. ವನದಲ್ಲಿ ಕಟ್ಟುಬಿದ್ದಿರ್ದ ಆನೆಯಂ ಇಲಿ ಬಿಡಿಸಿದ ಕಥೆ

ಒಂದುಕಾಲದೊಳ್ ಸಕಲಮಹೀತಲದೊಳಕಾಲವೃಷ್ಟಿ ತಗುಳ್ದು ಅತಿ ಪ್ರಬಲಜಲಪ್ರವಾಹಂ ಬೆಳ್ಳಂಗೆಡೆದು ಪರಿತರ್ಪ ಪೆರ್ಬಳ್ಳದೊಳ್ ಪಿರಿದಪ್ಪ ತೆಪ್ಪದ ಮೇಲೆ ತೇಂಕುತ್ತುಂ ಪಲವಿಲಿಗಳ್ಬೆರಸು

ದಾಕ್ಷಿಣ್ಯ, ಸತ್ಯ, ಶೌಚ – ಎಂಬಿವುಗಳು ಮಿತ್ರಗುಣಗಳು. ಅಲ್ಲದೆ, ಶ್ಲೋ|| ಶೀಲ ಮಹಾಸ್ನೇಹಗಳೆಂಬ ಮಿತ್ರಲಕ್ಷಣಗಳಿರುವ ಮಿತ್ರನಲ್ಲಿ ಮಿತ್ರತ್ವವಿರುವುದು. ಅದಲ್ಲದೆ, ೪೨೪. ಕುಲಜನೂ ಪರಾಕ್ರಮಿಯೂ, ನಿಶ್ಚಲವಚನನೂ, ಅಭಿಮಾನಿಯೂ, ಗುಣಿಯೂ, ಸಹಿಷ್ಣುವೂ, ನಿರ್ಮಲಚರಿತನೂ, ಏಕಮನಸ್ಕನೂ, ಬಲಶಾಲಿಯೂ, ಜ್ಞಾನಿಯೂ ಆದವನು ಗೆಳೆಯನೆನ್ನಿಸುವನು. ವ|| ಹೀಗೆ ಪೂರ‍್ವೋಕ್ತ ಲಕ್ಷಣಗಳನ್ನು ಇಲಿಯು ಹೇಳಲು ಕಾಗೆಯು ಹೇಳಿತು : ನೀನು ಹೇಳಿದಂತೆ ನಾನು ಕಾಗೆಗಳ ಕುಲದಲ್ಲಿ ಹುಟ್ಟಿದವನಾದರೂ ಅಜ್ಞಾನಕರ್ಮದಲ್ಲಿ ನಡೆಯುವವನಲ್ಲವಾದುದರಿಂದ ನನ್ನ ಗೆಳೆತನವನ್ನು ಸ್ವೀಕರಿಸುವುದು ಉಚಿತ. ಹೇಗೆಂದರೆ, ಶ್ಲೋ|| ಬಲಹೀನನಾಗಲಿ ಬಲವಂತನಾಗಲಿ ಮಿತ್ರನೇ ಬೇಕು. ಕಾಡಿನಲ್ಲಿ ಕಟ್ಟಿದ್ದ ಆನೆಯನ್ನು ಇಲಿಯು ಬಿಡಿಸಿದ ಹಾಗೆ ಎಂಬ ಕಥೆಯನ್ನು ನೀನು ಕೇಳಿರಲಿಕ್ಕಿಲ್ಲ ಎನ್ನಲು ಮೂಷಕನು ಅದೇನು ಎಂದು ಕೇಳಲು ಲಘುಪತನಕನು ಹೇಳಿತು: ಒಂದು ಕಾಲದಲ್ಲಿ ಪ್ರಪಂಚದಲ್ಲೆಲ್ಲ ಅಕಾಲವೃಷ್ಟಿ ತಗುಲಿ ಅತ್ಯಂತ ಪ್ರಬಲವಾದ ಜಲಪ್ರವಾಹವು ಒಂದೇ ಸಮನೆ ತುಂಬಿ ಹರಿದು ಬರುವ ಒಂದು ದೊಡ್ಡ ಹಳ್ಳದಲ್ಲಿ ದೊಡ್ಡ ತೆಪ್ಪದ ಮೇಲೆ ತೇಲಾಡುತ್ತ ಹಲವು ಇಲಿಗಳೊಂದಿಗೆ ಇದ್ದಕ್ಕಿದ್ದಂತೆ ಬಲುದಲೆಯ ಚಕ್ಕೆನೆ ಬಲುದಲೆಯನೆಂದು ಮೂಷಕಂ ಬರುತ್ತಿರ್ದು ವನಕರಿಗಳ್ ನೀರ್ಗೆ ಬರ್ಪುದಂ ಕಂಡು ಯೂಧಾಪಂಗಿಂತೆಂದುದು :

ವನಗಜಯೂಧಾಶ್ವರ
ಪೊನಲೊಳ್ ಪರಿಕರಸಮೇತಮಾಂ ಪೋದಪೆನಿಂ
ಬಿನೊಳಿಲ್ಲ ಕಾಯಲಾರ್ಪೊಡೆ
ನಿನಗಾನುಪರಿಸಲಾರ್ಪೆನೊಂದವಸರದೊಳ್  ೪೨೫

ಎಂದು ನುಡಿವ ಸರಮನಾ ಕರೀಂದ್ರ ಕೇಳ್ದು ಮೂಷಕಂಗಳೇಱ*ದ ತೆಪ್ಪಮಂ ತಡಿಗೆ ಸಾರ್ಚಲೊಡಂ ಮೂಷಕರಾಜಂ ಗಜರಾಜಂಗೆ ಪೊಡೆವಟ್ಟು ನಿನಗೇನಾನುಮಧ್ವಾನಮಾದಾಗಳೆನ್ನಂ ನೆನೆಯೆಂದು ಪೇೞ್ದು ಪೋಪುದುಂ ಕೆಲವು ದಿವಸಕ್ಕಾ ಗಜಂ ವಶಕ್ಕೆ ಕಂಭಕ್ಕೊಳಗಾಗಿ ಕಟ್ಟುವಟ್ಟು ತನ್ನಂ ನೆನೆಯಲೊಡಂ ಮೂಷಕಂ ನಿಜಪರಿವಾರಪರಿವೃತನಾಗಿ ಬಂದು ಗಜಯೂಧನಾಥನ ಬಂಧನಮೋಕ್ಷಮಪ್ಪಂತು ಪಾಶಮಂ ಕಡಿಕಂಡಂಗೆಯ್ದು ಪ್ರತ್ಯುಪಕಾರಮಂ ಮಾಡಿ ಮಿತ್ರಗುಣಮಂ ಮೆಱೆದುದು, ಅದು ಕಾರಣದಿಂದಾನುಂ ನಿನಗೇನಾನುಮೊಂದವಸರದೊಳುಪಕರಿಸಲಾರ್ಪೆನೆನ್ನ ನವಜ್ಞೆಗೆಯ್ವುದುಚಿತಮಲ್ಲೆಂತುಂ ಸಮಸ್ತ ಪುರುಷಾರ್ಥಕ್ಕೆಲ್ಲಂ ಮಿತ್ರನುತ್ತರಸಾಧಕನದಱ*ಂದೆನಗೆ ಮಿತ್ರತ್ವಮನಿತ್ತೊಡಲ್ಲದೆ ಪೋಗೆನೆಂದು ಕಾಗೆ ಕಟ್ಟಾಯಮಂ ನುಡಿಯೆ ಕೇಳ್ದು ಹಿರಣ್ಯರೋಮನಿಂತೆಂದಂ: ನೀನಿನಿತು ಪರಿಚೇದಂಗೆಯ್ದಿರೆಯುಂ ಪ್ರಾರ್ಥಿಸೆಯುಂ ಮಿತ್ರತ್ವಮನೀಯಲ್ವೇಡಿದೊಡಮಿನ್ನೆನ್ನ ಕೆಳೆಯುಂ ನನ್ನ ಪಗೆಯುಂ ನಿನ್ನದಾಗಿಯೆ ನೆಗೞಲ್ವೇೞ್ಕುಮೆನೆ ವಾಯಸನಿದಲ್ತು ನೀನೇನಂ ಪೇೞ್ದೊಡಮದೆನಗೆ ಎಂಬ ಮೂಷಕನು ಬರುತ್ತಿದ್ದು ಕಾಡಾನೆಗಳು ನೀರಿಗಾಗಿ ಬರುವುದನ್ನು ಕಂಡು ಅವುಗಳ ಒಡೆಯನೊಡನೆ ಹೀಗೆಂದಿತು : ೪೨೫. ವನಗಜಯೂಧಾಶ್ವರ! ಪ್ರವಾಹದಲ್ಲಿ ನಾನು ಪರಿವಾರ ಸಮೇತನಾಗಿ ಕೊಚ್ಚಿಕೊಂಡು ಹೋಗುತ್ತಿದ್ದೇನೆ. ಆಧಾರವಿಲ್ಲ. ರಕ್ಷಿಸಲು ಸಾಧ್ಯವಾಗುವುದಾದರೆ ನಿನಗೆ ನಾನು ಎಂದಾದರೂ ಒಂದು ಸಂದರ್ಭದಲ್ಲಿ ಉಪಕಾರ ಮಾಡಬಲ್ಲೆ ವ|| ಹೀಗೆ ನುಡಿದ ಸ್ವರವನ್ನು ಆ ಕರೀಂದ್ರನು ಕೇಳಿ ಇಲಿಗಳು ಏರಿದ್ದ ತೆಪ್ಪವನ್ನು ದಡಕ್ಕೆ ಸೇರಿಸಲು ಮೂಷಕರಾಜನು ಗಜರಾಜನಿಗೆ ನಮಸ್ಕರಿಸಿ ನಿನಗೇನಾದರೂ ಕಷ್ಟಬಂದಾಗ ನನ್ನನ್ನು ನೆನೆಯೆಂದು ಹೇಳಿ ಹೋಯಿತು. ಕೆಲವು ದಿವಸಗಳಲ್ಲಿ ಆ ಆನೆಯು ಬಂಧನಕ್ಕೆ ಒಳಗಾಗಿ ಕಟ್ಟಲ್ಪಟ್ಟು ತನ್ನನ್ನು ನೆನೆಯಲು ಮೂಷಕನು ತನ್ನ ಪರಿವಾರ ಪರಿವೃತನಾಗಿ ಬಂದು ಆನೆಗಳ ಒಡೆಯನ ಬಂಧಮೋಕ್ಷವಾಗುವಂತೆ ಪಾಶವನ್ನು ತುಂಡುತುಂಡಾಗಿ ಮಾಡಿ ಪ್ರತ್ಯುಪಕಾರವನ್ನು ಗೈದು ಮಿತ್ರಗುಣವನ್ನು ಮೆರೆಯಿತು. ಅದರಿಂದ ನಾನೂ ನಿನಗೆ ಒಂದಲ್ಲ ಒಂದು ಸಂದರ್ಭದಲ್ಲಿ ಉಪಕರಿಸಬಲ್ಲೆ ; ನನ್ನನ್ನು ತಿರಸ್ಕರಿಸುವುದು ಉಚಿತವಲ್ಲ. ಹೇಗಿದ್ದರೂ ಸಮಸ್ತ ಪುರುಷಾರ್ಥಗಳಿಗೂ ಗೆಳೆಯನು ಕಾರಣ ಸಾಧನನಾಗಿರುವನು. ಅದರಿಂದ ನನಗೆ ನಿನ್ನ ಗೆಳೆತನವನ್ನು ನೀಡಿದ ಹೊರತು ಹೋಗಲಾರೆ ಎಂದು ಕಾಗೆಯು ಕಡ್ಡಾಯವಾಗಿ ಹೇಳಲು ಕೇಳಿ ಹಿರಣ್ಯರೋಮನು ಹೀಗೆಂದನು : ನೀನು ಇಷ್ಟು ನಿರ್ಧಾರ ಮಾಡಿದ್ದರೂ ಪ್ರಾರ್ಥಸಿದರೂ ಇನ್ನು ಮುಂದೆ ನನ್ನ ಸ್ನೇಹವೂ ವೈರವೂ ನಿನ್ನದಾಗಿಯೇ ಆಚರಿಸಬೇಕು ಎನ್ನಲು ಕಾಗೆಯು ಹಾಗಲ್ಲ, ನೀನೇನು ಹೇಳಿದರೂ ಅದನ್ನು ನಾನು ಗುರುವಚನವೆಂದು ತಿಳಿದು ಸ್ವೀಕರಿಸಿ ನಡೆಯುವೆನು ಗುರುವಚನಮಾಗಿ ಕೈಕೊಂಡು ನಡೆವೆನೆಲೊಡಂ ಹಿರಣ್ಯರೋಮಂ ಬಿಲದಿಂ ಪೊಱಮಡಲೊಡಂ ವಾಯಸಂ ರಾಗರಸಮಯನಾಗಿ ಪಣ್ಪಳಂಗಳಂ ಮುಂದಿಟ್ಟು ಪೊಡಮಡಲೊಡಂ ಉಂದುರಂ ಸಂತುಷ್ಟನಾಗಿ ಪರಸ್ಪರ ಮಿತ್ರ ಪ್ರತಿಪತ್ತಿಯೆಲ್ಲಮಂ ನೆಱೆಯೆ ಮಾಡಿ ಪಿರಿದು ಪೊೞ್ತು ಸಂಭಾಷಣಂಗೆಯ್ದು ತದನಂತರಂ ತಂತಮ್ಮ ನಿವಾಸಂಗಳ್ಗೆ ಪೋಗಿ ಕೆಲವಾನು ದಿವಸಕ್ಕ ಲಘುಪತನಕಂ ಹಿರಣ್ಯರೋಮನಿರ್ದಲ್ಲಿಗೆ ಬಂದಿಂತೆಂದುದು : ಈ ಬನಂ ಲುಬ್ಧಕಜನಜನಿತೋಪದ್ರವಮಾಯ್ತಿನ್ನಿಲ್ಲಿರಬಾರದು. ನದೀತೀರದೊಳನೇಕ ಭೋಗಚಾರು ಫಲಬಹಳಮಪ್ಪ ತರುವರಂಗಳೊಳವು. ಆ ನದಿಯ ಮಡುವಿನೊಳ್ ಮಂಧರಕನೆಂಬ ಕೂರ್ಮನಿರ್ಪುದದರ್ಕಮೆನಗಂ ಪಿರಿದುಂ ಮಿತ್ರತ್ವ ಮುಂಟಪ್ಪುದಱ*ಂದಲ್ಲಿಗೆ ಪೋದಪ್ಪೆನೆಂದೊಡೆ ಮೂಷಕನಿಂತೆಂದುದು : ಕರಮೊಳ್ಳಿತ್ತು ಈ ಮರದ ಗೊರವನ ನಡುವೆಯೊಳಕಾರಣದಿಂದಿಲ್ಲಿ ವಿರಕ್ತನಾಗಿರ್ದಪೆನೆನ್ನಂ ನಿನ್ನ ಪೋಪ ತಾಣಕ್ಕುಯ್, ನೀನೇ ಕಾಕಿಯಾಗಿ ಪೋಪ್ಯದುಚಿತಮಲ್ಲಮದೆಂತೆನೆ :

ಶ್ಲೋ|| ಏಕಪುಂಸಾ ನ ಗಂತವ್ಯಂ ಅಹಿನಾ ಕಾಕ ಕಾರಣಾತ್
ದಷ್ಟಸ್ಸಂಜೀವಿತೋ ವಿಪ್ರಃ ಕರ್ಕಟಸ್ಯ ಪ್ರಸಾದತಃ ||೨೦೪||

ಟೀ|| ಒರ್ಬನೆ ಪುರುಷನೆಲ್ಲಿಗುಂ ಹೋಗಲಾಗದು. ಅದೆಹಗೆಂದೊಡೆ ಕಾಗೆಯ ಬಯಕೆಯ ನಿಮಿತ್ತಮಾಗಿ ಹಾವು ಕಚ್ಚಿದ ಬ್ರಾಹ್ಮಣನು ಮರಳಿಯೇಡಿಯಿಂದೆ ಜೀವಿಸಿದನು ಎಂಬ ಕಥೆಯಂ ಕೇಳ್ದಱ*ವುದಿಲ್ಲಕ್ಕುಮೆನೆ ವಾಯಸನದೆಂತೆನೆ ಹಿರಣ್ಯರೋಮಂ ಪೇೞ್ಗುಂ :

ಎನ್ನಲು ಹಿರಣ್ಯರೋಮನು ಬಿಲದಿಂದ ಹೊರಹೊರಡಲು ಕಾಗೆಯು ಪ್ರೀತಿಯಿಂದ ಹಣ್ಣು ಹಂಪಲನ್ನು ಎದುರಿಟ್ಟು ನಮಸ್ಕರಿಸಲು ಇಲಿಯು ಸಂತುಷ್ಟನಾಗಿ ಪರಸ್ಪರ ಮಿತ್ರೋಪಚಾರವೆಲ್ಲವನ್ನೂ ಪೂರ್ಣ ತುಂಬ ಹೊತ್ತಿನವರೆಗೆ ಮಾತಾಡಿ ಬಳಿಕ ತಮ್ಮ ತಮ್ಮ ನಿವಾಸಗಳಿಗೆ ಹೋದುವು. ಕೆಲವು ದಿನಗಳ ಮೇಲೆ ಲಘುಪತನಕನು ಹಿರಣ್ಯರೋಮನಿದ್ದಲ್ಲಿಗೆ ಬಂದು ಹೀಗೆಂದಿತು : ಈ ಕಾಡಿಗೆ ಬೇಡರಿಂದ ಉಪದ್ರವವುಂಟು; ಇನ್ನು ಇಲ್ಲಿ ಇರಬಾರದು. ನದೀತೀರದಲ್ಲಿ ಸುಖಸುಂದರಕರವಾದ ಫಲಭರಿತವಾದ ಉತ್ತಮವೃಕ್ಷಗಳಿವೆ. ಆ ನದಿಯ ಮಡುವಿನಲ್ಲಿ ಮಂಧರಕನೆಂಬ ಕೂರ್ಮನಿದ್ದಾನೆ ; ಅವನಿಗೂ ನನಗೂ ಅತಿಶಯವಾದ ಸ್ನೇಹವಿದೆ. ಅದರಿಂದ ಅಲ್ಲಿಗೆ ಹೋಗುವೆನು ಎನ್ನಲು ಮೂಷಕನು ಹೀಗೆಂದಿತು : ಬಹಳ ಒಳ್ಳೆಯದಾಯಿತು. ಈ ಮರದ ಸಂನ್ಯಾಸಿಯು ಮಧ್ಯದಲ್ಲಿ ಇರುವ ಕಾರಣದಿಂದ ನಾನು ಇಲ್ಲಿ ವಿರಕ್ತನಾಗಿದ್ದೇನೆ. ನೀನು ಹೋಗುವ ಸ್ಥಳಕ್ಕೆ ನನ್ನನ್ನೂ ಕರೆದುಕೊಂಡು ಹೋಗು. ನೀನು ಏಕಾಕಿಯಾಗಿ ಹೋಗುವುದು ಉಚಿತವಲ್ಲ. ಹೇಗೆಂದರೆ, ಶ್ಲೋ|| ಒಬ್ಬನೇ ಪುರುಷನು ಎಲ್ಲಿಗೂ ಹೋಗಬಾರದು. ಹೇಗೆಂದರೆ ಕಾಗೆಯು ಬಯಕೆಯ ಕಾರಣಕ್ಕಾಗಿ ಹಾವು ಕಚ್ಚಿದ ಬ್ರಾಹ್ಮಣನು ಮರಳಿ ಏಡಿಯಿಂದ ಜೀವಿಸಿದನು. ಎಂಬ ಕಥೆಯನ್ನು ನೀನು ತಿಳಿದಿರಲಿಕ್ಕಿಲ್ಲ ಎನ್ನಲು ಕಾಗೆಯು ಅದೇನು ಎಂದು ಕೇಳಲು