. ಕಾಗೆಯುಂ ಆಮೆಯುಂ ಸಾರಂಗಮುಂ ಇಲಿಯುಂ

ಸಕಲಮುನೀಂದ್ರಬೃಂದಾರಕವಂದ್ಯಮಾನ ಚಾರುಚರಿತನುಮುದಂಚಿತ ಗೋತ್ರಾಚಲ ಚಕ್ರವಾಳ ಚಕ್ರವರ್ತಿ ವಿಂಧ್ಯಮಹೀಧರದರ್ಪೋದ್ರೇಕಹರನುಂ ದೇವರಾಜ ಮಹೀಷಿ ವ್ಯಾಮೋಹ ನಹುಷ ಮಹೀವಲ್ಲಭ ಸಾಮ್ರಾಜ್ಯಪ್ರಾಜ್ಯಮಹೀರುಹದಾವಾನಲನುಂ ಜಠರಾನಲ ಶಿಖಾಕಲಾಪಭಸ್ಮೀಕೃತ ವಾತಾಪಿದಾನವಾಶ್ವರನುಂ ಲೋಪಾಮುದ್ರಾವಿಲೋಚನ ಮಧುಕರ ಪರೀಪೀತ

೪೦೯. ಲಕ್ಷ್ಮೀನಿವಾಸನಾಗಿ ಸಮಸ್ತಭೂಮಿಯನ್ನು ಕಾಪಾಡುವ ನೃಪತಿಯು ನಾನಾ ವಿಧವಾದ ನೀತಿಕ್ರಮಗಳಿಂದ ಹಲವರನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಕು. ೪೧೦. ಅದರಿಂದ ಮಿತ್ರರೆಂಬ ಕಮಲಗಳಿಗೆ ಸೂರ್ಯನೂ ಅಖಿಲ ಬುಧನಿಯೂ, ಮನುಚಾರಿತ್ರನೂ ಗೌತಮಗೋತ್ರಪವಿತ್ರನೂ ಆದ ವಸುಭಾಗಭಟ್ಟನು ಮಿತ್ರಕಾರ್ಯತಂತ್ರವನ್ನು ವಿರಚಿಸಿದನು. ಶ್ಲೋ|| ಕಾಗೆ, ಆಮೆ, ಸಾರಂಗ, ಇಲಿಗಳು ಮಿತ್ರತ್ವವನ್ನು ಹೊಂದಿದ ಹಾಗೆ ಬುದ್ಧಿವಂತರಾಗಿದ್ದವರು ಸಾಧುಸಂಸರ್ಗವನ್ನೇ ಮಾಡಬೇಕು. ಆ ಕಥಾಪ್ರಪಂಚವೇನೆಂದರೆ, ವ|| ಸಕಲ ಮುನಿವೃಂದದಿಂದ ವಂದಿಸಿಕೊಳ್ಳುವ ಸುಂದರಚರಿತ್ರನೂ ಸುಂದರ ಕುಲಪರ್ವತ ಸಮೂಹಗಳ ಚಕ್ರವರ್ತಿಯಾದ ವಿಂಧ್ಯರ್ಪತದ ದರ್ಪವನ್ನು ನಾಶಮಾಡಿದವನೂ ದೇವೇಂದ್ರನ ರಾಣಿಯಾದ ಶಚೀದೇವಿಯನ್ನು ಮೋಹಿಸಿದ ನಹುಷಚಕ್ರವರ್ತಿಯ ಸಾಮ್ರಾಜ್ಯವೃಕ್ಷಕ್ಕೆ ಕಾಳ್ಗಿಚ್ಚಾದವನೂ ಜಠರದ ಅಗ್ನಿಜ್ವಾಲಾಮಾಲೆಯಿಂದ ವಾತಾಪಿಯೆಂಬ ರಾಕ್ಷಸನನ್ನೂ ಭಸ್ಮಮಾಡಿದವನೂ ಲೋಪಾಮುದ್ರೆಯ ಕಣ್ಣೆಂಬ ತುಂಬಿಯಿಂದ ಮನೋಹರಮುಖ ಮಧುರಸವನ್ನು ಹೀರಲ್ಪಟ್ಟವನೂ ಉಪ್ಪುಕಡಲನ್ನು ಆ ಮುಕ್ಕುಳಿಸಿದವನೂ ಆದ ಅಗಸ್ತ್ಯ ಋಷಿಗೆ   ಮನೋಹರವದನಾರವಿಂದಮಧುರಸನುಂ ಗಂಡೂಷೀಕೃತಲವಣಾಬ್ಧಿಜಲನುಮೆನಿಪ್ಪಗಸ್ತ್ಯ   ಮುನಿಗಾಶ್ರಯಮಾಗಿರ್ದ ದಕ್ಷಿಣದಿಗ್ಭಾಗದೊಳ್

ಅರುಣಮಣಿ ಶ್ರೀರುಚಿರಂ
ಹಿರಣ್ಯಮಯ ಭದ್ರಲಕ್ಷಣಂ ದಕ್ಷಿಣದಿ-
ಕ್ತರುಣೀಕಾಂಚಿಗೆ ಕಾಂಚೀ
ಪುರಿ ಮಣಿಯೆನಿಕುಂ ಮನೋಜ್ಞಗುಣ ಸಂಪೂರ್ಣಂ  ೪೧೧

ಅಂತಾ ಪುರದ ಪೊೞವೊೞಲಂ ಬಳಸಿ ಬೆಳೆದನೇಕ ಭೂರುಹಸಂದೋಹದ ನಡುವದೊಂದು ದೇವಾಲಯಮುಂಟು. ಅದಱ ಗೋಪುರಾಂತರದೊಳ್ ಹಿರಣ್ಯರೋಮನೆಂಬ ಮೂಷಿಕಾಶ್ವರ ನಿರ್ಪಂ. ಅದಱೊಳ್ ಮಿತ್ರತ್ವಮಾಗಿ ಚಿತ್ರಗ್ರೀವನೆಂಬ ಕಪೋತರಾಜಂ ನಿಜಕಪೋತವ್ರಾತಸಮೇತಂ ಮೂಷಿಕಾರಾಜನಿರ್ಪಂ ಬಿಲದ ಸಮೀಪಕ್ಕೆ ಬಂದದಱೊಳ್ ಮಾತನಾಡಿಯುಮಾ ಪ್ರದೇಶದೊಳಾಡಿಯುಂ ಪೋಗುತ್ತಿರ್ಪುದನೊರ್ವ ಶಬರಂ ಕಂಡುಮಾ ವಿಹಂಗಚಯ ಮಾಡುವೆಡೆಯೊಳೆಲ್ಲಿಯುಂ ಬಲೆಯಂ ಪಾಸಿ ಬಲಿಹರಣಂಗೆಯ್ದಂತೆ ಕೂೞಂ ಸೂಸಿ ಪೋಪುದುಮದೆಲ್ಲಮಂ ಲಘುಪತನಕನೆಂಬ ವಾಯಸಂ ಕಂಡು ನಾನೀ ಚೋದ್ಯಮಂ ನೋೞ್ಪೆನೆಂದಾ ಮರದ ಮೇಲಿರ್ಪುದುಮಲ್ಲಿಗೆ ಚಿತ್ರಗ್ರೀವಂ ಸಪರಿಗ್ರಹಂ ಬಂದು ಪರಪಿರ್ದ ಕೂೞಂ. ಕಂಡೆಱಗಲೊಡಮಾ ಬಲೆಯೊಳ್ ಕಪೋತಂಗಳಸಂಖ್ಯಾತಂ ಸಿಲ್ಕಿ ತಲೆಯುಮನೊಡಲುಮಂ ಬಡಿಬಿಡಿದು ಬೞಲುತಿರ್ಪುದುಮವಱೊಳಗೆ ಚಿರಂತನನುಂ ಬುದ್ಧಿವಂತನುಮಪ್ಪುದೊಂದು ಕಪೋತಂ ಪಕ್ಷಿಗಣಕ್ಕಿಂತೆಂದುದು :

