ಅವಂತಿದೇಶದೊಳ್ ಕಾಂಚೀಪುರವೆಂಬ ಪೊಳಲುಂಟದೆಂತೆನೆ,
ಕರಮೊಪ್ಪುವ ಪೂಗೊಳದಿಂ
ಪಿರಿದೊಪ್ಪುವ ದೇವಕುಳದಿನೆಸೆವಂಗಡಿಯಿಂ
ನೆರೆಪೊಪ್ಪುವ ಜನಪಥದಿಂ
ಸುರಪುರದವೊಲಿರ್ಪ ಕಾಂಚಿಪುರವರಮೆಸೆಗುಂ ೪೩೨

ಮೆತ್ತಮಾ ಪುರಪ್ರಾಂತದೊಳ್,
ನೆಱೆದಿರ್ದೇರಿಯ ನೇರಿತಪ್ಪೆಡೆಗಳೂಳ್ ನೇರ್ಪಟ್ಟು ಶೋಭಾವಹ-
ಕ್ಕೆಱೆವಟ್ಟುಜ್ವ್ಜಲಮಪ್ಪ ದೇವಕುಳದಿಂದಚ್ಛಾಂಬುವಿಯಿಂದಬುಜ-
ಕೆಳಗುತ್ತಿರ್ಪಳಿಮಾಲೆಯಿಂ ಖಗಗಣೋದ್ಯಲ್ಲೀಲೆಯಿಂದೆತ್ತಮಾ
ಕೆಱೆರಯ್ಯಂ ನೆಱೆ ನೋೞ್ಪೊಡಾವ ತೆಳದಿಂ ಕಾಂಚಿಪುರೋಭಾಗದೊಳ್  ೪೩೩

ಅಂತೊಪ್ಪುವ ಕೆಱೆಯೊಳ್ ಪಲವುಂ ಕಪ್ಪೆಗಳ್ ಟರಟರೆಂಬ ಶಬ್ದದೊಳ್ ಕರೆಯುತ್ತ ಮಿರ್ಪುದುಮೊಂದು ಪಿರಿದಪ್ಪ ಕಲ್ಲನೇಱ*ರ್ದಲ್ಲಿಂ ತೊಲಗದೆ ಟರಟರೆಂದು ಕರೆಯುತ್ತಿರ್ಪುದನದೊರ್ವ ಪಾರ್ವಂ ಕೆಲವು ದಿವಸಂ ಕೇಳುತ್ತಮಿರ್ದುಮಿದೇನೆಂದು ವಿಸ್ಮಯಂಬಟ್ಟುಮದಂ ನೋಡಲೆಂದು ಕಣ್ಣು ಕೊಣಕೋಲಿನ ಹಾಗೆ ಇರುವ ಬಾಲವೂ ಇದ್ದು ಬಿಲದೊಳಕ್ಕೆ ಹೋಗಿ ಹುಲಿಯಂತೆ ಗರ್ಜಿಸುತ್ತಲೂ ಇರುವುದು ಏನು ಮಾಡಲಿ ಎನ್ನಲು ಬೃಹಸ್ಪತಿಯು ಹೀಗೆಂದನು; ಹಾಗಾದರೆ ಅದು ಕಪ್ಪೆಯ ಕಥೆಯಂತೆ ಆಗದಿರಲು ಎನ್ನಲು ಬಿಟಕಣ್ಣನ್ನು ಅದೇನು ಎನ್ನಲು ಬೃಹಸ್ಪತಿಯು ಹೇಳಿದನು:  ಆವಂತಿ ದೇಶದಲ್ಲಿ ಕಾಂಚಿಪುರವೆಂಬ ಪಟ್ಟಣವುಂಟು ಅತಿಶಯವಾಗಿ ಶೋಭಿಸುವ ದೇವಾಲಯದಿಂದಲೂ ಶೋಭಿಸುವ ಅಂಗಡಿಗಳಿಂದಲೂ ತುಂಬಿ ಕಾಣುವ ಜನರ ಮಾರ್ಗಗಳಿಂದಲೂ ಸುರಪುರವೆಂಬಂತೆ ಕಾಂಚಿಪುರುವು ಸೊಗಯಿಸುತ್ತಿತ್ತು ವ|| ಆ ಪುರ ಪ್ರಾಂತದಲ್ಲಿ ೪೩೩; ಏರಿ ಏರಿಗಳಲ್ಲಿ ನೇರವಾಗಿ  ತುಂಬಿದ್ದು ಅದರ  ಸೌಂದರ್ಯವನ್ನು ಬಯಸಿ ಶೋಭಾಯಮಾನವಾದ ದೇವಾಲಯದಿಂದಲೂ ಸ್ವಚ್ಚಜಲದಿಂದಲೂ ತಾವರೆಗಳಿಗೆ ಎರಗುತ್ತಿರುವ ತುಂಬಿಗಳ ಹಿಂಡಿನಿಂದಲೂ ಆಟವಾಡುವ ಪಕ್ಷಿ ಸಮೂಹದಿಂದಲೂ ಆ  ಕರೆಯೂ ಯಾವ ರೀತಿಯಿಂದಲೂ ನೋಡಿದರು ಕಾಂಚಿಪುರದಲ್ಲಿ  ರಮ್ಯವಾಗಿತ್ತು , ವ|| ಆ ಕೆರೆಯಲ್ಲಿ ಹಲವು ಕಪ್ಪೆಗಳು ಟರಟರೆಂಬ  ಶಬ್ದದಿಂದ ಕೂಗುತ್ತಿರಲು ಅದೊಂದು ಹಿರಿಯ ಕಲ್ಲನ್ನು ಏರಿ ಅಲ್ಲಿಂದ ತೊಲಗದೆ ಟರಟರೆಂದು ಕೂಗುತ್ತಿದ್ದನ್ನು ಒಬ್ಬ ಬ್ರಾಹ್ಮಣನು ಕೆಲವು ದಿವಸಗಳವರೆಗೆ ಕೆಳುತ್ತಿದ್ದು ಇದೇನೆಂದು ಆಶ್ಚರ್ಯಪಟ್ಟು ಅದನ್ನು ಕಾಣಬೇಕೆಂದು ಬರಲು ಆತನ ಆಗಮನವನ್ನು ಬರ್ಪುದುಮಾತನ ಬರವಂ ಕಂಡು ಕೆಲದ ದುರ್ದರಂಗಳೆಲ್ಲಂ ಪರೆದೋಡೆಯವಱೊಳಗೊಂದು ಸ್ಥೂಲದರ್ದುರಂ ತನ್ನಿರ್ದೆಡೆಯಿಂದೇಗೆಯ್ದುಂ ಪೋಗದಿರಲಿದೇನಾನುಮೊಂದು ಚೋದ್ಯಮಾಗಲೆವೇೞ್ಕು ಮೆಂದಾ ಪಾರ್ವನಾ ಕಪ್ಪೆಯ ಕಾಲಂ ಪಿಡಿದೀದಾಡಿ ಕಳೆದು ಬೞ*ಕ್ಕೆ ಕಲ್ಲಂ ನೂಂಕಿಯದಱ ಕೆಳಗಿರ್ದ ಪೊನ್ನಂ ಕೊಂಡು ಪೋದಂ ಅದಱ*ಂದೇನಾನುಮೊಂದು ಕಾರ‍್ಯಮಾಗಲೇವೇೞ್ಕುಮೆಂದಾ ಗೊರವರುಮೆನ್ನ ಮಡಗಿರ್ದ ಪೊನ್ನಂ ಕೊಂಡುಪೋದರ್ ಮತ್ತಮಾಯೆಡೆಯಂ ಪತ್ತುವಿಡಲಾಱದಲ್ಲಿಯೆ ಪರಿಭವಂಬಟ್ಟು ಚಿಂತಿಸುತಿರ್ದೆನ್ನಂ ಕಂಡೀತನೇನತರ್ಕಂ ಕ್ಷಮನಲ್ಲವೆಂದೆನ್ನ ಪರಿಗ್ರಹಂ ಪರೆದು ಪೋದವು. ಆಂ ಬೞ*ಕ್ಕೆ,

ಶ್ಲೋ || ಅಜ್ಞಾತ ಜೀವಿತಂ ಶೂನ್ಯಂ ಧೇಶಶೂನ್ಯನ್ಯೋಹ್ಯಬಾಂಧವಃ
ಅಪುತ್ರಸ್ಯ ಗೃಹಂ ಶೂನ್ಯಂ ಸರ‍್ವಶೂನ್ಯಾ ದರಿದ್ರತಾ  ||೨೦೯||

ಟೀ|| ಅಱ*ವಿಲ್ಲದೊಡೆ ಜೀವಿತವೂ ಬಂಧುಗಳಿಲ್ಲದ ದೇಶವೂ ಮಕ್ಕಳಿಲ್ಲದ ಮನೆಯೂ ಬಡತನವಾಗಿಹವೂ ಪ್ರಯೋಜನಮಿಲ್ಲವೆಂದಱ*ವುದು ಎಂಬ ಶ್ಲೋಕಾರ್ಥಮೆನ್ನೊಳ್ ಸನ್ನಿದಮಾದುದುಕಾರಣದಿಂದರ್ಥಮಂ ಕೊಳ್ಪಟ್ಟು  ಬಂದೆನೆಂದು ಪೇೞ್ವುದುಂ ಸುವರ್ಣರೋಮನ ಮಾತೆಲ್ಲಮಂ ಕಚ್ಛಪಂ ಕೇಳ್ದಿಂತೆಂದುದು:

