• ಮಣ್ಣಿನ ಫಲವತ್ತತೆ ಹೆಚ್ಚಿಸಲು
  • ಮುಖ್ಯಬೆಳೆಯ ಇಳುವರಿ ಹೆಚ್ಚಿಸಲು
  • ಭೂಮಿಗೆ ಮುಚ್ಚಿಗೆಯಾಗಿ ಬಿಸಿಲಿನಿಂದ ರಕ್ಷಿಸಲು
  • ಇರುವಷ್ಟೇ ಜಾಗದಿಂದ ಆದಾಯ ಹೆಚ್ಚಿಸಲು
  • ಪೀಡೆಗಳ ನಿವಾರಣೆಗೆ
  • ನೀರು ಉಳಿಸಲು
  • ಗೊಬ್ಬರ ಉಳಿಸಲು
  • ಉಳುಮೆ ನಿಲ್ಲಿಸಲು
  • ಜೈವಿಕ ಸಮಸ್ಯೆ ತಪ್ಪಿಸಲು
  • ಔಷಧೀಯ/ಕೀಟನಾಶಕಗಳಾಗಿ ಬಳಸಲು

ಎಷ್ಟೆಲ್ಲಾ ಕಾರಣಕ್ಕೆ ಅಂತರಬೆಳೆಗಳು ಬೇಕೇಬೇಕು.

ಮುಖ್ಯಬೆಳೆಯೊಂದಿಗೆ ಹೊಂದಿಕೆಯಾಗುವುದು ಮುಖ್ಯ. ಖರ್ಚಿನ ಬೆಳೆಗಳಾಗದೇ ಕನಿಷ್ಠ ಆದಾಯವನ್ನಾದರೂ ತರುವ ಬೆಳೆಯಾಗಿರಬೇಕು. ಅತಿಯಾಗಿ ನೀರನ್ನು, ಗೊಬ್ಬರವನ್ನು ಕಬಳಿಸದೇ ಇರುವಷ್ಟರಲ್ಲಿಯೇ ಬದುಕುವಂತಿರಬೇಕು.

ಒಮ್ಮೆಗೆ ಒಂದೇ ರೀತಿಯ ಅಂತರಬೆಳೆ ಬೆಳೆಯಬೇಕೆಂದೇನೂ ಇಲ್ಲ. ಅನೇಕ ರೀತಿಯ ಬೆಳೆಗಳನ್ನು ಬೆಳೆಯಬಹುದು. ಅವೆಲ್ಲವೂ ಮುಖ್ಯ ಬೆಳೆಗೆ ಮೊದಲು ಸಹಕಾರಿಯಾಗಿರಬೇಕು. ಪರಸ್ಪರ ಸಹಕಾರಿಯೂ ಆಗಿರಬೇಕು.

ಅಂತರ ಬೆಳೆಗಳಲ್ಲಿ ಅಲ್ಪಕಾಲದ ಬೆಳೆಗಳು, ವಾರ್ಷಿಕ ಬೆಳೆಗಳು ಹಾಗೂ ದೀರ್ಘಕಾಲದ ಬೆಳೆಗಳೆಂದು ಮೂರು ವಿಧ. ದ್ವಿದಳ ಧಾನ್ಯಗಳು, ತರಕಾರಿಗಳೆಲ್ಲಾ ಅಲ್ಪಕಾಲದ್ದು. ಬಾಳೆ, ಗೆಡ್ಡೆಗೆಣಸು ಮುಂತಾದವುಗಳು, ಲವಂಗ, ಏಲಕ್ಕಿ, ಜಾಯಿಕಾಯಿ, ಕಾಳುಮೆಣಸು ಮುಂತಾದವುಗಳು ದೀರ್ಘಕಾಲ ಇರುವ ಬೆಳೆಗಳು.