ಆಶ್ರಯವಾಗಿದ್ದ ದಕ್ಷಿಣ ದಿಕ್ಕಿನಲ್ಲಿ ೪೧೧. ಕಾಂಚೀಪಟ್ಟಣವು ಮನೋಹರವಾದ ಗುಣಗಣಗಳಿಂದಲೂ ರತ್ನಕಾಂತಿಯಿಂದಲೂ ಚಿನ್ನದಿಂದ ಕೂಡಿ ಮಂಗಳಕರವಾಗಿಯೂ ದಕ್ಷಿಣದಿಕ್ತರುಣಿಯ ಕಾಂಚೀದಾಮಮಣಿಯಾಗಿಯೂ ಇತ್ತು. ವ|| ಹಾಗೆ ಆ ಪುರದ ಹೊರಭಾಗವನ್ನು ಬಳಸಿ ಬೆಳೆದ ಅನೇಕ ವೃಕ್ಷಗಳಿಂದ ಕೂಡಿದ ತೋಪಿನ ನಡುವೆ ಒಂದು ದೇವಾಲಯವುಂಟು. ಅದರ ಗೋಪುರದೊಳಗೆ ಹಿರಣ್ಯರೋಮನೆಂಬ ಮೂಷಕಾಶ್ವರನಿದ್ದನು. ಅದರೊಡನೆ ಮಿತ್ರತ್ವ ಬೆಳೆದು ಚಿತ್ರಗ್ರೀವನೆಂಬ ಕಪೋತರಾಜನು ತನ್ನ ಪರಿವಾರಸಮೇತ ಮೂಷಕಾರಾಜನಿರುವ ಬಿಲದ ಸಮೀಪಕ್ಕೆಬಂದು ಅದರೊಡನೆ ಮಾತನಾಡಿಯೂ ಆ ಪ್ರದೇಶದಲ್ಲಿ ಆಡಿಯೂ ಹೋಗುತ್ತಿರುವುದನ್ನು ಒಬ್ಬ ಬೇಡನು ಕಂಡನು. ಆ ಪಕ್ಷಿಗಳು ಆಡುವ ಸ್ಥಳಗಳಲ್ಲೆಲ್ಲ ಬಲೆಯನ್ನು ಹಾಸಿ ಬಲಿಹರಣ ಮಾಡಿದಂತೆ ಕೂಳನ್ನು ಚಿಲ್ಲಿ ಆಬೇಡನು ಹೋಗಲು ಅದಲ್ಲವನ್ನೂ ಲಘುಪತನಕನೆಂಬ ಕಾಗೆಯು ಕಂಡು ನಾನು ಈ ಚೋದ್ಯವನ್ನು ನೋಡುವೆನು ಎಂದು ಆ ಮರದ ಮೇಲೆ ಕುಳಿತುಕೊಂಡಿತು. ಆಗ ಅಲ್ಲಿಗೆ ಚಿತ್ರಗ್ರೀವನು ಪರಿವಾರ ಸಮೇತನಾಗಿ ಬಂದು ಅಲ್ಲಿ ಹರಡಿದ್ದ ಕೊಳನ್ನು ಕಂಡು ಎರಗಲು ಆ ಬಲೆಯಲ್ಲಿ ಅಸಂಖ್ಯ ಕಪೋತಗಳು ಸಿಕ್ಕಿ ತಲೆಯನ್ನೂ ಒಡಲನ್ನೂ ಬಡಿಬಡಿದು ಬಳಲುತ್ತಿರಲು ಅವುಗಳಲ್ಲಿ ಚಿರಂತನನೂ ಬುದ್ಧಿವಂತನೂ ಆದ ಒಂದು ಕಪೋತನು ಪಕ್ಷಿಸಮೂಹಕ್ಕೆ ಹೀಗೆಂದಿತು: ಒಂದು ಕಾಡಿನ

ಕಾಂತಾರಾಂತದೊಳತಿವಿಸ್ತೀರ್ಣಮುಮತ್ಯುನ್ನತಮುಮತಿದೀರ್ಘಪೃಥುಸ್ಕಂದಮುಮಪ್ಪುದೊಂದು ಮಹಾವಟವಿಟಪಿಯೊಳನೇಕ ವಿಹಗಕುಳಂಗಳಿರ್ಪುವು. ಅವಂ ಒರ್ವ ವ್ಯಾಧಂ ಕಂಡಾ ಮರನಂ ಬಲವಂದು ನೋಡಿ,