ಪಡೆದುಣ್ಣದುಡದೆ ದಾನಂ
ಗುಡದತಿಲೋಭದೊಳಮೆಯ್ದೆ ಮನುಜರ್ ಧನಮಂ
ಮಡಗಿಟ್ಟು ಕೆಟ್ಟವರಂ ಕೇ
ಳ್ವೊಡವರ್ಗೆನೊಂದು ತೆರದಿನದು ವಿವಿಹಿತಂ ೪೩೪

ಅದರಂ ನಿನರ್ಥದೊಳಾದೞಲಂ ಪತ್ತಿವಿಟ್ಟು ಪರಿಣಮಿಸಿರ್ಪುದದೆಂತೆನೆ:

ಶ್ಲೋ || ಉದಯೇ ಸವಿತಾ ರಕ್ತೋರಕ್ತಶಾಸ್ತಮಯೇ ತಥಾ
ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ  ||೨೧೦||

ಕಂಡು ಅಕ್ಕಪಕ್ಕದ ಕಪ್ಪೆಗಳೆಲ್ಲ ಚೆದುರಿ ಓಡಿದವು. ಅವುಗಳಲ್ಲಿ ಒಂದು ದಪ್ಪ ಕಪ್ಪಯು ತಾನ್ನಿದ್ದ ಸ್ಥಳದಿಂದ ಏನು ಮಾಡಿದರೂ ಹೋಗದಿರಲು ಇದರಲ್ಲೇನೋ ರಹಸ್ಯವಿರಬೇಕೆಂದು ಆ ಬ್ರಾಹ್ಮಣನು ಆ  ಕಪ್ಪೆಯ ಕಾಲನ್ನು ಹಿಡಿದು ಬಿಸುಟು ಬಳಿಕ ಕಲ್ಲನ್ನು ನೂಕಿ ಅದರ ಕೆಳಬಾಗದಲ್ಲಿದ್ದ ಹೊನ್ನ್ನನ್ನು  ಕೊಂಡುಹೋದನು. ಅದರಂತೆ ಏನೋ ಒಂದು ಕಾರ‍್ಯವಿರಲೇಬೇಕೆಂದು  ಆ ಸಂನ್ಯಾಸಿಗಳು ನಾನಿಟ್ಟ ಹೊನ್ನು ಕೊಂಡು ಹೋದರು ಮತ್ತು ಆ ಸ್ಥಳವನ್ನು ಬಿಡಲಾರದೆ ಅಲ್ಲಿಯೇ ಸೋತು ಚಿಂತಿಸುತ್ತಿದ್ದ ನನ್ನನ್ನು ಕಂಡು ಈತನು ಯಾವುದಕ್ಕೂ ಶಕ್ತನಾಲ್ಲ  ಎಂದು ನನ್ನ ಪರಿವಾರವೆಲ್ಲ ಚದರಿ ಹೋದವು. ನಾನು ಬಳಿಕ ಶ್ಲೋ|| ತಿಳುವಳಿಕೆ ಇಲ್ಲದ  ಜೀವನವು ಬಂದುಗಳಿಲ್ಲದ ದೇಶವುಮಕ್ಕಳಿಲ್ಲದ ಮನೆಯು ಬಡತನವೂ ಪ್ರಯೋಜನವಿಲ್ಲ ಎಂದು ತಿಳಿಯಬೇಕು ಎಂಬ ಶ್ಲೋಕಾರ್ಥವು ನನ್ನಲ್ಲಿ ಸಮೀಪವಾಯಿತು. ವ|| ಅದರಿಂದ ಹಣವನ್ನು ಒಪ್ಪಿಸಿ ಬಂದೆ ಎಂದು ಹೇಳಲು ಸುವರ್ಣರೋಮನ ಮಾತೆಲ್ಲವನ್ನು ಅಮೆಯು ಕೇಳಿ ಹೀಗೆಂದಿತು. ೪೩೪. ಸಾಕಷ್ಟಿದ್ದು ಉಣ್ಣದೆ ಉಡದೆ ದಾನ ಮಾಡದೆ  ಅತಿ ಲೋಭದಿಂದ ಮನುಷ್ಯರು ಧನವನ್ನು ಬಚ್ಚಿಟ್ಟು ಕೆಟ್ಟು ಹೋದವರನ್ನು ಕೇಳಿದರೆ ಅವರಿಗೆ ಒಂದಲ್ಲ ಒಂದು ರೀತಿಯಿಂದ ಅದು ವಿವಿಹಿತವಾಗಿದೆ. ವ|| ಅದರಿಂದ ನಿನ್ನ ಹೊನ್ನಿನಿಂದ ಅದ ದುಖಃವನ್ನು ದೂರ ಮಾಡಿ ಇರು; ಹೇಗೆಂದರೆ ಶ್ಲೋ: ಮಹಾ ಪುರುಷರು ಸಂಪತ್ತನ್ನೂ ವಿಪತ್ತನ್ನೂ

ಟೀ|| ಮಹಾಪುರುಷರ್ ಸಂಪತ್ತನೂ ವಿಪತ್ತನೂ ಸಮನಾಗಿ ಕಾಣ್ಬರ್. ಅದು ಹೆಗೆಂದೊಡೆ ಸೂರ‍್ಯನು ಉದಯಾಸ್ತಮಾಯ ಕಾಲದಲ್ಲಿ ಒಂದೇ ಮರ‍್ಯಾದೆ ಕೆಂಪು ಕುಂದದ ಹಾಂಗೆ ಎಂದಱ*ವುದೆಂದುಮದಲ್ಲದೆಯುಂ,

ಶ್ಲೋ|| ಮೃತಂ ವಾ ಯದಿ ವಾ ನಷ್ಟಂ ಯೋತೀತಮನುಶೋಚತಿ
ದುಃಖಾದ್ದುಃಖಮವಾಪ್ನೋತಿ ದ್ವಾವನರ್ಥೌ ಪ್ರಪದ್ಯತೇ  ||೨೧೧||

ಟೀ || ಅವನಾನೋರ್ವವಂ ಮುನ್ನ ಸತ್ತವರನಾದೊಡಂ ಮುನ್ನ ಕೆಟ್ಟವರನಾದೊಡಂ ಶೋಕಿಸಿಹನು ಅವನು ಮರಳಿ ದುಃಖವೆನಯ್ದುವನು ಅಂತಂಗೆಂದುಂ ಸುಖವಿಲ್ಲ ಎಂಬೀ ಶ್ಲೋಕಾರ್ಥಮಂ ಬಗೆವುದು. ಮತ್ತಂ ಪರಿಗ್ರಹಮುಂ ಪತ್ತುವಿಟ್ಟು ಪೋಪುದುಮದೆಲ್ಲಿಯುಮುಂಟದೆಂತೆನೆ:

ಶ್ಲೋ|| ವೃಕ್ಷಂ ಕ್ಷೀಣಫಲಂ ತ್ಯಜಂತಿ ವಿಹಗಾ ದಗ್ಧಂವನಂ ಶ್ವಾಪಾದಾಃ
ಮಾಲಾಂ ಪರ‍್ಯುಷಿತಾಂ ತ್ಯಜಂತ್ಯಳಿಗಣಾಃ ಶುಷ್ಕಂ ಸರಸ್ಸಾರಸಾಃ

ನಿರ್ದ್ರವ್ಯಂ ಪುರುಷಂ ತ್ಯಜಂತಿ ಗಣಿಕಾಃ ದುಷ್ಟಂ ನೃಪಂ ಮಂತ್ರಿಣಃ
ಸರ‍್ವಃ ಕಾರ‍್ಯವಶಾಜ್ಜನೋನುರಮತೇ ಕಃ ಕಸ್ಯ ಕೋ ವಲ್ಲಭಃ  ||೨೧೨||

ಟೀ|| ಫಲಹೀನಮಾದ ವೃಕ್ಷವನು ಪಕ್ಷಿಗಳ್ ಬಿಡುವವು. ಬೆಂದಡಮಿಯನು ಮೃಗಂಗಳ್ ಬಿಡುವವು, ಬಾಡಿದ ಪುಷ್ವಂಗಳನು ತುಂಬಿಗಳ್ ಬಿಡುವುವು. ಬತ್ತಿದ ಕೆರೆಯನು ಹಂಸೆಗಳ್ ಬಿಡುವುವು. ಧನಮಿಲ್ಲದ ಪುರುಷನನು ಗಣಿಕೆಯರು ಬಿಡುವರು. ದುಷ್ಟನಹ ಒಡೆಯನನು ಮಂತ್ರಿಗಳ್ ಬಿಡುವರು. ಎಲ್ಲರೂ ಕಾರ‍್ಯವಶದಿಂದಹರಲ್ಲದೆ ಆರಿಗಾರೂ ಪ್ರಿಯರಲ್ಲ ಎಂಬೀ* ಶ್ಲೋಕಾರ್ಥದಂತೆ ಸ್ವಾರ್ಥಪರರಲ್ಲದೆ ಪರಾರ್ಥಪರರಾರುಮಿಲ್ಲ. ಆವ ಜೀವಕ್ಕಮಾಪತ್ತಿನೊಳ್ ತನಗೆ ತಾನಲ್ಲದೆ ಅರುಮಿಲ್ಲೆಂಬುದು ನಿಶ್ಚಯಮೆಂದಱ*ವುದು. ಅದಂತಿರ್ಕೆ ನೀಂ ನಿನ್ನ ನೆಲೆಯಂ ಪತ್ತುವಿಟ್ಟು ಬಂದೆನೆಂಬುಬ್ಬೇಗಂ ಬೇಡದೆಂತೆನೆ:

