(ಮದನಸಾಯಕವೃತ್ತಂ)

ಎನೆ ಕಪೋತಕುಲಮಾಗಳೆ ಮೇಗ
ಣ್ಗನಿತುಮೊರ್ಮೊದಲೆ ಪಾಱಲೊಡಂ ತೊ
ಟ್ಟನೆ ವನೇಚರಖಳಂ ಪರಿತಂದಾ
ಯ್ತೆನಗಿದೊಂದತಿಕುತೂಹಳಮೆಂದಂ  ೪೧೫

ಎಂದು ತನ್ನೊಡ್ಡಿದ ಬಲೆವೆರಸಂಬರದೊಳ್ ಪಾಱುವ ಕಪೋತವ್ರಾತಮಂ ಕಿರಾತಂ ಕಂಡು ಕಿಛಿದಂತರಮವಱ ಬೆನ್ನೊಳ್ ಪರಿದು ಬೞ*ಕ್ಕಂ ಚಿಂತಿಸಿ ನಿಂದು ತನ್ನೊಳಿಂತೆಂದಂ :

ಒರ‍್ವನೆ ಸತ್ಪುರುಷಂ ಸಕ
ಲೋರ‍್ವಿಯುಮಂ ಕಾವನೇಕಮುಖದಿಂದೆನೆ ಸಾ
ಸಿರ‍್ವರಿರದೇಕಮುಖದಿಂ
ನಿರ‍್ವಹಿಪಂದವರ್ಗಸಾಧ್ಯಮಪ್ಪುದುಮುಂಟೇ  ೪೧೬

*ದ್ರುತವಿಲಂಬಿತವೃತ್ತಂ
ಎಂದು ಮತ್ತಂ,

ಪಡೆಯೆ ಪೋದ ಬಡಸೊಳೆ ತನ್ನ ಕ
ನ್ನಡಿಯುಮಂ ಕಿಡಿಸಿ ಬಂದಳೆಂಬ ನಾ
ಣ್ಣುಡಿಯುಮಾಯ್ತೆನಗೆ ಪಾಶಮಾ
ವೆಡೆಯೊಳೆಯ್ದಿದಪೆನೀ ಖಗಂಗಳಂ  ೪೧೭

ಎಂದು ಕಿರಾತಂ ಬೇಸತ್ತು ಬೆಚ್ಚನೆ ಸುಯ್ದು ಬಿದಿಯಂ ಬಯ್ದು ತನ್ನ ಮನೆಗೆ ಮಗುೞ್ದಂ. ಅನ್ನೆಗಮಾ ಕಪೋತಂಗಳಿನ್ನೇಗೆಯ್ವೆಮೆನೆ ಚಿತ್ರಗೀವನಿಂತಂದಂ; ಎನ್ನ ಮಿತ್ರನಪ್ಪ ಮೂಷಕದಿಂದಲ್ಲದೀ

ಈಡಡಲು ಆಹಕ್ಕಿಗಳೆಲ್ಲವು ಆಮುದಿಹಕ್ಕಿ ಹೇಳಿದ ಬುದ್ದಿಯಿಂದ ಬದುಕಿದವು. ಅದರಿಂದ ನೀವೂ ನನು ಹೇಳಿದ ಹಾಗೆ ಮಾಡುವಿರಾದರೆ ನಾವು ಈ ಪಾಶಸಹಿತವಾಗಿ ಹೋಗುವುದೇ ಕರ್ತವ್ಯ ಎಂದಿತು. ೪೧೫. ಆ ಪಾರಿವಾಳಗಳ ಹಿಂಡು ಕೊಡಲೇ ಮೇಲಕ್ಕೆ ಹಾರಲು ಬೇಡನು ಬಂದು ಅತ್ಯಂತ ಕುತೂಹಲ ಹೊಂದಿದನು ತಾನು ಒಡ್ಡಿದ ಬಲೆಯೊಡನೆ ಆಕಾಶದಲ್ಲಿ ಹಾರುವ ಪಾರಿವಾಳಗಳ ಹಿಂಡನ್ನು ಬೇಡನು ಕಂಡು ಸ್ವಲ್ವ ದೂರ ಹೋಗಿ ಬಳಿಕ ಚಿಂತಿಸಿ ತನ್ನಲ್ಲೇ ಹೀಗೆಂದುಕೊಂಡನು; ೪೧೬. ಒಬ್ಬನೇ ಸತ್ಪುರುಷನು ಸಕಲಲೊಕವನ್ನು ಕಾಪಾಡುವನು, ಸಾವಿರರು ಜನರಿಲ್ಲದೆ ಏಕಮುಖದಿಂದ ನಿರ್ವಹಿಸುವಾಗ ಅವರಿಗೆ ಅಸಾದ್ಯವಾದುದು ಉಂಟೇ! ೪೧೭. ಹಡೆಯಲು ಹೋದ ಬಡಸೊಳೆ ತನ್ನ ಕನ್ನಡಿಯನ್ನೂ ಕೆಡಿಸಿ ಬಂದಳೂ ಎಂಬ ನಾಣ್ನುಡಿಯಂತೆ ನನಗಾಯಿತು! ನನ್ನ ಪಾಶವೂ ಹೋಯಿತು. ಈ ಹಕ್ಕಿಗಳನ್ನು ಇನ್ನೆಲ್ಲಿ ಕಾಣಲಿ ಎಂದು ಬೇಡನು ಬೇಸತ್ತು ನಿಟ್ಟುಸಿರಿಟ್ಟು ವಿಯನ್ನು ಬಯ್ದು ತನ್ನ ಮನೆಗೆ ಹಿಂದಿರುಗಿದನು. ಅಷ್ಟರಲ್ಲಿ ಆ ಪಾರಿವಾಳಗಳು ಇನ್ನೇನು ಮಾಡಲಿ ಎನ್ನಲು ಚಿತ್ರಗ್ರೀವನು ಹೀಗೆಂದನು; ನನ್ನ ಮಿತ್ರನಾದ ಪಾಶಬಂಧನಂ ಪರಿ ಪಡದು. ಅಲ್ಲಿಗೆ ಪೋಪಂ, ಬನ್ನಿಮೆಂದು ಹಿರಣ್ಯರೋಮನಿರ್ದಲ್ಲಿಗೆ ಬಂದು ಬಿಲದ್ವಾರದೊಳ್ ನಿಂದು ತನ್ನ ಪೆಸರೊಳ್ ಕರೆಯಲೊಡಂ ಮಿತ್ರನ ಸರಮನುಂದುರಂ ಕೇಳ್ದುಪರಿತಂದು ನೋಡಿ ಬಲೆಯೊಳ್ ಸಿಲ್ಕಿರ್ದನಂ ಕಂಡು ನಿನಗಿತವತೆಯೇ ಕಾರಣದಿನಾದುದೆನೆ ಕಪೋತಾಶನಿಂತೆಂದಂ;

ನಿರುತಂ ನೀನಿರ್ದಲ್ಲಿಗೆ
ಬರೆ ಧರೆಯೊಳ್ ಕಲಸಿ ಪರೆದ ಕೂಳಂ ಕಂಡಾ
ನಿರದೆ ಬುಭುಕ್ಷಿತನೆಂ ಭೋ
ರ್ಗರೆಯುತ್ತುಂ ಪಾಯ್ದೆನಱ*ಯೆ ಸಪರಿಗ್ರಹನೆಂ  ೪೧೮

ಪೆಱತೇಂ ಮುನಿ ವಿಷಯವಿಷ
ಕ್ಕೆಱಗಿಯೆ ಸಂಸಾರಪಾಶದೊಳ್ ಸಿಲ್ಕುವವೋಲ್
ತೆಱನಱ*ಯದಾನುಮಾಮಿಷ
ಕೆಱಗಿ ಮಹಾಪಾಶಬಂಧದೊಳ್ ಸಿಲ್ಕಿರ್ದೆಂ  ೪೧೯

ಎನೆ ಹಿರಣ್ಯರೋಮನಿಂತೆಂದಂ: ನೀನಪ್ಪೊಡೆ ಕರಂ ಬುದ್ಧಿವಂತಂ. ಇಂತಪ್ಪ ಶಂಕಾಸ್ಥಾನಕ್ಕೆ ಭೋಂಕೆನೆ ಪಾಯ್ದು ಪೊಲ್ಲಗೆಯ್ದೆಯೆನೆ ಚಿತ್ರಗ್ರೀವನಿಂತೆಂದಂ:

ಎಂತಪ್ಪ ಬುದ್ಧಿವಂತನು
ಮಂ ತತಕ್ಷಣದಿಂಭವಾಂತರಾರ್ಜಿತಕರ್ಮಂ
ತಾಂ ತಡೆಯದೂಡದಿರದಿ
ನ್ನಂತುಂಟೆ ಸಿದ್ಧಾಂತಮಾವ ಜೀವಿಗಮೆಂತುಂ  ೪೨೦

ಶ್ಲೋ||ಯಸ್ಯ ಯದ್ಭವಿತವ್ಯಂ ಹಿ ತದ್ಭವತ್ಯೇವ ನಾನ್ಯಥಾ ನೀಯತೇ ತೇನ
ಮಾರ್ಗೆಣ ಸ್ವಯಂ ವಾ ತತ್ರ ಗಚ್ಛತಿ ||೧೯೬||