ಈ ಮರಮೆನಗಲ್ತಡರ್ವೊಡೆ
ರಾಮಾನುಚರಂಗಮರಿದುಮುದ್ದಾಮಮುಮೆಂ-
ದಾ ಮಾಯಿ ಕಿರಾತನತಿ-
ವ್ಯಾಮೋಹಿತನಾಗಿ ಪೋಗದಲ್ಲಿಯೆ ನಿಂದಂ  ೪೧೨

ಅಂತು ನಿಂದೀ ಪಕ್ಷಿಗಳನೆಂತುಂ ಪಿಡಿವೆನೆಂದೊಂದುಪಾಯಮಂ ಬಗೆದು ಯಷ್ಟಿಯ ಬೀಜಮಂ ತಂದಾ ಮರದ ಮೊದಲೊಳ್ ಬಿತ್ತಿ ನೀರನೆಱೆದು ಪೋಪುದುಂ ಕೆಲವು ದಿವಸಕ್ಕಾ ಬಿೞ್ತು ಪತತ್ರಿಗೋತ್ರಕ್ಕಪಮೃತ್ಯು ಮೂಡುವಂತೆ ಮೂಡುವುದುಮಾ ವಿಹಂಗಸಮೂಹಕ್ಕೆಲ್ಲಂ ಕುಲವೃದ್ಧನುಂ ಬುದ್ಧಿವೃದ್ಧನುಮಪ್ಪುದೊಂದು ವಿಹಂಗಮಾ ವೊಳೆಯೆಲ್ಲಮಂ ಕಂಡುಂಡಜಂಗಳ್ಗೆಲ್ಲಮಿಂತೆಂದುದು: ಎಮ್ಮಜ್ಜರಿಂತೊಟ್ಟಿಂದುವರಮೀ ಚೂಳದೊಳಿರ್ದೆವು. ಇದಱ ಮೊದಲೊಳ್ ಪುಲ್ಲುಂ ಮೊದಲಾಗಿ ಪ್ಯಟ್ಟಿಯಱ*ಯವು. ಈ ಮೊಳೆಗಳಿಂದೆಮಗಪಾಯಮಾಗದೆ ಪೋಗದು ಉಪೇಕ್ಷಿಸಿದಿರಪ್ಪೊಡೆ.

ವಾಕ್ಯಂ|| ನಖಚೇದ್ಯಮ್ಮತಿಕ್ರಾಂತಂ ಪರಶುನಾಪಿ ನ ಸಾಧ್ಯತೇ ||೧೯೫||

ಟೀ|| ಉಗುರಿಂದಂ ಚಿವುಟಲಪ್ಪುದಂ ಕಯ್ ಮೀರಿದೊಡೆ ಕೊಡಲಿಯಿಂದೆಯುಂ ಕಡಿಯಲರಿದು ಎಂಬುದು ನೀತಿಯುಂಟದಱ*ಂ,

ಈ ಮೊಳೆ ಬೆಳೆದೊಡೆ ನಮಗ-
ಕ್ಷೇಮಕರಂ ಕರಮೆಯಕ್ಕುಮೀಗಳೆ ಕಳೆಯಿಂ
ನೀಮೆನೆ ವಿಹಗಸಮೂಹಮಿ-
ದೇಮಾತೆಂದುಱದೆ ವೃದ್ಧವಿಹಗನ ಮಾತಂ  ||೪೧೩||