ಸಮನಾವಾಗಿ ಕಾಣುವರು ಹೇಗೆಂದರೆ, ಸೂರ‍್ಯನು ಉದಯಸ್ತಮಾನ ಕಾಲದಲ್ಲಿ  ಒಂದೇ ರೀತಿಯಲ್ಲಿ ಕೆಂಪು ಕುಂದದ ಹಾಗೆ ಇರುತ್ತಾನೆ. ಎಂದು ತಿಳಿಯಬೇಕು, ಅಲದೆ, ಶ್ಲೋ || ಯಾರಾದರೂ ಹಿಂದೆ ಸತ್ತವರಿಗಾಗಿಯೂ ಹಿಂದೆ ಕೆಟ್ಟವರಿಗಾಗಿಯೂ ಅಳುವನು ಪುನಃ ದುಖಃತನಾಗುವನು ಅತನಿಗೆ ಎಂದೆದಿಗೂ ಸುಖವಿಲ್ಲ ಎಂಬ ಶ್ಲೋಕಾರ್ಥವನ್ನು ಬಾವಿಸು. ಮತ್ತೆ ಪರಿವಾರವೆಲ್ಲ ಬಿಟ್ಟು ಹೋಗುವುದು ಎಲ್ಲಾ ಕಡೆಯಲ್ಲಿಯೂ ಉಂಟು. ಹೇಗೆಂದರೆ ಶ್ಲೋ|| ಪಲಹೀನವಾದ ವೃಕ್ಷವನ್ನು  ಪಕ್ಷಿಗಳು ಬಿಡುವುವು ಬೆಂದ ಅಡವಿಯನ್ನು ಮೃಗಗಳು ಬಿಡುವವು ಬಾಡಿದ ಪುಷ್ಪಗಳನ್ನು ದುಂಬಿಗಳು ಬಿಡುವುವು. ಬತ್ತಿದ ಕೆರೆಯನ್ನು ಹಂಸಗಳು ಬಿಡುವವು. ಧನವಿಲ್ಲದ ಪುರುಷನನ್ನು  ಗಣಿಕೆಯರು ಬಿಡುವರು ದುಷ್ಟನಾದ ಒಡೆಯನನ್ನು ಮಂತ್ರಿಗಳು ಬಿಡುವರು. ಎಲ್ಲರೂ ಕಾರ‍್ಯ ವಶರಾಗಿ ಇದ್ದಾರಲ್ಲದೆ ಯಾರಿಗೂ ಯಾರು ಪ್ರಿಯರಲ್ಲ ಎಂಬ ಈ ಶ್ಲೋಕಾರ್ಥದಂತೆ ಸ್ವಾರ್ಥಪರರಲ್ಲದೆ ಪರಾರ್ಥಪರರೂ ಯಾರು ಇಲ್ಲ ವ|| ಯಾವ ಜೀವಕ್ಕಾದರೂ ಅಪತ್ತಿನಲ್ಲಿ ತನಗೆ ತಾನೇ ಅಲ್ಲದೆ ಯಾರು ಇರುವುದಿಲ್ಲ,  ಇದು ನಿಶ್ಚಯ ಎಂದು ತಿಳಿಯಬೇಕು. ಅದು ಹಾಗಿರಲಿ ನೀನು ನಿನ್ನ

ಶ್ಲೋ || ಕೋತಿ ಭಾರಸ್ಸಮರ್ಥಾನಾಂ ಕಿಂ ದೂರಂ ವ್ಯವಸಾಯಿನಾಂ
ಕೋ ವಿದೆಶಸ್ಸಮಾರ್ಥಾನಾಂ ಕಃ ಪರಃ ಪ್ರಯವಾದಿನಾಂ  ||೨೧೩||

ಟೀ || ಸಮರ್ಥನಹ ಪುರುಷಂಗೆ ಅವುದೂ ಅರಿದಲ್ಲ. ವ್ಯವಸಾಯಶೀಲಂಗೆ ದೂರಮೆಂಬುದಿಲ್ಲ ವಿದ್ವಾಂಸರಿಗೆಲ್ಲಾ ದೇಶವು ತನ್ನದು. ಪ್ರಿಯವ ನುಡಿಯ ಬಲ್ಲವಂಗೆ ಎಲ್ಲವರೂ ತನ್ನವರು ಎಂಬುಕ್ತಿಗಳೊಳವು. ಅದಱ*ಂ ಲಘುಪತರನಕನೊಡನಲ್ಲಿಗೆ ಬಂದು ಕರಮೊಳ್ಳಿತ್ತುಗೆಯ್ದ ನಾವೆಲ್ಲ ಮೊಂದೆಡೆಯೊಳಿರೆ ತೀರುದುದಿಲ್ಲ, ನಿಶ್ಚಿಂತಮಿರೆಂದು ಕೂರ್ಮಂ ಕೂರ್ಮೆಯಪ್ಪ ಮಾತುಗಳಂ ನುಡಿದು ಹಿರಣ್ಯರೋಮನ ಮನದೊಳಾದ ವಿಷಾದಮಂ ಕಳೆಯೆ ವಾಯುಸನದರ್ಕೆ ಸಂತಸಂಬಟ್ಟು ಬೞ*ಕ್ಕೆ ಕಚ್ಚಪಮೂಷಕ ಕಾಕಂಗಳೊಂದಾಗಿ ಪಲಕಾಲಮ ಸುಖದಿನಿರ್ದೊಂದು ದಿವಸಮಾ ಮಿತ್ರತ್ರಯಂ ಮಡುವಿನ ತಡಿಯೊಳೇನಾನುಮಂ ನುಡಿಯುತ್ತಿರ್ಪಿನಂ ಅಲ್ಲಿಗೆ ಚಿತ್ರಾಂಗೆನೆಂಬ ಸಾರಂಗಂ ಬೋರೆನೆ ಬಂದು ನಿರಂ ಕುಡಿಯಲಣ್ಮದೆ ಪೆಪ್ಪಳಿಸಿ ಪೆಱಗಂ ನೋಡಿ ನಡುಗುತ್ತುಂ  ನಿಂದುದಂ  ಕಚ್ಚಪಾದಿಗಳ್ ಕಂಡುಮಿದೇಂ ಕಾರಣಮೆಂದು ತಮ್ಮೊಳ್ ನುಡಿವಲ್ಲಿ ವಾಯುಸನದಱ ಚೇಷ್ಟೆಯನರಿದಾರಾನುಮಂ ಇದೆ ಬಳಿಕ್ಕಂ ಸಾರಂಗಕ್ಕೆಂದುದೆಂ ಗಡಾ ! ನಿನಿಂತೇಕೆ ಭಯಾಕುಲನಾಗಿರ್ಪೆ ಎನೆ ಚಿತ್ರಾಂಗನಿಂತೆಂದಂ: ಇಂದು ನೇಸರ್ಮೂಡುವುದುಂ ಬೇಡೆರೆನ್ನಂ ತಗಳ್ದು ಬೆನ್ನಂಬಿಡದಟ್ಟುತ್ತುಂ ಬರೆ ಬೞಲ್ದು ನೀರ್ಗಾಸೆವಟ್ಟು ಬಂದೆನೆಂದು ಪೇಳ್ದುದುಮದೆಲ್ಲಮಂ ಕೇಳ್ದು ಕಾಕಾನಿಲ್ಲಿ ಭಯಮಿಲ್ಲ ನಿನಿಲ್ಲಿ ನಿರಾಕುಳಂ ನಿರ್ಗುಡಿಯನೆ ಸಾರಂಗಂ ನೀರಂ ಕುಡಿದು ಬೞ*ಕ್ಕವಱ ಸಮೀಪಕ್ಕೆ ಬಂದಿಂತೆಂದುದು.

