಹೀನೋವಾಸೀದತಿ’ ಕೂಡಿಟ್ಟವನು ಬಾಳುವನು ಎಂಬ ಸುಭಾಷಿತವು ಉಂಟು. ಅದರಿಂದ ನನಗೆ ಸಂಗ್ರಹವಾಗಿದೆ; ಯಾವಾಗ ಬೇಕಾದರೂ ಏನನ್ನಾದರೂ ತಿನ್ನುವೆನು ಎಂದು ಪಕ್ಕದಲ್ಲಿ ಬೇಡನ ಸಮೀಪದಲ್ಲಿದ್ದ ಬಿಲ್ಲನ್ನು ಕಂಡು ಶ್ಲೋ|| ಆನೆ ಆರು ತಿಂಗಳ. ಸರ್ಪವು ನಾಲ್ಕು ತಿಂಗಳ ಆಹಾರ ಮನುಷ್ಯನು ಎರಡು ತಿಂಗಳ ಆಹಾರ, ಸದ್ಯಕ್ಕೆ ಬಿಲ್ಲಿನ  ಹೆದೆಯೇ ಆಹಾರ. ವ||  ಹಾಗೆ ವರ್ಷವಿಡೀ ಬೇಕಾಗುವ ಆಹಾರವನ್ನು ತುಂಬಿಕೊಳ್ಳುವೆನೆಂದು ಇಂದಿಗೆ ಈ ಬಿಲ್ಲಿನ ಹೆದೆಯೇ ಸಾಕು ಎಂದು ಅದನ್ನು ಕಚ್ಚಲು ಅದು ಹರಿದು ಹೋಗಲು ಬಿಲ್ಲಿನ ಕೊಪ್ಪು ಗಂಟಲನ್ನು ಚುಚ್ಚಿ ನೆತ್ತಿಯಲ್ಲಿ ಮೂಡಿ ಅ ನರಿ ನೋವಿನಿಂದ ಸತ್ತುಹೋಯಿತು. ಅದರಿಂದ ಅತಿ ಲೋಭವೂ ಬೇಡ ಎಂದು ಎಷ್ಟೋ ರೀತಿಯಿಂದ ಬಿಟ್ಟ ಕಣ್ಣನ್ನು  ಬುದ್ದಿ ಹೇಳಲ ಹೇಗೂ ಅದನ್ನು ತೆಗೆದುಕೊಳ್ಳದೆ ಆ ಪುರದ  ಹೊರಬಾಗದಲ್ಲಿದ್ದ ಮಠದಲ್ಲಿ ಹೊನ್ನನ್ನು  ಹೊತ್ತು ಹಲವು ಕಾಲದವರೆಗೆ ಇದ್ದು ರೋಗಗ್ರಸ್ತನಾಗಿ ಹಣದ ಚಿಂತೆಯಿಂದಲ್ಲೆ ಸತ್ತು ಹಿರಣ್ಯ ವರ್ಣದ   ಮೂಷಕನಾಗಿ ಹುಟ್ಟಿ ಮತ್ತು ಹೊನ್ನನ್ನು ಕಾದುಕೊಂಡಿದ್ದೆನು. ಅಗ ಶಿಷ್ಯನಾದ ಬಿಟ್ಟಕಣ್ಣನು ಹೊನ್ನು ಇದ್ದ ಎಡೆಯನ್ನು ತಿಳಿಯದೆ ದುಖಿಃಸುತ್ತಾ ಮಠವನ್ನು ಸೇರದೆ ದೊಡ್ಡದೊಂದು ಕಮಂಡಲದ ಅನ್ನವನ್ನು ತಂದು ತಾನೊಂದು ಭಾಗವನ್ನು ಉಂಡು ಉಳಿದುದನ್ನು ಭಿಕ್ಷಾ ಪಾತ್ರೆಯಲ್ಲಿ ಕಟ್ಟಿದುದನ್ನು ನಾನು ಪರಿವಾರವೂ ಅನುದಿನವೂ ತಿಂದು ನಶ್ಚಿಂತಮಿರುತ್ತಿರೆ ಪಲವುಕಾಲಕ್ಕಲ್ಲಿಗೆ ಬೃಹಸ್ಪತಿಯೆಂಬ ಗೊರವಂ ಬರೆಬಿಟ್ಟಕಣ್ಣನಾತಂಗೆ ಪಟ್ಟಿರಲೆಡೆಗೊಟ್ಟು ಇರುಳಪ್ಪಾಗಳ್ ನಿಮ್ಮಡಿಗಳೆತ್ತಲ್ ಪೋಪಿರೆಂಬುದು ಬೃಹಸ್ಪತಿ ವಾಚಸ್ಪತಿಯಂತೆ ಸಮಸ್ತತೀರ್ಥಪ್ರಭಾವಂಗಳಂ ಪೇೞುತ್ತಿರಲದಂ ಬಿಟ್ಟಕಣ್ಣಂ ಸಾವಧಾನವಾಗಿ ಕೇಳ್ದುದರ್ಕೆ ಚಿತ್ತಪಲ್ಲಟಮಾಗಿ ತನ್ನ ಮಡಗಿದ ಕೂೞಂ ನಾಂ ತಿಂಬುದನಱ*ದು ಸುಯ್ಯುತ್ತಿರೆ ಬೃಹಸ್ಪತಿ ತನ್ನ ಮಾತುಗಳನಾತಂ ಕಿವುಂಡುಗೇಳ್ವುದುಮಾ ಗೊರವಂ ಬಿಟ್ಟಕಣ್ಣಂಗಿಂತೆಂದಂ:

ಶ್ಲೋ||ಅನಕಕ್ಷಿತಾಚ ಪ್ರಿಯಪೂರ್ವನಾಶನಂ ವಿವಾದನಂ ದುಶ್ಚರಿತಾನುಕೀರ್ತನಂ ಕಥಾಪ್ರಸಂಗೋ ನ ಚ ನಾಮವಿಸ್ಮಯೋ ವಿರಕ್ತಭಾವಸ್ಯ ಜನಸ್ಯಲಕ್ಷಣಂ||೨೦೮||

ಟೀ|| ನೋಡದೆಯಿರುಹವುಂ ಪ್ರೀತಿಪೂರ‍್ವಕವಹಂತಹುದ ಕಿಡಿಸುವಹವುಂ ವುವಾದಮಂ ಮಾಡುಹವುಂ ನುಡಿಯದಿರುಹವುಂ ವಿಸ್ಮಯವಿಲ್ಲದಿರುಹವುಂ ಇಂತಿಹವು ಸ್ನೇಹವಿಲ್ಲದ ಜನರ ಲಕ್ಷಣವೆಂದಱ*ವುದು ಎಂಬುಕ್ತಿಯುಂಟು. ತೀರ್ಥಂಗಳ ಪೆಸರಂ ಪೇಳಿಮೆಂದು ಬೆಸಗೊಳ್ವುದೆತ್ತಲೀಗಳಾಂ ಪೇಳುತಿರ್ದೆಡೆಯೊಳುದಾಸೀನಂಗೆಯ್ದು ಹೂಂಕೊಳದಿರ್ಪ ಕಾರಣಮೇನೆನೆ ಬಿಟ್ಟಕಣ್ಣನಿಂತೆಂದಂ: ಆಂ ಮಾತಂ ಕೇಳದಿರ್ದೆನಲ್ಲೆನದೆಂತೆಂದೊಡೆ ಎನ್ನ ಭಿಕ್ಷದ ಕೂೞನೊಂದು ಮೂಷಕಂ ನಿಚ್ಚಲುಂ ಬಂದು ತಿಂದು ಕಾಡುತಿರ್ಪುದದಱ ಕಾಟಕ್ಕೆ ಮಠಮಂ ಬಿಟ್ಟು ಪೋಪ ಚಿತ್ತನಾಗಿ ಚಿಂತಿಸುತ್ತಿರ್ದೆನೆನೆ ಬೃಹಸ್ಪತಿ ನಕ್ಕು *ಕೆರೆಗೆ ಮುನಿದು ಮಂಡೂಕಂ ಪೊಱಗಿರ್ದುದು* ಎಂಬಂತೆ ಇಲಿಯ ಕಾಟಕ್ಕಾಱದೆ ಮಠಮಂ ಬಿಸುಟು ಪೋಗಲೇಂ. ಒಂದು ಬೆಕ್ಕಂ ತಂದಿಟ್ಟೊಡರ್ದೆ ತಕ್ಕ ಪ್ರತೀಕಾರಮನದು ಮಾೞ್ಪುದೆಂದೊಡಾ ಮೂಷಕಂ ಬೆಕ್ಕಿಗಳವಲ್ತು ನೋಡೆ ಪೊನ್ನ ಬಣ್ಣದ.