ಅಡಿಕೆಯೊಂದಿಗೆ

ಬಾಳೆ, ಕಾಳುಮೆಣಸು, ವೀಳ್ಯದೆಲೆ, ನಿಂಬೆಜಾತಿಯ ಗಿಡಗಳು, ಏಲಕ್ಕಿ, ಲವಂಗ, ಜಾಯಿಕಾಯಿ, ಕೋಕೋ, ವೆನಿಲ್ಲಾ, ಕಾಫಿ, ನಕ್ಷತ್ರಹಣ್ಣು, ಪಪ್ಪಾಯ, ಪೈನಾಪಲ್, ಸುವರ್ಣಗೆಡ್ಡೆ, ಶುಂಠಿ, ಅರಿಸಿನ, ಈರುಳ್ಳಿ, ಬೆಳ್ಳುಳ್ಳಿ, ಹುರುಳಿ, ಉದ್ದು, ಹೆಸರು, ಬವಡೆ, ಅಲಸಂದೆ, ಅವರೆಜಾತಿಯ ಸಸ್ಯಗಳು, ಬಳ್ಳಿಗಳು, ಪಚ್ಚೆತೆನೆ-ಪಚೋಲಿ, ಒಂದೆಲಗ, ಬ್ರಾಹ್ಮಿ, ಹೊನಗೊನೆ ಸೊಪ್ಪು, ತೊಂಡೆ, ಹಿಪ್ಪಲಿ, ತಲೆಕಟ್ಟಿನಲ್ಲಿ ಹಲಸು, ಚಿಕ್ಕು, ಮಾವು, ಬಟರ್‌ಫ್ರೂಟ್, ಮುರುಗಲು, ಕಾಡಿನಮರಗಳು.

ತೆಂಗಿನೊಂದಿಗೆ

ಮಾವು, ಹಲಸು, ಚಿಕ್ಕು, ನಿಂಬೆಜಾತಿಯ ಗಿಡಗಳು, ಪಪ್ಪಾಯ, ಪೇರಳೆ, ಬಾಳೆ, ಉದ್ದು, ಹೆಸರು, ಅಲಸಂದೆ, ಹುರುಳಿ, ಅವರೆಜಾತಿಯ ಸಸ್ಯಗಳು, ಬಳ್ಳಿಗಳು, ಸುವರ್ಣಗೆಡ್ಡೆ, ಅರಿಸಿನ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಮೇವಿನಹುಲ್ಲು, ಪಚೋಲಿ, ಸೊಪ್ಪು ತರಕಾರಿಗಳು, ಹರಳುಗಿಡ, ತರಕಾರಿಗಳು, ರಾಗಿ, ಪ್ರತ್ಯೇಕ ಆಸರೆಯಲ್ಲಿ ಕಾಳುಮೆಣಸು, ಹೂವಿನಗಿಡಗಳನ್ನು ಹಾಕಬಹುದು. ವೀಳ್ಯದೆಲೆ ಕೂಡ.

ವೀಳ್ಯದೆಲೆಯೊಂದಿಗೆ

ಅಡಿಕೆ, ಬಾಳೆ, ಕಾಳುಮೆಣಸು, ನಿಂಬೆಜಾತಿಯ ಸಸ್ಯಗಳು, ತೆಂಗು, ಪೇರಲೆ, ಅರಿಸಿನ, ಈರುಳ್ಳಿ, ಹಿಪ್ಪಲಿ, ದ್ವಿದಳ ಧಾನ್ಯಗಳು [ನಾಟಿಗೂ ಮೊದಲು], ಅಗಸೆ, ನುಗ್ಗೆ, ಬೂರಗ, ಹಾಲುವಾಣ, ಚೊಗಚೆ, ಬಂದ್ರೆ.

ತಲೆಕಟ್ಟಿನಲ್ಲಿ ಕಾಡಿನಮರಗಳು, ಬಿದಿರು, ಹಲಸು, ಮಾವು, ಬೇವು.

ಹಲಸಿನೊಂದಿಗೆ

ಬಾಳೆ, ಕಾಳುಮೆಣಸು, ನಿಂಬೆಜಾತಿಯ ಸಸ್ಯಗಳು, ತೆಂಗು, ವೀಳ್ಯದೆಲೆ, ಪಚೋಲಿ, ಶುಂಠಿ, ಅರಿಸಿನ, ಈರುಳ್ಳಿ, ದ್ವಿದಳ ಧಾನ್ಯಗಳು, ಸೊಪ್ಪುತರಕಾರಿಗಳು, ಬಳ್ಳಿ ತರಕಾರಿಗಳು, ಕಾಡಿನಮರಗಳು, ಮಾವು, ಚಿಕ್ಕು, ಬೇವು, ಗೆಡ್ಡೆಗೆಣಸು, ಪಪ್ಪಾಯ, ಹುಣಸೆ.