ಸ್ಥಳವನ್ನು ಬಿಟ್ಟು ಬಂದೆ ಎಂಬ ಉದ್ವೇಗ ಬೇಡ ಹೇಗೆಂದರೆ ಶ್ಲೋ || ಸಮರ್ಥವಾದ ಪರುಷನಿಗೆ ಯಾವುದು ಅಸದ್ಯವಲ್ಲ. ವ್ಯವಸಾಯಶೂರನಾದವನಿಗೆ ದೂರವೆಂಬುದಿಲ್ಲ. ವಿದ್ವಾಂಸರಾದವರಿಗೆ ಎಲ್ಲ ದೆಶವೂ ತನ್ನದು. ಪ್ರಿಯವನ್ನು ನುಡಿಯಬಲ್ಲವನಿಗೆ ಎಲ್ಲರೂ ತನ್ನವರು ಎಂಭ ಉಕ್ತಿಗಳುಂಟು. ವ|| ಅದರಿಂದ ಲಘುಪತನಕನೊಡನೆ ಇಲ್ಲಿಗೆ ಬಂದು ಬಹಳ ಒಳ್ಳೆಯದನ್ನು ಮಾಡಿದೆ. ನಾವೆಲ್ಲರೂ ಒಂದು ಕಡೆಯಲ್ಲಿರಲು ಸಾದ್ಯವಾಗದುದು ಯಾವುದೂ ಇಲ್ಲ. ನಿಶ್ಚಿಂತವಾಗಿರು ಎಂದು ಅಮೆಯ ಪ್ರಿಯವಾದ ಮಾತುಗಳನ್ನು ಹೇಳಿ ಹಿರಣ್ಯರೋಮನ ಮನಸ್ಸಿನಲ್ಲಾದ ದುಃಖವನ್ನು ನಿವಾರಿಸಿತು. ಅದಕ್ಕೆ ಕಾಗೆಯು ಮೂಷಕನೂ ಒಟ್ಟಿಗೆ ಅನೇಕ ಕಾಲ ಸುಖದಿಂದ ಇರುತ್ತಿರಲು ಒಂದು ದಿವಸ ಆ ಮೂವರು ಗೆಳೆಯರು ಮಡುವಿನ  ದಡದಲ್ಲಿ ಎನೋ ಮಾತನಾಡುತ್ತಿರಲು ಅಲ್ಲಿಗೆ ಚಿತ್ರಾಂಗನೆಂಬ ಸಾರಂಗವು ಇದ್ದಕ್ಕಿದ್ದಂತೆ ಬಂದು ನೀರನ್ನು ಕುಡಿಯಲಾಗದೆ ಗಾಬರಿಯಿಂದ ಹಿಂದಕ್ಕೆ ನೋಡಿ ನಡುಗುತ್ತ ನಿಂತಿರುವುದನ್ನು ಅಮೆ ಮೊದಲಾದವು ನೋಡಿ ಇದೇನುಕಾರಣವಿರಬಹುದು ಎಂದು ಮಾತನಾಡಿಕೊಳ್ಳಲು ಕಾಗೆಯು ಅದರ ಚೇಷ್ಟೆಯನ್ನು ತಿಳಿದು ಯಾರೋ ಬೆನ್ನೆಟ್ಟಿ ಬರಲು ಭಯಗ್ರಸ್ತನಾಗಿರಬೇಕು ಎಂದಿತು. ಅಲ್ಲಿಂದ ಹೋಗಿ ನಾಲ್ಕು ದಿಕ್ಕುಗಳನ್ನು ವಿಚಾರಿಸಿ ಬಂದು ಯಾರನ್ನು ಕಾಣದೆ ಬಳಿಕ ಸಾರಂಗಕ್ಕೆ ಹೇಳಿತು. ಏನಯ್ಯ! ಇಂದು ನೀನೇಕೆ ಭಯಗ್ರಸ್ತನಾಗಿರುವೆ?  ಅಗ ಚಿತ್ರಾಂಗನು ನುಡಿದನು : ಇಂದು ಬೆಳಗಾಗಲು ಬೇಡರು ನನ್ನನ್ನು ಬೆನ್ನಟ್ಟಿ ಬರಲು ಬಳಲಿ ನೀರು ಕುಡಿಯಬೇಕೆಂಬ ಅಸೆಯಿಂದ ಬಂದೆನು. ಅಗ ಕಾಗೆಯು ಇಲ್ಲಿ ಭಯವಿಲ್ಲಾ: ನೀನು ಇಲ್ಲಿ ನಿಶ್ಚಿಂತೆಯಿಂದ ನೀರು ಕುಡಿ ಎನ್ನಲು ಸಾರಂಗವು

ಶ್ಲೋ || ಜನಿತಾ ಚೋಪನೇತಾ ಚ ಯಶ್ಚ ವಿದ್ಯಾಂ ಪ್ರಯಚ್ಪತಿ
ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಃ ಸೃತಾಃ  ||೨೧೪||

ಟೀ|| ಪುಟ್ಟಿಸಿದವನುಂ ಉಪನಯನವ ಮಾಡಿದವನುಂ ವಿದ್ಯೆಯನರಪಿದವನುಂ ಅನ್ನವನಿಕ್ಕಿದವನುಂ ಭಯದಲ್ಲಿ ರಕ್ಷಿಸಿದವನುಂ ಇಂತೈವರುಂ ತಂದೆಗಳೆಂದರಿವುದು ಎಂಬೀ ನೀತಿ ಶಾಸ್ತ್ರಾರ್ಥವುಂಟು ನೀಮೆನೆಗೆ ನಯಮಂ ನುಡಿದು ಭಯಮಂ ಕಱ*ದೆನೆಗೆ ನೀವೇ ಗುರುಸ್ಥಾನಮುಂ ಪರಮಮಿತ್ರರುಮಾಗಿರ್ದಿರ್ ನಿಮ್ಮನ್ನಗಲ್ದು ಪೋಗೆನುಂಬುದುಂ ಕಾಕ ಮೂಷಕ ಕಚ್ಛಪಂಗಳಾಲೊಚನಂಗೆಯ್ದು ಬೞ*ಕ್ಕಿಂತೆಂದವು.

ಶ್ಲೋ || ದಾರ ಸಂಪತ್ತಿ ಸಂಬದ್ದೌ ತಥಾ ವಂಶಕ್ರಮಾಗತಃ
ರಕ್ಷಿತೋ ವ್ಯಸನೇಭ್ಯಶ್ಚ ಮಿತ್ರಂ ಜ್ಞೇಯಂ ಚತುರ್ವಿಧಂ  ||೨೧೫||

ಟೀ || ಪೆಂಡತಿಯ ಸೊಮ್ಮಿನವನುಂ ಐಶ್ವರ್ಯದ ಹೊದ್ದಿಗೆಯವನುಂ ಪೂರ್ವತೊಡಗಿ ಬಂದುವನಂ ವೈಸಬನದಲ್ಲಿ ರಕ್ಷಿಸಿದವನುಂ ಇಂತೀ ನಾಲ್ವರುಂ ಮಿತ್ರರೆಂದರುವುದು ಎಂಬ ನೀತಿ ಶಾಸ್ತ್ರಾಭಿಪ್ರಾಯದೊಳಿತಂ ವ್ಯಸನದೆಡೆಯೊಳ್ ರಕ್ಷಸಿಕೊಳಲ್ಪಟ್ಟನಪ್ಪುದಱ*ಂ ಮಿತ್ರತ್ವಕ್ಕೆ ತಕ್ಕುದು ಸಾಧುಮೃಗಂ ಯೋಗ್ಯಸ್ಥಾನಮೆಂದು ಮಿತ್ರತ್ವಮಂ ಮಾಡಿ ಮಿತ್ರಚತುಷ್ಟಯಂ ಕೆಲವು ಕಾಲಂ ಸುಖದೊಳಿರ್ದೊಂದು ದಿವಸಮ ಚಿತ್ರಾಂಗನಾಹಾರಾರ್ಥಮಡವಿಯೊಳ್ ಪೋಗಿ ತೊದಲುತ್ತುಂ ವ್ಯಾದರೊಡ್ಡದ ಬಲೆಯೊಳ್ ಸಿಲ್ಕಿರ್ದುದುಂ ಲಘುಷತನಕಂ ಕಂಡು ಕಚ್ಪಪ ಹಿರಣ್ಯರೋಮಂಗಳ್ಗೆ ಅಱ*ಪಿದೊಡವೆರಡುಂ ಕಾಗೆಯ ಪಿಂತನೆ ಬೇಗಂ ಬಂದು ಪಾಶಬದ್ದನಾಗಿರ್ದ ಚಿತ್ರಾಂಗನುಂ ಕಂಡಿತೆಂದವು. ನೀನಪ್ಪೊಡೆ ಬುದ್ದಿವತಂ ಇಂತಪ್ಪಡೆಗೆಂತು ಬಂದು ಸಿಲ್ಕಿಯೆಂದೊಡೆ ಚಿತ್ರಾಂಗನಿಂತೆಂದಂ:

ನೀರನ್ನು ಕುಡಿದು ಬಲಿಕ ಅದರ ಸಮೀಪಕ್ಕೆ  ಬಂದು ಹೀಗೆಂದಿತು: ಹುಟ್ಟಿಸಿದವನೂ ಉಪನಯನವನ್ನು ಮಾಡಿದವನೂ ವಿದ್ಯೆಯನ್ನು  ತಿಳಿಸಿದವನೂ ಅನ್ನ ಹಾಕಿದವನೂ ಭಯದಲ್ಲಿ ರಕ್ಷಿಸಿದವನೂ ಈ ಐವರು ತಂದೆ ಎಂದು ಭಾವಿಸಬೇಕು ಎಂಬ ನೀತಿಶಾಸ್ತ್ರರವಿದೆ  ವ|| ನೀವು ನನಗೆ ನಿತಿಯನ್ನು ಹೇಳಿ ಭಯವನ್ನು ಪರಹರಿಸಿದುದರಿಂದ ನೀವೇ ನನ್ನ ಗುರುವೂ ಪರಿಮಮಿತ್ರರೂ ಅಗಿರುವಿರಿ ನಿಮ್ಮನ್ನು ಬಿಟ್ಟು ಹೋಗಲಾರೆ ಎನ್ನಲು ಕಾಗೆ ಇಲಿ ಆಮೆಗಳು ಅಲೋಚಿಸಿ ಹೀಗೆಂದವು ಶ್ಲೋ|| ಹೆಂಡತಿಯ ಸಂಬಂಧವನೂ,  ಐಶ್ವರ್ಯವಂತನೂ, ಪೂರ್ವದಿಂದ ಬಂದವನೂ, ದುಃಖದಲ್ಲಿ ರಕ್ಷಿಸಿದವನೂ ಈ ನಾಲ್ವರೂ ಮಿತ್ರರೆಂದು ತಿಳಿಯಬೇಕು ಎಂಬ ನೀತಿಶಾಸ್ತ್ರದ ಅಭಿಪ್ರಾಯ ಪ್ರಕಾರ ಅಪತ್ತಿನಲ್ಲಿ ರಕ್ಷಿತನಾದುದರಿಂದ ಮಿತ್ರತ್ವಕ್ಕೆ ಯೋಗ್ಯನು. ವ||  ಸಾಧು ಪ್ರಾಣಯು ಯೋಗ್ಯಸ್ಥಾನವೆಂದು ಗೆಳೆತನವನ್ನು ಮಾಡಿ ನಾಲ್ವರೂ ಗೆಳೆಯರೂ ಕೆಲವು ಕಾಲ ಸುಖವಾಗಿದ್ದವು. ಒಂದು ದಿವಸ ಚಿತ್ರಾಂಗನು ಅಹಾರಕ್ಕಾಗಿ ಅಡವಿಗೆ ಹೋಗಿ ಸಂಚರಿಸುತ್ತಿರಲು ಬೇಡರೊಡ್ಡಿದ ಬಲೆಯಲ್ಲಿ ಸಿಕ್ಕಿದುದನ್ನು ಲಘುಪತನಕನು ಕಂಡು  ಆಮೆ ಹಿರಣ್ಯರೋಮಗಳಿಗೆ ತಿಳಿಸಲು ಅವೆರಡೂ ಕಾಗೆಯ  ಹಿಂದೆಯೇ ಬೇಗನೆ ಬಂದು ಪಾಶಕ್ಕೆ ಸಿಕ್ಕಿದ್ದ ಚಿತ್ರಾಂಗವನ್ನು ಕಂಡು ಹೀಗೆಂದವು; ನೀನಾದರೋ ಬುದ್ದಿವಂತ. ಇಂತಹ ಕಡೆಗೆ ಹೇಗೆ ಬಂದು ಸಿಲುಕಿಕೊಂಡೆ ಎನ್ನಲು ಚಿತ್ರಾಂಗನು ಹೇಳಿದನು; ಶ್ಲೋ ರಾವಣನು ಸೀತೆಯನ್ನು ಒಯ್ಯುವಾಗ