ಮೂಷಿಕನಿಂದಲ್ಲದೆ ಈ ಪಾಶಬಂಧನವನ್ನು ಬಿಡಿಸಲಾಗದು. ಅಲ್ಲಿಗೆ ಹೋಗೋಣ, ಬನ್ನಿರಿ ಎಂದು ಹಿರಣ್ಯರೋಮನಿದ್ದನಲ್ಲಿಗೆ ಬಂದು ಬಿಲದ್ವಾರದಲ್ಲಿ ನಿಂತಿತು; ಅವನ ಹೆಸರು ಕೇಳಿ ಕರೆಯಿರಿ. ಮಿತ್ರನ ಸ್ವರವನ್ನು ಆ ಇಲಿಯು ಕೇಳಿ ಬಂದು ನೋಡಿ ಬಲೆಯಲ್ಲಿ ಸಿಕ್ಕಿರುವವನನ್ನು ಕಂಡು ನಿನಗೆ ಇಂಥ ಅವಸ್ಥೆ ಯಾವ ಕಾರಣದಿಂದ ಆಯಿತು ಎಂದು ಕೇಳೀತು. ಆಗ ಪಾರಿವಾಳಗಳ ಒಡೆಯನು ಹೀಗೆಂದನು; ೪೧೮. ಎಂದಿನಂತೆ ನೀನಿದ್ದಲ್ಲಿಗೆ ಬರುತ್ತಿದ್ದಾಗ ಭೂಮಿಯ ಮೇಲೆ ಕಲಸಿ ಹರಡಿದ ಕೂಳನ್ನು ಕಂಡು ನಾನು ಹಸಿವೆಯಿಂದ ಎರಗಿದೆ; ಬಂಧನಕ್ಕೆ ಗುರಿಯಾದೆ.೪೧೯.ಮುನಿಯಾದವನು ಇಂದ್ರಿಯ ವಿಷಯಗಳಿಗೆ ಎರಗಿ ಸಂಸಾರಪಾಶದಲ್ಲಿ ಸಿಲುಕುವ ಹಾಗೆ ನಾನೂ ತಿಳಿಯದೆ ಆಹಾರಕ್ಕೆರಗಿ ಮಹಾಪಾಶಬಂಧನದಲ್ಲಿ ಸಿಲುಕಿದೆ. ವ|| ಹೀಗೆನ್ನಲು ಹಿರಣ್ಯರೋಮನು ಹೇಳಿದನು : ನೀನಾದರೋ ಬಹಳ ಬುದ್ಧಿವಂತ. ಇಂಥ ಸಂದೇಹ ಸ್ಥಾನಕ್ಕೆ ಹೋಗಿ ಕೆಟ್ಟದನ್ನು ಮಾಡಿದೆ. ಆಗ ಚಿತ್ರಗ್ರೀವನು ಹೀಗೆಂದನು : ೪೨೦. ಎಂಥ ಬುದ್ಧಿವಂತನನ್ನೂ ಜನ್ಮಾಂತರದಲ್ಲಿ ಗಳಿಸಿದ ಕರ್ಮವು ತಾನು ತಡೆಯದೆ ತಿನ್ನಿಸದೆ ಬಿಡದು. ಯಾವ ಜೀವಿಗಾದರೂ ಅದೇ ಸಿದ್ಧಾಂತ ತಾನೇ. ಶ್ಲೋ|| ಯಾರಿಗೆ ಏನಾಗಬೇಕೆಂದಿರುವುದೋ ಅದು ಆಗದೇ ಇಂದು. ಅದಲ್ಲದಿದ್ದಲ್ಲಿ ಪೂರ್ವಾರ್ಜಿತದುಷ್ಕೃತದಿಂದ ತಾನೇ ಕಲ್ಪಿಸಿದಲ್ಲಿಗೆ ಹೋಗುವನು ಎಂಬ

ಟೀ|| ಅವನೊರ್ವಂಗಾವುದಾನೊಂದಹಂತಹುದು. ಅದಾದಲ್ಲದೆ ಮಾಣದು. ಅದಲ್ಲದೊಡೆ ಪೂರ್ವಾರ್ಜಿತ ದುಷ್ಕೃತದಿಂ ಕಲ್ಪಿಸಿದಲ್ಲಿಗೆ ತಾನೆಯಾದರೂ ಹೋಹನು ಎಂಬುಕ್ತಿಯುಂಟು. ಆವ ಜೀವಕ್ಕಂ ಜನ್ಮಾಂತರಕರ್ಮಮೆ ಕರಣಮಾಗಿ ಪೋಕುಂ. ಇದುಂ ವಿವಿಹಿತಂ. ಆನೇಗೆಯ್ವೆನೆಂದೊಡೆ ನೀನೆಂದುದೊಂದು ಸಂದೆಯಮಿಲ್ಲೆಂದುಂದುರನಿಂತೆಂದುದು :

ಶ್ಲೋ||ಗಜಭುಜಂಗವಿಹಂಗ??ಬಂಧನಂ ಶಶಿದಿವಾಕರಯೋರ್ಗ್ರಹಪೀಡನಂ
ಮತಿಮಾತಾಂಚ ವಿಲೋಕ್ಯಂ ದರಿದ್ರತಾಂ ವಿರಹೋ ಬಲವಾನಿತಿ ಮೇ ಮತಿಃ  ||೧೯೭||

ಟೀ|| ಆನೆ ಪಾವು ಪಕ್ಕಿಗಳ್ಗೆ ಬಂಧನಮುಂ ಚಂದ್ರ ಸೂರ್ಯರ್ಗೆ ಗ್ರಹಣಮುಂ ಮಹಾಪುರುಷರ್ಗೆ ದರಿದ್ರ್ಯಮುಂ ಇವು ವಿವಶದಂತಹುವು. ಅದು ಕಾರಣದಿಂ ವಿಯೆ ಬಲಾಢ್ಯಂ. ಎಂದಿಂತಾ ಮೂಷಕಂ ಸುಭಾಷಿತಮಂ ಪೇೞ್ದು ಬೞ*ಕದಱ ಪಾಶಮಂ ಕಡಿಯಲೊಡಱ*ಸೆ ಕಪೋತಾಶನೆನ್ನ ಪಾಶಮಂ ಬೞ*ಕ್ಕೆ ಬಿಡಿಸು ; ಮುನ್ನಂ ಪರಿಗ್ರಹದ ಪಾಶಮಂ ಮೋಕ್ಷಂಗೆಯ್ಯೆಂಬುದುಂ ಹಿರಣ್ಯರೋಮನಿಂತೆಂದಂ :

