ಜವೆಸು ಜಪಿಸು ಪಂಚಾಕ್ಷರಿಯ || ಪಲ್ಲವಿ ||
ವಿಪುಳ ಶಿವಜ್ಞಾನದ ಸಿರಿಯಂ
ಭವರೋಗದ ಮಹದೌದ್ರಸಮಂ
ಶಿವಪಥದೋರುವ ಮಾರ್ಗವಿದಂ || ಪಲ್ಲವಿ ||

ಚಿತ್‌ಸೂರ‍್ಯರ ಚೈತನ್ಯವಿದು
ನಿತ್ಯಾನಂದನ ಸಾರವಿದು
ಶಕ್ತಿಯ ಗೃಹದಿಂ ಕೂಡಿವುದು
ಮುಕ್ತಿಯ ಬೀಜಕೆ ಪರಶುವಿದು || ಪಲ್ಲವಿ ||

ವೃತ್ತಿ ಪ್ರಭಾಕರ ಶ್ಯಾತ್ರವಿದು
ತತ್ವವು ಸೀತೆಗೆ ಲಕ್ಷ್ಯವಿದು
ಎತ್ತಲು ಪ್ರಣಮೋ ಆಗಿವುದು
ಚಿತ್ತಾಸ್ವತ್ತತೆ ಗೈಯುವುದು || ಪಲ್ಲವಿ ||

ವೇದಾಗಮ ಕುಲಿ ಗದಿಪತಿಯಂ
ನಾದ ಬ್ರಹ್ಮರ ಗತಿಮತಿಯಂ
ಆದಿಯು ಶಿವಪದ ದ್ವಿತಿಯುತಿಯಂ
ಮೂದೇವರ ಜಗದುನ್ನತಿಯಂ || ಪಲ್ಲವಿ ||

ಕಡುದಾರಿದ್ರಾದ ಮೊದಲಲಿ
ಬಿಡದೈಶ್ವರ್ಯದ ಕಡೆಯಲ್ಲಿ
ಎಡದರಿಯದೆ ಮಡದಿಯರಲ್ಲಿ
ಕಡು ಮಮತೆಯ ನಾಚಿಕೆಯಲಿ || ಪಲ್ಲವಿ ||