ಶ್ಲೋ || ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಜ್ಞಾತವಾನ್
ಕಾಕುತ್ಸ್ಥೇನ ಹೇಮಕಾಂತಿಹರಿಣಸ್ಯಾಸಂಭವೋ ಲಕ್ಷಿತಃ
ಅಕ್ಷಾಣಾಂ ನ ಯುಷ್ಟರೇಣ ವಿಷಮೋ ದೃಷ್ಟೋ ವಿಪಾಕಃ ಕಥಂ
ಪ್ರತ್ಯಾಸನ್ನವಿಪತ್ತಿ ಮೂಡಮನಸಾಂ ಪ್ರಾಯೋ ಮತಿಃ ಕ್ಷೀಯತೆ||೨೧೬||

ಟೀ || ರಾವಣಂ ಸೀತೆಯನುಯ್ವಲ್ಲಿ ದೋಷಮೆಂಬುದನಱ*ದುದಿಲ್ಲ ಶ್ರೀರಾಮಂ ಮಾಯಾಮೃಗವನಿಸುವಲ್ಲಿ ಕೃತಕಮೃಗಮೆಂದಱ*ದುದಿಲ್ಲ ಧರ್ಮಸುತಂ ದೂದಿನಲ್ಲಿ ತನಗೆ ಕೇಡೆಂಬುದನಱ*ದುದಿಲ್ಲ ವಿಪತ್ತು ಬಹ ಕಾಲಕ್ಕೆಂತವರುಂ ಮತಿಗಿಡುವರ್ ಅದಲ್ಲದೆಯುಂ

ಮುಂದಿನ ಜನ್ಮನೊಳೇನೊಂ
ದನ್ನೆರಪಿದನದನೆ ಭೋಗಿಸಲ್ ಪುಟ್ಟುವನಾ
ತ್ಮನ್ನಿರುತಮದರನಿಂತಿದ
ನೆನ್ನನುಮಪಹರಿಸಲರಿಯನಿನ್ನೆನ್ನಳವೇ  ||೪೩೫||

ಎಂದು ಸಾರಂಗಂ ಸಂಸಾರಸ್ವರೂಪನಿರೂಪನಂಗೆಯ್ದಾ ಬಲೆಯನ್ನೊಡ್ಡಿದ ವ್ಯಾಧಂ ಬಾರದನ್ನೆಗಮೆನ್ನ ಬಂದನಮಂ ??ಕ್ಷಂಗೆಯಿಮೆನೆ ಹಿರಣ್ಯರೋಮಂ ಪಾಶಮಂ ಪಱ*ಯೆ ಕಡಿವುದುಮಾ ಸಮಯಾಕಾ ಲಬ್ಬಕಂ ಬರ್ಪುದುಮನಂ ಕಂಡು ಕಾಗೆ ಮರದ ಮೇಗಣ್ಗೆ ಪೋದುದು, ಕಚ್ಪಪಂ ಪೋಗಲಿಂಬಿಲ್ಲದೆ ಸಂಕುಚಿತಮಾಗಿರ್ಪುದುಮಾ ವ್ಯಾದಂ  ಬಂದು ಕಂಡು ಖಂಡಮಾಗಿರ್ದ ಬಲೆಯಂ ಕಂಡು ಬೆರಗಾಗಿ ಪೋದಂ ಇತ್ತ ಚಿತ್ರಾಂಗನುಂ ಲಘುಪತನಕನುಮಂ ಹಿರಣ್ಯರೋಮನುಮೊಂಡೆಗೆ ಬಂದು ಮಂಧರನಂ ವ್ಯಾದನುಯ್ದನೆಂದು ಮಿತ್ರಯೋಗದಿಂ ಕಿರಿದುಂಬೇಗಂ ದುಃಖಿತರಾಗಿರ್ದೆಗೆಯ್ವೆಮೆನೆ ಚಿತ್ರಾಮಗಮಿಂತೆಂದಂ:

ದೋಷವನ್ನು ತಿಳಿಯಲಿಲ್ಲ. ಶ್ರೀರಾಮನು ಮಾಯಾಮೃಗವನ್ನು ಬಾಣ ಪ್ರಯೋಗಿಸಿ ಹಿಡಿಯುವಾಗ ಕೃತಕಮೃಗವೆಂದು ತಿಳಿಯಲಿಲ್ಲ. ಧರ್ಮರಾಯನು ಜೂಜಿನಿಂದ ತನಗೆ ಕೇಡು ಎಂಬುದನ್ನು ತಿಳಿಯಲಿಲ್ಲ ವಿಪತ್ತು ಬರುವ ಕಾಲಕ್ಕೆ ಎಂಥವರೂ ಬುದ್ಧಿಹೀನರೂ ಅಲ್ಲದೆ ೪೩೫: ಹಿಂದಿನ ಜನ್ಮದಲ್ಲಿ ಅತ್ಮನು ಏನನ್ನು ಕೂಡಿಟ್ಟನೋ ಅದನ್ನೆ ಅನುಭವಿಸಲು ನಿಶ್ಚಯವಾಗಿಯೂ ಹುಟ್ಟುವನು ಅದರಿಂದ ಇದನ್ನು ಯಾರೂ ಪರಿಹರಿಸಲಾರರು. ಇನ್ನು ನನ್ನಿಂದ ಸಾದ್ಯವೇ ವ|| ಎಂದು ಸಾರಂಗವು ಸಂಸಾರ ಸ್ವರೂಪ ನಿರೂಪಣೆಯನ್ನು ಮಾಡಿ ಆ ಬಲೆಯನ್ನು ಒಡ್ಡಿದ ಬೇಡನು ಬರುವಷ್ಟರಲ್ಲಿ ನನ್ನ ಬಂದಮೊಕ್ಷವನ್ನು ಮಾಡಿರಿ ಎನ್ನಲು ಹಿರಣ್ಯರೋಮನು ಪಾಶವನ್ನು ಹರಿಯಿತು ಆ ಸಮಯಕ್ಕೆ ಆ ಬೇಡನು ಬರಲು ಅವನನ್ನು ಕಂಡು ಕಾಗೆ ಮರದ ಮೇಲಕ್ಕೆ ಹಾರಿತು. ಇಲಿಯೂ ಪಕ್ಕದಲ್ಲಿದ್ದ ಬಿಲವನ್ನು ಸೇರಿಕೊಂಡಿತು, ಮೃಗವು ಓಡಿಹೋಯಿತು. ಅಮೆಯು ಮಾತ್ರ ಹೋಗಲು ಎಡಯಿಲ್ಲದ ದೇಹವನ್ನು ಸಂಕೊಚಗೊಳಿಸಿಕೊಂಡಿರಲು ಬೇಡನು ಬಂದು ಕಂಡು ತುಂಡಾಗಿದ್ದ ಬಲೆಯನ್ನು ಕಂಡು ಬೆರಗಾಗಿ ಬೇರೆ ಏನನ್ನು ಕಾಣದೆ ಪಕ್ಕದಲ್ಲಿದ್ದ ಅಮೆಯನ್ನು ಕಂಡು ಇದನ್ನಾದರೂ ಒಯ್ಯುವೆನೆಂದು ಕೊಂಡು ಹೋದನು. ಇತ್ತ ಚಿತ್ರಾಂಗನು ಲಘುಪತನಕನೂ ಹಿರಣ್ಯರೋಮನೂ ಒಂದು ಕಡೆಗೆ ಬಂದು  ಮಂಧರನನ್ನು ಬೇಡನು ಒಯ್ದನು ಎಂದು ಮಿತ್ರವಿಯೋಗದಿಂದ ಕೆಲವು ಸಮಯ