ಶ್ಲೋ||  ಆಪತ್ಕಾಲೇ ಧನಂ ರಕ್ಷೇದ್ದಾರಾನ್ ರಕ್ಷೇದ್ಧನೈರಪಿ
ಆತ್ಮಾನಂ ಸರ್ವದಾ ರಕ್ಷೇತ್ ದಾರೈರಪಿ ಧನೈರಪಿ  ||೧೯೮||

ಟೀ|| ಆಪತ್ಕಾಲಕ್ಕೆ ಧನಮಂ ರಕ್ಷಿಸುವುದು. ಅರ್ಥದಿಂದಂ ಪರಿಗ್ರಹಮಂ ರಕ್ಷಿಸುವುದು. ಪರಿಗ್ರಹದಿಂದಂ ಅರ್ಥದಿಂದಂ ತನ್ನಂ ತಾನೆ ರಕ್ಷಿಸಿಕೊಂಬುದು. ಎಂಬುದು ನೀತಿಯುಂಟು. ನೀನುಳ್ಳೊಡೆ ಪರಿಗ್ರಹಮಂ ಪಡೆದುಕೊಳಲಕ್ಕುಂ ಎನಲಾತಂಗೆ ಚಿತ್ರಗ್ರೀವನಿಂತೆಂದಂ :

ಪರಮಾರ್ಥಂ ನೃಪನಾಶ್ರಿತ
ಭರಣಂ ತಾನೆನಿಪ ಲಕ್ಷಣದ ಗುಣದಿಂದಂ
ಪರಿಪೂರ್ಣನಪ್ಪುದಾಗದ
ನರಸು ಕರಂ ವಿರಸಮೞ*ದ ಪೊರಸಂ ಪೋಲ್ಕುಂ  ೪೨೧

ಉಕ್ತಿ ಇದೆ. ವ|| ಯಾವ ಜೀವಕ್ಕೂ ಜನ್ಮಾಂತರ ಕರ್ಮವೇ ಕಾರಣವಾಗಿದೆ. ಅದರಿಂದ ಪುರುಷನು ಸುಖದುಃಖಾನುಭವವನ್ನು ಹೊಂದುವನು. ಬಳಿಕ ದೈವವೇ ಕಾರಣವಾಗಿ ಹೋಗುವನು. ಇದೂ ವಿವಿಹಿಥ, ನಾನು ಏನು ಮಾಡುವೆನೆಂದರೆ ನೀನು ಹೇಳಿದ ಒಂದೂ ಸಂದೇಹವಿಲ್ಲ ಎಂದ ಇಲಿಯು ಹೀಗೆಂದಿತು : ಶ್ಲೋ|| ಆನೆ ಹಾವು ಹಕ್ಕಿಗಳಿಗೆ ಬಂಧನವೂ ಚಂದ್ರಸೂರ್ಯರಿಗೆ ಗ್ರಹಣವು ಮಹಾಪುರುಷರಿಗೆ ದಾರಿದ್ರ್ಯವೂ ವಿವಶದಿಂದ ಸಂಭವಿಸುವುವು. ಅದರಿಂದ ವಿಯೇ ಬಲಾಢ್ಯನು. ವ|| ಹೀಗೆ ಆ ಮೂಷಿಕವು ಸುಭಾಷಿತವನ್ನು ಹೇಳಿ ಬಳಿಕ ಅದರ ಪಾಶವನ್ನು ಕಡಿಯತೊಡಗಲು ಪಾರಿವಾಳಗಳ ಒಡೆಯನು, ತನ್ನ ಪಾಶವನ್ನು ಬಳಿಕ ಬಿಡಿಸು ; ಮೊದಲು ತನ್ನ ಪರಿವಾರದ ಪಾಶವನ್ನು ಬಿಡಿಸು ಎನ್ನಲು ಹಿರಣ್ಯರೋಮನು ಹೀಗೆಂದನು : ಶ್ಲೋ|| ಆಪತ್ಕಾಲಕ್ಕಾಗಿ ಧನವನ್ನು ರಕ್ಷಿಸಬೇಕು. ಧನದಿಂದ ಕುಟುಂಬವನ್ನು ರಕ್ಷಿಸಬೇಕು. ಕುಟುಂಬದಿಂದಲೂ ಧನದಿಂದಲೂ ತನ್ನನ್ನು ತಾನೇ ಮೊದಲು ರಕ್ಷಿಸಿಕೊಳ್ಳತಕ್ಕದ್ದು ಎಂಬ ನೀತಿಯುಂಟು. ವ|| ನೀನುಳಿದರೆ ಕುಟುಂಬವನ್ನು ಪಡೆದುಕೊಳ್ಳಬಹುದು ಎನ್ನಲು ಚಿತ್ರಗ್ರೀವನು ಹೀಗೆಂದನು: ೪೨೧. ನೃಪನು ಆಶ್ರಿತಭರಣನೆಂಬ ಲಕ್ಷಣದ ಗುಣದಿಂದ ಪರಿಪೂರ್ಣನಾಗ ಬೇಕು. ಹೀಗಿಲ್ಲದ ಅರಸನು ವಿರಸನಾಗುವನು. ಅವನು ಸತ್ತ ಪಾರಿವಾಳದಂತಾಗುವನು.