ಮಾವಿನೊಂದಿಗೆ

ತಲೆಕಟ್ಟಿನಲ್ಲಿ ತೆಂಗು, ಹಲಸು, ಬೇವು, ಕಾಡಿನಮರಗಳು, ಬಿದಿರು, ಹುಣಸೆ, ಪ್ರತ್ಯೇಕವಾಗಿ ಸೊಪ್ಪು ತರಕಾರಿಗಳು, ಬಳ್ಳಿ ತರಕಾರಿಗಳು, ಗೆಡ್ಡೆಗೆಣಸು, ಅರಿಸಿನ, ಶುಂಠಿ, ಈರುಳ್ಳಿ, ಹಿಪ್ಪಲಿ, ಪಚೋಲಿ, ಹೂವಿನಗಿಡಗಳು, ಚಿಕ್ಕು, ಪಪ್ಪಾಯ, ಬೆಣ್ಣೆಹಣ್ಣು, ಪೇರಳೆ, ನಿಂಬೆಜಾತಿಯ ಗಿಡಗಳು, ರಾಗಿ, ಅವರೆ, ಅಲಸಂದಿ, ಹುರುಳಿ, ಉದ್ದು, ಹೆಸರು. [ಮರವಾಗುವ ಮೊದಲು]

ಪೇರಲೆಯೊಂದಿಗೆ

ಚಿಕ್ಕು, ಪಪ್ಪಾಯ, ಮಾವು, ನಿಂಬೆಜಾತಿಯ ಸಸ್ಯಗಳು, ದಾಲ್ಚಿನ್ನಿ, ಲವಂಗ, ಜಾಯಿಕಾಯಿ, ರಾಗಿ, ಅವರೆ, ಅಲಸಂದೆ, ಅಕ್ಕಡಿ, ಹುರುಳಿ, ಉದ್ದು, ಹೆಸರು, ಮಡಕೆಕಾಳು [ಮೊದಲು], ಪ್ರತ್ಯೇಕವಾಗಿ ಸೊಪ್ಪು, ಬಳ್ಳಿ ತರಕಾರಿಗಳು, ತರಕಾರಿಗಳು, ಗೆಡ್ಡೆಗೆಣಸು, ಹೂವಿನಗಿಡಗಳು, ತಲೆಕಟ್ಟಿನಲ್ಲಿ ಬೇವು, ಹಲಸು, ತೆಂಗು, ಕಾಡಿನಮರಗಳು, ಬಿದಿರು, ಹುಣಸೆ…

ದ್ರಾಕ್ಷಿಯೊಂದಿಗೆ

ಗಾಳಿ ನಿಯಂತ್ರಣಕ್ಕೆ ಜೋಳ ಬೆಳೆಯುತ್ತಿದ್ದರು. ಚಪ್ಪರ ವಿಧಾನ ಬಂದಮೇಲೆ ಯಾವ ಬೆಳೆಯನ್ನೂ ಬೆಳೆಯುವುದಿಲ್ಲ. ಬಳ್ಳಿ ಏಳುವ ಮೊದಲು ಚಪ್ಪರಕ್ಕೆ ಬಳ್ಳಿ ತರಕಾರಿಗಳು, ಸೊಪ್ಪು ತರಕಾರಿಗಳನ್ನು ಬೆಳೆಸುತ್ತಾರೆ.

ದಾಳಿಂಬೆ ಜೊತೆ

ಫಲ ಕೊಡುವ ಮೊದಲು ಬಳ್ಳಿ ತರಕಾರಿಗಳು, ಸೊಪ್ಪು ತರಕಾರಿಗಳು, ತರಕಾರಿಗಳು, ಅಲಸಂದೆ, ಹುರುಳಿ, ಅವರೆ, ಬಟಾಣಿ, ಹೂವಿನ ಗಿಡಗಳು, ಗೆಡ್ಡೆಗೆಣಸು, ಆಲೂ, ಈರುಳ್ಳಿ, ಕ್ಯಾರೇಟ್, ಮೂಲಂಗಿ, ತಲೆಕಟ್ಟಿನಲ್ಲಿ ಹುಣಸೆ, ಹಲಸು, ಮಾವು, ನಿಂಬೆ…

ಕಿತ್ತಳೆ ಜೊತೆ

ಪ್ರಾರಂಭದಲ್ಲಿ ಗೆಡ್ಡೆ, ಬಳ್ಳಿ, ಸೊಪ್ಪು ತರಕಾರಿಗಳು, ಅಲಸಂದೆ, ಹುರುಳಿ, ಬಟಾಣಿ, ಅವರೆ ಮುಂತಾದವುಗಳು. ನಿಂಬೆಜಾತಿಯ ಇತರ ಗಿಡಗಳು.

ತಲೆಕಟ್ಟಿನಲ್ಲಿ ಹಲಸು, ಮಾವು, ಕಾಡಿನ ಮರಗಳು, ಬಿದಿರು, ನೆಲ ಅಗತೆ ಮಾಡಿ ಕೃಷಿ ಮಾಡಬೇಕಾದ ಯಾವುದೇ ಬೆಳೆ ಬೆಳೆಯಬಾರದು. ಏಲಕ್ಕಿ, ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಜಾಯಿಕಾಯಿ ಸೂಕ್ತ.