ನಡುವೆ ಅತ್ಯಂತ ವಿಶಾಲವೂ ಅತ್ಯನ್ನತವೂ ಉದ್ದವೂ ತೋರವೂ ಆದ ಕೊಂಬೆಗಳಿಂದ ಕೂಡಿದುದೂ ಆದ ಒಂದು ಮಹಾವಟವೃಕ್ಷವಿತ್ತು. ಅದರಲ್ಲಿ ಅನೇಕ ಪಕ್ಷಿಗಳಿದ್ದುವು. ಅವುಗಳನ್ನು ಒಬ್ಬ ಬೇಡನು ಕಂಡು ಆ ಮರವನ್ನು ಸುತ್ತಿ ನೋಡಿ ೪೧೨. ಈ ಮರವನ್ನು ಏರಲು ನನಗಲ್ಲ, ಆ ರಾಮಾನುಚರನಿಗೂ ಅಸಾಧ್ಯ ಎಂದು ಅತಿವ್ಯಾಮೋಹಿತನಾಗಿ ಅಲ್ಲಿಯೇ ನಿಂತನು. ವ|| ಹಾಗೆ ನಿಂತು ಈ ಪಕ್ಷಿಗಳನ್ನು ಹೇಗಾದರೂ ಹಿಡಿಯುವೆನು ಎಂದು ಒಂದು ಉಪಾಯವನ್ನು ಯೋಚಿಸಿ ಯಷ್ಟಿಯ ಬೀಜವನ್ನು ತಂದು ಆ ಮರದ ಬುಡದಲ್ಲಿ ಬಿತ್ತಿ ನೀರನ್ನೆರೆದು ಹೋದನು. ಕೆಲವು ದಿವಸಗಳಲ್ಲಿ ಆ ಬೀಜವು ಪಕ್ಷಿಸಮೂಹಕ್ಕೆ ಅಪಮೃತ್ಯು ಮೂಡುವಂತೆ ಹುಟ್ಟಿತು. ಆ ಹಕ್ಕಿಯು ಗುಂಪಿಗೆಲ್ಲ ಕುಲವೃದ್ಧನೂ ಬುದ್ಧಿವೃದ್ಧನೂ ಆದೊಂದು ಹಕ್ಕಿ ಆ ಮೊಳಕೆಗಳನ್ನು ಕಂಡು ಹಕ್ಕಿಗಳಿಗೆ ಹೀಗೆಂದಿತು. ನಮ್ಮ ಅಜ್ಜನ ಕಾಲದಿಂದ ಇಲ್ಲಿಯವರೆಗೆ ನಾವು ಈ ಮರದಲ್ಲಿದ್ದೆವು. ಇದರ ಬುಡದಲ್ಲಿ ಹುಲ್ಲು ಎಂದು ಹುಟ್ಟಿರಲಿಲ್ಲ. ಈ ಮೋಳಕೆಗಳಿಂದ ನಮಗೆ ಅಪಾಯವಾಗದೆ ಹೋಗದು. ಉಪೇಕ್ಷಿಸದಿರಿ. ವಾ|| ನಖಚೇದ್ಯಮ್ಮತಿಕ್ರಾಂತಂ ಪರಶುನಾಪಿ ನ ಸಾಧ್ಯತೇ ಉಗುರಿನಿಂದ ಚಿವುಟಲಾಗುವುದನ್ನು ಕೈಮೀರಿದಮೇಲೆ ಕೊಡಲಿಯಿಂದಲು ಕುಡಿಯಲು ಆಸಾಧ್ಯ- ಎಂಬ ನೀತಿಯುಂಟು. ೪೧೩. ಅದರಿಂದ ಈ ಮೊಳಕೆ ಬೆಳೆದರೆ ನಮಗೆ ಕ್ಷೇಮಕರವಲ್ಲ.

ಅಂತವಜ್ಞಯಂ ಮಾಡಿ ಪಕ್ಕಿಗಳೆಲ್ಲಮಿರೆ ಕೆಲವು ದಿವಸಕ್ಕಾ ಬಳ್ಳಿ ಬೆಳೆದು ಮರನ ನಡುರ್ದು ತುದಿಗೊಂಬುವರಂ ನಿಮಿರ್ದು ಪರ್ವಿ ಪರಿವೇಷ್ಟಿಸಿಕೊಂಡಿರ್ಪುದುಮಾ ವ್ಯಾಧಂ ಬಂದು ಬಳ್ಳಿಯಂ ಪಿಡಿದು ಮರನನಡರ್ದು ತದ್ವಟವಿಟಪಾಗ್ರದೊಳೆಲ್ಲಂ ಬಲೆಯಂ ಪಾಸಿ ಪೋದಂ. ಇತ್ತಲಾದಿತ್ಯನಪರಗಿರಿಯನೆಯ್ದಲೊಡಂ ಪತತ್ರಿಗೋತ್ರಂಗಳೆಲ್ಲಂ ಬಂದಲ್ಲಿ ಪಾಯ್ದು ಬಲೆಯೊಳ್ ಸಿಲ್ಕಿ ತಲೆಯನೊಡಲುಮಂ ಬಡಿಬಡಿದು ಬೇಸತ್ತು ಮಾಣ್ದು ಬೞ*ಕ್ಕೆ ವೃದ್ಧಪಕ್ಷಿಗಿಂತೆಂದವು:

ಕೇಳಜ್ಜ ನಿನ್ನ ಮಾತಂ
ಕೇಳದೆ ಕಡುಗಾಳುತನದೆ ಸಿಲ್ಕಿದೆವೆಮಗೇಂ
ಬಾಳಲ್ಕುಪಾಯಮುಳ್ಳೊಡೆ
ಪೇೞ*ಂ ನೀಮೆನೆ ಖಗೇಂದ್ರನಂದಿಂತೆಂದಂ  ೪೧೪

ಅಂತಪ್ಪೊಡೆ ನೀಮೆಲ್ಲಮಸುವೋದಂತುಸಿರನೊಳದೆಗೆದು ಮಿಸುಕದಿರ್ಪಂದುಮಾ ಬೇಡಂ ಬಂದು ಕಂಡಿವೆಲ್ಲಂ ಮುನ್ನವೆ ಸತ್ತುವೆಂದು ಸಂತಸಂಬಟ್ಟು ಬಲೆಯಂ ಬಿಡಿಸಿ ನೆಲಕ್ಕೀಡಾಡುವುದುಂ ಮೆಲ್ಲನೆ ಪಾಯ್ದು ಪಕ್ಕಿಗಳೆಲ್ಲಮನಿಕ್ಕುವನ್ನಂ ನಮ್ಮಲ್ಲಿ ಯಾರುಂ ಮಿಸುಕದಿರ್ಪುದುಂ ಬೞ*ಕ್ಕೆ ಪುಳಿಂದಂ ಮರಮನಿೞ*ವವಸರಮನಾನಱ*ದು ಪದಿರಿಕ್ಕಲೊಡಂ ಗಗನಕ್ಕೆ ನೆಗೆದು ಪೋಗಿಮೆನೆ ವಿಹಂಗಮಮೆಲ್ಲಮಂತೆಗೆಯ್ವೆವೆಂದಿರ್ಪುದುಮವಂ ಬಂದು ಮರನನಡರ್ದೇಱ* ಮುನ್ನಮೆ ಸತ್ತಂತಿರ್ದ ಪಕ್ಕಿಗಳೆಲ್ಲಮಂ ಕಂಡು ಬೆಕ್ಕಸಂಬಟ್ಟೆಲ್ಲಂ ಸತ್ತುಪೋದುವೆಂದು ಬಲೆಯಂ ಬಿಡಿಸಿ ನೆಲಕ್ಕೀಡಾಡಲಾ   ಅದರಿಂದ ಈಗಲೇ ನಾಶಮಾಡಿ ಎನ್ನಲು ಆ ಹಕ್ಕಿಗಳೆಲ್ಲ ಇದೇನು ಮಾತು ಎಂದು ಆ ಮುದಿಹಕ್ಕಿಯ ಮಾತನ್ನು ಅಲಕ್ಷಿಸಿದವು. ವ|| ಕೆಲವು ದಿವಸಗಳಲ್ಲಿ ಆ ಬಳ್ಳಿ ಬೆಳೆದು ಮರವನೇರಿ ತುದಿಕೊಂಬೆಯವರೆಗೂ ನಿಮಿರಿ ಸುತ್ತಿಕೊಳ್ಳಲು ಆ ಬೇಡನು ಬಂದು ಬಳ್ಳಿಯನ್ನು ಹಿಡಿದು ಮರವನ್ನೇರಿ ಆ ಆಲದ ಮರದ ತುದಿಗೆಲ್ಲ ಬಲೆ ಬೀಸಿ ಹೋದನು. ಇತ್ತ ಸಂಜೆಯಾಗಲು ಹಕ್ಕಿಗಳೆಲ್ಲ ಹಾರಿಬಂದು ಹಾಯ್ದು ಬಲೆಯಲ್ಲಿ ಸಿಕ್ಕಿ ತಪ್ಪಿಸಿಕೊಳ್ಳಲಾರದೆ ತಲೆಯನ್ನು ಒಡಲನ್ನು ಬಡಿಬಡಿದು ಬಳಲಿ ಬಳಿಕ ಮುದಿಹಕ್ಕಿಯೊಡನೆ ಹೀಗೆಂದುವು : ೪೧೪. ಅಜ್ಜ ಕೇಳು, ನಿನ್ನ ಮಾತನ್ನು ಕೇಳದೆ ಮೂರ್ಖತನದಿಂದ ಸಿಕ್ಕಿಬಿದ್ದೆವು. ನಮಗೇನಾದರೂ ಬಾಳುವ ಉಪಯವಿದ್ದರೆ ಹೇಳಿರಿ ಎನ್ನಲು ಆ ಮುದಿಹಕ್ಕಿ ಹೀಗೆಂದಿತು : ವ|| ಹಾಗಾದರೆ ನೀವೆಲ್ಲ ಅಸು ಹೋದಂತೆ ಉಸಿರನ್ನು ಒಳಕ್ಕೆ ತೆಗೆದುಕೊಂಡು ಮಿಸುಕದೆ ಇರುವುದನ್ನು ಕಂಡು ಆ ಬೇಡನು ಬಂದು ಕಂಡು ಇವೆಲ್ಲವೂ ಮೊದಲೇ ಸತ್ತುವು ಎಂದು ಸಂತಸಪಟ್ಟು ಬಲೆಯನ್ನು ಬಿಡಿಸಿ ನೆಲಕ್ಕೆ ಈಡಾಡುವನು. ಅವನು ಮೆಲ್ಲನೆ ಹಾಯ್ದು ಹಕ್ಕಿಗಳನ್ನೆಲ್ಲವನ್ನೂ ಹಾಕುವವರೆಗೆ ನಮ್ಮಲ್ಲಿ ಯಾರೂ ಮಿಸುಕಾಡದಿರಬೇಕು. ಬಳಿಕ ಬೇಡನು ಮರವನ್ನು ಇಳಿಯುವ ಸಂದರ್ಭವನ್ನು ನಾನು ತಿಳಿದು ಶ್ಲೇಷೆಯಿಂದ ಸೂಚಿಸಿದ ಕೂಡಲೇ ನೀವು ವಾಯುವೇಗದಿಂದ ಗಗನಕ್ಕೆ ಹಾರಿಹೋಗಿರಿ. ಹೀಗೆ ಹೇಳಲು ಹಕ್ಕಿಗಳೆಲ್ಲ ಹಾಗೆಯೇ ಮಾಡುವುವು ಎಂದು ಹೇಳಿದುವು. ಬೇಡನು ಬಂದು ಮರವನ್ನು ಏರಿ ಮೊದಲೇ ಸತ್ತುಹೋದಂತೆ ಇದ್ದ ಹಕ್ಕಿಗಳೆಲ್ಲವನ್ನೂ ಕಂಡು ಆಶ್ಚರ‍್ಯಪಟ್ಟು ಎಲ್ಲವೂ ಸತ್ತುಹೋದುವು ಎಂದು ಬಲೆಯನ್ನು ಬಿಡಿಸಿ ನೆಲಕ್ಕೆ ಪಕ್ಕಿಗಳೆಲ್ಲಂ ವೃದ್ಧವಿಹಂಗಂ ಪೇೞ್ದ ಬುದ್ಧಿಯೊಳೆ ನೆಗೞ್ದು ಬರ್ದುಂಕಿದುವು. ಅದಱ*ಂ ನೀವುಮೆನ್ನ ಪೇೞ್ಕೆಗೆಯ್ವಿರಪ್ಪೊಡೆ ನಾವೀ ಪಾಶಸಹಿತಂ ಪೋಪುದೆ ಕಜ್ಜಂ.