ಆಂ ಕಾರಣಮಾಗಿರೆ ನಿ
ಶ್ಯಂಕಮನಂ ಬಂದು ಸಿಲ್ಕಿದಂ ಕೆಳೆಯಂ ಪೊಂ
ಗಿ ಕೂರ್ಮನಾದುದಾಗದೊ
ಡಾಂ ಕಷ್ಟನೆ ಅದಱ*ನಾತನುದುದನಪ್ಪೆಂ  ೪೩೬

ಎನೆ ಹಿರಣ್ಯರೋಮಂ ನಿನಗಿದುವೆ ತಕ್ಕುದಾದೊಡಮೇನಿಲ್ಲಿಗುಪಾಯಮಂ ನಾಂ ಬಲ್ಲೆಂ. ಲಘುಪತನಕನುಂ ನೀನುಂ ವ್ಯಾಧನಿಂ ಮುನ್ನಮೆ ಮುಂದೆ ಪೋಗಿ ತೊರೆಯ ತಡಿಯೊಳ್ ನೀಂ ಕೃತಕಮೃತನಾಗಿರ್ಪುಡು ನಿನ್ನ ಮೇಲೆ ಲಘುಪತನಕಂ ಪಾಯ್ದಾಡುತ್ತುಮಿರೆ ನಿಮ್ಮನಾ ವ್ಯಾಧಂ ಕಂಡು ಮಂಧರನನೀಡಾಡಿ ಪರಿತರ್ಪನಾಗಳೆ ಲಘುಪತನಕಂ ಪೋಗಿ ಮಂಧರನಂ ನೀರಂ ಪುಗುಲ್ವೇೞ್ದು ನಿನುಮವಂಗೆ ದೂರಮಾಗಿ ಪೋಪುದೆನೆ ವಾಯಸನಿದು ಕಜ್ಜಮೆಂದೆರಡುಂ ಪೊರೆಗೆ ಸಮೀಪವಾಗಿ ಪೋಗಿ ಸಮಕಟ್ಟಿ ಬಂದಂದದೊಳ್ ಪಟ್ಟಿರ್ಪುದುಮಾ ಲುಬ್ಧಕಂ ಕಂಡಿದೊಂದು ಮೃಗಂ ಸತ್ತಿರ್ದುದೆಂದತಿ ಲುಬ್ದಮನಸ್ಕನಾಗಿ ರಾಗಿಸಿ ಬಲೆಯುಮಂ ಮಂಧರನುಮಂ ನೆಲಕ್ಕಿೞ*ಪಿ ಪೋಪುದುಮಾತನ ಬರವಂ ಕಂಡು ಕಾಕಂ ಕಚ್ಚಪನಲ್ಲಿಗೆವಂದು ಬೇಗಂ ಮಡುವಿಂಗೆ ಪುಗೆಂಬುದುಂ ಅಂತೆಗೆಯ್ವೆನೆಂದುಮದು ಕಡುವೇಗಂ ಮಡುವಂ ಪೊಕ್ಕುದು. ಇತ್ತಂ ಚಿತ್ರಾಂಗನುಮೆರ್ದೊಡಿ ಪೋಯ್ತು ಅದೆಲ್ಲಮನಾ ಕಿರಾತಂ ಕಂಡಿದೇನಾನುಮೊಂದುತ್ಪಾತಮಾಗಲೆವೇೞ್ಕುಮೆಂದು ಭೀತನಾಗಿ ಬಲೆಯಂ ಬಿಸುಟು ಕರುಳ್ ಪೊರೆಯಲೋಡಿದಂ. ಲಘುಪತನಕಂ ಹಿರಣ್ಯರೋಮನನೊಡಗೊಂಡು ಕಚ್ಪನಲ್ಲಿಗೆ ಬಂದು ಚಿತ್ರಾಂಗನಂ ಬರಿಸಿ ಬೞ*ಕ್ಕೆ ಮಂಧರನಂ ಕರೆವುದುಮದು ಮಡುವಿಂ.

ದುಃಖಿತರಾಗಿದ್ದು ಏನು  ಮಾಡೋಣ ಎನ್ನಲು ಚಿತ್ರಾಂಗನು ಹೆಳಿದನು ೪೩೬: ನಾನು ಕಾರಣನಾಗಿ ನಿಸ್ಸಂದಿಗ್ದಚಿತ್ತನಾದ ಗೆಳೆಯನು ಬಂದು ಸಿಕ್ಕಿಹಾಕಿಕೊಂಡನು. ಹೋಗಿ ಆಮೆಗೆ ಏನಾಯಿತೋ ನಾನು ಹಾಗೆಯೇ ಅಗದಿದ್ದಲ್ಲಿ ನಾನು ನೀಚನಲ್ಲವೇ: ಅದರಿಂದ ಅವನಿಗಾದ ಗತಿ ನನಗಾಗಲಿ ವ || ಹಿರಣ್ಯರೋಮನು ನಿನಗೆ ಇದು ಯೋಗ್ಯವಾದರೂ ಇದಕ್ಕೆ ಉಪಾಯವನ್ನು ನಾನು ಬಲ್ಲೆ ಲಘುಪತನಕನೂ ನೀನು ಬೇಡನಿಗಿಂತ ಮೋದಲು ಮುಂದೆ ಹೋಗಿ ನದಿಯ ದಡದಲ್ಲಿ ನೀನು ಕೃತಕಮೃತನಾಗಿರಲು ನಿನ್ನ ಮೇಲೆ  ಲಘುಪತನಕನು ಹಾರಾಡಲಿ. ನಿಮ್ಮನ್ನು ಆ ಬೇಡನು ಕಂಡು ಮಂದರನನ್ನು ಬಿಸುಟು ಅಲ್ಲಿಗೆ ಬರುವನು. ಆಗಲೇ ಲಘುಪತನಕನೂ ಹೋಗಿ ಮಂಧರನಿಗೆ ನೀರಿಗೆ ಹೋಗಲು ತಿಳಿಸಿ ನೀನೂ ಅವನಿಂದ ದೂರವಾಗು. ಕಾಗೆಯು ಇದೇ ಕಾರ್ಯ ಎಂದು ಎರಡೂ ಹೊಳೆಯ ಸಮೀಪಕ್ಕೆ ಹೋಗಿ ವ್ಯವಸ್ಥ ಮಾಡಿದಂತೆ ಮಲಗಿರಲು ಬೇಡನು ಕಂಡು ಇದೊಂದು ಜಿಂಕೆ ಸತ್ತಿದೆ ಎಂದು ಅತ್ಯಂತ ಮೋಹಿತನಾಗಿ ಪ್ರೀತಿಯಿಂದ ಬಲೆಯನ್ನೂ ಮಂಧರನನ್ನು ನೆಲಕ್ಕಿಳಿಸಿ ಹೋದನು. ಆತನ ಆಗಮನವನ್ನು ಕಂಡು ಕಾಗೆಯು ಅಮೆಯಲ್ಲಿಗೆ ಬಂದು ಬೇಗನೆ ಮಡುವನ್ನು ಸೇರಿಕೋ ಎನ್ನಲು ಹಾಗೆಯೇ ಮಾಡುವೆನೆಂದು ಅದು ಬಹುಬೇಗನೆ ಮಡುವನ್ನು ಸೇರಿಕೊಂಡಿತು. ಇತ್ತ ಚಿತ್ರಾಂಗನು ಎದ್ದು ಓಡಿಹೋಯಿತು. ಅದೆಲ್ಲವನ್ನೂ ಆ ಬೇಡನು ಕಂಡು ಇದೇನೋ ಒಂದು ಉತ್ಪಾತವಿರಬೇಕೆಂದು ಹೆದರಿ ಬಲೆಯನ್ನು ಬಿಟ್ಟು ಕರುಳು ಹರಿಯುವಂತೆ ಓಡಿದನು.

ಪೊರೆಮಟ್ಟು ಬಂದೊಂದೊಂದರೆ ಕಾಲ ಮೇಲೆ ಬಿರ್ದಾನಂದಾಶ್ರುಗಳನಿಕ್ಕಿ ನಮಗೆಯೊರ್ಮೆ ದುಷ್ಕರ್ಮದ ಫಲದಿಂದಮೃತ್ಯು ಸಮನಿಸಿ ಬಂದು ನಮ್ಮ ಪುಣ್ಯ ಪಲದಿಂ ಬರ್ದುಂಕಿದೆಮೆಂದು ನುಡಿದಿಮತು ಬೞ*ಕ್ಕೆ  ಮಂಧರನಿಂತೆಂದಂ:

ಕುಲಮುಂ ಚಲಮುಂ ಪೆಂಪು
ಕಲಿತನಮುಂ ಖ್ಯಾತಿಯುಂ ವಿಭೂತಿಯುಮಱ*ವುಂ
ಸಲೆ ನೆಲೆಸಿದವರ ಕೂಟಂ
ಪಲತೆಱದಿಂ ಫಮವನೀವುದವರ್ಗರಿದುಂಟೇ ||೪೩೭||

ಪರಮಾರ್ಥಂ ಪುರುಷಾರ್ತವುಳ್ಳ ಮನುಜಂ ಮಿತ್ರಂ ಧನಂ ಧಾತ್ರಿ ಕಿಂ-
ಕರರೆಂಬಂಕದ ವಸ್ತುವಂ ಪಡೆಗೆ ತಾನೀ ನಾಲ್ಕಱೊಳ್ ರತ್ನಮೊಂ-
ದೆರಡಿಲ್ಲಾದೊಡಮೇನನೂನಗುಣನಂ ಸನ್ಮಿತ್ರನಂ ಮಾೞ್ಪುದಾ-
ದರದಿಂದಂ ಬೞ*ಕಾತನಿಂ ಸಮನಿಕುಂ ಧಮಾರ್ಥಕಾಮತ್ರಯಂ  ೪೩೮