ನಿಂಬೆ ಜೊತೆ

ಕರಿಬೇವು, ಹತ್ತಿ, ಹರಳು ಇತರ ನಿಂಬೆ ಜಾತಿಗೆ ಸೇರಿದ ಗಿಡಗಳು. ಬಳ್ಳಿ, ಸೊಪ್ಪು ತರಕಾರಿಗಳು, ಅಲಸಂದೆ, ಹುರುಳಿ, ಬಟಾಣಿ ಮುಂತಾದವುಗಳು. ತಲೆಕಟ್ಟಿನಲ್ಲಿ ಕಾಡಿನಮರಗಳು, ಹಲಸು, ಮಾವು, ಬಿದಿರು, ತೆಂಗು, ಅರಿಸಿನ, ಶುಂಠಿ, ಸಪೋಟ, ಪೇರಳೆ.

ಇದಕ್ಕೂ ಗಿಡ ಹರಡಿಕೊಂಡಷ್ಟು ಜಾಗದಲ್ಲಿ ಅಗತೆ ಮಾಡಬಾರದು.

ಕಾಫಿ ಜೊತೆ

ನಿಂಬೆ ಜಾತಿಯ ಗಿಡಗಳು, ಕಿತ್ತಳೆ ಕಾಡಿನ ಮರಗಳು, ಹಲಸು, ಬೆಣ್ಣೆಹಣ್ಣು, ಮಲ್ಲಿಗೆ, ಚೆಂಡುಹೂ ಮುಂತಾದ ಹೂವಿನ ಗಿಡಗಳು.

ತರಕಾರಿಗಳಿಗೆ, ಗೆಡ್ಡೆಗೆಣಸುಗಳಿಗೆ ಜಾಗವೇ ಇರುವುದಿಲ್ಲ.

ಹುಣಸೆ ಜೊತೆ

ರಾಗಿ, ಜೋಳ, ಗೋಧಿ

ಉದ್ದು, ಹೆಸರು, ಅಲಸಂದೆ, ಹುರುಳಿ, ತೊಗರಿ, ಹರಳು, ತರಕಾರಿಗಳು (ಬಳ್ಳಿ, ಸೊಪ್ಪು), ಬಾಳೆ, ನಿಂಬೆಜಾತಿಯ ಸಸ್ಯಗಳು, ತೆಂಗು, ಚಿಕ್ಕು, ಪೇರಳೆ, ಮಾವು, ಕಾಡಿನಮರಗಳು, ಬೇವು.

ಪಪ್ಪಾಯ ಜೊತೆ

ಯಾವುದೇ ಅಂತರಬೆಳೆ/ಮಿಶ್ರಬೆಳೆ ಸಾಧ್ಯವಿಲ್ಲ. ಪಪ್ಪಾಯವನ್ನೇ ನೆರಳು ಗಿಡವಾಗಿ ಮಾಡಿಕೊಂಡರೆ ಅಡಿಕೆ, ಚಿಕ್ಕು, ತೆಂಗು, ಮಾವು ಇವೆಲ್ಲಾ ಸಾಧ್ಯ. ಮುಂದೆ ಪಪ್ಪಾಯ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗದು.

ಬಾಳೆ ಜೊತೆ

ಅಡಿಕೆ, ನುಗ್ಗೆ, ವೀಳ್ಯದೆಲೆ, ಏಲಕ್ಕಿ, ಲವಂಗ, ದಾಲ್ಚಿನ್ನಿ ವಿರಳವಾಗಿ ಬೆಳೆಯಬಹುದು.

ತಲೆಕಟ್ಟಿನಲ್ಲಿ ನಿಂಬೆ ಜಾತಿಯ ಗಿಡಗಳು, ಹಲಸು, ಪೇರಳೆ, ಚಿಕ್ಕು, ಕಾಡಿನಮರಗಳು, ಬಿದಿರು ಏನೆಲ್ಲಾ ಸಾಧ್ಯ. ಕೆಸ, ಸುವರ್ಣಗೆಡ್ಡೆಗಳನ್ನೂ ವಿರಳವಾಗಿ ಬೆಳೆಯಬಹುದು. ಪ್ರಾರಂಭದಲ್ಲಿ ಶುಂಠಿ, ಅರಿಸಿನಗಳನ್ನು ಬೆಳೆಯಬಹುದು. ಚೆಂಡುಹೂ, ಗ್ಲಾಡಿಯೋಲಸ್‌ಗಳನ್ನು ಬೆಳೆಸಬಹುದು.