ಶ್ರೀವಲ್ಲಭನಾಗಿ ಸಮ-
ಸ್ತಾವನಿಯಂ ಕಾವ ನೃಪತಿ ತನಗಿನಿಸಂ ನಾ-
ನಾವಿಧ ನೀತಿಕ್ರಮ ಸಂ-
ಭಾವನೆಯಿಂದ ಮಿತ್ರರಾಗಿ ಮಾೞ್ಪುದು ಪಲರಂ ೪೦೯
ಅದು ಕಾರಣದಿಂ
ಮಿತ್ರಾಬ್ಜಿಜನೀಸರೋರುಹ
ಮಿತ್ತಂ ವಿರಚಿಸಿದನಖಿಲಬುಧನಿ ಮನುಚಾ-
ರಿತ್ರಂ ಗೌತಮಗೋತ್ರ ಪ-
ವಿತ್ರಂ ವಿಭು ಮಿತ್ರಕಾರ್ಯತಂತ್ರಮನಿಳೆಯೊಳ್ ೪೧೦
ಶ್ಲೋ|| ಸಾಧವೋ ಮಂತ್ರಸಂಯೋಗಾದ್ಭುದ್ಧಿಮಂತ್ರಸ್ಸುಹೃಜ್ಜನಾಃ
ಸಾಧಯಂತ್ಯಾಶು ಕಾರ್ಯಾಣಿ ಕಾಕಕೂರ್ಮಮೃಗಾಖುವತ್ ||೧೯೪||
ಟೀ|| ಬುದ್ಧಿವಂತರಾಗಿರ್ದವರ್ ಸಾಧುಗಳ ಸಂಸರ್ಗವನ್ನೇ ಮಾಡುವುದು. ಅದೆಹಗೆಂದೊಡೆ ಕಾಗೆ ಆಮೆ ಸಾರಗ ಇಲಿಗಳ್ ಮಿತ್ರತ್ವವನೆಯ್ದಿದಹಗೆ. ಆ ಕಥಾಪ್ರಪಂಚಮೆಂತೆನೆ :
Leave A Comment