(ರಥೋದ್ಧತಾ ವೃತ್ತಂ)

ದಾನಶೂರನಪವಾದಭೀರು ವಿ
ಜ್ಞಾನಮೂರ್ತಿ ಭುವನೈಕವತ್ಸಲಂ
ಮಾನನೀಯಗುಣನೆಂಬ ಪೆಂಪಿನು-
ದ್ವಾನಿಯಂ ತಳೆದ ದುರ್ಗನನ್ನರಾರ್  ೪೩೯

ಲಘಪತನಕನು ಹಿರಣ್ಯರೋಮನೊಡನೆ ಅಮೆಯಲ್ಲಿಗೆ ಬಂದು ಜಿಂಕೆಯನ್ನು ಬರಿಸಿ ಬಳಿಕ ಮಂಧರನನ್ನು ಕರೆಯಲು ಅದು ಮಡುವಿನಿಂದ ಹೊರಬಂದು ಒಂದೊಂದರ ಕಾಲ ಮೇಲೆ ಬಿದ್ದು ಆನಂದಾಶೃವನ್ನು ಸುರಿಸಿ ನಮಗೆ ಒಮ್ಮೆ ದುಷ್ಕರ್ಮದ ಫಲದಿಂದ ಅಪಮೃತ್ಯು ಉಂಟಾಗಿ ನಮ್ಮ ಪುಣ್ಯ ಫಲದಿಂದಾಗಿ ಬದುಕಿಕೊಂಡೆವು. ಎಂದು ನುಡಿದೆವು. ಅಗ ಮಂಧರನು ಹಿಗೆಂದನು ೪೩೭. ಕುಲವೂ ಚಲವೂ ಹಿರಿಮೆಯೂ ಪರಾಕ್ರಮವೂ ಖ್ಯಾತಿಯೂ ಐಶ್ವರ್ಯವೂ ತಿಳಿವಳಿಕೆಯೂ ಸೇರಿದವರ ಗುಂಫು ಹಲವು ರೀತಿಯ ಫಲವನ್ನುಂಟುಮಾಡುವುದು, ಅವರಿಗೆ ಅಸಾದ್ಯವಾದುದುಂಟೇ! ೪೩೮. ಪರಮ ಪುರುಷಾರ್ಥರವನ್ನು ಪಡೆಯ ಬೇಕೆಂದಿರುವ ಮನುಷ್ಯನು ಮಿತ್ರ, ಧನ, ಧಾತ್ರಿ, ಸೇವಕರು ಎಂಬ ಶ್ರೇಷ್ಟ ವಸ್ತಗಳನ್ನು ಪಡೆಯಲಿ. ಈ ನಾಲ್ವರಲ್ಲಿ ಒಂದೆರಡು ರತ್ನಗಳಿಲ್ಲದಿದ್ದಲ್ಲಿ ಏನು ಮಹಾ ಸಜ್ಜನನಾದ ಸನ್ಮಿತ್ರನನ್ನು ಪ್ರೀತಿಯಿಂದ ಮಾಡಿಕೊಳ್ಳಬೇಕು ಬಳಿಕ ಅತನಿಂದ ಧರ್ಮ, ಅರ್ಥ, ಕಾಮಗಳೆಂಬ ಇತರ ಪುರುಷಾರ್ಥಗಳು, ಲಭಿಸುವುವು, ೪೩೯; ದಾನಶೂರನೂ ಅಪವಾದಕ್ಕೆ ಹೆದರುವನು ವಿಜ್ಞಾನಮೂರ್ತಿಯೂ ಸಮಸ್ತ ಪ್ರಪಂಚದ ಪ್ರೀತಿಗೆ ಪಾತ್ರನಾದವನೂ ಗೌರವರ್ಹಗುಣಗಳಿಂದ ಕೂಡಿದವನೂ ಆದ

ಪ್ರಿಯಹಿತವಚನಂ ದಾನಂ
ದಯೆ ನಜನಾಭಿರಕ್ಷಣಂ ಸಜ್ಜನದಾ
ಶ್ರಯಮೆಂಬಿವೊಂದಿ ಸಲೆ ವಸು
ಧೆಯೊಳಗೆ ಸತ್ಪುರುಷನೆನಿಸಿ ಮೆರವಂ ದುರ್ಗಂ  ೪೪೦

ನ್ಯಾಯಪರಾರ್ಥನೀಯನಭಿಮಾನಧನಂ ಸುಜನಪ್ರಿಯಂ ನಿಜಾ
ನ್ವಾಯ ಸರೋಜಷಂಡ ದಿನಪಂ ವಿಬುದಸ್ತುತವೃತ್ತನಾಶ್ರಿತ
ರ್ಗಾಯ ಪರೋಪಕಾರವನೆ ಮಾಡುಗುಮಾದರದಿಂ ಪರೋಪಕಾ
ರಾಯ ಸತಾಂ ವಿಭೂತಿಯೆನಿಕುಂ ಗುಣಿ ದುರ್ಗನಶೇಷದಾತ್ರಿಯೊಳ್  ೪೪೧

ವಿಮಲಶ್ರೀಶ ಸರಸ್ವತೀನಿಳಯ ಕೀರ್ತಿಶ್ರೀವದೂಕಾಂತ ಗೌ-
ತಮಗೋತ್ರಾಂಬುಜಮಿತ್ರ॒॒.॒. ನಿನ್ನನ್ನರಂ ಕಂಡೆನಿ
ಲ್ಲ ಮಹೀವಲ್ಲಭಸಂದಿವಿಗ್ರಹಿಗಳಂ ಸದ್ವತ್ತರಂ ಸದ್ಗಣೋ
ತ್ತಮರಂ ಪಾಲಿತ ಸತ್ಕವೀಂದ್ರ ವಿಬುದ್ದವ್ರಾತೇಶ್ವರಂ ಸ್ವಚ್ಚರಂ  ೪೪೩

ಹಿರಿಮೆಯ ಶ್ರೇಷತೆಯನ್ನು  ಹೊಂದಿದ ದುರ್ಗಸಿಂಹನಂಥವರು ಯಾರಿರುವರು! ೪೪೦. ಪ್ರಿಯಹಿತ ವಚನ ದಾನ ದಯೆ ದೀನಜನರ ರಕ್ಷಣೆ ಸಜ್ಜನರ ಆಶ್ರಯ ಎಂಬ ಇವು ಸೇರಿ ಜಗತ್ತಿನಲ್ಲಿ ದುರ್ಗಸಿಂಹನು ಸತ್ಪುರುಷನಾಗಿ ಮೆರೆಯುವನು. ೪೪೧. ನ್ಯಾಯಪರನೂ ಅಭಿಮಾನಧನನೂ ಸಜ್ಜನಪ್ರಿಯನೂ ತನ್ನ ವಂಶವೆಂಬ ಕಮಲಳಿಗೆ ಸೂರ‍್ಯನೂ, ವಿದ್ವಾಂಸರಿಂದ ಸ್ತುತನಾದವನೂ ಆಶ್ರಿತರಿಗೆ ಲಾಭ ಪರೋಪಕಾರವನ್ನು ಮಾಡುವವನೂ, ’ಪರೋಫರಕಾರಾಯ ಸತಾಂ ವಿಭೂತಿ’ಯೂ ಅದ ದುರ್ಗಸಿಂಹನು  ಸಮಸ್ತ ಧಾತ್ರಿಯಲ್ಲಿ ಗುಣಿ ಎನಿಸಿದ್ದನು. ೪೪೨. ಶುದ್ದ ಐಶ್ವರ್ಯಕ್ಕೆ ಒಡೆಯನೂ ಸರಸ್ವತೀ ನಿಲಯನೂ ಕೀರ್ತಿ ಲಕ್ಷ್ಮೀಕಾಂತನೂ  ಗೌತಮ ಗೋತ್ರನೂ….. ಮಹೀವಲ್ಲಭನೂ ಸಂವಿಗ್ರಹಿಯೂ ಸದ್ವೃತನೂ ಸದ್ಗಣೋತ್ತಮನೂ ಸತ್ಕವಿಗಳನ್ನೂ ವಿದ್ವಾಂಸರನ್ನೂ ಪಾಲಿಸಿದ ಪ್ರಭುವೂ ಶುದ್ಧನೂ ಆದ ನಿನ್ನಂತಹವರನ್ನು ನಾನು ಕಂಡಿಲ್ಲ. ೪೪೩. ಲೋಕಕ್ಕೆ ನಿನ್ನ ಆಸ್ತಿಯು ಕೈಗೆ ಬಂದ ಅಸ್ತಿಯಾಗಿದೆ. ಪ್ರಪಂಚದಲ್ಲಿ ಬ್ರಾಹ್ಮಣರ ಆಸ್ತಿ, ದೇವರ ಆಸ್ತಿ, ರಾಜನ ಆಸ್ತಿ, ಕೀರ್ತಿಯ ಅಸ್ತಿಗಳು  ಇತರರ ಅಸ್ತಿಗಳಾಗಿವೆ.