ಅದಲ್ಲದೆಯುಂ,

ಶ್ಲೋ||  ಅರ್ಥಿತ ವಿಭವಸ್ತ್ಯಾಗಃ ಸ್ವಾತಂತ್ರ್ಯಮುಚಿತಜ್ಞತಾ
ಏತತ್ಪಂಚಗುಣೋಪೇತಂ ಆಶ್ರಯಂತೀಶ್ವರಂ ಬುಧಾಃ  ||೧೯೯||

ಟೀ|| ಅರ್ಥಿತ್ವಂ ಐಶ್ವರ‍್ಯಂ ತ್ಯಾಗಂ ಸ್ವಾತಂತ್ರ್ಯಂ ಉಚಿತಜ್ಞತೆ ಈ ಐದು ಗುಣಂಗಳಿಲ್ಲ ದರಸನನಾಶ್ರೈಸಲಾಗದು. ಅದಱ*ಂ ಪರಿಜನಕ್ಕೆಡಱದೊಡೆ ಪೊರೆವುದುಂ ಪಡೆವುದುಂ ಪಚ್ಚುಕುಡುವುದುಂ ತೊಡರ್ಪಾಗೆ ಬಿಡಿಸುವುದುಂ ಬಲ್ಲಿದರ್ಕೊಲೆ ಕಾವುದುಂ ದೋಷಕ್ಕೆ ಸೈರಿಸುವುದುಂ ಕ್ಲೇಶಮನಱ*ವುದುಂ ಮೊದಲಾಗಿ ಮತ್ತಮುತ್ತಮಗುಣಂಗಳೊಳವು. ಅದು ಕಾರಣದಿಂದೀಯವಸ್ಥೆಯೊಳ್ ನೀವಿರ್ದಂತೆನ್ನನೆ ಮುನ್ನಂ ಕಾದುಕೊಂಡೆನಪ್ಪೊಡೆ ಕಷ್ಟನೆಯಪ್ಪೆಂ ಅದೆಂತೆನೆ :

ಪರಿಜನ ಜನಪದಭೃತಿ ಧ
ರ್ಮರಕ್ಷಣಂ ಸ್ವಪ್ರುಯತ್ನಮೆಂಬಿದನಾತ್ಮಂ
ಭರಿಯಾಗಿ ಬಿಸುಟ ನರಪತಿ
ಪರಿಹೃತ ಧರ್ಮಾರ್ಥಕಾಮ ಮೋಕ್ಷನೆಯಕ್ಕುಂ  ೪೨೨

ಎಂಬುದುಂ ಹಿರಣ್ಯರೋಮನಿಷ್ಟನ ದೈರ‍್ಯಕ್ಕೆ ಸಂತುಷ್ಟನಾಗಿ ನಿನಗೆ ಸಂತೋಷಮನೀಗಳೆ ಮಾೞ್ಪೆನೆಂದಾಗಳೆ ಪೋಗಿ ತನ್ನ ಪರಿಜನಮೆಲ್ಲಮಂ ನೆರಪಿಕೊಂಡು ಬಂದಾ ಪಾಶಮಂ ನಿಶ್ಯೇಷ ಮಾಗಿ ಕಡಿದು ಕಳೆಯಲೊಡಂ ಚಿತ್ರಗ್ರೀವಂ ಕೃತಾರ್ಥನಾದೆನೆಂದು ಮಿತ್ರಂಗೆ ಪೊಡೆವಟ್ಟು ಪಾಶಮುಕ್ತನಾದ ಜೀವನಂತೂರ್ಧ್ವಗತಿಗೆ ಸಂದಂ.

ಇತ್ತಂ ಹಿರಣ್ಯರೋಮನಾ ಪಕ್ಷಿಗಳಂ ಕಾದ ಪುಣ್ಯದ ಫಲವೆನಿತಾದೊಡಂ ತನ್ನ ಮುನ್ನಿನ ದುಷ್ಕೃತವನನುಭವಿಸಿದಲ್ಲದೆ ಪೋಗದೆಂಬುದನಱ*ಪುವಂತಧಃಪತನಮಪ್ಪ ಬಿಲನಂ ಪೊಕ್ಕುದು. ಅಂತದೆಲ್ಲಮನಲ್ಲಿ ಮರನ ಮೇಲಿರ್ದ ವಾಯಸಂ ಕಂಡು ವಿಸ್ಮಯಂಬಟ್ಟಾತ್ಮಗತದೊಳಿಂತೆಂದಂ :

ಅಲ್ಲದೆ, ಶ್ಲೋ|| ಅರ್ಥಿತ್ವ, ಐಶ್ವರ್ಯ, ತ್ಯಾಗ, ಸ್ವಾತಂತ್ರ್ಯ, ಉಚಿತಜ್ಞತೆ – ಈ ಐದು ಗುಣಗಳಿಲ್ಲದ  ರಾಜನನ್ನು ಆಶ್ರಯಿಸಬಾರದು. ವ|| ಅದರಿಂದ ಪರಿವಾರಕ್ಕೆ ಅಪಾಯವೊದಗಲು ಅವರನ್ನು ರಕ್ಷಿಸಬೇಕು ; ಪಡೆದುದರಲ್ಲಿ ಹಂಚಿಕೊಡಬೇಕು; ಅಪಾಯ ಬಂದಲ್ಲಿ ಬಿಡಿಸಬೇಕು ; ಬಲಶಾಲಿಗಳಾದವರು ಕೊಲ್ಲಲು ಬರಲು ಅವರನ್ನು ಕಾಪಾಡಬೇಕು ; ದೊಷವನ್ನು ಸಹಿಸಿ ಕ್ಲೇಶವನ್ನು ಅರಿತುಕೊಳ್ಳಬೇಕು. ಈ ಮೊದಲಾದ ಇನ್ನೂ ಉತ್ತಮಗುಣಗಳಿವೆ. ಅದರಿಂದ ಈ ಅವಸ್ಥೆಯಲ್ಲಿ ನೀವು ಇದ್ದಂತೆ ನನ್ನನ್ನು ಮೊದಲೇ ರಕ್ಷಿಸಿಕೊಂಡೆನಾದರೆ ಕಷ್ಟನಾಗುವೆನು. ಹೇಗೆಂದರೆ, ೪೨೨. ಪರಿಜನರನ್ನೂ ಜನಪದರನ್ನೂ ಕಾಪಾಡುವ ಧರ್ಮರಕ್ಷಣೆ, ಸ್ವಪ್ರಯತ್ನಗಳನ್ನು ಸ್ವೇಚೆಯಿಂದ ಬಿಡುವ ಅರಸನು ಧರ್ಮಾರ್ಥ ಕಾಮಮೋಕ್ಷಗಳಿಂದ ದೂರನಾಗುತ್ತಾನೆ. ಹಿರಣ್ಯರೋಮನು ಮಿತ್ರನ ಧೈರ್ಯಕ್ಕೆ ಸಂತುಷ್ಟನಾದನು ಈಗಲೇ ಉಂಟುಮಾಡುವೆನೆಂದು ಆಗಲೇ ಹೋಗಿ ತನ್ನ ಪರಿವಾರವೆಲ್ಲವನ್ನೂ ಕೋಡಿಕೊಂಡು ಬಂದು ಪಾಶವನ್ನು ನಿಶ್ಯೇಷವಾಗಿ ಕಡಿದುಬಿಟ್ಟನು. ಚಿತ್ರಗ್ರೀವನು ಕೃತಾರ್ಥನಾದೆನೆಂದು ಮಿತ್ರನಿಗೆ ನಮಸ್ಕರಿಸಿ ಪಾಶಮುಕ್ತನಾದ ಜೀವನಂತೆ ಮೇಲಕ್ಕೆ ಹಾರಿದನು. ಇತ್ತ ಹಿರಣ್ಯರೋಮನು ಆ ಪಕ್ಷಿಗಳನ್ನು ಕಾಪಾಡಿದ ಪುಣ್ಯದ  ಫಲವು ಎಷ್ಟೇ ಆದರೂ ತನ್ನ ಹಿಂದಿನ ಪಾಪವನ್ನು ಅನುಭವಿಸಿದ ಹೊರತು

ಶ್ಲೋ|| ಅಧನಂ ಖಲು ಜೀವಧನಂ ಹೇಮಾರ್ಧಧನಂ ಮಹಾಧನಂ ಧಾನ್ಯಂ
ಅತಿಧನಮೇತತ್ಸುಂದರ ವಿದ್ಯಾಶೀಲಂ ತಪಶ್ಚ ಮಿತ್ರಂ ಚ ||೨೦೦||

ಟೀ||  ಜೀವಧನಂ ಧನವಲ್ಲ ಸುವರ್ಣಮಯಾಭರಣಂಗಳರ್ಧಧನಂ. ಧಾನ್ಯಂ ಮಹಾ ಧನಂ, ಸುವಿದ್ಯೆ ಸುಶೀಲಂ ತಪಸ್ಸು ಮಿತ್ರತ್ವಮೆಂಬಿವೆ ಸರ‍್ವಧನಾಕಂಗಳ್ ಎಂಬೀ ನೀತಿವಿದರ ಮಾತೇಕೆ ತಪ್ಪುಗುಂ. ಈ ಮೂಷಕಂ ಕೇವಲಂ ಜೀವಮಾತ್ರಮಲ್ಲ. ಇದು ಮಹಾಪುರುಷ ನದಱ*ಂದಾನುಮೀತನೊಳೇತೆಱದಿಂ ಪ್ರೀತಿಯನೆ ಮಾಡಿಕೊಳ್ವೆನೆಂದಾತ್ಮಗತದೊಳ್ ಬಗೆದು ಹಿರಣ್ಯರೋಮನಿರ್ದ ಬಿಲದ್ವಾರಕ್ಕೆ ಬಂದು ನೋಡೆ ಕರೆವ ಕಾಗೆಯಂ ಕಂಡು ನೀನಾರೆಂದು ಕೇಳಲ್ ಕಾಗೆ ಪೇೞ್ಗುಂ:

ಮಿತ್ರವ್ಯಸನತ್ರಾಣ ಪ
ವಿತ್ರೀಕೃತಗಾತ್ರನಪ್ಪ ನಿನ್ನಂ ಕಂಡಾ
ಮಿತ್ರವಿಹೀನನೆನೀಗಳ್
ಮಿತ್ರತ್ವಕ್ಕಾಸೆವಟ್ಟು ಬಂದೆಂ ನಿನ್ನೊಳ್  ೪೨೩

ಎಂಬುದುಂ  ಮೂಷಕನಿಂತೆಂದುದು : ನೀಂ ಧ್ವಾಂಕ್ಷನೆಯಪ್ಪುದಱ*ಂದತ್ಯಂತ ಮಾಂಸಭಕ್ಷಣಕಾಂಕ್ಷಿತನುಂ ಸ್ವಭಾವಚಪಲನುಮಾಗಿರ್ಪೆಯದು ಕಾರಣದಿಂ ಮಿತ್ರಪಾತ್ರಗುಣ ಸಮೇತನಲ್ಲೆನೆ ಲಘುಪತನಕನೆಂದಂ : ಇಂತಪ್ಪೊಡೆ ಮಿತ್ರಗುಣಂಗಳೆನ್ನವು ಸತ್ಪಾತ್ರವೆನ್ನವೆಂಬುದುಂ ಹಿರಣ್ಯರೋಮನಿಂತಂದಂ :

ಶ್ಲೋ|| ಸ್ವಚತಾ ತಾಗಿತಾ ಶೌರ‍್ಯಂ ಸಮಾನಸುಖದುಃಖಿತಾ
ಅನುರಾಗಶ್ಚ ದಾಕ್ಷಿಣ್ಯಂ ಸತ್ಯಂ ಶೌಚಂ ಸುಹೃದ್ಗುಣಾಃ  ||೨೦೧||

ಹೋಗುವುದಿಲ್ಲ ಎಂಬುದನ್ನು ತಿಳಿಸುವಂತೆ ಅಧಃಪತನವಾದ ಬಿಲವನ್ನು ಹೊಕ್ಕನು. ಹಾಗೆ ಅದೆಲ್ಲವನ್ನೂ ಅಲ್ಲಿ ಮರದ ಮೇಲಿದ್ದ ಕಾಗೆಯು ಕಂಡು ಆಶ್ಚರ್ಯಪಟ್ಟು ತನ್ನಲ್ಲೇ ಹೀಗೆ ಹೇಳಿಕೊಂಡಿತು : ಶ್ಲೋ|| ಪ್ರಾಣಧನವು ಧನವಲ್ಲ. ಸುವರ್ಣಮಯವಾದ  ಆಭರಣಗಳು ಅರ್ಧಧನ, ಧಾನ್ಯವು ಮಹಾಧನ, ಒಳ್ಳೆಯ ವಿದ್ಯೆ, ಒಳ್ಳೆಯ ಶೀಲ, ತಪಸ್ಸು, ಮಿತ್ರತ್ವ ಎಂಬಿವೇ ಸರ್ವಧನಕ್ಕೂ ಮಿಗಿಲು ಎನಿಸಿದುವು ಎಂಬ ಈ ನೀತಿಜ್ಞರ ಮಾತು ಏಕೆ ತಪ್ಪುವುದು. ವ|| ಈ ಇಲಿಯು ಕೇವಲ ಪ್ರಾಣಿಯಷ್ಟೇ ಅಲ್ಲ. ಇದೊಂದು ಮಹಾಪುರುಷ. ಅದರಿಂದ ನಾನೂ ಈತನೊಡನೆ ಏನಾದರೂ ಮಾಡಿ ಪ್ರೀತಿಯನ್ನು ಸಂಪಾದಿಸುವೆನು ಎಂದು ಮನಸ್ಸಿನಲ್ಲಿಯೇ ತಿಳಿದು ಹಿರಣ್ಯರೋಮನಿದ್ದ ಬಿಲದ್ವಾರಕ್ಕೆ ಬಂದು ನೋಡಿ ಕರೆಯುವ ಕಾಗೆಯನ್ನು ಕಂಡು ನೀನು ಯಾರು ಎಂದು ಕೇಳಲು ಕಾಗೆಯು ಹೇಳಿತು : ೪೨೩. ಮಿತ್ರನ ಚಿಂತೆಗೆ ತ್ರಾಣರೂಪನಾದ ಪವಿತ್ರಗಾತ್ರನಾದ ನಿನ್ನನ್ನು ಕಂಡು ಮಿತ್ರವಿಹೀನನಾದ ನಾನು ಈಗ ನಿನ್ನ ಮಿತ್ರತ್ವಕ್ಕೆ ಆಸೆಪಟ್ಟು ನಿನ್ನಲ್ಲಿಗೆ ಬಂದೆನು. ವ|| ಆಗ ಮೂಷಕ ಹೀಗೆಂದಿತು : ನೀನು ಕಾಗೆಯಾದುದರಿಂದ ಅತ್ಯಂತ ಮಾಂಸಭಕ್ಷಣಕಾಂಕ್ಷಿತನೂ ಆಗಿರುವೆ. ಅದರಿಂದ ಮಿತ್ರನಾಗುವುದಕ್ಕೆ ಬೇಕಾದ ಗುಣಗಳಿಂದ ಕೂಡಿಲ್ಲ. ಆಗ ಲಘುಪತನಕನು ಹೀಗೆಂದನು : ಹಾಗಾದರೆ ಮಿತ್ರಗುಣಗಳು ಯಾವುವು, ಸತ್ಪಾತ್ರ ಎಂದರೆ ಏನು ಎಂದು ಕೇಳಲು ಹಿರಣ್ಯರೋಮನು ಹೀಗೆಂದನು : ಶ್ಲೋ|| ಸ್ವಚತೆ, ತ್ಯಾಗ, ಶೌರ್ಯ, ಸಮಾನವಾದ ಸುಖದುಃಖ, ಸ್ನೇಹ,