ನಿಶ್ಚಿಂತವಾಗಿರಲು ಅನೇಕ ಕಾಲದ ಮೇಲೆ ಅಲ್ಲಿಗೆ ಬೃಹಸ್ಪತಿ ಎಂಬ ಸಂನ್ಯಾಸಿಯು ಬರಲು ಬಿಟ್ಟಕಣ್ಣನು ಅವನಿಗೆ ಮಲಗಲು ಆಶ್ರಯ ಕೊಟ್ಟನು. ರಾತ್ರಿಯಾದಾಗ ಸ್ವಾಮಿ ನೀವು ಎತ್ತ ಹೋಗುವಿರಿ ಎಂದು ಕೇಳಲು ಬೃಹಸ್ಪತಿಯು ವಾಚಸ್ಪತಿಯಂತೆ ಸಮಸ್ತ ತೀರ್ಥಕ್ಷೇತ್ರಗಳ ಪ್ರಭಾವಗಳನ್ನು ಹೇಳುತ್ತಿದ್ದನು. ಅದನ್ನು ಬಿಟ್ಟಕಣ್ಣನು ಸಾವಧಾನವಾಗಿ ಕೇಳಿದುದರಿಂದ ಚಿತ್ತಪಲ್ಲಟವಾಗಿ ತಾನು ಇಟ್ಟ ಅನ್ನವನ್ನು ನಾನು ತಿನ್ನುವುದನ್ನು ಕಂಡು ನಿಟ್ಟುಸಿರಿಡಲು ಬೃಹಸ್ಪತಿಯು ತನ್ನ ಮಾತುಗಳನ್ನು ಲಕ್ಷಿಸದೆ ಇರಲು ಆಸನ್ಯಾಸಿಯು ಬಿಟ್ಟಕಣ್ಣನಿಗೆ ಹೀಗೆಂದನು : ಶ್ಲೋ||ನೋಡದೆ ಇರುವಿಕೆಯೂ ಪ್ರೀತಿಪೂರ್ವಕವಾದುದನ್ನು ಕೆಡಿಸುವೂದೂ ಜಗಳಾಡುವುದೂ ಮಾತಾನಾಡದಿರುವುದೂ ವಿಸ್ಮಯ ಪಡದಿರುವುದೂ ಇವು ಸ್ನೇಹವಿಲ್ಲದ ಜನರ ಲಕ್ಷಣ ಎಂದು ತಿಳಿಯಬೇಕು ಎಂಬ ಉಕ್ತಿಯುಂಟು. ವ|| ತೀರ್ಥಗಳ ಹೆಸರನ್ನು ಹೇಳಿ ಎಂದು ಕೇಳಿಕೊಳ್ಳವುದೆತ್ತ, ಈಗ ನಾನು ಹೇಳುತ್ತಿರುವಾಗ ಉದಾಸೀನನಾಗಿ ಹೂಂಕೊಳ್ಳದಿರುವ ಕಾರಣವೇನು ಎನ್ನಲು ಬಿಟ್ಟಕಣ್ಣನು ಹೇಳಿದನು; ನಾನು ಮಾತನ್ನು ಕೇಳದೇ ಇರಲ್ಲಿಲ್ಲ. ಹೇಗೆಂದರೆ ನನ್ನಭಿಕ್ಷೆಯ ಕಾಳನ್ನು ಒಂದು ಮೂಷಕವು ನಿತ್ಯವೂ ಬಂದು ತಿಂದು ಕಾಡುತ್ತತ್ತು; ಅದರ ಕಾಟಕ್ಕೆ ಮಠವನ್ನು ಬಿಟ್ಟು ಹೋಗುವ ಮನಸ್ಸುಳ್ಳವನಾಗಿ ಚಿಂತಿಸುತ್ತಿದ್ದೆ. ಬೃಹಸ್ಪತಿಯ ನಕ್ಕು ’ಕೆರೆಗೆ ಮುನಿದು ಮಂಡೂಕವು ಹೊರಗಿದ್ದಿತು’ ಎಂಬಂತೆ ಇಲಿಯ ಕಾಟಕ್ಕೆ ಮಠವನ್ನು ಬಿಟ್ಟುಹೋಗುವುದೇನು ಒಂದು ಬೆಕ್ಕನ್ನು ಸಾಕಲು ಅದಕ್ಕೆ ತಕ್ಕ ಪ್ರತೀಕಾರವನ್ನು ಅದು ಮಾಡುವುದು ಎನ್ನಲು, ಆಮೂಷಕವು ಬೆಕ್ಕಿಗೆ ಅಸಾದ್ಯ ನೋಡಲು ಚಿನ್ನದ ರೋಮವೂ ಗುರುಗುಂಜಿಯ ಬಣ್ಣದ ಮೆಯ್ನಮಿರುಂ ಗುರುಗುಂಜಿಯ ಬಣ್ಣದಂತಿರ್ಪ ಕಣ್ಣುಂ ಕೊಣಕೋಲಂತಪ್ಪ ಬಾಲಮುಂ ಬೆರಸು ಬಿಲದೊಳ್ ಪೊಕ್ಕು ಪುಲಿಯಂತೆ ಗರ್ಜಿಸುತ್ತುಮುರ್ಪುದೇಗೆಯ್ವೆನೆಂದೊಡೆ ಬೃಹಸ್ಪತಿಯಿಂತೆಂದಂ: ಅಂತಪ್ಪೊಡದು ಕಪ್ಪೆಯ ಕಥೆಯಂತಾಗದಿರದೆನೆ ಬಿಟ್ಟಕಣ್ಣನದೆಂತೆನೆ ಬೃಹಸ್ಪತಿ ಪೇೞ್ಗುಂ;