ದುರ್ಗಾನಾಥ ನಿಯತ ನಿ-
ಸರ್ಗಪ್ರೀತಿಯಿನಭೀಷ್ಟಮಂ ಸಕಲಸುಹೃ-
ದ್ವರ್ಗಂ ಬೆರಸನುಭವಿಸುಗೆ
ದುರ್ಗಂ ವರ್ಗತ್ರಯಪ್ರಕೃಷ್ಟೋದಯಮಂ  ೪೪೪

ಪತಿಹಿತನಂಜನಾತನಯನಾ ಪವನಾತ್ಮಜನಿಂ ಖಗೇಶ್ವರಂ
ಪತಿಹಿತನಾ ಮರುತ್ತಯನಿಂ ಖಗರಾಜನಿನರ್ಕನಂದನಂ
ಪತಿ ಹಿತನಾ ಮರುತ್ತನಯನಿಂ ಖಗರಾಜನಿನರ್ಕಜಾತನಿಂ
ಪತಿಹಿತನೀತನೆಂದು ಪೋಗೞ್ಗುಂ ಸಲೆ ದುರ್ಗನನುರ್ವರಾಜನಂ  ೪೪೫

ಅತಿಸಮನ್ನತ್ತವೆತ್ತ ಸದ್ಗಹನಿವಾಸಸ್ಥಾನಮಾದ ಪ್ರಜಾ
ಪತಿಸಂವತ್ಸರ ಚೈತ್ರಮಾಸ ಸಿತಪಕ್ಷದ್ವಾದಶೀ ತಾರಕಾ
ಪತಿವಾರಂ ಬರೆ ಪಚಿತಂತ್ರಮೆಸೆದತ್ತೀ ಧಾತ್ರಿಯೊಳ್ ದುರ್ಗನೀ
ರ್ಮಿತಮುದ್ಯತ್ಕವಿಶೇಖರ ಪ್ರಮದಲೀಲಾಪುಷ್ಟತಾಮ್ರದ್ರುಮಂ  ೪೪೬

೪೪೪, ದುರ್ಗಕ್ಕೆ ಒಡೆಯನಾದ ದುರ್ಗಸಿಂಹನು ನಿಯತವಾದ ಸಹಜಪ್ರೀತಿಯಿಂದ ತನ್ನ ಅಪೇಕ್ಷೆಯನ್ನೂ ವರ್ಗತ್ರಯದ ಅಭಿವೃದ್ದಿಯನ್ನೂ ಸಕಲ ಸ್ನೇಹಿತರೊಡನೆ ಅನುಭವಿಸಲಿ ೪೪೫. ಅಂಜನೇಯನೂ ಪತಿಹಿತನೆಂದೂ, ಅಂಜನೇಯನಿಗಿಂತ ಗರುಡನು ಪತಿಹಿತನೆಂದೂ, ಅಂಜನೇಯನಿಗಿಂತ ಗರುಡನಿಗಿಂತ, ಕರ್ಣನೂ ಪತಿಹಿತನೆಂದೂ ಆಂಜನೇಯ ಗರುಡ ಕರ್ಣರಿಗಿಂತ ಈತನು ಅಕ ಪತಿಹಿತನೆಂದೂ ದುರ್ಗಸಿಂಹನನ್ನು ಲೋಕದ ಜನರು ಹೊಗಳುವರು. ೪೪೬. ಅತ್ಯಂತ ಸಂಪನ್ನತೆಯಿಂದ ಕೂಡಿದ ಒಳ್ಳೆಯ ಗ್ರಹಗಳಿಗೆ ಅವಾಸಸ್ಥಾನದ ಪ್ರಜಾಪತಿ ಸಂವತ್ಸರದ* ಚೈತ್ರಮಾಸ ಶುಕ್ಲಪಕ್ಷ ಸೋಮವಾರದಂದು* ಶ್ರೇಷ್ಟಕವಿಗಳ ಸಂತೋಷ ಪ್ರೋತ್ಸಾಹಗಳಿಂದ ಹೂ ಬಿಟ್ಟ ಮಾವಿನ ಮರದಂಥ ಈ ಪಂಚತಂತ್ರವು ಈ ಲೋಕದಲ್ಲಿ ದುರ್ಗಸಿಂಹನಿಂದ ರಚಿತವಾಗಿ ಶೋಭಿಸಿತು.

||ಫಲ ಶ್ರುತಿ||

ಪದವಱೆ ಕೊಳ್ಗೆ ಧಾತ್ರಿ ಪಿರಿದುಂ ಬೆಳೆಗುರ್ವರೆಯಂ ಧರಾಪರ್
ಮುದದೆ ಸಧರ್ಮದಿಂದೆ ಪರಿಪಾಲಿಸುತಿರ್ಕೆ ಸಮಸ್ತವೇದ ಶಾ
ಸ್ತ್ರದ ವಿಯಿಂದಿಳಾಮರಜನಂ ಸುರಪೂಜೆಯನೊಲ್ದು ಮಾೞ್ಕೆ ಸಂ
ಪದದೊಳನೂನರಕ್ಕೆ ಪರದರ್ ಸಲೆ ಧಾರ್ಮಿಕರಕ್ಕೆ ಪಾದಜರ್  ೪೪೭

ವಿಪುಳಶ್ರೀಸುಖಮಕ್ಕೆ ಜೀವನಿವಹಕ್ಕೆಲ್ಲಂ ಕುಲಸ್ತ್ರೀಜನ-
ಕ್ಕುಪಮಾತೀತ ಪತಿವ್ರತಾಗುಣದಿಂದೊಪ್ಪಕ್ಕೆ ವಾಗ್ದೇವಿ ಕೂ
ರ್ತು ಪಯೋಜಾಸನನಂತೆ ಮಾೞ್ಕೆ ಕಳೆಯೊಳ್ ವಿದ್ವಜ್ಜನಾನೀಕಮಂ
ನೃಪಗೋಬ್ರಾಹ್ಮಣ ಶಾಂತಿಯಕ್ಕೆ ನೆಗೞ* ಕಾವ್ಯಂ ಧರಾಚಕ್ರದೊಳ್  ೪೪೮

ಇದು ವಿನಮದಮರರಾಜ ಮೌಳಿ ಮಾಣಿಕ್ಯಮಂಜರೀ ಪುಂಜರಂಜಿತ ಭಗವದ್ಭವಾನೀವಲ್ಲಭ ಚರಣ ಸರಸೀರುಹ ಷಟ್ಚರಣಂ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹ ವಿರಚಿತಮಪ್ಪ ಪಂಚತಂತ್ರದೊಳ್

ಫಲಶ್ರುತಿ

೪೪೭. ಸಕಾಲದಲ್ಲಿ ಮಳೆಯಾಗಲಿ. ಭೂಮಿಯು ಸಮೃದ್ಧಿಯಾಗಿ ಬೆಳೆಯಲಿ ಲೋಕವನ್ನು ರಾಜರು ಸುಖದಿಂದ ಧರ್ಮಷ್ಠರಾಗಿ ಪರಪಾಲಿಸುತ್ತಿರಲಿ. ಸಮಸ್ತ ವೇದಶಾಸ್ತ್ರಗಳ ವಿಯಂತೆ ಬ್ರಾಹ್ಮಣರು ಪ್ರೀತಿಯಿಂದ ದೇವತಾರ್ಚನೆಯನ್ನು ಮಾಡಲಿ ವರ್ತಕರು ಸಂಪತ್ತಿನಲ್ಲಿ ಸಮೃದ್ಧಿಯನ್ನು ಹೊಂದಲಿ ಶೂದ್ರರೂ ಧಾರ್ಮಿಕ ಮನೋಭಾವನೆಯನ್ನು ತಾಳಲಿ. ೪೪೮. ಪ್ರಾಣಿವರ್ಗಕ್ಕೆಲ್ಲ ಅತಿಶಯ ಐಶ್ವರ್ಯದ ಸುಖವುಂಟಾಗಲಿ ಸ್ತ್ರೀಯರಿಗೆ ಅಸಾಧಾರಣವಾದ ಪತಿವ್ರತಾಗುಣದಿಂದ ಚೆಲುವು ಮೂಡಲಿ. ಸರಸ್ವತಿ ಪ್ರೀತಿಯಿಂದ ವಿದ್ವಾಂಸರನ್ನು ತೇಜಸ್ಸಿನಿಂದ ಬ್ರಹ್ಮನಂತೆ ಮಾಡಲಿ. ರಾಜ, ಗೋವು, ಬ್ರಾಹ್ಮಣರಿಗೆ* ಶಾಂತಿಯುಂಟಾಗಲಿ, ಈ ಕಾವ್ಯವು ಪ್ರಪಂಚ ಪ್ರಸಿದ್ಧಿಯನ್ನು ಪಡೆಯಲಿ ಇದು ವಿನಮದಮರರಾಜ ಮೌಳಿ ಮಾಣಿಕ್ಯ ಮಂಜರೀ ಪುಂಜರಂಜಿತವಾದ ಭಗವದ್ಭವಾನೀವಲ್ಲಭ ಚರಣ ಸರಸೀರುಹ ಷಟ್ಚರಣನಾದ ಶ್ರೀಮನ್ಮಹಾಸಂ ವಿಗ್ರಹಿ ದುರ್ಗಸಿಂಹ ವಿರಚಿತವಾದ ಪಂಚತಂತ್ರದಲ್ಲಿ ಮಿತ್ರಕಾರ್ಯ ಪ್ರಕರಣ ಎಂಬ ಐದನೆಯ ತಂತ್ರವು ಸಮಾಪ್ತವಾದುದು