ಟೀ|| ಸ್ವಚತನಂ ತ್ಯಾಗಂ ಶೌರ‍್ಯಂ ಸಮಾನವಹ ಸುಖದುಃಖಂ ಸ್ನೇಹಂ ದಾಕ್ಷಿಣ್ಯಂ ಸತ್ಯಂ ಶೌಚಮೆಂಬಿವು ಮಿತ್ರಗುಣಂಗಳ್. ಮತ್ತಂ,

ಶ್ಲೋ||ಶೀಲಂ ಮಹಾನುರಾಗಶ್ಚ ಸಂಕ್ಷಿಪ್ತ ಮಿತ್ರಲಕ್ಷಣಂ ಮಿತ್ರಲಕ್ಷಣಂಯಸ್ಮಿನ್ನೇತದ್ಧಿತಂ ಮಿತ್ರಂ ತತ್ರಾತ್ಮಾನಂ ವಿನಿಕ್ಷಿಪೇತ್ ||೨೦೨||

ಟೀ||ಶೀಲಂ ಮಹಾಸ್ನೇಹಂ ಇವು ಮೊದಲಾದ ಮಿತ್ರಲಕ್ಷಣಂಗಳಾವನಲ್ಲಿಯುಂಟು ಆ ಮಿತ್ರನಲ್ಲಿ ತಾನಿಹುದು. ಅದಲ್ಲದೆಯುಂ,

ಕುಲಜಂ ಸತ್ತ್ರಾಢ್ಯಂ ನಿ-
ಶ್ಚಲವಚನಭಿಮಾನಿ ಗುಣಿ ತಿತಿಕ್ಷಾನ್ವಿತನಿ-
ರ್ಮಲಚರಿತನೆರಡನಱ*ಯಂ
ಬಲಯುತನಱ*ವುಳ್ಳನೆನಿಪನಪ್ಪುದು ಕೆಳೆಯಂ  ೪೨೪

ಎಂದಿಂತು ಪೂರ‍್ವೋಕ್ತಲಕ್ಷಣಂಗಳನುಂದುರಂ ಪೇೞ್ವುದುಂ : ವಕ್ರಾಕ್ಷನಿಂತೆಂದಂ: ನೀನೆಂದಂತೆ ನಾಂ ಕಾಕಕುಲಪ್ರಸೂತನಾಗಿಯುಮಜ್ಞಾನಕರ್ಮದೊಳ್ ನಡೆವನಲ್ಲಮದಱ*ಂದೆನ್ನ ಮಿತ್ರತ್ವಮಂ ಕೈಕೊಳ್ವುದುಚಿತಮೆಂದೆಂತೆಂದೊಡೆ ಕೇಳೆಂದು ಲಘುಪತನಕಂ ಪೇೞ್ಗುಂ  :

ಶ್ಲೋ|| ಕರ್ತವ್ಯಾನಿಚ ಮಿತ್ರಾಣಿ ದುರ್ಬಲಾನಿ ಬಲಾನಿ ವಾ
ಹಸ್ತಿಯೂಧಂ ವನೇ ಬದ್ಧಂ ಮೂಷಕೈಶ್ಚವಿಮುಚ್ಯತೇ ||೨೦೩||

ಟೀ|| ಬಲಹೀನನಾಗಲಿ ಬಲವಂತನಾಗಲಿ ಮಿತ್ರನೇ ಬೇಕು. ಅದೆಹಗೆಂದೊಡೆ ವನದಲ್ಲಿ ಕಟ್ಟಿರ್ದಾನೆಯನಿಲಿ ಬಟ್ಟಹಗೆ ಎಂಬ ಕಥೆಯಂ ಕೇಳ್ದಱ*ವುದಿಲ್ಲಕ್ಕುಮೆನೆ ಮೂಷಕನದೆಂತೆನೆ ಲಘುಪತನಕಂ ಪೇೞ್ಗುಂ :